Ruby/C2/Logical-and-other-Operators/Kannada
From Script | Spoken-Tutorial
Revision as of 22:21, 18 December 2015 by Sandhya.np14 (Talk | contribs)
Time | Narration |
00:02 | Logical & Other Operators ಎಂಬ Spoken Tutorialಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:09 | * 'ಲಾಜಿಕಲ್ ಆಪರೇಟರ್ಸ್' (Logical Operators) |
00:11 | * 'ಪ್ಯಾರಲಲ್ ಅಸೈನ್ಮೆಂಟ್' (Parallel assignment)ಮತ್ತು |
00:13 | * 'ರೇಂಜ್ ಆಪರೇಟರ್ಸ್' (Range Operators) ಇವುಗಳನ್ನು ಕಲಿಯುವೆವು. |
00:15 | ಇಲ್ಲಿ ನಾವು: |
00:17 | * Ubuntu Linux ಆವೃತ್ತಿ 12.04 |
00:20 | * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ. |
00:23 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ‘ಟೆಕ್ಸ್ಟ್ ಎಡಿಟರ್’ಗಳನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು. |
00:29 | ನೀವು 'irb'ಯನ್ನು ಸಹ ತಿಳಿದಿರಬೇಕು. |
00:33 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. |
00:38 | 'ಲಾಜಿಕಲ್ ಆಪರೇಟರ್'ಗಳನ್ನು 'ಬೂಲಿಯನ್ ಆಪರೇಟರ್ಸ್'(Boolean operators) ಎಂದು ಸಹ ಕರೆಯಲಾಗುತ್ತದೆ. |
00:42 | ಏಕೆಂದರೆ ಇವು ಒಂದು ಎಕ್ಸ್ಪ್ರೆಶನ್ ನ ಭಾಗಗಳನ್ನು ಪರಿಶೀಲಿಸುತ್ತವೆ |
00:45 | ಮತ್ತು 'true' ಅಥವಾ 'false' ವ್ಯಾಲ್ಯೂಅನ್ನು ಹಿಂತಿರುಗಿಸುತ್ತವೆ (return). |
00:48 | 'ಲಾಜಿಕಲ್ ಆಪರೇಟರ್ ಗಳು'- |
00:51 | * ಜೋಡಿ 'ಆಂಪರ್ಸಂಡ್'ಗಳು (&&) ಅರ್ಥಾತ್ 'AND' |
00:54 | * ಜೋಡಿ 'ಪೈಪ್'ಗಳು ಅರ್ಥಾತ್ 'OR' |
00:56 | * ಉದ್ಗಾರವಾಚಕ ಚಿಹ್ನೆ (!) ಅರ್ಥಾತ್ 'NOT' |
01:00 | * '&&' (ಜೋಡಿ 'ಆಂಪರ್ಸಂಡ್'ಗಳು) ಮತ್ತು 'AND', ಎರಡೂ ಎಕ್ಸ್ಪ್ರೆಶನ್ ಗಳು 'true' ಇದ್ದರೆ ಮಾತ್ರ 'true' ಎಂದು ಮೌಲ್ಯೀಕರಿಸುತ್ತವೆ. |
01:07 | ಮೊದಲನೆಯ ಎಕ್ಸ್ಪ್ರೆಶನ್ 'true' ಎಂದು ಇದ್ದರೆ ಮಾತ್ರ ಎರಡನೆಯದನ್ನು ಪರೀಕ್ಷಿಸಲಾಗುತ್ತದೆ. |
01:12 | ಎರಡೂ ರೀತಿಗಳಲ್ಲಿಯ ವ್ಯತ್ಯಾಸವೆಂದರೆ ಅವುಗಳಿಗೆ ಇರುವ ಆದ್ಯತೆ. |
01:15 | ಸಾಂಕೇತಿಕ 'AND' ಅರ್ಥಾತ್ '&&(ಜೋಡಿ 'ಆಂಪರ್ಸಂಡ್'ಗಳು)' ಹೆಚ್ಚಿನ ಆದ್ಯತೆಯನ್ನು ಹೊಂದಿದೆ. |
01:20 | ಈಗ ನಾವು ಕೆಲವು ಉದಾಹರಣೆಗಳನ್ನು ನೋಡೋಣ. |
01:22 | ಇದಕ್ಕಾಗಿ ನಾವು 'irb'ಯನ್ನು ಬಳಸುವೆವು. |
01:25 | 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ. |
01:31 | 'ಇಂಟರ್ಯಾಕ್ಟಿವ್ ರೂಬಿ'ಯನ್ನು (interactive Ruby) ಲಾಂಚ್ ಮಾಡಲು, "irb" ಎಂದು ಟೈಪ್ ಮಾಡಿ ಮತ್ತು 'Enter'ಅನ್ನು ಒತ್ತಿ. |
01:36 | ಹೀಗೆ ಟೈಪ್ ಮಾಡಿ: '3 greater than 2 space double ampersand space 4 less than 5'. |
01:47 | 'Enter'ಅನ್ನು ಒತ್ತಿ. |
01:49 | ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ. |
01:53 | ಇಲ್ಲಿ, ಎಕ್ಸ್ಪ್ರೆಶನ್ 1 ಅರ್ಥಾತ್ 3>2 'true' ಆಗಿದೆ. |
01:59 | ಎಕ್ಸ್ಪ್ರೆಶನ್ 2 ಅರ್ಥಾತ್ 4<5 ಸಹ 'true' ಆಗಿದೆ. |
02:03 | ಎರಡೂ ಎಕ್ಸ್ಪ್ರೆಶನ್ ಗಳು 'true' ಆಗಿರುವುದರಿಂದ, ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ. |
02:08 | ಈಗ, ಹಿಂದಿನ ಕಮಾಂಡನ್ನು ಪಡೆಯಲು ಅಪ್-ಆರೋ (Up-Arrow) ಕೀಯನ್ನು ಒತ್ತಿ. |
02:12 | ಮತ್ತು ಜೋಡಿ 'ಆಂಪರ್ಸಂಡ್'ಗಳ ಚಿಹ್ನೆಯನ್ನು "AND" ಶಬ್ದದಿಂದ ಬದಲಾಯಿಸಿ. |
02:17 | 'Enter'ಅನ್ನು ಒತ್ತಿ. |
02:19 | ನಮಗೆ ಅದೇ ಫಲಿತಾಂಶವು ಸಿಗುತ್ತದೆ. |
02:22 | ಈಗ, ಹಿಂದಿನ ಕಮಾಂಡನ್ನು ಪಡೆಯಲು ಅಪ್-ಆರೋ (Up-Arrow) ಕೀಯನ್ನು ಇನ್ನೊಮ್ಮೆ ಒತ್ತಿ. |
02:27 | ಎಕ್ಸ್ಪ್ರೆಶನ್ 1 ನಲ್ಲಿ, 'ಗ್ರೇಟರ್-ದ್ಯಾನ್' ಚಿಹ್ನೆಯನ್ನು (>) 'ಲೆಸ್-ದ್ಯಾನ್' ಚಿಹ್ನೆಯಿಂದ (<) ಬದಲಾಯಿಸಿ. |
02:32 | 'Enter'ಅನ್ನು ಒತ್ತಿ. |
02:35 | ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ. |
02:38 | ಏಕೆಂದರೆ 3 < 2 'false' ಆಗಿದೆ. |
02:43 | ಮೊದಲನೆಯ ಎಕ್ಸ್ಪ್ರೆಶನ್ 'false' ಆಗಿರುವುದರಿಂದ, ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುವುದಿಲ್ಲ. |
02:49 | ಹೀಗಾಗಿ, ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ. |
02:53 | 'ಜೋಡಿ 'ಪೈಪ್'ಗಳು' ಮತ್ತು 'OR', ಎರಡರಲ್ಲಿ ಒಂದು ಎಕ್ಸ್ಪ್ರೆಶನ್ 'true' ಇದ್ದರೂ 'true' ಅನ್ನು ಹಿಂದಿರುಗಿಸುತ್ತವೆ. |
02:59 | ಮೊದಲನೆಯ ಎಕ್ಸ್ಪ್ರೆಶನ್ 'false' ಆಗಿದ್ದರೆ ಮಾತ್ರ ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುತ್ತದೆ. |
03:04 | ಎರಡೂ ರೀತಿಗಳಲ್ಲಿಯ ವ್ಯತ್ಯಾಸವೆಂದರೆ ಅವುಗಳಿಗೆ ಇರುವ ಆದ್ಯತೆ ಆಗಿದೆ. |
03:07 | ಸಾಂಕೇತಿಕ 'OR' ಅರ್ಥಾತ್ 'ಡಬಲ್ ಪೈಪ್', ಹೆಚ್ಚಿನ 'ಪ್ರಿಸಿಡೆನ್ಸ್'( ಆದ್ಯತೆ) ಅನ್ನು ಪಡೆದಿದೆ. |
03:11 | ಈಗ, ನಾವು ಕೆಲವು ಉದಾಹರಣೆಗಳನ್ನು ಪ್ರಯತ್ನಿಸೋಣ. |
03:15 | ಹೀಗೆ ಟೈಪ್ ಮಾಡಿ: '10 greater than 6 space double pipe space 12 less than 7' |
03:23 | 'Enter'ಅನ್ನು ಒತ್ತಿ. |
03:26 | ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ. |
03:29 | ಇಲ್ಲಿ, 'ಎಕ್ಸ್ಪ್ರೆಶನ್ 1' ಅರ್ಥಾತ್ 10>6 'true' ಆಗಿದೆ. |
03:35 | ಮೊದಲನೆಯ ಎಕ್ಸ್ಪ್ರೆಶನ್ 'true' ಆಗಿರುವುದರಿಂದ, ಎರಡನೆಯ ಎಕ್ಸ್ಪ್ರೆಶನ್ ಅನ್ನು ಪರಿಶೀಲಿಸಲಾಗುವುದಿಲ್ಲ. |
03:40 | ಹೀಗಾಗಿ, ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ. |
03:42 | ಈಗ, ಹಿಂದಿನ ಕಮಾಂಡನ್ನು ಪಡೆಯಲು ಅಪ್-ಆರೋ (Up-Arrow) ಕೀಯನ್ನು ಒತ್ತಿ. |
03:46 | 'ಎಕ್ಸ್ಪ್ರೆಶನ್ 1'ನಲ್ಲಿ, 'ಗ್ರೇಟರ್-ದ್ಯಾನ್' ಚಿಹ್ನೆಯನ್ನು (>) 'ಲೆಸ್-ದ್ಯಾನ್' ಚಿಹ್ನೆಯಿಂದ (<) ಬದಲಾಯಿಸಿ |
03:52 | ಮತ್ತು 'ಪೈಪ್' ಚಿಹ್ನೆಯನ್ನು 'OR' ಶಬ್ದದಿಂದ ಬದಲಾಯಿಸಿ. |
03:57 | 'Enter'ಅನ್ನು ಒತ್ತಿ. |
04:00 | ಇಲ್ಲಿ, 'ಎಕ್ಸ್ಪ್ರೆಶನ್ 1' ಅರ್ಥಾತ್ 10<6 'false' ಆಗಿದೆ. |
04:05 | 'ಎಕ್ಸ್ಪ್ರೆಶನ್ 2' ಅರ್ಥಾತ್ 12<7 ಸಹ 'false' ಆಗಿದೆ. |
04:10 | ಎರಡೂ ಎಕ್ಸ್ಪ್ರೆಶನ್ ಗಳು 'false' ಆಗಿರುವುದರಿಂದ, ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ. |
04:15 | '!' (ಉದ್ಗಾರವಾಚಕ ಚಿಹ್ನೆ ) ಮತ್ತು 'NOT' ಆಪರೇಟರ್'ಗಳು ಎಕ್ಸ್ಪ್ರೆಶನ್ ನ ವಿರುದ್ಧವಾದ ವ್ಯಾಲ್ಯೂಅನ್ನು ಹಿಂದಿರುಗಿಸುತ್ತವೆ (return). |
04:20 | ಒಂದುವೇಳೆ ಎಕ್ಸ್ಪ್ರೆಶನ್ 'true' ಎಂದು ಆಗಿದ್ದರೆ, '!' (ಉದ್ಗಾರವಾಚಕ ಚಿಹ್ನೆ ) ಆಪರೇಟರ್ 'false' ಎಂಬ ವ್ಯಾಲ್ಯೂಅನ್ನು 'ರಿಟರ್ನ್' ಮಾಡುವುದು. |
04:27 | ಎಕ್ಸ್ಪ್ರೆಶನ್ 'false' ಎಂದು ಆಗಿದ್ದರೆ, ಅದು 'true' ಎಂದು 'ರಿಟರ್ನ್' ಮಾಡುವುದು. |
04:30 | 'ಪ್ರಿಸಿಡೆನ್ಸ್' (ಆದ್ಯತೆ), ಎರಡೂ ರೀತಿಗಳಲ್ಲಿಯ ವ್ಯತ್ಯಾಸ ಆಗಿದೆ. |
04:33 | ಸಾಂಕೇತಿಕ "NOT" ಅರ್ಥಾತ್ (!), ಹೆಚ್ಚಿನ 'ಪ್ರಿಸಿಡೆನ್ಸ್'ಅನ್ನು ಹೊಂದಿದೆ. |
04:37 | ನಾವು "NOT" ಆಪರೇಟರ್ ಅನ್ನು ಪ್ರಯತ್ನಿಸೋಣ. |
04:40 | ಮೊದಲು, ಹೀಗೆ ಟೈಪ್ ಮಾಡಿ: '10 double equal to 10' |
04:45 | 'Enter'ಅನ್ನು ಒತ್ತಿ. |
04:47 | ನಾವು ಔಟ್ಪುಟ್ ಅನ್ನು 'true' ಎಂದು ಪಡೆಯುತ್ತೇವೆ. |
04:50 | ಮೇಲಿನ ಎಕ್ಸ್ಪ್ರೆಶನ್ ನ ಫಲಿತಾಂಶವನ್ನು 'ಇನ್ವರ್ಟ್' ಮಾಡಲು, |
04:53 | ನಾವು ಎಕ್ಸ್ಪ್ರೆಶನ್ ನ ಮೊದಲು "NOT" ಆಪರೇಟರ್ ಅನ್ನು ಸೇರಿಸೋಣ. |
04:57 | ಹೀಗೆ ಟೈಪ್ ಮಾಡಿ: '!' (ಉದ್ಗಾರವಾಚಕ ಚಿಹ್ನೆ ) ಬ್ರಾಕೆಟ್ಸ್ ನಲ್ಲಿ '10 ಡಬಲ್ ಇಕ್ವಲ್ ಟು 10 '. |
05:04 | 'Enter'ಅನ್ನು ಒತ್ತಿ. |
05:06 | ನಾವು ಔಟ್ಪುಟ್ ಅನ್ನು 'false' ಎಂದು ಪಡೆಯುತ್ತೇವೆ. |
05:10 | 'irb' ಕನ್ಸೋಲ್ ಅನ್ನು ತೆರವುಮಾಡಲು, 'Ctrl+L'ಅನ್ನು ಒಟ್ಟಿಗೇ ಒತ್ತಿ. |
05:15 | ಆಮೇಲೆ, ನಾವು 'ಪ್ಯಾರಲಲ್ ಅಸೈನ್ಮೆಂಟ್' (parallel assignment) ಎಂಬುದರ ಬಗ್ಗೆ ತಿಳಿಯೋಣ. |
05:20 | 'ಪ್ಯಾರಲಲ್ ಅಸೈನ್ಮೆಂಟ್'ನ ಮೂಲಕ, ರೂಬಿ ಕೋಡ್ ನ ಒಂದೇ ಪಂಕ್ತಿಯಲ್ಲಿ, ಅನೇಕ ವೇರಿಯೆಬಲ್ ಗಳನ್ನು ಇನಿಶಿಯಲೈಸ್ ಮಾಡಬಹುದು. |
05:26 | ನಾವು ಟರ್ಮಿನಲ್ ಗೆ ಬದಲಾಯಿಸೋಣ. |
05:29 | ನಾವು 'ಪ್ಯಾರಲಲ್ ಅಸೈನ್ಮೆಂಟ್'ಅನ್ನು ಬಳಸಿ 'a, b, c' ಎಂಬ ಮೂರು ವೇರಿಯೆಬಲ್ ಗಳನ್ನು ಡಿಕ್ಲೇರ್ ಮಾಡೋಣ. |
05:36 | ಹೀಗೆ ಟೈಪ್ ಮಾಡಿ: 'a comma b comma c equal to 10 comma 20 comma 30' |
05:45 | ಮತ್ತು 'Enter'ಅನ್ನು ಒತ್ತಿ. |
05:47 | ಇಲ್ಲಿ, 'ವೇರಿಯೆಬಲ್ a'ಗೆ 10 (ಹತ್ತು)ಅನ್ನು ಅಸೈನ್ ಮಾಡಲಾಗುವುದು. |
05:52 | 'ವೇರಿಯೆಬಲ್ b'ಗೆ 20 (ಇಪ್ಪತ್ತು)ಅನ್ನು ಅಸೈನ್ ಮಾಡಲಾಗುವುದು. |
05:54 | ವೇರಿಯೆಬಲ್ c'ಗೆ 30 (ಮೂವತ್ತು)ಅನ್ನು ಅಸೈನ್ ಮಾಡಲಾಗುವುದು. |
05:56 | ಬಲಭಾಗದಲ್ಲಿರುವುದು ಒಂದು 'ಆರೇ'ಯ ಹಾಗೆ ವರ್ತಿಸುತ್ತದೆ. |
06:01 | ಎಡಭಾಗದಲ್ಲಿರುವ ಅನೇಕ ವೇರಿಯೆಬಲ್ ಗಳನ್ನು ನಾವು ಲಿಸ್ಟ್ ಮಾಡಿದರೆ, ಆಗ 'ಆರೇ' ಅನ್-ಪ್ಯಾಕ್ ಆಗಿ ಆಯಾ ವೇರಿಯೆಬಲ್ ಗಳಿಗೆ ಅಸೈನ್ ಮಾಡಲ್ಪಡುವುದು. |
06:10 | ಮುಂದಿನ ಟ್ಯುಟೋರಿಯಲ್ ಗಳಲ್ಲಿ, ನಾವು 'ಆರೇ'ಯ ಬಗ್ಗೆ ವಿವರವಾಗಿ ಕಲಿಯುವೆವು. |
06:14 | ಸಧ್ಯಕ್ಕೆ, ಅಸೈನ್ ಮಾಡಿರುವುದು ಸರಿಯಾಗಿದೆಯೇ ಎಂಬುದನ್ನು ನಾವು ಪರೀಕ್ಷಿಸೋಣ. |
06:20 | 'a' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
06:23 | 'a' ಯಲ್ಲಿ ಸ್ಟೋರ್ ಮಾಡಲಾದ ವ್ಯಾಲ್ಯೂ 10 ಅನ್ನು ತೋರಿಸಲಾಗುವುದು. |
06:28 | 'b' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
06:31 | ನಾವು 20 ಅನ್ನು ಪಡೆಯುತ್ತೇವೆ. |
06:33 | 'c' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
06:37 | 30 ಅನ್ನು ತೋರಿಸಲಾಗುವುದು. |
06:40 | 'ಪ್ಯಾರಲಲ್ ಅಸೈನ್ಮೆಂಟ್', ಎರಡು ವೇರಿಯೆಬಲ್ ಗಳಲ್ಲಿ ಸ್ಟೋರ್ ಮಾಡಲಾದ ವ್ಯಾಲ್ಯೂಗಳನ್ನು ಅದಲುಬದಲು ಮಾಡಲು ಸಹ ಉಪಯುಕ್ತವಾಗಿದೆ. |
06:45 | ನಾವು 'a' ಮತ್ತು 'b' ಎಂಬ ವೇರಿಯೆಬಲ್ ಗಳ ವ್ಯಾಲ್ಯೂಗಳನ್ನು ಅದಲುಬದಲು ಮಾಡೋಣ. |
06:50 | ಹೀಗೆ ಟೈಪ್ ಮಾಡಿ: puts space within double quotes a equal to hash within curly brackets a comma within double quotes b equal to hash within curly brackets b |
07:11 | ಮತ್ತು 'Enter'ಅನ್ನು ಒತ್ತಿ. |
07:13 | ನಮಗೆ 'a=10' |
07:16 | 'b=20' ಎಂಬ ಔಟ್ಪುಟ್ ಸಿಗುತ್ತದೆ. |
07:20 | ಈಗ, ನಾವು 'a' ಮತ್ತು 'b' ಗಳನ್ನು ಅದಲುಬದಲು ಮಾಡೋಣ. |
07:23 | ಇದನ್ನು ಮಾಡಲು, ಹೀಗೆ ಟೈಪ್ ಮಾಡಿ: |
07:25 | 'a comma b equal to b comma a ' |
07:31 | 'Enter' ಅನ್ನು ಒತ್ತಿ. |
07:33 | 'puts' ಎಂಬ ಕಮಾಂಡನ್ನು ಪಡೆಯಲು, ಅಪ್-ಆರೋ (Up-Arrow) ಕೀಯನ್ನು ಎರಡು ಸಲ ಒತ್ತಿ ಮತ್ತು 'Enter' ಅನ್ನು ಒತ್ತಿ. |
07:39 | ನಾವು ಔಟ್ಪುಟ್ ಅನ್ನು ಹೀಗೆ ಪಡೆಯುತ್ತೇವೆ. |
07:41 | 'a=20' |
07:44 | 'b=10'. |
07:47 | ಈಗ ನಾವು 'Ruby' ಯಲ್ಲಿ, 'range' (ರೇಂಜ್) ಎಂಬುದರ ಬಗ್ಗೆ ಕಲಿಯುವೆವು. |
07:50 | 'ರೇಂಜ್'ನಲ್ಲಿ, ವ್ಯಾಲ್ಯೂಗಳು ಸಂಖ್ಯೆ, ಅಕ್ಷರ, ಸ್ಟ್ರಿಂಗ್ ಅಥವಾ ಆಬ್ಜೆಕ್ಟ್ ಗಳಾಗಿರಬಹುದು. |
07:58 | 'ಸಿಕ್ವೆನ್ಸ್'ಅನ್ನು (ಕ್ರಮಾನುಗತಿ) ವ್ಯಕ್ತಪಡಿಸಲು, 'ರೇಂಜ್ ಗಳನ್ನು ಬಳಸಲಾಗುತ್ತದೆ. |
08:02 | ಅನುಕ್ರಮದ ವ್ಯಾಲ್ಯೂಗಳ ಶ್ರೇಣಿಯನ್ನು ರಚಿಸಲು 'ಸಿಕ್ವೆನ್ಸ್ ರೇಂಜ್' ಅನ್ನು ಬಳಸಲಾಗುತ್ತದೆ. |
08:06 | ಇದು ಆರಂಭದ ವ್ಯಾಲ್ಯೂ, ವ್ಯಾಲ್ಯೂಗಳ ವ್ಯಾಪ್ತಿ ಮತ್ತು ಅಂತಿಮ ವ್ಯಾಲ್ಯೂಗಳನ್ನು ಒಳಗೊಂಡಿದೆ. |
08:13 | '(..) ಟು ಡಾಟ್ ಆಪರೇಟರ್', 'ಇನ್ಕ್ಲೂಸಿವ್ ರೇಂಜ್'ಅನ್ನು ಕ್ರಿಯೇಟ್ ಮಾಡುತ್ತದೆ. |
08:16 | '(...) ಥ್ರೀ ಡಾಟ್ ಆಪರೇಟರ್', 'ಎಕ್ಸ್ಕ್ಲೂಸಿವ್ ರೇಂಜ್' ಅನ್ನು ಕ್ರಿಯೇಟ್ ಮಾಡುತ್ತದೆ. |
08:20 | ಯಾವುದೇ ಒಂದು ವ್ಯಾಲ್ಯೂ, ಒಂದು ನಿರ್ದಿಷ್ಟ ರೇಂಜ್ ನಲ್ಲಿ (ವ್ಯಾಪ್ತಿಯಲ್ಲಿ) ಇದೆಯೋ ಎಂಬುದನ್ನು ಗುರುತಿಸಲು ಸಹ 'ರೇಂಜ್' ಗಳು ಬಳಸಲ್ಪಡುತ್ತವೆ. |
08:26 | ನಾವು 'ಇಕ್ವಾಲಿಟೀ ಆಪರೇಟರ್'ಅನ್ನು (===) ಬಳಸಿ ಇದನ್ನು ಮಾಡುತ್ತೇವೆ. |
08:30 | 'ರೇಂಜ್' ಗಳ ಕೆಲವು ಉದಾಹರಣೆಗಳನ್ನು ನಾವು ಪ್ರಯತ್ನಿಸೋಣ. |
08:33 | ಈಗ ಟರ್ಮಿನಲ್ ಗೆ ಬದಲಾಯಿಸೋಣ. |
08:36 | ಹೀಗೆ ಟೈಪ್ ಮಾಡಿ: ಬ್ರಾಕೆಟ್ ನಲ್ಲಿ '1 two dots 10' ಆಮೇಲೆ 'dot to underscore a' |
08:46 | 'ಟು ಡಾಟ್ ಆಪರೇಟರ್' 'ಇನ್ಕ್ಲೂಸಿವ್ ರೇಂಜ್'ಅನ್ನು ಕ್ರಿಯೇಟ್ ಮಾಡುತ್ತದೆ. |
08:50 | 'ಇನ್ಕ್ಲೂಸಿವ್ ಆಪರೇಟರ್', ಒಂದು ಶ್ರೇಣಿಯ ಆರಂಭ ಹಾಗೂ ಅಂತಿಮ ಈ ಎರಡೂ ವ್ಯಾಲ್ಯೂಗಳನ್ನು ಒಳಗೊಂಡಿದೆ. |
08:57 | ಇಲ್ಲಿ, ಒಂದು ರೇಂಜ್ ಅನ್ನು ಲಿಸ್ಟ್ ಗೆ ಪರಿವರ್ತಿಸಲು, 'to_a' ಎಂಬ ಮೆಥಡ್ ಅನ್ನು ಬಳಸಲಾಗುತ್ತದೆ. |
09:03 | 'Enter'ಅನ್ನು ಒತ್ತಿ. |
09:05 | ಇಲ್ಲಿ, 1 ಮತ್ತು 10, ರೇಂಜ್ ನ ಒಳಗೆ ಸೇರಿಸಲ್ಪಟ್ಟಿವೆ ಎಂಬುದನ್ನು ನೀವು ನೋಡಬಹುದು. |
09:11 | ಈಗ, ನಾವು 'ಎಕ್ಸ್ಕ್ಲೂಸಿವ್ ರೇಂಜ್ ಆಪರೇಟರ್'ಅನ್ನು (exclusive range operator) ನೋಡುವೆವು. |
09:16 | ಹೀಗೆ ಟೈಪ್ ಮಾಡಿ: ಬ್ರಾಕೆಟ್ ನಲ್ಲಿ '1 three dots 10' ಆಮೇಲೆ 'dot to underscore a'. |
09:27 | 'ಥ್ರೀ ಡಾಟ್ (dot)' ಆಪರೇಟರ್, 'ಎಕ್ಸ್ಕ್ಲೂಸಿವ್ ರೇಂಜ್' ಅನ್ನು ಕ್ರಿಯೇಟ್ ಮಾಡುತ್ತದೆ. |
09:31 | 'ಎಕ್ಸ್ಕ್ಲೂಸಿವ್ ರೇಂಜ್' ಆಪರೇಟರ್, ಕೊನೆಯ ವ್ಯಾಲ್ಯೂಅನ್ನು ಶ್ರೇಣಿಯಿಂದ (sequence)ಹೊರಗಿಡುತ್ತದೆ. |
09:37 | 'Enter'ಅನ್ನು ಒತ್ತಿ. |
09:39 | ಇಲ್ಲಿ, ಕೊನೆಯ ವ್ಯಾಲ್ಯೂ ಆಗಿರುವ 10 ಅನ್ನು, 'ರೇಂಜ್'ನಲ್ಲಿ ಸೇರಿಸಲಾಗಿಲ್ಲ. |
09:45 | ಈಗ, ನಾವು 5(ಐದು), 1 ರಿಂದ 10 ರ ವರೆಗಿನ ರೇಂಜ್ ನಲ್ಲಿ ಇದೆಯೋ ಎಂದು ಪರೀಕ್ಷಿಸೋಣ. |
09:50 | ಹೀೆ ಟೈಪ್ ಮಾಡಿ: ಬ್ರಾಕೆಟ್ ನಲ್ಲಿ '1 two dots 10 three times equal to' ಮತ್ತು ಆಮೇಲೆ '5'. |
10:00 | 'Enter' ಅನ್ನು ಒತ್ತಿ. |
10:02 | ಯಾವುದೇ ಒಂದು ವ್ಯಾಲ್ಯೂ, ರೆಂಜ್ ನಲ್ಲಿ ಇದೆಯೋ ಎಂಬುದನ್ನು ಪರೀಕ್ಷಿಸಲು 'ಇಕ್ವಾಲಿಟೀ ಆಪರೇಟರ್ ಅನ್ನು (Equality operator)' ಬಳಸಲಾಗುತ್ತದೆ. |
10:07 | 5(ಐದು), 1 ರಿಂದ 10 ರ ವರೆಗಿನ ರೇಂಜ್ ನಲ್ಲಿ ಇರುವುದರಿಂದ, ನಮಗೆ ಔಟ್ಪುಟ್ 'true' ಎಂದು ಸಿಗುತ್ತದೆ. |
10:14 | ಇದರೊಂದಿಗೆ, ನಾವು ಈ 'ಸ್ಪೋಕನ್ ಟ್ಯುಟೋರಿಯಲ್' ನ ಕೊನೆಗೆ ಬಂದಿರುತ್ತೇವೆ. |
10:17 | ಈ ಟ್ಯುಟೋರಿಯಲ್ ನಲ್ಲಿ, ನಾವು: |
10:20 | *'ಲಾಜಿಕಲ್ ಆಪರೇಟರ್' ಅರ್ಥಾತ್ ಜೋಡಿ 'ಆಂಪರ್ಸಂಡ್' * ಜೋಡಿ 'ಪೈಪ್' ಮತ್ತು *'ಎಕ್ಸ್ಕ್ಲಾಮೇಶನ್ ಮಾರ್ಕ್ ಆಪರೇಟರ್' |
10:27 | *'ಪ್ಯಾರಲಲ್ ಅಸೈನ್ಮೆಂಟ್' ಉದಾ: a, b, c = 10, 20, 30 |
10:34 | *'ರೇಂಜ್ ಆಪರೇಟರ್ಸ್'- 'ಇನ್ಕ್ಲೂಸಿವ್ ಆಪರೇಟರ್' (..) ಮತ್ತು 'ಎಕ್ಸ್ಕ್ಲೂಸಿವ್ ಆಪರೇಟರ್'(...) ಇವುಗಳನ್ನು ಕಲಿತಿದ್ದೇವೆ. |
10:39 | ಒಂದು ಅಸೈನ್ಮೆಂಟ್ ಎಂದು, |
10:41 | 'ಪ್ಯಾರಲಲ್ ಅಸೈನ್ಮೆಂಟ್' ಅನ್ನು ಬಳಸಿ ಎರಡು ವೇರಿಯೆಬಲ್ ಗಳನ್ನು ಡಿಕ್ಲೇರ್ ಮಾಡಿ ಮತ್ತು |
10:45 | ಅವುಗಳ ಮೊತ್ತವು 20 ಮತ್ತು 50 ರ ನಡುವೆ ಇದೆಯೋ ಎನ್ನುವುದನ್ನು ಪರೀಕ್ಷಿಸಿ. |
10:49 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
10:52 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
10:56 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
11:00 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
11:03 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
11:05 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
11:09 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
contact@spoken-tutorial.org |
11:15 | "ಸ್ಪೋಕನ್ ಟ್ಯುಟೋರಿಯಲ್" ಪ್ರಕಲ್ಪವು "ಟಾಕ್ ಟು ಎ ಟೀಚರ್" ಪ್ರಕಲ್ಪದ ಒಂದು ಭಾಗವಾಗಿದೆ. |
11:19 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
11:25 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro. |
11:34 | ಈ ಸ್ಕ್ರಿಪ್ಟ್, "IIT Bombay- ಸ್ಪೋಕನ್ ಟ್ಯುಟೋರಿಯಲ್ ತಂಡ" ಇವರ ಕೊಡುಗೆಯಾಗಿದೆ. |
11:38 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . ವಂದನೆಗಳು. |