GIMP/C2/Resolutions/Kannada
From Script | Spoken-Tutorial
Revision as of 12:16, 10 December 2014 by Sandhya.np14 (Talk | contribs)
Time | Narration |
00:23 | Meet The GIMP (ಮೀಟ್ ದ ಗಿಂಪ್) ಎನ್ನುವುದಕ್ಕೆ ಸ್ವಾಗತ. |
00:25 | ಇದನ್ನು ರೋಲ್ಫ್ ಸ್ಟೇನೋರ್ಟ್ ಅವರು ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ. |
00:30 | ‘ರೆಸಲ್ಯೂಶನ್ಸ್'ಗಾಗಿ, ಕ್ರಮವಾಗಿ Image, image properties ಗಳಿಗೆ ಹೋಗಿ. ಇಲ್ಲಿ ಈ ಇಮೇಜ್, 508 (ಐದುನೂರ ಎಂಟು) ‘ಪಿಕ್ಸೆಲ್’ಗಳ ಅಗಲವನ್ನು ಮತ್ತು ‘72 by 72’ ‘ಪಿ ಪಿ ಐ’ ಅನ್ನು ಹೊಂದಿದೆ ಎಂದು ನೀವು ನೋಡಬಹುದು. |
00:46 | ppi (ಪಿ ಪಿ ಐ), ‘ಪಿಕ್ಸೆಲ್ಸ್ ಪರ್ ಇಂಚ್’ಅನ್ನು ಪ್ರತಿನಿಧಿಸುತ್ತದೆ. |
00:50 | ಹೀಗಾಗಿ, ಇದು, ಇಲ್ಲಿ ನನ್ನ ಸ್ಕ್ರೀನ್ ಮೇಲೆ, ಒಂದು ‘ಇಂಚ್’ಗೆ 72 (ಎಪ್ಪತ್ತೆರಡು) ಪಿಕ್ಸೆಲ್’ಗಳಾಗಿವೆ. |
00:56 | ppi(ಪಿ ಪಿ ಐ), ಮೂಲತಃ dpi (ಡಿ ಪಿ ಐ-ಡಾಟ್ಸ್ ಪರ್ ಇಂಚ್) ನಂತೆಯೇ ಆಗಿದೆ. |
01:03 | ಮತ್ತು ‘ಪ್ರಿಂಟಿಂಗ್’ಗಾಗಿ, ಸರಿಯಾದ ರೆಸಲ್ಯೂಶನ್ ಮುಖ್ಯವಾಗಿದೆ. |
01:07 | ನೀವು ಒಂದು ‘ಇಂಚ್’ ಕಾಗದದ ಮೇಲೆ, ‘ಇಂಕ್’ನ ಎಷ್ಟು ಚುಕ್ಕೆಗಳನ್ನು ಇಡುತ್ತೀರಿ ಎಂದು ಅವರು ಚರ್ಚೆ ಮಾಡುತ್ತಾರೆ. |
01:14 | ಒಂದು ‘ಇಂಚ್’ ಉದ್ದದ ಗೆರೆಯಲ್ಲಿ ಸುಮಾರು 300 ‘ಡಾಟ್ಸ್ ಪರ್ ಇಂಚ್’ ಇರುತ್ತವೆ ಮತ್ತು ಅವುಗಳು ಎಷ್ಟು ಹತ್ತಿರದಲ್ಲಿ ಪ್ರಿಂಟ್ ಆಗಿವೆ ಎಂದರೆ ನೀವು ಒಂದು ಗೆರೆಯನ್ನು ನೋಡುತ್ತೀರಿ, ಚುಕ್ಕೆಗಳ ಒಂದು ಸಾಲನ್ನು ಅಲ್ಲ. |
01:27 | ಯಾರಿಗಾದರೂ ಇಮೇಜನ್ನು ಪ್ರಿಂಟ್ ಮಾಡಬೇಕಾಗಿದ್ದರೆ ಆವಾಗ ಅವರು ಇಮೇಜನ್ನು 300 ppi (ಮುನ್ನೂರು ಪಿ ಪಿ ಐ) ನಲ್ಲಿ ಕೇಳಬಹುದು ಅಥವಾ ನಮಗೆ ಈ ಇಮೇಜ್, 150 dpi (ನೂರೈವತ್ತು ಡಿ ಪಿ ಐ) ನಲ್ಲಿ ಬೇಕು ಇಲ್ಲವಾದರೆ ಗುಣಮಟ್ಟವು ಸಾಕಷ್ಟು ಉತ್ತಮವಾಗಿರುವದಿಲ್ಲ ಎಂದು ಅವರು ಹೇಳಬಹುದು.. |
01:46 | ಹೀಗಾಗಿ, ನೀವು ಇದಕ್ಕಾಗಿ ಏನು ಮಾಡಲು ಸಾಧ್ಯವಿದೆ? |
01:49 | ನೀವು ಇದನ್ನು ಸುಲಭವಾಗಿ ಬದಲಾಯಿಸಬಹುದು. |
01:53 | ಕ್ರಮವಾಗಿ, Image, Scale Image ಗಳಿಗೆ ಹೋಗಿ. |
01:56 | ನಾವು ಅನೇಕ ಸಲ ಬಳಸಿರುವ, Width, Height ಗಳನ್ನು ಈ ‘ಡೈಲಾಗ್’ನಲ್ಲಿ ನೀವು ನೋಡಬಹುದು . |
02:04 | ನೀವು X resolution ಹಾಗೂ Y resolution ಗಳನ್ನು ಸಹ ಇಲ್ಲಿ ನೋಡಬಹುದು ಮತ್ತು ವ್ಯಾಲ್ಯೂ 72 (ಎಪ್ಪತ್ತೆರಡು) ‘ಪಿಕ್ಸೆಲ್ಸ್ ಪರ್ ಇಂಚ್’ ಆಗಿದೆ. ನಾನು ಅದನ್ನು ‘ಪಿಕ್ಸೆಲ್ಸ್ ಪರ್ ಮಿಲೀಮೀಟರ್’ ಅಥವಾ ‘ಪಿಕ್ಸೆಲ್ಸ್’, ಪಾಯಿಂಟ್, ‘ಪಿಕಾ’ ಗೆ ಬದಲಾಯಿಸಬಹುದು. |
02:21 | ಆದರೆ ಇದನ್ನು ನಾವು ‘ಪಿಕ್ಸೆಲ್ಸ್ ಪರ್ ಇಂಚ್’ನೊಂದಿಗೆ ಇಡೋಣ. |
02:26 | X resolution ಮತ್ತು Y resolution, 72 (ಎಪ್ಪತ್ತೆರಡು) ppi ಅನ್ನು ವ್ಯಾಲ್ಯೂ ಆಗಿ ಪಡೆದಿವೆ. ನಾನು ಅದನ್ನು 300 ppi (ಮುನ್ನೂರು ಪಿ ಪಿ ಐ) ಗೆ ಬದಲಾಯಿಸುತ್ತೇನೆ. |
02:40 | ಈಗ, ಇಮೇಜನ್ನು ಸ್ಕೇಲ್ ಮಾಡುತ್ತೇನೆ. ನಾನು image properties ಗೆ ಹೋದಾಗ ಹೊರತುಪಡಿಸಿ, ಇಲ್ಲಿ ಏನೂ ಬದಲಾಗಿಲ್ಲವೆಂದು ನೀವು ನೋಡುತ್ತೀರಿ. |
02:49 | ಈಗ, ಇಲ್ಲಿ ರೆಸಲ್ಯೂಶನ್, ‘300 by 300 ppi’(ಮುನ್ನೂರು ಬೈ ಮುನ್ನೂರು ಪಿ ಪಿ ಐ) ಗೆ ಬದಲಾಗಿರುವುದನ್ನು ಮತ್ತು ಪ್ರಿಂಟ್ ಸೈಜ್, 3 (ಮೂರು) ದೊಡ್ಡ ‘ಸ್ಟಾಂಪ್’ಗಳಷ್ಟು ಇರುವುದನ್ನು ಇಲ್ಲಿ ನೀವು ನೋಡಬಹುದು. |
03:03 | ಅದು ಸುಮಾರು ‘4 by 3’ ಸೆಂಟಿಮೀಟರ್ ಗಳಷ್ಟು ಆಗಿದೆ. |
03:07 | ಇದು ಒಂದು ದೊಡ್ಡ ಸ್ಟಾಂಪ್ ಆಗಿದೆ. |
03:09 | ‘ಇಮೇಜ್’ನಲ್ಲಿ, ‘ರೆಸಲ್ಯೂಶನ್’ಅನ್ನು ಹೊರತುಪಡಿಸಿ ನಾನು, ಏನನ್ನೂ ಬದಲಾಯಿಸಿಲ್ಲ. |
03:17 | ಸ್ಕ್ರೀನ್, ಮೇಲೆ ಎನೂ ಬದಲಾಗಿಲ್ಲ, ಅದು ಇನ್ನೂ 72 (ಎಪ್ಪತ್ತೆರಡು) ‘ಪಿಕ್ಸೆಲ್ಸ್ ಪರ್ ಇಂಚ್’ ಆಗಿದೆ. |
03:24 | ಈ ಸಂಖ್ಯೆಯು ಮೂಲತಃ ಅರ್ಥಹೀನವಾಗಿದೆ. |
03:27 | 300 ‘ಡಾಟ್ಸ್ ಪರ್ ಇಂಚ್’ ಗುಣಮಟ್ಟದ ಇಮೇಜನ್ನು ನಿಮಗೆ ಪ್ರಿಂಟ್ ಮಾಡಬೇಕಾಗಿದೆ ಎಂದು ನಿಮಗೆ ತಿಳಿದರೆ ಅದಕ್ಕೊಂದು ಅರ್ಥ ಸಿಗುತ್ತದೆ. ಅದು, ನಿಜವಾಗಿಯೂ ಉತ್ತಮವಾದ ವ್ಯಾಲ್ಯೂ ಆಗಿದೆ. ನಿಮಗೆ ಒಂದುವೇಳೆ ಇದು ‘10 by 15’ ‘ಇಂಚ್’ಗಳಲ್ಲಿ ಬೇಕಾಗಿದ್ದರೆ ಆಗ ಈ ‘ಪಿಕ್ಸೆಲ್’ಗಳು ಸಾಕಷ್ಟಿಲ್ಲ ಎಂದು ನೀವು ನೋಡುತ್ತೀರಿ. |
03:51 | ಆದ್ದರಿಂದ ನೀವು ‘ಪಿಕ್ಸೆಲ್’ಗಳನ್ನು ಹೆಚ್ಚಿಸಬೇಕಾಗಿದೆ. |
03:55 | ಆದರೆ ‘ಪ್ರಿಂಟರ್’ಗಾಗಿ ‘ಇಮೇಜ್’ನ ಗುಣಮಟ್ಟವು, ಸೈಜ್’ನಲ್ಲಿ ಎಷ್ಟು ‘ಪಿಕ್ಸೆಲ್’ಗಳಿವೆ, ಎಷ್ಟು ಉದ್ದ ಅಥವಾ ಎಷ್ಟು ದೊಡ್ಡ ಜಾಗವನ್ನು ನಿಮಗೆ ಪ್ರಿಂಟ್ ಮಾಡಬೇಕಾಗಿದೆ ಎನ್ನುವುದರ ಮೇಲೆ ಅವಲಂಬಿಸಿದೆ. |
04:10 | ಮತ್ತು ಆ ಗುಣಲಕ್ಷಣವು ‘ಪ್ರಿಂಟರ್’ನಿಂದ ಸೆಟ್ ಮಾಡಲ್ಪಡುತ್ತದೆ. ಇಮೇಜ್ನಲ್ಲಿ ನೀವು ಅದನ್ನು ಸೆಟ್ ಮಾಡಬೇಕೆನ್ನುವುದು ಅಷ್ಟು ಮುಖ್ಯವಲ್ಲ. |
04:21 | ಆದರೆ ಯಾರಾದರೂ ನಿಮ್ಮನ್ನು ಇಮೇಜನ್ನು 200 (ಇನ್ನೂರು) ರಿಂದ 300 (ಮುನ್ನೂರು) ‘ಡಾಟ್ಸ್ ಪರ್ ಇಂಚ್’ಗೆ ಸೆಟ್ ಮಾಡಲು ಹೇಳಿದರೆ, ಸುಮ್ಮನೆ ಮಾಡಿಬಿಡಿ, ಇದನ್ನು ಚರ್ಚಿಸಬೇಡಿ. |
04:32 | ಇದರ ಬಗ್ಗೆ ಅರ್ಥಪೂರ್ಣ ಚರ್ಚೆಗಳಿಗೆ ಕೆಲವು ‘ಲಿಂಕ್’ಗಳನ್ನು ‘ಶೋ ನೋಟ್ಸ್’ನಲ್ಲಿ ನಾನು ಹಾಕುತ್ತೇನೆ. ನೀವು ಅವುಗಳನ್ನು ಅಲ್ಲಿ ನೋಡಬಹುದು. |
04:39 | ನನಗೆ ಈ ಇಮೇಜ್, 'ಬಿಲ್-ಬೋರ್ಡ್ಸ್’ಗಳಿಗೆ ಬೇಕಾಗಿದ್ದರೆ ಆವಾಗ ನಾನು ಇಮೇಜನ್ನು ಸ್ಕೇಲ್ ಮಾಡಬೇಕಾಗುತ್ತದೆ. |
04:44 | 5 ‘ಡಾಟ್ಸ್ ಪರ್ ಇಂಚ್‘, ‘ಬಿಲ್-ಬೋರ್ಡ್’ಗಾಗಿ ಉತ್ತಮ ವ್ಯಾಲ್ಯೂ ಆಗಿದೆ ಎಂದು ನಾನು ಭಾವಿಸುತ್ತೇನೆ. |
04:51 | ಇಮೇಜನ್ನು ಸ್ಕೇಲ್ ಮಾಡಿ, ಏನೂ ಬದಲಾಯಿಸಿಲ್ಲವೆಂದು ನೀವು ನೋಡಬಹುದು. ಆದರೆ, ಈಗ Image Properties ನಲ್ಲಿ, ಪ್ರಿಂಟ್ ಸೈಜ್, ‘100 by 76’ ಇಂಚ್’ಗಳು ಎಂದರೆ 2 ಮೀಟರ್. 50 ಸೆಂಟಿಮೀಟರ್ ಆಗಿದೆ. ಇಲ್ಲಿಯ ಈ ‘ಇಮೇಜ್’ನೊಂದಿಗೆ ಅದು ಸೊಗಸಾದ ಪೋಸ್ಟರ್ ಆಗುತ್ತದೆ. |
05:10 | ನೀವು ಸ್ವತಃ ಪ್ರಿಂಟ್ ಮಾಡದಿದ್ದರೆ, ನಮಗೆ ಇಲ್ಲಿ ಈ ರೆಸಲ್ಯೂಶನ್ ಎನ್ನುವುದು ಮೂಲತಃ ಅರ್ಥಹೀನವಾಗಿದೆ. |
05:18 | ಹೆಚ್ಚಿನ ಮಾಹಿತಿಗಾಗಿ, ಕೆಳಗೆ ತೊರಿಸಿದ ಲಿಂಕ್ ಗೆ ಹೋಗಿ. http://meetthegimp.org ಮತ್ತು ನಿಮ್ಮ ಅಭಿಪ್ರಾಯವನ್ನು ತಿಳಿಸಲು ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಬರೆಯಿರಿ. |
05:30 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪಕ್ಕಾಗಿ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ------------- |