Avogadro/C3/Stereoisomerism/Kannada

From Script | Spoken-Tutorial
Revision as of 20:05, 15 July 2018 by Anjana310312 (Talk | contribs)

Jump to: navigation, search
Time
Narration
00:01 Stereoisomerism (ಸ್ಟೀರಿಯೋಐಸೊಮೆರಿಸಮ್) ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು, Conformational isomerism (ಕನಫರ್ಮೇಷನಲ್ ಐಸೊಮೆರಿಸಮ್)

Geometrical isomerism(ಜಾಮೆಟ್ರಿಕಲ್ ಐಸೋಮೆರಿಸಮ್) ಮತ್ತು R-S configurations (ಆರ್. ಎಸ್ ಕಾನ್ಫಿಗರೇಷನ್ಸ್) ಇವುಗಳ ಕುರಿತು ಉದಾಹರಣೆಗಳೊಂದಿಗೆ ಕಲಿಯುವೆವು.

00:18 ಇಲ್ಲಿ ನಾನು , Ubuntu Linux OS, ಆವೃತ್ತಿ 14.04 ಮತ್ತು Avogadro ಆವೃತ್ತಿ 1.1.1. ಇವುಗಳನ್ನು ಬಳಸುತ್ತಿದ್ದೇನೆ.
00:28 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು, Avogadro ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ.
00:39 ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯ ಫೈಲ್ ಗಳನ್ನು ಕೋಡ್ ಫೈಲ್ ಗಳೆಂದು ಕೊಡಲಾಗಿದೆ.
00:45 ಈ ಟ್ಯುಟೋರಿಯಲ್ ನಲ್ಲಿ ನಾವು, ಅವೊಗ್ಯಡ್ರೋ ವನ್ನು ಬಳಸಿ, ಸ್ಟಿರಿಯೋಐಸೋಮರ್ ಗಳನ್ನು ರಚಿಸಲು ಕಲಿಯುವೆವು.
00:51 ನಾನು ಸ್ಟಿರಿಯೋಐಸೋಮರಿಸಮ್ ನ ಕುರಿತು ಕಿರು ಪರಿಚಯವನ್ನು ಕೊಡುವೆನು.
00:56 ಪರಮಾಣುಗಳ ಸ್ಥಾನದ ಜೋಡಣೆಯಲ್ಲಿನ ವ್ಯತ್ಯಾಸಗಳಿಂದ 'ಸ್ಟೀರಿಯೋಐಸೊಮೆರಿಸಮ್' ಏರ್ಪಡುತ್ತದೆ.
01:03 ಐಸೋಮರ್ ಗಳು ಒಂದೇ ರಚನೆಯನ್ನು ಹೊಂದಿರುತ್ತವೆ ಮತ್ತು ಅದರಿಂದ ಅವುಗಳ ಗುಣಲಕ್ಷಣದಲ್ಲಿ ಹೆಚ್ಚಿನ ಬದಲಾವಣೆಗಳಿರುವುದಿಲ್ಲ.
01:09 ಇಲ್ಲಿ ಐಸೋಮರ್ ಗಳ ವರ್ಗೀಕರಣವನ್ನು ತೋರಿಸುವ ಸ್ಲೈಡ್ ಇದೆ.
01:16 ನಾನು Conformational isomerism(ಕನಫರ್ಮೇಷನಲ್ ಐಸೊಮೆರಿಸಮ್) ನಿಂದ ಪ್ರಾರಂಭಿಸುವೆನು.
01:21 ಇದು ಸ್ಟಿರಿಯೋಐಸೋಮರಿಸಮ್ ನ ಒಂದು ವಿಧವಾಗಿದೆ.
01:23 ಈ ವಿಧದಲ್ಲಿ, ಐಸೋಮರ್ ಗಳ ಒಂದು ಬಾಂಡ್ ಅನ್ನು ತಿರುಗಿಸುವುದರಿಂದ ಅವುಗಳನ್ನು ಪರಸ್ಪರ ಪರಿವರ್ತಿಸಬಹುದು.
01:30 ಒಂದು ಬಾಂಡ್ ಅನ್ನು ರೊಟೇಟ್ ಮಾಡುವುದು, rotational energy barrier(ರೊಟೇಷನಲ್ ಎನರ್ಜಿ ಬೆರಿಯರ್) ನಿಂದ ನಿರ್ಬಂಧಿತವಾಗಿದೆ.
01:36 ಈಗ ನಾವು '1,2-ಡೈಕ್ಲೋರೋಇಥೇನ್' ನ ಕನ್ಫರ್ಮರ್ ನೊಂದಿಗೆ ಪ್ರಾರಂಭಿಸೋಣ.
01:41 '1,2-ಡೈಕ್ಲೋರೋಇಥೇನ್' ಎಕ್ಲಿಪ್ಸ್ಡ್, ಗಾಶ್ ಮತ್ತು ಆಂಟಿ ಎಂಬ ಮೂರು ಬಹುರೂಪ

(ಕನ್ಫರ್ಮರ್)ಗಳಲ್ಲಿ ಅಸ್ತಿತ್ವದಲ್ಲಿರುತ್ತದೆ.

01:50 ನಾನು ಅವಾಗ್ಯಡ್ರೋ ವಿಂಡೊ ವನ್ನು ತೆರೆದಿದ್ದೇನೆ.
01:53 Draw ಟೂಲ್ ನ ಮೇಲೆ ಕ್ಲಿಕ್ ಮಾಡಿ.
01:55 Adjust Hydrogens ಚೆಕ್ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ.
01:59 Panel ನ ಮೇಲೆ ಕ್ಲಿಕ್ ಮಾಡಿ ಮತ್ತು ಎರಡು ಪರಮಾಣುಗಳನ್ನು ಚಿತ್ರಿಸಲು ಡ್ರ್ಯಾಗ್ ಮಾಡಿ.
02:04 Element ಡ್ರಾಪ್ ಡೌನ್ ನಿಂದ Chlorine ಅನ್ನು ಆಯ್ಕೆಮಾಡಿ.
02:08 ಪ್ರತಿ 'ಕಾರ್ಬನ್' ನ ಮೇಲೆ ಒಂದು ಬಾಂಡ್ ಅನ್ನು ರಚಿಸಿ.
02:11 Build ಮೆನ್ಯು ಗೆ ಹೋಗಿ ಮತ್ತು Add Hydrogens ಅನ್ನು ಕ್ಲಿಕ್ ಮಾಡಿ.
02:15 ಪ್ಯಾನಲ್ ನ ಮೇಲೆ '1,2-ಡೈಕ್ಲೋರೋಇಥೇನ್' ಚಿತ್ರಿಸಲ್ಪಡುತ್ತದೆ.
02:19 ಈಗ ರಚನೆಯನ್ನು ಆಪ್ಟಿಮೈಜ್ ಮಾಡೋಣ.
02:22 Auto Optimization ಟೂಲ್ ಅನ್ನು ಕ್ಲಿಕ್ ಮಾಡಿ.
02:25 Force Field ನಲ್ಲಿ, MMFF94 ಅನ್ನು ಆಯ್ಕೆಮಾಡಿ ಮತ್ತು Start ಅನ್ನು ಕ್ಲಿಕ್ ಮಾಡಿ.
02:35 ಆಪ್ಟಿಮೈಜೇಷನ್ ಕ್ರಿಯೆಯನ್ನು ನಿಲ್ಲಿಸಲು, Stop ಅನ್ನು ಕ್ಲಿಕ್ ಮಾಡಿ.
02:40 ರಚನೆಯನ್ನು ಸರಿಯಾದ ಕೋನದಲ್ಲಿ ತಿರುಗಿಸಲು , Navigation ಟೂಲ್ ಅನ್ನು ಕ್ಲಿಕ್ ಮಾಡಿ.
02:45 ಪ್ಯಾನಲ್ ನಲ್ಲಿ ನಾವು, 'ಗಾಶ್ ಕನ್ಫರ್ಮರ್' ಅನ್ನು ಹೊಂದಿದ್ದೇವೆ.
02:49 '1,2-ಡೈಕ್ಲೋರೋಇಥೇನ್' ನ ಕನ್ಫರ್ಮರ್ ಗಳನ್ನು ತೋರಿಸಲು, ನಾನು ಪರಿಭ್ರಮಣದ ಪ್ಲೇನ್ ಅನ್ನು ಸ್ಥಿರಗೊಳಿಸುವೆನು.
02:55 Bond Centric Manipulation (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್)ಟೂಲ್ ಅನ್ನುಕ್ಲಿಕ್ ಮಾಡಿ.
02:59 ಎರಡು ಕಾರ್ಬನ್ ಪರಮಾಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
03:03 ಎರಡು ಪರಮಾಣುಗಳ ನಡುವಿನ ಪ್ಲೇನ್ ನೀಲಿ ಅಥವ ಹಳದಿ ಬಣ್ಣದಲ್ಲಿ ಕಾಣುತ್ತದೆ.
03:08 ಕರ್ಸರ್ ಅನ್ನು ಕ್ಲೋರಿನ್ ಪರಮಾಣುವಿನ ಮೇಲಿಡಿ
03:10 ಬಾಂಡ್ ಅನ್ನು ಪ್ರದಕ್ಷಿಣಾಕಾರವಾಗಿ(ಕ್ಲಾಕ್ವೈಸ್) ತಿರುಗಿಸಿ.
03:14 Navigation ಟೂಲ್ ನ ಮೇಲೆ ಕ್ಲಿಕ್ ಮಾಡಿ, ರಚನೆಯನ್ನು ತಿರುಗಿಸಿ.
03:18 ನಾವು ಪ್ಯಾನಲ್ ನಲ್ಲಿ , Anti conformer (ಆಂಟಿ ಕನ್ಫರ್ಮರ್) ಅನ್ನು ಹೊಂದಿದ್ದೇವೆ.
03:21 C-C bond ಗೆ ತಿರುಗಿಸಲು, ಇನ್ನೊಮ್ಮೆ Bondcentric Manipulation (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್) ಟೂಲ್ ಅನ್ನು ಬಳಸಿ.
03:25 ನಾವು ಪ್ಯಾನಲ್ ನಲ್ಲಿ 'ಎಕ್ಲಿಪ್ಸ್ಡ್ ಕನ್ಫರ್ಮರ್' ಅನ್ನು ಹೊಂದಿದ್ದೇವೆ.
03:30 ಈಗ ನಾನು ಸೈಕ್ಲೋಹೆಕ್ಸೇನ್ ನ ಅನೇಕ ಕನ್ಫರ್ಮರ್ ಗಳನ್ನು ತೋರಿಸುವೆನು.
03:35 ಹೊಸ ವಿಂಡೋ ವನ್ನು ತೆರೆಯಿರಿ.
03:38 Draw settings ಮೆನ್ಯುವಿನಲ್ಲಿ, ಡಿಫಾಲ್ಟ್ ಆಗಿ, Carbon ಆಯ್ಕೆಯಾಗಿರುತ್ತದೆ.
03:44 Adjust Hydrogens ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
03:48 ಈಗ ಸೈಕ್ಲೋಹೆಕ್ಸೇನ್ ರಚನೆಯನ್ನು ದೋಣಿಯಾಕಾರದಲ್ಲಿ ಚಿತ್ರಿಸೋಣ.
03:53 ಪ್ಯಾನಲ್ ನಲ್ಲಿ ಸೈಕ್ಲೋಹೆಕ್ಸೇನ್ ನ ಬೋಟ್ ಕನ್ಫರ್ಮರ್ ಅನ್ನು ಚಿತ್ರಿಸಲು, ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ.
04:01 ಪರಮಾಣುಗಳನ್ನು ಲೇಬಲ್ ಮಾಡಲು, Display Types ಮೆನ್ಯುವಿನಲ್ಲಿ, Label ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
04:07 ಗಮನಿಸಿ: ಎಲ್ಲ ಸಮಯದಲ್ಲಿ ಲೇಬಲಿಂಗ್ ಒಂದೇ ರೀತಿಯಾಗಿರುವುದಿಲ್ಲ.
04:11 ಈಗ ನಮ್ಮ ಅಗತ್ಯಕ್ಕೆ ತಕ್ಕಂತೆ ಕನ್ಫರ್ಮರ್ ಗಳನ್ನು ಲೇಬಲ್ ಮಾಡೋಣ.
04:16 Selection ಟೂಲ್ ಮೇಲೆ ಕ್ಲಿಕ್ ಮಾಡಿ,ನಂತರ ಮೊದಲ ಕಾರ್ಬನ್ ಪರಮಾಣುವಿನ ಮೇಲೆ ರೈಟ್ ಕ್ಲಿಕ್ ಮಾಡಿ.
04:21 ಒಂದು ಮೆನ್ಯು ತೆರೆದುಕೊಳ್ಳುತ್ತದೆ. Change label ಅನ್ನು ಆಯ್ಕೆಮಾಡಿ.
04:25 Change label of the atom ಟೆಕ್ಸ್ಟ್ ಬಾಕ್ಸ್ ತೆರೆದುಕೊಳ್ಳುತ್ತದೆ.
04:30 New Label ಫೀಲ್ಡ್ ನಲ್ಲಿ 1 ಎಂದು ಟೈಪ್ ಮಾಡಿ ಮತ್ತು OK ಯನ್ನು ಕ್ಲಿಕ್ ಮಾಡಿ.
04:35 ನಂತರ ಎರಡನೇ ಪರಮಾಣುವಿನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಲೇಬಲ್ ಅನ್ನು 2 ಎಂದು ಬದಲಾಯಿಸಿ.
04:41 ಇದರಂತೆಯೇ, ನಾನು ಪರಮಾಣುಗಳ ಲೇಬಲ್ ಅನ್ನು 3, 4, 5 ಮತ್ತು 6 ಎಂದು ಬದಲಾಯಿಸುವೆನು.
04:50 ಈಗ ನಾವು 'ಬೋಟ್ ಕನ್ಫರ್ಮರ್' ಅನ್ನು 'ಟ್ವಿಸ್ಟ್ ಬೋಟ್ ಕನ್ಫರ್ಮರ್' ಆಗಿ ಪರಿವರ್ತಿಸುವೆವು.
04:54 Manipulation ಟೂಲ್ ಅನ್ನು ಕ್ಲಿಕ್ ಮಾಡಿ. 2 ಅನ್ನು ಕ್ಲಿಕ್ ಮಾಡಿ, ಅದನ್ನು ಮೇಲ್ಮುಖವಾಗಿ ಡ್ರ್ಯಾಗ್ ಮಾಡಿ.
04:57 5 ಅನ್ನು ಕ್ಲಿಕ್ ಮಾಡಿ, ಅದನ್ನು ಮೇಲ್ಮುಖವಾಗಿ ಡ್ರ್ಯಾಗ್ ಮಾಡಿ. 3 ಅನ್ನು ಕ್ಲಿಕ್ ಮಾಡಿ, ಅದನ್ನು ಮೇಲ್ಮುಖವಾಗಿ ಡ್ರ್ಯಾಗ್ ಮಾಡಿ.
05:08 ಈಗ ನಾವು ಪ್ಯಾನಲ್ ನಲ್ಲಿ ಟ್ವಿಸ್ಟ್ ಬೋಟ್ ಅನ್ನು ಹೊಂದಿದ್ದೇವೆ.
05:10 ಈಗ ನಾವು 'ಟ್ವಿಸ್ಟ್ ಬೋಟ್' ಅನ್ನು 'ಹಾಫ್ ಚೇರ್ ಕನ್ಫರ್ಮರ್' ಆಗಿ ಪರಿವರ್ತಿಸುವೆವು.
05:16 2 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಡ್ರ್ಯಾಗ್ ಮಾಡಿ.
05:19 5 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಡ್ರ್ಯಾಗ್ ಮಾಡಿ.
05:23 4 ಅನ್ನು ಕ್ಲಿಕ್ ಮಾಡಿ, ಮತ್ತು ಅಡ್ಡಡ್ಡವಾಗಿ (ಹಾರಿಝೋಂಟಲ್ ) ಡ್ರ್ಯಾಗ್ ಮಾಡಿ.
05:27 ಸರಿಯಾದ ರಚನೆಯನ್ನು ಪಡೆಯಲು ಅಗತ್ಯವಿದ್ದಲ್ಲಿ ಎಲ್ಲಾ ಕಾರ್ಬನ್ ಪರಮಾಣುಗಳ ಸ್ಥಾನವನ್ನು ಹೊಂದಿಸಿ.
05:33 ಪ್ಯಾನಲ್ ನಲ್ಲಿ ಹಾಫ್ ಚೇರ್ ಅನ್ನು ಹೊಂದಿದ್ದೇವೆ.
05:36 ಈಗ ನಾವು ಹಾಫ್ ಚೇರ್ ಅನ್ನು ಚೇರ್ ಕನ್ಫರ್ಮರ್ ಆಗಿ ಪರಿವರ್ತಿಸುವೆವು.
05:41 4 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಡ್ರ್ಯಾಗ್ ಮಾಡಿ.
05:44 1 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಡ್ರ್ಯಾಗ್ ಮಾಡಿ.
05:47 ಸರಿಯಾದ ರಚನೆಯನ್ನು ಪಡೆಯಲು ಅಗತ್ಯವಿದ್ದಲ್ಲಿ ಎಲ್ಲಾ ಕಾರ್ಬನ್ ಪರಮಾಣುಗಳ ಸ್ಥಾನವನ್ನು ಹೊಂದಿಸಿ.
05:53 ಪ್ಯಾನಲ್ ನಲ್ಲಿ ಚೇರ್ ಕನ್ಫರ್ಮರ್ ಅನ್ನು ಹೊಂದಿದ್ದೇವೆ.
05:56 ಅಸೈನ್ಮೆಂಟ್: ಬ್ಯುಟೇನ್ ಮತ್ತು ಸೈಕ್ಲೋಪೆಂಟೇನ್ ಗಳ ವಿವಿಧ ಕನ್ಫರ್ಮರ್ ಗಳನ್ನು ಚಿತ್ರಿಸಿ.
06:03 ಈಗ ನಾನು ಜಾಮೆಟ್ರಿಕಲ್ ಐಸೋಮೆರಿಸಮ್ ಅನ್ನು ತೋರಿಸಲು ಕೆಲವು ರಚನೆಗಳನ್ನು ಬರೆಯುವೆನು.
06:09 ಡಬಲ್ ಬಾಂಡ್ ನ ಸುತ್ತ ಪರಮಾಣುಗಳ ಸ್ಥಾನದ ಜೋಡಣೆಯಲ್ಲಿನ ವ್ಯತ್ಯಾಸಗಳಿಂದ ಜಾಮೆಟ್ರಿಕಲ್ ಐಸೋಮೆರಿಸ್ಮ್ ಉಂಟಾಗುತ್ತದೆ.
06:17 ಇಲ್ಲಿ ಡಬಲ್ ಬಾಂಡೆಡ್ ಕಾರ್ಬನ್ ನ ಸುತ್ತ ಪರಮಾಣುಗಳ ಅಥವಾ ಪರಮಾಣು ಗುಂಪುಗಳ ಪರಿಭ್ರಮಣೆಯನ್ನು ನಿರ್ಬಂಧಿಸಲಾಗುತ್ತದೆ.
06:24 ನಾನು ವಿವರಣೆಗಾಗಿ, 'ಡೈಅಮೈನ್ ಡೈ ಕ್ಲೋರೋ ಪ್ಲ್ಯಾಟಿನಂ (II) ' ರಚನೆಯನ್ನು ಬರೆಯುವೆನು. ಇದನ್ನು 'ಸಿಸ್ಪ್ಲ್ಯಾಟಿನ್' ಎಂದೂ ಕರೆಯುವರು.
06:33 ಒಂದು ಹೊಸ ವಿಂಡೋ ವನ್ನು ಓಪನ್ ಮಾಡಿ.
06:36 Draw settings ಮೆನ್ಯುವಿನಲ್ಲಿ, Element ಡ್ರಾಪ್ ಡೌನ್ ಅನ್ನುಕ್ಲಿಕ್ ಮಾಡಿ ಮತ್ತು Other ಅನ್ನು ಆಯ್ಕೆಮಾಡಿ.

Periodic table ತೆರೆದುಕೊಳ್ಳುತ್ತದೆ.

06:44 ಟೇಬಲ್ ನಿಂದ Platinum(Pt) ಅನ್ನು ಆಯ್ಕೆ ಮಾಡಿ. Periodic table ವಿಂಡೋವನ್ನು ಕ್ಲೋಸ್ ಮಾಡಿ.
06:50 ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ.
06:53 Element ಡ್ರಾಪ್ ಡೌನ್ ನಿಂದ Chlorine ಅನ್ನು ಆಯ್ಕೆ ಮಾಡಿ.
06:55 ಪ್ಲ್ಯಾಟಿನಂ ಪರಮಾಣುವಿನ ಒಂದೇ ಬದಿಯಲ್ಲಿ ಎರಡು ಕ್ಲೋರಿನ್ ಬಾಂಡ್ ಗಳನ್ನು ಚಿತ್ರಿಸಿ.
07:00 Element ಡ್ರಾಪ್ ಡೌನ್ ನಿಂದ Nitrogen ಅನ್ನು ಆಯ್ಕೆ ಮಾಡಿ. ಮೊದಲಿನಂತೆಯೇ ಎರಡು ನೈಟ್ರೋಜನ್ (ಸಾರಜನಕ) ಬಾಂಡ್ ಅನ್ನು ಚಿತ್ರಿಸಿ.
07:07 ರಚನೆಯನ್ನು ಪೂರ್ಣಗೊಳಿಸಲು, ನಮಗೆ ನೈಟ್ರೋಜನ್(ಸಾರಜನಕ) ಪರಮಾಣುಗಳಿಗೆ ಹೊಂದಿಕೊಂಡ ಮೂರು ಹೈಡ್ರೋಜನ್(ಜಲಜನಕ) ಗಳು ಬೇಕು.
07:13 Element ಡ್ರಾಪ್ ಡೌನ್ ನಿಂದ Hydrogen ಅನ್ನು ಆಯ್ಕೆ ಮಾಡಿ.
07:16 ಮೂರನೇ ಬಾಂಡ್ ಅನ್ನು ರಚಿಸಲು ಪ್ರತಿ ನೈಟ್ರೋಜನ್ ನ ಮೇಲೆ ಕ್ಲಿಕ್ ಮಾಡಿ.
07:21 ಈಗ ರಚನೆಯನ್ನು ಆಪ್ಟಿಮೈಜ್ ಮಾಡೋಣ.
07:24 Auto Optimization ಟೂಲ್ ನ ಮೇಲೆ ಕ್ಲಿಕ್ ಮಾಡಿ.
07:27 Force Field ಫೀಲ್ಡ್ ನಲ್ಲಿ, UFF ಅನ್ನು ಆಯ್ಕೆ ಮಾಡಿ ಮತ್ತು Start ಬಟನ್ ಅನ್ನು ಕ್ಲಿಕ್ ಮಾಡಿ.
07:35 ಆಪ್ಟಿಮೈಜೇಷನ್ ಕ್ರಿಯೆಯನ್ನು ನಿಲ್ಲಿಸಲು Stop ಅನ್ನು ಕ್ಲಿಕ್ ಮಾಡಿ.
07:39 ವಿವರಣೆಗಾಗಿ ನನಗೆ ಎರಡು ರಚನೆಗಳ ಅವಶ್ಯಕತೆಯಿದೆ.
07:43 ನಾನು ರಚನೆಗಳನ್ನು ಕಾಪಿ ಮಾಡಿ ಪೇಸ್ಟ್ ಮಾಡುವೆನು.
07:46 ರಚನೆಯನ್ನು ಆಯ್ಕೆ ಮಾಡಲು Selection ಟೂಲ್ ಅನ್ನು ಕ್ಲಿಕ್ ಮಾಡಿ.
07:50 ಕಾಪಿ ಮಾಡಲು CTRL+C ಯನ್ನು ಮತ್ತು ಪೇಸ್ಟ್ ಮಾಡಲು CTRL+V ಯನ್ನು ಒತ್ತಿ.ಪೇಸ್ಟ್ ಮಾಡಿದ ರಚನೆಯನ್ನು ಬಲಕ್ಕೆ ಡ್ರ್ಯಾಗ್ ಮಾಡಿ.
07:57 ಅನುಕೂಲಕ್ಕಾಗಿ ನಾನು ಪರಮಾಣುಗಳನ್ನು ಲೇಬಲ್ ಮಾಡುವೆನು.
08:00 Display Types ಮೆನ್ಯುವಿನಲ್ಲಿ, Label ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
08:05 Hydrogen ಗಳನ್ನು ತೆಗೆದುಹಾಕಲು, Build ಮೆನ್ಯುವಿಗೆ ಹೋಗಿ ಮತ್ತು Remove Hydrogens ಅನ್ನು ಆಯ್ಕೆಮಾಡಿ.
08:11 ನಾವು ಪ್ಯಾನಲ್ ನಲ್ಲಿ ಸಿಸ್ಪ್ಲ್ಯಾಟಿನ್ ನ ಎರಡು ಐಸೋಮರ್ ಗಳನ್ನು ಹೊಂದಿದ್ದೇವೆ.
08:16 ನಾನು ಎರಡನೆಯ ಸಿಸ್ ಐಸೋಮರ್ ಅನ್ನು ಟ್ರಾನ್ಸ್ ಐಸೋಮರ್ ಆಗಿ ಪರಿವರ್ತಿಸುವೆನು.
08:21 Manipulation ಟೂಲ್ ಅನ್ನು ಕ್ಲಿಕ್ ಮಾಡಿ.
08:24 Cl 4 ಅನ್ನು ಕ್ಲಿಕ್ ಮಾಡಿ ಎಡಕ್ಕೆ ಡ್ರ್ಯಾಗ್ ಮಾಡಿ. N4 ಅನ್ನು ಕ್ಲಿಕ್ ಮಾಡಿ ಬಲಕ್ಕೆ ಡ್ರ್ಯಾಗ್ ಮಾಡಿ.
08:32 ರಚನೆಯನ್ನು ಸರಿಯಾದ ಕೋನದಲ್ಲಿ ಜೋಡಿಸಲು, ಎಲ್ಲ ಬಾಂಡ್ ಗಳ ಸ್ಥಾನವನ್ನು ಹೊಂದಿಸಿ.
08:38 Build ಮೆನ್ಯುವಿಗೆ ಹೋಗಿ ಮತ್ತು Add Hydrogens ಅನ್ನು ಆಯ್ಕೆಮಾಡಿ.
08:43 ಮೊದಲಿನಂತೆ, ನೈಟ್ರೋಜನ್ ಗೆ ಹೊಂದಿಕೊಂಡ ಎರಡು ಪರಮಾಣುಗಳಿರುತ್ತವೆ.
08:48 Draw ಟೂಲ್ನಲ್ಲಿರುವ Hydrogen ಅನ್ನು ಬಳಸಿ ಮೂರನೆಯ ಹೈಡ್ರೋಜನ್ ಅನ್ನು ಸೇರಿಸಿ.
08:53 ಈಗ ರಚನೆಯನ್ನು ಆಪ್ಟಿಮೈಜ್ ಮಾಡೋಣ.
08:55 Auto Optimization ಟೂಲ್ ಅನ್ನು ಕ್ಲಿಕ್ ಮಾಡಿ.
08:59 Force Field ನಲ್ಲಿ, UFF ಅನ್ನು ಆಯ್ಕೆಮಾಡಿ ಮತ್ತು Start ಬಟನ್ ಅನ್ನು ಕ್ಲಿಕ್ ಮಾಡಿ.
09:05 ಆಪ್ಟಿಮೈಜೇಷನ್ ಕ್ರಿಯೆಯನ್ನು ನಿಲ್ಲಿಸಲು, Stop ಬಟನ್ ಅನ್ನು ಒತ್ತಿ.
09:09 ಈಗ ಪ್ಯಾನಲ್ ನಲ್ಲಿ ನಾವು ಡೈಅಮೈನ್ ಡೈಕ್ಲೋರೋ ಪ್ಲ್ಯಾಟಿನಮ್ (II) ದ ಎರಡು ಜಾಮೆಟ್ರಿಕಲ್ ಐಸೋಮರ್ ಗಳನ್ನು ಹೊಂದಿದ್ದೇವೆ.
09:17 ಇದೇರೀತಿ, 'ಡೈಅಮೈನ್ ಟೆಟ್ರಾಸೈನೋಫರೇಟ್(III)ಅಯಾನ್' [Fe(NH3) 2CN)4]- ನ ಜಾಮೆಟ್ರಿಕಲ್ ಐಸೋಮರ್ ಗಳನ್ನು ಹೊಂದಿದ್ದೇವೆ.
09:25 ಈಗ ನಾವು R-S configuration(ಆರ್-ಎಸ್ ಕಾನ್ಫಿಗರೇಷನ್) ನ ಕುರಿತು ಚರ್ಚಿಸೋಣ.
09:29 'ಆರ್ ಎಸ್ ಕಾನ್ಫಿಗರೇಷನ್ ' ಗಳು Chiral centre(ಕೈರಲ್ ಸೆಂಟರ್) ನ ಉಪಸ್ಥಿತಿಯಿಂದ ಉಂಟಾಗುತ್ತವೆ.
09:35 Chiral centre (ಕೈರಲ್ ಸೆಂಟರ್) ಇದು ಒಂದು ಪರಮಾಣುವು ನಾಲ್ಕು ಬೇರೆ ಬೇರೆ ಅಣುಗಳೊಂದಿಗೆ ಸಂಪರ್ಕ ಹೊಂದಿರುವುದು.
09:41 ಕಾನ್ಫಿಗರೇಷನ್ ಗಳು, ಪರಸ್ಪರ 'ನಾನ್ ಸುಪರ್ ಇಂಪೋಸೇಬಲ್ ಮಿರರ್ ಇಮೇಜ್' ಗಳಾಗಿವೆ.
09:47 ಆರ್ ಎಸ್ ಕಾನ್ಫಿಗರೇಷನ್ ಗಳ ವಿವರಣೆಗಾಗಿ ನಾನು ಅಮಿನೋ ಆಸಿಡ್ –ಅಲನೈನ್ ಅನ್ನು ಬಳಸುವೆನು.
09:53 ಹೊಸ ವಿಂಡೋವನ್ನು ತೆರೆಯಿರಿ.
09:56 ನಾನು Fragment library ಯಿಂದ Alanine(ಅಲನೈನ್) ರಚನೆಯನ್ನು ಲೋಡ್ ಮಾಡುವೆನು.
10:01 ಫ್ರ್ಯಾಗ್ಮಂಟ್ ಲೈಬ್ರರಿಯಲ್ಲಿರುವ ಎಲ್ಲಾ ಅಮಿನೋ ಆಸಿಡ್ ಗಳೂ ಆಪ್ಟಿಕಲಿ ಆಕ್ಟಿವ್ ಆಗಿರುತ್ತವೆ.
10:07 ನೀವು ನಿಮಗೆ ಬೇಕಾದ ಅಮಿನೋ ಆಸಿಡ್ ಗಳನ್ನು ಲೋಡ್ ಮಾಡಿ, ನೋಡಿಕೊಳ್ಳಬಹುದು.
10:11 ರಚನೆಯನ್ನು ಡಿ-ಸೆಲೆಕ್ಟ್ ಮಾಡಲು CTRL+SHIFT ಮತ್ತು A ಕೀ ಗಳನ್ನು ಒತ್ತಿ.
10:15 ರಚನೆಯನ್ನು ಸರಿಯಾದ ಕೋನದಲ್ಲಿ ತಿರುಗಿಸಲು, Navigation ಟೂಲ್ ಅನ್ನು ಬಳಸಿ.
10:22 ಮಧ್ಯದ ಕಾರ್ಬನ್ ಪರಮಾಣು, ನಾಲ್ಕು ಬೇರೆ ಬೇರೆ ಗುಂಪುಗಳಿಗೆ ಹೊಂದಿಕೊಂಡಿರುವುದರಿಂಅ ಅದುಅ ಕೈರಲ್ ಆಗಿದೆ.
10:26 ಆರ್ ಎಸ್ ಕಾನ್ಫಿಗರೇಷನ್ ನಲ್ಲಿ ಅಣುಗಳು ಬಲ (ಕ್ಲಾಕ್ವೈಸ್) ಅಥವಾ ಎಡ(ಆಂಟಿಕ್ಲಾಕ್ವೈಸ್) ಭಾಗದಲ್ಲಿದೆಯೆ ಎನ್ನುವುದರ ಮೇಲೆ ಆದ್ಯತೆಯನ್ನು ಕೊಡಲಾಗುತ್ತದೆ.
10:35 ಆದ್ಯತೆಯು ಪರಮಾಣುವಿನ ಸಂಖ್ಯೆಯನ್ನು ಕೂಡ ಅವಲಂಬಿಸಿರುತ್ತದೆ.
10:40 ಹೆಚ್ಚು ಪರಮಾಣು ಸಂಖ್ಯೆ ಹೊಂದಿದ ಅಣುವು ಮೊದಲ ಆದ್ಯತೆಯನ್ನು ಪಡೆದುಕೊಳ್ಳುತ್ತದೆ.
10:45 ಈಗ ನಾವು ಪ್ರದಕ್ಷಿಣಾಕಾರವಾಗಿ(ಕ್ಲಾಕ್ವೈಸ್) ಆದ್ಯತೆಯನ್ನು ನೋಡೋಣ.
10:49 ಈ ರಚನೆಯಲ್ಲಿ, ನೈಟ್ರೋಜನ್ ಗೆ ಮೊದಲ ಆದ್ಯತೆಯನ್ನು ಕೊಡಲಾಗಿದೆ.
10:53 ಆಕ್ಸಿಜನ್ ಗೆ ಹೊಂದಿಕೊಂದ ಕಾರ್ಬನ್ ಗೆ ಎರಡನೇ ಆದ್ಯತೆ ಮತ್ತು ಮೀಥೈಲ್ ಗೆ ಮೂರನೆ ಆದ್ಯತೆ ಇದೆ.
11:02 ರಚನೆಯು R configuration ಅನ್ನು ಹೊಂದಿದೆ.
11:05 ನಾನು, ಕೈರಲ್ ಕಾರ್ಬನ್ ಗೆ ಹೊಂದಿಕೊಂಡ ಗುಂಪುಗಳ ಸ್ಥಾನವನ್ನು ಬದಲಾಯಿಸುವೆನು.
11:10 Build ಮೆನ್ಯುವಿಗೆ ಹೋಗಿ, Remove Hydrogens ಅನ್ನು ಆಯ್ಕೆಮಾಡಿ.
11:15 Manipulation ಟೂಲ್ ಅನ್ನು ಕ್ಲಿಕ್ ಮಾಡಿ.
11:17 ಕಾರ್ಬನ್ ಅನ್ನು ಬಲಕ್ಕೆ ಚಲಿಸಿ.
11:20 ಆಕ್ಸಿಜನ್ ಗೆ ಹೊಂದಿಕೊಂಡ ಕಾರ್ಬನ್ ಅನ್ನು ಚಲಿಸಿ.
11:25 Build ಮೆನ್ಯುಗೆ ಹೋಗಿ, ಮತ್ತು Add Hydrogens ಅನ್ನು ಆಯ್ಕೆಮಾಡಿ.
11:29 ಈಗ ನಾವು ಆಂಟಿ-ಕ್ಲಾಕ್ವೈಸ್ ನಲ್ಲಿ ಆದ್ಯತೆಯನ್ನು ನೋಡುವೆವು.
11:33 ನೈಟ್ರೋಜನ್ ಮೊದಲ ಆದ್ಯತೆಯನ್ನು ಹೊಂದಿದೆ. ಆಕ್ಸಿಜನ್ ಗೆ ಹೊಂದಿಕೊಂಡ ಕಾರ್ಬನ್ ಎರಡನೇ ಆದ್ಯತೆಯನ್ನು ಹೊಂದಿದೆ. ಮತ್ತು ಮೀಥೈಲ್ ಮೂರನೆ ಆದ್ಯತೆಯನ್ನು ಪಡೆದುಕೊಂಡಿದೆ.
11:45 ರಚನೆಯು 'ಎಸ್ ಕಾನ್ಫಿಗರೇಷನ್' ಅನ್ನು ಹೊಂದಿದೆ. .
11:48 ಇದೇರೀತಿ ನಾವು ಪ್ಯಾನಲ್ ನಲ್ಲಿ ಗ್ಲಿಸರಾಲ್ಡಿಹೈಡ್ ನ R (ಆರ್) ಮತ್ತು S (ಎಸ್)ಕಾನ್ಫಿಗರೇಷನ್ ಗಳನ್ನು ಹೊಂದಿದ್ದೇವೆ.
11:55 ಈಗ ಸಂಕ್ಷಿಪ್ತವಾಗಿ ಸಾರಾಂಶವನ್ನು ನೋಡೋಣ.
11:57 ಈ ಟ್ಯುಟೋರಿಯಲ್ ನಲ್ಲಿ ನಾವು, '1,2-ಡೈಕ್ಲೋರೋ ಇಥೇನ್' ನ ಕನ್ಫರ್ಮೇಷನ್ ಗಳನ್ನು ಬರೆಯಲು, ಸೈಕ್ಲೋಹೆಕ್ಸೇನ್ ನ ಕನ್ಫರ್ಮೇಷನ್ ಗಳನ್ನು ಬರೆಯಲು, ಸಿಸ್ಪ್ಲ್ಯಾಟಿನ್ ನ ಜಾಮೆಟ್ರಿಕಲ್ ಐಸೋಮರ್ ಗಳನ್ನು ಬರೆಯಲು, ಅಮಿನೋ ಆಸಿಡ್ ಅಲನೈನ್ ನ ಆರ್ ಎಸ್ ಕಾನ್ಫಿಗರೇಷನ್ ಗಳನ್ನು ಬರೆಯಲು ಕಲಿತಿದ್ದೇವೆ.
12:15 ಅಸೈನ್ ಮೆಂಟ್ :'2-ಬ್ಯುಟೇನ್' ಮತ್ತು'1,2-ಡೈಕ್ಲೋರೋಇಥೇನ್' ಗಳ ಜಾಮೆಟ್ರಿಕಲ್ ಐಸೋಮರ್ ಗಳನ್ನು ಬರೆಯಿರಿ ಮತ್ತು ಬ್ರೋಮೋಕ್ಲೋರೋಅಯೋಡೋಮಿಥೇನ್ ನ ಆರ್-ಎಸ್ ಕಾನ್ಫಿಗರೇಷನ್ ಗಳನ್ನು ಬರೆಯಿರಿ.
12:29 ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
12:37 ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
12:44 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
12:51 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು

Contributors and Content Editors

Anjana310312, Sandhya.np14