Advanced-Cpp/C2/More-On-Inheritance/Kannada
From Script | Spoken-Tutorial
Revision as of 12:42, 21 November 2014 by Vasudeva ahitanal (Talk | contribs)
Time | Narration |
00:01 | C++ ನಲ್ಲಿಯ Multiple and Hierarchical Inheritance (ಮಲ್ಟಿಪಲ್ ಆಂಡ್ ಹೈರಾರ್ಕಿಕಲ್ ಇನ್ಹೆರಿಟೆನ್ಸ್) ಎನ್ನುವುದರ ಕುರಿತು ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, |
00:09 | ಮಲ್ಟಿಪಲ್ ಇನ್ಹೆರಿಟೆನ್ಸ್ ಮತ್ತು |
00:11 | ಹೈರಾರ್ಕಿಕಲ್ ಇನ್ಹೆರಿಟೆನ್ಸ್ ಗಳನ್ನು ನಾವು ಕಲಿಯುವೆವು, |
00:13 | ನಾವು ಇದನ್ನು ಉದಾಹರಣೆಗಳ ಸಹಾಯದಿಂದ ಮಾಡುವೆವು. |
00:17 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, |
00:20 | Ubuntu ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು, |
00:24 | g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ. |
00:29 | ಮಲ್ಟಿಪಲ್ ಇನ್ಹೆರಿಟೆನ್ಸ್ ಎನ್ನುವುದರಲ್ಲಿ ಡಿರೈವ್ಡ್ ಕ್ಲಾಸ್, ಒಂದಕ್ಕಿಂತ ಹೆಚ್ಚು ಬೇಸ್ ಕ್ಲಾಸ್ ಗಳಿಂದ ಪಾರಂಪರ್ಯವಾಗಿ ಪಡೆಯುತ್ತದೆ. |
00:36 | ಈಗ, ಮಲ್ಟಿಪಲ್ ಇನ್ಹೆರಿಟೆನ್ಸ್ ಎನ್ನುವುದರ ಒಂದು ಉದಾಹರಣೆಯನ್ನು ನಾವು ನೋಡೋಣ. |
00:40 | ನಾನು ಕೋಡನ್ನು ಈಗಾಗಲೇ ಎಡಿಟರ್ನಲ್ಲಿ ಟೈಪ್ ಮಾಡಿದ್ದೇನೆ. |
00:42 | ನಾನು ಇದನ್ನು ಓಪನ್ ಮಾಡುವೆನು. |
00:45 | ನಮ್ಮ ಫೈಲ್ ನ ಹೆಸರು multiple.cpp ಆಗಿದೆ ಎಂಬುದನ್ನು ಗಮನಿಸಿರಿ. |
00:49 | ಈ ಪ್ರೊಗ್ರಾಂನಲ್ಲಿ ನಾವು ವಿದ್ಯಾರ್ಥಿಯ ಹೆಸರು, ರೋಲ್-ನಂ, ಮಾರ್ಕ್ಸ್ ಮತ್ತು ಎವರೇಜ್, ಇವುಗಳನ್ನು ತೋರಿಸುವೆವು. |
00:56 | ನಾನು ಕೋಡನ್ನು ವಿವರಿಸುತ್ತೇನೆ. |
00:59 | iostream ಎನ್ನುವುದು ನಮ್ಮ ಹೆಡರ್ ಫೈಲ್ ಆಗಿದೆ. |
01:01 | ಇದು std namespace, |
01:05 | ಆಮೇಲೆ ನಾವು student ಎನ್ನುವ ಕ್ಲಾಸ್ಅನ್ನು ಹೊಂದಿದ್ದೇವೆ. |
01:07 | ಇದು ಬೇಸ್ ಕ್ಲಾಸ್ ಆಗಿದೆ. |
01:09 | ಇದರಲ್ಲಿ ನಾವು roll_no ಎನ್ನುವ ಇಂಟೀಜರ್ ವೇರಿಯಬಲ್ ಹಾಗೂ name ಎನ್ನುವ ಕ್ಯಾರೆಕ್ಟರ್ ವೇರಿಯಬಲ್ ಅನ್ನು ಹೊಂದಿದ್ದೇವೆ. |
01:16 | ಇವುಗಳು ಪ್ರೊಟೆಕ್ಟೆಡ್ ಎಂದು ಡಿಕ್ಲೇರ್ ಮಾಡಲ್ಪಟ್ಟಿವೆ. |
01:19 | ಆಮೇಲೆ ನಾವು exam_inherit ಎನ್ನುವ ಇನ್ನೊಂದು ಕ್ಲಾಸ್ ಅನ್ನು ಹೊಂದಿದ್ದೇವೆ. |
01:24 | ಇದೂ ಸಹ ಒಂದು ಬೇಸ್ ಕ್ಲಾಸ್ ಆಗಿದೆ. |
01:26 | ಹೀಗಾಗಿ ಇಲ್ಲಿ ನಾವು student ಮತ್ತು exam_inherit ಎನ್ನುವ ಎರಡು ಬೇಸ್ ಕ್ಲಾಸ್ ಗಳನ್ನು ಹೊಂದಿದ್ದೇವೆ. |
01:32 | ಇದರಲ್ಲಿ ನಾವು sub1, sub2, sub3 ಎನ್ನುವ ಮೂರು ಪ್ರೊಟೆಕ್ಟೆಡ್ ವೇರಿಯಬಲ್ ಗಳನ್ನು ಹೊಂದಿದ್ದೇವೆ. |
01:38 | ಏಕೆಂದರೆ ಪ್ರೊಟೆಕ್ಟೆಡ್ ವೇರಿಯಬಲ್ ಗಳು ಡಿರೈವ್ಡ್ ಕ್ಲಾಸ್ನಿಂದ ಆಕ್ಸೆಸ್ ಮಾಡಲ್ಪಡುತ್ತವೆ. |
01:44 | ಈಗ, ಇಲ್ಲಿ ನಾವು grade ಎನ್ನುವ ಡಿರೈವ್ಡ್ ಕ್ಲಾಸ್ ಅನ್ನು ಹೊಂದಿದ್ದೇವೆ. |
01:50 | ಇದು student ಮತ್ತು exam_inherit ಎನ್ನುವ ಬೇಸ್ ಕ್ಲಾಸ್ ಗಳನ್ನು ಇನ್ಹೆರಿಟ್ ಮಾಡುತ್ತದೆ. |
01:56 | ಇದರಲ್ಲಿ ಪ್ರೈವೇಟ್ ಎಂದು ಡಿಕ್ಲೇರ್ ಮಾಡಿದ avg ಎನ್ನುವ ಇಂಟೀಜರ್ ವೇರಿಯಬಲ್ ಅನ್ನು ನಾವು ಪಡೆದಿದ್ದೇವೆ. |
02:02 | ಆಮೇಲೆ, |
02:04 | input(), |
02:05 | display(), |
02:06 | average(), |
02:07 | input_exam() |
02:08 | ಮತ್ತು display_exam() ಎನ್ನುವ ಪಬ್ಲಿಕ್ ಫಂಕ್ಶನ್ ಗಳನ್ನು ಹೊಂದಿದ್ದೇವೆ. |
02:11 | ಇದರಲ್ಲಿ, ಪಬ್ಲಿಕ್ ಎಂದು ಡಿಕ್ಲೇರ್ ಮಾಡಿದ, total ಎನ್ನುವ ಇಂಟೀಜರ್ ವೇರಿಯಬಲ್ ಇರುತ್ತದೆ. |
02:17 | ಆಮೇಲೆ ಸ್ಟೂಡೆಂಟ್ ನ roll_no ಮತ್ತು name ಗಳನ್ನು ಪಡೆಯಲು ನಾವು input ಎನ್ನುವ ಫಂಕ್ಶನ್ ಅನ್ನು ಉಪಯೋಗಿಸುತ್ತೇವೆ. |
02:24 | display ಎನ್ನುವ ಫಂಕ್ಶನ್ ನಲ್ಲಿ ನಾವು ಸ್ಟೂಡೆಂಟ್ ನ roll_no ಮತ್ತು name ಗಳನ್ನು ತೋರಿಸುತ್ತೇವೆ. |
02:28 | ಇಲ್ಲಿ input_exam ಎನ್ನುವ ಫಂಕ್ಶನ್ ಇರುತ್ತದೆ. |
02:31 | ಇದರಲ್ಲಿ ನಾವು ಮೂರು ವಿಷಯಗಳ ಅಂಕಗಳನ್ನು sub1, sub2 and sub3 ಎಂದು ಪಡೆಯುತ್ತೇವೆ. |
02:37 | ಆಮೇಲೆ display_exam ಎನ್ನುವ ಫಂಕ್ಶನ್ ನಲ್ಲಿ ನಾವು ಮೂರು ವಿಷಯಗಳ ಮೊತ್ತವನ್ನು ಕಂಡುಹಿಡಿಯುತ್ತೇವೆ ಮತ್ತು ಇದನ್ನು total ಎಂದು ಪ್ರಿಂಟ್ ಮಾಡುತ್ತೇವೆ. |
02:44 | ಮತ್ತು average ಎನ್ನುವ ಫಂಕ್ಶನ್ ನಲ್ಲಿ ನಾವು ಸರಾಸರಿಯನ್ನು ಕಂಡುಹಿಡಿಯುತ್ತೇವೆ. |
02:48 | ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ. |
02:51 | ಇದರಲ್ಲಿ, grade ಎನ್ನುವ ಕ್ಲಾಸ್ನ ಡಿರೈವ್ಡ್ ಕ್ಲಾಸ್ ಆಗಿರುವ gd ಎನ್ನುವ ಒಬ್ಜೆಕ್ಟ್ ನ್ನು ನಾವು ಕ್ರಿಯೇಟ್ ಮಾಡುತ್ತೇವೆ. |
02:57 | ಆಮೇಲೆ ನಾವು ಮೇಲೆ ಹೇಳಿದ ಎಲ್ಲ ಫಂಕ್ಶನ್ ಗಳನ್ನು ಕಾಲ್ ಮಾಡುತ್ತೇವೆ. |
03:01 | ಇದು ನಮ್ಮ return ಸ್ಟೇಟಮೆಂಟ್ ಆಗಿದೆ. |
03:03 | ಈಗ ನಾವು ಈ ಪ್ರೋಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ. |
03:05 | ನಿಮ್ಮ ಕೀಬೋರ್ಡ್ ಮೇಲಿನ Ctrl, Alt ಮತ್ತು T ಎನ್ನುವ ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ವಿಂಡೋವನ್ನು ಓಪನ್ ಮಾಡಿರಿ. |
03:14 | ಕಂಪೈಲ್ ಮಾಡಲು, g++ ಸ್ಪೇಸ್ multiple ಡಾಟ್ cpp ಸ್ಪೇಸ್ ಹೈಫನ್ o ಸ್ಪೇಸ್ mult ಎಂದು ಟೈಪ್ ಮಾಡಿರಿ. Enter ಅನ್ನು ಒತ್ತಿರಿ. |
03:24 | ./mult (ಡಾಟ್ ಸ್ಲ್ಯಾಷ್ mult) ಎಂದು ಟೈಪ್ ಮಾಡಿರಿ. Enter ಅನ್ನು ಒತ್ತಿರಿ. |
03:29 | ಇಲ್ಲಿ ಇವುಗಳನ್ನು ನಾವು ನೋಡುತ್ತೇವೆ, Enter Roll no.: |
03:32 | ನಾನು 3 ನ್ನು ಎಂಟರ್ ಮಾಡುವೆನು. |
03:34 | Enter Name: |
03:36 | ನಾನು Pratham ಎಂದು ಎಂಟರ್ ಮಾಡುವೆನು. |
03:39 | Enter marks of subject1 |
03:41 | ನಾನು 67 ಎಂದು, |
03:43 | subject2 ರಲ್ಲಿ 78 ಮತ್ತು |
03:46 | subject3 ರಲ್ಲಿ 84 ಎಂದು ಎಂಟರ್ ಮಾಡುವೆನು. |
03:48 | ಔಟ್ಪುಟ್ ಹೀಗೆ ಕಾಣಿಸುತ್ತದೆ: |
03:51 | Roll no is: 3 |
03:52 | Name is: Pratham |
03:53 | Total is: 229 |
03:55 | Average is: 76 |
03:58 | ಇದು ಮಲ್ಟಿಪಲ್ ಇನ್ಹೆರಿಟೆನ್ಸ್ ಎನ್ನುವುದಾಗಿತ್ತು. |
04:00 | ಈಗ ನಾವು ಹೈರಾರ್ಕಿಕಲ್ ಇನ್ಹೆರಿಟೆನ್ಸ್ ಎನ್ನುವುದನ್ನು ನೋಡುವೆವು, |
04:03 | ನಮ್ಮ ಪ್ರೊಗ್ರಾಂಗೆ ಹಿಂದಿರುಗಿರಿ. |
04:05 | ಹೈರಾರ್ಕಿಕಲ್ ಇನ್ಹೆರಿಟೆನ್ಸ್ ಎನ್ನುವುದರಲ್ಲಿ ಅನೇಕ ಡಿರೈವ್ಡ್ ಕ್ಲಾಸ್ ಗಳು ಒಂದೇ ಬೇಸ್ ಕ್ಲಾಸ್ ನಿಂದ ಪಾರಂಪರ್ಯವಾಗಿ ಪಡೆಯುತ್ತವೆ. |
04:12 | ನಮ್ಮ ಫೈಲ್ ನ ಹೆಸರು hierarchical ಡಾಟ್ cpp ಆಗಿದೆ ಎಂಬುದನ್ನು ಗಮನಿಸಿರಿ. |
04:16 | ಈಗ ನಾನು ಕೋಡನ್ನು ವಿವರಿಸುವೆನು. |
04:19 | iostream ಎನ್ನುವುದು ನಮ್ಮ ಹೆಡರ್ ಫೈಲ್ ಆಗಿದೆ. |
04:22 | ಇಲ್ಲಿ ನಾವು std namespace ಎನ್ನುವುದನ್ನು ಉಪಯೋಗಿಸಿದ್ದೇವೆ. |
04:25 | ಆಮೇಲೆ, ನಾವು student ಎನ್ನುವ ಬೇಸ್ ಕ್ಲಾಸ್ಅನ್ನು ಹೊಂದಿದ್ದೇವೆ. |
04:29 | ಇದರಲ್ಲಿ ನಾವು roll_no ಎನ್ನುವ ಇಂಟೀಜರ್ ವೇರಿಯಬಲ್ ಅನ್ನು, |
04:34 | Sub1, sub2, sub3 ಹಾಗೂ total ಎನ್ನುವ ಇಂಟೀಜರ್ ವೇರಿಯಬಲ್ ಗಳನ್ನು. |
04:40 | ಹಾಗೂ name ಎನ್ನುವ ಕ್ಯಾರೆಕ್ಟರ್ ವೇರಿಯಬಲ್ ಅನ್ನು ಪಡೆದಿದ್ದೇವೆ. |
04:43 | ಇವುಗಳನ್ನು ಪ್ರೊಟೆಕ್ಟೆಡ್ ಎಂದು ಡಿಕ್ಲೇರ್ ಮಾಡಲಾಗಿದೆ. |
04:46 | ಇಲ್ಲಿ show ಎನ್ನುವ ಇನ್ನೊಂದು ಕ್ಲಾಸ್ ಅನ್ನು ನಾವು ಪಡೆದಿದ್ದೇವೆ. |
04:49 | ಇದು ಡಿರೈವ್ಡ್ ಕ್ಲಾಸ್ ಆಗಿದೆ. |
04:51 | ಅದು student ಎನ್ನುವ ಕ್ಲಾಸ್ ನ ಗುಣಗಳನ್ನು ಇನ್ಹೆರಿಟ್ ಮಾಡುತ್ತದೆ. |
04:54 | ಇದರಲ್ಲಿ input ಹಾಗೂ display ಎನ್ನುವ ಎರಡು ಫಂಕ್ಶನ್ ಗಳನ್ನು ನಾವು ಪಡೆದಿದ್ದೇವೆ. |
04:59 | ಇವುಗಳು ಪಬ್ಲಿಕ್ ಫಂಕ್ಶನ್ ಗಳೆಂದು ಡಿಕ್ಲೇರ್ ಮಾಡಲ್ಪಟ್ಟಿವೆ. |
05:02 | input ಎನ್ನುವ ಫಂಕ್ಶನ್ ನಲ್ಲಿ ನಾವು ಸ್ಟೂಡೆಂಟ್ ನ ರೋಲ್-ನಂ ಹಾಗೂ ನೇಮ್ ಗಳನ್ನು ಪಡೆಯುತ್ತೇವೆ. |
05:07 | display ಎನ್ನುವ ಫಂಕ್ಶನ್ ನಲ್ಲಿ ನಾವು ಸ್ಟೂಡೆಂಟ್ ನ ರೋಲ್-ನಂ ಹಾಗೂ ನೇಮ್ ಗಳನ್ನು ತೋರಿಸುತ್ತೇವೆ. |
05:11 | ಆಮೇಲೆ, exam ಎನ್ನುವ ಇನ್ನೊಂದು ಡಿರೈವ್ಡ್ ಕ್ಲಾಸ್ ಇಲ್ಲಿದೆ. |
05:15 | ಇದೂ ಸಹ student ಎನ್ನುವ ಕ್ಲಾಸ್ಅನ್ನು ಇನ್ಹೆರಿಟ್ ಮಾಡುತ್ತದೆ. |
05:19 | ಇಲ್ಲಿ exam ಮತ್ತು show ಎನ್ನುವ ಎರಡು ಡಿರೈವ್ಡ್ ಕ್ಲಾಸ್ ಗಳಿರುವುದನ್ನು ನೀವು ನೋಡಬಹುದು |
05:26 | ಎರಡೂ ಕ್ಲಾಸ್ಗಳು student ಎನ್ನುವ ಕ್ಲಾಸ್ಅನ್ನು ಇನ್ಹೆರಿಟ್ ಮಾಡುತ್ತವೆ. |
05:30 | ಪಬ್ಲಿಕ್ ಎಂದು ಡಿಕ್ಲೇರ್ ಮಾಡಲಾಗಿರುವ input_exam ಹಾಗೂ total marks ಎನ್ನುವ ಎರಡು ಫಂಕ್ಶನ್ ಗಳು exam ಎನ್ನುವ ಕ್ಲಾಸ್ ನಲ್ಲಿ ಇರುತ್ತವೆ. |
05:38 | ಇಲ್ಲಿ ನಾವು input_exam ಎನ್ನುವ ಫಂಕ್ಶನ್ ಅನ್ನು ಆಕ್ಸೆಸ್ ಮಾಡುತ್ತೇವೆ. |
05:41 | ಇದು sub1, sub2 ಮತ್ತು sub3, ಈ ಮೂರು ವಿಷಯಗಳ ಮಾರ್ಕ್ಸ್ ಗಳನ್ನು ಪಡೆಯುತ್ತದೆ. |
05:46 | ಆಮೇಲೆ total_marks ಎನ್ನುವ ಫಂಕ್ಶನ್ ಇರುತ್ತದೆ. |
05:49 | ಅದು ಮೂರು ವಿಷಯಗಳ ಮೊತ್ತವನ್ನು ಕಂಡುಹಿಡಿಯುತ್ತದೆ ಮತ್ತು ಇದನ್ನು total ಎಂದು ಪ್ರಿಂಟ್ ಮಾಡುತ್ತದೆ. |
05:53 | ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ. |
05:56 | ಇದರಲ್ಲಿ st, sw ಮತ್ತು em ಎನ್ನುವ ಮೂರು ಕ್ಲಾಸ್ ಗಳ ಒಬ್ಜೆಕ್ಟ್ ಗಳನ್ನು ನಾವು ಕ್ರಿಯೇಟ್ ಮಾಡುತ್ತೇವೆ. |
06:03 | ನಂತರ ಈ ಒಬ್ಜೆಕ್ಟ್ ಗಳನ್ನು ಬಳಸಿಕೊಂಡು ಮೇಲೆ ಹೇಳಿದ ಎಲ್ಲ ಫಂಕ್ಶನ್ ಗಳನ್ನು ನಾವು ಕಾಲ್ ಮಾಡುತ್ತೇವೆ.
sw.input(); em.input_exam(); sw.display(); em.total_marks(); |
06:15 | ಮತ್ತು ಇದು ನಮ್ಮ return ಸ್ಟೇಟಮೆಂಟ್ ಆಗಿದೆ. |
06:17 | ಈಗ ನಾವು ಈ ಪ್ರೋಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ. |
06:19 | ಟರ್ಮಿನಲ್ ಗೆ ಹಿಂದಿರುಗಿರಿ. |
06:21 | ನಾನು ಪ್ರಾಂಪ್ಟ್ಅನ್ನು ಕ್ಲಿಯರ್ ಮಾಡುತ್ತೇನೆ. |
06:24 | ನಾವು ಕಂಪೈಲ್ ಮಾಡೋಣ, g++ space hierarchical dot cpp space hyphen o space hier ಎಂದು ಟೈಪ್ ಮಾಡಿರಿ, |
06:36 | Enter ಅನ್ನು ಒತ್ತಿರಿ. |
06:37 | ./hier (ಡಾಟ್ ಸ್ಲ್ಯಾಷ್ hier) ಎಂದು ಟೈಪ್ ಮಾಡಿರಿ. |
06:41 | Enter ಅನ್ನು ಒತ್ತಿರಿ. |
06:43 | Enter Roll no.: |
06:44 | ನಾನು 4 ನ್ನು ಕೊಡುವೆನು. |
06:46 | Enter Name: |
06:47 | ನಾನು Ashwini ಎಂದು ಕೊಡುವೆನು. |
06:50 | Enter marks of subject1 |
06:52 | ನಾನು 87, |
06:54 | subject2 ರಲ್ಲಿ 67 ಎಂದು ಮತ್ತು subject3 ರಲ್ಲಿ 97 ಎಂದು ಎಂದು ಕೊಡುವೆನು. |
07:00 | ಔಟ್ಪುಟ್ ಹೀಗೆ ಕಾಣಿಸುತ್ತದೆ: |
07:02 | Roll no is: 4 |
07:04 | Name is: Ashwini ಮತ್ತು |
07:06 | Total is : 251 |
07:07 | ಇದು ನಮ್ಮನ್ನು ಈ ಟ್ಯುಟೋರಿಯಲ್ ನ ಕೊನೆಗೆ ತಂದಿರುತ್ತದೆ. |
07:10 | ನಮ್ಮ ಸ್ಲೈಡ್ ಗಳಿಗೆ ಹಿಂದಿರುಗೋಣ. |
07:13 | ನಾವು ಸಂಕ್ಷಿಪ್ತಗೊಳಿಸೋಣ. |
07:14 | ಈ ಟ್ಯುಟೋರಿಯಲ್ ನಲ್ಲಿ, |
07:16 | ಮಲ್ಟಿಪಲ್ ಇನ್ಹೆರಿಟೆನ್ಸ್, |
07:18 | ಹೈರಾರ್ಕಿಕಲ್ ಇನ್ಹೆರಿಟೆನ್ಸ್ ಗಳನ್ನು ನಾವು ಕಲಿತೆವು. |
07:20 | ಒಂದು ಅಸೈನ್ಮೆಂಟ್ ಎಂದು, |
07:21 | area ಮತ್ತು perimeter ಎನ್ನುವ ಕ್ಲಾಸ್ ಗಳನ್ನು ಕ್ರಿಯೇಟ್ ಮಾಡಿರಿ. |
07:25 | ಆಯತಾಕಾರದ ಏರಿಯಾ, ಮತ್ತು ಪೆರಿಮೀಟರ್ ಗಳನ್ನು ಕಂಡುಹಿಡಿಯಿರಿ. |
07:29 | ಕೆಳಗೆ ತೋರಿಸಿದ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿರಿ. http://spoken-tutorial.org/What_is_a_Spoken_Tutorial |
07:32 | ಅದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
07:35 | ನೀವು ಉತ್ತಮವಾದ ಬ್ಯಾಂಡ್ವಿಡ್ತ್ ಅನ್ನು ಹೊಂದಿಲ್ಲದಿದ್ದರೆ, ಡೌನ್ಲೋಡ್ ಮಾಡಿ ನೋಡಬಹುದು. |
07:40 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು |
07:42 | ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
07:45 | ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:49 | ಹೆಚ್ಚಿನ ವಿವರಗಳಿಗೆ ದಯವಿಟ್ಟು ಈ ಈ-ಮೇಲ್ ಗೆ ಬರೆಯಿರಿ. |
07:51 | contact[at] spoken hyphen tutorial dot org |
07:56 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ. |
08:01 | ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT , MHRD, ಭಾರತ ಸರ್ಕಾರದ ಆಧಾರವನ್ನು ಹೊಂದಿದೆ. |
08:07 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ಗಳ ಮೇಲೆ ಲಭ್ಯವಿದೆ. http://spoken-tutorial.org/NMEICT-Intro |
08:11 | ಇದರ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |