Advanced-Cpp/C2/More-On-Inheritance/Kannada

From Script | Spoken-Tutorial
Jump to: navigation, search
Time Narration
00:01 C++ ನಲ್ಲಿಯ Multiple and Hierarchical Inheritance (ಮಲ್ಟಿಪಲ್ ಆಂಡ್ ಹೈರಾರ್ಕಿಕಲ್ ಇನ್ಹೆರಿಟೆನ್ಸ್) ಎನ್ನುವುದರ ಕುರಿತು ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ,
00:09 ಮಲ್ಟಿಪಲ್ ಇನ್ಹೆರಿಟೆನ್ಸ್ ಮತ್ತು
00:11 ಹೈರಾರ್ಕಿಕಲ್ ಇನ್ಹೆರಿಟೆನ್ಸ್ ಗಳನ್ನು ನಾವು ಕಲಿಯುವೆವು,
00:13 ನಾವು ಇದನ್ನು ಉದಾಹರಣೆಗಳ ಸಹಾಯದಿಂದ ಮಾಡುವೆವು.
00:17 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು,
00:20 Ubuntu ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು,
00:24 g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ.
00:29 ಮಲ್ಟಿಪಲ್ ಇನ್ಹೆರಿಟೆನ್ಸ್ ಎನ್ನುವುದರಲ್ಲಿ ಡಿರೈವ್ಡ್ ಕ್ಲಾಸ್, ಒಂದಕ್ಕಿಂತ ಹೆಚ್ಚು ಬೇಸ್ ಕ್ಲಾಸ್ ಗಳಿಂದ ಪಾರಂಪರ್ಯವಾಗಿ ಪಡೆಯುತ್ತದೆ.
00:36 ಈಗ, ಮಲ್ಟಿಪಲ್ ಇನ್ಹೆರಿಟೆನ್ಸ್ ಎನ್ನುವುದರ ಒಂದು ಉದಾಹರಣೆಯನ್ನು ನಾವು ನೋಡೋಣ.
00:40 ನಾನು ಕೋಡನ್ನು ಈಗಾಗಲೇ ಎಡಿಟರ್ನಲ್ಲಿ ಟೈಪ್ ಮಾಡಿದ್ದೇನೆ.
00:42 ನಾನು ಇದನ್ನು ಓಪನ್ ಮಾಡುವೆನು.
00:45 ನಮ್ಮ ಫೈಲ್ ನ ಹೆಸರು multiple.cpp ಆಗಿದೆ ಎಂಬುದನ್ನು ಗಮನಿಸಿರಿ.
00:49 ಈ ಪ್ರೊಗ್ರಾಂನಲ್ಲಿ ನಾವು ವಿದ್ಯಾರ್ಥಿಯ ಹೆಸರು, ರೋಲ್-ನಂ, ಮಾರ್ಕ್ಸ್ ಮತ್ತು ಎವರೇಜ್, ಇವುಗಳನ್ನು ತೋರಿಸುವೆವು.
00:56 ನಾನು ಕೋಡನ್ನು ವಿವರಿಸುತ್ತೇನೆ.
00:59 iostream ಎನ್ನುವುದು ನಮ್ಮ ಹೆಡರ್ ಫೈಲ್ ಆಗಿದೆ.
01:01 ಇದು std namespace,
01:05 ಆಮೇಲೆ ನಾವು student ಎನ್ನುವ ಕ್ಲಾಸ್ಅನ್ನು ಹೊಂದಿದ್ದೇವೆ.
01:07 ಇದು ಬೇಸ್ ಕ್ಲಾಸ್ ಆಗಿದೆ.
01:09 ಇದರಲ್ಲಿ ನಾವು roll_no ಎನ್ನುವ ಇಂಟೀಜರ್ ವೇರಿಯಬಲ್ ಹಾಗೂ name ಎನ್ನುವ ಕ್ಯಾರೆಕ್ಟರ್ ವೇರಿಯಬಲ್ ಅನ್ನು ಹೊಂದಿದ್ದೇವೆ.
01:16 ಇವುಗಳು ಪ್ರೊಟೆಕ್ಟೆಡ್ ಎಂದು ಡಿಕ್ಲೇರ್ ಮಾಡಲ್ಪಟ್ಟಿವೆ.
01:19 ಆಮೇಲೆ ನಾವು exam_inherit ಎನ್ನುವ ಇನ್ನೊಂದು ಕ್ಲಾಸ್ ಅನ್ನು ಹೊಂದಿದ್ದೇವೆ.
01:24 ಇದೂ ಸಹ ಒಂದು ಬೇಸ್ ಕ್ಲಾಸ್ ಆಗಿದೆ.
01:26 ಹೀಗಾಗಿ ಇಲ್ಲಿ ನಾವು student ಮತ್ತು exam_inherit ಎನ್ನುವ ಎರಡು ಬೇಸ್ ಕ್ಲಾಸ್ ಗಳನ್ನು ಹೊಂದಿದ್ದೇವೆ.
01:32 ಇದರಲ್ಲಿ ನಾವು sub1, sub2, sub3 ಎನ್ನುವ ಮೂರು ಪ್ರೊಟೆಕ್ಟೆಡ್ ವೇರಿಯಬಲ್ ಗಳನ್ನು ಹೊಂದಿದ್ದೇವೆ.
01:38 ಏಕೆಂದರೆ ಪ್ರೊಟೆಕ್ಟೆಡ್ ವೇರಿಯಬಲ್ ಗಳು ಡಿರೈವ್ಡ್ ಕ್ಲಾಸ್ನಿಂದ ಆಕ್ಸೆಸ್ ಮಾಡಲ್ಪಡುತ್ತವೆ.
01:44 ಈಗ, ಇಲ್ಲಿ ನಾವು grade ಎನ್ನುವ ಡಿರೈವ್ಡ್ ಕ್ಲಾಸ್ ಅನ್ನು ಹೊಂದಿದ್ದೇವೆ.
01:50 ಇದು student ಮತ್ತು exam_inherit ಎನ್ನುವ ಬೇಸ್ ಕ್ಲಾಸ್ ಗಳನ್ನು ಇನ್‌ಹೆರಿಟ್ ಮಾಡುತ್ತದೆ.
01:56 ಇದರಲ್ಲಿ ಪ್ರೈವೇಟ್ ಎಂದು ಡಿಕ್ಲೇರ್ ಮಾಡಿದ avg ಎನ್ನುವ ಇಂಟೀಜರ್ ವೇರಿಯಬಲ್ ಅನ್ನು ನಾವು ಪಡೆದಿದ್ದೇವೆ.
02:02 ಆಮೇಲೆ,
02:04 input(),display()
02:06 average(), input_exam()
02:08 ಮತ್ತು display_exam() ಎನ್ನುವ ಪಬ್ಲಿಕ್ ಫಂಕ್ಶನ್ ಗಳನ್ನು ಹೊಂದಿದ್ದೇವೆ.
02:11 ಇದರಲ್ಲಿ, ಪಬ್ಲಿಕ್ ಎಂದು ಡಿಕ್ಲೇರ್ ಮಾಡಿದ, total ಎನ್ನುವ ಇಂಟೀಜರ್ ವೇರಿಯಬಲ್ ಇರುತ್ತದೆ.
02:17 ಆಮೇಲೆ ಸ್ಟೂಡೆಂಟ್ ನ roll_no ಮತ್ತು name ಗಳನ್ನು ಪಡೆಯಲು ನಾವು input ಎನ್ನುವ ಫಂಕ್ಶನ್ ಅನ್ನು ಉಪಯೋಗಿಸುತ್ತೇವೆ.
02:24 display ಎನ್ನುವ ಫಂಕ್ಶನ್ ನಲ್ಲಿ ನಾವು ಸ್ಟೂಡೆಂಟ್ ನ roll_no ಮತ್ತು name ಗಳನ್ನು ತೋರಿಸುತ್ತೇವೆ.
02:28 ಇಲ್ಲಿ input_exam ಎನ್ನುವ ಫಂಕ್ಶನ್ ಇರುತ್ತದೆ.
02:31 ಇದರಲ್ಲಿ ನಾವು ಮೂರು ವಿಷಯಗಳ ಅಂಕಗಳನ್ನು sub1, sub2 and sub3 ಎಂದು ಪಡೆಯುತ್ತೇವೆ.
02:37 ಆಮೇಲೆ display_exam ಎನ್ನುವ ಫಂಕ್ಶನ್ ನಲ್ಲಿ ನಾವು ಮೂರು ವಿಷಯಗಳ ಮೊತ್ತವನ್ನು ಕಂಡುಹಿಡಿಯುತ್ತೇವೆ ಮತ್ತು ಇದನ್ನು total ಎಂದು ಪ್ರಿಂಟ್ ಮಾಡುತ್ತೇವೆ.
02:44 ಮತ್ತು average ಎನ್ನುವ ಫಂಕ್ಶನ್ ನಲ್ಲಿ ನಾವು ಸರಾಸರಿಯನ್ನು ಕಂಡುಹಿಡಿಯುತ್ತೇವೆ.
02:48 ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ.
02:51 ಇದರಲ್ಲಿ, grade ಎನ್ನುವ ಕ್ಲಾಸ್ನ ಡಿರೈವ್ಡ್ ಕ್ಲಾಸ್ ಆಗಿರುವ gd ಎನ್ನುವ ಒಬ್ಜೆಕ್ಟ್ ನ್ನು ನಾವು ಕ್ರಿಯೇಟ್ ಮಾಡುತ್ತೇವೆ.
02:57 ಆಮೇಲೆ ನಾವು ಮೇಲೆ ಹೇಳಿದ ಎಲ್ಲ ಫಂಕ್ಶನ್ ಗಳನ್ನು ಕಾಲ್ ಮಾಡುತ್ತೇವೆ.
03:01 ಇದು ನಮ್ಮ return ಸ್ಟೇಟಮೆಂಟ್ ಆಗಿದೆ.
03:03 ಈಗ ನಾವು ಈ ಪ್ರೋಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ.
03:05 ನಿಮ್ಮ ಕೀಬೋರ್ಡ್ ಮೇಲಿನ Ctrl, Alt ಮತ್ತು T ಎನ್ನುವ ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ವಿಂಡೋವನ್ನು ಓಪನ್ ಮಾಡಿರಿ.
03:14 ಕಂಪೈಲ್ ಮಾಡಲು, g++ ಸ್ಪೇಸ್ multiple ಡಾಟ್ cpp ಸ್ಪೇಸ್ ಹೈಫನ್ o ಸ್ಪೇಸ್ mult ಎಂದು ಟೈಪ್ ಮಾಡಿರಿ. Enter ಅನ್ನು ಒತ್ತಿರಿ.
03:24 ./mult (ಡಾಟ್ ಸ್ಲ್ಯಾಷ್ mult) ಎಂದು ಟೈಪ್ ಮಾಡಿರಿ. Enter ಅನ್ನು ಒತ್ತಿರಿ.
03:29 ಇಲ್ಲಿ ಇವುಗಳನ್ನು ನಾವು ನೋಡುತ್ತೇವೆ, Enter Roll no.:
03:32 ನಾನು 3 ನ್ನು ಎಂಟರ್ ಮಾಡುವೆನು.
03:34 Enter Name:
03:36 ನಾನು Pratham ಎಂದು ಎಂಟರ್ ಮಾಡುವೆನು.
03:39 Enter marks of subject1
03:41 ನಾನು 67 ಎಂದು,
03:43 subject2 ರಲ್ಲಿ 78 ಮತ್ತು
03:46 subject3 ರಲ್ಲಿ 84 ಎಂದು ಎಂಟರ್ ಮಾಡುವೆನು.
03:48 ಔಟ್ಪುಟ್ ಹೀಗೆ ಕಾಣಿಸುತ್ತದೆ:
03:51 Roll no is: 3. Name is: Pratham
03:53 Total is: 229
03:55 Average is: 76
03:58 ಇದು ಮಲ್ಟಿಪಲ್ ಇನ್ಹೆರಿಟೆನ್ಸ್ ಎನ್ನುವುದಾಗಿತ್ತು.
04:00 ಈಗ ನಾವು ಹೈರಾರ್ಕಿಕಲ್ ಇನ್ಹೆರಿಟೆನ್ಸ್ ಎನ್ನುವುದನ್ನು ನೋಡುವೆವು,
04:03 ನಮ್ಮ ಪ್ರೊಗ್ರಾಂಗೆ ಹಿಂದಿರುಗಿರಿ.
04:05 ಹೈರಾರ್ಕಿಕಲ್ ಇನ್ಹೆರಿಟೆನ್ಸ್ ಎನ್ನುವುದರಲ್ಲಿ ಅನೇಕ ಡಿರೈವ್ಡ್ ಕ್ಲಾಸ್ ಗಳು ಒಂದೇ ಬೇಸ್ ಕ್ಲಾಸ್ ನಿಂದ ಪಾರಂಪರ್ಯವಾಗಿ ಪಡೆಯುತ್ತವೆ.
04:12 ನಮ್ಮ ಫೈಲ್ ನ ಹೆಸರು hierarchical ಡಾಟ್ cpp ಆಗಿದೆ ಎಂಬುದನ್ನು ಗಮನಿಸಿರಿ.
04:16 ಈಗ ನಾನು ಕೋಡನ್ನು ವಿವರಿಸುವೆನು.
04:19 iostream ಎನ್ನುವುದು ನಮ್ಮ ಹೆಡರ್ ಫೈಲ್ ಆಗಿದೆ.
04:22 ಇಲ್ಲಿ ನಾವು std namespace ಎನ್ನುವುದನ್ನು ಉಪಯೋಗಿಸಿದ್ದೇವೆ.
04:25 ಆಮೇಲೆ, ನಾವು student ಎನ್ನುವ ಬೇಸ್ ಕ್ಲಾಸ್ಅನ್ನು ಹೊಂದಿದ್ದೇವೆ.
04:29 ಇದರಲ್ಲಿ ನಾವು roll_no ಎನ್ನುವ ಇಂಟೀಜರ್ ವೇರಿಯಬಲ್ ಅನ್ನು,
04:34 Sub1, sub2, sub3 ಹಾಗೂ total ಎನ್ನುವ ಇಂಟೀಜರ್ ವೇರಿಯಬಲ್ ಗಳನ್ನು.
04:40 ಹಾಗೂ name ಎನ್ನುವ ಕ್ಯಾರೆಕ್ಟರ್ ವೇರಿಯಬಲ್ ಅನ್ನು ಪಡೆದಿದ್ದೇವೆ.
04:43 ಇವುಗಳನ್ನು ಪ್ರೊಟೆಕ್ಟೆಡ್ ಎಂದು ಡಿಕ್ಲೇರ್ ಮಾಡಲಾಗಿದೆ.
04:46 ಇಲ್ಲಿ show ಎನ್ನುವ ಇನ್ನೊಂದು ಕ್ಲಾಸ್ ಅನ್ನು ನಾವು ಪಡೆದಿದ್ದೇವೆ.
04:49 ಇದು ಡಿರೈವ್ಡ್ ಕ್ಲಾಸ್ ಆಗಿದೆ.
04:51 ಅದು student ಎನ್ನುವ ಕ್ಲಾಸ್ ನ ಗುಣಗಳನ್ನು ಇನ್‌ಹೆರಿಟ್ ಮಾಡುತ್ತದೆ.
04:54 ಇದರಲ್ಲಿ input ಹಾಗೂ display ಎನ್ನುವ ಎರಡು ಫಂಕ್ಶನ್ ಗಳನ್ನು ನಾವು ಪಡೆದಿದ್ದೇವೆ.
04:59 ಇವುಗಳು ಪಬ್ಲಿಕ್ ಫಂಕ್ಶನ್ ಗಳೆಂದು ಡಿಕ್ಲೇರ್ ಮಾಡಲ್ಪಟ್ಟಿವೆ.
05:02 input ಎನ್ನುವ ಫಂಕ್ಶನ್ ನಲ್ಲಿ ನಾವು ಸ್ಟೂಡೆಂಟ್ ನ ರೋಲ್-ನಂ ಹಾಗೂ ನೇಮ್ ಗಳನ್ನು ಪಡೆಯುತ್ತೇವೆ.
05:07 display ಎನ್ನುವ ಫಂಕ್ಶನ್ ನಲ್ಲಿ ನಾವು ಸ್ಟೂಡೆಂಟ್ ನ ರೋಲ್-ನಂ ಹಾಗೂ ನೇಮ್ ಗಳನ್ನು ತೋರಿಸುತ್ತೇವೆ.
05:11 ಆಮೇಲೆ, exam ಎನ್ನುವ ಇನ್ನೊಂದು ಡಿರೈವ್ಡ್ ಕ್ಲಾಸ್ ಇಲ್ಲಿದೆ.
05:15 ಇದೂ ಸಹ student ಎನ್ನುವ ಕ್ಲಾಸ್ಅನ್ನು ಇನ್‌ಹೆರಿಟ್ ಮಾಡುತ್ತದೆ.
05:19 ಇಲ್ಲಿ exam ಮತ್ತು show ಎನ್ನುವ ಎರಡು ಡಿರೈವ್ಡ್ ಕ್ಲಾಸ್ ಗಳಿರುವುದನ್ನು ನೀವು ನೋಡಬಹುದು
05:26 ಎರಡೂ ಕ್ಲಾಸ್ಗಳು student ಎನ್ನುವ ಕ್ಲಾಸ್ಅನ್ನು ಇನ್‌ಹೆರಿಟ್ ಮಾಡುತ್ತವೆ.
05:30 ಪಬ್ಲಿಕ್ ಎಂದು ಡಿಕ್ಲೇರ್ ಮಾಡಲಾಗಿರುವ input_exam ಹಾಗೂ total marks ಎನ್ನುವ ಎರಡು ಫಂಕ್ಶನ್ ಗಳು exam ಎನ್ನುವ ಕ್ಲಾಸ್ ನಲ್ಲಿ ಇರುತ್ತವೆ.
05:38 ಇಲ್ಲಿ ನಾವು input_exam ಎನ್ನುವ ಫಂಕ್ಶನ್ ಅನ್ನು ಆಕ್ಸೆಸ್ ಮಾಡುತ್ತೇವೆ.
05:41 ಇದು sub1, sub2 ಮತ್ತು sub3, ಈ ಮೂರು ವಿಷಯಗಳ ಮಾರ್ಕ್ಸ್ ಗಳನ್ನು ಪಡೆಯುತ್ತದೆ.
05:46 ಆಮೇಲೆ total_marks ಎನ್ನುವ ಫಂಕ್ಶನ್ ಇರುತ್ತದೆ.
05:49 ಅದು ಮೂರು ವಿಷಯಗಳ ಮೊತ್ತವನ್ನು ಕಂಡುಹಿಡಿಯುತ್ತದೆ ಮತ್ತು ಇದನ್ನು total ಎಂದು ಪ್ರಿಂಟ್ ಮಾಡುತ್ತದೆ.
05:53 ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ.
05:56 ಇದರಲ್ಲಿ st, sw ಮತ್ತು em ಎನ್ನುವ ಮೂರು ಕ್ಲಾಸ್ ಗಳ ಒಬ್ಜೆಕ್ಟ್ ಗಳನ್ನು ನಾವು ಕ್ರಿಯೇಟ್ ಮಾಡುತ್ತೇವೆ.
06:03 ನಂತರ ಈ ಒಬ್ಜೆಕ್ಟ್ ಗಳನ್ನು ಬಳಸಿಕೊಂಡು ಮೇಲೆ ಹೇಳಿದ ಎಲ್ಲ ಫಂಕ್ಶನ್ ಗಳನ್ನು ನಾವು ಕಾಲ್ ಮಾಡುತ್ತೇವೆ.

sw.input(); em.input_exam(); sw.display(); em.total_marks();

06:15 ಮತ್ತು ಇದು ನಮ್ಮ return ಸ್ಟೇಟಮೆಂಟ್ ಆಗಿದೆ.
06:17 ಈಗ ನಾವು ಈ ಪ್ರೋಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ.
06:19 ಟರ್ಮಿನಲ್ ಗೆ ಹಿಂದಿರುಗಿರಿ.
06:21 ನಾನು ಪ್ರಾಂಪ್ಟ್ಅನ್ನು ಕ್ಲಿಯರ್ ಮಾಡುತ್ತೇನೆ.
06:24 ನಾವು ಕಂಪೈಲ್ ಮಾಡೋಣ, g++ space hierarchical dot cpp space hyphen o space hier ಎಂದು ಟೈಪ್ ಮಾಡಿರಿ,
06:36 Enter ಅನ್ನು ಒತ್ತಿರಿ. ./hier (ಡಾಟ್ ಸ್ಲ್ಯಾಷ್ hier) ಎಂದು ಟೈಪ್ ಮಾಡಿರಿ.
06:41 Enter ಅನ್ನು ಒತ್ತಿರಿ.
06:43 Enter Roll no.: ನಾನು 4 ನ್ನು ಕೊಡುವೆನು.
06:46 Enter Name: ನಾನು Ashwini ಎಂದು ಕೊಡುವೆನು.
06:50 Enter marks of subject1
06:52 ನಾನು 87,
06:54 subject2 ರಲ್ಲಿ 67 ಎಂದು ಮತ್ತು subject3 ರಲ್ಲಿ 97 ಎಂದು ಎಂದು ಕೊಡುವೆನು.
07:00 ಔಟ್ಪುಟ್ ಹೀಗೆ ಕಾಣಿಸುತ್ತದೆ:
07:02 Roll no is: 4
07:04 Name is: Ashwini ಮತ್ತು
07:06 Total is : 251. ಇದು ನಮ್ಮನ್ನು ಈ ಟ್ಯುಟೋರಿಯಲ್ ನ ಕೊನೆಗೆ ತಂದಿರುತ್ತದೆ.
07:10 ನಮ್ಮ ಸ್ಲೈಡ್ ಗಳಿಗೆ ಹಿಂದಿರುಗೋಣ.
07:13 ನಾವು ಸಂಕ್ಷಿಪ್ತಗೊಳಿಸೋಣ. ಈ ಟ್ಯುಟೋರಿಯಲ್ ನಲ್ಲಿ,
07:16 ಮಲ್ಟಿಪಲ್ ಇನ್ಹೆರಿಟೆನ್ಸ್,
07:18 ಹೈರಾರ್ಕಿಕಲ್ ಇನ್ಹೆರಿಟೆನ್ಸ್ ಗಳನ್ನು ನಾವು ಕಲಿತೆವು.
07:20 ಒಂದು ಅಸೈನ್ಮೆಂಟ್ ಎಂದು, area ಮತ್ತು perimeter ಎನ್ನುವ ಕ್ಲಾಸ್ ಗಳನ್ನು ಕ್ರಿಯೇಟ್ ಮಾಡಿರಿ.
07:25 ಆಯತಾಕಾರದ ಏರಿಯಾ, ಮತ್ತು ಪೆರಿಮೀಟರ್ ಗಳನ್ನು ಕಂಡುಹಿಡಿಯಿರಿ.
07:29 ಕೆಳಗೆ ತೋರಿಸಿದ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿರಿ. http://spoken-tutorial.org/What_is_a_Spoken_Tutorial
07:32 ಅದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
07:35 ನೀವು ಉತ್ತಮವಾದ ಬ್ಯಾಂಡ್ವಿಡ್ತ್ ಅನ್ನು ಹೊಂದಿಲ್ಲದಿದ್ದರೆ, ಡೌನ್ಲೋಡ್ ಮಾಡಿ ನೋಡಬಹುದು.
07:40 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು
07:42 ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
07:45 ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:49 ಹೆಚ್ಚಿನ ವಿವರಗಳಿಗೆ ದಯವಿಟ್ಟು ಈ ಈ-ಮೇಲ್ ಗೆ ಬರೆಯಿರಿ.
07:51 contact[at] spoken hyphen tutorial dot org
07:56 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ.
08:01 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT , MHRD, ಭಾರತ ಸರ್ಕಾರದ ಆಧಾರವನ್ನು ಹೊಂದಿದೆ.
08:07 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ಗಳ ಮೇಲೆ ಲಭ್ಯವಿದೆ. http://spoken-tutorial.org/NMEICT-Intro
08:11 ಇದರ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal