GIMP/C2/Two-Minutes-Edit/Kannada
From Script | Spoken-Tutorial
Revision as of 12:56, 10 December 2014 by Sandhya.np14 (Talk | contribs)
Time | Narration |
00:23 | Meet The GIMP (ಮೀಟ್ ದ ಗಿಂಪ್) ಎನ್ನುವುದರ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:25 | ಇದನ್ನು ರೋಲ್ಫ್ ಸ್ಟೇನೋರ್ಟ್ ಅವರು. ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ. |
00:31 | ಇಲ್ಲಿ, ಈ ‘ಇಮೇಜ್’ನೊಂದಿಗೆ, ಏನು ಸಮಸ್ಯೆ ಆಗಿದೆ? |
00:35 | ಈ ‘ಬೋರ್ಡ್’ನ ಮೇಲೆ ಏನಿದೆ ಎಂದು ಸರಿಯಾಗಿ ಕಾಣುತ್ತಿಲ್ಲ. |
00:39 | ಹೀಗಾಗಿ, ‘ಪಾಪ್ ಔಟ್’ ಮಾಡಲು ಇಲ್ಲಿಯ ಈ ಬರಹವು ನನಗೆ ಬೇಕಾಗಿದೆ. |
00:44 | ನನಗೆ, ಮುಗಿಲನ್ನು ಇದ್ದ ಹಾಗೆಯೇ ಇಡಬೇಕಾಗಿದೆ. ಆದ್ದರಿಂದ ಈ ಲೇಯರನ್ನು ಎರಡು ಸಲ ಮಾಡುತ್ತೇನೆ ಹಾಗೂ Curves Tool ಅನ್ನು ಆರಿಸಿಕೊಳುತ್ತೇನೆ. |
00:56 | ಮತ್ತು ‘ಇಮೇಜ್’ನ ಈ ಭಾಗದಲ್ಲಿ ನೋಡುತ್ತೇನೆ. |
01:02 | ಇದನ್ನು ಪ್ರಕಾಶಿತವಾಗಿ ಪಡೆಯಲು ನಾನು ‘ಕರ್ವ್’ನ್ನು ಮೇಲೆ ಎಳೆಯುತ್ತೇನೆ. |
01:10 | ಇದು ಸಾಕಷ್ಟು ಚೆನ್ನಾಗಿ ಕಾಣುತ್ತದೆ. ಈಗ, ಇಲ್ಲಿ ಸ್ವಲ್ಪ ಗಾಢತೆಯನ್ನು ಪಡೆಯಲು, ನಾನು ಈ ಕಪ್ಪು ಪಾಯಿಂಟನ್ನು ಇನ್ನೂ ಮೇಲೆ ಎಳೆಯುತ್ತಿದ್ದೇನೆ. |
01:19 | ಇದು ಕೆಲಸ ಮಾಡಬೇಕು ಎಂದು ನನಗೆನಿಸುತ್ತಿದೆ. |
01:25 | ಈಗ, ನನಗೆ ಕೆಳಗಿನ ಇಮೇಜ್ನಲ್ಲಿ, ಸೈನ್ ಬೋರ್ಡ್ ಮೇಲಿನ ಬರಹವು ಬೇಕಾಗಿದೆ. |
01:32 | ಆದ್ದರಿಂದ, ನಾನು ಒಂದು ‘ಲೇಯರ್ ಮಾಸ್ಕ್’ಅನ್ನು ಆರಿಸಿಕೊಂಡು ಅದನ್ನು ಕಪ್ಪುಬಣ್ಣದಿಂದ ತುಂಬುತ್ತೇನೆ. |
01:43 | ಈಗ ನಾನು ನನ್ನ ಹಳೆಯ ‘ಇಮೇಜ್’ಗೆ ಮರಳಿದ್ದೇನೆ ಮತ್ತು ಬಿಳಿಯ ಅಂಚನ್ನು ಹೊಂದಿರುವ ‘ಲೇಯರ್ ಮಾಸ್ಕ್’ನ ಮೇಲೆ ಕೆಲಸ ಮಾಡುತ್ತೇನೆ. |
01:54 | ಇಲ್ಲಿ, ನಾನು Paint Tool ಅನ್ನು ಆಯ್ಕೆ ಮಾಡುತ್ತೇನೆ. |
02:00 | White ಅನ್ನು, ನನ್ನ ‘ಫೋರ್ಗ್ರೌಂಡ್ ಕಲರ್’ ಎಂದು ಆಯ್ಕೆಮಾಡುತ್ತೇನೆ. |
02:05 | ಒಂದು Brush ಅನ್ನು ಆಯ್ಕೆಮಾಡಿ ಅದನ್ನು ದೊಡ್ಡದುಮಾಡುತ್ತೇನೆ. |
02:12 | ಈಗ ನಾನು ‘ಲೇಯರ್ ಮಾಸ್ಕ್’ನ ಮೇಲೆ ಪೇಂಟ್ ಮಾಡುತ್ತಿದ್ದೇನೆ. |
02:18 | ಬಹುಶಃ ನಾನು ಇಮೇಜ್ನಲ್ಲಿ ಝೂಮ್ ಮಾಡಬೇಕು. |
02:25 | ಇದು ಉತ್ತಮವಾಗಿದೆ. |
02:27 | ಅದು ಒಳ್ಳೆಯದು. |
02:31 | ನನ್ನ ‘ಕೀ ಇಂಡಿಕೇಟರ್’ ನಲ್ಲಿ ಒತ್ತಿರುವ ಕೀಗಳನ್ನು, ನೀವು ನೋಡಬಹುದು. |
02:37 | ಇದು ಬಹಳ ಉತ್ತಮವಾಗಿ ಕಾಣುತ್ತದೆ. |
02:40 | ಪುನಃ ಈ ಲೇಯರನ್ನು ಎರಡು ಸಲ ಮಾಡಿ, Overlay Mode ಅನ್ನು ನಾನು ಆಯ್ಕೆಮಾಡುತ್ತೇನೆ. ‘ಬ್ಯಾಕ್ಗ್ರೌಂಡ್’ನಲ್ಲಿ ಸ್ವಲ್ಪ ಹೆಚ್ಚು ‘ಪಾಪ್’ಅನ್ನು ಪಡೆಯಲು, ‘ಓಪ್ಯಾಸಿಟೀ’ಯನ್ನು ಸ್ವಲ್ಪ ಕೆಳಗೆ ಇಳಿಸುತ್ತೇನೆ. |
03:03 | ಇದು, ಈಗ ಹೆಚ್ಚು ಉತ್ತಮವಾಗಿ ಕಾಣುತ್ತದೆ. |
03:07 | ಈಗ, ನಾನು ಈ ಇಮೇಜನ್ನು ‘ಸೇವ್’ ಮಾಡಲು ಸಿದ್ಧನಾಗಿದ್ದೇನೆ. |
03:12 | ಇಲ್ಲಿ ‘ಕಾಪಿ’ಗಳ ಮೇಲೆ ಕೆಲಸ ಮಾಡುತ್ತಿದ್ದೇನೆ. ಆದ್ದರಿಂದ ನಾನು, ‘ಸೇವ್’ನ ಮೇಲೆ ಕ್ಲಿಕ್ ಮಾಡಬಹುದು ಅಥವಾ Ctrl + S ಒತ್ತಬಹುದು. ಖಂಡಿತವಾಗಿ,ನನಗೆ ಈ ಎಲ್ಲ ‘ಲೇಯರ್’ಗಳನ್ನು ಇಲ್ಲಿ ‘ಸೇವ್’ ಮಾಡುವದು ಬೇಕಾಗಿಲ್ಲ. ನಾನು, ಇದನ್ನು Jpeg (ಜೇ ಪೆಗ್) ಇಮೇಜ್ ಎಂದು ‘ಸೇವ್’ ಮಾಡುತ್ತೇನೆ. |
03:32 | ಈ ಇಮೇಜನ್ನು ‘ವೆಬ್’ನ ಮೇಲೆ ‘ಅಪ್-ಲೋಡ್’ ಮಾಡಲು, ಇದನ್ನು ರಿಸೈಜ್ ಮಾಡುವ ಅಗತ್ಯವಿದೆ. ಹೀಗಾಗಿ, ನಾನು ಕ್ರಮವಾಗಿ Image, Scale Image ಗಳಿಗೆ ಹೋಗುತ್ತೇನೆ, ಅಗಲದಲ್ಲಿ ಇದನ್ನು 600 (ಆರುನೂರು) ಕ್ಕೆ ನಾನು ಕುಗ್ಗಿಸುತ್ತಿದ್ದೇನೆ. |
03:58 | ಈಗ ಇದನ್ನು ಸ್ವಲ್ಪ ‘ಶಾರ್ಪ್’ ಮಾಡಬೇಕು. ಆದ್ದರಿಂದ, ನಾನು ಕ್ರಮವಾಗಿ Filters, Enhance ಮತ್ತು Sharpen ಇವುಗಳಿಗೆ ಹೋಗುತ್ತೇನೆ. |
04:20 | ನಾನು ಇಮೇಜ್ನಲ್ಲಿಯ ‘ಆರ್ಟ್ ಇಫೆಕ್ಟ್ಸ್’ಗಾಗಿ ಪರಿಶೀಲಿಸುತ್ತೇನೆ. ಇಲ್ಲಿ ನೀವು ಸ್ವಲ್ಪ ಬೆಳಕನ್ನು ನೋಡಬಹುದು. |
04:38 | ಈಗ, ಇದನ್ನು ನಾನು ಒಂದು ‘ಕಾಪಿ’ ಎಂದು ಸೇವ್ ಮಾಡುತ್ತಿದ್ದೇನೆ. |
04:44 | ಇದನ್ನು small ಎಂದು ಹೆಸರಿಸಿ, ಸೇವ್ ಮಾಡುತ್ತೇನೆ. |
04:50 | ಈ ‘ಇಮೇಜ್’ನ ಕೆಲಸ ಮುಗಿಸಿದ್ದೇನೆ. |
04:53 | ಎಡಿಟ್ ಮಾಡುವಾಗ, ನೀವು ಎರಡು ವಿಷಯಗಳನ್ನು ಯಾವಾಗಲೂ ನೆನಪಿನಲ್ಲಿಡಬೇಕು. |
04:58 | ಮೊದಲನೆಯದಾಗಿ, ಇಮೇಜ್’ನ ಒಂದು ಭಾಗವನ್ನು ಬದಲಾಯಿಸಿ ಉಳಿದೆಲ್ಲವನ್ನೂ ಇದ್ದಂತೆಯೇ ಇಡಬೇಕಾಗಿದ್ದರೆ, ಆವಾಗ ಆ ‘ಲೇಯರ್’ನ ಒಂದು ಕಾಪಿ ಮಾಡಿ, ನಿಮ್ಮ ಬದಲಾವಣೆಗಳನ್ನು ಮಾಡಿ, ನಂತರ ‘ಲೇಯರ್ ಮಾಸ್ಕ್’ಅನ್ನು ಹಾಕಿರಿ. |
05:15 | ಕಪ್ಪುಬಣ್ಣವು ಇಮೇಜನ್ನು ಅಡಗಿಸುವುದು ಹಾಗೂ ಬಿಳಿಬಣ್ಣವು ಅದರಲ್ಲಿರುವುದನ್ನು ಬಹಿರಂಗಪಡಿಸುವುದು. |
05:22 | ಎರಡನೆಯದಾಗಿ, ನೀವು ‘ಓವರ್ಲೇ ಮೋಡ್’ನಲ್ಲಿ, ಅದರ ಮೇಲೆ ಎರಡನೆಯ ಲೇಯರನ್ನು ಹಾಕಿದರೆ, ‘ಇಮೇಜ್’ಗೆ ಉತ್ತಮ ಕಾಂಟ್ರಾಸ್ಟ್ ಹಾಗೂ ಬಣ್ಣಗಳು ಸಿಗುತ್ತವೆ. |
05:33 | ಶೀಘ್ರವಾಗಿ ‘ಎಡಿಟ್’, ಮಾಡಲು ಇವು ಎರಡು ಉಪಾಯಗಳಾಗಿವೆ. |
05:41 | ಈ ಇಮೇಜ್ನಲ್ಲಿ, ಕನಿಷ್ಠ ಎರಡು ಸಮಸ್ಯೆಗಳನ್ನು ನೀವು ನೋಡಬಹುದು. |
05:46 | ಮೊದಲು, ನಾನು ಈ ಜನರ ಪಾದಗಳನ್ನು ಕತ್ತರಿಸಿದ್ದೇನೆ. ಅವು,ಅಲ್ಲಿ ಇದ್ದರೆ ಚೆನ್ನಾಗಿರುತ್ತಿತ್ತು. |
05:55 | ಎರಡನೆಯ ಸಮಸ್ಯೆ, ಈ ಕಟ್ಟಡಗಳು ಇಮೇಜ್ನಲ್ಲಿ ಬೀಳುತ್ತಿವೆ ಏಕೆಂದರೆ ನಾನು ಕ್ಯಾಮೆರಾವನ್ನು ಮೇಲ್ಮುಖವಾಗಿ ಹಿಡಿದಿದ್ದೆ. |
06:08 | ನಾನು Perspective Tool ಎನ್ನುವುದನ್ನು ಆಯ್ಕೆಮಾಡುತ್ತೇನೆ. |
06:15 | Directions ನ ಡೈಲಾಗ್’ನಲ್ಲಿ, Corrective Backward ಅನ್ನು ಆಯ್ಕೆಮಾಡಿ, Preview ನಲ್ಲಿ Grid ಅನ್ನು, ನಾನು ಆಯ್ಕೆಮಾಡುತ್ತೇನೆ. |
06:23 | ನಾನು Outline ಅಥವಾ Image ನ್ನು ಆಯ್ಕೆಮಾಡಬಹುದು ಆದರೆ ನಾನು Grid ಅನ್ನು ಆಯ್ಕೆಮಾಡುತ್ತೇನೆ. |
06:30 | ಇಮೇಜ್ನಲ್ಲಿ ಕ್ಲಿಕ್ ಮಾಡಿದಾಗ, ನನಗೆ ಇಲ್ಲಿ ಈ ‘ಇನ್ಫೋ ವಿಂಡೋ’ ಸಿಗುತ್ತದೆ. ಇದು ಹೆಚ್ಚು ಉಪಯುಕ್ತ ಮಾಹಿತಿಯನ್ನು ಹೊಂದಿಲ್ಲ. |
06:38 | ಆದ್ದರಿಂದ ಅದನ್ನು ಹೊರಗೆ ಎಳೆಯುತ್ತೇನೆ. ಈಗ ಇಲ್ಲಿ ನನಗೆ ಈ ಗ್ರಿಡ್ ಸಿಕ್ಕಿದೆ. ನಾನು ಮಾಡಬೇಕಾದದ್ದು ಇಷ್ಟೇ, ಈ ‘ಗ್ರಿಡ್ಲೈನ್’ಗಳನ್ನು, ಇಮೇಜ್ನಲ್ಲಿ ಲಂಬವಾಗಿ ಇರುವ ಈ ರಚನೆಗಳಿಗೆ ಹೊಂದಿಸುವುದು. |
06:52 | ಈ ‘ಗ್ರಿಡ್ಲೈನ್’ಗಳು, ಔಟ್ಪುಟ್ ಇಮೇಜ್ನಲ್ಲಿ ಲಂಬವಾಗಿ ಅಥವಾ ಅಡ್ಡಲಾಗಿರುವವು.ಈ ಮೇಲ್ತುದಿಯಲ್ಲಿರುವ ಗೆರೆಯು ‘ಇಮೇಜ್’ನ ಮೇಲ್ತುದಿಯಾಗಿರುವುದು. |
07:02 | ಹೀಗಾಗಿ, ನಾನು ಇದನ್ನು ಇಲ್ಲಿಗೆ ಎಳೆಯುತ್ತೇನೆ. |
07:07 | ನಾನು ಇಮೇಜ್ನಲ್ಲಿ ಅತ್ತಿತ್ತ ನೋಡುತ್ತೇನೆ. ಇದು ಸಾಕಷ್ಟು ಚೆನ್ನಾಗಿದೆ. |
07:41 | ಈಗ ನಾನು Transform ಅನ್ನು ಒತ್ತುತ್ತೇನೆ. |
07:45 | ಅದು ಬದಲಾಗುವವರೆಗೆ ನಾವು ಕಾಯಬೇಕು. |
07:51 | ಅದು ಇಲ್ಲಿದೆ. |
07:55 | ಇಲ್ಲಿ, ಈಗ ಎರಡನೆಯ ಸಮಸ್ಯೆಯನ್ನು ನೀವು ನೋಡುತ್ತೀರಿ. |
08:00 | ಈ ಭೂಮಿಯು ಅತ್ಯುತ್ತಮವಾಗಿಲ್ಲ. |
08:03 | ಹೀಗಾಗಿ, ನಾನು ಈ ಇಮೇಜನ್ನು ಕ್ರಾಪ್ ಮಾಡಬೇಕು. |
08:16 | ನಾನು, ನನ್ನ Crop Tool ಗೆ ಹೋಗುತ್ತೇನೆ. |
08:19 | ನನಗೆ ಪಕ್ಕದ ಕಟ್ಟಡವನ್ನು ಕ್ರಾಪ್ ಮಾಡಬೇಕಾಗಿದೆ ಹಾಗೂ ಅಲ್ಲಿ ಇದನ್ನು ಮಾತ್ರ ಬಿಡಬೇಕಾಗಿದೆ. |
08:28 | ಇದು ಸ್ವಲ್ಪ ಚೌಕದ ಹಾಗೆ ಕಾಣುತ್ತದೆ. ನಾನು Fixed Aspect ratio ಎನ್ನುವುದರ ಮೇಲೆ ಕ್ಲಿಕ್ ಮಾಡಿ ಅದನ್ನು 1:1 (ವನ್ ಈಸ್ ಟು ವನ್) ಎಂದು ಇಡುತ್ತೇನೆ. |
08:40 | ಈಗ ನನಗೆ ಚೌಕಾಕಾರದ ‘ಕ್ರಾಪ್’ ಸಿಕ್ಕಿದೆ. |
08:45 | ಇಮೇಜ್ನಲ್ಲಿ ಜನರನ್ನು ಇಟ್ಟಿದ್ದೇನೆ. |
08:51 | ಈ ಕ್ರಾಪ್ ಕೆಲಸ ಮಾಡಬೇಕು. |
08:56 | ಅದರ ಮೇಲೆ ಕ್ಲಿಕ್ ಮಾಡುತ್ತೇನೆ, ಇದೋ ಇಲ್ಲಿದೆ. |
09:00 | ಈಗ Curves Tool ಅನ್ನು ಆಯ್ಕೆಮಾಡುತ್ತೇನೆ. |
09:04 | ಅದರಲ್ಲಿ ಹೆಚ್ಚಿನ ‘ಕಾಂಟ್ರಾಸ್ಟ್’ಗಾಗಿ, ‘ಹೈ ಲೈನ್’ಗಳನ್ನು ಇನ್ನೂ ಸ್ವಲ್ಪ ಮೇಲೆ ಪಡೆಯುತ್ತೇನೆ. |
09:19 | ಈ ಇಮೇಜ್ ಸಹ ಮುಗಿಯಿತು. |
09:24 | ಇದು ಮುಂದಿನ ಇಮೇಜ್ ಆಗಿದೆ. |
09:27 | ಈ ಇಮೇಜ್’ನೊಂದಿಗೆ ಏನು ಮಾಡಬೇಕು? |
09:37 | ನಾನು Rotate Tool ಅನ್ನು ಆಯ್ಕೆಮಾಡುತ್ತೇನೆ. 1 (ಒಂದು) ನ್ನು ಒತ್ತಿ, ಇಮೇಜ್ನಲ್ಲಿ ಝೂಮ್ ಮಾಡುತ್ತೇನೆ. |
09:49 | ಇಲ್ಲಿ, ‘ಇಮೇಜ್’ನ ಮಧ್ಯದಲ್ಲಿ, ನಾನು ಒಳ್ಳೆಯ ಲಂಬವಾದ ಭಾಗಕ್ಕಾಗಿ ನೋಡುತ್ತೇನೆ. Direction ನಲ್ಲಿ, ನಾನು Corrective Backwards Rotation ಎನ್ನುವುದನ್ನು ಆಯ್ಕೆಮಾಡುತ್ತೇನೆ. |
10:04 | Cubic Interpolation ಎನ್ನುವುದನ್ನು ಆಯ್ಕೆಮಾಡಿ, Preview ನಲ್ಲಿ Grid ಅನ್ನು ಆಯ್ಕೆಮಾಡುತ್ತೇನೆ. |
10:12 | ಈಗ, ‘ಗ್ರಿಡ್ ಲೈನ್ಸ್’ಅನ್ನು ಪಡೆಯಲು ಇಮೇಜ್ನಲ್ಲಿ ಕ್ಲಿಕ್ ಮಾಡುತ್ತೇನೆ, ಈಗ ಈ ‘ಲೈನ್’ಗಳನ್ನು, ಈ ಮನೆಯ ಲಂಬವಾದ ರಚನೆಗಳೊಂದಿಗೆ ಹೊಂದಿಸುತ್ತೇನೆ. |
10:24 | ಇದು ಇಷ್ಟೇ ಆಗಿದೆ ಎಂದು ನನ್ನ ಭಾವನೆ. |
10:28 | ಇಲ್ಲಿ ತೆರೆದುಕೊಂಡ ಚಿಕ್ಕ ಕಿಟಕಿಯು 2.90 ಅಂಶಗಳನ್ನು ತೋರಿಸುತ್ತಿದೆ. ನಾನು Rotate ನ ಮೇಲೆ ಕ್ಲಿಕ್ ಮಾಡುತ್ತೇನೆ ಮತ್ತು ಕೊನೆಯ ಫಲಿತಾಂಶಕ್ಕಾಗಿ ಕಾಯುತ್ತೇನೆ. |
10:40 | ಇದು ಇಲ್ಲಿದೆ. |
10:44 | ಸರಿ, ಇದು ಚೆನ್ನಾಗಿ ಕಾಣುತ್ತದೆ. |
10:48 | ಇಲ್ಲಿ ಸಾಕಷ್ಟು ವಿರೂಪವಾಗಿದೆ ಎಂದು ನೀವು ನೋಡಬಹುದು. ನಾನು ಅದರ ತಿದ್ದುಪಡಿಗಾಗಿ ನೋಡಬೇಕು. ಆದರೆ ಈಗ ನಾನು ಈ ಇಮೇಜನ್ನು ಕ್ರಾಪ್ ಮಾಡುತ್ತಿದ್ದೇನೆ. |
11:07 | ಇದು ಪರವಾಗಿಲ್ಲ. |
11:13 | ನಾನು ಇಮೇಜನ್ನು ಸರಿಯಾಗಿ ತಿರುಗಿಸಲಿಲ್ಲ ಎಂದು ನನಗನ್ನಿಸುತ್ತದೆ. |
11:23 | ಸರಿ, ನಾನು ಸಾಕಷ್ಟು ತಿರುಗಿಸಲಿಲ್ಲ ಮತ್ತು ಸರಿಯಾದ ಸ್ಥಾನವನ್ನು ಆಯ್ಕೆಮಾಡಲಿಲ್ಲ. |
11:34 | ಅದ್ದರಿಂದ ನಾವು ಇದನ್ನು ಮತ್ತೆ ಮಾಡೋಣ. |
11:39 | ನಾನು Ctrl + Z ಒತ್ತಿ ‘ಸ್ಟೆಪ್’ಗಳನ್ನು ‘ಅನ್-ಡು’ ಮಾಡುತ್ತೇನೆ. |
12:00 | Rotate Tool ಅನ್ನು ಮತ್ತೆ ಆಯ್ಕೆಮಾಡುತ್ತೇನೆ. |
12:10 | ಮೊದಲು ಮಾಡಿದ ‘ಸೆಟ್ಟಿಂಗ್’ಗಳನ್ನು ನಾನು ಬದಲಾಯಿಸುವುದಿಲ್ಲ. ಈಗ, ಇಮೇಜ್ನ ಕೇಂದ್ರವನ್ನು ಇಲ್ಲಿಯ TV ಟಾವರ್ ನಲ್ಲಿ ಸೆಟ್ ಮಾಡುತ್ತಿದ್ದೇನೆ. |
12:34 | ಈಗ ಇದನ್ನು TV ಟಾವರ್ ಗೆ ಹೊಂದಿಸುತ್ತಿದ್ದೇನೆ. |
12:41 | TV ಟಾವರ್, ‘ಇಮೇಜ್’ನ ಪ್ರಮುಖವಾದ ಭಾಗವಾಗಿದೆ. ಹೀಗಾಗಿ , ಅದು ನೇರವಾಗಿಲ್ಲದಿದ್ದರೆ ಇಮೇಜ್ ಸಹ ನೇರವಾಗಿಲ್ಲವೆನಿಸುತ್ತದೆ. |
12:59 | ಇದು ಹೆಚ್ಚು ಉತ್ತಮವಾಗಿ ಕಾಣುತ್ತದೆ. |
13:01 | ಈಗ Crop Tool ಅನ್ನು ತೆಗೆದುಕೊಂಡು, ಅದರಲ್ಲಿ ಹೆಚ್ಚು ನಿರುಪಯುಕ್ತ ಸ್ಥಳವನ್ನು ಹೊಂದಿರದ ‘ಕ್ರಾಪ್’ಅನ್ನು ಆರಿಸುತ್ತೇನೆ. |
13:26 | ಈಗ, ಕೊನೆಯದಾಗಿ, ಇಮೇಜ್ನಲ್ಲಿ ಸ್ವಲ್ಪ ಹೆಚ್ಚು ಕಾಂಟ್ರಾಸ್ಟ್ ಅನ್ನು ತರಲು ಬಹುಶಃ ಸ್ವಲ್ಪ ‘ಕರ್ವ್ಸ್’. |
13:44 | ಇದು ಪರವಾಗಿಲ್ಲ. ಈಗ ನಾನು ಈ ಇಮೇಜನ್ನು ಮುಗಿಸಿದ್ದೇನೆ. |
13:50 | ಈ ಇಮೇಜ್, ‘ಪೋರ್ಟ್ರೇಟ್ ಮೋಡ್’ನಲ್ಲಿ ಇರಬೇಕು, ಹೀಗಾಗಿ ನಾನು ಇದನ್ನು ಇಲ್ಲಿ ಬದಲಾಯಿಸಬೇಕು. |
13:59 | ನಾನು ಕ್ರಮವಾಗಿ, Image, Transform ಮತ್ತು Rotate 90 degree anti-clockwise ಗಳಿಗೆ ಹೋಗುತ್ತೇನೆ. |
14:08 | ಈಗ ನನ್ನ ಇಮೇಜ್, ತಿರುಗಿಸಲ್ಪಡುತ್ತದೆ. |
14:11 | ನಾವು ಇಮೇಜನ್ನು 90 ಅಂಶ ತಿರುಗಿಸಿದಾಗ, ಇದರ ಗುಣಮಟ್ಟದಲ್ಲಿ ಎನೂ ನಷ್ಟವಾಗಿಲ್ಲ.ಇದು jpeg (ಜೇ-ಪೆಗ್) ‘ಇಮೇಜ್’ಗಳಲ್ಲಿ ವಿಶೇಷವಾಗಿ ಮುಖ್ಯವಾಗಿದೆ. |
14:28 | ಈಗ ನಾವು ಈ ‘ಇಮೇಜ’ಗೆ ಇನ್ನೂ ಸ್ವಲ್ಪ ‘ಕಾಂಟ್ರಾಸ್ಟ್’ಅನ್ನು ಕೊಡೋಣ. ಇದನ್ನು ಮಾಡಲು ನಾನು ‘ಕರ್ವ್ಸ್ ಟೂಲ್’ಅನ್ನು ಬಳಸುತ್ತೇನೆ. |
14:37 | ನೀವು ‘ಲೆವಲ್ಸ್ ಟೂಲ್’ ಅಥವಾ ಬೇರೆಯದನ್ನು ಬಳಸಬಹುದು. ಆದರೆ ‘ಕರ್ವ್ಸ್ ಟೂಲ್’ ನನಗಾಗಿ ಅತ್ಯುತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ. |
14:44 | ಸ್ವಲ್ಪಮಟ್ಟಿನ ‘S’ ‘ಕರ್ವ್’ನ್ನು ಅದರ ಮೇಲೆ ಇಡಿ ಮತ್ತು ಇದು ಆಗಿದೆ ಎಂದು ನನಗೆನಿಸುತ್ತಿದೆ, ಆದ್ದರಿಂದ ನಾನು ಇಮೇಜನ್ನು ಸೇವ್ ಮಾಡುತ್ತೇನೆ. |
14:59 | ಈಗ ಮುಂದಿನ ಇಮೇಜ್. |
15:01 | ಒಟ್ಟಿನಲ್ಲಿ, ನಿಮ್ಮ ಇಮೇಜನ್ನು ಶೀಘ್ರವಾಗಿ ಎಡಿಟ್ ಮಾಡಲು ನಿಮಗೆ ಕೆಲವು ಮೂಲಭೂತ ಟೂಲ್ಗಳು ಬೇಕು. |
15:10 | ಮೊದಲನೆಯದು Rotate ಟೂಲ್. |
15:13 | Corrective ‘ಮೋಡ್’ಅನ್ನು ಮತ್ತು Preview ಗಾಗಿ Grid ಅನ್ನು ಬಳಸಿ. ‘ಗ್ರಿಡ್’ಅನ್ನು ಲಂಬವಾದ ಅಥವಾ ಅಡ್ಡಲಾದ ಗೆರೆಗಳಿಗೆ ಹೊಂದಿಸಿರಿ. |
15:24 | ಆಮೇಲೆ, ಓರೆಯಾದ ಗೆರೆಗಳಿಗಾಗಿ ನಿಮಗೆ Perspective (ಪರ್ಸ್ಪೆಕ್ಟಿವ್) ‘ಟೂಲ್’ನ ಅಗತ್ಯವಿದೆ. |
15:31 | ಮತ್ತೆ, Corrective ‘ಮೋಡ್’ಅನ್ನು ಮತ್ತು Grid ಅನ್ನು ಬಳಸಿರಿ ಮತ್ತು ‘ಗ್ರಿಡ್’ಅನ್ನು, ಈ ಲಂಬವಾದ ಅಥವಾ ಅಡ್ಡಲಾದ ಗೆರೆಗಳಿಗೆ ಹೊಂದಿಸಿರಿ |
15:48 | ‘ಇಮೇಜ್’ನ ಕಾಂಟ್ರಾಸ್ಟ್ ಮತ್ತು ಲಘುತ್ವ ಸರಿಪಡಿಸುವದಕ್ಕಾಗಿ, Curves Tool ಅನ್ನು ಆಯ್ಕೆಮಾಡಿ ಮತ್ತು ಒಂದು ' S ' ಕರ್ವ್’ಅನ್ನು ಅನ್ವಯಿಸಿ. ಇದು ಹೆಚ್ಚಿನ ಸಂದರ್ಭಗಳಲ್ಲಿ ಸಹಕಾರಿಯಾಗುತ್ತದೆ, ಅಥವಾ ಕೆಲವು ಸಂದರ್ಭಗಳಲ್ಲಿ ನಿಮಗೆ ನಯವಾದ ಚಿತ್ರ ಬೇಕಿದ್ದರೆ ಆವಾಗ 'ಇನ್ವರ್ಟೆಡ್ S' ಕರ್ವ್’ಅನ್ನು ಅನ್ವಯಿಸಿ. ಇಲ್ಲಿ ಹೊರಗೆ ನೀವು ನಿಜವಾದ ಮಂಜು ನೋಡಬಹುದು. |
16:23 | ಕ್ರಮವಾಗಿ Image, Transform ಮೆನ್ಯೂಗಳಿಗೆ ಹೋಗಿರಿ. ಇಲ್ಲಿ, ನೀವು ಇಮೇಜನ್ನು Rotate ಮಾಡಬಹುದು ಹಾಗೂ ಔಟ್ಪುಟ್ ಸೈಜನ್ನು Scale ಮಾಡಬಹುದು. |
16:37 | ಕೊನೆಯದಾಗಿ, Filters, ಶೀಘ್ರವಾಗಿ ಎಡಿಟ್ ಮಾಡಲು ಮುಖ್ಯವಾಗಿದೆ. |
16:43 | Enhance ಮತ್ತು Sharpen ಗಳಿಗೆ ಹೋಗಿರಿ. |
16:47 | ಬಹಳಷ್ಟು ಟೂಲ್ಗಳನ್ನು ಅನ್ವಯಿಸಿದ ಮೇಲೆ, ಉದಾಹರಣೆಗೆ, rotating ಅಥವಾ Transformation tool, Perspective tool ಅಥವಾ Resizing, ಚಿತ್ರವು ನಳನಳಿಸುವುದು. |
17:02 | ‘ಶಾರ್ಪನಿಂಗ್’ ಜೊತೆಗೆ ನೀವು ಅದನ್ನು ಪುನಃ ಮಾಡಬಹುದು. |
17:08 | ನೀವು Layers ನೊಂದಿಗೆ ಪಳಗಬೇಕು. |
17:15 | ಮೊದಲು ಲೇಯರನ್ನು ಎರಡುಸಲ ಮಾಡಿ. ಉದಾಹರಣೆಗೆ, Overlay ಮೋಡ್ ಅಥವಾ ಇನ್ನಿತರ ಮೋಡ್ ಗಳಲ್ಲಿ ಏನಾಗುತ್ತದೆ ಎಂದು ಪರಿಶೀಲಿಸಿರಿ. |
17:26 | ಪರಿಶೋಧಿಸಲು ಇಲ್ಲಿ ಬೇಕಾದಷ್ಟಿದೆ. ಅವುಗಳನ್ನು ನಾನು ಮತ್ತೆ ಯಾವಾಗಲಾದರೂ ವಿವರಿಸುತ್ತೇನೆ. |
17:33 | ಲೇಯರ್ ಮೋಡನ್ನು ಪ್ರತಿಸಲ ನಾನು ಬದಲಾಯಿಸಿದಾಗ ನನಗೆ ಪೂರ್ತಿಯಾಗಿ ಬೇರೆಯಾದ ಇಮೇಜ್ ಸಿಗುತ್ತದೆ ಎಂದು ನೀವು ನೋಡುತ್ತೀರಿ. |
17:41 | ನಿಮಗೆ ‘ಇಮೇಜ್’ನ ಒಂದೇ ಒಂದು ಭಾಗವನ್ನು ಬದಲಾಯಿಸಬೇಕಾಗಿದ್ದರೆ, Layer mask ಅನ್ನು ಸೇರಿಸಿರಿ ಮತ್ತು ‘ಇಮೇಜ್’ನಲ್ಲಿ ನಿಮಗೆ ನೋಡಬೇಕಾಗಿರುವುದನ್ನು White ನಿಂದ ಹಾಗೂ, |
17:58 | ನೋಡಲು ಬೇಡವಾಗಿರುವುದನ್ನು Black ನಿಂದ ತುಂಬಿಸಿರಿ. |
18:05 | ಬೂದುಬಣ್ಣವು ಭಾಗಶಃ ಕಾಣುತ್ತಿದೆ ಮತ್ತು ಅದು ಪಾರದರ್ಶಕವಾಗಿದೆ. |
18:12 | ಇದು ಈ ವಾರಕ್ಕಾಗಿ ಇತ್ತು ಎಂದು ನನಗೆನ್ನಿಸುತ್ತದೆ, |
18:17 | ಮುಂದಿನ ವಾರ ನಿಮ್ಮನ್ನು ಮತ್ತೆ ನೋಡುವೆನೆಂದು ಆಶಿಸುತ್ತೇನೆ. ವಂದನೆಗಳು. |
18:25 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………………… |