Geogebra/C3/Relationship-between-Geometric-Figures/Kannada
From Script | Spoken-Tutorial
Revision as of 17:43, 24 April 2015 by Sandhya.np14 (Talk | contribs)
| Time | Narration |
| 00:00 | ನಮಸ್ಕಾರ. |
| 00:01 | Relationship between different Geometric Figures in Geogebra ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
| 00:07 | ನಿಮಗೆ ಜಿಯೊಜಿಬ್ರಾದೊಂದಿಗೆ ಕೆಲಸಮಾಡಿ ಅಭ್ಯಾಸವಿದೆ ಎಂದು ನಾವು ಭಾವಿಸುತ್ತೇವೆ. |
| 00:11 | ಇಲ್ಲದಿದ್ದರೆ, ಮುಂದುವರೆಯುವ ಮೊದಲು, ದಯವಿಟ್ಟು Introduction to Geogebra ಎನ್ನುವ ಟ್ಯುಟೋರಿಯಲ್ ಅನ್ನು ನೋಡಿ. |
| 00:18 | ನಿಜವಾದ ಕಂಪಾಸ್ ಪೆಟ್ಟಿಗೆಯ ಬದಲಾಗಿ ಈ ಟ್ಯುಟೋರಿಯಲ್ ಅನ್ನು ಬಳಸುವುದು, ಇದನ್ನು ಕಲಿಸುವ ಉದ್ದೇಶವಾಗಿಲ್ಲ ಎನ್ನುವುದನ್ನು ದಯವಿಟ್ಟು ಗಮನಿಸಿ. |
| 00:24 | ಗುಣಧರ್ಮಗಳನ್ನು ತಿಳಿದುಕೊಳ್ಳುವ ದೃಷ್ಟಿಯಿಂದ, ಜಿಯೊಜಿಬ್ರಾದಲ್ಲಿ ರಚನೆಗಳನ್ನು ಮಾಡಲಾಗುತ್ತದೆ. |
| 00:29 | ಈ ಟ್ಯುಟೋರಿಯಲ್ ನಲ್ಲಿ ನಾವು, |
| 00:32 | ‘ಸೈಕ್ಲಿಕ್ ಕ್ವಾಡ್ರಿಲ್ಯಾಟರಲ್’ ಮತ್ತು ‘ಇನ್-ಸರ್ಕಲ್’ಗಳನ್ನು ರಚಿಸಲು ಕಲಿಯುವೆವು. |
| 00:35 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Linux operating system (ಲಿನಕ್ಸ್ ಆಪರೇಟಿಂಗ್ ಸಿಸ್ಟಂ) |
| 00:39 | Ubuntu Version 10.04 LTS (ಉಬಂಟು ವರ್ಷನ್ 10.04 LTS) |
| 00:43 | ಹಾಗೂ Geogebra Version 3.2.40.0. ( ಜಿಯೊಜಿಬ್ರಾ ವರ್ಷನ್ 3.2.40.0) ಗಳನ್ನು ಬಳಸುತ್ತಿದ್ದೇನೆ. |
| 00:48 | ರಚನೆಗಳಿಗಾಗಿ, ಈ ಕೆಳಗಿನ ಜಿಯೊಜಿಬ್ರಾ ಟೂಲ್ಗಳನ್ನು ನಾವು ಬಳಸುವೆವು.
|
| 01:02 | ನಾವು ಜಿಯೊಜಿಬ್ರಾ (Geogebra) ವಿಂಡೋ ಗೆ ಬದಲಾಯಿಸೋಣ. |
| 01:05 | ಇದನ್ನು ಮಾಡಲು, ನಾವು ಕ್ರಮವಾಗಿ Applications, Education ಮತ್ತು Geogebra ಗಳ ಮೇಲೆ ಕ್ಲಿಕ್ ಮಾಡೋಣ. |
| 01:13 | ನಾನು ಈ ವಿಂಡೋವನ್ನು ರಿ-ಸೈಜ್ ಮಾಡುತ್ತೇನೆ. |
| 01:18 | ಆಕೃತಿಯನ್ನು ಸ್ಪಷ್ಟಗೊಳಿಸಲು, ಕ್ರಮವಾಗಿ Options ಮೆನು, Font Size, ನಂತರ 18 point ಗಳ ಮೇಲೆ ಕ್ಲಿಕ್ ಮಾಡಿ. |
| 01:25 | ನಾವು ಒಂದು ‘ಸೈಕ್ಲಿಕ್ ಕ್ವಾಡ್ರಿಲ್ಯಾಟರಲ್’ಅನ್ನು ರಚಿಸೋಣ. |
| 01:27 | ಇದನ್ನು ಮಾಡಲು, ಟೂಲ್-ಬಾರ್ ನಿಂದ Regular Polygon ಎನ್ನುವ ಟೂಲನ್ನು ಆಯ್ಕೆಮಾಡೋಣ. Regular Polygon ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಯಾವುದೇ ಎರಡು ಬಿಂದುಗಳ ಮೇಲೆ ಕ್ಲಿಕ್ ಮಾಡಿ. |
| 01:38 | ಡೀಫಾಲ್ಟ್ ವ್ಯಾಲ್ಯೂ 4 ನೊಂದಿಗೆ, ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುವುದನ್ನು ನಾವು ನೋಡುತ್ತೇವೆ. |
| 01:42 | OK ಯ ಮೇಲೆ ಕ್ಲಿಕ್ ಮಾಡಿ. |
| 01:43 | ABCD ಎನ್ನುವ ಚೌಕೋನವು ರಚಿಸಲ್ಪಟ್ಟಿದೆ. |
| 01:46 | ಎಡಮೂಲೆಯಲ್ಲಿರುವ Move ಟೂಲನ್ನು ಬಳಸಿ, ನಾವು ಚೌಕೋನವನ್ನು ಸ್ವಲ್ಪ ಓರೆಯಾಗಿಸೋಣ. |
| 01:51 | ಟೂಲ್-ಬಾರ್ ನಿಂದ Move ಎನ್ನುವ ಟೂಲನ್ನು ಆಯ್ಕೆಮಾಡಿ, Move ಟೂಲ್ನ ಮೇಲೆ ಕ್ಲಿಕ್ ಮಾಡಿ. |
| 01:56 | ಮೌಸ್ ಪಾಯಿಂಟರ್ ಅನ್ನು A ಅಥವಾ B ಯ ಮೇಲೆ ಇರಿಸಿ. ನಾನು B ಯನ್ನು ಆರಿಸಿಕೊಳ್ಳುವೆನು. |
| 02:01 | ಮೌಸ್ ಪಾಯಿಂಟರ್ ಅನ್ನು B ಯ ಮೇಲೆ ಇರಿಸಿ ಹಾಗೂ ಅದನ್ನು ಮೌಸ್ ನೊಂದಿಗೆ ಎಳೆಯಿರಿ. ಚೌಕೋನವು ಈಗ ಓರೆಯಾಗಿದೆ ಎನ್ನುವುದನ್ನು ನಾವು ನೋಡುತ್ತೇವೆ. |
| 02:10 | ನಾವು, ಸೆಗ್ಮೆಂಟ್AB ಗೆ ಒಂದು ಲಂಬವಾದ ದ್ವಿಭಾಜಕವನ್ನು (perpendicular bisector) ರಚಿಸೋಣ. |
| 02:15 | ಇದನ್ನು ಮಾಡಲು, ಟೂಲ್-ಬಾರ್ ನಿಂದ ನಾವು Perpendicular Bisector ಎನ್ನುವ ಟೂಲನ್ನು ಆಯ್ಕೆಮಾಡೋಣ. |
| 02:20 | Perpendicular Bisector ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
| 02:22 | A ಬಿಂದುವಿನ ಮೇಲೆ ಕ್ಲಿಕ್ ಮಾಡಿ. |
| 02:24 | ನಂತರ, B ಬಿಂದುವಿನ ಮೇಲೆ ಕ್ಲಿಕ್ ಮಾಡಿ. |
| 02:26 | ಒಂದು ಲಂಬವಾದ ದ್ವಿಭಾಜಕವನ್ನು ಎಳೆಯಲಾಗಿದೆ ಎಂದು ನಾವು ನೋಡುತ್ತೇವೆ. |
| 02:30 | ಎರಡನೆಯ ಲಂಬವಾದ ದ್ವಿಭಾಜಕವನ್ನು (perpendicular bisector) ನಾವು ಸೆಗ್ಮೆಂಟ್ BC ಗೆ ರಚಿಸೋಣ. ಇದನ್ನು ಮಾಡಲು, |
| 02:36 | ಟೂಲ್-ಬಾರ್ ನಿಂದ Perpendicular Bisector ಎನ್ನುವ ಟೂಲನ್ನು ಆಯ್ಕೆಮಾಡಿ. Perpendicular Bisector ಟೂಲ್ನ ಮೇಲೆ ಕ್ಲಿಕ್ ಮಾಡಿ. |
| 02:42 | B ಬಿಂದುವಿನ ಮೇಲೆ ಕ್ಲಿಕ್ ಮಾಡಿ. |
| 02:44 | ನಂತರ C ಬಿಂದುವಿನ ಮೇಲೆ ಕ್ಲಿಕ್ ಮಾಡಿ. |
| 02:46 | ಲಂಬವಾದ ದ್ವಿಭಾಜಕಗಳು ಒಂದು ಬಿಂದುವಿನಲ್ಲಿ ಛೇದಿಸುವುದನ್ನು ನಾವು ನೋಡುತ್ತೇವೆ. |
| 02:50 | ಈ ಬಿಂದುವನ್ನು ನಾವು E ಎಂದು ಗುರುತಿಸೋಣ. |
| 02:54 | E ಕೇಂದ್ರಬಿಂದು ಇರುವ ಹಾಗೂ C ಯ ಮೂಲಕ ಹಾಯ್ದುಹೋಗುವ ಒಂದು ವರ್ತುಲವನ್ನು ಈಗ ನಾವು ರಚಿಸೋಣ. |
| 03:01 | ಟೂಲ್-ಬಾರ್ ನಿಂದ Circle with Centre through Point ಎನ್ನುವ ಟೂಲನ್ನು ಆಯ್ಕೆಮಾಡೋಣ. Circle with Centre through Point ಟೂಲ್ನ ಮೇಲೆ ಕ್ಲಿಕ್ ಮಾಡಿ. |
| 03:09 | E ಯನ್ನು ಕೇಂದ್ರಬಿಂದು ಇರುವಂತೆ ಕ್ಲಿಕ್ ಮಾಡಿ. ಈ ವರ್ತುಲವು C ಯ ಮೂಲಕ ಹಾಯ್ದುಹೋಗುತ್ತದೆ. E ಬಿಂದುವಿನ ಮೇಲೆ, ನಂತರ C ಯ ಮೇಲೆ ಕ್ಲಿಕ್ ಮಾಡಿ. |
| 03:18 | ವರ್ತುಲವು, ಚತುರ್ಭುಜದ ಎಲ್ಲ ವರ್ಟೈಸಿಸ್ ಗಳ ಮೂಲಕ ಹಾಯ್ದುಹೋಗುವುದನ್ನು ನಾವು ನೋಡುತ್ತೇವೆ. ಒಂದು ‘ಸೈಕ್ಲಿಕ್ ಕ್ವಾಡ್ರಿಲ್ಯಾಟರಲ್’, ರಚಿತವಾಗಿದೆ. |
| 03:29 | ಒಂದೇ ಅನುಕ್ರಮದಲ್ಲಿ ಭುಜಗಳ ಉದ್ದವನ್ನು ಹೊಂದಿರುವ ಎಲ್ಲ ಚತುರ್ಭುಜಗಳಲ್ಲಿ, ಸೈಕ್ಲಿಕ್ ಕ್ವಾಡ್ರಿಲ್ಯಾಟರಲ್, ಗರಿಷ್ಠ ವಿಸ್ತೀರ್ಣವನ್ನು ಹೊಂದಿದೆ ಎಂದು ನಿಮಗೆ ಗೊತ್ತಿದೆಯೇ? |
| 03:37 | ಈ ಆಕೃತಿಯನ್ನು ‘ಅನಿಮೇಟ್’ ಮಾಡಲು, ನಾವು Move ಟೂಲ್ ಅನ್ನು ಬಳಸೋಣ. |
| 03:42 | ಇದನ್ನು ಮಾಡಲು, ಟೂಲ್-ಬಾರ್ ನಿಂದ Move ಎನ್ನುವ ಟೂಲನ್ನು ಆಯ್ಕೆಮಾಡೋಣ. Move ಟೂಲ್ನ ಮೇಲೆ ಕ್ಲಿಕ್ ಮಾಡಿ. ಮೌಸ್ ಪಾಯಿಂಟರ್ ಅನ್ನು A ಅಥವಾ B ಯ ಮೇಲೆ ಇರಿಸಿ. ನಾನು A ಅನ್ನು ಆರಿಸಿಕೊಳ್ಳುವೆನು. |
| 03:52 | ಅನಿಮೇಟ್ ಮಾಡಲು, |
| 03:58 | ರಚನೆಯು ಸರಿಯಾಗಿದೆ ಎಂದು ಪರಿಶೀಲಿಸಲು, ಮೌಸ್ ಪಾಯಿಂಟರ್ ಅನ್ನು A ದ ಮೇಲೆ ಇರಿಸಿ ಹಾಗೂ ಅದನ್ನು ಮೌಸ್ ನೊಂದಿಗೆ ಎಳೆಯಿರಿ. |
| 04:01 | ಈಗ ನಾವು ಫೈಲನ್ನು ಸೇವ್ ಮಾಡೋಣ. |
| 04:04 | ಕ್ರಮವಾಗಿ File >> Save As ಗಳ ಮೇಲೆ ಕ್ಲಿಕ್ ಮಾಡಿ. |
| 04:07 | ನಾನು ಫೈಲ್ ನ ಹೆಸರನ್ನು cyclic_quadrilateral (ಸೈಕ್ಲಿಕ್ ಕ್ವಾಡ್ರಿಲ್ಯಾಟರಲ್) ಎಂದು ಟೈಪ್ ಮಾಡಿ, |
| 04:21 | Save ನ ಮೇಲೆ ಕ್ಲಿಕ್ ಮಾಡುವೆನು. |
| 04:23 | ಒಂದು ‘ಇನ್-ಸರ್ಕಲ್’ ಅನ್ನು ರಚಿಸಲು ನಾವು ಒಂದು ಹೊಸ ‘ಜಿಯೊಜಿಬ್ರಾ ವಿಂಡೋ’ವನ್ನು ತೆರೆಯೋಣ. |
| 04:28 | ಇದನ್ನು ಮಾಡಲು, ನಾವು ಕ್ರಮವಾಗಿ File >> New ಗಳನ್ನು ಆಯ್ಕೆಮಾಡೋಣ. |
| 04:35 | ಈಗ ನಾವು ಒಂದು ತ್ರಿಕೋನವನ್ನು ರಚಿಸೋಣ. ಇದನ್ನು ಮಾಡಲು, ಟೂಲ್-ಬಾರ್ ನಿಂದ Polygon ಎನ್ನುವ ಟೂಲನ್ನು ನಾವು ಆಯ್ಕೆಮಾಡೋಣ. Polygon ಟೂಲ್ನ ಮೇಲೆ ಕ್ಲಿಕ್ ಮಾಡಿ. |
| 04:44 | ತ್ರಿಕೋನಾಕೃತಿಯನ್ನು ಪೂರ್ಣಗೊಳಿಸಲು, A, B, C ಬಿಂದುಗಳ ಮೇಲೆ ಹಾಗೂ A ದ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ. |
| 04:52 | ಈ ತ್ರಿಕೋನದ ಕೋನಗಳನ್ನು ಅಳೆಯೋಣ. |
| 04:55 | ಇದನ್ನು ಮಾಡಲು, ಟೂಲ್-ಬಾರ್ ನಿಂದ Angle ಎನ್ನುವ ಟೂಲನ್ನು ಆಯ್ಕೆಮಾಡೋಣ. Angle ಟೂಲ್ನ ಮೇಲೆ ಕ್ಲಿಕ್ ಮಾಡಿ. |
| 05:00 | B, A, C ; C, B, A ಮತ್ತು A, C, B ಗಳ ಮೇಲೆ ಕ್ಲಿಕ್ ಮಾಡಿ. |
| 05:15 | ಕೋನಗಳನ್ನು ಅಳೆಯಲಾಗಿದೆ ಎಂದು ನಾವು ನೋಡುತ್ತೇವೆ. |
| 05:18 | ಈಗ ಈ ಕೋನಗಳಿಗೆ, ನಾವು ಕೋನ ದ್ವಿಭಾಜಕಗಳನ್ನು ರಚಿಸೋಣ. |
| 05:21 | ಟೂಲ್-ಬಾರ್ ನಿಂದ Angle Bisector ಎನ್ನುವ ಟೂಲನ್ನು ಆಯ್ಕೆಮಾಡಿ, |
| 05:25 | Angle Bisector ಟೂಲ್ನ ಮೇಲೆ ಕ್ಲಿಕ್ ಮಾಡಿ. B, A, C ಬಿಂದುಗಳ ಮೇಲೆ ಕ್ಲಿಕ್ ಮಾಡಿ. |
| 05:32 | ಎರಡನೆಯ ಕೋನ ದ್ವಿಭಾಜಕವನ್ನು ರಚಿಸಲು, ಟೂಲ್-ಬಾರ್ ನಿಂದ Angle Bisector ಎನ್ನುವ ಟೂಲನ್ನು ಮತ್ತೊಮ್ಮೆ ಆಯ್ಕೆಮಾಡೋಣ. |
| 05:39 | ಟೂಲ್-ಬಾರ್ ನಲ್ಲಿಯ Angle Bisector ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ, A, B, C ಬಿಂದುಗಳ ಮೇಲೆ ಕ್ಲಿಕ್ ಮಾಡಿ. |
| 05:48 | ಎರಡು ಕೋನ ದ್ವಿಭಾಜಕಗಳು, ಒಂದು ಬಿಂದುವಿನಲ್ಲಿ ಛೇದಿಸುವುದನ್ನು ನಾವು ನೋಡುತ್ತೇವೆ. |
| 05:52 | ಈ ಬಿಂದುವನ್ನು ನಾವು D ಎಂದು ಗುರುತಿಸೋಣ. |
| 05:55 | ಈಗ, D ಬಿಂದುವಿನ ಹಾಗೂ ಸೆಗ್ಮೆಂಟ್ AB ಯ ಮೂಲಕ ಹಾಯ್ದುಹೋಗುವ ಒಂದು ಲಂಬವಾದ ರೇಖೆಯನ್ನು ನಾವು ರಚಿಸೋಣ. |
| 06:02 | ಟೂಲ್-ಬಾರ್ ನಿಂದ Perpendicular Line ಎನ್ನುವ ಟೂಲನ್ನು ಆಯ್ಕೆಮಾಡಿ, ಈ ಟೂಲ್ನ ಮೇಲೆ ಕ್ಲಿಕ್ ಮಾಡಿ. D ಬಿಂದುವಿನ ಮೇಲೆ, ನಂತರ AB ಯ ಮೇಲೆ ಕ್ಲಿಕ್ ಮಾಡಿ. |
| 06:12 | ಲಂಬವಾದ ಗೆರೆಯು, ಸೆಗ್ಮೆಂಟ್ AB ಯನ್ನು ಒಂದು ಬಿಂದುವಿನಲ್ಲಿ ಛೇದಿಸುವುದನ್ನು ನಾವು ನೋಡುತ್ತೇವೆ. |
| 06:17 | ಈ ಬಿಂದುವನ್ನು ನಾವು E ಎಂದು ಗುರುತಿಸೋಣ. |
| 06:20 | D ಯನ್ನು ಕೇಂದ್ರಬಿಂದು ಮಾಡಿ, E ಯ ಮೂಲಕ ಹಾಯ್ದುಹೋಗುವ ಒಂದು ವರ್ತುಲವನ್ನು ಈಗ ನಾವು ರಚಿಸೋಣ. |
| 06:27 | ಟೂಲ್-ಬಾರ್ ನಿಂದ Compass ಎನ್ನುವ ಟೂಲನ್ನು ಆಯ್ಕೆಮಾಡೋಣ. Compass ಟೂಲ್ನ ಮೇಲೆ ಕ್ಲಿಕ್ ಮಾಡಿ, ಕೇಂದ್ರಬಿಂದುವೆಂದು D ಯ ಮೇಲೆ ಹಾಗೂ DE ಯನ್ನು ತ್ರಿಜ್ಯವೆಂದು ಕ್ಲಿಕ್ ಮಾಡಿ. |
| 06:37 | D ಬಿಂದುವಿನ ಮೇಲೆ, ನಂತರ E ಬಿಂದುವಿನ ಮೇಲೆ, ಆನಂತರ ಆಕೃತಿಯನ್ನು ಪೂರ್ತಿಗೊಳಿಸಲು ಮತ್ತೊಮ್ಮೆ D ಯ ಕ್ಲಿಕ್ ಮಾಡಿ. |
| 06:46 | ವರ್ತುಲವು, ತ್ರಿಕೋನದ ಎಲ್ಲ ಭುಜಗಳನ್ನು ಸ್ಪರ್ಶಿಸುತ್ತದೆ ಎನ್ನುವುದನ್ನು ನಾವು ನೋಡುತ್ತೇವೆ. |
| 06:50 | ಒಂದು ಇನ್-ಸರ್ಕಲ್ (ಅಂತರ್ವೃತ್ತ) ರಚಿತವಾಗಿದೆ. |
| 06:53 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬರುತ್ತೇವೆ. |
| 06:57 | ಸಂಕ್ಷಿಪ್ತವಾಗಿ, |
| 07:02 | ಈ ಟ್ಯುಟೋರಿಯಲ್ ನಲ್ಲಿ, ನಾವು ಜಿಯೊಜಿಬ್ರಾ ಟೂಲ್ಗಳನ್ನು ಬಳಸಿ |
| 07:05 | ‘ಸೈಕ್ಲಿಕ್ ಕ್ವಾಡ್ರಿಲ್ಯಾಟರಲ್’ ಮತ್ತು |
| 07:07 | ‘ಇನ್-ಸರ್ಕಲ್’ ಗಳನ್ನು ರಚಿಸಲು ಕಲಿತಿದ್ದೇವೆ. |
| 07:10 | ಒಂದು ಅಸೈನ್ಮೆಂಟ್ ಎಂದು, ತ್ರಿಕೋನ ABC ಯನ್ನು ರಚಿಸಿ. |
| 07:15 | AC ಯ ಮೇಲೆ D ಬಿಂದುವನ್ನು ಗುರುತಿಸಿ. BD ಯನ್ನು ಸೇರಿಸಿ. |
| 07:19 | ABC, ABD ಹಾಗೂ CBD ತ್ರಿಕೋನಗಳಿಂದ r, r1 ಹಾಗೂ r2 ತ್ರಿಜ್ಯಗಳನ್ನು ಹೊಂದಿರುವ ಇನ್-ಸರ್ಕಲ್ ಗಳನ್ನು ರಚಿಸಿ. |
| 07:28 | BE, ಎತ್ತರ 'h' ಆಗಿದೆ. |
| 07:30 | ಈ ಕೆಳಗಿನ ಸಂಬಂಧವನ್ನು ಪರೀಕ್ಷಿಸಲು, ABC ತ್ರಿಕೋನದ ವರ್ಟೈಸಿಸ್ (ಶೃಂಗಗಳನ್ನು) ಗಳನ್ನು ಜರುಗಿಸಿ. |
| 07:35 | (1 -2r1/h)*(1 - 2r2/h) = (1 -2r/h) |
| 07:43 | ಅಸೈನ್ಮೆಂಟ್ ನ ಔಟ್ಪುಟ್ ಹೀಗೆ ಕಾಣಿಸಬೇಕು. |
| 07:52 | ಈ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
| 07:55 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
| 07:57 | ನಿಮಗೆಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
| 08:02 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪದ ತಂಡವು:
‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
| 08:06 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
| 08:09 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
| 08:16 | “ ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ. |
| 08:19 | ಇದು ICT, MHRD ಮೂಲಕ ಭಾರತ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ ನ ಆಧಾರವನ್ನು ಪಡೆದಿದೆ. |
| 08:25 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. |
| 08:29 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ---------- .
ವಂದನೆಗಳು. |