Geogebra/C3/Relationship-between-Geometric-Figures/Kannada

From Script | Spoken-Tutorial
Jump to: navigation, search
Time Narration
00:00 ನಮಸ್ಕಾರ. Relationship between different Geometric Figures in Geogebra ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ನಿಮಗೆ ಜಿಯೊಜಿಬ್ರಾದೊಂದಿಗೆ ಕೆಲಸಮಾಡಿ ಅಭ್ಯಾಸವಿದೆ ಎಂದು ನಾವು ಭಾವಿಸುತ್ತೇವೆ.
00:11 ಇಲ್ಲದಿದ್ದರೆ, ಮುಂದುವರೆಯುವ ಮೊದಲು, ದಯವಿಟ್ಟು Introduction to Geogebra ಎನ್ನುವ ಟ್ಯುಟೋರಿಯಲ್ ಅನ್ನು ನೋಡಿ.
00:18 ನಿಜವಾದ ಕಂಪಾಸ್ ಪೆಟ್ಟಿಗೆಯ ಬದಲಾಗಿ ಈ ಟ್ಯುಟೋರಿಯಲ್ ಅನ್ನು ಬಳಸುವುದು, ಇದನ್ನು ಕಲಿಸುವ ಉದ್ದೇಶವಾಗಿಲ್ಲ ಎನ್ನುವುದನ್ನು ದಯವಿಟ್ಟು ಗಮನಿಸಿ.
00:24 ಗುಣಧರ್ಮಗಳನ್ನು ತಿಳಿದುಕೊಳ್ಳುವ ದೃಷ್ಟಿಯಿಂದ, ಜಿಯೊಜಿಬ್ರಾದಲ್ಲಿ ರಚನೆಗಳನ್ನು ಮಾಡಲಾಗುತ್ತದೆ.
00:29 ಈ ಟ್ಯುಟೋರಿಯಲ್ ನಲ್ಲಿ ನಾವು,
00:32 ‘ಸೈಕ್ಲಿಕ್ ಕ್ವಾಡ್ರಿಲ್ಯಾಟರಲ್’ ಮತ್ತು ‘ಇನ್-ಸರ್ಕಲ್’ಗಳನ್ನು ರಚಿಸಲು ಕಲಿಯುವೆವು.
00:35 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Linux operating system (ಲಿನಕ್ಸ್ ಆಪರೇಟಿಂಗ್ ಸಿಸ್ಟಂ)
00:39 Ubuntu Version 10.04 LTS (ಉಬಂಟು ವರ್ಷನ್ 10.04 LTS)
00:43 ಹಾಗೂ Geogebra Version 3.2.40.0. ( ಜಿಯೊಜಿಬ್ರಾ ವರ್ಷನ್ 3.2.40.0) ಗಳನ್ನು ಬಳಸುತ್ತಿದ್ದೇನೆ.
00:48 ರಚನೆಗಳಿಗಾಗಿ, ಈ ಕೆಳಗಿನ ಜಿಯೊಜಿಬ್ರಾ ಟೂಲ್ಗಳನ್ನು ನಾವು ಬಳಸುವೆವು.

Compass (ಕಂಪಾಸ್) Segment between Two Points (ಸೆಗ್ಮೆಂಟ್ ಬಿಟವೀನ್ ಟು ಪಾಯಿಂಟ್ಸ್) Circle with Center through Point (ಸರ್ಕಲ್ ವಿತ್ ಸೆಂಟರ್ ಥ್ರೂ ಪಾಯಿಂಟ್) Polygon (ಪಾಲಿಗಾನ್) Perpendicular Bisector (ಪರ್ಪೆಂಡಿಕ್ಯುಲರ್ ಬೈಸೆಕ್ಟರ್) Angle Bisector (ಆಂಗಲ್ ಬೈಸೆಕ್ಟರ್) Angle (ಆಂಗಲ್).

01:02 ನಾವು ಜಿಯೊಜಿಬ್ರಾ (Geogebra) ವಿಂಡೋ ಗೆ ಬದಲಾಯಿಸೋಣ.
01:05 ಇದನ್ನು ಮಾಡಲು, ನಾವು ಕ್ರಮವಾಗಿ Applications, Education ಮತ್ತು Geogebra ಗಳ ಮೇಲೆ ಕ್ಲಿಕ್ ಮಾಡೋಣ.
01:13 ನಾನು ಈ ವಿಂಡೋವನ್ನು ರಿ-ಸೈಜ್ ಮಾಡುತ್ತೇನೆ.
01:18 ಆಕೃತಿಯನ್ನು ಸ್ಪಷ್ಟಗೊಳಿಸಲು, ಕ್ರಮವಾಗಿ Options ಮೆನು, Font Size, ನಂತರ 18 point ಗಳ ಮೇಲೆ ಕ್ಲಿಕ್ ಮಾಡಿ.
01:25 ನಾವು ಒಂದು ‘ಸೈಕ್ಲಿಕ್ ಕ್ವಾಡ್ರಿಲ್ಯಾಟರಲ್’ಅನ್ನು ರಚಿಸೋಣ.
01:27 ಇದನ್ನು ಮಾಡಲು, ಟೂಲ್-ಬಾರ್ ನಿಂದ Regular Polygon ಎನ್ನುವ ಟೂಲನ್ನು ಆಯ್ಕೆಮಾಡೋಣ. Regular Polygon ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಯಾವುದೇ ಎರಡು ಬಿಂದುಗಳ ಮೇಲೆ ಕ್ಲಿಕ್ ಮಾಡಿ.
01:38 ಡೀಫಾಲ್ಟ್ ವ್ಯಾಲ್ಯೂ 4 ನೊಂದಿಗೆ, ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುವುದನ್ನು ನಾವು ನೋಡುತ್ತೇವೆ.
01:42 OK ಯ ಮೇಲೆ ಕ್ಲಿಕ್ ಮಾಡಿ. ABCD ಎನ್ನುವ ಚೌಕೋನವು ರಚಿಸಲ್ಪಟ್ಟಿದೆ.
01:46 ಎಡಮೂಲೆಯಲ್ಲಿರುವ Move ಟೂಲನ್ನು ಬಳಸಿ, ನಾವು ಚೌಕೋನವನ್ನು ಸ್ವಲ್ಪ ಓರೆಯಾಗಿಸೋಣ.
01:51 ಟೂಲ್-ಬಾರ್ ನಿಂದ Move ಎನ್ನುವ ಟೂಲನ್ನು ಆಯ್ಕೆಮಾಡಿ, Move ಟೂಲ್ನ ಮೇಲೆ ಕ್ಲಿಕ್ ಮಾಡಿ.
01:56 ಮೌಸ್ ಪಾಯಿಂಟರ್ ಅನ್ನು A ಅಥವಾ B ಯ ಮೇಲೆ ಇರಿಸಿ. ನಾನು B ಯನ್ನು ಆರಿಸಿಕೊಳ್ಳುವೆನು.
02:01 ಮೌಸ್ ಪಾಯಿಂಟರ್ ಅನ್ನು B ಯ ಮೇಲೆ ಇರಿಸಿ ಹಾಗೂ ಅದನ್ನು ಮೌಸ್ ನೊಂದಿಗೆ ಎಳೆಯಿರಿ. ಚೌಕೋನವು ಈಗ ಓರೆಯಾಗಿದೆ ಎನ್ನುವುದನ್ನು ನಾವು ನೋಡುತ್ತೇವೆ.
02:10 ನಾವು, ಸೆಗ್ಮೆಂಟ್AB ಗೆ ಒಂದು ಲಂಬವಾದ ದ್ವಿಭಾಜಕವನ್ನು (perpendicular bisector) ರಚಿಸೋಣ.
02:15 ಇದನ್ನು ಮಾಡಲು, ಟೂಲ್-ಬಾರ್ ನಿಂದ ನಾವು Perpendicular Bisector ಎನ್ನುವ ಟೂಲನ್ನು ಆಯ್ಕೆಮಾಡೋಣ.
02:20 Perpendicular Bisector ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
02:22 A ಬಿಂದುವಿನ ಮೇಲೆ ಕ್ಲಿಕ್ ಮಾಡಿ.
02:24 ನಂತರ, B ಬಿಂದುವಿನ ಮೇಲೆ ಕ್ಲಿಕ್ ಮಾಡಿ.
02:26 ಒಂದು ಲಂಬವಾದ ದ್ವಿಭಾಜಕವನ್ನು ಎಳೆಯಲಾಗಿದೆ ಎಂದು ನಾವು ನೋಡುತ್ತೇವೆ.
02:30 ಎರಡನೆಯ ಲಂಬವಾದ ದ್ವಿಭಾಜಕವನ್ನು (perpendicular bisector) ನಾವು ಸೆಗ್ಮೆಂಟ್ BC ಗೆ ರಚಿಸೋಣ. ಇದನ್ನು ಮಾಡಲು,
02:36 ಟೂಲ್-ಬಾರ್ ನಿಂದ Perpendicular Bisector ಎನ್ನುವ ಟೂಲನ್ನು ಆಯ್ಕೆಮಾಡಿ. Perpendicular Bisector ಟೂಲ್ನ ಮೇಲೆ ಕ್ಲಿಕ್ ಮಾಡಿ.
02:42 B ಬಿಂದುವಿನ ಮೇಲೆ ಕ್ಲಿಕ್ ಮಾಡಿ.
02:44 ನಂತರ C ಬಿಂದುವಿನ ಮೇಲೆ ಕ್ಲಿಕ್ ಮಾಡಿ.
02:46 ಲಂಬವಾದ ದ್ವಿಭಾಜಕಗಳು ಒಂದು ಬಿಂದುವಿನಲ್ಲಿ ಛೇದಿಸುವುದನ್ನು ನಾವು ನೋಡುತ್ತೇವೆ.
02:50 ಈ ಬಿಂದುವನ್ನು ನಾವು E ಎಂದು ಗುರುತಿಸೋಣ.
02:54 E ಕೇಂದ್ರಬಿಂದು ಇರುವ ಹಾಗೂ C ಯ ಮೂಲಕ ಹಾಯ್ದುಹೋಗುವ ಒಂದು ವರ್ತುಲವನ್ನು ಈಗ ನಾವು ರಚಿಸೋಣ.
03:01 ಟೂಲ್-ಬಾರ್ ನಿಂದ Circle with Centre through Point ಎನ್ನುವ ಟೂಲನ್ನು ಆಯ್ಕೆಮಾಡೋಣ. Circle with Centre through Point ಟೂಲ್ನ ಮೇಲೆ ಕ್ಲಿಕ್ ಮಾಡಿ.
03:09 E ಯನ್ನು ಕೇಂದ್ರಬಿಂದು ಇರುವಂತೆ ಕ್ಲಿಕ್ ಮಾಡಿ. ಈ ವರ್ತುಲವು C ಯ ಮೂಲಕ ಹಾಯ್ದುಹೋಗುತ್ತದೆ. E ಬಿಂದುವಿನ ಮೇಲೆ, ನಂತರ C ಯ ಮೇಲೆ ಕ್ಲಿಕ್ ಮಾಡಿ.
03:18 ವರ್ತುಲವು, ಚತುರ್ಭುಜದ ಎಲ್ಲ ವರ್ಟೈಸಿಸ್ ಗಳ ಮೂಲಕ ಹಾಯ್ದುಹೋಗುವುದನ್ನು ನಾವು ನೋಡುತ್ತೇವೆ. ಒಂದು ‘ಸೈಕ್ಲಿಕ್ ಕ್ವಾಡ್ರಿಲ್ಯಾಟರಲ್’, ರಚಿತವಾಗಿದೆ.
03:29 ಒಂದೇ ಅನುಕ್ರಮದಲ್ಲಿ ಭುಜಗಳ ಉದ್ದವನ್ನು ಹೊಂದಿರುವ ಎಲ್ಲ ಚತುರ್ಭುಜಗಳಲ್ಲಿ, ಸೈಕ್ಲಿಕ್ ಕ್ವಾಡ್ರಿಲ್ಯಾಟರಲ್, ಗರಿಷ್ಠ ವಿಸ್ತೀರ್ಣವನ್ನು ಹೊಂದಿದೆ ಎಂದು ನಿಮಗೆ ಗೊತ್ತಿದೆಯೇ?
03:37 ಈ ಆಕೃತಿಯನ್ನು ‘ಅನಿಮೇಟ್’ ಮಾಡಲು, ನಾವು Move ಟೂಲ್ ಅನ್ನು ಬಳಸೋಣ.
03:42 ಇದನ್ನು ಮಾಡಲು, ಟೂಲ್-ಬಾರ್ ನಿಂದ Move ಎನ್ನುವ ಟೂಲನ್ನು ಆಯ್ಕೆಮಾಡೋಣ. Move ಟೂಲ್ನ ಮೇಲೆ ಕ್ಲಿಕ್ ಮಾಡಿ. ಮೌಸ್ ಪಾಯಿಂಟರ್ ಅನ್ನು A ಅಥವಾ B ಯ ಮೇಲೆ ಇರಿಸಿ. ನಾನು A ಅನ್ನು ಆರಿಸಿಕೊಳ್ಳುವೆನು.
03:52 ಅನಿಮೇಟ್ ಮಾಡಲು,
03:58 ರಚನೆಯು ಸರಿಯಾಗಿದೆ ಎಂದು ಪರಿಶೀಲಿಸಲು, ಮೌಸ್ ಪಾಯಿಂಟರ್ ಅನ್ನು A ದ ಮೇಲೆ ಇರಿಸಿ ಹಾಗೂ ಅದನ್ನು ಮೌಸ್ ನೊಂದಿಗೆ ಎಳೆಯಿರಿ.
04:01 ಈಗ ನಾವು ಫೈಲನ್ನು ಸೇವ್ ಮಾಡೋಣ.
04:04 ಕ್ರಮವಾಗಿ File >> Save As ಗಳ ಮೇಲೆ ಕ್ಲಿಕ್ ಮಾಡಿ.
04:07 ನಾನು ಫೈಲ್ ನ ಹೆಸರನ್ನು cyclic_quadrilateral (ಸೈಕ್ಲಿಕ್ ಕ್ವಾಡ್ರಿಲ್ಯಾಟರಲ್) ಎಂದು ಟೈಪ್ ಮಾಡಿ,
04:21 Save ನ ಮೇಲೆ ಕ್ಲಿಕ್ ಮಾಡುವೆನು.
04:23 ಒಂದು ‘ಇನ್-ಸರ್ಕಲ್’ ಅನ್ನು ರಚಿಸಲು ನಾವು ಒಂದು ಹೊಸ ‘ಜಿಯೊಜಿಬ್ರಾ ವಿಂಡೋ’ವನ್ನು ತೆರೆಯೋಣ.
04:28 ಇದನ್ನು ಮಾಡಲು, ನಾವು ಕ್ರಮವಾಗಿ File >> New ಗಳನ್ನು ಆಯ್ಕೆಮಾಡೋಣ.
04:35 ಈಗ ನಾವು ಒಂದು ತ್ರಿಕೋನವನ್ನು ರಚಿಸೋಣ. ಇದನ್ನು ಮಾಡಲು, ಟೂಲ್-ಬಾರ್ ನಿಂದ Polygon ಎನ್ನುವ ಟೂಲನ್ನು ನಾವು ಆಯ್ಕೆಮಾಡೋಣ. Polygon ಟೂಲ್ನ ಮೇಲೆ ಕ್ಲಿಕ್ ಮಾಡಿ.
04:44 ತ್ರಿಕೋನಾಕೃತಿಯನ್ನು ಪೂರ್ಣಗೊಳಿಸಲು, A, B, C ಬಿಂದುಗಳ ಮೇಲೆ ಹಾಗೂ A ದ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ.
04:52 ಈ ತ್ರಿಕೋನದ ಕೋನಗಳನ್ನು ಅಳೆಯೋಣ.
04:55 ಇದನ್ನು ಮಾಡಲು, ಟೂಲ್-ಬಾರ್ ನಿಂದ Angle ಎನ್ನುವ ಟೂಲನ್ನು ಆಯ್ಕೆಮಾಡೋಣ. Angle ಟೂಲ್ನ ಮೇಲೆ ಕ್ಲಿಕ್ ಮಾಡಿ.
05:00 B, A, C ; C, B, A ಮತ್ತು A, C, B ಗಳ ಮೇಲೆ ಕ್ಲಿಕ್ ಮಾಡಿ.
05:15 ಕೋನಗಳನ್ನು ಅಳೆಯಲಾಗಿದೆ ಎಂದು ನಾವು ನೋಡುತ್ತೇವೆ.
05:18 ಈಗ ಈ ಕೋನಗಳಿಗೆ, ನಾವು ಕೋನ ದ್ವಿಭಾಜಕಗಳನ್ನು ರಚಿಸೋಣ.
05:21 ಟೂಲ್-ಬಾರ್ ನಿಂದ Angle Bisector ಎನ್ನುವ ಟೂಲನ್ನು ಆಯ್ಕೆಮಾಡಿ,
05:25 Angle Bisector ಟೂಲ್ನ ಮೇಲೆ ಕ್ಲಿಕ್ ಮಾಡಿ. B, A, C ಬಿಂದುಗಳ ಮೇಲೆ ಕ್ಲಿಕ್ ಮಾಡಿ.
05:32 ಎರಡನೆಯ ಕೋನ ದ್ವಿಭಾಜಕವನ್ನು ರಚಿಸಲು, ಟೂಲ್-ಬಾರ್ ನಿಂದ Angle Bisector ಎನ್ನುವ ಟೂಲನ್ನು ಮತ್ತೊಮ್ಮೆ ಆಯ್ಕೆಮಾಡೋಣ.
05:39 ಟೂಲ್-ಬಾರ್ ನಲ್ಲಿಯ Angle Bisector ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ, A, B, C ಬಿಂದುಗಳ ಮೇಲೆ ಕ್ಲಿಕ್ ಮಾಡಿ.
05:48 ಎರಡು ಕೋನ ದ್ವಿಭಾಜಕಗಳು, ಒಂದು ಬಿಂದುವಿನಲ್ಲಿ ಛೇದಿಸುವುದನ್ನು ನಾವು ನೋಡುತ್ತೇವೆ.
05:52 ಈ ಬಿಂದುವನ್ನು ನಾವು D ಎಂದು ಗುರುತಿಸೋಣ.
05:55 ಈಗ, D ಬಿಂದುವಿನ ಹಾಗೂ ಸೆಗ್ಮೆಂಟ್ AB ಯ ಮೂಲಕ ಹಾಯ್ದುಹೋಗುವ ಒಂದು ಲಂಬವಾದ ರೇಖೆಯನ್ನು ನಾವು ರಚಿಸೋಣ.
06:02 ಟೂಲ್-ಬಾರ್ ನಿಂದ Perpendicular Line ಎನ್ನುವ ಟೂಲನ್ನು ಆಯ್ಕೆಮಾಡಿ, ಈ ಟೂಲ್ನ ಮೇಲೆ ಕ್ಲಿಕ್ ಮಾಡಿ. D ಬಿಂದುವಿನ ಮೇಲೆ, ನಂತರ AB ಯ ಮೇಲೆ ಕ್ಲಿಕ್ ಮಾಡಿ.
06:12 ಲಂಬವಾದ ಗೆರೆಯು, ಸೆಗ್ಮೆಂಟ್ AB ಯನ್ನು ಒಂದು ಬಿಂದುವಿನಲ್ಲಿ ಛೇದಿಸುವುದನ್ನು ನಾವು ನೋಡುತ್ತೇವೆ.
06:17 ಈ ಬಿಂದುವನ್ನು ನಾವು E ಎಂದು ಗುರುತಿಸೋಣ.
06:20 D ಯನ್ನು ಕೇಂದ್ರಬಿಂದು ಮಾಡಿ, E ಯ ಮೂಲಕ ಹಾಯ್ದುಹೋಗುವ ಒಂದು ವರ್ತುಲವನ್ನು ಈಗ ನಾವು ರಚಿಸೋಣ.
06:27 ಟೂಲ್-ಬಾರ್ ನಿಂದ Compass ಎನ್ನುವ ಟೂಲನ್ನು ಆಯ್ಕೆಮಾಡೋಣ. Compass ಟೂಲ್ನ ಮೇಲೆ ಕ್ಲಿಕ್ ಮಾಡಿ, ಕೇಂದ್ರಬಿಂದುವೆಂದು D ಯ ಮೇಲೆ ಹಾಗೂ DE ಯನ್ನು ತ್ರಿಜ್ಯವೆಂದು ಕ್ಲಿಕ್ ಮಾಡಿ.
06:37 D ಬಿಂದುವಿನ ಮೇಲೆ, ನಂತರ E ಬಿಂದುವಿನ ಮೇಲೆ, ಆನಂತರ ಆಕೃತಿಯನ್ನು ಪೂರ್ತಿಗೊಳಿಸಲು ಮತ್ತೊಮ್ಮೆ D ಯ ಕ್ಲಿಕ್ ಮಾಡಿ.
06:46 ವರ್ತುಲವು, ತ್ರಿಕೋನದ ಎಲ್ಲ ಭುಜಗಳನ್ನು ಸ್ಪರ್ಶಿಸುತ್ತದೆ ಎನ್ನುವುದನ್ನು ನಾವು ನೋಡುತ್ತೇವೆ.
06:50 ಒಂದು ಇನ್-ಸರ್ಕಲ್ (ಅಂತರ್ವೃತ್ತ) ರಚಿತವಾಗಿದೆ.
06:53 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬರುತ್ತೇವೆ.
06:57 ಸಂಕ್ಷಿಪ್ತವಾಗಿ,
07:02 ಈ ಟ್ಯುಟೋರಿಯಲ್ ನಲ್ಲಿ, ನಾವು ಜಿಯೊಜಿಬ್ರಾ ಟೂಲ್ಗಳನ್ನು ಬಳಸಿ
07:05 ‘ಸೈಕ್ಲಿಕ್ ಕ್ವಾಡ್ರಿಲ್ಯಾಟರಲ್’ ಮತ್ತು
07:07 ‘ಇನ್-ಸರ್ಕಲ್’ ಗಳನ್ನು ರಚಿಸಲು ಕಲಿತಿದ್ದೇವೆ.
07:10 ಒಂದು ಅಸೈನ್ಮೆಂಟ್ ಎಂದು, ತ್ರಿಕೋನ ABC ಯನ್ನು ರಚಿಸಿ.
07:15 AC ಯ ಮೇಲೆ D ಬಿಂದುವನ್ನು ಗುರುತಿಸಿ. BD ಯನ್ನು ಸೇರಿಸಿ.
07:19 ABC, ABD ಹಾಗೂ CBD ತ್ರಿಕೋನಗಳಿಂದ r, r1 ಹಾಗೂ r2 ತ್ರಿಜ್ಯಗಳನ್ನು ಹೊಂದಿರುವ ಇನ್-ಸರ್ಕಲ್ ಗಳನ್ನು ರಚಿಸಿ.
07:28 BE, ಎತ್ತರ 'h' ಆಗಿದೆ.
07:30 ಈ ಕೆಳಗಿನ ಸಂಬಂಧವನ್ನು ಪರೀಕ್ಷಿಸಲು, ABC ತ್ರಿಕೋನದ ವರ್ಟೈಸಿಸ್ (ಶೃಂಗಗಳನ್ನು) ಗಳನ್ನು ಜರುಗಿಸಿ.
07:35 (1 -2r1/h)*(1 - 2r2/h) = (1 -2r/h)
07:43 ಅಸೈನ್ಮೆಂಟ್ ನ ಔಟ್ಪುಟ್ ಹೀಗೆ ಕಾಣಿಸಬೇಕು.
07:52 ಈ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
07:55 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
07:57 ನಿಮಗೆಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:02 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪದ ತಂಡವು:

‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.

08:06 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:09 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
08:16 “ ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ.
08:19 ಇದು ICT, MHRD ಮೂಲಕ ಭಾರತ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ ನ ಆಧಾರವನ್ನು ಪಡೆದಿದೆ.
08:25 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.
08:29 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ---------- .

ವಂದನೆಗಳು.

Contributors and Content Editors

PoojaMoolya, Pratik kamble, Sandhya.np14