Linux/C3/More-on-sed-command/Kannada
From Script | Spoken-Tutorial
Revision as of 16:40, 5 September 2017 by Glorianandihal (Talk | contribs)
Time | Narration |
00:01 | More on sed ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ . |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು ಕೆಲವು ಉದಾಹರಣೆಗಳ ಮೂಲಕ ಇನ್ನಷ್ಟು sed command ಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. |
00:13 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: |
00:15 | Ubuntu Linux ಆಪರೇಟಿಂಗ್ ಸಿಸ್ಟಂ, ಆವೃತ್ತಿ 12.04 ಮತ್ತು |
00:20 | GNU BASH 4.2.24 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ. |
00:24 | ದಯವಿಟ್ಟು ಗಮನಿಸಿ, ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು , GNU bash 4 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯನ್ನು ಬಳಸಲು ಶಿಫಾರಸು ಮಾಡಲಾಗಿದೆ. |
00:32 | ಪೂರ್ವಾಪೇಕ್ಷಿತವಾಗಿ, |
00:34 | ನೀವು ಲಿನಕ್ಸ್ ಟರ್ಮಿನಲ್ ನ ಬಳಕೆಯನ್ನು ಹಾಗು |
00:37 | 'sed ಟೂಲ್ ಬಗ್ಗೆ ತಿಳಿದಿರಬೇಕು. |
00:40 | ಸಂಬಂಧಿತ ಟ್ಯುಟೋರಿಯಲ್ಗಳಿಗಾಗಿ, ದಯವಿಟ್ಟು ಈ ಕೆಳಗಿನ ವೆಬ್ಸೈಟ್ಗೆ ಭೇಟಿ ನೀಡಿ: http://spoken-tutorial.org |
00:46 | ಸಬ್ಸ್ಟಿಟ್ಯೂಷನ್ ಮಾಡುವಾಗ (ಬದಲಿಗೆ ಸೇರಿಸುವುದು) Sed ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. |
00:49 | ಎಂದರೆ, ಇನ್ಪುಟ್ ನಲ್ಲಿಯ ಕೆಲವು ಪ್ಯಾಟರ್ನ್ ಗಳನ್ನು ಬೇರೆ ಪ್ಯಾಟರ್ನ್ ಗಳಿಂದ ಬದಲಾಯಿಸುವುದು. |
00:55 | ನಾವು ಮೊದಲು ಮೂಲ ಫೈಲ್ seddemo.txt ಅನ್ನು ನೋಡೋಣ. |
01:01 | "Kumar" ಎಂಬ ಪದವು ನಾಲ್ಕನೇ ಸಾಲಿನಲ್ಲಿ ಎರಡು ಬಾರಿ ಮತ್ತು ಆರನೇ ಸಾಲಿನಲ್ಲಿ ಒಂದು ಬಾರಿ ಇರುವುದನ್ನು ಗಮನಿಸಿ. |
01:10 | ನಿಮಗೆ ಎಲ್ಲ ಕಡೆಗೆ "Kumar" ಎಂಬ ಹೆಸರನ್ನು "Roy" ನಿಂದ ಬದಲಾಯಿಸಬೇಕಾಗಿದ್ದರೆ, |
01:16 | terminal ನಲ್ಲಿ ಹೀಗೆ ಟೈಪ್ ಮಾಡಿ: |
01:18 | sed space within single quote s front slash / opening square bracket small k capital K closing square bracket umar slash Roy slash after the single quotes space seddemo.txt |
01:40 | Enter ಅನ್ನು ಒತ್ತಿ. |
01:43 | ನಾಲ್ಕನೇ ಸಾಲನ್ನು ಗಮನಿಸಿ. |
01:46 | ಮೊದಲನೆಯ "Kumar" ಮಾತ್ರ "Roy" ಎಂದು ಬದಲಾಗಿದೆ, ಎರಡನೆಯದು ಬದಲಾಗಿಲ್ಲ. |
01:52 | ಆರನೇ ಸಾಲಿನಲ್ಲಿ "ಕುಮಾರ್" ಶಬ್ದವು ಮತ್ತೆ ಬಂದಿದೆ ಮತ್ತು ಇದನ್ನು ಈಗ ಬದಲಾಯಿಸಲಾಗಿದೆ. |
01:57 | ಆದ್ದರಿಂದ, ಸಾಲುಗಳಲ್ಲಿಯ ಮೊದಲನೆಯ ನಮೂದು ಮಾತ್ರ ಬದಲಾಗಿರುವುದನ್ನು ನಾವು ನೋಡುತ್ತೇವೆ. |
02:03 | ಏಕೆಂದರೆ, ಡೀಫಾಲ್ಟ್ ಆಗಿ, ಯಾವುದೇ ಸಾಲಿನ ಮೊದಲ ಹೊಂದಿಕೆಯಾದ ನಮೂದನೆಯನ್ನು ಬದಲಿಸಲಾಗುತ್ತದೆ. |
02:11 | ಎಲ್ಲಾ ಹೊಂದಾಣಿಕೆಯಾದ ನಮೂದುಗಳನ್ನು ಬದಲಿಸಲು, ನಾವು flag g ಆಯ್ಕೆಯನ್ನು ಬಳಸಬೇಕಾಗುತ್ತದೆ. |
02:17 | ನಾನು ಪ್ರಾಂಪ್ಟನ್ನು ಕ್ಲಿಯರ್ ಮಾಡುತ್ತೇನೆ. |
02:20 | ಹೀಗೆ ಟೈಪ್ ಮಾಡಿ : sed space (within single quotes) 's front-slash opening square bracket small k capital K closing square bracket umar slash Roy slash g' after the single quote space seddemo.txt
ಮತ್ತು Enter ಅನ್ನು ಒತ್ತಿ. |
02:43 | ಈಗ, ನಾಲ್ಕನೇ ಸಾಲಿನ ಎರಡೂ ನಮೂದನೆಗಳನ್ನು ಬದಲಾಯಿಸಲಾಗಿದೆ. |
02:48 | ನಾವು ಒಂದೇ ಸಲಕ್ಕೆ ಅನೇಕ ಸಬ್ಸ್ಟಿಟ್ಯೂಷನ್ ಗಳನ್ನು ಮಾಡಬಹುದು. |
02:53 | ನಮಗೆ, "seddemo.txt" ಫೈಲ್ನಲ್ಲಿ ""electronics" ಪದವನ್ನು "electrical" ಪದದೊಂದಿಗೆ |
02:58 | ಮತ್ತು "civil" ಪದವನ್ನು "metallurgy" ಪದದೊಂದಿಗೆ ಬದಲಾಯಿಸಬೇಕಾಗಿದೆ ಎಂದುಕೊಳ್ಳೋಣ. |
03:04 | ನಾನು prompt ನ್ನು ಕ್ಲಿಯರ್ ಮಾಡುತೇನೆ. |
03:07 | ಮತ್ತು ಹೀಗೆ ಟೈಪ್ ಮಾಡುತೇನೆ : sed space hyphen e space within single quotes ‘s front slash electronics slash electrical slash g’ after the single quote space hyphen e space within single quotes ‘s front-slash civil slash metallurgy slash g’ after the single quotes space seddemo.txt |
03:37 | Enter ಅನ್ನು ಒತ್ತಿ. |
03:39 | ಪದಗಳು ಬದಲಾಗಿರುವುದನ್ನು ನೀವು ನೋಡಬಹುದು. |
03:43 | ಈಗ ನಮಗೆ 'Anirban' ನ streamಅನ್ನು "computers" ನಿಂದ "mathematics" ಗೆ ಬದಲಾಯಿಸಬೇಕಾಗಿದೆ. |
03:49 | ಇಂತಹ ಸಂದರ್ಭದಲ್ಲಿ, ನಾವು ಹೀಗೆ ಟೈಪ್ ಮಾಡಬೇಕು : |
03:54 | sed space within single quotes 'front-slash Anirban slash s slash computers slash mathematics slash g' after the single quotes space seddemo.txt |
04:11 | Enter ಅನ್ನು ಒತ್ತಿ. |
04:14 | stream ಬದಲಾಗಿರುವುದನ್ನು ನಾವು ನೋಡುತ್ತೇವೆ. |
04:17 | ಇದು ಏನೆಂಬುದನ್ನು ನಾವು ಅರ್ಥಮಾಡಿಕೊಳ್ಳೋಣ. |
04:21 | ಮೊದಲಿಗೆ ನಾವು sed ಎಂದು ಬರೆಯುತ್ತೇವೆ. ನಂತರ, ಸಿಂಗಲ್ ಕೋಟ್ಸ ನಲ್ಲಿ ನಾವು ಹೊಂದಿಸಬೇಕಾದ ಪ್ಯಾಟರ್ನ್ ಅನ್ನು ಬರೆಯುತ್ತೇವೆ. |
04:28 | ಇದು "Anirban" ಎಂದು ಇದೆ. |
04:30 | ಈಗ ಸ್ಲಾಶ್ ನ ನಂತರ, ಕ್ರಿಯೆಯು ಬರುತ್ತದೆ. |
04:34 | ನಾವು ಈಗಾಗಲೇ ನೋಡಿದಂತೆ, 's' ಸಬ್ಸ್ಟಿಟ್ಯೂಷನ್ ನ್ನು ಪ್ರತಿನಿಧಿಸುತ್ತದೆ. |
04:41 | ನಂತರ, ನಾವು ಬದಲಾಯಿಸಬೇಕಾದ ಪ್ಯಾಟರ್ನ್ ಅನ್ನು "computers" ಎಂದು ಮತ್ತು |
04:47 | ಅದರ ಬದಲಿಗೆ ಸೇರಿಸಬೆಕಾದ ಹೊಸ ಪದವನ್ನು "mathematics" ಎಂದು ಹೇಳುತ್ತೇವೆ. |
04:53 | ಫೈಲ್ನಲ್ಲಿ ಸಾಲುಗಳನ್ನು ಸೇರಿಸಲು ಅಥವಾ ಡಿಲೀಟ್ ಮಾಡಲು ಸಹ ನಾವು sedಅನ್ನು ಬಳಸಬಹುದು. |
05:00 | ಒಂದು ವೇಳೆ ನಮಗೆ "electronics" ಎಂಬ stream ಅನ್ನು ಹೊಂದಿರದ ಸಾಲುಗಳನ್ನು ಆಯ್ಕೆ ಮಾಡಬೇಕಾಗಿದೆ ಎಂದುಕೊಳ್ಳೋಣ. |
05:06 | ಅದಕ್ಕಾಗಿ, ನಾವು d flag ಅನ್ನು ಹೊಂದಿದ್ದೇವೆ. |
05:10 | ಟೈಪ್ ಮಾಡಿ: sed space within single quotes front-slash electronics slash d after the single quotes space seddemo.txt space greater than sign space nonelectronics.txt |
05:31 | Enter ಅನ್ನು ಒತ್ತಿ. |
05:33 | ಫೈಲ್ನಲ್ಲಿ ಇರುವುದನ್ನು ನೋಡಲು, ಹೀಗೆ ಟೈಪ್ ಮಾಡಿ: cat space nonelectronics.txt. |
05:43 | ಒಂದು ವೇಳೆ, ನಮಗೆ Student Information ಎಂಬ ಸಾಲನ್ನು, ಫೈಲ್ ನ ಪ್ರಾರಂಭದಲ್ಲಿ ಸೇರಿಸಬೇಕಾಗಿದೆ ಎನ್ನೋಣ. |
05:49 | ಇದಕ್ಕಾಗಿ ನಾವು i ಕ್ರಿಯೆಯನ್ನು ಹೊಂದಿದ್ದೇವೆ. |
05:54 | ನಾವು ಹೀಗೆ ಟೈಪ್ ಮಾಡಬೇಕು: sed space in single quotes '1i space Student Information' after the quote space seddemo.txt |
06:10 | Enter ಅನ್ನು ಒತ್ತಿ. |
06:13 | ನೀವು ಔಟ್ಪುಟ್ ಅನ್ನು ನೋಡಬಹುದು . |
06:15 | ವಾಸ್ತವವಾಗಿ, ನಾವು ಈ ರೀತಿಯ ಅನೇಕ ಸಾಲುಗಳನ್ನು ನಮೂದಿಸಬಹುದು. |
06:20 | ಒಂದು ವೇಳೆ, ನಾವು ಈ ಎರಡು ಸಾಲುಗಳನ್ನು ಸೇರಿಸಲು ಬಯಸಿದರೆ, ಇದೇ ರೀತಿಯಾಗಿ ಮಾಡುತ್ತೇವೆ. |
06:26 | Student Information ಜೊತೆಗೆ ಮುಂದಿನ ವರ್ಷದ academics ಅನ್ನು ಸೇರಿಸಲು ನಾವು ಬಯಸುತ್ತೇವೆ. |
06:33 | ಆ ಸಂದರ್ಭದಲ್ಲಿ, ನಾವು ಹೀಗೆ ಟೈಪ್ ಮಾಡುತ್ತೇವೆ: sed space in single quotes 1i space Student Information slash n 2013 after the quotes seddemo.txt |
06:55 | Enter ಅನ್ನು ಒತ್ತಿ. |
06:57 | ‘Information’ ಮತ್ತು ‘2013’ ಸ್ಟ್ರಿಂಗ್ ಗಳ ನಡುವಿನ slash n ನ್ನು ಗಮನಿಸಿ. |
07:05 | slash n, 2013 ಅನ್ನು ಮುಂದಿನ ಸಾಲಿನಲ್ಲಿ ‘Student Information’ ನಂತರ ಪ್ರಿಂಟ್ ಮಾಡುತ್ತದೆ. |
07:12 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
07:14 | ಸಂಕ್ಷಿಪ್ತವಾಗಿ, |
07:17 | ಈ ಟ್ಯುಟೋರಿಯಲ್ ನಲ್ಲಿ, ನಾವು : |
07:19 | ಸಬ್ಸ್ಟಿಟ್ಯೂಷನ್, ರಿಪ್ಲೇಸ್ಮೆಂಟ್ |
07:21 | ಮತ್ತು Insertion ಗಳ ಬಗ್ಗೆ ತಿಳಿದುಕೊಂಡಿದ್ದೇವೆ . |
07:24 | ಒಂದು ಅಸೈನ್ಮೆಂಟ್- ಇದೇ seddemo.txt ಫೈಲ್ ನ್ನು ಬಳಸಿ |
07:30 | ಮತ್ತು "Ankit" ಹೆಸರಿನ ಬದಲಾಗಿ "Ashish" ಹೆಸರನ್ನು ಸೇರಿಸಲು ಪ್ರಯತ್ನಿಸಿ. |
07:35 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
07:39 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
07:42 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
07:47 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
07:53 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:57 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org |
08:04 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
08:09 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
08:16 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
08:22 | ಈ ಸ್ಕ್ರಿಪ್ಟ್, Anirban ಮತ್ತು Sachin ಅವರ ಕೊಡುಗೆಯಾಗಿದೆ. |
08:28 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಮತ್ತು ಪ್ರವಾಚಕಿ ಗ್ಲೋರಿಯಾ ನಂದಿಹಾಳ್ .
ಧನ್ಯವಾದಗಳು. |