QGIS/C2/Coordinate-Reference-Systems/Kannada
Time | Narration |
00:01 | Coordinate Reference System in QGIS ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:10 | QGIS ನಲ್ಲಿ ಪ್ರೊಜೆಕ್ಶನ್ಸ್ ಗಳಿಗೆ ಪದರಗಳನ್ನು ಸೇರಿಸುವುದು, |
00:15 | ಲೇಯರ್ಸ್ ಗಳಿಗೆ metadata ಇನ್ಫೊರ್ಮೇಶನ್ ನೋಡುವುದು, |
00:19 | ಆಯ್ದ ವೈಶಿಷ್ಟ್ಯಗಳನ್ನು ಲೇಯರ್ ನಿಂದ ಹೊಸ ಲೇಯರ್ ಗೆ ಸೇವ್ ಮಾಡುವುದು, |
00:24 | ನಾನಾ ಪ್ರೊಜೆಕ್ಷನ್ಸ್ ಗಳ ಡೇಟಾ ಲೇಯರ್ಸ್ ಗಳನ್ನು ಒಟ್ಟಿಗೆ ಮರುವಿನ್ಯಾಸ ಗೊಳಿಸುವುದು ಮತ್ತು ಓವರ್ಲೇ ಮಾಡುವುದು ಇವುಗಳನ್ನು ಕಲಿಯುವೆ ವು. |
00:30 | ಈ ಟ್ಯುಟೋರಿಯಲ್ ಅನ್ನು ರೆಕೊರ್ಡ್ ಮಾಡಲು ನಾನು,
Ubuntu Linux OS ವರ್ಶನ್ 16.04, QGIS ವರ್ಶನ್ 2.18 ಗಳನ್ನು ಉಪಯೋಗಿಸುತ್ತಿದ್ದೇನೆ. |
00:42 | ಈ ಟ್ಯುಟೋರಿಯಲ್ ಅನುಸರಿಸಲು ನೀವು GIS ಬಗ್ಗೆ ಮೂಲಭೂತ ಜ್ಞಾನವನ್ನು ಹೊಂದಿರಬೇಕು. |
00:49 | ದಯವಿಟ್ಟು ಈ ಸರಣಿಯಲ್ಲಿ ಹಿಂದಿನ ಟ್ಯುಟೋರಿಯಲ್ ವೀಕ್ಷಿಸಿ. |
00:54 | Coordinate Reference Systems ಕುರಿತು.., |
00:57 | Coordinate Reference Systems ಗಳು ಎರಡು ಪ್ರಕಾರಗಳಾಗಿವೆ,
Geographic coordinate system, ಮತ್ತು Projected Coordinate System |
01:06 | ಹೆಚ್ಚಾಗಿ ಉಪಯೋಗಿಸಲ್ಪಡುವ geographic coordinate system ಅಂದರೆ WGS 84 ಆಗಿದೆ. |
01:12 | ಹೆಚ್ಚಾಗಿ ಉಪಯೋಗಿಸಲ್ಪಡುವ projected coordinate system ಅಂದರೆ UTM ಆಗಿದೆ. |
01:18 | ನಾವು QGIS ಇಂಟರ್ಫೇಸ್ ಅನ್ನು ತೆರೆದಿದ್ದೇವೆ. |
01:23 | ಕ್ಯಾನ್ವಾಸ್ ನಲ್ಲಿ, ದೇಶದ ಆಡಳಿತದ ಗಡಿಗಳನ್ನು ಹೊಂದಿರುವ ವಿಶ್ವ ನಕ್ಷೆಯನ್ನು ಪ್ರದರ್ಶಿಸಲಾಗುತ್ತದೆ. |
01:30 | ನಕ್ಷೆಯನ್ನು ಹೇಗೆ ಡೌನ್ಲೋಡ್ ಮಾಡುವುದು ಮತ್ತು QGIS ನಲ್ಲಿ ಪ್ರದರ್ಶಿಸುವುದು ಎಂಬುದರ ಕುರಿತು ಪೂರ್ವಾಪೇಕ್ಷಿತ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ. |
01:39 | ದಯವಿಟ್ಟು ಪೂರ್ವಾಪೇಕ್ಷಿತ ಟ್ಯುಟೋರಿಯಲ್ ಗಳನ್ನು ವೀಕ್ಷಿಸಿ. |
01:43 | ಈ ಫೈಲ್ ಅನ್ನು Code files ಲಿಂಕ್ನಿಂದ ಡೌನ್ಲೋಡ್ ಮಾಡಬಹುದು. |
01:48 | ಕ್ಯಾನ್ವಾಸ್ ನ ಎಡಭಾಗದಲ್ಲಿ, ನೀವು ವಿಶ್ವ ನಕ್ಷೆಯ ಫೈಲ್ ಹೆಸರಿನೊಂದಿಗೆ ಲೇಯರ್ ಪ್ಯಾನಲ್ ಅನ್ನು ನೋಡುತ್ತೀರಿ. |
01:57 | ಪೂರ್ವನಿಯೋಜಿತವಾಗಿ ಲೇಯರ್ಸ್ ಪ್ಯಾನಲ್ ಅನ್ನು ಇಲ್ಲಿ ಸಕ್ರಿಯಗೊಳಿಸಲಾಗಿದೆ. |
02:02 | ಇಲ್ಲದಿದ್ದರೆ, ನಾವು View ಮೆನು ಬಳಸಿ ಲೇಯರ್ ಪ್ಯಾನಲ್ ಅನ್ನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು. |
02:08 | ಮೆನ್ಯು ಬಾರ್ನಲ್ಲಿ View ಮೆನ್ಯು ಕ್ಲಿಕ್ ಮಾಡಿ.
ಕೆಳಗೆ ಸ್ಕ್ರಾಲ್ ಮಾಡಿ ಮತ್ತು Panels ಆಯ್ಕೆಯನ್ನು ಆರಿಸಿ. |
02:16 | ಸಬ್-ಮೆನು ಪೆನಲ್ಸ್ ಹೆಸರುಗಳ ಪಟ್ಟಿಯನ್ನು ತೋರಿಸುತ್ತದೆ. |
02:21 | ಪೆನಲ್ ಅನ್ನು ಸಕ್ರಿಯಗೊಳಿಸಲು ಅಥವಾ ನಿಷ್ಕ್ರಿಯಗೊಳಿಸಲು Layer Panel ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
02:27 | ಗಡಿಯನ್ನು ಎಳೆಯುವ ಮೂಲಕ ನಾವು ಪೆನಲ್ ನ ಗಾತ್ರವನ್ನು ಹೊಂದಿಸಬಹುದು. |
02:32 | ನೀವು ನಕ್ಷೆಯ ಬಣ್ಣವನ್ನು ಬದಲಾಯಿಸಲು ಬಯಸಿದರೆ, ಲೇಯರ್ಸ್ ಪ್ಯಾನೆಲ್ನಲ್ಲಿರುವ ಲೇಯರ್ ನೇಮ್ ಮೇಲೆ ರೈಟ್ ಕ್ಲಿಕ್ ಮಾಡಿ. |
02:39 | context menu ವನ್ನು ಸ್ಕ್ರೋಲ್ ಡೌನ್ ಮಾಡಿ Styles ಆಯ್ಕೆಯನ್ನು ಆರಿಸಿ. |
02:44 | ಸಬ್-ಮೆನು ಬಣ್ಣದ ತ್ರಿಕೋನವನ್ನು ತೋರಿಸುತ್ತದೆ. |
02:48 | ಬಣ್ಣದ ತ್ರಿಕೋನದ ಶೃಂಗವನ್ನು ತಿರುಗಿಸುವ ಮೂಲಕ ಬಣ್ಣವನ್ನು ಆರಿಸಿ. |
02:53 | ಕೊಂಟೆಕ್ಸ್ಟ್ ಮೆನ್ಯುವನ್ನು ಮುಚ್ಚಲು ಕ್ಯಾನ್ವಾಸ್ ನಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ. |
02:58 | ಕೆಳಗಿನ ಎಡಮೂಲೆಯಲ್ಲಿ, QGIS ವಿಂಡೋ ದ ಸ್ಟೇಟಸ್ ಬಾರ್ ಮೇಲೆ, ನೀವುCoordinate ಲೇಬಲ್ ಮತ್ತು ಸಂಖ್ಯೆಗಳನ್ನುಹೊಂದಿರುವ ಟೆಕ್ಸ್ಟ್ ಬೊಕ್ಸ್ ಅನ್ನು ನೋಡುವಿರಿ . |
03:09 | ನಿರ್ದಿಷ್ಟ ಸ್ಥಳಕ್ಕಾಗಿ X ಮತ್ತು Y ಕೊ-ಒರ್ಡಿನೇಟ್ ಗಳ ಮೌಲ್ಯಗಳನ್ನು ಈ ಟೆಕ್ಸ್ಟ್ ಬೊಕ್ಸ್ ನಲ್ಲಿ ತೋರಿಸಲಾಗಿದೆ. |
03:17 | ಕರ್ಸರ್ ಅನ್ನು ಮ್ಯಾಪ್ ನ ಮೇಲೆ ಚಾಲಿಸಿ. |
03:20 | ಗಮನಿಸಿ, 'X' 'ಮತ್ತು' Y ನ ಮೌಲ್ಯಗಳು ಕರ್ಸರ್ನ ಸ್ಥಳದೊಂದಿಗೆ ಬದಲಾಗುತ್ತವೆ. |
03:28 | ಪೂರ್ವನಿಯೋಜಿತವಾಗಿ ರೆಂಡರ್ ಆಯ್ಕೆಯನ್ನು ಸ್ಟೇಟಸ್ ಬಾರ್ ನಲ್ಲಿ ಪರಿಶೀಲಿಸಲಾಗುತ್ತದೆ.
ಅದನ್ನು ಬಿಡಿ. |
03:37 | ಕೆಳಗಿನ ಬಲ ಮೂಲೆಯಲ್ಲಿರುವ ಸ್ಟೇಟಸ್ ಬಾರ್ ನಲ್ಲಿ, ನೀವು Current CRS ಎಂಬ ಇನ್ನೊಂದು ಲೇಬಲ್ ಅನ್ನು ನೋಡುತ್ತೀರಿ. |
03:44 | ಈ ಕೋಡ್ ಪ್ರಸ್ತುತ Projection Coordinate Reference System ಅನ್ನು ಪ್ರತಿನಿಧಿಸುತ್ತದೆ. |
03:50 | ಲೇಯರ್ನ ಪ್ರೊಜೆಕ್ಷನ್ ಅನ್ನು ನಿರ್ಧರಿಸಲು, ನಾವು ಮೆಟಾಡೇಟಾ ವನ್ನು ನೋಡಬಹುದು. |
03:56 | ಲೇಯರ್ಸ್ ಪ್ಯಾನಲ್ ನಲ್ಲಿ, ಲೇಯರ್ ನೇಮ್ ಮೇಲೆ ರೈಟ್ ಕ್ಲಿಕ್ ಮಾಡಿ. |
04:01 | ಕೊಂಟೆಕ್ಸ್ಟ್ ಮೆನುವಿನಿಂದ, Properties ಆಯ್ಕೆಮಾಡಿ.
Layer Properties ಡೈಲಾಗ್-ಬಾಕ್ಸ್ ತೆರೆಯುತ್ತದೆ. |
04:09 | ಡೈಲಾಗ್ ಬೊಕ್ಸ್ ನಲ್ಲಿ, ಎಡಭಾಗದ ಫಲಕದಲ್ಲಿ, Metadata ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
04:15 | Properties ವಿಭಾಗದ ಅಡಿಯಲ್ಲಿ, ಸ್ಲೈಡರ್ ಅನ್ನು ಕೆಳಕ್ಕೆ ಸ್ಕ್ರೊಲ್ ಮಾಡಿ. |
04:20 | ಕೆಳಭಾಗದಲ್ಲಿ, Layer Spatial Reference System, ಎಂಬ ತಲೆಬರಹದಲ್ಲಿ, ಈ ಪ್ರೊಜೆಕ್ಷನ್ನ ವ್ಯಾಖ್ಯಾನವನ್ನು ನೀವು ನೋಡುತ್ತೀರಿ. |
04:29 | ಇದು WGS84 ಅನ್ನು geographic coordinate system ಆಗಿ ತೋರಿಸುತ್ತದೆ. |
04:35 | ಡೈಲಾಗ್ ಬೊಕ್ಸ್ ಅನ್ನು ಮುಚ್ಚಲು ಕೆಳಭಾಗದಲ್ಲಿರುವ Ok ಬಟನ್ ಕ್ಲಿಕ್ ಮಾಡಿ. |
04:41 | ಈಗ ನಾವು ನಕ್ಷೆಗೆ ಲೇಯರ್ಸ್ ಗಳನ್ನು ಸೇರಿಸೋಣ ಮತ್ತು ಪ್ರೊಜೆಕ್ಷನ್ ಅನ್ನು ಬದಲಾಯಿಸೋಣ. |
04:47 | data layers ಕುರಿತು... |
04:50 | ಸಾಮಾನ್ಯವಾಗಿ ಭೌಗೋಳಿಕ ದತ್ತಾಂಶವನ್ನು layers ಗಳಲ್ಲಿ GIS ಕಾರ್ಯಕ್ಷೇತ್ರದಲ್ಲಿ ಸಂಗ್ರಹಿಸಲಾಗುತ್ತದೆ. |
04:57 | ಪ್ರತಿಯೊಂದು ಲೇಯರ್ ಡೇಟಾವನ್ನು ಅದರ attribute table ನಲ್ಲಿ ಸಂಗ್ರಹಿಸಿದೆ. |
05:02 | ಅನೇಕ ಲೇಯರ್ಸ್ ಗಳು ಒಂದೇ ಭೌಗೋಳಿಕ ಸ್ಥಳದ ಡೇಟಾವನ್ನು ಪ್ರತಿನಿಧಿಸಬಹುದು. |
05:08 | QGIS ಇಂಟರ್ಫೇಸ್ ಗೆ ಮರಳಿ. |
05:12 | ಈಗ ನಾವು ಲೇಯರ್ ಪ್ರೊಜೆಕ್ಷನ್ ಅನ್ನು ಹೇಗೆ ಬದಲಾಯಿಸಬಹುದು ಎಂದು ನೋಡೋಣ. |
05:17 | ಈ ಪ್ರಕ್ರಿಯೆಯನ್ನು Re-Projection ಎನ್ನುವರು. |
05:21 | ಸಂಪೂರ್ಣ ಲೇಯರ್ ಅನ್ನು ರೀಪ್ರೊಜೆಕ್ಟ್ ಮಾಡುವ ಬದಲು, ನಾವು ಕೆಲವು ವೈಶಿಷ್ಟ್ಯಗಳನ್ನು ರೀಪ್ರೊಜೆಕ್ಟ್ ಮಾಡುತ್ತೇವೆ. |
05:27 | ಟೂಲ್ ಬಾರ್ನ ಮೇಲಿನ ಬಲ ಮೂಲೆಯಲ್ಲಿ, Select features by area or single click ಟೂಲ್ ಮೇಲೆ ಕ್ಲಿಕ್ ಮಾಡಿ. |
05:35 | ಈ ಉಪಕರಣದ ಪಕ್ಕದಲ್ಲಿರುವ ಕಪ್ಪು ತ್ರಿಕೋನದ ಮೇಲೆ ಕ್ಲಿಕ್ ಮಾಡಿ. |
05:39 | ಡ್ರಾಪ್ ಡೌನ್ ನಿಂದ Select features ಅನ್ನು ಆಯ್ಕೆಮಾಡಿ. |
05:44 | ಕ್ಯಾನ್ವಾಸ್ ನಲ್ಲಿ ಪ್ರದರ್ಶಿಸಲಾದ ವಿಶ್ವ ನಕ್ಷೆಯಲ್ಲಿ, ಅದನ್ನು ಆಯ್ಕೆ ಮಾಡಲು United States of America ಎಂಬ ವೈಶಿಷ್ಟ್ಯವನ್ನು ಕ್ಲಿಕ್ ಮಾಡಿ. |
05:52 | ಗಮನಿಸಿ, United States of America ಬೇರೆ ಬಣ್ಣದಲ್ಲಿದೆ. |
05:58 | ನಾವು ಈಗ ಈ ಲೇಯರ್ ನ projected coordinate system ಅನ್ನು ಬದಲಾಯಿಸುತ್ತೇವೆ ಮತ್ತು ಸೇವ್ ಮಾಡುತ್ತೇವೆ. |
06:04 | ಲೇಯರ್ ಪ್ಯಾನೆಲ್ ನಲ್ಲಿ ಲೇಯರ್ ನೇಮ್ ಮೇಲೆ ರೈಟ್ ಕ್ಲಿಕ್ ಮಾಡಿ. |
06:08 | ಕೆಳಕ್ಕೆ ಸ್ಕ್ರೋಲ್ ಮಾಡಿ Save As ಅನ್ನು ಆಯ್ಕೆ ಮಾಡಿ. |
06:12 | Save Vector Layer as... ಡೈಲಾಗ್ ಬೊಕ್ಸ್ ತೆರೆಯುತ್ತದೆ. |
06:17 | ಡೀಫೊಲ್ಟ್ format ವಿಕಲ್ಪವು ESRI Shapefile ಎಂದಿದೆ.
ಅದನ್ನು ಹಾಗೇ ಬಿಡಿ. |
06:26 | File name ಟೆಕ್ಸ್ಟ್ ಬೊಕ್ಸ್ ನ ಪಕ್ಕದಲ್ಲಿರುವ Browse button ಅನ್ನು ಕ್ಲಿಕ್ ಮಾಡಿ. |
06:31 | Save layer as... ಡೈಲಾಗ್ ಬೊಕ್ಸ್ ತೆರೆದುಕೊಳ್ಳುತ್ತದೆ.
ಔಟ್ ಪುಟ್ ಲೇಯರ್ ಅನ್ನು USA-1.shp ಎಂದು ಹೆಸರಿಸಿ. |
06:41 | ಸೇವ್ ಮಾಡಲು ಸೂಕ್ತಸ್ಥಾನವನ್ನು ಆರಿಸಿ.
Desktop ನಲ್ಲಿ ಸೇವ್ ಮಾಡಿ. |
06:48 | ಕೆಳಭಾಗದಲ್ಲಿರುವ Save ಬಟನ್ ಅನ್ನು ಕ್ಲಿಕ್ ಮಾಡಿ. |
06:52 | Save Vector Layer as.... ಡೈಲಾಗ್ ಬೋಕ್ಸ್ ನಲ್ಲಿ, File name ಟೆಕ್ಸ್ಟ್ ಬೊಕ್ಸ್ ನಲ್ಲಿ ಫೈಲ್ ಪಾತ್ ಕಾಣಿಸುತ್ತದೆ. |
06:59 | ಈ 'ಲೇಯರ್' ಗಾಗಿ ನಾವು ಹೊಸ ಪ್ರೊಜೆಕ್ಷನ್ ಅನ್ನು ಆಯ್ಕೆ ಮಾಡುತ್ತೇವೆ. |
07:03 | CRS ಡ್ರೊಪ್ ಡೌನ್ ಬೊಕ್ಸ್ ನಂತರ, Select CRS ಬಟನ್ ಕ್ಲಿಕ್ ಮಾಡಿ. |
07:10 | Coordinate Reference System Selector ನಲ್ಲಿ, Filter search box ನಲ್ಲಿ, North America ಎಂದು ಕೊಡಿ. |
07:17 | ಜಗತ್ತಿನ Coordinate reference systems ಅಡಿಯಲ್ಲಿ, Projected Coordinate System, ಅಡಿಯಲ್ಲಿ, ಫಲಿತಾಂಶಗಳ ಮೂಲಕ ಸ್ಕ್ರಾಲ್ ಮಾಡಿ. |
07:27 | North_America_Albers_Equal_Area_Conic (EPSG:102008) projection ಅನ್ನು ಸೆಲೆಕ್ಟ್ ಮಾಡಿ. |
07:37 | ಕೆಳಗಡೆಯಿರುವ OK ಬಟನ್ ಕ್ಲಿಕ್ ಮಾಡಿ. |
07:41 | CRS ಡ್ರಾಪ್ ಡೌನ್ ಬಾಕ್ಸ್ನಲ್ಲಿ, ಹೊಸದಾಗಿ ಆಯ್ಕೆ ಮಾಡಲಾದ CRS ಅನ್ನು ತೋರಿಸಲಾಗಿದೆ. |
07:47 | Save only selected features ಆಯ್ಕೆಯನ್ನು ಪರಿಶೀಲಿಸಲು ಚೆಕ್ ಬಾಕ್ಸ್ ಕ್ಲಿಕ್ ಮಾಡಿ. |
07:53 | ಫೀಚರ್ಸ್ ಗಳು ರೀಪ್ರೊಜೆಕ್ಟೆಡ್ ಮತ್ತು ಎಕ್ಸ್ಪೊರ್ಟೆಡ್ ಆಗುತ್ತವೆ ಎಂದು ಇದು ಖಚಿತಪಡಿಸುತ್ತದೆ. |
08:00 | ಇಲ್ಲಿ ಡೀಫೊಲ್ಟ್ ಆಗಿ, Add saved file to map ವಿಕಲ್ಪ ಚೆಕ್ಡ್ ಆಗಿರುತ್ತದೆ. |
08:06 | ಇಲ್ಲದಿದ್ದರೆ, ಈ ಆಯ್ಕೆಯನ್ನು ಪರಿಶೀಲಿಸಲು ಚೆಕ್ ಬಾಕ್ಸ್ ಕ್ಲಿಕ್ ಮಾಡಿ. |
08:11 | OK ಬಟನ್ ಅನ್ನು ಕ್ಲಿಕ್ ಮಾಡಿ. |
08:14 | re-projected layer ಬೇರೆ ಬಣ್ಣದಲ್ಲಿ ಲೋಡ್ ಆಗುತ್ತದೆ. |
08:19 | ಈ ಎರಡು layers ಗಳು ಈಗ ಬೇರೆ projections ನಲ್ಲಿವೆ. |
08:24 | ಅದನ್ನು ಗಮನಿಸಿ, ಲೇಯರ್ಸ್ ಪ್ಯಾನೆಲ್ ನಲ್ಲಿ ನೀವು ಈಗ 2 ನಮೂದುಗಳನ್ನು ನೋಡಬಹುದು. |
08:30 | ಹೊಸ United States layer ಇದು, world map layer ಮೇಲೆ ಸಂಪೂರ್ಣವಾಗಿ ಓವರ್ಲೇ ಆಗುವದನ್ನು ಗಮನಿಸಿ. |
08:38 | ಏಕೆಂದರೆ, QGIS ಇದು On-the-fly CRS transformationಎಂದು ಕರೆಯಲ್ಪಡುವ ಒಂದು ವೈಶಿಷ್ಟ್ಯವನ್ನು ಹೊಂದಿದೆ. |
08:45 | QGIS ವಿಂಡೋದ ಕೆಳಗಿನ-ಬಲ ಮೂಲೆಯಲ್ಲಿರುವ ಪ್ರೊಜೆಕ್ಷನ್ ಪಠ್ಯವು EPSG:4326 ಪಕ್ಕದಲ್ಲಿOTF ಎಂಬ ಪದಗಳನ್ನು ಹೊಂದಿದೆ. |
08:56 | ಅದರ ಮೇಲೆ ಕ್ಲಿಕ್ ಮಾಡುವ ಮೂಲಕ Layers Panel ನಲ್ಲಿ United-States ಲೇಯರ್ ಆಯ್ಕೆಮಾಡಿ. |
09:02 | ಸ್ಟೆಟಸ್ ಬಾರ್ ನ ಕೆಳಗಿನ ಬಲ ಮೂಲೆಯಲ್ಲಿರುವ Current CRS ಪಠ್ಯವಾದ, EPSG:4326 ಅನ್ನು ಕ್ಲಿಕ್ ಮಾಡಿ. |
09:11 | Project Properties CRS ಡೈಲಾಗ್ ಬೊಕ್ಸ್ ತೆರೆಯುತ್ತದೆ. |
09:16 | Enable on-the-fly CRS transformation ಅನ್ನು ಟರ್ನ್ ಒಫ್ ಮಾಡಿ ಏನಾಗುತ್ತದೆ ನೋಡೋಣ. |
09:23 | Enable on the fly CRS transformation ಚೆಕ್ ಬೊಕ್ಸ್ ಅನ್ನು ಅನ್ ಚೆಕ್ ಮಾಡೋಣ.
ಕೆಳಭಾಗದಲ್ಲಿರುವ OK ಬಟನ್ ಕ್ಲಿಕ್ ಮಾಡಿ. |
09:34 | main QGIS ವಿಂಡೋದಲ್ಲಿ ಹಿಂತಿರುಗಿ, ವಿಶ್ವ ನಕ್ಷೆ ಕಣ್ಮರೆಯಾಗುವುದನ್ನು ನೀವು ನೋಡುತ್ತೀರಿ. |
09:40 | ಕ್ಯಾನ್ವಾಸ್ನಲ್ಲಿ ನೀವು ಯುನೈಟೆಡ್ ಸ್ಟೇಟ್ಸ್ ನಕ್ಷೆಯನ್ನು ಮಾತ್ರ ನೋಡಬಹುದು. |
09:45 | ಏಕೆಂದರೆ ಈ ಲೇಯರ್ ಗಾಗಿ Projected CRS ಅನ್ನು Albers Projection ಎಂದು ಬದಲಾಯಿಸಲಾಗಿದೆ. |
09:52 | ಕೊ ಒರ್ಡಿನೇಟ್ಸ್ ಗಳು ಮತ್ತು ಸ್ಕೇಲ್ ಈಗ ಬೇರೆಯಾಗಿವೆ. |
09:56 | ಲೇಯರ್ಸ್ ಪ್ಯಾನೆಲ್ ನಲ್ಲಿರುವ United States layer ಅನ್ನು ರೈಟ್ ಕ್ಲಿಕ್ ಮಾಡಿ. |
10:01 | Zoom to Layer ವಿಕಲ್ಪವನ್ನು ಆರಿಸಿ. |
10:05 | ಈಗ ನೀವು ಆಯ್ದ ಪ್ರೊಜೆಕ್ಷನ್ ನಲ್ಲಿ United States ಅನ್ನು ನೋಡುತ್ತೀರಿ. |
10:10 | ಮತ್ತೆ, Current CRS ಟೆಕ್ಸ್ಟ್ ಅನ್ನು ಕ್ಲಿಕ್ ಮಾಡಿ Project Properties ಡೈಲಾಗ್-ಬಾಕ್ಸ್ ತೆರೆಯಿರಿ. |
10:17 | Enable ‘on the fly’ CRS transformation ವಿಕಲ್ಪವನ್ನು ಟರ್ನ್ ಓನ್ ಮಾಡಿ. |
10:23 | Recently used Coordinate Reference Systems ತಲೆಬರಹದ ಅಡಿಯಲ್ಲಿWGS 84 ಅನ್ನು ಆಯ್ದುಕೊಳ್ಳಿ.
ಕೆಳಭಾಗದಲ್ಲಿರುವ OK ಬಟನ್ ಕ್ಲಿಕ್ ಮಾಡಿ. |
10:35 | ಕ್ಯಾನ್ವಾಸ್ ನಲ್ಲಿನ ಡಿಸ್ಪ್ಲೇ ಯು ವಿಶ್ವ ನಕ್ಷೆಯೊಂದಿಗೆ ಅದರ ಹಿಂದಿನ ಸ್ಥಿತಿಗೆ ಮರಳುತ್ತದೆ. |
10:41 | ಡೇಟಾಸೆಟ್ ನಿಂದ ವೆಕ್ಟರ್ ಲೇಯರ್ ಅನ್ನು ಅಳಿಸಲು, ಲೇಯರ್ಸ್ ಪ್ಯಾನೆಲ್ ನಲ್ಲಿರುವ ಹೆಸರಿನ ಮೇಲೆ ರೈಟ್ ಕ್ಲಿಕ್ ಮಾಡಿ. |
10:48 | context menu ವಿನಿಂದ, Remove ವಿಕಲ್ಪವನ್ನು ಕ್ಲಿಕ್ ಮಾಡಿ. |
10:52 | ಕ್ರಿಯೆಯನ್ನು ದೃ ಢೀಕರಿಸಲು ಪ್ರಾಂಪ್ಟ್ ಕಾಣಿಸಿಕೊಳ್ಳುತ್ತದೆ.
OK ಯನ್ನು ಕ್ಲಿಕ್ ಮಾಡಿ. |
10:59 | ಡೇಟಾಸೆಟ್ನಿಂದ ಲೇಯರ್ ಅನ್ನು ತೆಗೆದುಹಾಕಲಾಗಿದೆ ಎಂಬುದನ್ನು ಗಮನಿಸಿ. |
11:04 | ಸಾರಾಂಶವನ್ನು ನೋಡೋಣ. |
11:07 | ಈ ಟ್ಯುಟೋರಿಯಲ್ ನಲ್ಲಿ ನಾವು
QGIS ನಲ್ಲಿ ಪ್ರೊಜೆಕ್ಶನ್ ಗಳಿಗೆ ಲೇಯರ್ಸ್ ಅನ್ನು ಸೇರಿಸುವುದು |
11:15 | ಲೇಯರ್ಸ್ ಗಳಿಗೆ metadata ಮಾಹಿತಿಯನ್ನು ನೋಡುವುದು, |
11:19 | ಆಯ್ದ ಫೀಚರ್ಸ್ ಗಳನ್ನು ಲೇಯರ್ ನಿಂದ ಹೊಸ ಲೇಯರ್ ಗೆ ಸೇವ್ ಮಾಡುವುದು, |
11:24 | Re-project ಮಾಡುವುದು ಮತ್ತು ವಿಭಿನ್ನ ಪ್ರೊಜೆಕ್ಶನ್ಸ್ ಗಳ ಡೇಟಾ ಲೇಯರ್ಸ್ ಗಳನ್ನು ಒಟ್ಟಿಗೆ overlay ಮಾಡುವುದು ಇವುಗಳನ್ನು ಕಲಿತಿದ್ದೇವೆ. |
11:30 | ಪಾಠನಿಯೋಜನೆಗಾಗಿ :
United States ಅನ್ನುNorth_America_Lambert_Conformal_Conic projection ಇದರ ಜೊತೆ ಪ್ರೊಜೆಕ್ಟ್ ಮಾಡಿ ಮತ್ತು ವ್ಯತ್ಯಾಸಗಳನ್ನು ಗಮನಿಸಿ. |
11:43 | ಸಂಪೂರ್ಣ ಜಗತ್ತಿನ ನಕ್ಷೆಯ ಲೇಯರ್ ಅನ್ನುWorld Mercator projection ವ್ಯವಸ್ಥೆಗಾಗಿ ರೀ ಪ್ರೊಜೆಕ್ಟ್ ಮಾಡಿ. |
11:50 | ನಿಮ್ಮ ಪೂರ್ಣಗೊಂಡ ಪಾಠನಿಯೋಜನೆಯು ಈ ರೀತಿ ಇರಬೇಕು. |
11:55 | ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.
ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
12:03 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
12:15 | ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ. |
12:19 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.
ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ. |
12:31 | ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |