Scilab/C2/Why-Scilab/Kannada

From Script | Spoken-Tutorial
Jump to: navigation, search
Time Narration
00:01 ’ಸೈಲ್ಯಾಬ್ ನ ಪ್ರಯೊಜನಗಳು’ ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಿಂದ ಸೈಲ್ಯಾಬ್ ಪ್ಯಾಕೇಜ್ ನ ಯೋಗ್ಯತೆ ಮತ್ತು ಸೈಲ್ಯಾಬ್ ಗೆ ವರ್ಗಾಯಿಸುವುದರಿಂದಾಗುವ ಪ್ರಯೊಜನಗಳನ್ನು ತಿಳಿಯುತ್ತೀರಿ.
00:16 ಸೈಲ್ಯಾಬ್ ಎಂಬುದು ಫ್ರೀ ಹಾಗೂ ಓಪನ್ ಸೋರ್ಸ್, ಬಳಸಲು ಸುಲಭವಾದ (user friendly) ಸಂಖ್ಯಾತ್ಮಕ (numerical) ಮತ್ತು ಕಂಪ್ಯುಟೇಶನಲ್ ಪ್ಯಾಕೇಜ್ ಆಗಿದೆ.
00:23 ಇದನ್ನು ಎಂಜಿನೀರಿಂಗ್ ಮತ್ತು ವಿಜ್ಞಾನ ದ ವಿವಿಧ ವಿಭಾಗಗಳಲ್ಲಿ ಉಪಯೋಗಿಸಬಹುದು.
00:28 ಇದು ವಿವಿಧ ಆಪರೇಟಿಂಗ್ ಸಿಸ್ಟಮ್ ಗಳಿಗೆ ಲಭ್ಯವಿದೆ. ಉದಾ: ವಿಂಡೋಸ್ (Windows), ಲಿನಕ್ಸ್ (Linux) ಮತ್ತು ಮ್ಯಾಕ್ ಒ ಎಸ್/ಎಕ್ಸ್ ( Mac OS/X)
00:35 ಸೈಲ್ಯಾಬ್ ಅನ್ನು ಸೈಂಟಿಫಿಕ್ ನ “ಸೈ” ಅಂತೆಯೂ ಮತ್ತು ಲ್ಯಾಬೊರೇಟರಿ ಯ “ಲ್ಯಾಬ್” ಅಂತೆಯೂ ಉಚ್ಛರಿಸಬೇಕು.
00:43 ಸೈಲ್ಯಾಬ್, ಫ್ರೀ ಮತ್ತು ಒಪನ್ ಸೋರ್ಸ್ ಸಾಫ್ಟ್ ವೇರ್ ಆಗಿರುವುದರಿಂದ, ಬಳಸುವವರು (users):
00:48 ಸೋರ್ಸ್ ಕೋಡ್ ನ್ನು ನೋಡಬಹುದು ಮತ್ತು ಬದಲಾಯಿಸಬಹುದು.
00:51 ಸೋರ್ಸ್ ಕೋಡ್ ನ್ನು ಸುಧಾರಿಸಬಹುದು ಮತ್ತು ಮರುಹಂಚಿಕೆ (Redistribute) ಮಾಡಬಹುದು.
00:55 ಸಾಫ್ಟ್ ವೇರ್ ನ್ನು ಯಾವುದೇ ಉದ್ದೇಶಕ್ಕಾಗಿ ಬಳಸಬಹುದು.
00:59 ಇದು ಖಾಸಗಿ ಕೈಗಾರಿಕೆಗಳಲ್ಲಿ, ಉದ್ಯಮಗಳಲ್ಲಿ, ರಕ್ಷಣಾ ವ್ಯವಸ್ಥೆಯಲ್ಲಿ, ಸಂಶೋಧನಾ ಸಂಸ್ಥೆಗಳಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾಗೂ
01:05 ವೈಯಕ್ತಿಕ ಬಳಕೆಯಲ್ಲಿ ನಿರ್ದಿಷ್ಟ ಪ್ರಯೋಜನವನ್ನು ಹೊಂದಿದೆ.
01:12 ಸಂಸ್ಥೆಯಲ್ಲಿ FOSS ಟೂಲ್ಗಳನ್ನು ಬಳಸುವುದರಿಂದ ವಾಣಿಜ್ಯ ಉಪಕರಣಗಳ (commercial packages) ಪೈರಸಿ ಯನ್ನು ಸಂಪೂರ್ಣವಾಗಿ ತಡೆಯಬಹುದು.
01:20 ಸೈಲ್ಯಾಬ್ ಫ್ರೀ ಆಗಿರುವುದರಿಂದ, ಶೈಕ್ಷಣಿಕ ಮಟ್ಟದಲ್ಲಿ ಸೈಲ್ಯಾಬ್ ನಿಂದ ಕಲಿತ ಕೌಶಲ್ಯಗಳಿಂದ ಮುಂದೆ ಉದ್ಯಮಗಳಲ್ಲಿ ಪ್ರಯೋಜನವಾಗುವುದು.
01:29 ಸೈಲ್ಯಾಬ್ ನೊಂದಿಗೆ ಇತರ ಫ್ರೀ ಟೂಲ್ ಬಾಕ್ಸ್ ಗಳನ್ನು ಉಪಯೋಗಿಸುವುದರಿಂದ ಈ ಕೆಳಗಿನ ಕಾರ್ಯಗಳನ್ನು ಮಾಡಬಹುದು.
01:36 * ಮ್ಯಾಟ್ರಿಕ್ಸ್ ಕಾರ್ಯಗಳು (Matrix operations)
01:38 * ನಿಯಂತ್ರಣ ವ್ಯವಸ್ಥೆ (Control Systems)
01:40 * ಚಿತ್ರ ಮತ್ತು ವೀಡಿಯೊ ಸಂಸ್ಕರಣೆ (Processing)
01:43 * ಸೀರಿಯಲ್ ಟೂಲ್ ಬಾಕ್ಸ್ ಉಪಯೋಗಿಸಿ ರಿಯಲ್ ಟೈಮ್ ಹಾರ್ಡ್ವೇರ್ ಗಳನ್ನು ನಿಯಂತ್ರಿಸುವುದು
01:48 * HART ಟೂಲ್ ಬಾಕ್ಸ್ ಉಪಯೋಗಿಸಿ ವಿವಿಧ ಮಾಹಿತಿ ಕಲೆ ಹಾಕುವ ವ್ಯವಸ್ಥೆ/ಕಾರ್ಡ್ ಗಳ ನಡುವೆ ಸಂಪರ್ಕ ಏರ್ಪಡಿಸುವುದು
01:54 * ಎಕ್ಸ್ ಕಾಸ್ – ಬ್ಲಾಕ್ ಡೈಗ್ರಾಮ್ ಸಿಮ್ಯುಲೇಟರ್ (Xcos-Block Diagram Simulator) ಉಪಯೋಗಿಸಿ ಅನುಕರಣೆ (Simulation) ಮಾಡುವುದು
01:59 * ಪ್ಲಾಟಿಂಗ್ (Plotting)
02:01 * HIL ಅನುಕರಣೆ (Simulation).
02:06 ರಿಯಲ್-ಟೈಮ್ ಅನುಕರಣೆಯಲ್ಲಿ ನಿಜವಾದ ಘಟಕವನ್ನು ಲೂಪ್ ನಲ್ಲಿ ಜೋಡಿಸುವುದರಿಂದ HIL ಅನುಕರಣೆಗಿಂತ ಭಿನ್ನವಾಗಿದೆ.
02:14 ಸೈಲ್ಯಾಬ್ ನೊಂದಿಗೆ ಸಿಂಗಲ್ ಬೋರ್ಡ್ ಹೀಟರ್ ಸಿಸ್ಟಮ್ ಸಾಧನವನ್ನು, HIL ಸಾಧನದಂತೆ ನಿಯಂತ್ರಣ ವ್ಯವಸ್ಥೆಯ ಪ್ರಯೋಗಗಳಲ್ಲಿ ಉಪಯೋಗಿಸಬಹುದು.
02:26 ಸೈಲ್ಯಾಬ್ ನ ಸಿಂಟ್ಯಾಕ್ಸ್ ಬಹು ಸುಲಭ.
02:29 ಅನೇಕ ಸಂಖ್ಯಾತ್ಮಕ ಸಮಸ್ಯೆಗಳಿಗೆ ಒಂದೇ ರೀತಿಯ ಪರಿಹಾರಗಳನ್ನು, ಫೋರ್ಟ್ರಾನ್, C ಅಥವಾ C++ ಮುಂತಾದ ಸಾಂಪ್ರದಾಯಿಕ ಭಾಷೆಗಳಿಗಿಂತ, ಸೈಲ್ಯಾಬ್ ನಲ್ಲಿ ಕಡಿಮೆ ಕೋಡ್ ಸಾಲುಗಳಲ್ಲಿ ವ್ಯಕ್ತಪಡಿಸಬಹುದು.
02:42 ಸೈಲ್ಯಾಬ್, ಇತರ ಪ್ರಸಿದ್ಧ ಪ್ರೊಪ್ರೈಯೆಟರಿ ಪ್ಯಾಕೇಜ್ ಗಳಂತೆ State-of-art ಲೈಬ್ರರಿಯನ್ನು ಉಪಯೋಗಿಸುತ್ತದೆ. ಉದಾಹರಣೆಗ, ಸಂಖ್ಯಾತ್ಮಕ (numerical) ಕಂಪ್ಯುಟೇಶನ್ ಗಳಿಗಾಗಿ ಲಾಪ್ಯಾಕ್ (LAPACK).
02:52 ಮೇಲಿಂಗ್ ಲಿಸ್ಟ್, ಯೂಸ್ನೆಟ್ ಗುಂಪುಗಳು (ಇಂಟರ್ನೆಟ್ ಚರ್ಚೆಯ ಗುಂಪುಗಳು)
03:00 ವೆಬ್ಸೈಟ್ಗಳ ರೂಪದಲ್ಲಿ ಸೈಲ್ಯಾಬ್ ಅನ್ನು ಬೆಂಬಲಿಸುವ ಮತ್ತು ಉಪಯೋಗಿಸುವ
03:02 ಒಂದು ದೊಡ್ಡ ಬಳಾಕೆದಾರರ ಸಮುದಾಯವಿದೆ.
03:07 ಸೈಲ್ಯಾಬ್ ಮತ್ತು ಅದರ ಟೂಲ್ ಬಾಕ್ಸ್ನ ಬಗೆಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ 'scilab.org' ಅಥವಾ 'scilab.in' ವೆಬ್ಸೈಟ್ ಗೆ ಭೇಟಿ ಕೊಡಿ.
03:18 ಸೈಲ್ಯಾಬ್ ನ್ನು ಬಳಸುತ್ತಿರುವ ಕೆಲವು ಸಂಸ್ಥೆಗಳು:
03:23 ಫ್ರೆಂಚ್ ಸ್ಪೇಸ್ ಸಟಲೈಟ್ ಏಜನ್ಸಿ (French Space Satellite Agency) ಯಾದ ಸಿ ಎನ್ ಇ ಎಸ್ (CNES),
03:28 ಈಕ್ವಾಲಿಸ್ (EQUALIS ),
03:31 ಟೆಕ್ಪ್ಯಾಶನ್ಟ್ಕ್(Techpassiontech) ಮತ್ತು
03:33 ಸಂಶೋಧನೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಐಐಟಿ ಬಾಂಬೆ.
03:37 ಐಐಟಿ ಬಾಂಬೆಯಲ್ಲಿ NMEICT ಯೋಜನೆಗಳ ಮೂಲಕ ಸೈಲ್ಯಾಬ್ ನ ಉತ್ತೇಜನಕ್ಕಾಗಿ ಇರುವ ಚಟುವಟಿಕೆಗಳು:
03:45 ಲ್ಯಾಬ್ ಮೈಗ್ರೇಶನ್, ಎಂದರೆ ಎಲ್ಲಾ ಕಾಂಪ್ಯುಟೇಶನಲ್ ಪ್ರಯೋಗಾಲಯಗಳನ್ನು ಸೈಲ್ಯಾಬ್ ಗೆ ಬದಲಾಯಿಸುವುದು,
03:51 ವರ್ಚುವಲ್ ಲ್ಯಾಬ್ಸ್, ಎಂದರೆ ಸಿಂಗಲ್ ಬೋರ್ಡ್ ಹೀಟರ್ ಸಿಸ್ಟಮ್ ಗೆ ರಿಮೋಟ್ ಪ್ರವೇಶ,
03:56 ಜೊತೆಗೆ, ನ್ಯಾಶನಲ್ ಮಿಶನ್ ಆನ್ ಎಜುಕೇಶನ್ ಥ್ರೂ ICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರದಿಂದ ಅನುದಾನಿತ FOSSEE ಯೋಜನೆಯು, ಪ್ರಸ್ತುತ ಪೈಥಾನ್ ಮತ್ತು ಸೈಲ್ಯಾಬ್ ಗಳಲ್ಲಿ ಕೇಂದ್ರಿತವಾಗಿದೆ.
04:07 ಸೈಲ್ಯಾಬ್ ನ ಹಲವಾರು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಈಗ ನಾವು ಹೊಂದಿದ್ದೇವೆ.
04:12 ಭಾರತದಲ್ಲಿ ಸೈಲ್ಯಾಬ್ ಪರಿಶ್ರಮಗಳು scilab.in ವೆಬ್ಸೈಟ್ ಮೂಲಕ ಸಂಯೋಜಿಸಲ್ಪಡುತ್ತಿವೆ.
04:18 ಕೆಲವು ಆಸಕ್ತಿದಾಯಕ ಯೋಜನೆಗಳಲ್ಲೊಂದಾದ Textbook Companion ಯೋಜನೆಯು, ಗುಣಮಟ್ಟದ ಪಠ್ಯಪುಸ್ತಕಗಳ ಉದಾಹರಣೆಗಳನ್ನು ಸೈಲ್ಯಾಬ್ ನಿಂದ ಕೋಡ್ ಮಾಡಲಾಗಿದೆ.
04:28 link ಯೋಜನೆಯು, ಸೈಲ್ಯಾಬ್ ದಾಖಲೆಗಳನ್ನು ತಳಕು ಹಾಕಲು ಮತ್ತು ಸ್ಥಾನ ಕಲ್ಪಿಸಲು ಬಳಕೆದಾರರಿಗೆ ಅವಕಾಶ ಕೊಡುತ್ತದೆ.
04:34 ನಾವು ಸೈಲ್ಯಾಬ್ ನ ಕಾರ್ಯಶಾಲೆಗಳನ್ನು ಏರ್ಪಡಿಸಲು ಸಹಾಯ ಮಾಡುತ್ತೇವೆ.
04:38 ನಾವು ಎರಡು ಮೈಲಿಂಗ್ ಲಿಸ್ಟ್ ಗಳನ್ನು ಹೊಂದಿದ್ದೇವೆ, ಒಂದು ಚರ್ಚಿಸಲು ಮತ್ತು ಇನ್ನೊಂದು ಅನೌನ್ಸ್ ಮಾಡಲು.
04:43 ನಾವು ನಮ್ಮೆಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ನಿಮ್ಮನ್ನು ಆಹ್ವಾನಿಸುತ್ತೇವೆ.
04:47 ಈಗ, ಸ್ಪೋಕನ್ ಟ್ಯುಟೋರಿಯಲ್ ಗೆ ಮರಳಿ ಬರೋಣ.
04:50 ಮಾತನಾಡುವ ಭಾಗವು (spoken part) ವಿವಿಧ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.
04:56 ಇವು spoken-tutorial.org ವೆಬ್ಸೈಟ್ ನಲ್ಲಿ ಲಭ್ಯವಿದೆ.
05:01 ಈ ಟ್ಯುಟೋರಿಯಲ್ ಗಳು ಸೈಲ್ಯಾಬ್ ತರಬೇತಿಯ ಮೊದಲನೇ ಭಾಗವಾಗಿದೆ.
05:06 ಈ ಟ್ಯುಟೋರಿಯಲ್ ಗಳು ಸಂಪೂರ್ಣ ಉಚಿತವಾಗಿ ಲಭ್ಯವಿದೆ.
05:10 ಈ ಮಾರ್ಗದಲ್ಲಿ ವಿವಿಧ FOSS systems ಗಳನ್ನು ಮುಗಿಸಲು ಇಚ್ಚಿಸುತ್ತೇವೆ.
05:14 ಈ ವಿಷಯಗಳಲ್ಲಿ ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.
05:17 ಸಾಫ್ಟ್ವೇರ್ ರೂಪರೇಖೆಯನ್ನು ಬರೆಯುವಲ್ಲಿ,
05:19 ಮೂಲ ಸ್ಕ್ರಿಪ್ಟ್ ಬರೆಯುವಲ್ಲಿ,
05:22 spoken tutorial ನ್ನು ರೆಕಾರ್ಡ ಮಾಡುವಲ್ಲಿ,
05:24 ಸ್ಕ್ರಿಪ್ಟ್ ನ್ನು ಭಾರತದ ಬೇರೆ ಭಾಷೆಗಳಿಗೆ ಭಾಷಾಂತರಿಸಲು,
05:27 ಸ್ಕ್ರಿಪ್ಟ್ ನ್ನು ಉಪಯೋಗಿಸಿ, ಧ್ವನಿಯನ್ನು ಭಾರತದ ವಿವಿಧ ಭಾಷೆಗಳಲ್ಲಿ ಭಾಷಾಂತರಿಸಲು,
05:31 ಈ ಮೇಲಿನ ಎಲ್ಲಾ ವಿಷಯಗಳನ್ನು ವಿಮರ್ಶಿಸಿ ಪ್ರತಿಕ್ರಿಯೆ ನೀಡಲು,
05:35 ನಾವು ನಿಮ್ಮ ಭಾಗವಹಿಸುವಿಕೆಯನ್ನು ಸ್ವಾಗತಿಸುತ್ತೇವೆ.
05:39 ನಾವು, ಈ ಸ್ಪೋಕನ್ ಟ್ಯುಟೊರಿಯಲ್ ಬಳಸಿ ಕಾರ್ಯಾಗಾರ ನಡೆಸಲು ನಿಮ್ಮನ್ನು ಸ್ವಾಗತಿಸುತ್ತೇವೆ.
05:44 ನಾವು, ನಿಮ್ಮನ್ನು ಸ್ಪೋಕನ್ ಟ್ಯುಟೋರಿಯಲ್ ಮೇಲೆ ಪರಿಣಾಮಕಾರಿ ಅಧ್ಯಯನಗಳನ್ನು ನಡೆಸಲು ಅಹ್ವಾನಿಸುತ್ತೇವೆ.
05:49 ನಾವು ಆಡಿಯೊ, ವಿಡಿಯೊ, ಆಟೊಮ್ಯಾಟಿಕ್ ಭಾಷಾಂತರ ಇತ್ಯಾದಿ ತಂತ್ರಜ್ಞಾನಗಳಲ್ಲಿ ಬೆಂಬಲ ನೀಡುವ ತಜ್ಞರಿಗಾಗಿ ಹುಡುಕುತ್ತಿದ್ದೇವೆ.
05:57 ನಮ್ಮಲ್ಲಿ ಈ ಎಲ್ಲ ಚಟುವಟಿಕೆಗಳಿಗೆ ಬೇಕಾದ ಧನಸಹಾಯವಿದೆ.
06:00 ಈ ಸ್ಪೋಕನ್ ಟ್ಯುಟೋರಿಯಲ್ ನ್ನು 'ಫ್ರೀ ಎಂಡ್ ಒಪನ್ ಸೋರ್ಸ್ ಸಾಫ್ಟ್ವೇರ್ ಇನ್ ಸೈನ್ಸ್ ಎಂಡ್ ಇಂಜಿನಿಯರಿಂಗ್ ಎಜುಕೇಶನ್' (FOSSEE) ಇಂದ ರಚಿಸಲಾಗಿದೆ.
06:08 FOSSEE ಯೋಜನೆಯ ಹೆಚ್ಚಿನ ಮಾಹಿತಿಯನ್ನು fossee.in ಅಥವಾ scilab.in ಎಂಬ ವೆಬ್ಸೈಟ್ ಇಂದ ಪಡೆಯಬಹುದು.
06:16 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
06:22 ಹೆಚ್ಚಿನ ಮಾಹಿತಿಗಾಗಿ http://spoken-tutorial.org/NMEICT-Intro ಎಂಬಲ್ಲಿ ಭೇಟಿಕೊಡಿ.
06:31 ಇದರ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ. ಐ. ಟಿ. ಬಾಂಬೆಯಿಂದ ವಾಸುದೇವ.
06:34 ಇಲ್ಲಿಯವರೆಗೆ ನಮ್ಮ ಜೊತೆಗೆ ಇದ್ದಿದ್ದಕ್ಕೆ ಧನ್ಯವಾದಗಳು. ನಮಸ್ಕಾರ.

Contributors and Content Editors

PoojaMoolya, Sandhya.np14, Vasudeva ahitanal