DWSIM-3.4/C2/Creating-a-material-stream-in-DWSIM/Kannada
From Script | Spoken-Tutorial
Revision as of 18:27, 25 September 2017 by Sandhya.np14 (Talk | contribs)
|
|
00:00 | creating a material stream in DWSIM ನ ಬಗ್ಗೆ ಇರುವ spoken tutorialಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್-ನಲ್ಲಿ ನಾವು: |
00:10 | ಕೆಮಿಕಲ್ ಕಾಂಪೋನೆಂಟ್-ಗಳನ್ನು ಹೇಗೆ ಆಯ್ಕೆಮಾಡುವುದು, |
00:14 | ಥರ್ಮೋಡೈನಮಿಕ್ ಪ್ಯಾಕೇಜ್-ಅನ್ನು ಹೇಗೆ ಆಯ್ಕೆಮಾಡುವುದು, |
00:17 | ಯುನಿಟ್ ಮತ್ತು ವ್ಯಾಲ್ಯುಗಳನ್ನು ಹೇಗೆ ಆಯ್ಕೆಮಾಡುವುದು, |
00:19 | ಮತ್ತು ಒಂದು ಮೆಟಿರಿಯಲ್ ಸ್ಟ್ರೀಮ್-ಅನ್ನು ಹೇಗೆ ಸೂಚಿಸುವುದು ಇವುಗಳ ಬಗ್ಗೆ ಕಲಿಯಲಿದ್ದೇವೆ. |
00:23 | ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು, ನಾನು DWSIM 3.4 Windows (ವಿಂಡೋಸ್) ವರ್ಷನ್ ಅನ್ನು ಬಳಸುತ್ತೇನೆ. |
00:29 | ಈ ಪದ್ಧತಿಯು Linux ಮತ್ತು Mac OS X ನಲ್ಲಿ ಹಾಗೂ ARMನ FOSSEE ಯಲ್ಲಿಯೂ ಕೂಡ ಸಮಾನವಾಗಿದೆ. |
00:35 | ಈ ಟ್ಯುಟೋರಿಯಲ್-ನ ಅಭ್ಯಾಸಕ್ಕಾಗಿ, ನೀವು DWSIMಗೆ ಅಕ್ಸೆಸ್ (access) ಅನ್ನು ಹೊಂದಿರಬೇಕು. |
00:39 | ನಾವು ಒಂದು ಹೊಸ steady state simulationಅನ್ನು ರಚಿಸುವುದರ ಮುಖಾಂತರ ಪ್ರಾರಂಭಿಸೋಣ. |
00:46 | DWSIM ಅನ್ನು ತೆರೆದಾಗ, ಹೀಗೆ ಕಾಣುವ ಒಂದು ಸ್ಟಾರ್ಟಪ್ ವಿಂಡೋ ಕಾಣುತ್ತದೆ. |
00:53 | Create new simulation ಮೇಲೆ ಕ್ಲಿಕ್ ಮಾಡಿ. |
00:57 | ಸಿಮುಲೇಷನ್ ವಿಜರ್ಡ್ ಕಾಣಿಸಿದರೆ, ಅದನ್ನು ಕ್ಯಾನ್ಸಲ್ ಮಾಡಿ. |
01:02 | ಮೇಲ್ತುದಿಯ ಎಡಭಾಗದಲ್ಲಿ, Simulation ಎಂಬ ಫೀಲ್ಡ್-ಅನ್ನು ಗುರುತಿಸಿ. |
01:08 | ಅದರ ಪಕ್ಕದಲ್ಲಿರುವ ಪಜಲ್-ನಂತಹ ಬಟನ್ ಮೇಲೆ ಮೌಸ್ ಅನ್ನು ಸುತ್ತಾಡಿಸಿ. |
01:14 | Configure Simulation ಎಂಬ ಹೆಸರಿನದನ್ನು ನೋಡಬಲ್ಲಿರಿ. |
01:18 | ಈ ಬಟನ್ ಅನ್ನು ಒತ್ತಿ. |
01:23 | ಒಂದು Configure Simulation ಪಾಪ್-ಅಪ್ ತೆರೆದುಕೊಳ್ಳುತ್ತದೆ. |
01:26 | ಹಿಂದಿನ ಕೆಲವು ಆವೃತ್ತಿಗಳಲ್ಲಿ, ಈ ಪಾಪ್-ಅಪ್ ತಾನಾಗಿಯೇ ತೆರೆದುಕೊಳ್ಳುತ್ತಿತ್ತು. |
01:31 | ಈ ರೆಕಾರ್ಡಿಂಗ್-ನಲ್ಲಿ ಅಕ್ಷರಗಳು ಬಹಳ ಸಣ್ಣದಾಗಿವೆ ಮತ್ತು ಓದಲು ಸಾಧ್ಯವಿಲ್ಲ. |
01:35 | ಇದನ್ನು ಸರಿಮಾಡಲು, ನಾನು ಈ ಸ್ಕ್ರೀನಿನಲ್ಲಿ ಅವಶ್ಯವಿರುವ ಭಾಗದಲ್ಲಿ ಮಾತ್ರ ಝೂಮ್ ಮಾಡುತ್ತೇನೆ. |
01:42 | ಈಗ, ಸರಿಯಾಗಿ ಓದಲು ಸಾಧ್ಯವಾಗುವಂತೆ ನಾನು ಸ್ಕ್ರೀನನ್ನು ಹೊಂದಿಸಿದ್ದೇನೆ. |
01:46 | ಈ ವಿಂಡೋ-ದ Component Search ಟ್ಯಾಬ್-ನಲ್ಲಿ, "benzene" ಎಂದು ಟೈಪ್ ಮಾಡಿ. |
01:59 | Benzene ಎರಡು ಸಾಲುಗಳಲ್ಲಿ ಕಾಣಿಸಿಕೊಳ್ಳುತ್ತದೆ.ನಾವು DWSIM ಅನ್ನು ಡೇಟಾಬೇಸ್ ಆಗಿ ಹೊಂದಿರುವ ಎಂಟ್ರಿಯಲ್ಲಿ ಮಾತ್ರ ಆಸಕ್ತರಾಗಿದ್ದೇವೆ. |
02:07 | ಬೇರೆ ಡೇಟಾಬೇಸ್-ಗಳ ಮಹತ್ವವನ್ನು ಇನ್ನೊಂದು ಟ್ಯುಟೋರಿಯಲ್-ನಲ್ಲಿ ವಿವರಿಸುತ್ತೇವೆ. |
02:13 | ಈ ರೇಖೆಯಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ. |
02:17 | ನೀವು ಬಲಪಕ್ಕದಲ್ಲಿರುವ Add ಬಟನ್ ಅನ್ನು ಕೂಡ ಒತ್ತಬಹುದಿತ್ತು. ಅದನ್ನು ಶೀಘ್ರದಲ್ಲೇ ನಾವು ನೋಡಲಿದ್ದೇವೆ. |
02:23 | Benzene ಈಗ ಆಯ್ಕೆಯಾಗಿರುವುದನ್ನು ನೀವು ನೋಡಬಹುದು. |
02:27 | ಪಾಪ್-ಅಪ್ ವಿಂಡೋ-ಅನ್ನು ಎಡಕ್ಕೆ ಜರುಗಿಸಿ, ನಾನು ಇದನ್ನು ನಿಮಗೆ ತೋರಿಸುತ್ತೇನೆ. |
02:40 | toluene ಗೂ ಇದನ್ನೇ ಪುನರಾವರ್ತಿಸಿ. |
02:52 | ನಾವು ಇದನ್ನು ಆಯ್ಕೆ ಮಾಡೋಣ. ನಾವು ಇದನ್ನು ಸೇರಿಸೋಣ. |
02:59 | ಕಾಂಪೋನೆಂಟ್ ನ ಆಯ್ಕೆ ಮುಗಿದಿದೆ ಎಂಬುದನ್ನು ನೀವು ನೋಡುವಿರಿ. |
03:04 | ವಿಂಡೋ-ಅನ್ನು ಮೊದಲಿದ್ದಲ್ಲಿಗೇ ಮತ್ತೆ ತರುತ್ತೇನೆ. |
03:12 | ಈಗ ನಾವು Thermodynamics ಅನ್ನು ಆಯ್ಕೆ ಮಾಡಲು ತಯಾರಿದ್ದೇವೆ. |
03:14 | ಮತ್ತೆ ಸ್ಲೈಡ್-ಗಳೆಡೆಗೆ ಹೋಗೋಣ. |
03:18 | ಮುಂದಿನ ಸ್ಲೈಡ್-ಗೆ ಹೋಗೋಣ. |
03:21 | thermodynamics ಅನ್ನು ಹೇಗೆ ಆಯ್ಕೆಮಾಡಬೇಕು ಎಂಬುದರ ಮಾರ್ಗಸೂಚಿ ಈ ಸ್ಲೈಡ್-ನಲ್ಲಿವೆ. |
03:24 | ಈ ಸ್ಲೈಡ್-ನ ಹಿಂದಿನ ತಥ್ಯವನ್ನು ವಿವರಿಸುವುದು ಈ ಟ್ಯುಟೋರಿಯಲ್-ನಲ್ಲಿ ಸಾಧ್ಯವಿಲ್ಲ. |
03:30 | Benzene ಮತ್ತು Toluene ಗಳು ಸರಿಯಾದ ಸೊಲ್ಯುಷನ್ ರೂಪಿಸುವುದರಿಂದ, ನಾವು Raoult's law ಅನ್ನು ಆಯ್ಕೆ ಮಾಡಬಹುದು. |
03:35 | DWSIM ನಲ್ಲಿ ಇದನ್ನು ಮಾಡೋಣ. |
03:40 | ಎಡಭಾಗದಲ್ಲಿ Thermodynamics ಟ್ಯಾಬ್-ಅನ್ನು ಹುಡುಕಿ. ಅದರ ಮೇಲೆ ಕ್ಲಿಕ್ ಮಾಡಿ. |
03:47 | ಮೇಲಿರುವ ಬಿಳಿಭಾಗದ ಜಾಗದಲ್ಲಿ ಸಬ್-ಮೆನು ಕಾಣಿಸುತ್ತದೆ. |
03:51 | ಸಬ್-ಮೆನುವಿನಲ್ಲಿರುವ Property Packages ನ ಮೇಲೆ ಕ್ಲಿಕ್ ಮಾಡಿ. |
03:56 | ಈ ಲಿಸ್ಟ್-ನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ ಮತ್ತು Raoult's law ಎಂಬ ಆಯ್ಕೆಯನ್ನು ಹುಡುಕಿ. |
04:03 | ಡಬಲ್-ಕ್ಲಿಕ್ ಮಾಡುವ ಮುಖಾಂತರ ಇದನ್ನು ಆಯ್ಕೆ ಮಾಡಿ. |
04:08 | ಪಾಪ್-ಅಪ್ ನ ಬಲಭಾಗದಲ್ಲಿ Raoult's law ಕಾಣಿಸುವುದನ್ನು ನೀವು ನೋಡುತ್ತೀರಿ. |
04:12 | ಇದನ್ನು ನೋಡಲು, ಪಾಪ್-ಅಪ್ ಅನ್ನು ನಾನು ಎಡಗಡೆಗೆ ತರುತ್ತೇನೆ. |
04:20 | ಈ ಪಾಪ್-ಅಪ್-ನ ಕೆಳಗಡೆಯ ಬಲ ಯಲ್ಲಿ, Back to Simulation. ಎಂಬ ಬಟನ್ ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ. |
04:28 | ಕಾನ್ಫಿಗರ್ ಸಿಮುಲೇಷನ್ ಪಾಪಪ್ ಮುಚ್ಚಿಕೊಳ್ಳುತ್ತದೆ ಮತ್ತು ಸಿಮುಲೇಷನ್ ಮಾಡಲು ನಾವು ತಯಾರಾಗಿದ್ದೇವೆ. |
04:35 | ಈ ಪುಟದ ಮಧ್ಯಭಾಗದಲ್ಲಿರುವ canvas ಅನ್ನು flowsheet ಗಳನ್ನು ತಯಾರುಮಾಡಲು ಬಳಸಲಾಗುತ್ತದೆ. |
04:41 | ನಾವು ಈಗ ಒಂದು material stream ಅನ್ನು ತಯಾರು ಮಾಡುತ್ತೇವೆ. |
04:44 | ಬಲಭಾಗದಲ್ಲಿ ನೀವು, ಒಂದು object palette ಅನ್ನು (ಆಬ್ಜೆಕ್ಟ್ ಪ್ಯಾಲೆಟ್) ನೋಡುವಿರಿ. |
04:49 | ಅನೇಕ ಉಪಯುಕ್ತ ಕೆಮಿಕಲ್ ಇಂಜನಿಯರಿಂಗ್ ಆಬ್ಜೆಕ್ಟ್-ಗಳ ಒಂದು ದೊಡ್ಡ ಸಂಗ್ರಹವು ಅಲ್ಲಿದೆ. |
04:55 | ನೀವು ಸ್ಕ್ರೋಲ್ ಮಾಡಿ, ಅಲ್ಲಿ ಲಭ್ಯವಿರುವ ಎಲ್ಲವನ್ನು ನೋಡಬಹುದು. |
05:01 | ಇದರ ಮೇಲ್ತುದಿಯಲ್ಲಿ Material Stream ಆಬ್ಜಕ್ಟ್ ಇದೆ. ಅದರ ಮೇಲೆ ಕ್ಲಿಕ್ ಮಾಡಿ ಅದನ್ನು flowsheetನ ಒಳಗೆ ಎಳೆದುಕೊಂಡು ಬನ್ನಿ. |
05:12 | ನೀವು ಇಷ್ಟಪಟ್ಟ ಜಾಗದಲ್ಲಿ stream ಅನ್ನು ತಂದು ಇರಿಸಲು ನಿಮ್ಮ ಬೆರಳನ್ನು ಮೌಸ್-ನಿಂದ ಬಿಡಿ. |
05:19 | ಅದನ್ನು ನೀವು ಕ್ಯಾನ್ವಾಸ್-ನ ಯಾವ ಭಾಗದಲ್ಲಾದರೂ ಬಿಡಬಹುದು. |
05:21 | ನಂತರ ನಿಮಗೆ ಬೇಕಾದರೆ ಸ್ಟ್ರೀಮ್-ಅನ್ನು ಇನ್ನೊಂದು ಕಡೆ ಇಡಬಹುದು. |
05:25 | ಸ್ಟ್ರೀಮ್ ಅನ್ನು ಇರಿಸಿದ ಕೂಡಲೇ ಕಾಂಪೋಸಿಷನ್-ಗಳನ್ನು ನಮೂದಿಸಲು ಒಂದು ಪಾಪಪ್ ಕಾಣಿಸುತ್ತದೆ. |
05:31 | Mole Fraction , ತಾನಾಗಿಯೇ ಸೆಲೆಕ್ಟ್ ಆಗಿದೆ ಎಂಬುದನ್ನು ಗಮನಿಸಿ. |
05:36 | ಬೇರೆ ಸಾಧ್ಯತೆಗಳಲ್ಲಿ ಯಾವುದೇ ಒಂದನ್ನು ನೀವು ಆಯ್ಕೆಮಾಡಬಹುದು. ಆದರೆ, ನಾನು ಅದನ್ನು ಹಾಗೆಯೇ ಬಿಡುತ್ತೇನೆ. |
05:42 | ನಾವು ಈಗಾಗಲೇ ಆಯ್ಕೆ ಮಾಡಿದ ಕೆಮಿಕಲ್ಸ್, ಇಲ್ಲಿ ತಾನಾಗಿಯೇ ಕಾಣುತ್ತವೆ. |
05:49 | Toluene ನ Equilibrium composition -ನಲ್ಲಿ 0.5 ಎಂದು ಟೈಪ್ ಮಾಡಿ. |
05:55 | ಡೌನ್-ಆರೋ ಪ್ರೆಸ್ ಮಾಡಿ. |
05:57 | benzene ನ Equilibrium Composition ನಲ್ಲಿ 0.5 ಎಂದು ಟೈಪ್ ಮಾಡಿ. |
06:02 | Apply ಬಟನ್ ಕ್ಲಿಕ್ ಮಾಡಿ. |
06:06 | ಬಲಪಕ್ಕದಲ್ಲಿ mole fractions ನ ಒಟ್ಟು ಮೊತ್ತವು ಕಾಣಿಸುತ್ತದೆ. |
06:12 | ಒಟ್ಟು ಮೊತ್ತವು 1 ಆಗಿಲ್ಲದಿದ್ದರೆ, DWSIM ಎಂಟ್ರಿಗಳನ್ನು normalize ಮಾಡಿ ಒಟ್ಟು ಮೊತ್ತವನ್ನು 1 ಆಗುವಂತೆ ಮಾಡುತ್ತದೆ. |
06:19 | ಆದರೆ ಇದು ಒಮ್ಮೊಮ್ಮೆ ಅನಿರೀಕ್ಷಿತ ಫಲಿತಾಂಶಗಳನ್ನು ನೀಡಬಹುದು. |
06:22 | ಆದ್ದರಿಂದ, ಒಟ್ಟು ಮೊತ್ತವು 1 ಇರಬೇಕು ಎಂದು ಸ್ವತಃ ನೀವೇ ಖಚಿತಮಾಡಿಕೊಳ್ಳಬಹುದು. Close ಬಟನ್ ಅನ್ನು ಕ್ಲಿಕ್ ಮಾಡಿ. |
06:31 | stream ಮೇಲೆ ಡಬಲ್-ಕ್ಲಿಕ್ ಮಾಡುವ ಮುಖಾಂತರ ನೀವು ಯಾವಾಗ ಬೇಕಾದರೂ ಹಿಂದಿನ ಪಾಪಪ್-ಗೆ ಹೋಗಬಹುದು. |
06:36 | configure simulation ಬಟನ್ ಕೆಳಗೆ, System of Units ಅನ್ನು ಬದಲಾಯಿಸಲು ಜಾಗವಿದೆಯೆಂದು ನೋಡುವಿರಿ. |
06:43 | ಈ ಮೆನುವನ್ನು ಕ್ಲಿಕ್ ಮಾಡೋಣ ಮತ್ತು CGS System ಅನ್ನು ಆಯ್ಕೆ ಮಾಡೋಣ. |
06:49 | ಈ ಸ್ಟ್ರೀಮ್-ನ ಸ್ಪೆಸಿಫಿಕೇಶನ್-ಗಳನ್ನು ನಾವು ಈಗ ಪೂರ್ತಿಗೊಳಿಸೋಣ. |
06:52 | ಫ್ಲೋಶೀಟ್-ನಲ್ಲಿರುವ stream ಐಕಾನ್ ಮೇಲೆ ಒಮ್ಮೆ ಕ್ಲಿಕ್ ಮಾಡಿ; ಡಬಲ್ ಕ್ಲಿಕ್ ಮಾಡಬೇಡಿ. |
07:00 | flowsheetನ ಎಡಭಾಗದಲ್ಲಿ, ಆಯ್ಕೆಮಾಡಲಾದ ಆಬ್ಜೆಕ್ಟ್ ವಿಂಡೋ ಅನ್ನು ನೋಡುವಿರಿ. |
07:07 | ಈ ವಿಂಡೋ Properties ಮತ್ತು Appearance ಟ್ಯಾಬ್-ಗಳನ್ನು ಹೊಂದಿದೆ. |
07:12 | properties ಟ್ಯಾಬ್ streamನ ಎಲ್ಲ ಪ್ರಾಪರ್ಟಿಗಳನ್ನು ತೋರಿಸುತ್ತದೆ. DWSIM ಎಲ್ಲ ಪ್ರಾಪರ್ಟಿಗಳಿಗೆ ಡಿಫಾಲ್ಟ್ ವ್ಯಾಲ್ಯುಗಳನ್ನು ನಿಯೋಜಿಸುತ್ತದೆ. |
07:21 | ನಾವು ಮೊದಲು ಈ ಪೇಜ್ ಅನ್ನು ಮೇಲಕ್ಕೆ ಸ್ಕ್ರೋಲ್ ಮಾಡೋಣ. |
07:27 | 'ಮಟೀರಿಯಲ್ ಸ್ಟ್ರೀಮ್' ನ ಸ್ಪೆಸಿಫಿಕೇಷನ್-ಅನ್ನು ಪೂರ್ತಿಗೊಳಿಸಲು ಬಹಳ ದಾರಿಗಳಿವೆ. |
07:31 | Specification ಮೇಲೆ ಪ್ರೆಸ್ ಮಾಡಿ. |
07:34 | ಬಲಬದಿಯಲ್ಲಿ ಡೌನ್ ಆರೋ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. |
07:40 | ಇಲ್ಲಿ ಡಿಫಾಲ್ಟ್, pressure and temperature ಅನ್ನು ಸೂಚಿಸುವುದು. |
07:43 | ನಾನು ಅದನ್ನು ಹಾಗೆಯೇ ಬಿಡುತ್ತೇನೆ. |
07:45 | ಮೆನುವನ್ನು ಕ್ಲೋಸ್ ಮಾಡಲು ನಾನು ಡೌನ್-ಆರೋ ಅನ್ನು ಮತ್ತೊಂದು ಬಾರಿ ಕ್ಲಿಕ್ ಮಾಡುವೆನು. |
07:50 | “temperature” ಎದುರಿಗೆ ಸಂಖ್ಯೆ 25 ಈಗಾಗಲೇ ನಮೂದು ಆಗಿರುವುದನ್ನು ಕಾಣುತ್ತೇವೆ. |
07:55 | Temperatureನ ಮೇಲೆ ಮೌಸ್ ಅನ್ನು ಆಡಿಸುವುದರಿಂದ, unit ಗಳನ್ನು ಡಿಗ್ರಿ ಸೆಲ್ಷಿಯಸ್ ಎಂದು ನೋಡುತ್ತೇವೆ. |
08:02 | ಈ ಸಂಖ್ಯೆಯ ಬಲಭಾಗದಲ್ಲಿ ಕ್ಲಿಕ್ ಮಾಡೋಣ. |
08:07 | ಇದು ಎಡಿಟ್ ಮಾಡಬಹುದಾದ ಫೀಲ್ಡ್ ಆಗಿದೆ. ನಾನು ಅದನ್ನು ಡಿಲಿಟ್ ಮಾಡಿ 30 ಅನ್ನು ಎಂಟರ್ ಮಾಡುತ್ತೇನೆ. |
08:15 | ನಂತರ pressure ಅನ್ನು ನೋಡೋಣ. ನಾನು ಇದನ್ನು 1 ಅಟ್ಮಾಸ್ಫಿಯರ್ ಎಂದು ಇಡುತ್ತೇನೆ. |
08:23 | ಮುಂದೆ ನಾವು flowrate ಅನ್ನು ಸೂಚಿಸೋಣ. |
08:26 | ನಾವು - mass flowrate ಅಥವಾ molar flowrate ಅಥವಾ volumetric flowrateಅನ್ನು ಸೂಚಿಸಬಹುದು. |
08:33 | ನಾವು molar flowrate ಅನ್ನು ಸೂಚಿಸುವೆವು. |
08:38 | ಹಿಂದಿನ ವ್ಯಾಲ್ಯುವನ್ನು ನಾನು ಡಿಲಿಟ್ ಮಾಡಿ 100 ಅನ್ನು ನಮೂದಿಸುತ್ತೇನೆ. |
08:47 | ಈ ಬದಲಾವಣೆಯನ್ನು save ಮಾಡಲು Enter ಅನ್ನು ಒತ್ತಿ. |
08:50 | ಈ ಫೀಲ್ಡ್ ಗಾಗಿ Unit ಗಳು moles per second ಆಗಿರುವುದನ್ನು ನಾವೀಗ ಕಾಣುತ್ತೇವೆ. |
08:56 | CGS ಮತ್ತು SI ಗಳಂತಹ ಯುನಿಟ್ ಗಳನ್ನು ಜೊತೆಯಾಗಿ ಬಳಸಲು ಸಾಧ್ಯವಿದೆ. |
09:01 | ಈ ಚರ್ಚೆಯನ್ನು ನಾವು ಇನ್ನೊಂದು ಟ್ಯುಟೋರಿಯಲ್-ನಲ್ಲಿ ಮಾಡೋಣ. |
09:05 | ಈಗ stream ಅನ್ನು ಸಂಪೂರ್ಣವಾಗಿ ವ್ಯಾಖ್ಯಾನಿಸಲಾಗಿದೆ. |
09:08 | ಈ ಸ್ಟ್ರೀಮ್-ಗೆ, DWSIM ತಾನಾಗಿಯೇ MSTR-004 ಎಂಬ ಹೆಸರನ್ನು ನೀಡಿದೆ. |
09:16 | ನಿಮ್ಮ simulationನಲ್ಲಿ, ನೀವು ಬೇರೆ ಯಾವುದಾದರೂ ಹೆಸರನ್ನು ನೋಡಬಹುದು, ಆದರೆ ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ. |
09:21 | ತಾನಾಗಿಯೇ ರಚಿಸಲ್ಪಟ್ಟ ಈ ಹೆಸರು ನನಗೆ ಹಿಡಿಸಿಲ್ಲ, ಆದ್ದರಿಂದ ನಾನು ಅದನ್ನು ಬದಲಾಯಿಸುತ್ತೇನೆ. |
09:27 | ಆಯ್ಕೆಯಾಗಿರುವ Object ವಿಂಡೋ ಕೆಳಗೆ, Appearance ಟ್ಯಾಬ್-ಅನ್ನು ಕ್ಲಿಕ್ ಮಾಡಿ. |
09:33 | ಸ್ಟ್ರೀಮ್-ನ ದೃಶ್ಯರೂಪವನ್ನು ಬದಲಾಯಿಸಲು Appearance ಟ್ಯಾಬ್ ಅನ್ನು ಬಳಸಲಾಗುತ್ತದೆ. |
09:37 | ಇದನ್ನು ಡಿಲಿಟ್ ಮಾಡಿದ ಮೇಲೆ, Name ಪಕ್ಕದ ಖಾಲಿ ಜಾಗದಲ್ಲಿ ಕ್ಲಿಕ್ ಮಾಡಿ ಮತ್ತು Inlet1 ಎಂದು ಟೈಪ್ ಮಾಡಿ. |
09:55 | Name ಮೇಲೆ ಮತ್ತೆ ಕ್ಲಿಕ್ ಮಾಡಿ. |
09:58 | ಫ್ಲೋಶೀಟ್-ನ ಈ ಸ್ಟ್ರೀಮ್-ನ ಕೆಳಗೆ Inlet1 ಎಂಬ ಹೆಸರು ಕಾಣಿಸಿಕೊಳ್ಳುವುದನ್ನು ನೀವು ನೋಡಬಹುದು. |
10:04 | ಮುಂದಿನ ಟ್ಯುಟೋರಿಯಲ್-ಗಳಲ್ಲಿ, ಈ 'ಮಟೀರಿಯಲ್ ಸ್ಟ್ರೀಮ್' ಅನ್ನು ನಾವು ಬೆಳೆಸುವೆವು. |
10:08 | ನಾವು ಸ್ಲೈಡ್-ಗಳಿಗೆ ವಾಪಸ್ ಹೋಗೋಣ. |
10:13 | ಮುಂದಿನ ಸ್ಲೈಡ್-ಗೆ ಹೋಗೋಣ. |
10:15 | ಈ ಟ್ಯುಟೋರಿಯಲ್-ನಲ್ಲಿ ನಾವು ಏನನ್ನು ಕಲಿತೆವೆಂಬುದರ ಸಾರಾಂಶವನ್ನು ವಿವರಿಸುತ್ತೇನೆ. |
10:19 | ನಾವು ಒಂದು ಮೆಟೀರಿಯಲ್ ಸ್ಟ್ರೀಮ್ ಅನ್ನು ಡಿಫೈನ್ ಮಾಡಿದೆವು. |
10:22 | ಕೆಮಿಕಲ್ ಕಂಪೋನೆಂಟ್-ಗಳನ್ನು ಆರಿಸಿದೆವು. |
10:24 | ಪ್ರಾಪರ್ಟಿ ಎಸ್ಟಿಮೇಷನ್ ಪ್ಯಾಕೇಜ್-ಅನ್ನು ಆರಿಸಿದೆವು. |
10:27 | ಸ್ಪೆಸಿಫಿಕೇಷನ್ಸ್-ಗಳನ್ನು ಪೂರ್ತಿಗೊಳಿಸಿದೆವು. |
10:29 | ವ್ಯಾಲ್ಯು ಮತ್ತು ಯುನಿಟ್-ಗಳನ್ನು ಅಸೈನ್ ಮಾಡಿದೆವು. |
10:32 | temperature, pressure ಮತ್ತು flow rateಅನ್ನು ಸೂಚಿಸಿದೆವು. |
10:36 | ಅನೇಕ ವಿಭಿನ್ನ ಆಯ್ಕೆಗಳನ್ನು ಸೂಚಿಸಿದೆವು. |
10:40 | ನಾನು ಈಗ ಕೆಲವು ಅಸೈನ್ಮೆಂಟ್-ಗಳನ್ನು
ಕೊಡಬೇಕೆಂದಿದ್ದೇನೆ. |
10:43 | ಕೂಡಿಸಿದಾಗ 1 ಎಂದು ಆಗದೇ ಇರುವ Benzene ಮತ್ತು Toluene ಮೋಲ್ ಫ್ರಾಕ್ಷನ್-ಗಳನ್ನು ಆಯ್ಕೆ ಮಾಡಿ. |
10:48 | ನೀವು Apply ಯನ್ನು ಪ್ರೆಸ್ ಮಾಡಿದಾಗ, DWSIM , ಹೇಗೆ ನಾರ್ಮಲೈಸ್ ಮಾಡುತ್ತದೆಂದು ನೋಡಿ. |
10:53 | ನೀವು mole fractionಗಳನ್ನು ವ್ಯಾಖ್ಯಾನ ಮಾಡಿದ ಪೇಜ್ ಗೆ ಹೋಗಿ. |
10:57 | ಮೊತ್ತವು 1 ಆಗಿಲ್ಲದಿದ್ದಾಗ, normalize ಬಟನ್ ಏನು ಮಾಡುತ್ತದೆಂಬುದನ್ನು ನೋಡಿ. |
11:02 | ನಾವು molar flow rate ಅನ್ನು ವ್ಯಾಖ್ಯಾನಿಸಿದ ಪುಟಕ್ಕೆ ಹೋಗಿ. |
11:05 | DWSIM, ಬೇರೆ ಯುನಿಟ್-ಗಳಲ್ಲಿ, ಸಮನಾದ flow rates ಅನ್ನು ತಾನಾಗಿಯೇ ತೋರಿಸುತ್ತದೆ. |
11:11 | ಈ ವ್ಯಾಲ್ಯುಗಳು ಸ್ಥಿರವಾಗಿವೆಯೇ ಎಂಬುದನ್ನು ನೋಡಿ. |
11:16 | Benzene, Toluene ಮತ್ತು Xyleneಗಳನ್ನು ಹೊಂದಿರುವ ಒಂದು ಸ್ಟ್ರೀಮ್ ಅನ್ನು ರಚಿಸಿ. |
11:20 | ಈ ಸ್ಟ್ರೀಮ್- ಗಾಗಿ ಕೂಡ ಹಿಂದೆ ಕೊಟ್ಟಿರುವ ಅಸೈನ್ಮೆಂಟ್-ಗಳನ್ನು ಮಾಡಿ. |
11:26 | ನಾವು ಈ ಟ್ಯುಟೋರಿಯಲ್-ನ ಕೊನೆಗೆ ಬಂದಿದ್ದೇವೆ. |
11:28 | Spoken Tutorial ಪ್ರಾಜೆಕ್ಟ್-ನ ಸಾರಾಂಶವನ್ನು ಈ ವೀಡಿಯೋ ವಿವರಿಸುತ್ತದೆ. |
11:33 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
11:39 | ನಾವು Spoken Tutorial ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
11:47 | ಸ್ಪೋಕನ್ ಟುಟೋರಿಯಲ್ ಪ್ರಾಜೆಕ್ಟ್, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿದೆ. |
11:52 | ಇದನ್ನು ಓಪನ್-ಸೋರ್ಸ್ ಸಾಫ್ಟ್ವೇರ್ ಮಾಡಿದ್ದಕ್ಕೆ DWSIM ತಂಡಕ್ಕೆ ನಮ್ಮ ಧನ್ಯವಾದಗಳು. |
11:58 | ಈ ಟ್ಯುಟೋರಿಯಲ್-ನ ಅನುವಾದಕರು ಡಾ. ಉದಯನ ಹೆಗಡೆ ಮತ್ತು ಪ್ರವಾಚಕ .......
ಧನ್ಯವಾದಗಳು. |