Linux/C2/Installing-Software-16.04/Kannada
From Script | Spoken-Tutorial
Revision as of 09:36, 12 July 2019 by Sandhya.np14 (Talk | contribs)
Time | Narration |
00:01 | Ubuntu Linux 16.04 ಆಪರೇಟಿಂಗ್ ಸಿಸ್ಟಂ ನಲ್ಲಿ, Installing Software ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:10 | ಈ ಟ್ಯುಟೋರಿಯಲ್ ನಲ್ಲಿ, ನಾವು: Ubuntu Linux 16.04 ಆಪರೇಟಿಂಗ್ ಸಿಸ್ಟಂ ನಲ್ಲಿ:
'ಟರ್ಮಿನಲ್', |
00:21 | 'ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್' ಹಾಗೂ
'ಉಬಂಟು ಸಾಫ್ಟ್ವೇರ್ ಸೆಂಟರ್' ಇವುಗಳ ಮೂಲಕ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಲು ಕಲಿಯುವೆವು. |
00:27 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು Ubuntu Linux 16.04 ಆಪರೇಟಿಂಗ್ ಸಿಸ್ಟಂ ಅನ್ನು ಬಳಸುತ್ತಿದ್ದೇನೆ. |
00:34 | ಈ ಟ್ಯುಟೋರಿಯಲ್ ಅನ್ನು ಮುಂದುವರೆಸಲು, ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಲೇಬೇಕು. |
00:39 | ಸಾಫ್ಟ್ವೇರ್ ಇನ್ಸ್ಟಾಲ್ ಮಾಡಲು, ನೀವು System Administrator ಆಗಿರಬೇಕು ಅಥವಾ Administrator rights ಅನ್ನು ಹೊಂದಿರಬೇಕು. |
00:46 | ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’, a p t ಗಾಗಿ ಒಂದು ಗ್ರಾಫಿಕಲ್ ಪ್ರೊಗ್ರಾಂ ಆಗಿದೆ. |
00:51 | apt-get command line ಬಳಕೆಗೆ ಇದೊಂದು GUI ಆಗಿದೆ. |
00:57 | Ubuntu Linux 16.04 ನಲ್ಲಿ, ಡೀಫಾಲ್ಟ್ ಆಗಿ, ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಮೊದಲೇ ಇನ್ಸ್ಟಾಲ್ ಮಾಡಿರುವುದಿಲ್ಲ. |
01:05 | ಆದ್ದರಿಂದ, 'ಟರ್ಮಿನಲ್' ಮೂಲಕ ಅದನ್ನು ಹೇಗೆ ಇನ್ಸ್ಟಾಲ್ ಮಾಡಬೇಕೆಂದು ಕಲಿಯೋಣ. |
01:10 | ನಿಮ್ಮ ಕೀಬೋರ್ಡ್ ನಲ್ಲಿ Ctrl, Alt ಮತ್ತು T ಕೀಗಳನ್ನು ಒಟ್ಟಿಗೇ ಒತ್ತಿ terminal ಅನ್ನು ತೆರೆಯಿರಿ. |
01:18 | ಈಗ, 'ಟರ್ಮಿನಲ್' ನಲ್ಲಿ ಹೀಗೆ ಟೈಪ್ ಮಾಡಿ: sudo space a p t hyphen get space install space s y n a p ಮತ್ತು Tab ಕೀಯನ್ನು ಒತ್ತಿ. |
01:34 | ಇದು s y n a p ಯೊಂದಿಗೆ (ಎಸ್ ವೈ ಎನ್ ಎ ಪಿ) ಆರಂಭವಾಗುವ ಸಾಫ್ಟ್ವೇರ್ ಗಳ ಪಟ್ಟಿಯನ್ನು ತೋರಿಸುತ್ತದೆ. |
01:40 | ಈಗ, ಪದವನ್ನು synaptic (ಸಿನಾಪ್ಟಿಕ್) ಎಂದು ಪೂರ್ಣಗೊಳಿಸಿ ಮತ್ತು Enter ಅನ್ನು ಒತ್ತಿ. |
01:46 | ನಿಮ್ಮ administrator password ಅನ್ನು ಕೊಡಲು ನಿಮಗೆ ಸೂಚಿಸಲಾಗುವುದು. |
01:51 | ನಿಮ್ಮ admin password ಅನ್ನು ನಮೂದಿಸಿ. |
01:54 | 'ಟರ್ಮಿನಲ್' ನಲ್ಲಿ ಪಾಸ್ವರ್ಡ್ ಅನ್ನು ಟೈಪ್ ಮಾಡುವಾಗ, ಅದು ನಮಗೆ ಕಾಣುವುದಿಲ್ಲ. ಆದ್ದರಿಂದ ಅದನ್ನು ಎಚ್ಚರಿಕೆಯಿಂದ ಟೈಪ್ ಮಾಡಿ. |
02:02 | Enter ಅನ್ನು ಒತ್ತಿ. |
02:04 | ಈಗ 'ಟರ್ಮಿನಲ್', ಇನ್ಸ್ಟಾಲ್ ಮಾಡಬೇಕಾದ ಪ್ಯಾಕೇಜ್ ಗಳ ಪಟ್ಟಿ, |
02:09 | ಡೌನ್ಲೋಡ್ ಮಾಡಬೇಕಾದ ಫೈಲ್ಗಳ ಗಾತ್ರ ಮತ್ತು ಇನ್ಸ್ಟಾಲ್ಲೇಶನ್ ನಂತರ ಡಿಸ್ಕ್ ಸ್ಪೇಸ್ ಇವುಗಳ ಬಗ್ಗೆ ಮಾಹಿತಿಯನ್ನು ತೋರಿಸುತ್ತದೆ. |
02:17 | ಇದನ್ನು ಖಚಿತಪಡಿಸಲು Y ಅನ್ನು ಒತ್ತಿ. |
02:19 | Enter ಅನ್ನು ಒತ್ತಿ. |
02:22 | ಇನ್ಸ್ಟಾಲ್ಲೇಶನ್ ಈಗ ಪ್ರಾರಂಭವಾಗುತ್ತದೆ. ನಿಮ್ಮ ಇಂಟರ್ನೆಟ್ ನ ವೇಗವನ್ನು ಅವಲಂಬಿಸಿ, ಇದು ಮುಗಿಯಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. |
02:31 | ಈಗ ನಾವು ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ಅನ್ನು ಯಶಸ್ವಿಯಾಗಿ ಇನ್ಸ್ಟಾಲ್ ಮಾಡಿದ್ದೇವೆ. |
02:36 | ನಾವು 'ಟರ್ಮಿನಲ್' ಅನ್ನು ಮುಚ್ಚೋಣ. |
02:39 | ಇನ್ಸ್ಟಾಲ್ಲೇಶನ್ ಅನ್ನು ಖಚಿತಪಡಿಸಲು, Dash homeಗೆ ಹೋಗಿ. 'ಸರ್ಚ್ ಬಾರ್' ನಲ್ಲಿ, synaptic ಎಂದು ಟೈಪ್ ಮಾಡಿ. |
02:46 | ಇಲ್ಲಿ Synaptic Package Manager ಐಕಾನ್ ಅನ್ನು ನಾವು ನೋಡಬಹುದು. |
02:51 | ಈಗ ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ ಅನ್ನು ಬಳಸಿ ಸಾಫ್ಟ್ವೇರ್ ಇನ್ಸ್ಟಾಲ್ ಮಾಡಲು ಕಲಿಯೋಣ. |
02:57 | Synaptic Package Manager ಐಕಾನ್ ಮೇಲೆ ಕ್ಲಿಕ್ ಮಾಡಿ. |
03:01 | password ಅನ್ನು ಕೇಳುತ್ತಿರುವ Authenticate ಎಂಬ ಡೈಲಾಗ್-ಬಾಕ್ಸ್ ಕಾಣಿಸುತ್ತದೆ. |
03:06 | ನಾವು admin password ಟೈಪ್ ಮಾಡಿ, Enter ಅನ್ನು ಒತ್ತೋಣ. |
03:10 | ಮೊದಲ ಬಾರಿಗೆ ನಾವು ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ ಅನ್ನು ಬಳಸುವಾಗ, ಒಂದು introduction ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
03:17 | ಈ ಡೈಲಾಗ್-ಬಾಕ್ಸ್, ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ಅನ್ನು ಹೇಗೆ ಬಳಸಬೇಕೆಂಬ ಮಾಹಿತಿಯನ್ನು ಹೊಂದಿದೆ. |
03:23 | ಈ ಡೈಲಾಗ್-ಬಾಕ್ಸ್ ಅನ್ನು ಮುಚ್ಚಲು, Close ಬಟನ್ ಮೇಲೆ ಕ್ಲಿಕ್ ಮಾಡಿ. |
03:27 | ನಾವು ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ ನಲ್ಲಿ, Proxy ಹಾಗೂ Repository ಗಳನ್ನು ಕಾನ್ಫಿಗರ್ ಮಾಡೋಣ. |
03:33 | 'ಅಪ್ಲಿಕೇಶನ್' ಅಥವಾ 'ಪ್ಯಾಕೇಜ್' ಅನ್ನು ಇನ್ಸ್ಟಾಲ್ ಮಾಡುವ ಮೊದಲು, ನಾವು ಇದನ್ನು ಮಾಡಬೇಕು. |
03:38 | Settings ಗೆ ಹೋಗಿ ಮತ್ತು Preferences ಮೇಲೆ ಕ್ಲಿಕ್ ಮಾಡಿ. |
03:42 | ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ Preferencesವಿಂಡೋದಲ್ಲಿ, ಹಲವಾರು ಟ್ಯಾಬ್ಗಳಿವೆ. |
03:48 | Proxy ಸೆಟ್ಟಿಂಗ್ ಗಳನ್ನು ಕಾನ್ಫಿಗರ್ ಮಾಡಲು, Network ಮೇಲೆ ಕ್ಲಿಕ್ ಮಾಡಿ. |
03:52 | Proxy Server ನ ಅಡಿಯಲ್ಲಿ ಎರಡು ಆಯ್ಕೆಗಳಿವೆ – Direct Connection ಹಾಗೂ Manual Proxy. |
04:00 | ನಾನು Direct Connection ಅನ್ನು ಬಳಸುವೆನು. ನಿಮಗೆ ಬೇಕಾದ ಆಯ್ಕೆಯನ್ನು ನೀವು ಆರಿಸಿಕೊಳ್ಳಬಹುದು. |
04:06 | ವಿಂಡೋ ಅನ್ನು ಮುಚ್ಚಲು, ಕೆಳಗಿರುವ OK ಬಟನ್ ಮೇಲೆ ಕ್ಲಿಕ್ ಮಾಡಿ. |
04:11 | ಈಗ, ಮತ್ತೊಮ್ಮೆSetting ಗೆ ಹೋಗಿ ಮತ್ತು Repositories ಮೇಲೆ ಕ್ಲಿಕ್ ಮಾಡಿ. |
04:16 | ಸ್ಕ್ರೀನ್ ಮೇಲೆ Software Sources ವಿಂಡೋ ಕಾಣಿಸಿಕೊಳ್ಳುತ್ತದೆ. |
04:20 | ಉಬಂಟು ಸಾಫ್ಟ್ವೇರ್ ಅನ್ನು ಡೌನ್ಲೋಡ್ ಮಾಡಲು, ಹಲವಾರು ಮೂಲಗಳಿವೆ (source). |
04:24 | Download From ಡ್ರಾಪ್-ಡೌನ್ ಮೆನ್ಯು ಮೇಲೆ ಕ್ಲಿಕ್ ಮಾಡಿ. ರಿಪಾಸಿಟರೀಸ್ ನ (repositories) ಲಿಸ್ಟ್ ಅನ್ನು ನೋಡಲು, ಮೌಸ್-ಬಟನ್ ಅನ್ನು ಹಿಡಿದುಕೊಳ್ಳಿ. |
04:31 | Other, ಜಗತ್ತಿನಾದ್ಯಂತ ಇರುವ servers ಲಿಸ್ಟ್ ಅನ್ನು ತೋರಿಸುತ್ತದೆ. |
04:36 | ಈ ವಿಂಡೋಅನ್ನು ಮುಚ್ಚಲು, ಕೆಳಗಿರುವ Cancel ಬಟನ್ ಮೇಲೆ ಕ್ಲಿಕ್ ಮಾಡಿ. |
04:41 | ಇಲ್ಲಿ ತೋರಿಸಿದಂತೆ, ನಾನು Server for India ಬಳಸುತ್ತಿದ್ದೇನೆ. |
04:45 | Software Sources ವಿಂಡೋಅನ್ನು ಮುಚ್ಚಲು, Close ಬಟನ್ ಮೇಲೆ ಕ್ಲಿಕ್ ಮಾಡಿ. |
04:50 | ನೀವು ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ ಅನ್ನು ಮೊದಲ ಬಾರಿಗೆ ಬಳಸುತ್ತಿದ್ದರೆ, packages ಅನ್ನು ನೀವು ರೀ-ಲೋಡ್ ಮಾಡಬೇಕು. |
04:57 | ಇದನ್ನು ಮಾಡಲು, ಟೂಲ್-ಬಾರ್ ಮೇಲಿನ Reload ಬಟನ್ ಮೇಲೆ ಕ್ಲಿಕ್ ಮಾಡಿ. |
05:02 | ಇದಕ್ಕೆ ಕೆಲವು ಸೆಕೆಂಡುಗಳು ಬೇಕಾಗಬಹುದು. |
05:05 | ಇಲ್ಲಿ ನೋಡಿ. ಪ್ಯಾಕೇಜ್ ಗಳು ಇಂಟರ್ನೆಟ್ ಮೂಲಕ ವರ್ಗಾವಣೆ ಆಗುತ್ತಿವೆ ಮತ್ತು ಅಪ್ಡೇಟ್ ಸಹ ಆಗುತ್ತಿವೆ. |
05:13 | ಉದಾಹರಣೆಗಾಗಿ, ನಾನು ಈಗ VLC player ಅನ್ನು ಇನ್ಸ್ಟಾಲ್ ಮಾಡುವೆನು. |
05:18 | ನಾವು ಟೂಲ್-ಬಾರ್ ಮೇಲಿರುವ Search ಫೀಲ್ಡ್ ಗೆ ಹೋಗೋಣ. |
05:23 | Search ಡೈಲಾಗ್-ಬಾಕ್ಸ್ ನಲ್ಲಿ, vlc ಎಂದು ಟೈಪ್ ಮಾಡಿ, Search ಬಟನ್ ಮೇಲೆ ಕ್ಲಿಕ್ ಮಾಡಿ. |
05:29 | ಲಿಸ್ಟ್ ಮಾಡಲಾದ ಎಲ್ಲಾ VLC package ಗಳನ್ನು ಇಲ್ಲಿ ನಾವು ನೋಡಬಹುದು. |
05:34 | VLC package ಅನ್ನು ಆಯ್ಕೆಮಾಡಲು, ಚೆಕ್-ಬಾಕ್ಸ್ ಮೇಲೆ ರೈಟ್-ಕ್ಲಿಕ್ ಮಾಡಿ.
ಇಲ್ಲಿ ಕಾಣುವ ಮೆನ್ಯುವಿನಿಂದ Mark for installation ಆಯ್ಕೆಯನ್ನು ಆರಿಸಿಕೊಳ್ಳಿ. |
05:45 | ಎಲ್ಲಾ repository packages ನ ಲಿಸ್ಟ್ ಅನ್ನು ತೋರಿಸುತ್ತಿರುವ ಒಂದು ಡೈಲಾಗ್-ಬಾಕ್ಸ್ ಕಾಣುತ್ತದೆ. |
05:51 | ಎಲ್ಲಾ dependencies packages ಅನ್ನು ತಂತಾನೇ ಗುರುತಿಸಲು, Mark ಬಟನ್ ಮೇಲೆ ಕ್ಲಿಕ್ ಮಾಡಿ. |
05:57 | ಟೂಲ್-ಬಾರ್ ಗೆ ಹೋಗಿ, Apply ಬಟನ್ ಮೇಲೆ ಕ್ಲಿಕ್ ಮಾಡಿ. |
06:01 | ಇನ್ಸ್ಟಾಲ್ ಮಾಡಬೇಕಾದ ಪ್ಯಾಕೇಜ್ ಗಳ ವಿವರಗಳನ್ನು ತೋರಿಸುವ ಒಂದು Summary ವಿಂಡೋ ಕಾಣಿಸುತ್ತದೆ. |
06:07 | ಇನ್ಸ್ಟಾಲ್ಲೇಶನ್ ಅನ್ನು ಆರಂಭಿಸಲು, ಕೆಳಗಿರುವ Apply ಬಟನ್ ಮೇಲೆ ಕ್ಲಿಕ್ ಮಾಡಿ. |
06:12 | ಇನ್ಸ್ಟಾಲ್ಲೇಶನ್ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. |
06:16 | ಇದು, ಇನ್ಸ್ಟಾಲ್ ಮಾಡಬೇಕಾದ ಪ್ಯಾಕೇಜ್ಗಳ ಸಂಖ್ಯೆ ಮತ್ತು ಗಾತ್ರವನ್ನು ಅವಲಂಬಿಸಿರುತ್ತದೆ. |
06:21 | ಇನ್ಸ್ಟಾಲ್ಲೇಶನ್ ಪೂರ್ಣಗೊಂಡ ತಕ್ಷಣ, Applying Changes ವಿಂಡೋವನ್ನು ಮುಚ್ಚಲಾಗುತ್ತದೆ. |
06:27 | Synaptic Package Manager ವಿಂಡೋ ಅನ್ನು ಮುಚ್ಚಿ. |
06:31 | ಈಗ, 'VLC ಪ್ಲೇಯರ್' ಅನ್ನು ಯಶಸ್ವಿಯಾಗಿ ಇನ್ಸ್ಟಾಲ್ ಮಾಡಲಾಗಿದೆಯೇ ಎಂದು ನೋಡೋಣ. |
06:37 | Dash home ಗೆ ಹೋಗಿ. |
06:39 | 'ಸರ್ಚ್ ಬಾರ್' ನಲ್ಲಿ, vlc ಎಂದು ಟೈಪ್ ಮಾಡಿ. |
06:42 | ತೋರಿಸಲಾದ ಲಿಸ್ಟ್ ನಲ್ಲಿ, VLC ಐಕಾನ್ ಅನ್ನು ನಾವು ನೋಡಬಹುದು.
ಅದನ್ನು ತೆರೆಯಲು ಅದರ ಮೇಲೆ ಕ್ಲಿಕ್ ಮಾಡಿ. |
06:49 | ಹೀಗೆಯೇ, ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ ಅನ್ನು ಬಳಸಿಕೊಂಡು, ಇತರ ಅಪ್ಲಿಕೇಶನ್ ಗಳನ್ನು ನಾವು ಇನ್ಸ್ಟಾಲ್ ಮಾಡಬಹುದು. |
06:56 | ಈಗ, 'ಉಬಂಟು ಸಾಫ್ಟ್ವೇರ್ ಸೆಂಟರ್' ಮೂಲಕ ಹೇಗೆ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡುವುದೆಂದು ಕಲಿಯುವೆವು. |
07:02 | 'ಉಬಂಟು ಸಾಫ್ಟ್ವೇರ್ ಸೆಂಟರ್' ಒಂದು ಅಪ್ಲಿಕೇಶನ್ ಆಗಿದೆ. ಇದು Ubuntu Linux OS ನಲ್ಲಿ ಸಾಫ್ಟ್ವೇರ್ ಅನ್ನು ನಿರ್ವಹಿಸಲು ನಮಗೆ ಅನುಮತಿಸುತ್ತದೆ. |
07:10 | ಇದನ್ನು ನೀವು, ಸಾಫ್ಟ್ವೇರ್ ಅನ್ನು- ಸರ್ಚ್, ಡೌನ್ಲೋಡ್, ಇನ್ಸ್ಟಾಲ್, ಅಪ್ಡೇಟ್ ಅಥವಾ ಅನ್-ಇನ್ಸ್ಟಾಲ್ ಮಾಡಲು ಬಳಸಬಹುದು. |
07:17 | ನೀವು ಸಾಫ್ಟ್ವೇರ್ ಅನ್ನು ಬಳಸುವ ಮೊದಲೇ, ಇದು ನಿಮಗೆ ಅದರ ಬಗ್ಗೆ ಮಾಹಿತಿಯನ್ನು ಕೊಡುತ್ತದೆ. |
07:23 | 'ಉಬಂಟು ಸಾಫ್ಟ್ವೇರ್ ಸೆಂಟರ್' ಅನ್ನು ತೆರೆಯಲು, ಲಾಂಚರ್ ಗೆ ಹೋಗಿ. |
07:27 | Ubuntu Software ಐಕಾನ್ ಮೇಲೆ ಕ್ಲಿಕ್ ಮಾಡಿ. |
07:31 | Ubuntu Software Centre ವಿಂಡೋ ಕಾಣಿಸಿಕೊಳ್ಳುತ್ತದೆ. |
07:35 | ಮೇಲ್ಭಾಗದಲ್ಲಿ, All, Installed ಹಾಗೂ Updates ಎಂಬ 3 ಟ್ಯಾಬ್ ಗಳನ್ನು ನಾವು ನೋಡಬಹುದು. |
07:42 | All ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
07:44 | ಮೇಲ್ಭಾಗದಲ್ಲಿ 'ಸರ್ಚ್ ಬಾರ್' ಅನ್ನು ನಾವು ನೋಡಬಹುದು. |
07:47 | ಲಭ್ಯವಿರುವ ಸಾಫ್ಟ್ವೇರ್ ಅನ್ನು ಹುಡುಕಲು ಇದು ನಮಗೆ ಸಹಾಯ ಮಾಡುತ್ತದೆ. |
07:51 | ಈಗ, Inkscape ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡೋಣ. |
07:55 | ಸರ್ಚ್-ಬಾರ್ ನಲ್ಲಿ, inkscape ಎಂದು ಟೈಪ್ ಮಾಡಿ. |
07:59 | 'ಇಂಕ್ಸ್ಕೇಪ್' ಬಗ್ಗೆ ಸ್ವಲ್ಪ ಮಾಹಿತಿಯನ್ನು ತೋರಿಸಲಾಗಿದೆ. |
08:03 | ಈಗ, ಬಲಮೂಲೆಯಲ್ಲಿರುವ Install ಬಟನ್ ಮೇಲೆ ಕ್ಲಿಕ್ ಮಾಡಿ. |
08:07 | Authenticate ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
08:10 | ನಿಮ್ಮ admin password ನ್ನು ನಮೂದಿಸಿ, Authenticate ಬಟನ್ ಮೇಲೆ ಕ್ಲಿಕ್ ಮಾಡಿ. |
08:16 | ಪ್ರೊಗ್ರೆಸ್-ಬಾರ್, ಇಂಕ್-ಸ್ಕೇಪ್ ಇನ್ಸ್ಟಾಲ್ ಆಗುತ್ತಿದೆ ಎಂದು ಸೂಚಿಸುತ್ತದೆ. |
08:21 | ಇನ್ಸ್ಟಾಲ್ ಆಗುತ್ತಿರುವ ಪ್ಯಾಕೇಜ್ಗಳ ಸಂಖ್ಯೆ ಮತ್ತು ಗಾತ್ರವನ್ನು ಅವಲಂಬಿಸಿ, ಇನ್ಸ್ಟಾಲ್ಲೇಶನ್ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. |
08:28 | ಮೇಲಿರುವ Installed ಟ್ಯಾಬ್ನಲ್ಲಿ ಸಹ ಪ್ರೊಗ್ರೆಸ್ ಅನ್ನು ಸೂಚಿಸಲಾಗುತ್ತದೆ.
ಅದರ ಮೇಲೆ ಕ್ಲಿಕ್ ಮಾಡಿ. |
08:35 | ಯಾವುದೇ ಇನ್ಸ್ಟಾಲ್ಲೇಶನ್ ನಡೆಯುತ್ತಿರುವಾಗ, ನೀವು ಇತರ ಅಪ್ಲಿಕೇಶನ್ ಗಳನ್ನು ಆಕ್ಸೆಸ್ (access) ಮಾಡಬಹುದು. |
08:41 | Inkscape ಪದದ ಮೇಲೆ ಕ್ಲಿಕ್ ಮಾಡಿ. |
08:44 | ಇದು Inkscape ಬಗ್ಗೆ ಮಾಹಿತಿಯನ್ನು ತೋರಿಸುತ್ತದೆ. |
08:48 | ಒಮ್ಮೆ Inkscape ಇನ್ಸ್ಟಾಲ್ ಮಾಡಿದ ಮೇಲೆ, ಅದರ ಬದಿಯಲ್ಲಿ Remove ಹಾಗೂ Launch ಎಂಬ ಎರಡು ಬಟನ್ ಗಳನ್ನು ನಾವು ನೋಡಬಹುದು. |
08:55 | ನೀವು ಸಾಫ್ಟ್ವೇರ್ ಅನ್ನು ಅನ್-ಇನ್ಸ್ಟಾಲ್ ಮಾಡಲು ಬಯಸಿದರೆ, Remove ಬಟನ್ ಮೇಲೆ ಕ್ಲಿಕ್ ಮಾಡಿ. |
09:00 | ಅಪ್ಲಿಕೇಶನ್ ಅನ್ನು ಆರಂಭಿಸಲು, Launch ಬಟನ್ ಮೇಲೆ ಕ್ಲಿಕ್ ಮಾಡಿ.
ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ. |
09:06 | ಇದು Inkscape ಅಪ್ಲಿಕೇಶನ್ ಅನ್ನು ಆರಂಭಿಸುತ್ತದೆ. |
09:10 | Ubuntu Software Center ಗೆ ಹಿಂದಿರುಗಿ.
ಮೇಲಿನ ಎಡಬದಿಯ back arrow ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಮೇನ್ ಸ್ಕ್ರೀನ್ ಗೆ ಹಿಂದಿರುಗಿ. |
09:18 | ಈಗ Updates ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
09:21 | ಇದು Software is up to date ಎಂದು ಹೇಳುತ್ತಿರುವುದನ್ನು ನಾವು ನೋಡಬಹುದು. |
09:25 | ಮೇಲಿನ ಎಡಬದಿಯ refresh ಐಕಾನ್ ಮೇಲೆ ಕ್ಲಿಕ್ ಮಾಡಿ. ಇದು ಹೊಸ ಅಪ್ಡೇಟ್ ಗಳಿಗಾಗಿ ನೋಡುವುದು. |
09:31 | ಈಗ ನಮಗಾಗಿ ಒಂದು OS updates ಇದೆ. |
09:34 | ವಿವರಗಳನ್ನು ನೋಡಲು, ಅದರ ಮೇಲೆ ಕ್ಲಿಕ್ ಮಾಡಿ. ಇದನ್ನು ನಾನು ಮುಚ್ಚುತ್ತೇನೆ. |
09:39 | ನೀವು ಈ ಅಪ್ಡೇಟ್ ಅನ್ನು ಇನ್ಸ್ಟಾಲ್ ಮಾಡಲು ಬಯಸಿದರೆ, Install ಬಟನ್ ಮೇಲೆ ಕ್ಲಿಕ್ ಮಾಡಿ. ಇಲ್ಲದಿದ್ದರೆ, ಇದನ್ನು ಹಾಗೇ ಬಿಡಿ. |
09:46 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಸಂಕ್ಷಿಪ್ತವಾಗಿ, |
09:52 | ಈ ಟ್ಯುಟೋರಿಯಲ್ ನಲ್ಲಿ ನಾವು: Ubuntu Linux 16.04 ಆಪರೇಟಿಂಗ್ ಸಿಸ್ಟಂ ನಲ್ಲಿ: ಟರ್ಮಿನಲ್, |
10:02 | 'ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್' ಹಾಗೂ 'ಉಬಂಟು ಸಾಫ್ಟ್ವೇರ್ ಸೆಂಟರ್' ಇವುಗಳ ಮೂಲಕ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಲು ಕಲಿತಿದ್ದೇವೆ. |
10:07 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
10:15 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು, 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರವನ್ನು ಕೊಡುತ್ತದೆ. |
10:24 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
10:28 | ಈ ಫೋರಂ ನಲ್ಲಿ ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಪೋಸ್ಟ್ ಮಾಡಿ. |
10:32 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
10:44 | ಈ ಸ್ಕ್ರಿಪ್ಟ್, "ಸ್ಪೋಕನ್ ಟ್ಯುಟೋರಿಯಲ್” ತಂಡದ ಕೊಡುಗೆಯಾಗಿದೆ.
ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |