Scilab/C2/Why-Scilab/Kannada

From Script | Spoken-Tutorial
Revision as of 12:40, 24 July 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00.01 ’ಸೈಲ್ಯಾಬ್ ನ ಪ್ರಯೊಜನಗಳು’ ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00.06 ಈ ಟ್ಯುಟೋರಿಯಲ್ ನಿಂದ ಸೈಲ್ಯಾಬ್ ಪ್ಯಾಕೇಜ್ ನ ಯೋಗ್ಯತೆ ಮತ್ತು ಸೈಲ್ಯಾಬ್ ಗೆ ವರ್ಗಾಯಿಸುವುದರಿಂದಾಗುವ ಪ್ರಯೊಜನಗಳನ್ನು ತಿಳಿಯುತ್ತೀರಿ.
00.16 ಸೈಲ್ಯಾಬ್ ಎಂಬುದು ಫ್ರೀ ಹಾಗೂ ಒಪನ್ ಸೊರ್ಸ್, ಬಳಸಲು ಸುಲಭವಾದ (user friendly) ಸಂಖ್ಯಾತ್ಮಕ (numerical) ಮತ್ತು ಕಂಪ್ಯುಟೇಶನಲ್ ಪ್ಯಾಕೇಜ್ ಆಗಿದೆ.
00.23 ಇದನ್ನು ಎಂಜಿನೀರಿಂಗ್ ಮತ್ತು ವಿಜ್ಞಾನ ದ ವಿವಿಧ ವಿಭಾಗಗಳಲ್ಲಿ ಉಪಯೋಗಿಸಬಹುದು.
00.28 ಇದು ವಿವಿಧ ಆಪರೇಟಿಂಗ್ ಸಿಸ್ಟಮ್ ಗಳಿಗೆ ಲಭ್ಯವಿದೆ. ಉದಾ: ವಿಂಡೋಸ್ (Windows), ಲಿನಕ್ಸ್ (Linux) ಮತ್ತು ಮ್ಯಾಕ್ ಒ ಎಸ್/ಎಕ್ಸ್ ( Mac OS/X)
00.35 ಸೈಲ್ಯಾಬ್ ಅನ್ನು ಸೈಂಟಿಫಿಕ್ ನ “ಸೈ” ಅಂತೆಯೂ ಮತ್ತು ಲ್ಯಾಬೊರೇಟರಿ ಯ “ಲ್ಯಾಬ್” ಅಂತೆಯೂ ಉಚ್ಛರಿಸಬೇಕು.
00.43 ಸೈಲ್ಯಾಬ್, ಫ್ರೀ ಮತ್ತು ಒಪನ್ ಸೊರ್ಸ್ ಸಾಫ್ಟ್ ವೇರ್ ಆಗಿರುವುದರಿಂದ, ಬಳಸುವವರು (users):
00.48 ಸೋರ್ಸ್ ಕೋಡ್ ನ್ನು ನೊಡಬಹುದು ಮತ್ತು ಬದಲಾಯಿಸಬಹುದು.
00.51 ಸೋರ್ಸ್ ಕೋಡ್ ನ್ನು ಸುಧಾರಿಸಬಹುದು ಮತ್ತು ಮರುಹಂಚಿಕೆ (Redistribute) ಮಾಡಬಹುದು.
00.55 ಸಾಫ್ಟ್ ವೇರ್ ನ್ನು ಯಾವುದೇ ಉದ್ದೇಶಕ್ಕಾಗಿ ಬಳಸಬಹುದು.
00.59 ಇದು ಖಾಸಗಿ ಕೈಗಾರಿಕೆಗಳಲ್ಲಿ, ಉದ್ಯಮಗಳಲ್ಲಿ, ರಕ್ಷಣಾ ವ್ಯವಸ್ಥೆಯಲ್ಲಿ, ಸಂಶೋಧನಾ ಸಂಸ್ಥೆಗಳಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾಗೂ
01.05 ವೈಯಕ್ತಿಕ ಬಳಕೆಯಲ್ಲಿ ನಿರ್ದಿಷ್ಟ ಪ್ರಯೋಜನವನ್ನು ಹೊಂದಿದೆ.
01.12 ಸಂಸ್ಥೆಯಲ್ಲಿ FOSS ಟೂಲ್ಗಳನ್ನು ಬಳಸುವುದರಿಂದ ವಾಣಿಜ್ಯ ಉಪಕರಣಗಳ (commercial packages) ಪೈರಸಿ ಯನ್ನು ಸಂಪೂರ್ಣವಾಗಿ ತಡೆಯಬಹುದು.
01.20 ಸೈಲ್ಯಾಬ್ ಫ್ರೀ ಆಗಿರುವುದರಿಂದ, ಶೈಕ್ಷಣಿಕ ಮಟ್ಟದಲ್ಲಿ ಸೈಲ್ಯಾಬ್ ನಿಂದ ಕಲಿತ ಕೌಶಲ್ಯಗಳಿಂದ ಮುಂದೆ ಉದ್ಯಮಗಳಲ್ಲಿ ಪ್ರಯೋಜನವಾಗುವುದು.
01.29 ಸೈಲ್ಯಾಬ್ ನೊಂದಿಗೆ ಇತರ ಫ್ರೀ ಟೂಲ್ ಬಾಕ್ಸ್ ಗಳನ್ನು ಉಪಯೋಗಿಸುವುದರಿಂದ ಈ ಕೆಳಗಿನ ಕಾರ್ಯಗಳನ್ನು ಮಾಡಬಹುದು.
01.36 ಮ್ಯಾಟ್ರಿಕ್ಸ್ ಕಾರ್ಯಗಳು (Matrix operations)
01.38 ನಿಯಂತ್ರಣ ವ್ಯವಸ್ಥೆ (Control Systems)
01.40 ಚಿತ್ರ ಮತ್ತು ವೀಡಿಯೊ ಸಂಸ್ಕರಣೆ (Processing)
01.43 ಸೀರಿಯಲ್ ಟೂಲ್ ಬಾಕ್ಸ್ ಉಪಯೋಗಿಸಿ ರಿಯಲ್ ಟೈಮ್ ಹಾರ್ಡ್ವೇರ್ ಗಳನ್ನು ನಿಯಂತ್ರಿಸುವುದು
01.48 HART ಟೂಲ್ ಬಾಕ್ಸ್ ಉಪಯೋಗಿಸಿ ವಿವಿಧ ಮಾಹಿತಿ ಕಲೆ ಹಾಕುವ ವ್ಯವಸ್ಥೆ/ಕಾರ್ಡ್ ಗಳ ನಡುವೆ ಸಂಪರ್ಕ ಏರ್ಪಡಿಸುವುದು
01.54 ಎಕ್ಸ್ ಕಾಸ್ – ಬ್ಲಾಕ್ ಡೈಗ್ರಾಮ್ ಸಿಮ್ಯುಲೇಟರ್ (Xcos-Block Diagram Simulator) ಉಪಯೋಗಿಸಿ ಅನುಕರಣೆ (Simulation) ಮಾಡುವುದು
01.59 ಪ್ಲಾಟಿಂಗ್ (Plotting)
02.01 HIL ಅನುಕರಣೆ (Simulation)
02.06 ರಿಯಲ್-ಟೈಮ್ ಅನುಕರಣೆಯಲ್ಲಿ ನಿಜವಾದ ಘಟಕವನ್ನು ಲೂಪ್ ನಲ್ಲಿ ಜೋಡಿಸುವುದರಿಂದ HIL ಅನುಕರಣೆಗಿಂತ ಭಿನ್ನವಾಗಿದೆ.
02.14 ಸೈಲ್ಯಾಬ್ ನೊಂದಿಗೆ ಸಿಂಗಲ್ ಬೋರ್ಡ್ ಹೀಟರ್ ಸಿಸ್ಟಮ್ ಸಾಧನವನ್ನು, HIL ಸಾಧನದಂತೆ ನಿಯಂತ್ರಣ ವ್ಯವಸ್ಥೆಯ ಪ್ರಯೋಗಗಳಲ್ಲಿ ಉಪಯೋಗಿಸಬಹುದು.
02.26 ಸೈಲ್ಯಾಬ್ ನ ಸಿಂಟ್ಯಾಕ್ಸ್ ಬಹು ಸುಲಭ.
02.29 ಅನೇಕ ಸಂಖ್ಯಾತ್ಮಕ ಸಮಸ್ಯೆಗಳಿಗೆ ಒಂದೇ ರೀತಿಯ ಪರಿಹಾರಗಳನ್ನು, ಫೋರ್ಟ್ರಾನ್, ಸಿ ಅಥವಾ ಸಿ++ ಮುಂತಾದ ಸಾಂಪ್ರದಾಯಿಕ ಭಾಷೆಗಳಿಗಿಂತ, ಸೈಲ್ಯಾಬ್ ನಲ್ಲಿ ಕಡಿಮೆ ಕೋಡ್ ಸಾಲುಗಳಲ್ಲಿ ವ್ಯಕ್ತಪಡಿಸಬಹುದು.
02.42 ಸೈಲ್ಯಾಬ್, ಇತರ ಪ್ರಸಿದ್ಧ ಪ್ರೊಪ್ರೈಯೆಟರಿ ಪ್ಯಾಕೇಜ್ ಗಳಂತೆ State-of-art ಲೈಬ್ರರಿಯನ್ನು ಉಪಯೋಗಿಸುತ್ತದೆ. ಉದಾಹರಣೆಗ, ಸಂಖ್ಯಾತ್ಮಕ (numerical) ಕಂಪ್ಯುಟೇಶನ್ ಗಳಿಗಾಗಿ ಲಾಪ್ಯಾಕ್ (LAPACK).
02.52 ಮೇಲಿಂಗ್ ಲಿಸ್ಟ್, ಯೂಸ್ನೆಟ್ ಗುಂಪುಗಳು (ಇಂಟರ್ನೆಟ್ ಚರ್ಚೆಯ ಗುಂಪುಗಳು)
03.00 ವೆಬ್ಸೈಟ್ಗಳ ರೂಪದಲ್ಲಿ ಸೈಲ್ಯಾಬ್ ಅನ್ನು ಬೆಂಬಲಿಸುವ ಮತ್ತು ಉಪಯೋಗಿಸುವ
03.02 ಒಂದು ದೊಡ್ಡ ಬಳಾಕೆದಾರರ ಸಮುದಾಯವಿದೆ.
03.07 ಸೈಲ್ಯಾಬ್ ಮತ್ತು ಅದರ ಟೂಲ್ ಬಾಕ್ಸ್ನ ಬಗೆಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ 'scilab.org' ಅಥವಾ 'scilab.in' ವೆಬ್ಸೈಟ್ ಗೆ ಭೇಟಿ ಕೊಡಿ.
03.18 ಸೈಲ್ಯಾಬ್ ನ್ನು ಬಳಸುತ್ತಿರುವ ಕೆಲವು ಸಂಸ್ಥೆಗಳು:
03.23 ಫ್ರೆಂಚ್ ಸ್ಪೇಸ್ ಸಟಲೈಟ್ ಏಜನ್ಸಿ (French Space Satellite Agency) ಯಾದ ಸಿ ಎನ್ ಇ ಎಸ್ (CNES)
03.28 ಈಕ್ವಾಲಿಸ್ (EQUALIS )
03.31 ಟೆಕ್ಪ್ಯಾಶನ್ಟ್ಕ್(Techpassiontech) ಮತ್ತು
03.33 ಸಂಶೊಧನೆ ಮತ್ತು ಶೈಕ್ಶಣಿಕ ಉದ್ದೇಶಕ್ಕಾಗಿ ಐಐಟಿ ಬಾಂಬೆ.
03.37 ಐಐಟಿ ಬಾಂಬೆಯಲ್ಲಿ NMEICT ಯೋಜನೆಗಳ ಮೂಲಕ ಸೈಲ್ಯಾಬ್ ನ ಉತ್ತೇಜನಕ್ಕಾಗಿ ಇರುವ ಚಟುವಟಿಕೆಗಳು:
03.45 ಲ್ಯಾಬ್ ಮೈಗ್ರೇಶನ್, ಎಂದರೆ ಎಲ್ಲಾ ಕಾಂಪ್ಯುಟೇಶನಲ್ ಪ್ರಯೋಗಾಲಯಗಳನ್ನು ಸೈಲ್ಯಾಬ್ ಗೆ ಬದಲಾಯಿಸುವುದು,
03.51 ವರ್ಚುಯಲ್ ಲ್ಯಾಬ್ಸ್, ಎಂದರೆ ಸಿಂಗಲ್ ಬೋರ್ಡ್ ಹೀಟರ್ ಸಿಸ್ಟಮ್ ಗೆ ರಿಮೋಟ್ ಪ್ರವೇಶ,
03.56 ಜೊತೆಗೆ, ನ್ಯಾಶನಲ್ ಮಿಶನ್ ಆನ್ ಎಜುಕೇಶನ್ ಥ್ರೂ ICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರದಿಂದ ಅನುದಾನಿತ FOSSEE ಯೋಜನೆಯು, ಪ್ರಸ್ತುತ ಪೈಥಾನ್ ಮತ್ತು ಸೈಲ್ಯಾಬ್ ಗಳಲ್ಲಿ ಕೇಂದ್ರಿತವಾಗಿದೆ.
04.07 ಸೈಲ್ಯಾಬ್ ನ ಹಲವಾರು spoken tutorial ಗಳನ್ನು ಈಗ ನಾವು ಹೊಂದಿದ್ದೇವೆ.
04.12 ಭಾರತದಲ್ಲಿ ಪರಿಶ್ರಮಗಳನ್ನು scilab.in ವೆಬ್ಸೈಟ್ ಮೂಲಕ ಸಂಯೋಜಿಸಲ್ಪಡುತ್ತಿವೆ.
04.18 ಕೆಲವು ಆಸಕ್ತಿದಾಯಕ ಯೋಜನೆಗಳಲ್ಲೊಂದಾದ Textbook Companion ಯೋಜನೆಯು, ಗುಣಮಟ್ಟದ ಪಠ್ಯಪುಸ್ತಕಗಳ ಉದಾಹರಣೆಗಳನ್ನು ಸೈಲ್ಯಾಬ್ ನಿಂದ ಕೋಡ್ ಮಾಡಲಾಗಿದೆ.
04.28 link ಯೋಜನೆಯು, ಸೈಲ್ಯಾಬ್ ದಾಖಲೆಗಳನ್ನು ತಳಕು ಹಾಕಲು ಮತ್ತು ಸ್ಥಾನ ಕಲ್ಪಿಸಲು ಬಳಕೆದಾರರಿಗೆ ಅವಕಾಶ ಕೊಡುತ್ತದೆ.
04.34 ನಾವು ಸೈಲ್ಯಾಬ್ ನ ಕಾರ್ಯಶಾಲೆಗಳನ್ನು ಏರ್ಪಡಿಸಲು ಸಹಾಯ ಮಾಡುತ್ತೇವೆ.
04.38 ನಾವು ಎರಡು ಮೈಲಿಂಗ್ ಲಿಸ್ಟ್ ಗಳನ್ನು ಹೊಂದಿದ್ದೇವೆ, ಒಂದು ಚರ್ಚಿಸಲು ಮತ್ತು ಇನ್ನೊಂದು ಅನೌನ್ಸ್ ಮಾಡಲು.
04.43 ನಾವು ನಮ್ಮೆಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ನಿಮ್ಮನ್ನು ಆಹ್ವಾನಿಸುತ್ತೇವೆ.
04.47 ಈಗ, ಸ್ಪೋಕನ್ ಟ್ಯುಟೊರಿಯಲ್ ಗೆ ಮರಳಿ ಬರೋಣ.
04.50 ಮಾತನಾಡುವ ಭಾಗವು (spoken part) ವಿವಿಧ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.
04.56 ಇವು spoken-tutorial.org ವೆಬ್ಸೈಟ್ ನಲ್ಲಿ ಲಭ್ಯವಿದೆ.
05.01 ಈ ಟ್ಯುಟೋರಿಯಲ್ ಗಳು ಸೈಲ್ಯಾಬ್ ತರಬೇತಿಯ ಮೊದಲನೇ ಭಾಗವಾಗಿದೆ.
05.06 ಈ ಟ್ಯುಟೋರಿಯಲ್ ಗಳು ಸಂಪೂರ್ಣ ಉಚಿತವಾಗಿ ಲಭ್ಯವಿದೆ.
05.10 ಈ ಮಾರ್ಗದಲ್ಲಿ ವಿವಿಧ FOSS systems ಗಳನ್ನು ಮುಗಿಸಲು ಇಚ್ಚಿಸುತ್ತೇವೆ.
05.14 ಈ ವಿಷಯಗಳಲ್ಲಿ ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.
05.17 ಸಾಫ್ಟ್ವೇರ್ ರೂಪರೇಖೆಯನ್ನು ಬರೆಯುವಲ್ಲಿ,
05.19 ಮೂಲ ಸ್ಕ್ರಿಪ್ಟ್ ಬರೆಯುವಲ್ಲಿ,
05.22 spoken tutorial ನ್ನು ರೆಕಾರ್ಡ ಮಾಡುವಲ್ಲಿ,
05.24 ಸ್ಕ್ರಿಪ್ಟ್ ನ್ನು ಭಾರತದ ಬೇರೆ ಭಾಷೆಗಳಿಗೆ ಭಾಷಾಂತರಿಸಲು,
05.27 ಸ್ಕ್ರಿಪ್ಟ್ ನ್ನು ಉಪಯೋಗಿಸಿ, ಧ್ವನಿಯನ್ನು ಭಾರತದ ವಿವಿಧ ಭಾಷೆಗಳಲ್ಲಿ ಭಾಷಾಂತರಿಸಲು,
05.31 ಈ ಮೇಲಿನ ಎಲ್ಲಾ ವಿಷಯಗಳನ್ನು ವಿಮರ್ಶಿಸಿ ಪ್ರತಿಕ್ರಿಯೆ ನೀಡಲು,
05.35 ನಾವು ನಿಮ್ಮ ಭಾಗವಹಿಸುವಿಕೆಯನ್ನು ಸ್ವಾಗತಿಸುತ್ತೇವೆ.
05.39 ನಾವು, ಈ ಸ್ಪೋಕನ್ ಟ್ಯುಟೊರಿಯಲ್ ಬಳಸಿ ಕಾರ್ಯಾಗಾರ ನಡೆಸಲು ನಿಮ್ಮನ್ನು ಸ್ವಾಗತಿಸುತ್ತೇವೆ.
05.44 ನಾವು, ನಿಮ್ಮನ್ನು ಸ್ಪೋಕನ್ ಟ್ಯುಟೋರಿಯಲ್ ಮೇಲೆ ಪರಿಣಾಮಕಾರಿ ಅಧ್ಯಯನಗಳನ್ನು ನಡೆಸಲು ಅಹ್ವಾನಿಸುತ್ತೇವೆ.
05.49 ನಾವು ಆಡಿಯೊ, ವಿಡಿಯೊ, ಆಟೊಮ್ಯಾಟಿಕ್ ಭಾಷಾಂತರ ಇತ್ಯಾದಿ ತಂತ್ರಜ್ಞಾನಗಳಲ್ಲಿ ಬೆಂಬಲ ನೀಡುವ ತಜ್ಞರಿಗಾಗಿ ಹುಡುಕುತ್ತಿದ್ದೇವೆ.
05.57 ನಮ್ಮಲ್ಲಿ ಈ ಎಲ್ಲ ಚಟುವಟಿಕೆಗಳಿಗೆ ಬೇಕಾದ ಧನಸಹಾಯವಿದೆ.
06.00 ಈ ಸ್ಪೋಕನ್ ಟ್ಯುಟೋರಿಯಲ್ ನ್ನು ಫ್ರೀ ಎಂಡ್ ಒಪನ್ ಸೋರ್ಸ್ ಸಾಫ್ಟ್ವೇರ್ ಇನ್ ಸೈನ್ಸ್ ಎಂಡ್ ಇಂಜಿನಿಯರಿಂಗ್ ಎಜುಕೇಶನ್ (FOSSEE) ಇಂದ ರಚಿಸಲಾಗಿದೆ.
06.08 FOSSEE ಯೋಜನೆಯ ಹೆಚ್ಚಿನ ಮಾಹಿತಿಯನ್ನು fossee.in ಅಥವಾ scilab.in ಎಂಬ ವೆಬ್ಸೈಟ್ ಇಂದ ಪಡೆಯಬಹುದು.
06.16 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
06.22 ಹೆಚ್ಚಿನ ಮಾಹಿತಿಗಾಗಿ http://spoken-tutorial.org/NMEICT-Intro ಎಂಬಲ್ಲಿ ಭೇಟಿಕೊಡಿ.
06.31 ಇದರ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ. ಐ. ಟಿ. ಬಾಂಬೆಯಿಂದ ವಾಸುದೇವ.
06.34 ಇಲ್ಲಿಯವರೆಗೆ ನಮ್ಮ ಜೊತೆಗೆ ಇದ್ದಿದ್ದಕ್ಕೆ ಧನ್ಯವಾದಗಳು. ನಮಸ್ಕಾರ.

Contributors and Content Editors

PoojaMoolya, Sandhya.np14, Vasudeva ahitanal