Inkscape/C4/Warli-art-for-Textle-design/Kannada

From Script | Spoken-Tutorial
Revision as of 22:01, 13 August 2017 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:01 Inkscape ನಲ್ಲಿ Warli art for Textile design ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ಬಾರ್ಡರ್ ಗೆ ವಾರ್ಲಿ ಪ್ಯಾಟರ್ನ್ಸ್ ವಿನ್ಯಾಸವನ್ನು ರಚಿಸುವುದು ಮತ್ತು ಕ್ಲೋನಿಂಗ್ ಅನ್ನು ಉಪಯೋಗಿಸಿ ಪ್ಯಾಟರ್ನ್ ಅನ್ನು ಪುನರಾವರ್ತಿಸುವುದನ್ನು ಕಲಿಯುತ್ತೇವೆ.
00:17 ಈ ಟ್ಯುಟೋರಿಯಲ್ ನಲ್ಲಿ ನಾವು

Ubuntu Linux 12.04 ಒ ಎಸ್, Inkscape 0.91 ಆವೃತ್ತಿಯನ್ನು ಉಪಯೋಗಿಸಿದ್ದೇವೆ.

00:27 Inkscape ಅನ್ನು ಓಪನ್ ಮಾಡೋಣ. ಮೊದಲು ವಾರ್ಲಿ ಪ್ಯಾಟರ್ನ್ ಅನ್ನು ವಿನ್ಯಾಸ ಗೊಳಿಸೋಣ.
00:32 File ಗೆ ಹೋಗಿ Document Properties ಮೇಲೆ ಕ್ಲಿಕ್ ಮಾಡಿ. Orientation ಅನ್ನು Landscape ಗೆ ಬದಲಿಸಿ ಡಯಲಾಗ್ ಬಾಕ್ಸ್ ಅನ್ನು ಮುಚ್ಚಿರಿ.
00:42 Rectangle tool ಅನ್ನು ಆಯ್ಕೆ ಮಾಡಿಕೊಳ್ಳಿ, ಪೂರ್ಣ ಕ್ಯಾನ್ವಾಸ್ ಮುಚ್ಚುವಂತೆ ಆಯತವನ್ನು ರಚಿಸಿ ಮತ್ತು ನೀಲಿ ಬಣ್ಣವನ್ನು ತುಂಬಿ.
00:53 Ellipse tool ನ ಮೇಲೆ ಕ್ಲಿಕ್ ಮಾಡಿ. ಕ್ಯಾನ್ವಾಸ್ ನ ಹೊರಗೆ ಒಂದು ವೃತ್ತವನ್ನು ರಚಿಸಿ. ನಂತರ Selector tool ನ ಮೇಲೆ ಕ್ಲಿಕ್ ಮಾಡಿ.
01:02 'ಟೂಲ್ ಕಂಟ್ರೋಲ್ಸ್ ಬಾರ್' ನಲ್ಲಿ Width ಮತ್ತು Height ಗಳನ್ನು 15 ಎಂದು ಬದಲಿಸಿ.
01:08 ಬಣ್ಣವನ್ನು ಕಿತ್ತಳೆ ಬಣ್ಣಕ್ಕೆ ಬದಲಿಸಿ. ಅದನ್ನು ಇಲ್ಲಿ ತೋರಿಸಿದಂತೆ ಕ್ಯಾನ್ವಾಸ್ ನ ಕೆಳಭಾಗಕ್ಕೆ ಸರಿಸಿ.
01:15 ವೃತ್ತವನ್ನು ನಕಲು ಮಾಡಲು Ctrl + D ಯನ್ನು ಒತ್ತಿ.
01:19 'ಟೂಲ್ ಕಂಟ್ರೋಲ್ಸ್ ಬಾರ್' ನಲ್ಲಿ, Width ಮತ್ತು Height ಗಳನ್ನು 7 ಕ್ಕೆ ಬದಲಿಸಿ.
01:25 ನಕಲು ವೃತ್ತವನ್ನು ಅಸಲಿ ವೃತ್ತದ ಕೆಳ ಎಡಭಾಗಕ್ಕೆ ಚಲಿಸಿ.
01:31 ಇದು ವಾರ್ಲಿ ಯ ತಲೆಯ ಭಾಗ.
01:34 ನಂತರ Object ಮೆನ್ಯುಗೆ ಹೋಗಿ ಮತ್ತು Symbols ಆಯ್ಕೆಯ ಮೇಲೆ ಕ್ಲಿಕ್ ಮಾಡಿ. Symbol set ಡ್ರಾಪ್ ಡೌನ್ ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. Flow Chart Shapes ಅನ್ನು ಆಯ್ಕೆ ಮಾಡಿಕೊಳ್ಳಿ.
01:46 ಒಂದಷ್ಟು ಜ್ಯಾಮಿತಿಯ ಆಕೃತಿಗಳು ಕಾಣುತ್ತವೆ. ಅದರಲ್ಲಿ ತ್ರಿಕೋನಾಕೃತಿಯ ಮೇಲೆ ಕ್ಲಿಕ್ ಮಾಡಿ ಕ್ಯಾನ್ವಾಸ್ ನ ಮೇಲೆ ಡ್ರ್ಯಾಗ್ ಮಾಡಿ.

ಬಣ್ಣವನ್ನು ಕಿತ್ತಳೆ ಬಣ್ಣಕ್ಕೆ ಬದಲಿಸಿ. Stroke ಅನ್ನು ತೆಗೆದು ಹಾಕಿ.

02:00 'ಟೂಲ್ ಕಂಟ್ರೋಲ್ಸ್ ಬಾರ್' ನಲ್ಲಿ ಅಗಲ ಮತ್ತು ಎತ್ತರವನ್ನು 20 ಕ್ಕೆ ಬದಲಿಸಿ.
02:07 ತ್ರಿಕೋನವನ್ನು ನಕಲು ಮಾಡಲು Ctrl + D ಯನ್ನು ಒತ್ತಿ, ಹೊರಳಿಸಲು V ಯನ್ನು ಒತ್ತಿ.
02:14 ತ್ರಿಕೋನವನ್ನು ಇಲ್ಲಿ ತೋರಿಸಿದಂತೆ ತಲೆಯ ಕೆಳಭಾಗದಲ್ಲಿ ಜೋಡಿಸಿ.
02:21 ಇದು ವಾರ್ಲಿ ಚಿತ್ರದ ದೇಹ.
02:24 Rectangle tool ಅನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ತಲೆ ಮತ್ತು ದೇಹದ ಮಧ್ಯ ಭಾಗದಲ್ಲಿ ಒಂದು ಗೆರೆಯನ್ನು ಎಳೆಯಿರಿ.
02:30 ಈಗ ಚಿತ್ರದ ಕುತ್ತಿಗೆಯನ್ನು ಬರೆದಿದ್ದೇವೆ.
02:33 ಈಗ ಕೈ ಮತ್ತು ಕಾಲುಗಳನ್ನು ಬರೆಯೋಣ. ಇದಕ್ಕಾಗಿ ನಾವು Bezier tool ಟೂಲ್ ಅನ್ನು ಆರಿಸಿಕೊಳ್ಳಬೇಕು.
02:41 ಇಲ್ಲಿ ತೋರಿಸಿದಂತೆ ಕೈ ಮತ್ತು ಕಾಲುಗಳನ್ನು ಬರೆಯಿರಿ.
02:47 ಎರಡೂ ಕೈ ಮತ್ತು ಕಾಲುಗಳನ್ನು ಆಯ್ಕೆ ಮಾಡಿಕೊಳ್ಳಿ. Fill and Stroke ನಲ್ಲಿ Picker tool ಅನ್ನು ಆರಿಸಿಕೊಂಡು ವಾರ್ಲಿ ಆರ್ಟ್ ನ ದೇಹದಿಂದ ಕಿತ್ತಳೆ ಬಣ್ಣವನ್ನು ಆರಿಸಿಕೊಳ್ಳಿ.
02:59 Stroke Width ಅನ್ನು 2 ಕ್ಕೆ ಬದಲಿಸಿ.
03:02 ಈಗ ಎಲ್ಲಾ ಎಲಿಮೆಂಟ್ ಗಳನ್ನು ಆರಿಸಿಕೊಂಡು ಅವುಗಳನ್ನು ಒಟ್ಟುಗೂಡಿಸಲು Ctrl + G ಯನ್ನು ಒತ್ತಿ.
03:09 ಈಗ ವಾರ್ಲಿ ಚಿತ್ರವು ಸಿದ್ಧವಾಗಿದೆ. ಈ ವಾರ್ಲಿ ಚಿತ್ರವನ್ನು ಉಪಯೋಗಿಸಿ ಈಗ ಒಂದು ವೃತ್ತಾಕಾರದ ವಿನ್ಯಾಸವನ್ನು ಬರೆಯೋಣ.
03:17 ನಾನು ಮುಂದೆ ಹೋಗುವ ಮೊದಲು ಈ ಚಿತ್ರದ ಒಂದು ನಕಲನ್ನು ಒಂದು ಬದಿಯಲ್ಲಿ ಇಟ್ಟುಕೊಳ್ಳುತ್ತೇನೆ.
03:22 ಈಗ ಅಸಲಿ ವಾರ್ಲಿ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಿ. ‘ಆಂಕರ್ ಪಾಯಿಂಟ್’ ಕಾಣುವಂತೆ ಮಾಡಲು ಇನ್ನೊಮ್ಮೆ ಚಿತ್ರವನ್ನು ಕ್ಲಿಕ್ ಮಾಡಿ.
03:30 ‘ಆಂಕರ್ ಪಾಯಿಂಟ್’ನ ಮೇಲೆ ಕ್ಲಿಕ್ ಮಾಡಿ ಮತ್ತು ಇಲ್ಲಿ ತೋರಿಸಿದಂತೆ ಕೆಳಕ್ಕೆ ಚಲಿಸಿ.
03:36 ಈಗ Edit ಹೋಗಿ, Clone ನ ಮೇಲೆ, ನಂತರ Create Tiled Clones ನ ಮೇಲೆ ಕ್ಲಿಕ್ ಮಾಡಿ.
03:42 ಡಯಲಾಗ್ ಬಾಕ್ಸ್ ನಲ್ಲಿ Symmetry tab ನ ಅಡಿಯಲ್ಲಿ ಡ್ರಾಪ್ ಡೌನ್ ಮೆನ್ಯುವಿನಲ್ಲಿ Simple translation ಆಯ್ಕೆಯನ್ನು ಆರಿಸಿಕೊಳ್ಳಿ.
03:51 ನಂತರ Shift ಟ್ಯಾಬ್ ಗೆ ಹೋಗಿ, Per column ಆಯ್ಕೆಯಡಿಯಲ್ಲಿ X ನ ವ್ಯಾಲ್ಯೂಅನ್ನು ಮೈನಸ್100 ಎಂದು ಬದಲಿಸಿ.
03:58 ನಂತರ Rotation ಟ್ಯಾಬ್ ಗೆ ಹೋಗಿ, ಕೋನದ Per row ಮತ್ತು Per column ಪ್ಯಾರಾಮೀಟರ್ ಗಳನ್ನು 30 ಕ್ಕೆ ಬದಲಿಸಿ.
04:07 ಕೆಳಭಾಗದಲ್ಲಿ row ಗಳ ಸಂಖ್ಯೆ 1 ಆಗಿರಲಿ. ಮತ್ತು column ಸಂಖ್ಯೆಯನ್ನು 12 ಎಂದು ಬದಲಿಸಿ.
04:14 ನಂತರ Create ಬಟನ್ ನ ಮೇಲೆ ಕ್ಲಿಕ್ ಮಾಡಿ.
04:16 ಕ್ಯಾನ್ವಾಸ್ ನ ಮೇಲೆ ರಚನೆಯಾದ ವೃತ್ತಾಕಾರದ ಪ್ಯಾಟರ್ನ್ ಅನ್ನು ಗಮನಿಸಿ.
04:21 ಇನ್ನೂ ಬೇರೆ ಆಯ್ಕೆಗಳನ್ನು ನೋಡೋಣ.
04:24 Rotation ಟ್ಯಾಬ್ ನಡಿಯಲ್ಲಿ, ಕೋನದ Per row ಮತ್ತು Per column ಪ್ಯಾರಾಮೀಟರ್ ಗಳನ್ನು 10 ಎಂದು ಬದಲಿಸಿ. Create ನ ಮೇಲೆ ಕ್ಲಿಕ್ ಮಾಡಿ.
04:33 ಕ್ಯಾನ್ವಾಸ್ ನ ಮೇಲೆ ರಚನೆಯಾದ ಪ್ಯಾಟರ್ನ್ ಅನ್ನು ಗಮನಿಸಿ. ಇದನ್ನು ಸಂಪೂರ್ಣವಾದ ವೃತ್ತಾಕಾರದ ಪ್ಯಾಟರ್ನ್ ಆಗಿ ಮಾಡಲು Rows ಅನ್ನು 40 ಎಂದು ಬದಲಿಸಿ.
04:41 Create ನ ಮೇಲೆ ಕ್ಲಿಕ್ ಮಾಡಿ. ಕ್ಯಾನ್ವಾಸ್ ನಲ್ಲಾಗುವ ಬದಲಾವಣೆಯನ್ನು ಗಮನಿಸಿ.
04:46 ಇದೇ ರೀತಿಯಲ್ಲಿ ನೀವು ಬೇರೆ ಬೇರೆ ಕೋನದಲ್ಲಿ ಪ್ಯಾಟರ್ನ್ ಅನ್ನು ಪಡೆಯಲು Rotation ಪ್ಯಾರಾಮೀಟರ್ ಗಳನ್ನು ಬದಲಿಸಿ.
04:53 ವೃತ್ತಾಕಾರದ ಪ್ಯಾಟರ್ನ್ ಅನ್ನು ಆಯ್ಕೆ ಮಾಡಿಕೊಂಡು ಎಲ್ಲವನ್ನೂ ಒಟ್ಟುಗೂಡಿಸಲು Ctrl + G ಯನ್ನು ಒತ್ತಿ.
04:59 ಈಗ ನಾವು ನಮ್ಮ ಕ್ಯಾನ್ವಾಸ್ ನಲ್ಲಿ ಸುಂದರವಾದ ವಾರ್ಲಿ ಕಲೆಯನ್ನುಹೊಂದಿದ್ದೇವೆ.
05:04 ಇದನ್ನು ಈ ರೀತಿ ಒಂದು ಕಡೆ ಸರಿಸೋಣ.
05:08 ಈಗ ಕೆಲವು ಬೇರೆ ಆಯ್ಕೆಗಳನ್ನು ಪ್ರಯತ್ನಿಸೋಣ.
05:11 Create Spirals ಟೂಲ್ ಅನ್ನು ಉಪಯೋಗಿಸಿ, ಕ್ಯಾನ್ವಾಸ್ ನ ಮೇಲೆ ಒಂದು ದೊಡ್ಡದಾದ ಸುರುಳಿಯನ್ನು ಇಲ್ಲಿ ತೋರಿಸಿದಂತೆ ಬರೆಯಿರಿ.
05:20 Selector tool ಅನ್ನು ಆರಿಸಿಕೊಳ್ಳಿ, ವಾರ್ಲಿ ಚಿತ್ರವನ್ನು ಆರಿಸಿಕೊಳ್ಳಿ ಮತ್ತು ಅದನ್ನು ಸುರುಳಿಯ ಮಧ್ಯದಲ್ಲಿ ಈ ರೀತಿಯಾಗಿ ಇಡಿ.
05:27 ಈಗ 'ಟೂಲ್ ಕಂಟ್ರೋಲ್ಸ್ ಬಾರ್'ನಲ್ಲಿ Raise to top ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
05:32 ನಂತರ ಸುರುಳಿಯನ್ನೂ ಆಯ್ಕೆ ಮಾಡಿಕೊಳ್ಳಿ.
05:35 Extensions menu ನ ಮೇಲೆ ಕ್ಲಿಕ್ ಮತ್ತು Generate from path ಆಯ್ಕೆಯನ್ನು ಆರಿಸಿಕೊಳ್ಳಿ.
05:41 ಈಗ ಬರುವ ಸಬ್ ಮೆನ್ಯುವಿನಲ್ಲಿ Scatter ಅನ್ನು ಆರಿಸಿಕೊಳ್ಳಿ.
05:45 ಸ್ಕ್ರೀನ್ ನ ಮೇಲೆ ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. Follow path orientation ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ.
05:54 Space between copies ನಲ್ಲಿ ನಾವು 5 ನ್ನು ಹಾಕೋಣ.
05:58 Original pattern will be ಇದು Moved ಎಂದೂ ಮತ್ತು Duplicate the pattern before deformation ಚೆಕ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
06:08 Apply ಬಟನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಡಯಲಾಗ್ ಬಾಕ್ಸ್ ಅನ್ನು ಮುಚ್ಚಿರಿ.
06:12 ಈಗ ಸುರಳಿ ಪಥವು ಕಾಣುವಂತೆ ಮಾಡಲು ಸುರಳಿಯಾಕಾರದ ವಾರ್ಲಿ ಪ್ಯಾಟರ್ನ್ ಒಂದು ಕಡೆ ಸರಿಸೋಣ. ಈಗ ಸುರಳಿ ಪಥವನ್ನು ಆಯ್ಕೆ ಮಾಡಿಕೊಂಡು ಅದನ್ನು ಡಿಲೀಟ್ ಮಾಡೋಣ.
06:21 ಈ ರೀತಿಯಲ್ಲಿ Inkscape ನಲ್ಲಿ ಸುಂದರವಾದ ಸುರುಳಿಯಾಕಾರದ ಪ್ಯಾಟರ್ನ್ ಅನ್ನು ಬಿಡಿಸಬಹುದು.
06:26 ಇದೇ ರೀತಿಯಲ್ಲಿ ಇನ್ನೂ ಅನೇಕ ಸುಂದರವಾದ ವಾರ್ಲಿ ಪ್ಯಾಟರ್ನ್ ಗಳನ್ನು ರಚಿಸಬಹುದು.
06:31 ಈಗ ಬಾರ್ಡರ್ ಅನ್ನು ರಚಿಸುವುದು ಹೇಗೆ ಎಂದು ಕಲಿಯೋಣ.
06:35 Object ಮೆನ್ಯುಗೆ ಹೋಗಿ ಮತ್ತು Symbols ನ ಮೇಲೆ ಕ್ಲಿಕ್ ಮಾಡಿ. ತ್ರಿಕೋನಾಕೃತಿಯ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಕ್ಯಾನ್ವಾಸ್ ನ ಮೇಲೆ ಡ್ರ್ಯಾಗ್ ಮಾಡಿ.
06:42

'ಟೂಲ್ ಕಂಟ್ರೋಲ್ಸ್ ಬಾರ್'ನಲ್ಲಿ, Width ಮತ್ತು Height ಗಳನ್ನು 30 ಎಂದು ಬದಲಿಸಿ.

06:47 ಈಗ ಕ್ಯಾನ್ವಾಸ್ ನ ಮೇಲ್ಭಾಗದ ಎಡಭಾಗಕ್ಕೆ ಈ ತ್ರಿಕೋನವನ್ನು ಸರಿಸಿ.
06:52 ನಾನು ತ್ರಿಕೋನವನ್ನು ಉಪಯೋಗಿಸಿ ಸಾಲು ವಿನ್ಯಾಸವನ್ನು ರಚಿಸಲು ಬಯಸುತ್ತೇನೆ.
06:56 Edit ಗೆ ಹೋಗಿ Clone ನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Create Tiled Clones ನ ಮೇಲೆ ಕ್ಲಿಕ್ ಮಾಡಿ. ಹಳೆಯ ಎಲ್ಲಾ ಸೆಟ್ಟಿಂಗ್ ಗಳನ್ನು ಇಲ್ಲಿ ನೋಡಬಹುದು.
07:06 Rotation ಟ್ಯಾಬ್ ನಡಿಯಲ್ಲಿ, Per Row ಮತ್ತು Per Column ಗಳ Angle ಪ್ಯಾರಾಮೀಟರ್ ಅನ್ನು 0 ಗೆ ಬದಲಿಸಿ.
07:13 Shift ಟ್ಯಾಬ್ ನಡಿಯಲ್ಲಿ Per column ಆಯ್ಕೆಯಲ್ಲಿ X ನ ವ್ಯಾಲ್ಯೂವನ್ನು 0 ಗೆ ಬದಲಿಸಿ.
07:19 ಕೊನೆಯಲ್ಲಿ ಕೆಳಭಾಗದಲ್ಲಿ ಇಲ್ಲಿ ತೋರಿಸಿದಂತೆ Column ಅನ್ನು 35 ಎಂದು ಬದಲಿಸಿ.
07:27 ಕ್ಯಾನ್ವಾಸ್ ನ ಮೇಲೆ ರಚನೆಯಾದ ಸಾಲು ವಿನ್ಯಾಸವನ್ನು ಗಮನಿಸಿ.
07:31 ಎಲ್ಲವನ್ನೂ ಗುಂಪಾಗಿಸಲು, ಎಲ್ಲಾ ತ್ರಿಕೋನಗಳನ್ನು ಆಯ್ಕೆ ಮಾಡಿಕೊಂಡು Ctrl + G ಯನ್ನು ಒತ್ತಿ.
07:37 ತ್ರಿಕೋನಗಳನ್ನು ನಕಲು ಮಾಡಲು Ctrl + D ಯನ್ನು ಒತ್ತಿ ಮತ್ತು ಹೊರಳಿಸಲು V ಯನ್ನು ಒತ್ತಿ.
07:43 ಈಗ ಈ ಪ್ಯಾಟರ್ನ್ ಅನ್ನು ಕ್ಯಾನ್ವಾಸ್ ನ ಕೆಳಭಾಗಕ್ಕೆ ತನ್ನಿ.
07:48 ನಮ್ಮ ವಾರ್ಲಿ ಪ್ಯಾಟರ್ನ್ ಈಗ ಸಿದ್ಧವಾಗಿದೆ. ನಾವು ಈ ಪ್ಯಾಟರ್ನ್ ಗಳನ್ನು ನಮ್ಮ ಹಲವಾರು ಟೆಕ್ಸ್ಟೈಲ್ ವಿನ್ಯಾಸದಲ್ಲಿ ಉಪಯೋಗಿಸಬಹುದು.
07:55 ಕುರ್ತಿಯ ಮೇಲೆ ಅದು ಈ ರೀತಿ ಕಾಣಿಸುತ್ತದೆ.
07:58 ಇದನ್ನು ನಮ್ಮ ದಿಂಬಿನ ಕವರ್ ಮೇಲೆ ಸಹ ಉಪಯೋಗಿಸಬಹುದು.
08:02 ಮತ್ತು ಈ ವಾರ್ಲಿ ಕಲೆಯು ಬಟ್ಟೆಯ ಚೀಲದ ಮೇಲೂ ಚೆನ್ನಾಗಿ ಕಾಣಿಸುತ್ತದೆ.
08:06 ಇದೇ ರೀತಿ ನೀವು ವಾರ್ಲಿ ಆರ್ಟ್ ಅನ್ನು ಉಪಯೋಗಿಸಿ ಅನೇಕ ಸುಂದರವಾದ ಟೆಕ್ಸ್ಟೈಲ್ ವಿನ್ಯಾಸಗಳನ್ನು ರಚಿಸಬಹುದು.
08:13 ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಾರಾಂಶವನ್ನು ನೋಡೋಣ.
08:18 ಈ ಟ್ಯುಟೋರಿಯಲ್ ನಲ್ಲಿ ಬಾರ್ಡರ್ ಗೆ ವಾರ್ಲಿ ಪ್ಯಾಟರ್ನ್ ವಿನ್ಯಾಸವನ್ನು ರಚಿಸುವುದು ಮತ್ತು ಕ್ಲೋನಿಂಗ್ ಅನ್ನು ಉಪಯೋಗಿಸಿ ಪ್ಯಾಟರ್ನ್ ಅನ್ನು ಪುನರಾವರ್ತಿಸುವುದನ್ನು ಕಲಿತಿದ್ದೇವೆ.
08:27 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್. ನವಿಲಿನ ಪ್ಯಾಟರ್ನ್ ನ ವಿನ್ಯಾಸವನ್ನು ರಚಿಸಿ.
08:33 ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್ ಈ ರೀತಿಯಾಗಿ ಕಾಣಬೇಕು.
08:37 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ಹೆಚ್ಚಿನ ವಿಷಯವನ್ನು ತಿಳಿಯಲು ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಅನ್ನು ನೋಡಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ
08:43 ಸ್ಪೋಕನ್ ಟ್ಯುಟೋರಿಯಲ್ ತಂಡವು :ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ.
08:53 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ.

ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ ಇದರ ಕುರಿತು ಹೆಚ್ಚಿನ ವಿವರಗಳು ಈ ಲಿಂಕ್ ನಲ್ಲಿ ದೊರೆಯುತ್ತದೆ.

09:03 ಧ್ವನಿ ಮತ್ತು ಅನುವಾದ ನವೀನ್ ಭಟ್ಟ ಉಪ್ಪಿನ ಪಟ್ಟಣ. ಧನ್ಯವಾದಗಳು.

Contributors and Content Editors

NaveenBhat