LibreOffice-Suite-Base/C4/Database-Design-Purpose-OrganizeTables/Kannada
From Script | Spoken-Tutorial
Revision as of 17:15, 25 April 2020 by NaveenBhat (Talk | contribs)
Time | Narration |
00:00 | ಲಿಬರ್ ಆಫಿಸ್ ಬೇಸ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ ನಾವು, ಡೇಟಾಬೇಸ್ ಡಿಸೈನ್ ಮಾಡುವಾಗ: |
00:09 | ನಮ್ಮ ಡೇಟಾಬೇಸ್ ನ ಉದ್ದೇಶವನ್ನು ನಿರ್ಧರಿಸುವುದು, |
00:12 | ಬೇಕಾಗಿರುವ ಮಾಹಿತಿಯನ್ನು ಹುಡುಕುವುದು ಹಾಗೂ ಅದನ್ನು ಅಣಿಗೊಳಿಸುವುದು |
00:15 | ಮತ್ತು ಮಾಹಿತಿಯನ್ನು ಟೇಬಲ್ ಗಳಾಗಿ ವಿಂಗಡಿಸುವುದು ಇವುಗಳ ಬಗ್ಗೆ ಕಲಿಯಲಿದ್ದೇವೆ. |
00:19 | ಡೇಟಾಬೇಸ್ ಡಿಸೈನ್ ಎಂದರೇನು? |
00:21 | 'ಡೇಟಾಬೇಸ್ ಡಿಸೈನ್' ಎಂದರೆ, ಡೇಟಾಬೇಸ್ ನ ವಿವರವಾದ ಒಂದು ಡೇಟಾ ಮಾಡೆಲ್ ಅನ್ನು ತಯಾರಿಸುವ ಪ್ರಕ್ರಿಯೆಯಾಗಿದೆ. |
00:28 | ಡೇಟಾಬೇಸ್ ನ ಒಂದು ಉತ್ತಮ ಡಿಸೈನ್, |
00:32 | ಇತ್ತೀಚಿನ, ನಿಖರವಾದ ಮತ್ತು ಸಂಪೂರ್ಣ ಮಾಹಿತಿಯನ್ನು ಒದಗಿಸಬಲ್ಲದು. |
00:37 | ಅಂದರೆ, ನಾವು ವಿವಿಧ ಹಂತಗಳಲ್ಲಿ ನಮ್ಮ ಮಾಹಿತಿಯ ಸಮಗ್ರತೆಯನ್ನು (integrity) ಖಚಿತಪಡಿಸಬಹುದು, |
00:43 | ಡೇಟಾ ಪ್ರೊಸೆಸಿಂಗ್ ಮತ್ತು ರಿಪೋರ್ಟಿಂಗ್ ನ ನಮ್ಮ ಅಗತ್ಯತೆಯನ್ನು ಪೂರೈಸಬಹುದು, |
00:48 | ಮತ್ತು ಸುಲಭವಾಗಿ ಬದಲಾವಣೆಗೆ ಅವಕಾಶ ಕಲ್ಪಿಸಬಹುದು. |
00:51 | ಡೇಟಾಬೇಸ್ ಡಿಸೈನ್ ನ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ: |
00:57 | ನಮ್ಮ ಡೇಟಾಬೇಸ್ ನ ಉದ್ದೇಶವನ್ನು ನಿರ್ಧರಿಸುವುದು, |
01:00 | ಅಗತ್ಯವಿರುವ ಮಾಹಿತಿಯನ್ನು ಹುಡುಕುವುದು ಮತ್ತು ಅಣಿಗೊಳಿಸುವುದು, |
01:04 | ಮಾಹಿತಿಯನ್ನು ಟೇಬಲ್ ಗಳಾಗಿ ವಿಂಗಡಿಸುವುದು, |
01:07 | ಮಾಹಿತಿಯ ಐಟಂಗಳನ್ನು ಕಾಲಂಗಳಾಗಿ ಮಾಡುವುದು, |
01:11 | ಪ್ರೈಮರಿ ಕೀಗಳನ್ನು ಗೊತ್ತುಮಾಡುವುದು, |
01:14 | ‘ಟೇಬಲ್ ರಿಲೇಶನ್ ಶಿಪ್’ಗಳನ್ನು ಸ್ಥಾಪಿಸುವುದು, |
01:17 | ನಮ್ಮ ಡಿಸೈನ್ ಅನ್ನು ಪರಿಷ್ಕರಿಸುವುದು (Refine), |
01:20 | ನಾರ್ಮಲೈಸೇಶನ್ ನಿಯಮಗಳನ್ನು ಅನ್ವಯಿಸುವುದು, |
01:23 | ಕೊನೆಯದಾಗಿ, ಡೇಟಾಬೇಸ್ ಅನ್ನು ಟೆಸ್ಟ್ ಮತ್ತು ರನ್ ಮಾಡುವುದು ಹಾಗೂ ನಿರ್ವಹಣೆ ಮಾಡುವುದು. |
01:28 | ಸರಿ, ನಾವೀಗ ಮೊದಲ ಹೆಜ್ಜೆಯತ್ತ ಸಾಗೋಣ, ಅದು ಯಾವುದೆಂದರೆ - |
01:32 | ನಮ್ಮ ಡೇಟಾಬೇಸ್ ನ ಉದ್ದೇಶವನ್ನು ನಿರೂಪಿಸುವುದು. |
01:35 | ನಾವೀಗ ಸರಳ ಲೈಬ್ರರಿ ಅಪ್ಲಿಕೇಶನ್ ಒಂದನ್ನು ಪರಿಗಣಿಸೋಣ. |
01:38 | ಲೈಬ್ರರಿಯು ಸಾಮಾನ್ಯವಾಗಿ ಪುಸ್ತಕಗಳನ್ನು ಹೊಂದಿರುತ್ತದೆ. |
01:41 | ಮತ್ತು ಈ ಪುಸ್ತಕಗಳನ್ನು ಇದರ ನೋಂದಾಯಿತ ಸದಸ್ಯರಿಗೆ ನೀಡಲಾಗುತ್ತದೆ. |
01:45 | ಹೀಗಾಗಿ, ಪುಸ್ತಕಗಳು ಮತ್ತು ಸದಸ್ಯರ ಪಟ್ಟಿಯ ನಿರ್ವಹಣೆಗೆ ಮತ್ತು |
01:51 | ಇದರ ಸದಸ್ಯರಿಗೆ ನೀಡಿರುವ ಈ ಪುಸ್ತಕಗಳ ಟ್ರ್ಯಾಕ್ ಮಾಡಲು ನಮಗೆ ಲೈಬ್ರರಿ ಅಪ್ಲಿಕೇಶನ್ ಬೇಕು. |
01:56 | ಬೇಕಾಗಿರುವ ಮಾಹಿತಿಯನ್ನು ಪತ್ತೆ ಹಚ್ಚಿ ಅಣಿಗೊಳಿಸುವುದು ನಮ್ಮ ಮೊದಲ ಹೆಜ್ಜೆಯಾಗಿದೆ. |
02:01 | ಡೇಟಾಬೇಸ್ ನಲ್ಲಿ ನಾವು ರೆಕಾರ್ಡ್ ಮಾಡಲಿರುವ ಎಲ್ಲಾ ವಿಧದ ಮಾಹಿತಿಯನ್ನು ನಾವು ಇಲ್ಲಿಯೇ ಸಂಗ್ರಹಿಸುತ್ತೇವೆ. |
02:09 | ನಾವು `ಲೈಬ್ರರಿ ಅಪ್ಲಿಕೇಶನ್’ನ ಉದ್ದೇಶವನ್ನು ಈಗ ತಿಳಿದಿರುವುದರಿಂದ ಐಟಂಗಳನ್ನು ನಾವೀಗ ಗುರುತಿಸೋಣ. |
02:17 | ಇಲ್ಲಿ ಪುಸ್ತಕಗಳಿವೆ. |
02:19 | ಪುಸ್ತಕವು ಟೈಟಲ್, ಆಥರ್, ಪಬ್ಲಿಷರ್ ಮತ್ತು ಪ್ರೈಸ್ ಅನ್ನು ಹೊಂದಿರುತ್ತದೆ. |
02:24 | ಅಲ್ಲದೆ, ಲೇಖಕರ ಹುಟ್ಟಿದ ದಿನಾಂಕ, ಅವರ ದೇಶ ಮುಂತಾದ ಲೇಖಕರ ಕುರಿತ ಮಾಹಿತಿಯನ್ನು ನಾವು ಶೇಖರಿಸಬಹುದು. |
02:33 | ನಾವು ಪ್ರಕಾಶಕರ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸಹ ಶೇಖರಿಸಬಹುದು. |
02:38 | ಅಲ್ಲದೆ ಇಲ್ಲಿ `ಲೈಬ್ರರಿ’ ಸದಸ್ಯರಿದ್ದು ಅವರು ಹೆಸರು, ದೂರವಾಣಿ ಸಂಖ್ಯೆ ಮತ್ತು ವಿಳಾಸವನ್ನು ಹೊಂದಿರುತ್ತಾರೆ. |
02:45 | ಸದಸ್ಯರೊಬ್ಬರಿಗೆ ಪುಸ್ತಕವನ್ನು ನೀಡಿದಾಗ, ಅದು- |
02:49 | ಪುಸ್ತಕ ನೀಡಿದ ದಿನಾಂಕ, ವಾಪಸ್ ಮಾಡಬೇಕಾದ ದಿನಾಂಕ, ವಾಪಸ್ ಮಾಡಿದ ದಿನಾಂಕ ಮತ್ತು ಚೆಕ್ಡ್-ಇನ್ ಸ್ಥಿತಿಯನ್ನು ಹೊಂದಿರುತ್ತದೆ. |
02:56 | ಈ ಪ್ರತ್ಯೇಕ ಐಟಂಗಳನ್ನು ಅಟ್ರಿಬ್ಯೂಟ್ ಗಳೆಂದು ಕರೆಯಲಾಗುತ್ತದೆ. |
03:01 | ಈ ಪ್ರತಿಯೊಂದು ಅಟ್ರಿಬ್ಯೂಟ್, ಟೇಬಲ್ ನಲ್ಲಿ ಸಂಭಾವ್ಯ ಕಾಲಂಗಳನ್ನು ಪ್ರತಿನಿಧಿಸುತ್ತದೆ. |
03:08 | ಈ ಹಂತದಲ್ಲಿ ನಾವು ಈ ಕೆಳಗಿನ ಪ್ರಶ್ನೆಗಳನ್ನು ಸೂತ್ರೀಕರಿಸಬಹುದು: |
03:12 | ಪ್ರಕಾಶಕರೊಬ್ಬರು ಲೈಬ್ರರಿಗೆ ಒದಗಿಸಿದ ಹೊಸ ಪುಸ್ತಕಗಳ ಶ್ರೇಣಿಯ ಕುರಿತ ಮಾಹಿತಿಯನ್ನು ನಾವು ಹೇಗೆ ಸೇರಿಸಬಹುದು? |
03:20 | ಇದರ ಸದಸ್ಯರ ಪಟ್ಟಿಯನ್ನು ನಾವು ಹೇಗೆ ನಿರ್ವಹಿಸಬಹುದು? |
03:25 | ಸದಸ್ಯರೊಬ್ಬರು ಬಿಡಲು ಇಚ್ಛಿಸಿದರೆ ಅಥವಾ ತನ್ನ ವಿಳಾಸವನ್ನು ಬದಲಾಯಿಸಲು ಇಚ್ಛಿಸಿದರೆ ಏನು ಮಾಡಬೇಕು? |
03:32 | ಸದಸ್ಯರು ಪುಸ್ತಕವನ್ನು ವಾಪಾಸ್ ಮಾಡಿದಾಗ ನಾವು ಮಾಹಿತಿಯನ್ನು ಹೇಗೆ ಪರಿಷ್ಕರಿಸಬೇಕು? |
03:38 | ಯಾವ ರೀತಿಯ ರಿಪೋರ್ಟ್ ಗಳನ್ನು ನಾವು ತಯಾರಿಸಬೇಕು? |
03:42 | ಸದಸ್ಯರ ಪೈಕಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಓದಿದ ಪುಸ್ತಕ ಯಾವುದು? |
03:46 | ಮತ್ತು, ಪುಸ್ತಕವನ್ನು ಎರವಲು ಪಡೆದಿರುವ ಸದಸ್ಯರಿಂದ ಮರಳಿಸಲು ಬಾಕಿ ಇರುವ ಪುಸ್ತಕಗಳ ಪಟ್ಟಿಯನ್ನು ನಾವು ಹೇಗೆ ರಚಿಸಬಹುದು? |
03:55 | ನಮ್ಮ ಬಳಿ ಒಂದಷ್ಟು ಮಾಹಿತಿ ಇರುವುದರಿಂದ, ಈ ಮಾಹಿತಿಯನ್ನು ಟೇಬಲ್ ಗಳಾಗಿ ಹೇಗೆ ವಿಂಗಡಿಸಬಹುದು ಎಂಬುದನ್ನು ಈಗ ನೋಡೋಣ. |
04:02 | ನಾವು ನಮ್ಮ ಐಟಂಗಳು ಅಥವಾ ಅಟ್ರಿಬ್ಯೂಟ್ ಗಳೆನಿಸಿರುವ ಮಾಹಿತಿಯನ್ನು ಮೇಜರ್ ಎಂಟಿಟಿಗಳು ಅಥವಾ ಸಬ್ಜೆಕ್ಟ್ ಗಳಾಗಿ ವಿಂಗಡಿಸಲಿದ್ದೇವೆ. |
04:11 | ಪ್ರತಿ ಸಬ್ಜೆಕ್ಟ್ ನಂತರ ಟೇಬಲ್ ಆಗುತ್ತದೆ. |
04:14 | ಹೀಗೆ, ಟೇಬಲ್ ಗಳ ಆರಂಭಿಕ ಪಟ್ಟಿಯು ಸ್ಕ್ರೀನ್ ನಲ್ಲಿ ತೋರಿಸಿರುವ ಚಿತ್ರದಂತೆ ಇರುತ್ತದೆ. |
04:21 | ಇಲ್ಲಿ ತೋರಿಸಿರುವ ಮೇಜರ್ ಸಬ್ಜೆಕ್ಟ್ ಗಳು ಅಥವಾ ಎಂಟಿಟಿಗಳು ಪುಸ್ತಕಗಳು ಮತ್ತು ಸದಸ್ಯರಾಗಿವೆ. |
04:26 | ಹೀಗಾಗಿ, ಎರಡು ಟೇಬಲ್ ಗಳನ್ನು, ಅಂದರೆ ಒಂದು ಪುಸ್ತಕಗಳಿಗಾಗಿ ಹಾಗೂ ಇನ್ನೊಂದು ಸದಸ್ಯರಿಗಾಗಿ, ಆರಂಭಿಸುವುದು ಸಮಂಜಸವೆನಿಸುತ್ತದೆ. |
04:33 | ನಾವೀಗ Books ಟೇಬಲ್ ಅನ್ನು ವಿವರವಾಗಿ ನೋಡೋಣ. |
04:37 | ಇದು, ನಾವು ಹಿಂದೆ ನಿರೂಪಿಸಿದ 10 ಅಟ್ರಿಬ್ಯೂಟ್ ಗಳು ಅಥವಾ ಕಾಲಂಗಳನ್ನು ಹೊಂದಿದೆ: |
04:43 | ಅವೆಂದರೆ Title, Author, Publisher, PublisherAddress, PublisherCity, PublisherPhone, PublishYear, Price, AuthorBirthDate ಮತ್ತು AuthorCountry. |
04:58 | ಈಗ, ಈ ಟೇಬಲ್ ನಲ್ಲಿ ಡೇಟಾವನ್ನು ಹೇಗೆ ಡಿಸ್ಪ್ಲೇ ಮಾಡಲಾಗುತ್ತದೆ ಎಂಬುದನ್ನು ನೋಡೋಣ. |
05:03 | ಪ್ರತಿ ಸಾಲು ಅಥವಾ ರೆಕಾರ್ಡ್, ಪುಸ್ತಕ, ಇದರ ಲೇಖಕ ಮತ್ತು ಪ್ರಕಾಶಕರ ಕುರಿತು ಮಾಹಿತಿ ಹೊಂದಿರುತ್ತದೆ ಎಂಬುದನ್ನು ಗಮನಿಸಿ. |
05:13 | ಈ ವಿನ್ಯಾಸದಲ್ಲಿ ಎರಡು ನ್ಯೂನತೆಗಳಿವೆ. |
05:17 | ಒಂದೇ ಲೇಖಕರ ಅಥವಾ ಪ್ರಕಾಶಕರ ಅನೇಕ ಪುಸ್ತಕಗಳು ಇರಬಹುದು. |
05:23 | ಹೀಗಾಗಿ, ಲೇಖಕರ ಮತ್ತು ಪ್ರಕಾಶಕರ ವಿವರಗಳು ಅನೇಕ ಬಾರಿ ಪುನರಾವರ್ತನೆಯಾಗುವುದನ್ನು ನಾವು ಗಮನಿಸಬಹುದು. |
05:31 | ಇದು ಕಂಪ್ಯೂಟರ್ ನ ಡಿಸ್ಕ್ ಸ್ಥಳವನ್ನು ಪೋಲು ಮಾಡುತ್ತದೆ. |
05:34 | ಈ ವಿನ್ಯಾಸದಲ್ಲಿ ಇರುವ ಎರಡನೇ ಸಮಸ್ಯೆ ಎಂದರೆ: |
05:38 | ಇದು ಡೇಟಾಬೇಸ್ ನಲ್ಲಿ ಅನೊಮಲಿಗಳನ್ನು ಪರಿಚಯಿಸುತ್ತಾ ರನ್ ಮಾಡುತ್ತದೆ. |
05:44 | ಹಾಗಾದರೆ, ಅನೊಮಲಿ ಎಂದರೆ ಏನು? |
05:47 | ಸರಳವಾಗಿ ಹೇಳುವುದಾದರೆ ಇದು ಡೇಟಾಬೇಸ್ ನಲ್ಲಿನ ದೋಷ ಅಥವಾ ಅಸಂಗತತೆ. |
05:53 | ನಾವು ಮೂರು ವಿಧದ ಅನೊಮಲಿಗಳನ್ನು ಕಾಣಬಹುದು: |
05:57 | ಮೊದಲನೆಯದು ಇನ್ಸರ್ಷನ್ ಅನೊಮಲಿ. |
06:01 | ಹೊಸ ರೆಕಾರ್ಡ್ ಅನ್ನು ಸೇರಿಸಿದಾಗ ಇದು ಉಂಟಾಗುತ್ತದೆ. |
06:06 | ಅಥವಾ, ಇತರ ಅಟ್ರಿಬ್ಯೂಟ್ ಗಳ ಉಪಸ್ಥಿತಿ ಇಲ್ಲದೆ ಇದ್ದ ಸಂದರ್ಭದಲ್ಲಿ ಡೇಟಾಬೇಸ್ ಗೆ ಕೆಲವು ಅಟ್ರಿಬ್ಯೂಟ್ ಗಳನ್ನು ಸೇರಿಸಲು ಆಗದೇ ಇದ್ದಾಗ ಉಂಟಾಗುತ್ತದೆ. |
06:14 | ಉದಾಹರಣೆಗೆ,'ಪೆಂಗ್ವಿನ್' ಹೆಸರಿನ ಹೊಸ ಪಬ್ಲಿಷರ್ ಇದ್ದಾರೆ ಅಂದುಕೊಳ್ಳೋಣ. |
06:21 | ಈಗ, ನಮ್ಮ ಲೈಬ್ರರಿಯು ಕನಿಷ್ಠ ಒಂದಾದರೂ ಪುಸ್ತಕವನ್ನು ಪೆಂಗ್ವಿನ್ ಪಬ್ಲಿಷರ್ ನಿಂದ ಪಡೆಯುವ ತನಕ ನಮ್ಮ ವಿನ್ಯಾಸವು, ಇವರ ಕುರಿತು ಮಾಹಿತಿಯನ್ನು ಸೇರಿಸಲು ಬಿಡುವುದಿಲ್ಲ. |
06:34 | ಎರಡನೆಯದನ್ನು ಡಿಲಿಷನ್ ಅನೊಮಲಿ ಎಂದು ಕರೆಯಲಾಗುತ್ತದೆ. |
06:39 | ರೆಕಾರ್ಡ್ ಒಂದನ್ನು ಡಿಲೀಟ್ ಮಾಡಿದಾಗ ಇದು ಉಂಟಾಗುತ್ತದೆ. |
06:43 | ಇಲ್ಲಿ, ಡೇಟಾಬೇಸ್ ನಲ್ಲಿ ರೋ ಅಥವಾ ರೆಕಾರ್ಡ್ ಒಂದನ್ನು ಡಿಲೀಟ್ ಮಾಡಿದಾಗ, ನಾವು ಡಿಲೀಟ್ ಮಾಡಲು ಇಚ್ಛಿಸಿದ ಡೇಟಾಕ್ಕಿಂತ ಹೆಚ್ಚಿನ ಮಾಹಿತಿಯನ್ನು ಇದು ಡಿಲೀಟ್ ಮಾಡುತ್ತದೆ. |
06:51 | ಉದಾಹರಣೆಗೆ, ನಮ್ಮ ಲೈಬ್ರರಿಯಲ್ಲಿ, 'Orient Publishers' ಕೇವಲ ‘Paradise Lost’ ಹೆಸರಿನ ಒಂದೇ ಪುಸ್ತಕವನ್ನು ಹೊಂದಿರುವುದನ್ನು ನಾವು ಗಮನಿಸಬಹುದು. |
07:01 | ಒಂದುವೇಳೆ ನಾವು ಇಡೀ ರೆಕಾರ್ಡ್ ಅನ್ನು ಡಿಲೀಟ್ ಮಾಡಿದರೆ, ನಾವು ಓರಿಯಂಟ್ ಪಬ್ಲಿಷರ್ಸ್ ಕುರಿತ ಎಲ್ಲಾ ಮಾಹಿತಿಯನ್ನು ಕಳೆದುಕೊಳ್ಳುತ್ತೇವೆ. |
07:10 | ಮತ್ತು ಲೇಖಕ John Milton ಕುರಿತ ಮಾಹಿತಿಯನ್ನು ಸಹ ನಾವು ಕಳೆದುಕೊಳ್ಳುತ್ತೇವೆ. |
07:16 | ಅಂತಿಮವಾಗಿ, ಅಪ್ಡೇಟ್ ಅನೊಮಲಿ ಎಂದರೆ ಏನು ಎಂಬುದನ್ನು ನೋಡೋಣ. |
07:21 | ರೆಕಾರ್ಡ್ ಅನ್ನು ಅಪ್ಡೇಟ್ ಮಾಡುವಾಗ ಇದು ಉಂಟಾಗುತ್ತದೆ. |
07:26 | ಉದಾಹರಣೆಗೆ, Cambridge Publishers ಹೊಸ ವಿಳಾಸವನ್ನು ಪಡೆದಿದ್ದಾರೆ ಎಂದು ಭಾವಿಸೋಣ. |
07:32 | ಈಗ, ಈ Publisher ಗೆ Address ಕಾಲಂ ಅನ್ನು ಅಪ್ಡೇಟ್ ಮಾಡಬೇಕಾದರೆ ನಾವು ಒಂದಕ್ಕಿಂತ ಹೆಚ್ಚು ಕಡೆ ಬದಲಾವಣೆ ಮಾಡಬೇಕಾಗುತ್ತದೆ. |
07:40 | ನಮ್ಮ ವಿಷಯದಲ್ಲಿ ಎರಡು ಕಡೆ ಹೀಗೆ ಮಾಡಬೇಕು. |
07:43 | ಒಂದುವೇಳೆ ಸಾವಿರದಷ್ಟು ಪುಸ್ತಕವನ್ನು ಕ್ಯಾಂಬ್ರಿಜ್ ಒದಗಿಸಿದ್ದರೆ, ಈ ಎಲ್ಲಾ ಸಾವಿರ ರೆಕಾರ್ಡ್ ಗಳಲ್ಲಿ ನಾವು ಬದಲಾವಣೆ ಮಾಡಬೇಕಾಗುತ್ತದೆ. |
07:54 | ನಾವು ಆಕಸ್ಮಿಕವಾಗಿ ಒಂದು ಕಡೆ ವಿಳಾಸವನ್ನು ಬದಲಾಯಿಸಿ, ಇತರ ಕಡೆಗಳಲ್ಲಿ ವಿಳಾಸ ಬದಲಾಯಿಸಲು ಮರೆತು ಬಿಡಬಹುದು. |
08:02 | ಇದರಿಂದಾಗಿ ಮಾಹಿತಿಯ ನಿಖರತೆ ಕಾಪಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಡೇಟಾ ಇಂಟೆಗ್ರಿಟಿಯ ನಷ್ಟವಾಗುತ್ತದೆ. |
08:11 | ನಾವು ಈ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು? |
08:14 | ಪ್ರತಿ ಸಂಗತಿಯ ಒಂದು ಮಾತ್ರ ರೆಕಾರ್ಡ್ ಇರುವಂತೆ ನಾವು ಮರುವಿನ್ಯಾಸ ಮಾಡಬೇಕು. |
08:20 | ಒಂದುವೇಳೆ, ಒಂದೇ ಮಾಹಿತಿಯನ್ನು ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಪುನರಾವರ್ತನೆಯಾಗಿದ್ದರೆ, ನಾವು ಆ ಮಾಹಿತಿಯನ್ನು ಪ್ರತ್ಯೇಕ ಟೇಬಲ್ ನಲ್ಲಿ ಇಡಬೇಕು. |
08:29 | ಇದು ಹೇಗೆ ಎಂಬುದನ್ನು ನೋಡೋಣ. |
08:31 | ಈಗ ನಾವು ಬುಕ್ಸ್ ಟೇಬಲ್ ಅನ್ನು ಬುಕ್ಸ್, ಆಥರ್ಸ್, ಮತ್ತು ಪಬ್ಲಿಷರ್ಸ್ ಆಗಿ ಪ್ರತ್ಯೇಕಿಸಿದ್ದೇವೆ. |
08:38 | ಪ್ರತಿ ಟೇಬಲ್ ನಲ್ಲಿರುವ ಕಾಲಂಗಳು ಆ ಎಂಟಿಟಿ ಅಥವಾ ವಿಷಯದ ಕುರಿತು ಮಾತ್ರ ಸಂಗತಿಗಳನ್ನು ಶೇಖರಿಸುತ್ತವೆ ಎಂಬುದನ್ನು ಗಮನಿಸಿ. |
08:47 | ಈ ರೀತಿ ನಾವು ಪ್ರಕಾಶಕರ ಮಾಹಿತಿಯನ್ನು ಪಬ್ಲಿಷರ್ ಟೇಬಲ್ ಒಳಗಡೆ ಒಮ್ಮೆ ಮಾತ್ರ ರೆಕಾರ್ಡ್ ಮಾಡಬಹುದು. |
08:55 | ಇದೇ ರೀತಿ, ಪ್ರತ್ಯೇಕ Authors ಟೇಬಲ್ ಇದ್ದರೆ ಇದು ಲೇಖಕರ ಮಾಹಿತಿಯನ್ನು ಒಮ್ಮೆ ಮಾತ್ರ ರೆಕಾರ್ಡ್ ಮಾಡಲು ಅನುವು ಮಾಡಿಕೊಡುತ್ತದೆ. |
09:04 | ಈ ಟೇಬಲ್ ಗಳನ್ನು ಬುಕ್ಸ್ ಟೇಬಲ್ ಗಳಿಗೆ ಹೇಗೆ ಸಂಪರ್ಕಿಸಬಹುದು ಎಂಬುದನ್ನು ನಾವು ಮುಂದಿನ ಟ್ಯುಟೋರಿಯಲ್ ನಲ್ಲಿ ನೋಡೋಣ. |
09:12 | ಈ ಮೂಲಕ ನಾವು ಲಿಬರ್ ಆಫಿಸ್ ನ ಡೇಟಾಬೇಸ್ ಡಿಸೈನ್ ಕುರಿತ ಟ್ಯುಟೋರಿಯಲ್ ನ ಮೊದಲ ಭಾಗದ ಕೊನೆಯ ಹಂತಕ್ಕೆ ಬಂದಿದ್ದೇವೆ. |
09:19 | ಸಂಕ್ಷಿಪ್ತವಾಗಿ ನಾವು, ಡೇಟಾಬೇಸ್ ಡಿಸೈನ್ ನಲ್ಲಿ: ಈ ಕೆಳಗಿನ ವಿಷಯಗಳನ್ನು ಕಲಿತೆವು: |
09:25 | ನಮ್ಮ ಡೇಟಾಬೇಸ್ ನ ಉದ್ದೇಶವನ್ನು ನಿರ್ಧರಿಸುವುದು, |
09:28 | ಬೇಕಾಗಿರುವ ಮಾಹಿತಿಯನ್ನು ಹುಡುಕುವುದು ಹಾಗೂ ಅದನ್ನು ಅಣಿಗೊಳಿಸುವುದು, |
09:32 | ಮತ್ತು ಮಾಹಿತಿಯನ್ನು ಟೇಬಲ್ ಗಳಾಗಿ ವಿಂಗಡಿಸುವುದು. |
09:36 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD ಮೂಲಕ ಭಾರತ ಸರ್ಕಾರದ ನೆರವು ಪಡೆದಿದೆ. |
09:48 | ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org. |
09:54 | ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ. |
09:58 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |