Java/C2/Instance-fields/Kannada

From Script | Spoken-Tutorial
Revision as of 19:04, 2 March 2015 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:02 ಜಾವಾದಲ್ಲಿ ಇನ್ಸ್-ಟೆನ್ಸ್ ಫೀಲ್ಡ್ಸ್ ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,
00:08 ಇನ್ಸ್-ಟೆನ್ಸ್ ಫೀಲ್ಡ್ಸ್ ನ ಕುರಿತು
00:10 ಕ್ಲಾಸ್ ನ ಇನ್ಸ್-ಟೆನ್ಸ್ ಫೀಲ್ಡ್ಸ್ ಅನ್ನು ಆಕ್ಸೆಸ್ ಮಾಡಲು,
00:13 ಇನ್ಸ್-ಟೆನ್ಸ್ ಫೀಲ್ಡ್ಸ್ ನ ಮಾಡಿಫಯರ್ ಗಳ ಕುರಿತು
00:15 ಮತ್ತು ಇನ್ಸ್-ಟೆನ್ಸ್ ಫೀಲ್ಡ್ಸ್ ಅನ್ನು ಯಾಕೆ ಹಾಗೆಂದು ಕರೆಯುತ್ತಾರೆ ಎನ್ನುವುದರ ಕುರಿತು ಕಲಿಯುತ್ತೇವೆ.
00:18 ಇಲ್ಲಿ ನಾವು
00:20 * Ubuntu version 11.10 OS ( ಉಬಂಟು ಓಪರೇಟಿಂಗ್ ಸಿಸ್ಟಮ್ ನ ಆವೃತ್ತಿ ೧೧.೧೦)
00:22 * Java Development kit 1.6 (ಜಾವಾ ಡೆವೆಲೊಪ್ಮೆಂ ಟ್ ಕಿಟ್ ೧.೬) ಹಾಗೂ
00:24 * Eclipse 3.7.0 ಮತ್ತು (ಎಕ್ಲಿಪ್ಸ್ ೩.೭.೦) ಗಳನ್ನು ಉಪಯೋಗಿಸುತ್ತೇವೆ.
00:27 ಈ ಟ್ಯುಟೋರಿಯಲ್ ಅನ್ನು ಕಲಿಯಲು
00:30 ಎಕ್ಲಿಪ್ಸ್ ನಲ್ಲಿ ಜಾವಾ ಕ್ಲಾಸ್ ಅನ್ನು ರಚಿಸಲು ತಿಳಿದಿರಬೇಕು.
00:33 ಮತ್ತು ಕ್ಲಾಸ್ ಗೆ ಒಬ್ಜೆಕ್ಟ್ ಅನ್ನು ರಚನೆ ಮಾಡಲು ಸಹ ತಿಳಿದಿರಬೇಕು.
00:38 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಈ ಜಾಲತಾಣವನ್ನು ಭೇಟಿ ಮಾಡಿ.

spoken-tutorial.org.

00:43 ನಾವು, ಒಬ್ಜೆಕ್ಟ್ ಗಳು ಅವುಗಳ ಸ್ಥಿತಿಗಳನ್ನು ಫೀಲ್ಡ್ಸ್ ಗಳಲ್ಲಿ ಸ್ಟೋರ್ ಮಾಡುತ್ತವೆ ಎಂದು ತಿಳಿದಿದ್ದೇವೆ.
00:48 ಈ ಫೀಲ್ಡ್ ಗಳನ್ನು static ಕೀವರ್ಡ್ ಉಪಯೋಗಿಸದೇ ಡಿಕ್ಲೇರ್ ಮಾಡುತ್ತೇವೆ.
00:51 ಸ್ಟ್ಯಾಟಿಕ್ ಕೀವರ್ಡ್ ನ ಕುರಿತು ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ.
00:55 ನಾನ್ ಸ್ಟ್ಯಾಟಿಕ್ ಫೀಲ್ಡ್ ಗಳನ್ನು ಇನ್ಸ್-ಟೆನ್ಸ್ ವೇರಿಯೇಬಲ್ ಅಥವಾ ಇನ್ಸ್-ಟೆನ್ಸ್ ಫೀಲ್ಡ್ ಎಂದು ಕೂಡ ಕರೆಯುತ್ತಾರೆ.
01:01 ನಾವು ಈಗ ಮೊದಲೇ ರಚಿಸಿದ Student ಕ್ಲಾಸ್ ಗೆ ಹೋಗೋಣ.
01:09 roll_no ಮತ್ತು name ಗಳು ಈ ಕ್ಲಾಸ್ ನ ಇನ್ಸ್-ಟೆನ್ಸ್ ಫೀಲ್ಡ್ ಗಳು
01:15 ಈಗ ಈ ಫೀಲ್ಡ್ ಗಳನ್ನು ಹೇಗೆ ಆಕ್ಸೆಸ್ ಮಾಡುವುದು ಎಂದು ಕಲಿಯೋಣ.
01:18 ಅದಕ್ಕಾಗಿ ನಾವು ಮೊದಲೇ ರಚನೆ ಮಾಡಿದ TestStudent ಕ್ಲಾಸ್ ಅನ್ನು ತೆರೆಯೋಣ.
01:27 ಎರಡನೇ ಒಬ್ಜೆಕ್ಟ್ ರಚನೆ ಮಾಡುವ ಹೇಳಿಕೆಯನ್ನು ಅಳಿಸೋಣ.
01:33 println ಹೇಳಿಕೆಯನ್ನೂ ಅಳಿಸೋಣ.
01:41 ಈಗ ನಾವು student ಕ್ಲಾಸ್ ನ roll_no ಮತ್ತು name ಫೀಲ್ಡ್ ಗಳನ್ನು stud1 ಮತ್ತು ಡಾಟ್ ಆಪರೇಟರ್ ಗಳನ್ನು ಉಪಯೋಗಿಸಿ ಆಕ್ಸೆಸ್ ಮಾಡೋಣ.
01:49 System ಡಾಟ್ out ಡಾಟ್println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The roll number is ಎಂದು ಟೈಪ್ ಮಾಡಿ ನಂತರ ಪ್ಲಸ್ stud1 ಡಾಟ್ ಕೊಟ್ಟಿರುವ ಆಯ್ಕೆಗಳಲ್ಲಿ roll_no ಆಯ್ಕೆಮಾಡಿಕೊಂಡು Enter ಒತ್ತಿ ಸೆಮಿಕೋಲನ್ ಹಾಕಿ.
02:15 ಮುಂದಿನ ಸಾಲಿನಲ್ಲಿ System ಡಾಟ್ out ಡಾಟ್println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The name is ಎಂದು ಟೈಪ್ ಮಾಡಿ ನಂತರ ಪ್ಲಸ್ stud1ಡಾಟ್ ಕೊಟ್ಟಿರುವ ಆಯ್ಕೆಗಳಲ್ಲಿ name ಆಯ್ಕೆಮಾಡಿಕೊಂಡು Enter ಒತ್ತಿ ಸೆಮಿಕೋಲನ್ ಹಾಕಿ.
02:39 TestStudent.java ಫೈಲ್ ಅನ್ನು ಸೇವ್ ಮಾಡಿ ರನ್ ಮಾಡಲು Ctrl S ಮತ್ತು Ctrl F11 ಅನ್ನು ಒತ್ತಿರಿ.
02:48 ನಾವು ಕೆಳಗಿನ ಫಲಿತವನ್ನು ಪಡೆಯುತ್ತೇವೆ..
02:51 The roll number is 0.
02:53 'The name is null.
03:00 ಏಕೆಂದರೆ ನಾವು ವೇರಿಯೇಬಲ್ ಗಳಿಗೆ ಯಾವುದೇ ಬೆಲೆಯನ್ನು ಇನಿಷಿಯಲೈಜ್ ಮಾಡಿಲ್ಲ.
03:05 ಜಾವಾದಲ್ಲಿ ಫೀಲ್ಡ್ ಗಳು ಮನಬಂದ ಬೆಲೆಗಳನ್ನು ತೆಗೆದುಕೊಳ್ಳುವುದಿಲ್ಲ.
03:09 ಒಬ್ಜೆಕ್ಟ್ ಗೆ ಮೆಮೊರಿಯನ್ನು ಹಂಚಿದ ಮೇಲೆ ಫೀಲ್ಡ್ ಗಳು null ಅಥವಾ zero ಗೆ ಇನಿಷಿಯಲೈಜ್ ಆಗುತ್ತದೆ.
03:15 ಈ ಕೆಲಸವು ಕನ್ಸ್-ಟ್ರಕ್ಟರ್ ನಿಂದ ಮಾಡಲ್ಪಡುತ್ತದೆ.
03:18 ನಾವು ಕನ್ಸ್-ಟ್ರಕ್ಟರ್ ಗಳ ಕುರಿತು ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯುತ್ತೇವೆ.
03:21 ಈಗ ನಾವು ಫೀಲ್ಡ್ ಗಳನ್ನು ಇನಿಷಿಯಲೈಜ್ ಮಾಡಿ ಫಲಿತವನ್ನು ನೋಡೋಣ.
03:27 ಹಾಗಾಗಿ int roll_no ಸಮ 50 ಮುಂದಿನ ಸಾಲಿನಲ್ಲಿ string name ಸಮ ಡಬಲ್ ಕೋಟ್ಸ್ ನಲ್ಲಿ Raju ಎಂದು ಟೈಪ್ ಮಾಡಿ.
03:42 ಫೈಲ್ ಅನ್ನು ಸೇವ್ ಮಾಡಿ ರನ್ ಮಾಡಲು Ctrl S ಮತ್ತು Ctrl F11 ಅನ್ನು ಒತ್ತಿರಿ.
03:50 ನಾವು ಅಂದುಕೊಂಡಂತೆ ಫಲಿತವನ್ನು ಪಡೆಯುತ್ತೇವೆ ಅಂದರೆ The roll number is 50.
03:54 The name is Raju.
03:56 ಏಕೆಂದರೆ ನಾವು Student ಕ್ಲಾಸ್ ನಲ್ಲಿ ವೇರಿಯೇಬಲ್ ಗಳನ್ನು ಸ್ಪಷ್ಟವಾಗಿ ಇನಿಷಿಯಲೈಜ್ ಮಾಡಿದ್ದೇವೆ.
04:04 ಇಲ್ಲಿ ನಾವು ಫೀಲ್ಡ್ ಗಳು ಯಾವುದೇ ಮಾಡಿಫಯರ್ ಅಥವಾ ಡಿಫಾಲ್ಟ್ ಮಾಡಿಫಯರ್ ಅನ್ನು ಹೊಂದಿರದಿರುವುದನ್ನು ನೋಡಬಹುದು.
04:10 ಕ್ಲಾಸ್ ಗಳ ರಚನೆಯಲ್ಲಿ ಕಲಿತ ಮಾಡಿಫಯರ್ ಗಳ ಕುರಿತು ನೆನಪಿಸಿಕೊಳ್ಳಿ.
04:14 Student.java ಮತ್ತು TestStudent.java ಗಳು ಒಂದೇ ಪ್ಯಾಕೇಜ್ ನಲ್ಲಿರುವುದರಿಂದ ನಾವು ಫೀಲ್ಡ್ ಗಳನ್ನು ಆಕ್ಸೆಸ್ ಮಾಡಬಹುದು.
04:22 ಅವುಗಳು ಒಂದೇ default package ನಲ್ಲಿರುವುದನ್ನು ನೋಡಬಹುದು
04:30 ಪ್ಯಾಕೇಜ್ ಗಳ ಕುರಿತು ಮುಂದಿನ ಟ್ಯುಟೋರಿಯಲ್ ನಲ್ಲಿ ನೋಡೋಣ.
04:34 ನಾವು ಮಾಡಿಫಯರ್ ಅನ್ನು private ಎಂದು ಬದಲಿಸೋಣ.
04:37 ಫೀಲ್ಡ್ ಗಳ ಡಿಕ್ಲೇರ್ ಗೂ ಮೊದಲು private ಎಂದು ಟೈಪ್ ಮಾಡಿ ಅಂದರೆ private int roll no=50 ಎಂದು ಟೈಪ್ ಮಾಡಿ.
04:48 ಮುಂದಿನ ಸಾಲಿನಲ್ಲಿ private string name = “Raju” ಎಂದು ಟೈಪ್ ಮಾಡಿ.
04:53 Student.java ಫೈಲ್ ಅನ್ನು ಸೇವ್ ಮಾಡಿ.
05:00 TestStudent.java ದಲ್ಲಿ ದೋಷವನ್ನು ನೋಡಬಹುದು.
05:05 ಎರರ್ ಸಿಂಬಲ್ ಮೇಲೆ ಮೌಸ್ ಅನ್ನು ಸರಿಸಿ.
05:08 ಅದು The field Student ಡಾಟ್ roll number is not visible
05:12 ಮತ್ತು The field Student ಡಾಟ್ name is not visible ಎಂಬ ದೋಷಗಳನ್ನು ತೋರಿಸುತ್ತದೆ.
05:16 ಏಕೆಂದರೆ ಪ್ರೈವೇಟ್ ಫೀಲ್ಡ್ ಗಳನ್ನು ಆ ಕ್ಲಾಸ್ ನಲ್ಲಿ ಮಾತ್ರ ಉಪಯೋಗಿಸಬಹುದು.
05:23 Student ಕ್ಲಾಸ್ ನ roll_no ಮತ್ತು name ಫೀಲ್ಡ್ ಗಳನ್ನು ಆಕ್ಸೆಸ್ ಮಾಡಲು ಪ್ರಯತ್ನ ಪಡಬಹುದು.
05:27 ದೋಷವಿಲ್ಲದೇ ಆಕ್ಸೆಸ್ ಮಾಡಬಹುದು ಎಂದು ನೋಡಬಹುದು.
05:32 ಮಾಡಿಫಯರ್ ಅನ್ನು protected ಎಂದು ಬದಲಾಯಿಸಿ.
05:52 ಪ್ರೋಗ್ರಾಮ್ ಅನ್ನು ಸೇವ್ ಮಾಡಿ ರನ್ ಮಾಡಿರಿ.
06:00 ಕನ್ಸೋಲ್ ನಲ್ಲಿ ಈ ಫಲಿತವನ್ನು ನೋಡಬಹುದು - The Roll no is 50 . The name is Raju.
06:07 ಏಕೆಂದರೆ ಪ್ರೊಟೆಕ್ಟೆಡ್ ಫೀಲ್ಡ್ ಗಳನ್ನು ಅದೇ ಪ್ಯಾಕೇಜ್ ನಲ್ಲಿ ಆಕ್ಸೆಸ್ ಮಾಡಬಹುದು.
06:17 ಈಗ ನಾವು ಇನ್ಸ್-ಟೆನ್ಸ್ ಫೀಲ್ಡ್ ಗಳು ಯಾಕೆ ಹಾಗೆ ಕರೆಯಲ್ಪಡುತ್ತವೆ ಎಂದು ನೋಡೋಣ.
06:22 ಇನ್ಸ್-ಟೆನ್ಸ್ ಫೀಲ್ಡ್ ಗಳ ಬೆಲೆಯು ಕ್ಲಾಸ್ ನ ಪ್ರತಿಯೊಂದು ಇನ್ಸ್-ಟೆನ್ಸ್ ಗೂ ಬೇರೆ ಬೇರೆಯಾಗಿರುವುದರಿಂದ ಹಾಗೆ ಕರೆಯಲ್ಪಡುತ್ತವೆ.
06:29 ಅಂದರೆ ಕ್ಲಾಸ್ ನ ಪ್ರತಿಯೊಂದೂ ಒಬ್ಜೆಕ್ಟ್ ಕೂಡ ಬೇರೆ ಬೇರೆ ಬೆಲೆಯನ್ನು ಹೊಂದಿರುತ್ತದೆ.
06:34 TestStudent ಕ್ಲಾಸ್ ಗೆ ಹೋಗೋಣ.
06:43 ಇಲ್ಲಿ ನಾವು Student ಕ್ಲಾಸ್ ನ ಇನ್ನೊಂದು ಒಬ್ಜೆಕ್ಟ್ ಅನ್ನು ರಚನೆ ಮಾಡೋಣ.
06:50 ಅದಕ್ಕಾಗಿ ಮುಂದಿನ ಸಾಲಿನಲ್ಲಿ Student ಸ್ಪೇಸ್ stud2 ಸಮ new ಸ್ಪೇಸ್ Student ಎಂದು ಟೈಪ್ ಮಾಡಿ ಬ್ರ್ಯಾಕೆಟ್ ಅನ್ನು ತೆರೆದು ಮುಚ್ಚಿ ಸೆಮಿಕೋಲನ್ ಹಾಕಿ.
07:06 ಈಗ ನಾವು ಎರಡೂ ಒಬ್ಜೆಕ್ಟ್ ಗಳನ್ನೂ TestStudent ಕ್ಲಾಸ್ ನಲ್ಲಿ ಇನಿಷಿಯಲೈಜ್ ಮಾಡೋಣ.
07:18 ಮುಂದಿನ ಸಾಲಿನಲ್ಲಿ stud1ಡಾಟ್ roll_no ಅನ್ನು ಆರಿಸಿಕೊಂಡು Enter ಒತ್ತಿ, ಸಮ 20 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
07:32 ಮುಂದಿನ ಸಾಲಿನಲ್ಲಿ stud1ಡಾಟ್ name ಅನ್ನು ಆರಿಸಿಕೊಂಡು Enter ಒತ್ತಿ, ಸಮ ಡಬಲ್ ಕೋಟ್ಸ್ ನಲ್ಲಿ Ramu ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. Enter ಒತ್ತಿ.
07:54 ಹೀಗೆ ನಾವು ಮೊದಲನೇ ಒಬ್ಜೆಕ್ಟ್ ನ ಫೀಲ್ಡ್ ಗಳನ್ನು ಇನಿಷಿಯಲೈಜ್ ಮಾಡಿದ್ದೇವೆ.
07:58 ಈಗ ಎರಡನೇ ಒಬ್ಜೆಕ್ಟ್ ನ ಫೀಲ್ಡ್ ಗಳನ್ನು ಇನಿಷಿಯಲೈಜ್ ಮಾಡೋಣ.
08:02 ಹಾಗಾಗಿ stud2 ಡಾಟ್ roll_no ಅನ್ನು ಆರಿಸಿಕೊಂಡು, ಸಮ 30 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ.
08:15 ಮುಂದಿನ ಸಾಲಿನಲ್ಲಿ stud2 ಡಾಟ್ name ಅನ್ನು ಆರಿಸಿಕೊಂಡು Enter ಒತ್ತಿ, ಸಮ ಡಬಲ್ ಕೋಟ್ಸ್ ನಲ್ಲಿ Shyamu ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. Enter ಒತ್ತಿ.
08:34 ಈಗ println ಹೇಳಿಕೆಯ ನಂತರ Systemಡಾಟ್ outಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿThe roll number is ಎಂದು ಟೈಪ್ ಮಾಡಿ, ಪ್ಲಸ್ stud2 ಡಾಟ್ roll_no ಅನ್ನು ಆರಿಸಿಕೊಂಡು ಸೆಮಿಕೋಲನ್ ಹಾಕಿ.
09:03 Systemಡಾಟ್ outಡಾಟ್ println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The name is ಎಂದು ಟೈಪ್ ಮಾಡಿ, ಪ್ಲಸ್ stud2 ಡಾಟ್ name ಅನ್ನು ಆರಿಸಿಕೊಂಡು ಸೆಮಿಕೋಲನ್ ಹಾಕಿ.
09:28 ಈಗ ಫೈಲ್ ಅನ್ನು ಸೇವ್ ಮಾಡಿ ರನ್ ಮಾಡಲು Ctrl s ಮತ್ತು Ctrl F11 ಕೀಗಳನ್ನು ಒತ್ತಿ.
09:38 ನಾವು ಈಗ The roll_no is 20 .The name is Ramu. The roll_no is 30, The name is Shyamu ಎಂಬ ಫಲಿತವನ್ನು ಕಾಣುತ್ತೇವೆ.
09:47 stud1 ಮತ್ತು stud2 ಗಳು ಎರಡು ಬೇರೆ ಬೇರೆ ಒಬ್ಜೆಕ್ಟ್ ಗಳನ್ನು ಸೂಚಿಸುತ್ತವೆ.
09:52 ಅಂದರೆ ಎರಡೂ ಒಬ್ಜೆಕ್ಟ್ ಗಳೂ ಬೇರೆ ಬೇರೆ ಬೆಲೆಗಳನ್ನು ಹೊಂದಿರುತ್ತವೆ.
09:56 ನಾವು ಅದನ್ನು ಇಲ್ಲಿ ನೋಡಬಹುದು.
09:57 ಮೊದಲನೇ ಒಬ್ಜೆಕ್ಟ್ 20 ಮತ್ತು Ramu ಎಂಬ ಬೆಲೆಗಳನ್ನು ಹೊಂದಿದೆ.
10:02 ಎರಡನೇ ಒಬ್ಜೆಕ್ಟ್ 30 ಮತ್ತು Shyamu ಎಂಬ ಬೆಲೆಗಳನ್ನು ಹೊಂದಿದೆ.
10:09 ಈಗ ಇನ್ನೊಂದು ಒಬ್ಜೆಕ್ಟ್ ಅನ್ನು ರಚಿಸೋಣ.
10:13 ಅದಕ್ಕಾಗಿ Student ಸ್ಪೇಸ್ stud3 ಸಮ new ಸ್ಪೇಸ್ Student ಎಂದು ಟೈಪ್ ಮಾಡಿ. ಬ್ರ್ಯಾಕೆಟ್ ತೆರೆದು ಮುಚ್ಚಿ ಸೆಮಿಕೋಲನ್ ಹಾಕಿ.
10:36 ಈಗ ಮೂರನೇ ಒಬ್ಜೆಕ್ಟ್ ನ ಬೆಲೆಗಳನ್ನು ಪ್ರಿಂಟ್ ಮಾಡೋಣ.
10:44 ಅದಕ್ಕಾಗಿ System ಡಾಟ್out ಡಾಟ್println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The roll_no is ಎಂದು ಟೈಪ್ ಮಾಡಿ, ಪ್ಲಸ್ stud3 ಡಾಟ್ roll_no ಅನ್ನು ಆರಿಸಿಕೊಂಡು ಸೆಮಿಕೋಲನ್ ಹಾಕಿ.
11:09 ಮುಂದಿನ System ಡಾಟ್out ಡಾಟ್println ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿ The name is ಎಂದು ಟೈಪ್ ಮಾಡಿ, ಪ್ಲಸ್ stud3 ಡಾಟ್ name ಅನ್ನು ಆರಿಸಿಕೊಂಡು ಸೆಮಿಕೋಲನ್ ಹಾಕಿ
11:29 ಈಗ ಫೈಲ್ ಅನ್ನು ಸೇವ್ ಮಾಡಿ ರನ್ ಮಾಡಲು Ctrl s ಮತ್ತು Ctrl F11 ಕೀಗಳನ್ನು ಒತ್ತಿ.
11:36 ನಾವು ಮೂರನೇ ಒಬ್ಜೆಕ್ಟ್ 50 ಮತ್ತು Raju ಎಂಬ ಬೆಲೆಗಳನ್ನು ಹೊಂದಿರುವುದನ್ನು ನೋಡಬಹುದು.
11:46 ಏಕೆಂದರೆ ನಾವು Student ಕ್ಲಾಸ್ ನ ಫೀಲ್ಡ್ ಗಳನ್ನು 50 ಮತ್ತು Raju ಎಂದು ಸ್ಪಷ್ಟವಾಗಿ ಇನಿಷಿಯಲೈಜ್ ಮಾಡಿದ್ದೇವೆ.
11:54 ಈ ಫೀಲ್ಡ್ ಗಳನ್ನು ಡಿ-ಇನಿಷಿಯಲೈಜ್ ಮಾಡಿ ಪ್ರಯತ್ನಿಸಿ ಮೂರನೇ ಒಬ್ಜೆಕ್ಟ್ ನ ಫಲಿತವನ್ನು ನೋಡಿ.
12:02 ಈ ಟ್ಯುಟೋರಿಯಲ್ ನಲ್ಲಿ ನಾವು
12:05 ಇನ್ಸ್-ಟೆನ್ಸ್ ಫೀಲ್ಡ್ ನ ಕುರಿತು,
12:07 ಡಾಟ್ ಆಪರೇಟರ್ ಅನ್ನು ಉಪಯೋಗಿಸಿ ಫೀಲ್ಡ್ ಗಳನ್ನು ಆಕ್ಸೆಸ್ ಮಾಡಲು ಕಲಿತಿದ್ದೇವೆ.
12:11 ಸ್ವಂತ ಅಭ್ಯಾಸಕ್ಕಾಗಿ
12:13 ಮೊದಲೇ ರಚಿಸಿದ TestEmployee ಕ್ಲಾಸ್ ಗೆ emp2 ಎಂಬ ಒಬ್ಜೆಕ್ಟ್ ಅನ್ನು ರಚನೆ ಮಾಡಿ.
12:18 ನಂತ ಎರಡು ಒಬ್ಜೆಕ್ಟಗಳಿಗೂ ಡಾಟ್ ಆಪರೇಟರ್ ಅನ್ನು ಉಪಯೋಗಿಸಿ ಬೆಲೆಗಳನ್ನು ಇನಿಷಿಯಲೈಜ್ ಮಾಡಿರಿ.
12:23 ಮೊದಲನೇ ಒಬ್ಜೆಕ್ಟ್ ಗೆ 55 ಮತ್ತು Priya ಎಂಬ ಬೆಲೆಯನ್ನು ನೀಡಿ.
12:27 ಎರಡನೇ ಒಬ್ಜೆಕ್ಟ್ ಗೆ 45 ಮತ್ತು Sandeep ಎಂಬ ಬೆಲೆಯನ್ನು ನೀಡಿ.
12:31 ಎರಡು ಒಬ್ಜೆಕ್ಟ್ ಗಳ ಬೆಲೆಗಳನ್ನು ಫಲಿತದಲ್ಲಿ ತೋರಿಸಿ.
12:34 ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,
12:37 ಮತ್ತು ವೀಡಿಯೋಗಾಗಿ [1] ಅಂತರ್ಜಾಲ ತಾಣವನ್ನು ಭೇಟಿಕೊಡಿ.
12:40 ಇದು ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ತಿಳಿಸಿಕೊಡುತ್ತದೆ.
12:43 ನೀವು ಒಳ್ಳೆಯ ಬ್ಯಾಂಡ್ವಿಿಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋhಡ್ ಮಾಡಿ ನೋಡಬಹುದು.
12:47 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು
12:49 ಸ್ಪೋಕನ್ ಟ್ಯುಟೋರಿಯಲ್ ಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.
12:52 ಅಂತರ್ಜಾಲಾಧಾರಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
12:56 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ
13:01 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ.
13:05 ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ.
13:11 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.
13:09 ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
13:22 ಅನುವಾದಕ ಮತ್ತು ವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ.

Contributors and Content Editors

NaveenBhat, Pratik kamble