Linux/C2/Installing-Software-16.04/Kannada

From Script | Spoken-Tutorial
Jump to: navigation, search
Time Narration
00:01 Ubuntu Linux 16.04 ಆಪರೇಟಿಂಗ್ ಸಿಸ್ಟಂ ನಲ್ಲಿ, Installing Software ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:10 ಈ ಟ್ಯುಟೋರಿಯಲ್ ನಲ್ಲಿ, ನಾವು: Ubuntu Linux 16.04 ಆಪರೇಟಿಂಗ್ ಸಿಸ್ಟಂ ನಲ್ಲಿ:

'ಟರ್ಮಿನಲ್',

00:21 'ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್' ಹಾಗೂ

'ಉಬಂಟು ಸಾಫ್ಟ್ವೇರ್ ಸೆಂಟರ್' ಇವುಗಳ ಮೂಲಕ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಲು ಕಲಿಯುವೆವು.

00:27 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು Ubuntu Linux 16.04 ಆಪರೇಟಿಂಗ್ ಸಿಸ್ಟಂ ಅನ್ನು ಬಳಸುತ್ತಿದ್ದೇನೆ.
00:34 ಈ ಟ್ಯುಟೋರಿಯಲ್ ಅನ್ನು ಮುಂದುವರೆಸಲು, ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಲೇಬೇಕು.
00:39 ಸಾಫ್ಟ್ವೇರ್ ಇನ್ಸ್ಟಾಲ್ ಮಾಡಲು, ನೀವು System Administrator ಆಗಿರಬೇಕು ಅಥವಾ Administrator rights ಅನ್ನು ಹೊಂದಿರಬೇಕು.
00:46 ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’, a p t ಗಾಗಿ ಒಂದು ಗ್ರಾಫಿಕಲ್ ಪ್ರೊಗ್ರಾಂ ಆಗಿದೆ.
00:51 apt-get command line ಬಳಕೆಗೆ ಇದೊಂದು GUI ಆಗಿದೆ.
00:57 Ubuntu Linux 16.04 ನಲ್ಲಿ, ಡೀಫಾಲ್ಟ್ ಆಗಿ, ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಅನ್ನು ಮೊದಲೇ ಇನ್ಸ್ಟಾಲ್ ಮಾಡಿರುವುದಿಲ್ಲ.
01:05 ಆದ್ದರಿಂದ, 'ಟರ್ಮಿನಲ್' ಮೂಲಕ ಅದನ್ನು ಹೇಗೆ ಇನ್ಸ್ಟಾಲ್ ಮಾಡಬೇಕೆಂದು ಕಲಿಯೋಣ.
01:10 ನಿಮ್ಮ ಕೀಬೋರ್ಡ್ ನಲ್ಲಿ Ctrl, Alt ಮತ್ತು T ಕೀಗಳನ್ನು ಒಟ್ಟಿಗೇ ಒತ್ತಿ terminal ಅನ್ನು ತೆರೆಯಿರಿ.
01:18 ಈಗ, 'ಟರ್ಮಿನಲ್' ನಲ್ಲಿ ಹೀಗೆ ಟೈಪ್ ಮಾಡಿ: sudo space a p t hyphen get space install space s y n a p ಮತ್ತು Tab ಕೀಯನ್ನು ಒತ್ತಿ.
01:34 ಇದು s y n a p ಯೊಂದಿಗೆ (ಎಸ್ ವೈ ಎನ್ ಎ ಪಿ) ಆರಂಭವಾಗುವ ಸಾಫ್ಟ್ವೇರ್ ಗಳ ಪಟ್ಟಿಯನ್ನು ತೋರಿಸುತ್ತದೆ.
01:40 ಈಗ, ಪದವನ್ನು synaptic (ಸಿನಾಪ್ಟಿಕ್) ಎಂದು ಪೂರ್ಣಗೊಳಿಸಿ ಮತ್ತು Enter ಅನ್ನು ಒತ್ತಿ.
01:46 ನಿಮ್ಮ administrator password ಅನ್ನು ಕೊಡಲು ನಿಮಗೆ ಸೂಚಿಸಲಾಗುವುದು.
01:51 ನಿಮ್ಮ admin password ಅನ್ನು ನಮೂದಿಸಿ.
01:54 'ಟರ್ಮಿನಲ್' ನಲ್ಲಿ ಪಾಸ್ವರ್ಡ್ ಅನ್ನು ಟೈಪ್ ಮಾಡುವಾಗ, ಅದು ನಮಗೆ ಕಾಣುವುದಿಲ್ಲ. ಆದ್ದರಿಂದ ಅದನ್ನು ಎಚ್ಚರಿಕೆಯಿಂದ ಟೈಪ್ ಮಾಡಿ.
02:02 Enter ಅನ್ನು ಒತ್ತಿ.
02:04 ಈಗ 'ಟರ್ಮಿನಲ್', ಇನ್ಸ್ಟಾಲ್ ಮಾಡಬೇಕಾದ ಪ್ಯಾಕೇಜ್ ಗಳ ಪಟ್ಟಿ,
02:09 ಡೌನ್‌ಲೋಡ್ ಮಾಡಬೇಕಾದ ಫೈಲ್‌ಗಳ ಗಾತ್ರ ಮತ್ತು ಇನ್ಸ್ಟಾಲ್ಲೇಶನ್ ನಂತರ ಡಿಸ್ಕ್ ಸ್ಪೇಸ್ ಇವುಗಳ ಬಗ್ಗೆ ಮಾಹಿತಿಯನ್ನು ತೋರಿಸುತ್ತದೆ.
02:17 ಇದನ್ನು ಖಚಿತಪಡಿಸಲು Y ಅನ್ನು ಒತ್ತಿ.
02:19 Enter ಅನ್ನು ಒತ್ತಿ.
02:22 ಇನ್ಸ್ಟಾಲ್ಲೇಶನ್ ಈಗ ಪ್ರಾರಂಭವಾಗುತ್ತದೆ. ನಿಮ್ಮ ಇಂಟರ್ನೆಟ್ ನ ವೇಗವನ್ನು ಅವಲಂಬಿಸಿ, ಇದು ಮುಗಿಯಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.
02:31 ಈಗ ನಾವು ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ಅನ್ನು ಯಶಸ್ವಿಯಾಗಿ ಇನ್ಸ್ಟಾಲ್ ಮಾಡಿದ್ದೇವೆ.
02:36 ನಾವು 'ಟರ್ಮಿನಲ್' ಅನ್ನು ಮುಚ್ಚೋಣ.
02:39 ಇನ್ಸ್ಟಾಲ್ಲೇಶನ್ ಅನ್ನು ಖಚಿತಪಡಿಸಲು, Dash homeಗೆ ಹೋಗಿ. 'ಸರ್ಚ್ ಬಾರ್' ನಲ್ಲಿ, synaptic ಎಂದು ಟೈಪ್ ಮಾಡಿ.
02:46 ಇಲ್ಲಿ Synaptic Package Manager ಐಕಾನ್ ಅನ್ನು ನಾವು ನೋಡಬಹುದು.
02:51 ಈಗ ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ ಅನ್ನು ಬಳಸಿ ಸಾಫ್ಟ್ವೇರ್ ಇನ್ಸ್ಟಾಲ್ ಮಾಡಲು ಕಲಿಯೋಣ.
02:57 Synaptic Package Manager ಐಕಾನ್ ಮೇಲೆ ಕ್ಲಿಕ್ ಮಾಡಿ.
03:01 password ಅನ್ನು ಕೇಳುತ್ತಿರುವ Authenticate ಎಂಬ ಡೈಲಾಗ್-ಬಾಕ್ಸ್ ಕಾಣಿಸುತ್ತದೆ.
03:06 ನಾವು admin password ಟೈಪ್ ಮಾಡಿ, Enter ಅನ್ನು ಒತ್ತೋಣ.
03:10 ಮೊದಲ ಬಾರಿಗೆ ನಾವು ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ ಅನ್ನು ಬಳಸುವಾಗ, ಒಂದು introduction ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
03:17 ಈ ಡೈಲಾಗ್-ಬಾಕ್ಸ್, ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ಅನ್ನು ಹೇಗೆ ಬಳಸಬೇಕೆಂಬ ಮಾಹಿತಿಯನ್ನು ಹೊಂದಿದೆ.
03:23 ಈ ಡೈಲಾಗ್-ಬಾಕ್ಸ್ ಅನ್ನು ಮುಚ್ಚಲು, Close ಬಟನ್ ಮೇಲೆ ಕ್ಲಿಕ್ ಮಾಡಿ.
03:27 ನಾವು ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ ನಲ್ಲಿ, Proxy ಹಾಗೂ Repository ಗಳನ್ನು ಕಾನ್ಫಿಗರ್ ಮಾಡೋಣ.
03:33 'ಅಪ್ಲಿಕೇಶನ್' ಅಥವಾ 'ಪ್ಯಾಕೇಜ್' ಅನ್ನು ಇನ್ಸ್ಟಾಲ್ ಮಾಡುವ ಮೊದಲು, ನಾವು ಇದನ್ನು ಮಾಡಬೇಕು.
03:38 Settings ಗೆ ಹೋಗಿ ಮತ್ತು Preferences ಮೇಲೆ ಕ್ಲಿಕ್ ಮಾಡಿ.
03:42 ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ Preferences ವಿಂಡೋದಲ್ಲಿ, ಹಲವಾರು ಟ್ಯಾಬ್‌ಗಳಿವೆ.
03:48 Proxy ಸೆಟ್ಟಿಂಗ್ ಗಳನ್ನು ಕಾನ್ಫಿಗರ್ ಮಾಡಲು, Network ಮೇಲೆ ಕ್ಲಿಕ್ ಮಾಡಿ.
03:52 Proxy Server ನ ಅಡಿಯಲ್ಲಿ ಎರಡು ಆಯ್ಕೆಗಳಿವೆ – Direct Connection ಹಾಗೂ Manual Proxy.
04:00 ನಾನು Direct Connection ಅನ್ನು ಬಳಸುವೆನು. ನಿಮಗೆ ಬೇಕಾದ ಆಯ್ಕೆಯನ್ನು ನೀವು ಆರಿಸಿಕೊಳ್ಳಬಹುದು.
04:06 ವಿಂಡೋ ಅನ್ನು ಮುಚ್ಚಲು, ಕೆಳಗಿರುವ OK ಬಟನ್ ಮೇಲೆ ಕ್ಲಿಕ್ ಮಾಡಿ.
04:11 ಈಗ, ಮತ್ತೊಮ್ಮೆSetting ಗೆ ಹೋಗಿ ಮತ್ತು Repositories ಮೇಲೆ ಕ್ಲಿಕ್ ಮಾಡಿ.
04:16 ಸ್ಕ್ರೀನ್ ಮೇಲೆ Software & Updates ವಿಂಡೋ ಕಾಣಿಸಿಕೊಳ್ಳುತ್ತದೆ.
04:20 ಉಬಂಟು ಸಾಫ್ಟ್ವೇರ್ ಅನ್ನು ಡೌನ್‌ಲೋಡ್ ಮಾಡಲು, ಹಲವಾರು ಮೂಲಗಳಿವೆ (source).
04:24 Download From ಡ್ರಾಪ್-ಡೌನ್ ಮೆನ್ಯು ಮೇಲೆ ಕ್ಲಿಕ್ ಮಾಡಿ. ರಿಪಾಸಿಟರೀಸ್ ನ (repositories) ಲಿಸ್ಟ್ ಅನ್ನು ನೋಡಲು, ಮೌಸ್-ಬಟನ್ ಅನ್ನು ಹಿಡಿದುಕೊಳ್ಳಿ.
04:31 Other, ಜಗತ್ತಿನಾದ್ಯಂತ ಇರುವ servers ಲಿಸ್ಟ್ ಅನ್ನು ತೋರಿಸುತ್ತದೆ.
04:36 ಈ ವಿಂಡೋಅನ್ನು ಮುಚ್ಚಲು, ಕೆಳಗಿರುವ Cancel ಬಟನ್ ಮೇಲೆ ಕ್ಲಿಕ್ ಮಾಡಿ.
04:41 ಇಲ್ಲಿ ತೋರಿಸಿದಂತೆ, ನಾನು Server for India ಬಳಸುತ್ತಿದ್ದೇನೆ.
04:45 Software Sources ವಿಂಡೋಅನ್ನು ಮುಚ್ಚಲು, Close ಬಟನ್ ಮೇಲೆ ಕ್ಲಿಕ್ ಮಾಡಿ.
04:50 ನೀವು ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ ಅನ್ನು ಮೊದಲ ಬಾರಿಗೆ ಬಳಸುತ್ತಿದ್ದರೆ, packages ಅನ್ನು ನೀವು ರೀ-ಲೋಡ್ ಮಾಡಬೇಕು.
04:57 ಇದನ್ನು ಮಾಡಲು, ಟೂಲ್-ಬಾರ್ ಮೇಲಿನ Reload ಬಟನ್ ಮೇಲೆ ಕ್ಲಿಕ್ ಮಾಡಿ.
05:02 ಇದಕ್ಕೆ ಕೆಲವು ಸೆಕೆಂಡುಗಳು ಬೇಕಾಗಬಹುದು.
05:05 ಇಲ್ಲಿ ನೋಡಿ. ಪ್ಯಾಕೇಜ್ ಗಳು ಇಂಟರ್ನೆಟ್ ಮೂಲಕ ವರ್ಗಾವಣೆ ಆಗುತ್ತಿವೆ ಮತ್ತು ಅಪ್ಡೇಟ್ ಸಹ ಆಗುತ್ತಿವೆ.
05:13 ಉದಾಹರಣೆಗಾಗಿ, ನಾನು ಈಗ VLC player ಅನ್ನು ಇನ್ಸ್ಟಾಲ್ ಮಾಡುವೆನು.
05:18 ನಾವು ಟೂಲ್-ಬಾರ್ ಮೇಲಿರುವ Search ಫೀಲ್ಡ್ ಗೆ ಹೋಗೋಣ.
05:23 Search ಡೈಲಾಗ್-ಬಾಕ್ಸ್ ನಲ್ಲಿ, vlc ಎಂದು ಟೈಪ್ ಮಾಡಿ, Search ಬಟನ್ ಮೇಲೆ ಕ್ಲಿಕ್ ಮಾಡಿ.
05:29 ಲಿಸ್ಟ್ ಮಾಡಲಾದ ಎಲ್ಲಾ VLC package ಗಳನ್ನು ಇಲ್ಲಿ ನಾವು ನೋಡಬಹುದು.
05:34 VLC package ಅನ್ನು ಆಯ್ಕೆಮಾಡಲು, ಚೆಕ್-ಬಾಕ್ಸ್ ಮೇಲೆ ರೈಟ್-ಕ್ಲಿಕ್ ಮಾಡಿ.

ಇಲ್ಲಿ ಕಾಣುವ ಮೆನ್ಯುವಿನಿಂದ Mark for installation ಆಯ್ಕೆಯನ್ನು ಆರಿಸಿಕೊಳ್ಳಿ.

05:45 ಎಲ್ಲಾ repository packages ನ ಲಿಸ್ಟ್ ಅನ್ನು ತೋರಿಸುತ್ತಿರುವ ಒಂದು ಡೈಲಾಗ್-ಬಾಕ್ಸ್ ಕಾಣುತ್ತದೆ.
05:51 ಎಲ್ಲಾ dependencies packages ಅನ್ನು ತಂತಾನೇ ಗುರುತಿಸಲು, Mark ಬಟನ್ ಮೇಲೆ ಕ್ಲಿಕ್ ಮಾಡಿ.
05:57 ಟೂಲ್-ಬಾರ್ ಗೆ ಹೋಗಿ, Apply ಬಟನ್ ಮೇಲೆ ಕ್ಲಿಕ್ ಮಾಡಿ.
06:01 ಇನ್ಸ್ಟಾಲ್ ಮಾಡಬೇಕಾದ ಪ್ಯಾಕೇಜ್ ಗಳ ವಿವರಗಳನ್ನು ತೋರಿಸುವ ಒಂದು Summary ವಿಂಡೋ ಕಾಣಿಸುತ್ತದೆ.
06:07 ಇನ್ಸ್ಟಾಲ್ಲೇಶನ್ ಅನ್ನು ಆರಂಭಿಸಲು, ಕೆಳಗಿರುವ Apply ಬಟನ್ ಮೇಲೆ ಕ್ಲಿಕ್ ಮಾಡಿ.
06:12 ಇನ್ಸ್ಟಾಲ್ಲೇಶನ್ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
06:16 ಇದು, ಇನ್ಸ್ಟಾಲ್ ಮಾಡಬೇಕಾದ ಪ್ಯಾಕೇಜ್‌ಗಳ ಸಂಖ್ಯೆ ಮತ್ತು ಗಾತ್ರವನ್ನು ಅವಲಂಬಿಸಿರುತ್ತದೆ.
06:21 ಇನ್ಸ್ಟಾಲ್ಲೇಶನ್ ಪೂರ್ಣಗೊಂಡ ತಕ್ಷಣ, Applying Changes ವಿಂಡೋವನ್ನು ಮುಚ್ಚಲಾಗುತ್ತದೆ.
06:27 Synaptic Package Manager ವಿಂಡೋ ಅನ್ನು ಮುಚ್ಚಿ.
06:31 ಈಗ, 'VLC ಪ್ಲೇಯರ್' ಅನ್ನು ಯಶಸ್ವಿಯಾಗಿ ಇನ್ಸ್ಟಾಲ್ ಮಾಡಲಾಗಿದೆಯೇ ಎಂದು ನೋಡೋಣ.
06:37 Dash home ಗೆ ಹೋಗಿ.
06:39 'ಸರ್ಚ್ ಬಾರ್' ನಲ್ಲಿ, vlc ಎಂದು ಟೈಪ್ ಮಾಡಿ.
06:42 ತೋರಿಸಲಾದ ಲಿಸ್ಟ್ ನಲ್ಲಿ, VLC ಐಕಾನ್ ಅನ್ನು ನಾವು ನೋಡಬಹುದು.

ಅದನ್ನು ತೆರೆಯಲು ಅದರ ಮೇಲೆ ಕ್ಲಿಕ್ ಮಾಡಿ.

06:49 ಹೀಗೆಯೇ, ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ ಅನ್ನು ಬಳಸಿಕೊಂಡು, ಇತರ ಅಪ್ಲಿಕೇಶನ್‌ ಗಳನ್ನು ನಾವು ಇನ್ಸ್ಟಾಲ್ ಮಾಡಬಹುದು.
06:56 ಈಗ, 'ಉಬಂಟು ಸಾಫ್ಟ್ವೇರ್ ಸೆಂಟರ್' ಮೂಲಕ ಹೇಗೆ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡುವುದೆಂದು ಕಲಿಯುವೆವು.
07:02 'ಉಬಂಟು ಸಾಫ್ಟ್ವೇರ್ ಸೆಂಟರ್' ಒಂದು ಅಪ್ಲಿಕೇಶನ್‌ ಆಗಿದೆ. ಇದು Ubuntu Linux OS ನಲ್ಲಿ ಸಾಫ್ಟ್ವೇರ್ ಅನ್ನು ನಿರ್ವಹಿಸಲು ನಮಗೆ ಅನುಮತಿಸುತ್ತದೆ.
07:10 ಇದನ್ನು ನೀವು, ಸಾಫ್ಟ್ವೇರ್ ಅನ್ನು- ಸರ್ಚ್, ಡೌನ್ಲೋಡ್, ಇನ್ಸ್ಟಾಲ್, ಅಪ್ಡೇಟ್ ಅಥವಾ ಅನ್-ಇನ್ಸ್ಟಾಲ್ ಮಾಡಲು ಬಳಸಬಹುದು.
07:17 ನೀವು ಸಾಫ್ಟ್ವೇರ್ ಅನ್ನು ಬಳಸುವ ಮೊದಲೇ, ಇದು ನಿಮಗೆ ಅದರ ಬಗ್ಗೆ ಮಾಹಿತಿಯನ್ನು ಕೊಡುತ್ತದೆ.
07:23 'ಉಬಂಟು ಸಾಫ್ಟ್ವೇರ್ ಸೆಂಟರ್' ಅನ್ನು ತೆರೆಯಲು, ಲಾಂಚರ್ ಗೆ ಹೋಗಿ.
07:27 Ubuntu Software ಐಕಾನ್ ಮೇಲೆ ಕ್ಲಿಕ್ ಮಾಡಿ.
07:31 Ubuntu Software Centre ವಿಂಡೋ ಕಾಣಿಸಿಕೊಳ್ಳುತ್ತದೆ.
07:35 ಮೇಲ್ಭಾಗದಲ್ಲಿ, All, Installed ಹಾಗೂ Updates ಎಂಬ 3 ಟ್ಯಾಬ್ ಗಳನ್ನು ನಾವು ನೋಡಬಹುದು.
07:42 All ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
07:44 ಮೇಲ್ಭಾಗದಲ್ಲಿ 'ಸರ್ಚ್ ಬಾರ್' ಅನ್ನು ನಾವು ನೋಡಬಹುದು.
07:47 ಲಭ್ಯವಿರುವ ಸಾಫ್ಟ್ವೇರ್ ಅನ್ನು ಹುಡುಕಲು ಇದು ನಮಗೆ ಸಹಾಯ ಮಾಡುತ್ತದೆ.
07:51 ಈಗ, Inkscape ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡೋಣ.
07:55 ಸರ್ಚ್-ಬಾರ್ ನಲ್ಲಿ, inkscape ಎಂದು ಟೈಪ್ ಮಾಡಿ.
07:59 'ಇಂಕ್ಸ್ಕೇಪ್' ಬಗ್ಗೆ ಸ್ವಲ್ಪ ಮಾಹಿತಿಯನ್ನು ತೋರಿಸಲಾಗಿದೆ.
08:03 ಈಗ, ಬಲಮೂಲೆಯಲ್ಲಿರುವ Install ಬಟನ್ ಮೇಲೆ ಕ್ಲಿಕ್ ಮಾಡಿ.
08:07 Authenticate ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
08:10 ನಿಮ್ಮ admin password ನ್ನು ನಮೂದಿಸಿ, Authenticate ಬಟನ್ ಮೇಲೆ ಕ್ಲಿಕ್ ಮಾಡಿ.
08:16 ಪ್ರೊಗ್ರೆಸ್-ಬಾರ್, ಇಂಕ್-ಸ್ಕೇಪ್ ಇನ್ಸ್ಟಾಲ್ ಆಗುತ್ತಿದೆ ಎಂದು ಸೂಚಿಸುತ್ತದೆ.
08:21 ಇನ್ಸ್ಟಾಲ್ ಆಗುತ್ತಿರುವ ಪ್ಯಾಕೇಜ್‌ಗಳ ಸಂಖ್ಯೆ ಮತ್ತು ಗಾತ್ರವನ್ನು ಅವಲಂಬಿಸಿ, ಇನ್ಸ್ಟಾಲ್ಲೇಶನ್ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.
08:28 ಮೇಲಿರುವ Installed ಟ್ಯಾಬ್‌ನಲ್ಲಿ ಸಹ ಪ್ರೊಗ್ರೆಸ್ ಅನ್ನು ಸೂಚಿಸಲಾಗುತ್ತದೆ.

ಅದರ ಮೇಲೆ ಕ್ಲಿಕ್ ಮಾಡಿ.

08:35 ಯಾವುದೇ ಇನ್ಸ್ಟಾಲ್ಲೇಶನ್ ನಡೆಯುತ್ತಿರುವಾಗ, ನೀವು ಇತರ ಅಪ್ಲಿಕೇಶನ್‌ ಗಳನ್ನು ಆಕ್ಸೆಸ್ (access) ಮಾಡಬಹುದು.
08:41 Inkscape ಪದದ ಮೇಲೆ ಕ್ಲಿಕ್ ಮಾಡಿ.
08:44 ಇದು Inkscape ಬಗ್ಗೆ ಮಾಹಿತಿಯನ್ನು ತೋರಿಸುತ್ತದೆ.
08:48 ಒಮ್ಮೆ Inkscape ಇನ್ಸ್ಟಾಲ್ ಮಾಡಿದ ಮೇಲೆ, ಅದರ ಬದಿಯಲ್ಲಿ Remove ಹಾಗೂ Launch ಎಂಬ ಎರಡು ಬಟನ್ ಗಳನ್ನು ನಾವು ನೋಡಬಹುದು.
08:55 ನೀವು ಸಾಫ್ಟ್ವೇರ್ ಅನ್ನು ಅನ್-ಇನ್ಸ್ಟಾಲ್ ಮಾಡಲು ಬಯಸಿದರೆ, Remove ಬಟನ್ ಮೇಲೆ ಕ್ಲಿಕ್ ಮಾಡಿ.
09:00 ಅಪ್ಲಿಕೇಶನ್ ಅನ್ನು ಆರಂಭಿಸಲು, Launch ಬಟನ್ ಮೇಲೆ ಕ್ಲಿಕ್ ಮಾಡಿ.

ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ.

09:06 ಇದು Inkscape ಅಪ್ಲಿಕೇಶನ್ ಅನ್ನು ಆರಂಭಿಸುತ್ತದೆ.
09:10 Ubuntu Software Center ಗೆ ಹಿಂದಿರುಗಿ.

ಮೇಲಿನ ಎಡಬದಿಯ back arrow ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಮೇನ್ ಸ್ಕ್ರೀನ್ ಗೆ ಹಿಂದಿರುಗಿ.

09:18 ಈಗ Updates ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
09:21 ಇದು Software is up to date ಎಂದು ಹೇಳುತ್ತಿರುವುದನ್ನು ನಾವು ನೋಡಬಹುದು.
09:25 ಮೇಲಿನ ಎಡಬದಿಯ refresh ಐಕಾನ್ ಮೇಲೆ ಕ್ಲಿಕ್ ಮಾಡಿ. ಇದು ಹೊಸ ಅಪ್ಡೇಟ್ ಗಳಿಗಾಗಿ ನೋಡುವುದು.
09:31 ಈಗ ನಮಗಾಗಿ ಒಂದು OS updates ಇದೆ.
09:34 ವಿವರಗಳನ್ನು ನೋಡಲು, ಅದರ ಮೇಲೆ ಕ್ಲಿಕ್ ಮಾಡಿ. ಇದನ್ನು ನಾನು ಮುಚ್ಚುತ್ತೇನೆ.
09:39 ನೀವು ಈ ಅಪ್ಡೇಟ್ ಅನ್ನು ಇನ್ಸ್ಟಾಲ್ ಮಾಡಲು ಬಯಸಿದರೆ, Install ಬಟನ್ ಮೇಲೆ ಕ್ಲಿಕ್ ಮಾಡಿ. ಇಲ್ಲದಿದ್ದರೆ, ಇದನ್ನು ಹಾಗೇ ಬಿಡಿ.
09:46 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಸಂಕ್ಷಿಪ್ತವಾಗಿ,

09:52 ಈ ಟ್ಯುಟೋರಿಯಲ್ ನಲ್ಲಿ ನಾವು: Ubuntu Linux 16.04 ಆಪರೇಟಿಂಗ್ ಸಿಸ್ಟಂ ನಲ್ಲಿ: ಟರ್ಮಿನಲ್,
10:02 'ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್' ಹಾಗೂ 'ಉಬಂಟು ಸಾಫ್ಟ್ವೇರ್ ಸೆಂಟರ್' ಇವುಗಳ ಮೂಲಕ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಲು ಕಲಿತಿದ್ದೇವೆ.
10:07 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
10:15 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು, 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರವನ್ನು ಕೊಡುತ್ತದೆ.
10:24 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
10:28 ಈ ಫೋರಂ ನಲ್ಲಿ ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಪೋಸ್ಟ್ ಮಾಡಿ.
10:32 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.

10:44 ಈ ಸ್ಕ್ರಿಪ್ಟ್, "ಸ್ಪೋಕನ್ ಟ್ಯುಟೋರಿಯಲ್” ತಂಡದ ಕೊಡುಗೆಯಾಗಿದೆ.

ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

PoojaMoolya, Sandhya.np14