PHP-and-MySQL/C4/File-Upload-Part-1/Kannada
From Script | Spoken-Tutorial
Revision as of 11:36, 18 May 2020 by NaveenBhat (Talk | contribs)
Time | Narration |
00:00 | ನಮಸ್ಕಾರ. ಈ ಟ್ಯುಟೋರಿಯಲ್ ನಲ್ಲಿ ನಾನು ಸರಳವಾದ ಪಿ.ಎಚ್.ಪಿ. ಅಪ್ಲೋಡ್ ಸ್ಕ್ರಿಪ್ಟ್ ಅನ್ನು ಹೇಗೆ ತಯಾರಿಸುವುದು ಎಂದು ತೋರಿಸುವೆನು. |
00:05 | 'upload dot php' ಫೈಲ್ ನಲ್ಲಿ ಸ್ವಲ್ಪ ಸುಧಾರಿತವಾದ ಪ್ರೋಗ್ರಾಂ ಇದೆ. |
00:10 | ಹಾಗಾಗಿ ನಮ್ಮ 'index dot php' ಅನ್ನು ಬಳಸುವೆವು. ನಾವು ಎಚ್.ಟಿ.ಎಂ.ಎಲ್ ಕೋಡ್ ಅನ್ನು ಬಳಸಿ ಈ ನಿರ್ದಿಷ್ಟವಾದ ಫೈಲ್ ಅನ್ನು ಸಬ್ಮಿಟ್ ಮಾಡಲು, ಒಂದು ಫಾರ್ಮ್ ಅನ್ನು ಕೊಡುವೆವು. |
00:20 | 'upload dot php' ಯಲ್ಲಿ, ನಾವು ಈ ಫೈಲ್ ಅನ್ನು ಪ್ರೊಸೆಸ್ ಮಾಡಿ, ಫೈಲ್ ನ ಕುರಿತಾದ ಮಾಹಿತಿ ಅಂದರೆ ಅದರ ಹೆಸರು, ವಿಧ, ಅಳತೆ, ತಾತ್ಕಾಲಿಕವಾಗಿ ಸ್ಟೋರ್ ಮಾಡಿದ ಹೆಸರು ಮತ್ತು ಯಾವುದಾದರೂ ಎರರ್ ಮೆಸೇಜ್ ಇದ್ದರೆ ಅದು ಮುಂತಾದ ಮಾಹಿತಿಗಳನ್ನು ಪಡೆಯುವೆವು. |
00:33 | ನೀವು ಎರರ್ ಮೆಸೇಜ್ ಅನ್ನು ಎರರ್ ಬಂದಿದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸಲು ಬಳಸಬಹುದು. |
00:38 | ನಂತರ ನಾವು ಈ ಫೈಲ್ ಅನ್ನು ಪ್ರೊಸೆಸ್ ಮಾಡಿ, ಅದನ್ನು ನಮ್ಮ ವೆಬ್ ಸರ್ವರ್ ನ ನಿರ್ದಿಷ್ಟವಾದ ಡೈರಕ್ಟರಿಯಲ್ಲಿ ಸೇವ್ ಮಾಡುವೆವು. |
00:45 | ಈ ಟ್ಯುಟೋರಿಯಲ್ ನ ಎರಡನೇ ಭಾಗದಲ್ಲಿ ನಾನು ನಿರ್ದಿಷ್ಟವಾದ ಫೈಲ್ ನ ವಿಧವನ್ನು ಪರೀಕ್ಷಿಸಲು ಹೇಳಿಕೊಡುತ್ತೇನೆ. ಆಗ ನೀವು ಫೈಲ್ ಟೈಪ್ ಗಳಿಂದ ರಕ್ಷಿಸಿಕೊಳ್ಳಬಹುದು. |
00:54 | ನಾವು ಫೈಲ್ ನ ಅಳತೆಯನ್ನು ಸಹ ನೋಡಲು ಕಲಿಯುವೆವು, ಹಾಗಾಗಿ ನೀವು ಗರಿಷ್ಟ ಅಥವಾ ಕನಿಷ್ಟ ಫೈಲ್ ಸೈಜ್ ಅನ್ನು ಹೊಂದಿರಬಹುದಾಗಿದೆ. |
01:04 | ನಾನು ಇಲ್ಲಿ 'uploaded' ಎಂಬ ಫೋಲ್ಡರ್ ಅನ್ನು ರಚಿಸಿದ್ದೇನೆ ಮತ್ತು ಅದರಲ್ಲಿ ನಾನು ನನ್ನ 'index' ಮತ್ತು 'upload dot php' ಫೈಲ್ ಗಳನ್ನು ರಚಿಸಿರುವೆನು. |
01:13 | ಮತ್ತು ಇಲ್ಲಿಯೇ ನನ್ನ ಫೈಲ್ ಗಳು ಅಪ್ಲೋಡ್ ಆದ ಮೇಲೂ ಸ್ಟೋರ್ ಆಗಿರುತ್ತದೆ. |
01:17 | ಆರಂಭದಲ್ಲಿ ಫೈಲ್ ಗಳನ್ನು ಅಪ್ಲೋಡ್ ಮಾಡಿದಾಗ, ಅವು ವೆಬ್ ಸರ್ವರ್ ನ ಟೆಂಪರರಿ ಏರಿಯಾ(ತಾತ್ಕಾಲಿಕ ಸ್ಥಾನ) ಕ್ಕೆ ಹೋಗುತ್ತವೆಯೇ ಹೊರತು ಈ ಫೋಲ್ಡರ್ ಗೆ ಹೋಗುವುದಿಲ್ಲ. |
01:25 | ಎಚ್.ಟಿ.ಎಂ.ಎಲ್ ಗೆ - ನಾವು form ಅನ್ನು ರಚಿಸಬೇಕು. ಇದನ್ನು ಮಾಡಲು ನಾವು form action ಅನ್ನು ಹೊಂದಿರಬೇಕು, ಮತ್ತು ಇದಕ್ಕೆ ನಾವು ಇಲ್ಲಿ ಈಗಾಗಲೇ ರಚಿಸಿದ 'upload dot php' ಎಂಬ ಫೈಲ್ ಇದೆ. |
01:38 | method ಅನ್ನು POST ಎಂದು ಸೆಟ್ ಮಾಡಬೇಕು. ಇದಕ್ಕೆ ಕಾರಣವೇನೆಂದರೆ ನಾವು ಇದನ್ನುGET ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಬೇಕಾಗಿಲ್ಲ. |
01:45 | ಯಾಕೆ? ಏಕೆಂದರೆ ಭದ್ರತೆಯ ಕಾರಣಕ್ಕಾಗಿ ವೆಬ್ಸೈಟ್ ನಲ್ಲಿ ಹರಿದಾಡುವ ಬೈನರಿ ಡಾಟಾವನ್ನು ಬಳಕೆದಾರರು ನೋಡುವುದು ಬೇಕಾಗಿಲ್ಲ. |
01:53 | ಮತ್ತು GET ವೇರಿಯೇಬಲ್ ಗೆ ನೂರು ಅಕ್ಷರಗಳ ಪರಿಮಿತಿ ಕೂಡ ಇದೆ. |
01:58 | ಹಾಗಾಗಿ ನೂರು ಬಿಟ್ ಡಾಟಾಗಳನ್ನು ಹೊಂದಿದ್ದರೆ ನೀವು ತುಂಬಾ ಚಿಕ್ಕ ಫೈಲ್ ಅನ್ನು ಹೊಂದಿರಬೇಕಾಗುತ್ತದೆ. |
02:04 | ನೀವು ಇದುವರೆಗೂ ಕೇಳಿರದ ಒಂದು ಪ್ಯಾರಾಮೀಟರ್ ಅನ್ನು ನಾವು ಇಲ್ಲಿ ಹೊಂದಿದ್ದೇವೆ. |
02:11 | ಇದು enctype ಎಂದಾಗಿದೆ. ಎನ್ಕೋಡಿಂಗ್ ಟೈಪ್ ಅಂದರೆ ನಾವು ಇದನ್ನು ಹೇಗೆ ಎನ್ಕೋಡ್ ಮಾಡುವೆವು ಎಂದಾಗಿದೆ. |
02:20 | ಇದು multi-part ನಂತರ ಒಂದು ಫಾರ್ವಾರ್ಡ್ ಸ್ಲ್ಯಾಶ್ ಮತ್ತು ನಂತರ form-data ಎಂದು ಹೊಂದಿರುತ್ತದೆ. |
02:28 | ಇದರ ಅರ್ಥ – ನಾವು ಫಾರ್ಮ್ ಅನ್ನು ಡಾಟಾ ದ ಮಾದರಿ – ಅಂದರೆ ಬೈನರಿ ಡಾಟಾ- ನಾನು ಮೊದಲೇ ಹೇಳಿದಂತೆ ಸೊನ್ನೆ ಮತ್ತು ಒಂದು – ಮಾದರಿಯಲ್ಲಿ ಸಬ್ಮಿಟ್ ಮಾಡುತ್ತಿದ್ದೇವೆ. |
02:40 | ಇಲ್ಲಿ ನಾವು ಟೈಪ್ ಅನ್ನು ಹೊಂದಿದ್ದೇವೆ ಮತ್ತು ಇದನ್ನು ಕೂಡ ನಾವು ಎನ್ಕೋಡ್ ಮಾಡುವೆವು. ಸರಿ ಇಲ್ಲಿ ನಮ್ಮ form ಮುಗಿಯುತ್ತದೆ. |
02:50 | ಇಲ್ಲಿ ಇದರಲ್ಲಿ ನಾವು ಕೆಲವು, ಉದಾಹರಣೆಗೆ ನಮ್ಮ ಫೈಲ್ ಗೆ input ನಂತಹ ಎಲಿಮೆಂಟ್ ಗಳನ್ನು ಹೊಂದಿದ್ದೇವೆ. |
02:57 | ಇದರ type ಅನ್ನು 'file' ಎಂದು ಸೆಟ್ ಮಾಡೋಣ, ಇನ್ನೂ ನಿರ್ದಿಷ್ಟವಾಗಿ ಇದನ್ನು 'myfile' ಎಂದು ಹೇಳೋಣ. |
03:04 | ಇಲ್ಲಿ paragraph break ಅನ್ನು ಹಾಕೋಣ ಮತ್ತು ನಂತರ ನಮಗೆ submit ಬಟನ್ ಅನ್ನು ಹಾಕೋಣ. |
03:12 | ಈಗ ಇದನ್ನು ಪ್ರಿವ್ಯೂ ಮಾಡೋಣ. ಈಗ ಇದನ್ನು ಮುಚ್ಚೋಣ. |
03:18 | fileupload ಅನ್ನು ಕ್ಲಿಕ್ ಮಾಡೋಣ. ಓಹ್ ಹಿಂದಿರುಗೋಣ. . ನಾನು ಇಲ್ಲಿ ಎರಡು 'u' ಗಳನ್ನು ಟೈಪ್ ಮಾಡಿದ್ದೇನೆ. |
03:27 | ಹಿಂದಿರುಗೋಣ. ನಾವು ಇಲ್ಲಿ ಇನ್ಪುಟ್ ಅನ್ನು ಪಡೆದಿರುವುದನ್ನು ನೀವು ನೋಡಬಹುದು. |
03:31 | ನಾನು ಇದನ್ನು Browse ಮಾಡಬಹುದು. ಇಲ್ಲಿ ನಾವು ಅಪ್ಲೋಡ್ ಮಾಡಬಹುದಾದ ಫೈಲ್ ಗಳ ಆಯ್ಕೆಯನ್ನು ನೋಡಬಹುದು. |
03:36 | ಇದನ್ನು ನನಗೂ ಮತ್ತು ನಿಮಗೂ ಇನ್ನೂ ಸುಲಭವಾಗಿರುವಂತೆ ರೂಪಿಸೋಣ. |
03:45 | "Upload a file" ಎಂದಿರಲಿ. ಈಗ ಇದನ್ನು ರಿಫ್ರೆಶ್ ಮಾಡೋಣ. ಸರಿ ನಾವು ಒಂದು ಉತ್ತಮವಾದ ಪೇಜ್ ಅನ್ನು ಹೊಂದಿದ್ದೇವೆ. |
03:50 | ನಾವು ಒಂದು header ಅನ್ನು ಹೊಂದಿದ್ದೇವೆ ಮತ್ತು ಇಲ್ಲಿ ಒಂದು ಫೈಲ್ ಅನ್ನು ಅಪ್ಲೋಡ್ ಮಾಡಲು ಅವಕಾಶವಿದೆ. ನಾವು ಅಗತ್ಯವಿದ್ದರೆ ಇಲ್ಲಿ ನಾವೇ ಟೈಪ್ ಮಾಡಬಹುದು. |
03:58 | ಮತ್ತು ಇಲ್ಲಿ ನಾವು Upload ಬಟನ್ ಅನ್ನು ಹೊಂದಿದ್ದೇವೆ, ಇದು 'upload dot php' ಗೆ ಸಬ್ಮಿಟ್ ಮಾಡುತ್ತದೆ. |
04:04 | ಹಾಗಾಗಿ ನಮ್ಮ ಫಾರ್ಮ್ ನಿಂದ ಸಬ್ಮಿಟ್ ಆದ ಈ ಫೈಲ್ ಅನ್ನು 'upload dot php' ಯಲ್ಲಿ ಪ್ರೊಸೆಸ್ ಮಾಡಲು ಒಂದು ವಿಧಾನವನ್ನು ಹೊಂದಿರಬೇಕು. |
04:13 | ಇದನ್ನು ಮಾಡುವ ವಿಧಾನವೆಂದರೆ, 'dollar underscore FILES' ಅನ್ನು ಬಳಸಬೇಕು. ಇದು ನಿಜವಾಗಿಯೂ ಸರಿಯಾದದ್ದಲ್ಲ. |
04:19 | ಇದರ ಒಂದು ಇನ್ಸ್ಟೆನ್ಸ್ ಅನ್ನು ಎಕೋ ಮಾಡುವುದು ಸರಿಯಾದ ಮಾರ್ಗವಲ್ಲ ಎಂದು ಹೇಳಬಹುದು. |
04:27 | ಈಗ ಮಾಡುವಾಗ ನಾನು Upload ಅನ್ನು ಕ್ಲಿಕ್ ಮಾಡುವೆನು. ನಾವು ಒಂದು ಅರೇ ಅನ್ನು ಪಡೆಯುವೆವು. ಏಕೆಂದರೆ ಇದೊಂದು ಅರೇ ಆಗಿದೆ. |
04:33 | ಇದು ಮಲ್ಟಿಡೈಮೆನ್ಷನಲ್ ಅರೇ ಆಗಿರುವುದರಿಂದ, ನಾವು ಮೊದಲ ಸೆಟ್ ಬ್ರ್ಯಾಕೆಟ್ಸ್ ಗಳಲ್ಲಿ ನಾವು ಅಪ್ಲೋಡ್ ಮಾಡಿದ ಫೈಲ್ ಗಳ ಹೆಸರನ್ನು ಮತ್ತು ಇದು ಬಂದ ಇನ್ಪುಟ್ ಬಾಕ್ಸ್ ನ ಹೆಸರನ್ನು ಅಂದರೆ ಇಲ್ಲಿ 'myfile' ಅನ್ನೂ ಟೈಪ್ ಮಾಡುವೆವು. |
04:49 | ಹಾಗಾಗಿ ನಾವು ಇಲ್ಲಿ "myfile" ಅನ್ನು ಬಳಸುವೆವು. ಮತ್ತು ಎರಡನೆಯದರಲ್ಲಿ, ನಾವು ಅನೇಕ ಪ್ರಾಪರ್ಟಿ ಗಳನ್ನು ಹೊಂದಬಹುದು, ಅವುಗಳಲ್ಲಿ ತುಂಬ ಸರಳವಾದ ಮತ್ತು ಸುಲಭವಾದದ್ದು ಎಂದರೆ ಫೈಲ್ ನ name ಆಗಿದೆ. |
04:59 | ಈಗ 'upload form' ಗೆ ಹಿಂದಿರುಗೋಣ ಮತ್ತು ಇಲ್ಲಿ 'intro dot avi' ಅನ್ನು ಆಯ್ಕೆ ಮಾಡಿಕೊಳ್ಳೋಣ. ಇದು ಇಲ್ಲಿ ಕಾಣಿಸುತ್ತದೆ. |
05:06 | ಈಗ Upload ಅನ್ನು ಕ್ಲಿಕ್ ಮಾಡೋಣ ಮತ್ತು ಮುಂದಿನ ಪೇಜ್ ನಲ್ಲಿ ನಾವು 'intro dot avi' ಅನ್ನು ನೋಡುವೆವು. |
05:11 | ನೆನಪಿಡಿ ಇದು ನಮ್ಮ 'upload dot php' ಫಾರ್ಮ್ ನಲ್ಲಿ ಕ್ಷಮಿಸಿ, ಫೈಲ್ ನಲ್ಲಿದೆ. |
05:16 | ಸರಿ ಈಗ ನಾನು ಇದನ್ನು ಒಂದು ವೇರಿಯೇಬಲ್ ನಲ್ಲಿ, save ಮಾಡುವೆನು. |
05:22 | ಮುಂದೆ ನಾವು ನೋಡುವುದು ಫೈಲ್ ನ ವಿಧ, ಅದನ್ನು ನಾನು ಇಲ್ಲಿ ಟೈಪ್ ಮಾಡುವೆನು. |
05:30 | ಹಾಗಾಗಿ ಇದು, 'dollar underscore FILES' ಮತ್ತು ಇಲ್ಲಿ ನಾವು "myname" ರೆಫರೆನ್ಸ್ ಅನ್ನು ಬಳಸೋಣ. |
05:38 | ಮತ್ತು ಇದರೊಳಗೆ ನಾವು type ಅನ್ನು ಹೊಂದಿದ್ದೇವೆ. ಇದು ಫೈಲ್ ನ ಟೈಪ್ ಆಗಿದೆ. ನೀವು ಇದನ್ನು ಎಕೋ ಮಾಡಿ ನೋಡಬಹುದು. |
05:45 | ಮತ್ತು ರಿಫ್ರೆಶ್ ಮಾಡೋಣ. . Re-send ಮಾಡಿ, ಓಹ್ ಇದನ್ನು ನೋಡಿ - "myfile" ಎಂದಾಗಬೇಕು. |
05:54 | ಸರಿ ಈಗ ಮತ್ತೆ ರಿಸೆಂಡ್ ಮಾಡಿ, ಇಲ್ಲಿ 'video slash avi' ಎಂದು ನೋಡಬಹುದು. ನೀವು ಇದನ್ನು ಎಚ್.ಟಿ.ಎಮ್.ಎಲ್ ನಲ್ಲಿ ಮೊದಲು ನೋಡಿರಬಹುದು. |
06:00 | ಉದಾಹರಣೆಗೆ ಇದು 'image slash png' ಆಗಿರಬಹುದು ಅಥವಾ 'image slash jpeg', 'image slash bmp' , 'video slash avi' ಮತ್ತು 'video slash mpeg' ಅಥವಾ ಇನ್ಯಾವುದಾದರೂ ಫಾರ್ಮ್ಯಾಟ್ ಕೂಡ ಆಗಿರಬಹುದು. |
06:11 | ಈಗ ನಾವು ಇಲ್ಲಿ ಇದು ಒಂದು 'avi' ಫೈಲ್ ಎಂದು ನೋಡಬಹುದು, ನಾವು ಇದನ್ನೇ "type" ನಲ್ಲಿ ಪಡೆಯುವೆವು. |
06:18 | ನಾವು ಇದನ್ನು $type ಇಕ್ವಲ್ ಇವೆಲ್ಲ ಎಂದು ಹೇಳಬಹುದು. |
06:22 | ನಾನು ಮುಂದೆ size ನ ಕುರಿತು ತೋರಿಸುವೆನು. ಸಮಯವನ್ನು ಉಳಿಸಲು ನಾನು ಈ ಕೋಡ್ ಅನ್ನು ಕಾಪಿ, ಪೇಸ್ಟ್ ಮಾಡುವೆನು. ಮತ್ತು ಈ "type" ಅನ್ನು "size" ಎಂದು ಬದಲಿಸುವೆನು. ಇದನ್ನು echo ಮಾಡುವೆನು. |
06:30 | ನೀವು ಸಬ್ಮಿಟ್ ಮಾಡಿದ ಫೈಲ್ ನ e-property ಯನ್ನು ಪಡೆಯುವುದು ತುಂಬ ಸರಳವಾಗಿದೆ. |
06:35 | ನಾನು ರಿಫ್ರೆಶ್ ಮಾಡುವೆನು ಮತ್ತು Resend ಅನ್ನು ಕ್ಲಿಕ್ ಮಾಡುವೆನು. ನಾನು ಈ ಫೈಲ್ ನ ಅಳತೆ(ಸೈಜ್) ಅನ್ನು ಪಡೆಯುವೆನು. |
06:40 | ಈಗ ಇದರ ಸಮೀಪದ ಬೆಲೆಯನ್ನು ನೋಡೋಣ, ಹೆಚ್ಚು ಕಡಿಮೆ ಒಂದು ಮಿಲಿಯನ್ ಬೈಟ್ ಗಳು, |
06:47 | ಕ್ಷಮಿಸಿ ಒಂದು ಮಿಲಿಯನ್ ಬಿಟ್ ಗಳು, ಅಂದರೆ ಒಂದು ಮೆಗಾಬೈಟ್, ಹಾಗಾಗಿ "myfile" ಇದು ಒಂದು ಮೆಗಾ ಬೈಟ್ ಇದೆ. |
06:54 | ಹಾಗಾಗಿ ನಾವು ಒಂದು ಮಿಲಿಯನ್ ಮೆಗಾ ಬೈಟ್ ಡಾಟಾವನ್ನು ಇಲ್ಲಿ ಪಡೆದಿದ್ದೇವೆ. |
06:58 | ಈಗ ಇದನ್ನು $size ಎಂಬ ವೇರಿಯೇಬಲ್ ನಲ್ಲಿ save ಮಾಡೋಣ. ಅಲ್ಲವೇ? |
07:05 | ಸರಿ ಹಾಗಾದರೆ, ಮುಂದಿನ ಮುಖ್ಯವಾದ ವಿಷಯವೆಂದರೆ, 'temporary name' ಆಗಿದೆ. |
07:09 | ಇದನ್ನು ಸ್ವಲ್ಪ ವಿಭಿನ್ನವಾಗಿ "tmp" ಎಂದು ಬರೆಯುವೆವು, ಮತ್ತು ಇದನ್ನು ಹೇಳುವಾಗ 'temp' ಎನ್ನುವೆವು ಅಂಡರ್ಸ್ಕೋರ್ "name" ಎಂದು ಟೈಪ್ ಮಾಡಿ. |
07:18 | ಇದು ನಮ್ಮ ಆಯ್ಕೆಯ ಫೋಲ್ಡರ್ ಗೆ ವರ್ಗಾಯಿಸುವ ಮೊದಲು, ತಾತ್ಕಾಲಿಕವಾಗಿ ಸ್ಟೋರ್ ಆಗಿರುವ ಡೈರಕ್ಟರಿಯನ್ನು ಕೊಡುತ್ತದೆ. |
07:25 | ಈಗ ರಿಫ್ರೆಶ್ ಮಾಡೋಣ. |
07:27 | Resend ಅನ್ನು ಕ್ಲಿಕ್ ಮಾಡಿ, ಮತ್ತು ಇದು xampp ಯಲ್ಲಿ ಸ್ಟೋರ್ ಆಗುವುದು ಏಕೆಂದರೆ ನಾನು ಈ ಅಪ್ಲಿಕೇಷನ್ ಅನ್ನು ಬಳಸುತ್ತಿರುವೆನು. |
07:33 | ನೀವು apache ಯನ್ನು ಬಳಸುತ್ತಿದ್ದರೆ,ನೀವು ಪಿ.ಎಚ್.ಪಿ. ಯನ್ನು ಸ್ಟೋರ್ ಮಾಡಬಹುದು. |
07:37 | ಇಲ್ಲಿ ನೀವು apache ಅದಾದ ನಂತರ ನಿಮ್ಮ ಟೆಂಪರರಿ ಫೈಲ್ ನ ಹೆಸರನ್ನು ಹೊಂದುವಿರಿ. |
07:41 | ಈ ಹೆಸರು ಯಾದೃಚ್ಚಿಕವಾಗಿ (ರ್ಯಾಂ ಡಮ್ ಆಗಿ) ರಚಿತವಾಗಿರುತ್ತದೆ ಮತ್ತು "tmp" ಎಕ್ಸ್ಟೆನ್ಷನ್ ಅನ್ನು ಹೊಂದಿರುತ್ತದೆ. |
07:45 | ಇದು ನಮಗೆ ಈ ಕ್ಷಣಕ್ಕೆ ಅನುಪಯುಕ್ತವಾಗಿದೆ. |
07:48 | ನಾವು ಇದನ್ನು '$temp file' ಅಥವಾ '$temp' ಎಂದು ಸೇವ್ ಮಾಡಬಹುದು, ಇದನ್ನು ಚಿಕ್ಕದಾಗಿಡಲು ಇದನ್ನು 'temp' ಎಂದು ಟೈಪ್ ಮಾಡೋಣ. |
07:55 | ಮತ್ತು ಕೊನೆಯದು 'error' ಆಗಿದೆ. ಇದು ಎಲ್ಲವೂ ಸರಿಯಾಗಿದ್ದರೆ 0 ಎಂದು ಎಕೋ ಮಾಡುತ್ತದೆ. |
08:00 | ಮತ್ತು ಇದನ್ನು ಕಾಪಿ ಮಾಡಿ ಪೇಸ್ಟ್ ಮಾಡಿ. "error" ಎಂದು ಬದಲಿಸಿ. |
08:03 | ನಾವು ಈಗ ಸದ್ಯಕ್ಕೆ ಸೊನ್ನೆ ಎಂದು ಪಡೆಯಬೇಕು, ಏಕೆಂದರೆ ನಾವು ಎಲ್ಲವನ್ನೂ ಸರಿಯಾಗಿಯೇ ಬರೆದಿದ್ದೇವೆ. |
08:07 | ಇದು ಯಾವಾಗಲೂ ಋಣಾತ್ಮಕ(ನೆಗೆಟಿವ್) ವ್ಯಾಲ್ಯು ಆಗಿರುವುದಿಲ್ಲ. |
08:12 | ಇದು ಸೊನ್ನೆಗಿಂತ ಹೆಚ್ಚಾಗಿದ್ದರೆ, ಇದು ಎರರ್ ಕೋಡ್ ಕೊಡುತ್ತಿದೆ ಎಂದರ್ಥ, ಅಂದರೆ ನೀವು ಎರರ್ ಅನ್ನು ಹೊಂದಿರುವಿರಿ ಎಂದರ್ಥ. |
08:21 | ಈಗ ಇದನ್ನು $error ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡೋಣ. |
08:28 | ಸರಿ ಈಗ ಇಲ್ಲಿಗೆ ಮುಗಿಸೋಣ. ಈ ಟ್ಯುಟೋರಿಯಲ್ ನ ಎರಡನೆಯ ಭಾಗದಲ್ಲಿ, ನಾನು ಫೈಲ್ ಅನ್ನು ಟೆಂಪರರಿ ಸ್ಟೋರೇಜ್ ನಿಂದ ನಿಮ್ಮ ಆಯ್ಕೆಯ ನಿರ್ದಿಷ್ಟವಾದ ಲೊಕೇಷನ್ ಗೆ ಅಪ್ಲೋಡ್ ಮಾಡುವುದು ಹೇಗೆ ಎಂದು ತೋರಿಸುವೆನು. |
08:39 | ಮತ್ತು ನಾವು ಈ '$error' ವೇರಿಯೇಬಲ್ ಅನ್ನು ಎರರ್ ಗಳಿವೆಯೇ ಎಂದು ನೋಡಲು ಬಳಸುವೆವು. |
08:45 | ಎರರ್ ಗಳಿದ್ದರೆ ನಾವು ಇದನ್ನು echo ಮಾಡುವೆವು ಮತ್ತು ಎರರ್ ಕೋಡ್ ಅನ್ನು ಬಳಸುವೆವು. |
08:49 | ಇಲ್ಲವಾದಲ್ಲಿ ನಾವು ಈ $temp ಅನ್ನು ಬಳಸಿ, 'move uploaded' ಫೈಲ್ ಎಂಬ ಫಂಕ್ಷನ್ ನ ಮೂಲಕ ನಾವು ಅದನ್ನು ನನ್ನ ವೆಬ್ ಸರ್ವರ್ ನಲ್ಲಿ ರಚಿಸಿದ uploaded ಡೈರೆಕ್ಟರಿಯಲ್ಲಿ ಸ್ಟೋರ್ ಮಾಡುವೆವು. |
09:01 | ನಂತರ ನಾನು ಕೆಲವು ನಿರ್ದಿಷ್ಟವಾದ ಕಂಡಿಷನ್- ಉದಾಹರಣೆಗೆ ಇದು jpeg ಫೈಲ್ ಆಗಿದೆಯೇ? ಹೌದಾದರೆ 'jpeg' ಇಮೇಜ್ ಅನ್ನು ಅಪ್ಲೋಡ್ ಆಗಲು ಅನುಮತಿ ಕೊಡದಿರುವುದು ಅಥವಾ ನಿರ್ದಿಷ್ಟವಾದ ಫೈಲ್ ಸೈಜ್ ಅನ್ನು ಅನುಮತಿಸದೇ ಇರುವುದು – ಇವುಗಳನ್ನು ತೋರಿಸುವೆನು. |
09:10 | ಎರಡನೇ ಭಾಗದಲ್ಲಿ ಭೇಟಿಯಾಗೋಣ. ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. |