Drupal/C2/Managing-Content/Kannada
From Script | Spoken-Tutorial
Revision as of 18:54, 4 September 2016 by NaveenBhat (Talk | contribs)
Time | Narration |
00:01 | Managing Content ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: * new content ಅನ್ನು ರಚನೆ ಮಾಡುವುದನ್ನು |
00:11 | * content ನ ಮ್ಯಾನೇಜ್ ಮೆಂಟ್ ಮತ್ತು * Revisions ಗಳ ಕುರಿತು ಕಲಿಯುತ್ತೇವೆ. |
00:15 | ಈ ಟುಟೋರಿಯಲ್ ಗಾಗಿ ನಾನು
|
00:25 | ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು. |
00:29 | ಈಗ ಮೊದಲೇ ರಚಿಸಿದ ವೆಬ್ ಸೈಟ್ ಅನ್ನು ತೆರೆಯೋಣ. |
00:33 | ಈಗ ನಾವು ಹೊಸ ಕಂಟೆಂಟ್ ಅನ್ನು ರಚಿಸುವುದನ್ನು ಕಲಿಯೋಣ. |
00:37 | ನಾವು ನಮ್ಮ ಮೊದಲ Event ಅನ್ನು ಸೇರಿಸಲಿದ್ದೇವೆ. Content ಮೇಲೆ ಕ್ಲಿಕ್ ಮಾಡಿ. |
00:42 | Add content ಕ್ಲಿಕ್ ಮಾಡಿ ಮತ್ತು Events ಅನ್ನು ಆರಿಸಿಕೊಳ್ಳಿ. |
00:46 | ನಾವೀಗ ನಾವು ಸೆಟ್ ಮಾಡಿರುವುದರ ವಿವರಣೆಗೋಸ್ಕರ ಒಂದು Event ಅನ್ನು ಸೆಟ್ ಮಾಡೋಣ. |
00:51 | Event Name ಫೀಲ್ಡ್ ಅಲ್ಲಿ “DrupalCamp Cincinnati” ಎಂದು ಟೈಪ್ ಮಾಡಿ. |
00:58 | Event Description ಫೀಲ್ಡ್ ನಲ್ಲಿ “This is the first DrupalCamp in the southern Ohio region” ಎಂದು ಟೈಪ್ ಮಾಡಿ. |
01:07 | Create New revision ಚೆಕ್ ಬಾಕ್ಸ್ ಆನ್ ಆಗಿರುವುದನ್ನು ಗಮನಿಸಿ. |
01:12 | ನಾವು ಇಲ್ಲಿ ಬಲಭಾಗದಲ್ಲಿ ಏನನ್ನೂ ಮಾಡುವ ಅವಶ್ಯಕತೆ ಇಲ್ಲ. |
01:17 | ಈಗ Event Logo ಖಾಲಿಯಾಗೇ ಬಿಡಿ. |
01:21 | ಆದರೆ ನಮಗೆ Event Website ಬೇಕು. |
01:24 | ಹಾಗಾಗಿ ನಾನು URL ಅನ್ನು http://drupalcampcincinnati.org ಎಂದು ಟೈಪ್ ಮಾಡುತ್ತೇನೆ. |
01:34 | Link text' ಅನ್ನು ಖಾಲಿಯಾಗೇ ಬಿಡೋಣ. ನಿಜವಾದ URL ಮಾತ್ರ ಡಿಸ್ಪ್ಲೇ ಆಗುವುದರಿಂದ ನಾವು ಹಾಗೇ ಮಾಡೋಣ. |
01:44 | ನಾವು Event Date ಮೇಲೆ ಕ್ಲಿಕ್ ಮಾಡಿದಾಗ ಒಂದು ಚಿಕ್ಕ ಕ್ಯಾಲೆಂಡರ್ ಬರುತ್ತದೆ. |
01:49 | ಅಲ್ಲಿ January 11th 2016 ಅನ್ನು ಆಯ್ಕೆ ಮಾಡಿಕೊಳ್ಳೋಣ. |
01:54 | ನಾವು ಯಾವುದೇ User Groups ಅನ್ನು ಸೆಟ್ ಮಾಡದೇ ಇರುವುದರಿಂದ ಈಗ ನಾವು EVENT SPONSORS ಅನ್ನು ಸೆಟ್ ಮಾಡಲು ಸಾಧ್ಯವಿಲ್ಲ. |
02:01 | Inline Entity Reference ಇದು Drupal ನ ಇನ್ನೊಂದು ವೈಶಿಷ್ಟ್ಯ. |
02:07 | ಇದು ಯೂಸರ್ ಗ್ರುಪ್ ಅನ್ನು ಸೇರಿಸಲು ಸಹಾಯ ಮಾಡುತ್ತದೆ. ಇದರ ಕುರಿತು ಆಮೇಲೆ ಕಲಿಯೋಣ. |
02:13 | ಇಲ್ಲಿ ಕೆಲವು EVENT TOPICS ಗಳಿವೆ. ‘I’ ಎಂದು ಟೈಪ್ ಮಾಡಿ ಮತ್ತು ‘Introduction to Drupal’ ಅನ್ನು ಸೆಲೆಕ್ಟ್ ಮಾಡಿ. |
02:21 | Add another item ನ ಮೇಲೆ ಕ್ಲಿಕ್ ಮಾಡಿ. ಈ ಬಾರಿ ‘m' ಎಂದು ಟೈಪ್ ಮಾಡಿ. |
02:27 | ಏಲ್ಲಾ ವಿಷಯಗಳು ‘m’ ಇಂದ ಪ್ರಾರಂಭವಾಗುವುದನ್ನು ಗಮನಿಸಿ. |
02:32 | ಹಾಗಾಗಿ Module Development ಅನ್ನು ಆಯ್ಕೆ ಮಾಡಿಕೊಳ್ಳೋಣ. ನಿಮಗೆ ಅಗತ್ಯವಿದ್ದರೆ ಬೇರೆಯದನ್ನೂ ಆಯ್ಕೆ ಮಾಡಿಕೊಳ್ಳೋಣ. |
02:38 | Save and publish ಅನ್ನು ಕ್ಲಿಕ್ ಮಾಡಿ. |
02:41 | ಇಲ್ಲಿ ನಮ್ಮ DrupalCamp Cincinnati ನೋಡ್ ಇದೆ. |
02:45 | Title, Body, Event Website ಇದು ತನ್ನಿಂದ ತಾನೇ ಒಂದು ಲಿಂಕ್ ಆಗಿದ್ದರೂ ಇದು ನಿಜವಾಗಿಯೂ ಅಸ್ತಿತ್ವದಲ್ಲಿಲ್ಲ. |
02:53 | ನಾವು ಅವಶ್ಯವಿದ್ದಲ್ಲಿ ಈ Event Date ನ ಫಾರ್ಮ್ಯಾಟ್ ಅನ್ನು ಬದಲಿಸಬಹುದು. |
02:58 | ಇದು ಒಂದು taxonomy. |
03:00 | ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ, Introduction to Drupal ಗೆ ಟ್ಯಾಗ್ ಆಗಿರುವ ಪ್ರತಿಯೊಂದು Event ಕೂಡ ದೊರೆಯುತ್ತದೆ ಮತ್ತು ಇವು ಸಂಪಾದನೆಗೊಂಡ ದಿನಾಂಕಕ್ಕೆ ಅನುಸಾರವಾಗಿ ಪಟ್ಟಿಯಾಗುತ್ತವೆ. |
03:12 | ನಾವು ಈಗ ನಮ್ಮ ಮೊದಲ event node ಅನ್ನು ಯಶಸ್ವಿಯಾಗಿ ರಚನೆ ಮಾಡಿದ್ದೇವೆ. |
03:17 | ಈಗ Shortcuts ಮತ್ತು Add content ಮೇಲೆ ಕ್ಲಿಕ್ ಮಾಡಿ ಮತ್ತು ಈ ಬಾರಿ ನಾವು ನಮ್ಮ User Group ಅನ್ನು ಸೇರಿಸೋಣ. |
03:27 | ನಾವು ಇದನ್ನು "Cincinnati User Group" ಎಂದು ಕರೆಯೋಣ. |
03:31 | User Group Description ಫೀಲ್ಡ್ ನಲ್ಲಿ “This is the user group from the southern Ohio region based in Cincinnati” ಎಂದು ಟೈಪ್ ಮಾಡಿ. |
03:42 | “We meet on the 3rd Thursday of every month”. |
03:47 | ನಾವು ಇಲ್ಲಿ ಇನ್ನೂ ಹೆಚ್ಚು ಮಾಹಿತಿಗಳನ್ನು ಸೇರಿಸಬಹುದು. |
03.51 | ಈ User Group ನ ಯುಆರ್ ಎಲ್ https ಕೋಲನ್ ಸ್ಲ್ಯಾಶ್ ಸ್ಲ್ಯಾಶ್ groups ಡಾಟ್ drupal ಡಾಟ್ org ಸ್ಲ್ಯಾಶ್ Cincinnati. |
04:03 | ಇದು ಈಗ ಸದ್ಯಕ್ಕೆ ಅಸ್ತಿತ್ವದಲ್ಲಿಲ್ಲ. ಆದರೆ ಇದು ಇದೇ ರೀತಿ ಗೋಚರಿಸುತ್ತದೆ. |
04:10 | ನಿಮ್ಮ ಏರಿಯಾದಲ್ಲಿ ಒಂದು User Group ಅನ್ನು ಹುಡುಕಲು groups ಡಾಟ್ drupal ಡಾಟ್ org ಗೆ ಬನ್ನಿ. |
04:16 | ನಂತರ ನಿಮಗೆ ಆಸಕ್ತಿಕರವಾದ ವಿಷಯವನ್ನು ಕ್ವಿಕ್ ಸರ್ಚ್ ಮಾಡಿ. |
04:21 | ಪ್ರಪಂಚದಲ್ಲಿ ತುಂಬಾ User Groups ಗಳಿವೆ. |
04:25 | Group Contact, ನಲ್ಲಿ "Drupal space Group" ಎಂದು ಟೈಪ್ ಮಾಡಿ ಮತ್ತು Contact Email, ನಲ್ಲಿ drupalgroup@email.com ಎಂದು ಟೈಪ್ ಮಾಡಿ. |
04:38 | ಗಮನಿಸಿ ಇದು ಸರಿಯಾದ ರೀತಿಯಲ್ಲಿ ಸಿದ್ಧಪಡಿಸಿದ email address ಆಗಿರಬೇಕು ಇಲ್ಲವಾದಲ್ಲಿ Drupal ಇದನ್ನು ತಿರಸ್ಕರಿಸುತ್ತದೆ. |
04:46 | ಇಲ್ಲಿರು ಅನೇಕ ಆಯ್ಕೆ ಗಳಲ್ಲಿ Group Level ಅನ್ನು ಆರಿಸಿಕೊಳ್ಳಿ. |
04:50 | ಮತ್ತು EVENTS SPONSORED ನಲ್ಲಿ ನಾವು ಒಂದು Event ಅನ್ನು ಆರಿಸಿಕೊಳ್ಳಬೇಕು. |
04:55 | ನೀವು 'd' ಯನ್ನು ಟೈಪ್ ಮಾಡಿದರೆ , ಡ್ರಾಪ್ ಡೌನ್ ನಲ್ಲಿ "Drupal Camp Cincinnati" ಗೋಚರಿಸುತ್ತದೆ. |
05:02 | Save and Publish ಮೇಲೆ ಕ್ಲಿಕ್ ಮಾಡಿ. |
05:05 | ನಾವು ನಮ್ಮ ಮೊದಲ User Group ಅನ್ನು ಯಶಸ್ವಿಯಾಗಿ ರಚನೆ ಮಾಡಿದ್ದೇವೆ. |
05:09 | ಈಗ ನಾವು ನಮ್ಮ ಕಂಟೆಂಟ್ ಅನ್ನು ಮ್ಯಾನೇಜ್ ಮಾಡುವುದನ್ನು ಕಲಿಯೋಣ. |
05:13 | ನಾವು Content ನ ಮೇಲೆ ಕ್ಲಿಕ್ ಮಾಡಿದರೆ ನಮ್ಮsite ನಲ್ಲಿರುವ ಎಲ್ಲ ಕಂಟೆಂಟ್ ಗಳು ಕಾಣಿಸುತ್ತವೆ. |
05:19 | Content type ಯಾವದೇ ಆಗಿದ್ದರೂ ನಾವು ಎಲ್ಲಾ ಕಂಟೆಂಟ್ ಗಳನ್ನು ನೋಡಬಹುದು. |
05:25 | ನಾವು Publish status, Content type ಮತ್ತು Titleಗಳನ್ನು ಆಧರಿಸಿ ಇವುಗಳನ್ನು ಬೇರ್ಪಡಿಸಬಹುದು. |
05:32 | ನಾವು ‘W’ ಎಂದು ಟೈಪ್ ಮಾಡಿ Filter, ಮೇಲೆ ಕ್ಲಿಕ್ ಮಾಡಿದರೆ ‘w’ ಅಕ್ಷರದಿಂದ ಪ್ರಾರಂಭವಾಗುವ ಎಲ್ಲ ನೋಡ್ ಗಳೂ ಕಾಣಿಸುತ್ತವೆ. |
05:41 | Reset ಮೇಲೆ ಕ್ಲಿಕ್ ಮಾಡಿ. |
05:43 | ನಾವು ಅನೇಕ ಭಾಷೆಗಳನ್ನು ಹೊಂದಿದ್ದರೆ ನಾವು ಇನ್ನೊಂದು ಭಾಷೆಯನ್ನು ಕೂಡ ಆರಿಸಿಕೊಳ್ಳಬಹುದು. |
05:49 | ಮತ್ತು ನಮಗೆ ಪಟ್ಟಿ ಸಿಕ್ಕ ನಂತರ ನಾವು ಒಮ್ಮೆ ಒಂದಕ್ಕಿಂತ ಹೆಚ್ಚು ನೋಡ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ನಾವು Delete, Sticky, Promote it, Publish it ಮುಂತಾದ ಕ್ರಿಯೆಗಳನ್ನೂ ಮಾಡಬಹುದು. |
06:04 | ಹಾಗಾಗಿ ನಾನು ಈಗ Unpublish content ಅನ್ನು ಆರಿಸಿಕೊಂಡು Apply ಮೇಲೆ ಕ್ಲಿಕ್ ಮಾಡುತ್ತೇನೆ. |
06:09 | ನಾನು ಆಯ್ಕೆ ಮಾಡಿಕೊಂಡಿರುವ ನೋಡ್ ಗಳ ಸ್ಟ್ಯಾಟಸ್ Unpublished ಎಂದು ಅಪ್ ಡೇಟ್ ಆಗಿರುವುದನ್ನು ಗಮನಿಸಿ. |
06:16 | ಇದು ಕಂಟೆಂಟ್ ಗಳನ್ನು ವ್ಯವಸ್ಥೆಗೊಳಿಸಲು ಸೂಕ್ತವಾದ ಜಾಗ. |
06:20 | ಈಗ ಒಮ್ಮೆಗೇ ಎಲ್ಲಾ ನೋಡ್ ಗಳನ್ನೂ ಆಯ್ಕೆ ಮಾಡಿಕೊಂಡು Publish ಮೇಲೆ ಕ್ಲಿಕ್ ಮಾಡಿ ನಂತರ Apply ಮೇಲೆ ಕ್ಲಿಕ್ ಮಾಡಿ. |
06:28 | ಈಗಾಗಲೇ ಕೆಲವು ಪಬ್ಲಿಶ್ ಆಗಿದ್ದರೂ ತೊಂದರೆ ಇಲ್ಲ ಈಗ ಎಲ್ಲಾ ಕಂಟೆಂಟ್ ಗಳೂ ಪಬ್ಲಿಶ್ ಆಗುತ್ತವೆ. |
06:35 | ನಾವು ಇಲ್ಲಿ ಒಂದು ನೋಡ್ ಅನ್ನು Edit ಅಥವಾ Delete ಮಾಡಬಹುದು ಅಥವಾ ನೋಡ್ ಗಳ ಸಮೂಹವನ್ನು ಆಯ್ಕೆಮಾಡಿಕೊಂಡು ಕಂಟೆಂಟ್ ಅನ್ನು ಡಿಲೀಟ್ ಮಾಡಬಹುದು. |
06:44 | Drupal ನಲ್ಲಿ ಕಂಟೆಂಟ್ ಗಳನ್ನು ವ್ಯವಸ್ಥೆ ಗೊಳಿಸುವುದು ತುಂಬ ಸರಳ. ಟೂಲ್ ಬಾರ್ ನಲ್ಲಿ Content ಲಿಂಕ್ ಅನ್ನು ಕ್ಲಿಕ್ ಮಾಡಿ ಅದು ಈ ಪೇಜ್ ಗೆ ಕರೆದೊಯ್ಯುತ್ತದೆ. |
06:54 | ಮೇಲ್ಭಾಗದಲ್ಲಿರುವ ಟ್ಯಾಬ್ ಗಳನ್ನು ಉಪಯೋಗಿಸಿ ನಾವು ಮಾಡಿರುವ Comment ಗಳನ್ನು ಎಡಿಟ್ ಮಾಡಬಹುದು. |
07:00 | ಮತ್ತು file ಫೀಲ್ಡ್ ನಲ್ಲಿ ಅಪ್ ಲೋಡ್ ಆಗಿರುವ Files ಗಳನ್ನೂ ಕೂಡ ಎಡಿಟ್ ಮಾಡಬಹುದು. |
07:05 | ಇಮೇಜ್ ಅನ್ನು ನೋಡಲು ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದು ಈ ಪರದೆಯ ಮೇಲೆ ತೆರೆದು ಕೊಳ್ಳುತ್ತದೆ. |
07:10 | ಇಮೇಜ್ ಇಲ್ಲಿ ಉಪಯೋಗಿಸಲ್ಪಟ್ಟಿದೆ ಎಂದು ನೋಡಲು Places ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ಎಲ್ಲೆಲ್ಲಿ ಫೈಲ್ ಗಳು ಉಪಯೋಗಿಸಲ್ಪಟ್ಟಿವೆ ಎಂದು ತೋರಿಸುತ್ತದೆ. |
07:20 | ನಾವು Administration' ಟೂಲ್ ಬಾರ್ ನಲ್ಲಿರುವ Content ಲಿಂಕ್ ನಿಂದ Content, Comments ಮತ್ತು Files ಗಳನ್ನು ವ್ಯವಸ್ಥಿತಗೊಳಿಸಬಹುದು. |
07:29 | ಈಗ ನಮ್ಮ ನೋಡ್ ಗೆ comment ಅನ್ನು ಸೇರಿಸೋಣ. |
07:33 | ನಾನು ಈಗ – “Great Node! Fantastic content.” ಎಂಬ comment ಅನ್ನು ಸೇರಿಸುತ್ತೇನೆ. |
07:39 | Save ಅನ್ನು ಕ್ಲಿಕ್ ಮಾಡಿ. |
07:42 | ನಾವು superuser ಆಗಿ ಲಾಗ್ ಇನ್ ಆಗಿರುವುದರಿಂದ, ನಮಗೆ ಎಲ್ಲವಕ್ಕೂ ಅನುಮೋದನೆ ಇರುವುದರಿಂದ ನಾವು ಇನ್ನೇನು ಮಾಡಬೇಕಿಲ್ಲ. |
07:50 | ನೀವು comment ಗಳನ್ನು ಅನುಮೋದನೆಗೆ ಸೆಟ್ ಮಾಡುವುದಾದರೆ ನೀವು Content, Comments ಅನ್ನು ಕ್ಲಿಕ್ ಮಾಡಿ ಮತ್ತು ಇಲ್ಲಿ ನೀವು ಇದನ್ನು ವ್ಯವಸ್ಥಿತಗೊಳಿಸಬಹುದು. |
07:59 | ಉದಾಹರಣೆಗೆ - comments ಗಳನ್ನು ಒಟ್ಟಿಗೆ ಪಬ್ಲಿಶ್ ಮಾಡುವುದು ಅಥವಾ ಈ ಪರದೆಯನ್ನು ಡಿಲೀಟ್ ಮಾಡಬಹುದು. |
08:05 | ದ್ರುಪಾಲ್ ನಲ್ಲಿ Content, Comments ಮತ್ತು Files ಗಳನ್ನು ಒಂದೇ ಕಡೆ ಮಾಡಬಹುದು. |
08:12 | ಈಗ ಒಂದು node ಅನ್ನು ಅಪ್ ಡೇಟ್ ಮಾಡೋಣ ಅಥವಾ ಒಂದು ನೋಡ್ ಅಲ್ಲಿ ಬದಲಾವಣೆಯನ್ನು ಮಾಡಿ Revisions ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೋಡೋಣ. |
08:20 | Home ಲಿಂಕ್ ಮೇಲೆ ಕ್ಲಿಕ್ ಮಾಡಿ Home page ಗೆ ಬನ್ನಿ. |
08:24 | DrupalCamp Cincinnati ನಲ್ಲಿರುವ Quick edit ನ ಮೇಲೆ ಕ್ಲಿಕ್ ಮಾಡಿ. |
08:29 | ಈಗ ಈ ನೋಡ್ ನ body ಗೆ ಇನ್ನಷ್ಟು content ಅನ್ನು ಸೇರಿಸಿ – “There is another great camp in Columbus every October.” |
08:39 | Save ಅನ್ನು ಕ್ಲಿಕ್ ಮಾಡಿ. |
08:41 | ಮತ್ತು ಈಗ DrupalCamp Cincinnati ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಈಗ ಹೊಸ ಟ್ಯಾಬ್ Revisions ಅನ್ನು ಕಾಣುತ್ತೀರಿ.. |
08:49 | Revisions ನ ಮೇಲೆ ಕ್ಲಿಕ್ ಮಾಡಿ ಮತ್ತು ನೀವು admin ಈ ನೋಡ್ ಅನ್ನು 2:37 ಕ್ಕೆ ಅಪ್ ಡೇಟ್ ಮಾಡಿರುವುದನ್ನು ಕಾಣಬಹುದು. ಮತ್ತು ಇದು Current version. |
09:00 | ಹಳೆಯ ಆವೃತ್ತಿ ಕೂಡ ದೊರೆಯುತ್ತದೆ. |
09:03 | ಅದನ್ನು ಕ್ಲಿಕ್ ಮಾಡಿದರೆ ನೀವು ಹಳೆಯ ಆವೃತ್ತಿ ಯಲ್ಲಿ ಕೊನೆಯ ಪ್ಯಾರ ಇಲ್ಲದಿರುವುದನ್ನು ಕಾಣಬಹುದು. |
09:09 | ಹಿಂದಿರುಗಲು Revisions ನ ಮೇಲೆ ಕ್ಲಿಕ್ ಮಾಡಿ. ನಂತರ ನಾವು ಈ ಹಳೆಯ ಆವೃತ್ತಿಯನ್ನು Revert ಅಥವಾ Delete ಮಾಡಬಹುದು. |
09:18 | ಇಲ್ಲಿ ಇನ್ನೂ ಕೆಲವು Module ಗಳಿವೆ ಅವು ಇದನ್ನು ಇನ್ನೂ ಸುಲಭಗೊಳಿಸುತ್ತದೆ. |
09:22 | ಆದರೆ Drupal ಸಂಪೂರ್ಣವಾದ version control ಅನ್ನು ಹೊಂದಿದೆ. ಹಾಗಾಗಿ ನೀವು ಯಾರು ಮತ್ತು ಯಾವಾಗ ಕೊಟ್ಟಿರುವ ನೋಡ್ ಅನ್ನು ಬದಲಾಯಿಸಿದ್ದಾರೆ ಎಂದು ತಿಳಿಯಬಹುದು ಮತ್ತು ನೀವು ಬೇಕಾದಾಗ ಅದನ್ನು ರಿವರ್ಟ್ ಮಾಡಬಹುದು. |
09:36 | Drupal ನಲ್ಲಿ version control' ಅನ್ನು ಕೊಟ್ಟಿರುವುದರಿಂದ ಬಹಳ ಸಹಾಯಕವಾಗಿದೆ. |
09:41 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಈಗ ಸಾರಾಂಶವನ್ನು ನೋಡೋಣ. |
09:47 | ಈ ಟ್ಯುಟೋರಿಯಲ್ ನಲ್ಲಿ ನಾವು
|
10:06 | ಈ ವಿಡಿಯೋ ವನ್ನು Acquia ಮತ್ತು OSTraining ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ. |
10:16 | ಈ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. |
10:23 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. |
10:32 | Spoken Tutorial Project ಇದು NMEICT, Ministry of Human Resource Development
ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ. |
10:45 | ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು.
|