PHP-and-MySQL/C4/File-Upload-Part-2/Kannada
From Script | Spoken-Tutorial
Revision as of 20:04, 18 May 2020 by NaveenBhat (Talk | contribs)
Time | Narration |
00:00 | ಪುನಃ ಸ್ವಾಗತ. ಈ ಟ್ಯುಟೋರಿಯಲ್ ನ ಮೊದಲ ಭಾಗದಲ್ಲಿ, ನಾವು ಈ ಫಾರ್ಮ್ ಅನ್ನು ಬಳಸಿ ಅಪ್ಲೋಡ್ ಮಾಡಿದ ಫೈಲ್ ನ ನಿರ್ದಿಷ್ಟವಾದ ಪ್ರಾಪರ್ಟಿಗಳನ್ನು ಹೇಗೆ ತೆಗೆದುಕೊಳ್ಳುವುದು ಎಂದು ನೋಡಿದ್ದೇವೆ. |
00:10 | ಈಗ ನಾನು ಈ ಫೈಲ್ ಅನ್ನು ಅಪ್ಲೋಡ್ ಮಾಡುವುದು ಹೇಗೆ ಮತ್ತು ಇದನ್ನು ಈಗ ಸದ್ಯಕ್ಕೆ ಖಾಲಿಯಾಗಿರುವ, "uploaded" ಫೋಲ್ಡರ್ ಗೆ ಕಳುಹಿಸುವುದು ಹೇಗೆ ಎಂದು ತೋರಿಸುವೆನು |
00:18 | ಹಿಂದಿನ ಟ್ಯುಟೋರಿಯಲ್ ಅನ್ನು ನೆನಪಿಸಿಕೊಳ್ಳಿ, ನಾವು ವೆಬ್ ಸರ್ವರ್ ನಲ್ಲಿ ಈ ಫೈಲ್ ಟೆಂಪರರಿ(ತಾತ್ಕಾಲಿಕ) ಜಾಗದಲ್ಲಿ ಸ್ಟೋರ್ ಆಗುತ್ತದೆ ಎಂದು ಹೇಳಿದ್ದೆವು. |
00:25 | ಈಗ ಅದರಿಂದ ಏನು ಉಪಯೋಗವಿಲ್ಲ. |
00:29 | ಇಲ್ಲಿ ಎಲ್ಲ ಪ್ರಾಪರ್ಟಿಗಳಿವೆ, ಇಲ್ಲಿ ನಾನು"properties of the uploaded file" ಎಂದು ಕಮೆಂಟ್ ಮಾಡುವೆನು, ಹಾಗಾಗಿ ನಾವು ಏನು ಮಾಡುತ್ತಿರುವೆವು ಎಂದು ತಿಳಿಯುತ್ತದೆ. |
00:34 | ಇಲ್ಲಿ ನಾವು ಎಲ್ಲ ನಿರ್ದಿಷ್ಟವಾದ ಪ್ರಾಪರ್ಟಿಗಳನ್ನು ಹೊಂದಿದ್ದೇವೆ. |
00:38 | ನಾನು ಅವುಗಳಿಗೆ ನೆನಪಿಟ್ಟುಕೊಳ್ಳಲು ಸುಲಭವಾದ ವೇರಿಯೇಬಲ್ ಹೆಸರುಗಳನ್ನು ಕೊಟ್ಟಿದ್ದೇನೆ. ಹಾಗಾಗಿ ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ಕಮೆಂಟ್ ಮಾಡುವುದು ಬೇಡ. |
00:46 | ಈಗ ಮೊದಲಿಗೆ ನಾನು ಎರರ್ ಗಳಿವೆಯೇ ಎಂದು ಪರೀಕ್ಷಿಸಲು ಒಂದು if ಸ್ಟೇಟ್ಮೆಂಟ್ ಅನ್ನು ರಚಿಸುವೆನು. |
00:53 | ಇಲ್ಲಿ , if error code is bigger than zero ಅಂದರೆ ಎರರ್ ಕೋಡ್ ಇದನ್ನು ಕೊಟ್ಟಿದೆ ಎಂದು ಅರ್ಥವಾಗುತ್ತದೆ. ಆಗ ನಾನು 'die' ಎಂದು ಟೈಪ್ ಮಾಡಿ, |
01:03 | ಅದರಲ್ಲಿ ಎರರ್ ಮೆಸೇಜ್ ಅಂದರೆ "File couldn't..." |
01:11 | ಅಥವಾ "Error uploading file! code $error" ಎಂದು ಟೈಪ್ ಮಾಡುವೆನು. |
01:20 | ಇದು ಯೂಸರ್ ಗೆ ಎರರ್ ಕೋಡ್ ಅನ್ನು ಕೊಡುತ್ತದೆ. |
01:23 | ಈಗ else ಭಾಗವನ್ನು ನೋಡೋಣ. |
01:25 | ಇದು ಸರಳವಾಗಿ ಮತ್ತು ಒಂದೇ ಸಾಲಿನಲ್ಲಿರಲು, ನಾನು ಇಲ್ಲಿ ಕರ್ಲಿ ಬ್ರ್ಯಾಕೆಟ್ ಅನ್ನು ಸೇರಿಸುವೆನು. |
01:29 | ಹಾಗಾಗಿ else, ನಾನು 'move_uploaded_file()' ಎಂಬ ಫಂಕ್ಷನ್ ಅನ್ನು ಬಳಸುವೆನು. |
01:39 | ನಂತರ ಈ ಫಂಕ್ಷನ್ ನ ಮೊದಲ ಪ್ಯಾರಾಮೀಟರ್ ಆದ 'temp' ಅಂದರೆ ಟೆಂಪರರಿ ನೇಮ್ ಅನ್ನು ಟೈಪ್ ಮಾಡುವೆನು ಮತ್ತು ಇದರ ಎರಡನೇ ಪ್ಯಾರಾಮೀಟರ್, ಫೈಲ್ ಹೋಗಬೇಕಾದ ಜಾಗ ಅಂದರೆ ಇಲ್ಲಿ 'uploaded folder' ಆಗಿದೆ. |
01:51 | ಹಾಗಾಗಿ ಇಲ್ಲಿ 'uploaded' ಎಂದು ಮತ್ತು ಒಂದು ಫಾರ್ವಾರ್ಡ್ ಸ್ಲ್ಯಾಶ್ ಅನ್ನು ಟೈಪ್ ಮಾಡುವೆನು. |
01:59 | ಮತ್ತು ಇದರ ಕೊನೆಯಲ್ಲಿ ನಾವು ನಾವು ಅಪ್ಲೋಡ್ ಮಾಡಿದ ಫೈಲ್ ನ ಹೆಸರನ್ನು ಕೂಡ ಜೋಡಿಸುವೆವು. |
02:07 | ಹಾಗಾಗಿ ಅದು ಇಲ್ಲಿ '$name' ಎಂದಾಗುವುದು. |
02:10 | ಇಲ್ಲಿ ನಾವು ಕೇವಲ ಆಂತರಿಕ ವೇರಿಯೇಬಲ್ ಗಳನ್ನು ಸೇರಿಸುತ್ತಿದ್ದೇವೆ. |
02:15 | ಇಲ್ಲವಾದಲ್ಲಿ ನಾವು ಇವೆಲ್ಲವನ್ನೂ ಟೈಪ್ ಮಾಡಬೇಕಾಗಿತ್ತು. ಉದಾಹರಣೆಗೆ - "temp_name", |
02:19 | ನಂತರ ಇಲ್ಲಿ ಹೋಗಿ ಇದನ್ನು ಈ ರೀತಿಯಾಗಿ ಇಡಬೇಕಿತ್ತು. |
02:22 | ಇದು ಸ್ವಲ್ಪ ಗೊಂದಲಮಯರವಾಗಿದ್ದು, ಓದಲು ಕಷ್ಟವಾಗಿರುತ್ತದೆ. |
02:25 | ಹಾಗಾಗಿ ಇಲ್ಲಿ ಈ ವೇರಿಯೇಬಲ್ ಗಳನ್ನು ಇಡುವುದು ಸುಲಭವಾಗಿದೆ. |
02:33 | ಈಗ ನಾನು ಇದನ್ನು ತೆಗೆದು , ಇದನ್ನು ಇಲ್ಲಿ ಇಡುವೆನು. |
02:37 | ಕೊನೆಯಲ್ಲಿ "Upload complete!" ಎಂಬ ಮೆಸೇಜ್ ಅನ್ನು ಎಕೋ ಮಾಡುವೆನು. |
02:41 | ಈಗ ಇದನ್ನು ಪ್ರಯತ್ನಿಸೋಣ. |
02:47 | ನಾನು ನಮ್ಮ ಪೇಜ್ ಗೆ ಹೋಗಿ, 'intro to avi' ಫೈಲ್ ಅನ್ನು ತೆಗೆದುಕೊಳ್ಳುವೆನು. |
02:51 | upload ಅನ್ನು ಕ್ಲಿಕ್ ಮಾಡುವೆನು ಮತ್ತು ನಾವು "Upload is complete!" ಎಂದು ನೋಡುವೆವು. |
02:55 | ಈಗ ನನ್ನ ಫೈಲ್ ಅನ್ನು ಪರೀಕ್ಷಿಸೋಣ. |
02:57 | Upload folder ಗೆ ಹೋಗಿ, "uploaded" ಸಬ್ ಡೈರೆಕ್ಟರಿಯನ್ನು ಕ್ಲಿಕ್ ಮಾಡಿ, ನೀವು ಮೊದಲು ವೆಬ್ ಸರ್ವರ್ ನ ಟೆಂಪರರಿ ಡೈರೆಕ್ಟರಿಯಲ್ಲಿ ಸ್ಟೋರ್ ಆಗಿದ್ದ ಫೈಲ್, ಇಲ್ಲಿರುವುದನ್ನು ನೀವು ನೋಡಬಹುದು. |
03:08 | ನಾವು ಫೈಲ್ ಅನ್ನು ಯಶಸ್ವಿಯಾಗಿ ಅಪ್ಲೋಡ್ ಮಾಡಿದ್ದೇವೆ. |
03:13 | ನಾವು ಇನ್ನೂ ಕೆಲವು ಕೆಲಸಗಳನ್ನು ಮಾಡುವುದಿದೆ. |
03:15 | ನಾನು ಇನ್ನೊಂದು if ಸ್ಟೇಟ್ಮೆಂಟ್ ಅನ್ನು Undo ಮಾಡುವೆನು ಅಥವಾ ಈ if ಸ್ಟೇಟ್ಮೆಂಟ್ ಅನ್ನು Undo ಮಾಡುವೆನು. |
03:20 | ಈಗ ನಾವು ಅಪ್ಲೋಡ್ ಮಾಡಲು ಇಷ್ಟಪಡದ ನಿರ್ದಿಷ್ಟವಾದ ಫೈಲ್ ಟೈಪ್ ಅನ್ನು ಪರೀಕ್ಷಿಸಲು ಹೊರಟಿರುವೆವು. |
03:24 | ಉದಾಹರಣೆಗೆ ನನಗೆ 'avi' ಫೈಲ್ ಗಳನ್ನು ಅಪ್ಲೋಡ್ ಮಾಡಲು ಇಷ್ಟವಿಲ್ಲ ಎಂದುಕೊಳ್ಳೋಣ. |
03:30 | ಆಗ ನಾನು if error is bigger than zero, ಫೈಲ್ ಗಳನ್ನು ಅಪ್ಲೋಡ್ ಮಾಡಬೇಡಿ ಎಂದು ಮಾಡುವೆನು. |
03:37 | ಹಾಗೆ ಬೇಡ ನಾನು ಈ else ನ ಒಳಗೆ ಇನ್ನೊಂದು if ಸ್ಟೇಟ್ಮೆಂಟ್ ಅನ್ನು ಸೇರಿಸುವೆನು. |
03:41 | ಮತ್ತು ನಾನು ಇಲ್ಲಿ ಒಂದು block ಅನ್ನು ರಚಿಸುವೆನು. |
03:47 | conditions for the file ಎಂದು ಇಲ್ಲಿ ಕಮೆಂಟ್ ಮಾಡುವೆನು. |
03:51 | ಫೈಲ್ ನ ಟೈಪ್ ಅಂದರೆ ನಮ್ಮ $type ವೇರಿಯೇಬಲ್, ಹಾಗಾಗಿ ನಾನು t-y-p-e, ಎರಡು ಇಕ್ವಲ್ ಚಿಹ್ನೆ, equals video slash avi ಎಂದು ಟೈಪ್ ಮಾಡುವೆನು. |
04:09 | ಇದರ ಮೊದಲ ಭಾಗದಲ್ಲಿ, ಇದನ್ನು ಎಕೋ ಮಾಡಿದಾಗ ಅದು video slash avi ಆಗಿತ್ತು ಎಂದು ನೀವು ನೋಡಿರುವಿರಿ. |
04:19 | ಮತ್ತು ಇಲ್ಲಿ ನಾವು ಇದು video slash avi'ಗೆ ಸಮವಾಗಿದ್ದರೆ, ಫೈಲ್ ಅನ್ನು ಅಪ್ಲೋಡ್ ಮಾಡಿ ಎಂದು ಹೇಳುತ್ತಿದ್ದೇವೆ. |
04:28 | ಆದರೆ ನಾನು ಈಗ ಇದನ್ನು ಕೆಳಗೆ ಸರಿಸಿ, ಅದನ್ನು else ಬ್ಲಾಕ್ ನಲ್ಲಿ ಇಡುವೆನು. |
04:32 | ಈಗ ನಾನು -ವಿಡೀಯೋವು avi ಆಗಿದ್ದರೆ ಆಗ die' ಎಂದೂ ಮತ್ತು "That format is not allowed!" ಎಂಬ ಮೆಸೇಜ್ ಅನ್ನು ಟೈಪ್ ಮಾಡುವೆನು. |
04:44 | ಸರಿ ಈಗ ನಾನು ಇದನ್ನು ನಮ್ಮ ಅಪ್ಲೋಡೆಡ್ ಡೈರಕ್ಟರಿಯಿಂದ ಅಳಿಸುವೆನು ಮತ್ತು ನನ್ನ upload ಫೈಲ್ ಗೆ ಹಿಂದಿರುಗುವೆನು. |
04:54 | ಈಗ ನಾನು 'intro dot avi' ಅನ್ನು ಆಯ್ಕೆ ಮಾಡಿಕೊಂಡು, Upload ಅನ್ನು ಕ್ಲಿಕ್ ಮಾಡಿ, ಇದು "That format is not allowed!" ಎಂದು ತೋರಿಸುವುದು. |
05:01 | ಈಗ ನಾವು 'uploaded' ಡೈರಕ್ಟರಿಗೆ ಹೋದರೆ, ಆ ಫೋಲ್ಡರ್ ಖಾಲಿಯಾಗಿರುವುದನ್ನು ನೀವು ನೋಡಬಹುದು. |
05:06 | ಏನೂ ಅಪ್ಲೋಡ್ ಆಗಿಲ್ಲ. |
05:08 | ಈಗ 'avi' ನ ಬದಲು, ನಾನು 'images with png' ಎಕ್ಸೆಟೆನ್ಷನ್ ಅನ್ನು ನಿರ್ಬಂಧಿಸಲು ಬಯಸುವೆನು. |
05:15 | ನಾನು ಇದನ್ನು ಇಲ್ಲಿ ಬದಲಿಸುವೆನು ಮತ್ತು ನನ್ನ ಫೈಲ್ ಅನ್ನು ಮತ್ತೊಮ್ಮೆ ಅಪ್ಲೋಡ್ ಮಾಡುವೆನು. |
05:23 | ನೀವು ಇದನ್ನು ನೋಡಬಹುದು, ಏಕೆಂದರೆ ಇದು ಸ್ವೀಕೃತಿ ಆಗುವಂತಹ ಫೈಲ್ ಫಾರ್ಮ್ಯಾಟ್ ಆಗಿದೆ. ನಾವು "Upload complete!" ಎಂಬ ಮೆಸೇಜ್ ಅನ್ನು ಪಡೆಯುವೆವು. 'uploaded' ಫೋಲ್ಡರ್ ಗೆ ವರ್ಗಾಯಿಸಲ್ಪಟ್ಟಿದೆ. |
05:33 | ಈಗ ಇದನ್ನು ಮತ್ತೊಮ್ಮೆ ಡಿಲೀಟ್ ಮಾಡೋಣ. ಓಹ್ ! ಕ್ಯಾನ್ಸಲ್ ಮಾಡಿಬಿಟ್ಟೆ. ಮತ್ತೊಮ್ಮೆ ಡಿಲೀಟ್ ಮಾಡೋಣ. |
05:42 | ಸರಿ ಈಗ ನಾವು ನಿರ್ದಿಷ್ಟವಾದ ಟೈಪ್ (ವಿಧ) ಅನ್ನು ಹೇಗೆ ಸೂಚಿಸುವುದು ಎಂದು ನೋಡಿದ್ದೇವೆ. |
05:47 | ಈಗ ನಾವು ಫೈಲ್ ಗೆ ನಿರ್ದಿಷ್ಟವಾದ ಸೈಜ್ (ಅಳತೆ) ಅನ್ನು ಹೇಗೆ ಸೂಚಿಸುವುದು ಎಂದು ನೋಡೋಣ. |
05:51 | ಈಗ ನಾನು 'or' , ಅಂದರೆ ಈ or ಆಪರೇಟರ್ ಅನ್ನು ಬಳಸಿ, or $size is bigger than half a megabyte ಎಂದು ಹೇಳುವೆನು. . |
06:04 | ಇದು ಅರ್ಧ ಮೆಗಾಬೈಟ್ ಅಂದರೆ ಐದು ನೂರು ಸಾವಿರ ಬಿಟ್ಸ್ ಕ್ಷಮಿಸಿ, ಬೈಟ್ಸ್ ಆಗಿದೆ. ನಾನು ಬೈಟ್ಸ್ ಎಂದು ಹೇಳಲು ಬಿಟ್ಸ್ ಎಂದು ಹೇಳಿ ತಪ್ಪು ಮಾಡಿದ್ದೇನೆ. |
06:14 | ಹಾಗಾಗಿ ಅದು ಐದು ನೂರು ಸಾವಿರ ಬೈಟ್ ಗಳು ಅಂದರೆ ಸೊನ್ನೆ ಬಿಂದು ನಾಲ್ಕು ಮೆಗಾ ಬೈಟ್ ಗಳು. ನಾನು ಇದನ್ನು ಅರ್ಧ ಮೆಗಾಬೈಟ್ ಎಂದು ಹೇಳುವೆನು. |
06:29 | ಇದು ಸೈಜ್ ಅನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಇದು ಅರ್ಧ ಮೆಗಾಬೈಟ್ ಗೂ ಹೆಚ್ಚಾಗಿದೆ. |
06:38 | ಈಗ ಇದು "Format is not allowed" ಎಂದು ತೋರಿಸುತ್ತದೆ. |
06:43 | ಹಾಗಾಗಿ ಈ ಮೆಸೇಜ್ ಅನ್ನು "Format not allowed or file size too big" ಎಂದು ಬದಲಿಸುವೆನು. |
06:56 | ಹಾಗಾಗಿ , ನೀವು $type ಅನ್ನು ಪರೀಕ್ಷಿಸಲು ಮತ್ತು $size ಅನ್ನು ಪರೀಕ್ಷಿಸಲು if ಸ್ಟೇಟ್ಮೆಂಟ್ ಅನ್ನು ರಚಿಸಬಹುದು. |
07:03 | ನೀವು ಈ condition ಅನ್ನು ತೆಗೆದುಕೊಳ್ಳಬೇಕು ಮತ್ತು ಇನ್ನೊಂದು if ಸ್ಟೇಟ್ಮೆಂಟ್ ನಲ್ಲಿ ಹಾಕೋಣ. |
07:09 | ಹಾಗಾಗಿ ನಾನು ಇಲ್ಲಿ ಹಿಂದಿರುಗುವೆನು ಮತ್ತು ನನ್ನ ಫೈಲ್ ಅನ್ನು ಮತ್ತೊಮ್ಮೆ ಆಯ್ಕೆಮಾಡುವೆನು. |
07:12 | ಇದು ಇಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ. |
07:14 | Upload ಅನ್ನು ಕ್ಲಿಕ್ ಮಾಡಿ ಮತ್ತು "Format not allowed..." ಎಂದು ಬರುತ್ತದೆ. |
07:19 | ಈಗ ನಮ್ಮ ಕೋಡ್ ಗೆ ಹಿಂದಿರುಗಿದರೆ, ಇದು 'png' ಫಾರ್ಮ್ಯಾಟ್ ನಲ್ಲಿ ಇಲ್ಲ ಆದರೆ ಇದು ಸೈಜ್ ನ ಮಿತಿಯನ್ನು ಮೀರುತ್ತಿದೆ. |
07:25 | ಇದನ್ನು 2 ಮಿಲಿಯನ್ ಎಂದು ಬದಲಿಸೋಣ, ಅಂದರೆ 2 ಮೆಗಾಬೈಟ್ಸ್ ಆಗಿದೆ. |
07:31 | ರಿಫ್ರೆಶ್ ಮಾಡಿ, ಅದನ್ನು ಕಳುಹಿಸಿ. |
07:33 | ನಾವು ಇಲ್ಲಿ ಅಪ್ಲೋಡ್ ಪೂರ್ಣವಾಗಿದೆ ಎಂದು ನೋಡಬಹುದು ಏಕೆಂದರೆ ಇದರ ಸೈಜ್ ಕೇವಲ ಒಂದು ಮೆಗಾಬೈಟ್ ಆಗಿದೆ. |
07:39 | ಇದು File Upload ನ ಕುರಿತಾಗಿದೆ. |
07:44 | ನಿಮ್ಮ ವೆವ್ ಸರ್ವರ್ ಗೆ ಫೈಲ್ ಗಳು ದೊಡ್ಡದಾದಾಗ, ನಿಮ್ಮ ಫೈಲ್ ನ ಟೈಪ್ (ವಿಧ) ಮತ್ತು ಸೈಜ್ (ಅಳತೆ) ಅನ್ನು ಇದನ್ನು ಬಳಸಿ ನಿರ್ದಿಷ್ಟಪಡಿಸಲು ನೀವು ತಿಳಿದಿರಬೇಕು. |
07:54 | ನಿಮ್ಮ ವೆಬ್ ಸರ್ವರ್ ನಲ್ಲಿ ನಿಮಗೆ ದೊಡ್ಡ ಫೈಲ್ ಗಳು ಬೇಡವಾದಲ್ಲಿ, ಇದನ್ನು ನಿಯಂತ್ರಿಸುವುದು ಒಳ್ಳೆಯ ವಿಧಾನವಾಗಿದೆ. |
07:58 | ನೀವು ನೋಡಿದಂತೆ ಇದನ್ನು ರಚಿಸುವುದು ತುಂಬ ಸುಲಭವಾಗಿದೆ. |
08:01 | ಇದನ್ನು ಅಭ್ಯಾಸ ಮಾಡಿ ಮತ್ತು ನೀವು ಇದು ಎಷ್ಟು ಉಪಯುಕ್ತ ಎಂದು ಪ್ರಭಾವಿತರಾಗುವಿರಿ. |
08:05 | ನಿಮಗೆ ಪ್ರಶ್ನೆಗಳಿದ್ದರೆ ಹಿಂಜರಿಕೆಯಿಲ್ಲದೇ ಕೇಳಬಹುದು. |
08:08 | ನಿಮಗೆ ಅಪ್ಡೇಟ್ ವಿಡಿಯೋ ಅಥವಾ ಹೊಸ ವಿಡಿಯೋ ಗಳ ಪ್ರಕಟಣೆ (ನೋಟಿಫಿಕೇಷನ್) ಬೇಕಾದರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿಕೊಳ್ಳಿ. |
08:15 | ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ನವೀನ್ ಭಟ್, ಉಪ್ಪಿನಪಟ್ಟಣ. |