Inkscape/C3/Create-an-A4-Poster/Kannada

From Script | Spoken-Tutorial
Revision as of 11:16, 29 November 2015 by NaveenBhat (Talk | contribs)

Jump to: navigation, search
Time Narration
00.01 Inkscape ನಲ್ಲಿ “Create an A4 Poster” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00.07 ಈ ಟ್ಯುಟೋರಿಯಲ್ ನಲ್ಲಿ ನಾವು
00.10 * Document properties ಅನ್ನು ಬದಲಾಯಿಸುವುದು,
00.12 * A4 poster ಅನ್ನು ವಿನ್ಯಾಸ ಮಾಡುವುದು ಮತ್ತು
00.14 * ಪೋಸ್ಟರ್ ಅನ್ನು 'pdf' ನಲ್ಲಿ Save ಮಾಡುವುದು- ಇವುಗಳ ಕುರಿತು ಕಲಿಯುತ್ತೇವೆ.
00.17 ಈ ಟ್ಯುಟೋರಿಯಲ್ ಗಾಗಿ ನಾನು
00.19 * Ubuntu Linux 12.04 ಆಪರೇಟಿಂಗ್ ಸಿಸ್ಟಮ್
00.22 * Inkscape ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ
00.26 Inkscape ಅನ್ನು ತೆರೆಯಿರಿ.
00.28 File ಮೆನ್ಯುಗೆ ಹೋಗಿNew ಮೇಲೆ ಕ್ಲಿಕ್ ಮಾಡಿ.
00.32 ಇವುಗಳು ಡಿಫಾಲ್ಟ್ ಆದ ಕ್ಯಾನ್ವಾಸ್ ಗಳ ಅಳತೆ.
00.37 ನನ್ನ canvas ನ ಅಳತೆಯು ಡಿಫಾಲ್ಟ್ ಆಗಿ A4 size ನಲ್ಲಿದೆ..
00.41 ಹಾಗಾಗಿ ನಾನು ಅದನ್ನು ಹಾಗೆಯೇ ಬಿಡುತ್ತೇನೆ.
00.44 ನಿಮ್ಮ ಮಶಿನ್ ನಲ್ಲಿ ಆ ರೀತಿ ಇರದಿದ್ದರೆ A4 size ಅನ್ನು ಆಯ್ಕೆ ಮಾಡಿಕೊಳ್ಳಿ.
00.49 ಕೆಲವು ಸೆಟ್ಟಿಂಗ್ ಗಳನ್ನು ಬದಲಾಯಿಸೋಣ.
00.51 File ಗೆ ಹೋಗಿ Document properties ಮೇಲೆ ಕ್ಲಿಕ್ ಮಾಡಿ.
00.54 ಹಲವಾರು ಟ್ಯಾಬ್ ಗಳು ಮತ್ತು ಆಯ್ಕೆಗಳನ್ನು ಹೊಂದಿರುವ ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
00.59 ಅವುಗಳ ಕುರಿತು ಒಂದೊಂದಾಗಿ ಕಲಿಯೋಣ.
1.03 ಮೊದಲ ಟ್ಯಾಬ್ Page ನಲ್ಲಿ Default units ಡ್ರಾಪ್ ಡೌನ್ ಲಿಸ್ಟ್ ನ ಮೇಲೆ ಕ್ಲಿಕ್ ಮಾಡಿ.
1.08 ನಾನು ಒಂದೊಂದನ್ನು ಕ್ಲಿಕ್ ಮಾಡಿದಾಗಲೂ ruler ನ ಮಾಪಕಗಳ ಬದಲಾವಣೆಯನ್ನು ಗಮನಿಸಿ.
1.13 ನಾನು ಅವುಗಳಲ್ಲಿ pixels ಅನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.
1.16 Background ಆಯ್ಕೆಯು ಬ್ಯಾಕ್ ಗ್ರೌಂಡ್ ನ ಬಣ್ಣ ಮತ್ತು ಪಾರದರ್ಶಕತೆಯನ್ನು ಬದಲಾಯಿಸಲು ಸಹಾಯ ಮಾಡುತ್ತದೆ.
1.21 ನಾವು ಅದನ್ನು ಕ್ಲಿಕ್ ಮಾಡಿದಾಗ ಹೊಸ dialog box ಗೋಚರಿಸುತ್ತದೆ.
1.24 RGB sliderಅನ್ನು ಎಡಕ್ಕೂ ಬಲಕ್ಕೂ ಸರಿಸಿ.
1.29 ಕ್ಯಾನ್ವಾಸ್ ನ ಮೇಲೆ background colour ಕಾಣುವಂತೆ ಮಾಡಲು alpha slider ಅನ್ನು ಬಲಕ್ಕೆ ಸರಿಸಿ.
1.35 ಈಗ ಪಾರದರ್ಶಕತೆಯು ಆಯ್ಕೆಮಾಡಿದ 'RGB' ಬೆಲೆಗೆ ಬದಲಾಗುತ್ತದೆ.
1.40 Document properties ವಿಂಡೋ ದ ಬ್ಯಾಕ್ ಗ್ರೌಂಡ್ ಆಯ್ಕೆಯಲ್ಲಿ ಬಣ್ಣವು ನಾನು ಸರಿಸಿದಂತೆ ಬದಲಾಗುವುದನ್ನು ಗಮನಿಸಿ.
1.47 Alpha ಸ್ಲೈಡರ್ ಅನ್ನು ಪೂರ್ತಿ ಎಡಕ್ಕೆ ಎಳೆದು ಡೈಲಾಗ್ ಬಾಕ್ಸ್ ಅನ್ನು ಮುಚ್ಚಿರಿ.
1.52 Page size ನ ಅಡಿಯಲ್ಲಿ ನಾವು ಬಹಳ ಆಯ್ಕೆಗಳನ್ನು ನೋಡುತ್ತೇವೆ.
1.55 ನಾವು ಕ್ಯಾನ್ವಾಸ್ ನ ಅಳತೆಯನ್ನು ಈ ಆಯ್ಕೆಯನ್ನು ಉಪಯೋಗಿಸಿ ಕೂಡ ಬದಲಾಯಿಸಬಹುದು.
2.00 ನಾನು ಕ್ಲಿಕ್ ಮಾಡಿದಂತೆ ಕ್ಯಾನ್ವಾಸ್ ನ ಅಳತೆಯಲ್ಲಿ ಬದಲಾವಣೆಯನ್ನು ಗಮನಿಸಿ.
2.04 ಪೇಜ್ ನ ಅಳತೆಯನ್ನು A4 ಆಗಿ ಇಡೋಣ.
2.08 Orientation ಅನ್ನು Portrait ಅಥವಾ Landscape ಗೆ ಬದಲಾಯಿಸಬಹುದು.
2.12 ಆಯ್ಕೆಗಳ ಮೇಲೆ ಕ್ಲಿಕ್ ಮಾಡಿದಾಗ ಕ್ಯಾನ್ವಾಸ್ ನಲ್ಲಾಗುವ ಬದಲಾವಣೆಯನ್ನು ಗಮನಿಸಿ.
2.17 ನಾವು Width ಮತ್ತು Height ಪ್ಯಾರಮೀಟರ್ ಗಳನ್ನು ಉಪಯೋಗಿಸಿ ಕ್ಯಾನ್ವಾಸ್ ನ ಅಗಲ ಮತ್ತು ಉದ್ದವನ್ನು ಬದಲಿಸಬಹುದು.
2.23 Units ಡ್ರಾಪ್ ಡೌನ್ ಲಿಸ್ಟ್ ನ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಮ್ಮ ಅವಶ್ಯಕತೆಗೆ ತಕ್ಕಂತೆ ನಾವು ಅದನ್ನು ಬದಲಾಯಿಸಿಕೊಳ್ಳಬಹುದು.
2.31 ಈಗ ನಾವು ಇದನ್ನು pixels ಗೆ ಬದಲಾಯಿಸೋಣ.
2.34 Resize page to content ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
2.37 ಇದರಲ್ಲಿರುವ ಹಲವಾರು ಆಯ್ಕೆಗಳು ತೆರೆದುಕೊಳ್ಳುತ್ತವೆ.
2.41 ನಾವು ಎಲ್ಲಾ ಕಡೆಗಳಿಗೂ ಮಾರ್ಜಿನ್ ಅನ್ನು ಸೆಟ್ ಮಾಡಬಹುದು.
2.45 ಮಾರ್ಜಿನ್ ಅನ್ನು ಸೆಟ್ ಮಾಡಿದ ಬಳಿಕ Resize page to drawing or selection ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
2.51 ಮುಂದಿನದು Border ಆಯ್ಕೆ.ನಾವು ಇಲ್ಲಿ ಮೂರು ಚೆಕ್ ಬಾಕ್ಸ್ ಆಯ್ಕೆಗಳನ್ನು ನೋಡಬಹುದು.
2.57 ಈ ಆಯ್ಕೆಗಳನ್ನು ವಿವರಿಸಲು ನಾನು ಮೊದಲು ಈ ರೀತಿಯಾಗಿ ಒಂದು ellipseಅನ್ನು ಚಿತ್ರಿಸಿಕೊಳ್ಳುತ್ತೇನೆ.
3.03 ಮೊದಲನೆ ಆಯ್ಕೆ ಪೇಜ್ ಬಾರ್ಡರ್ ಅಂದರೆ ಕ್ಯಾನ್ವಾಸ್ ನ ಅಂಚು.
3.08 ಈ ಆಯ್ಕೆಯನ್ನು ಅನ್ ಚೆಕ್ ಮಾಡಿ, ಅಂಚು ಮರೆಯಾಗುವುದನ್ನು ಗಮನಿಸಿ.
3.13 ಮತ್ತೆ ಆ ಆಯ್ಕೆಯನ್ನು ಚೆಕ್ ಮಾಡಿ ಮತ್ತು ಅಂಚುಗಳು ಪುನಃ ಕಾಣಿಸುವುದನ್ನು ಗಮನಿಸಿ.
3.18 ಎರಡನೇ ಆಯ್ಕೆಯು ಚಿತ್ರದ ಮೇಲೆ ಅಂಚನ್ನು ಜೋಡಿಸುತ್ತದೆ.
3.25 ಇನ್ನೊಮ್ಮೆ ಈ ಆಯ್ಕೆಯ ಮೇಲೆ ಚೆಕ್ ಮತ್ತು ಅನ್ ಚೆಕ್ ಮಾಡಿ ಕ್ಯಾನ್ ವಾಸ್ ನಲ್ಲಾಗುವ ಬದಲಾವಣೆಯನ್ನು ಗಮನಿಸಿ.
3.31 ಮೂರನೆ ಆಯ್ಕೆಯು ಕ್ಯಾನ್ವಾಸ್ ನ ನೆರಳನ್ನು ಬಲ ಮತ್ತು ಕೆಳಭಾಗದಲ್ಲಿ ಕಾಣುವಂತೆ ಮಾಡುತ್ತದೆ.
3.36 ಇಲ್ಲಿ ಅಂಚು ಬಲ ಮತ್ತು ಕೆಳಭಾಗದಲ್ಲಿ ಉಳಿದೆರಡು ಕಡೆಗಳಿಗಿಂತಲೂ ದಪ್ಪವಾಗಿರುವುದನ್ನು ಗಮನಿಸಿ.
3.42 ಮೂರನೇ ಆಯ್ಕೆಯನ್ನು ಅನ್ ಚೆಕ್ ಮಾಡಿ ಮತ್ತು ನೆರಳು ಮರೆಯಾಗುವುದನ್ನುಗಮನಿಸಿ.
3.47 ನಾವು ಈ ಎಲ್ಲಾ ಆಯ್ಕೆಗಳನ್ನು ನಮ್ಮ ಅವಶ್ಯಕತೆ ಮತ್ತು ಆದ್ಯತೆಗಳಿಗನುಗುಣವಾಗಿ ಬಳಸಬಹುದು.
3.52 Border color ಆಯ್ಕೆಯು ನಮಗೆ ಬೇಕಾದ ಅಂಚಿನ ಬಣ್ಣವನ್ನು ಆರಿಸಿಕೊಳ್ಳಲು ಸಹಾಯ ಮಾಡುತ್ತದೆ.
3.57 ಬಾರ್ಡರ್ ಕಲರ್ ಅನ್ನು ಡಿಫಾಲ್ಟ್ ಆಗಿ ಹೇಗಿದೆಯೋ ಹಾಗೇ ಬಿಡೋಣ.
4.01 ನಂತರ Guides ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
4.03 Guides ಟ್ಯಾಬ್ ಇದು ಅಕ್ಷರಗಳು ಮತ್ತು ಚಿತ್ರಗಳನ್ನು ಕ್ಯಾನ್ವಾಸ್ ನ ಮೇಲೆ ಅಲೈನ್ ಮಾಡಲು ಸಹಾಯ ಮಾಡುತ್ತದೆ.
4.08 ಇಲ್ಲಿ ನೀವು ruler guides ಅನ್ನು ರಚಿಸಬಹುದು.
4.12 ವರ್ಟಿಕಲ್ ruler ಮೇಲೆ ಕ್ಲಿಕ್ ಮಾಡಿ ಮತ್ತು ಒಂದು guideline ಅನ್ನು ಎಳೆಯಿರಿ.
4.15 ಈಗ ಮೊದಲ ಆಯ್ಕೆ Show Guides ಅನ್ನು ಚೆಕ್ -ಅನ್ ಚೆಕ್ ಮಾಡಿ
4.19 ಮತ್ತು ಗೈಡ್ ಲೈನ್ ಕ್ಯಾನ್ವಾಸ್ ನ ಮೇಲೆ ಗೋಚರಿಸುವುದು ಮತ್ತು ಮರೆಯಾಗುವುದನ್ನು ಗಮನಿಸಿ.
4.25 Guide color ಇದು guideline ನ ಬಣ್ಣ.
4.28 Highlight color ಇದು ಗೈಡ್ ಲೈನ್ ಅನ್ನು ಒಂದು ಸ್ಥಾನಕ್ಕೆ ಎಳೆಯುವಾಗ ಅದರ ಬಣ್ಣ.
4.33 ಇಲ್ಲಿ guide ಮತ್ತು highlight ನ ಡಿಫಾಲ್ಟ್ ಬಣ್ಣವನ್ನು ತೋರಿಸಿದೆ.
4.37 ನಿಮ್ಮ ಆದ್ಯತೆಗೆ ತಕ್ಕಂತೆ ಇದನ್ನು ಬದಲಿಸಿಕೊಳ್ಳಬಹುದು.
4.41 ನಾನು ಅವುಗಳ ಬಣ್ಣವನ್ನು ಡಿಫಾಲ್ಟ್ ಆಗೇ ಬಿಡುತ್ತೇನೆ.
4.44 Snap guides while dragging ಆಯ್ಕೆಯು ಎಳೆಯುವಾಗ ಒಬ್ಜೆಕ್ಟ್ ಅಥವಾ ಬೌಂಡಿಂಗ್ ಬಾಕ್ಸ್ ಗಳನ್ನುಹತ್ತಿರದ ಗೈಡ್ ಲೈನ್ ಗಳಿಗೆ snap ಮಾಡಲು ಸಹಾಯ ಮಾಡುತ್ತದೆ.
4.52 ನಂತರ Grids ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
4.54 ಈ ಆಯ್ಕೆಯನ್ನು ಉಪಯೋಗಿಸಿ ಕ್ಯಾನ್ವಾಸ್ ನ ಮೇಲೆ ಕಲಾಕೃತಿಗಳ ಹಿಂಭಾಗದಲ್ಲಿ grid ಗಳು ಮೂಡುವಂತೆ ಮಾಡಲು ಸಹಾಯ ಮಾಡುತ್ತದೆ.
5.00 Grids ಗಳು ಕ್ಯಾನ್ವಾಸ್ ನ ಮೇಲೆ ಒಬ್ಜೆಕ್ಟ್ ಗಳ ಸ್ಥಾನವನ್ನು ಗೊತ್ತುಪಡಿಸಲು ಸಹಾಯ ಮಾಡುತ್ತದೆ ಮತ್ತು ಅವು ಪ್ರಿಂಟ್ ಆಗುವುದಿಲ್ಲ.
5.07 ಡ್ರಾಪ್ ಡೌನ್ ಲಿಸ್ಟ್ ಮೇಲೆ ಕ್ಲಿಕ್ ಮಾಡಿ.
5.09 Rectangular grid ಮತ್ತು Axonometric grid ಇವುgrid ಗಳ ಎರಡು ವಿಧಗಳು.
5.16 Rectangular grid ಅನ್ನು ಆಯ್ಕೆ ಮಾಡಿಕೊಂಡು New ಮೇಲೆ ಕ್ಲಿಕ್ ಮಾಡಿ.
5.20 ತತ್ಕ್ಷಣವೇ ಕ್ಯಾನ್ವಾಸ್ ನ ಬ್ಯಾಕ್ ಗ್ರೌಂಡ್ ನಲ್ಲಿ ಒಂದು grid ಮೂಡಿಬರುತ್ತದೆ.
5.25 ಇರುವ ಆಯ್ಕೆಗಳನ್ನು ಉಪಯೋಗಿಸಿ ನಮ್ಮ ಅವಶ್ಯಕತೆಗೆ ತಕ್ಕಂತೆ grid ಪ್ರಾಪರ್ಟಿಗಳನ್ನು ಸೆಟ್ ಮಾಡಬಹುದು.
5.31 ಕೆಳಗಡೆ ಇರುವ Remove ಬಟ್ಟನ್ ಅನ್ನು ಒತ್ತುವುದರ ಮೂಲಕ grid ಅನ್ನು ತೆಗೆದು ಹಾಕಬಹುದು.
5.36 ಇದೇ ರೀತಿಯಲ್ಲಿ Axonometric grid ಆಯ್ಕೆಯನ್ನೂ ಕೂಡ ಪ್ರಯತ್ನಿಸಬಹುದು.
5.41 ಮುಂದಿನ ಮೂರು ಟ್ಯಾಬ್ ಗಳಲ್ಲಿರುವ ಆಯ್ಕೆಗಳ ಕುರಿತು ಈ ಸರಣಿಯ ಮುಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿಯುತ್ತೇವೆ.
5.47 ಈಗ ಪೋಸ್ಟರ್ ಅನ್ನು ರಚಿಸುವುದನ್ನು ಪ್ರಾರಂಭಿಸೋಣ.
5.50 ಅದಕ್ಕಾಗಿ ಈಗ ಮೊದಲು ellipse ಮತ್ತು guidelineಗಳನ್ನು ಅಳಿಸೋಣ.
5.53 ನಮ್ಮ ಪೋಸ್ಟರ್ ಗೆ ಮೊದಲು ಬ್ಯಾಕ್ ಗ್ರೌಂಡ್ ಅನ್ನು ಡಿಸೈನ್ ಮಾಡೋಣ.
5.58 Rectangle tool ಮೇಲೆ ಕ್ಲಿಕ್ ಮಾಡಿ.
6.00 ಪೂರ್ತಿ canvas ಅನ್ನು ಆವರಿಸುವಂತೆ ಒಂದು ದೊಡ್ಡ ಆಯತಾಕಾರವನ್ನು ರಚಿಸಿ.
6.06 ತಿಳಿ ನೀಲಿ ಬಣ್ಣದ ಗ್ರೇಡಿಯೆಂಟ್ ಅನ್ನು ಹಾಕಿ.
6.08 ನಂತರ ಕ್ಯಾನ್ವಾಸ್ ನ Bezier tool ಅನ್ನು ಉಪಯೋಗಿಸಿ ಮೇಲ್ಭಾಗದಲ್ಲಿ header area ವನ್ನೂ
6.16 ಕ್ಯಾನ್ವಾಸ್ ನ ಕೆಳಭಾಗದಲ್ಲಿ footer area ವನ್ನೂ ಚಿತ್ರಿಸಿ.
6.23 ಇದಕ್ಕೆ ನೀಲಿ ಬಣ್ಣವನ್ನು ಹಾಕೋಣ.
6.25 ಈಗ Spoken Tutorial logo ವನ್ನು ಇಂಪೋರ್ಟ್ ಮಾಡೋಣ.
6.28 ಈ ಲೋಗೋ ನಿಮಗೆ Code Files ಲಿಂಕ್ ನಲ್ಲಿ ದೊರೆಯುತ್ತದೆ.
6.32 ಮೊದಲಿಗೆ ಟ್ಯುಟೋರಿಯಲ್ ಗೆ ವಿರಾಮ ಕೊಟ್ಟು, Code Files ಗೆ ಹೋಗಿ ಮತ್ತು zip fileಅನ್ನು ಡೌನ್ ಲೋಡ್ ಮಾಡಿ.
6.39 ಈಗ ಫೋಲ್ಡರ್ ಅನ್ನು unzip ಮಾಡಿ ಅದನ್ನು ನಿಮಗೆ ಬೇಕಾದಲ್ಲಿ ಸೇವ್ ಮಾಡಿಕೊಳ್ಳಿ.
6.45 ಈಗ ಪುನಃ Inkscape ಡೊಕ್ಯುಮೆಂಟ್ ಗೆ ಹಿಂದಿರುಗಿ.
6.47 File ಮೆನ್ಯು ಗೆ ಹೋಗಿ Import ಮೇಲೆ ಕ್ಲಿಕ್ ಮಾಡಿ.
6.51 logo ವನ್ನು ಸೇವ್ ಮಾಡಿದ ಫೋಲ್ಡರ್ ಗೆ ಹೋಗಿ.
6.54 Spoken Tutorial logo ವನ್ನು ಆಯ್ಕೆ ಮಾಡಿಕೊಂಡು Open ಮೇಲೆ ಕ್ಲಿಕ್ ಮಾಡಿ.
6.59 ಹೊಸ ಡೈಲಾಗ್ ಬಾಕ್ಸ್ ತೆರೆದು ಕೊಳ್ಳುತ್ತದೆ OK ಮೇಲೆ ಕ್ಲಿಕ್ ಮಾಡಿ.
7.03 ಈಗ ನಮ್ಮ canvas ನ ಮೇಲೆ ಲೋಗೊ ಇಂಪೋರ್ಟ್ ಆಗಿದೆ.
7.06 100×100 pixels ಗೆ Resize ಮಾಡಿ.
7.09 ಇದನ್ನು header area ದ ಮೇಲ್ಭಾಗದ ಎಡ ಮೂಲೆಯಲ್ಲಿ ಇಡಿ.
7.14 ಈಗ “Spoken Tutorial” ಎಂದು ಟೈಪ್ ಮಾಡಿ.
7.18 ಇದನ್ನು Bold ಮಾಡಿ.
7.20 ಫಾಂಟ್ ಸೈಜ್ ಅನ್ನು 48 ಕ್ಕೆ ಬದಲಾಯಿಸಿ.
7.24 ಅದನ್ನು logo ದ ಬಲಭಾಗದಲ್ಲಿಡಿ.
7.27 ಇದಾದ ನಂತರ “partner with us...help bridge the digital divide” ಎಂದು ಟೈಪ್ ಮಾಡಿ.
7.35 ಫಾಂಟ್ ಸೈಜ್ ಅನ್ನು 20 ಕ್ಕೆ ಬದಲಾಯಿಸಿ
7.39 ಮುಂದೆ ಕೆಲವು ಪಠ್ಯವನ್ನು ಸೇರಿಸೋಣ.
7.42 ನಾನು ಈಗಾಗಲೇ LibreOffice Writer ನಲ್ಲಿ ಪಠ್ಯವನ್ನು ಸೇವ್ ಮಾಡಿಕೊಂಡಿದ್ದೇನೆ.
7.47 ಈ ಪಠ್ಯವು ನಿಮಗೆ Code Files ನಲ್ಲಿ ದೊರೆಯುತ್ತದೆ.
7.51 ದಯವಿಟ್ಟು ಅದನ್ನು ನಿಮ್ಮ ಫೋಲ್ಡರ್ ನಲ್ಲಿ ಇಟ್ಟುಕೊಳ್ಳಿ.
7.54 ಈಗ ಅದನ್ನು copy ಮಾಡಿ ಮತ್ತು ಪೋಸ್ಟರ್ ನಲ್ಲಿ ಖಾಲಿ ಇರುವ ಜಾಗದಲ್ಲಿ paste ಮಾಡಿ.
8.00 ಫಾಂಟ್ ಸೈಜ್ ಅನ್ನು 28 ಕ್ಕೆ ಬದಲಾಯಿಸಿ.
8.04 ಲೈನ್ ಸ್ಪೇಸಿಂಗ್ ಅನ್ನು ಸೆಟ್ ಮಾಡಿ.
8.06 bullet ಗಳನ್ನು ರಚನೆ ಮಾಡಿ ಪ್ರತಿ ವಾಕ್ಯದ ಪ್ರಾರಂಭದಲ್ಲಿ ಇಡಿ.
8.10 ಇದರ ಕೆಳಗೆ ಎರಡು ಇಮೇಜ್ ಗಳನ್ನು ಸೇರಿಸೋಣ.
8.13 ಮೊದಲಿನಂತೆಯೇ ಅವುಗಳನ್ನು ಒಂದೊಂದಾಗಿ import ಮಾಡಿ.
8.17 ನಾನು ಅವುಗಳನ್ನು images ಫೋಲ್ಡರ್ ನಲ್ಲಿ ಸೇವ್ ಮಾಡಿದ್ದೇನೆ.
8.20 ನಿಮಗೆ ಈ ಇಮೇಜ್ ಗಳು Code Files ನಲ್ಲಿ ದೊರೆಯುತ್ತದೆ.
8.24 ದಯವಿಟ್ಟು ಅವುಗಳನ್ನು ನಿಮ್ಮ ಫೋಲ್ಡರ್ ನಲ್ಲಿ ಸೇವ್ ಮಾಡಿಕೊಳ್ಳಿ.
8.27 ಇಮೇಜ್ ಗಳನ್ನು ಆಯ್ಕೆ ಮಾಡಿಕೊಂಡು ಅವುಗಳ ಗಾತ್ರವನ್ನು ಸರಿಪಡಿಸಿಕೊಳ್ಳಿ.
8.30 ಅವುಗಳನ್ನು poster ನ ಕೆಳಭಾಗಕ್ಕೆ ಸರಿಸಿ.
8.33 ಸಂಪರ್ಕದ ವಿವರವನ್ನು footer area ದಲ್ಲಿ ಬರೆಯೋಣ.
8.37 ಇನ್ನೊಮ್ಮೆ LibreOffice Writer ಡಾಕ್ಯುಮೆಂಟ್ ನಿಂದ ಪಠ್ಯವನ್ನು copy ಮಾಡಿ pasteಮಾಡಿ.
8.42 ಫಾಂಟ್ ಸೈಜ್ ಅನ್ನು 18 ಕ್ಕೆ ಬದಲಾಯಿಸಿ
8.45 ಈಗ ನಮ್ಮ poster ಸಿದ್ಧವಾಗಿದೆ.
8.47 ಈಗ ಅದನ್ನು pdf ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವುದು ಹೇಗೆಂದು ನೋಡೋಣ.
8.51 File ಮೆನ್ಯುಗೆ ಹೋಗಿ Save As ಮೇಲೆ ಕ್ಲಿಕ್ ಮಾಡಿ.
8.55 ಒಂದು ಡೈಲಾಗ್ ಬಾಕ್ಸ್ ಗೋಚರಿಸುತ್ತದೆ.
8.58 ನೀವು ಯಾವ ಫೋಲ್ಡರ್ ನಲ್ಲಿ ಸೇವ್ ಮಾಡಬೇಕೋ ಅದನ್ನು ಆರಿಸಿಕೊಳ್ಳಿ.
9.00 ನಾನು Desktop ಅನ್ನು ಆರಿಸಿಕೊಳ್ಳುತ್ತೇನೆ.
9.02 ಕೆಳ ಬಲಭಾಗದಲ್ಲಿರುವ ಡ್ರಾಪ್ ಡೌನ್ ಲಿಸ್ಟ್ ಅನ್ನು ಕ್ಲಿಕ್ ಮಾಡಿ ಫಾರ್ಮ್ಯಾಟ್ ಅನ್ನು pdf ಗೆ ಬದಲಾಯಿಸಿ.
9.09 ಇಲ್ಲಿ Name ಅಲ್ಲಿ: Spoken-Tutorial-Poster.pdf ಎಂದು ಟೈಪ್ ಮಾಡಿ.
9.16 Save ಮೇಲೆ ಕ್ಲಿಕ್ ಮಾಡಿ.
9.18 Desktop ನಲ್ಲಿ ನಮ್ಮ ಪೋಸ್ಟರ್ ಸೇವ್ ಆಗಿದೆ.
9.21 ಈಗ Desktop ಗೆ ಹೋಗಿ ಪೋಸ್ಟರ್ ಅನ್ನು ಪರೀಕ್ಷಿಸೋಣ.
9.25 ನಾವು ಪೋಸ್ಟರ್ ಅನ್ನು pdf ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿದ್ದೇವೆ.
9.28 ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು
9.32 * Document properties ಅನ್ನು ಬದಲಾಯಿಸುವುದು,
9.34 * A4 poster ವಿನ್ಯಾಸಗೊಳಿಸುವುದು,
9.36 * ಪೋಸ್ಟರ್ ಅನ್ನು 'pdf' ನಲ್ಲಿ ಸೇವ್ ಮಾಡುವುದನ್ನು ಕಲಿತಿದ್ದೇವೆ.
9.38 ಸ್ವಂತ ಅಭ್ಯಾಸಕ್ಕಾಗಿ ಅಸೈನ್ ಮೆಂಟ್ -
9.40 Spoken Tutorial Project ಗೆ ಒಂದು A4 poster ಅನ್ನು ವಿನ್ಯಾಸಗೊಳಿಸಿ.
9.44 ಮುಗಿಸಿದ ನಂತರ ನಿಮ್ಮ ಅಸೈನ್ ಮೆಂಟ್ ಈ ರೀತಿಯಾಗಿರಬೇಕು.
9.48 ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಕುರಿತು ತಿಳಿಸುತ್ತದೆ. ದಯವಿಟ್ಟು ನೋಡಿ.
9.54 Spoken Tutorial Project Team ಇದು
  • spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
  • online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ
10.01 ಹೆಚ್ಚಿನ ವಿವರಗಳಿಗಾಗಿ ನಮಗೆ ಬರೆಯಿರಿ.
10.04 Spoken Tutorial Project ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ
10.10 ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ದೊರೆಯುತ್ತದೆ
10.14 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
10.16 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು..

Contributors and Content Editors

NaveenBhat, Pratik kamble