Git/C2/Branching-in-Git/Kannada
From Script | Spoken-Tutorial
Revision as of 16:09, 12 September 2016 by Sandhya.np14 (Talk | contribs)
|
|
00:01 | Branching in Git ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ, ನಾವು:
|
00:15 | ಈ ಟ್ಯುಟೋರಿಯಲ್ ಗಾಗಿ, ನಾನು:
|
00:25 | ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ನೀವು ಬಳಸಬಹುದು. |
00:29 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಟರ್ಮಿನಲ್ ನ ಮೇಲೆ ಲಿನಕ್ಸ್ ಕಮಾಂಡ್ ಗಳನ್ನು ರನ್ ಮಾಡುವುದನ್ನು ತಿಳಿದಿರಬೇಕು. |
00:36 | ಇಲ್ಲದಿದ್ದರೆ, ಸಂಬಂಧಿತ Linux ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
00:42 | ನಾವು ‘ಬ್ರಾಂಚಿಂಗ್’ ಬಗ್ಗೆ ತಿಳಿದುಕೊಳ್ಳೋಣ. |
00:44 | ಸಾಮಾನ್ಯವಾಗಿ ಒಂದು ಪ್ರೊಜೆಕ್ಟ್ ನಲ್ಲಿ, ಹೊಸ ಮಾಡ್ಯುಲ್ ಗಳನ್ನು (ಘಟಕ) ಡೆವಲಪ್ ಮಾಡಲು ಅಥವಾ 'ಬಗ್' ಅನ್ನು ಸರಿಪಡಿಸಲು ಬ್ರಾಂಚ್ ಗಳನ್ನು ಬಳಸಲಾಗುತ್ತದೆ. |
00:52 | ಮುಖ್ಯ ಪ್ರೊಜೆಕ್ಟ್ ಗೆ ಅಡ್ಡಿಯಾಗದಂತೆ ಒಂದು ಪ್ರೊಜೆಕ್ಟ್ ನ ಹೊಸ ಮಾಡ್ಯುಲ್ ಗಳೊಂದಿಗೆ ಕೆಲಸ ಮಾಡಲು ಇದು ಸಹಾಯಮಾಡುತ್ತದೆ. |
00:58 | 'master' (ಮಾಸ್ಟರ್)- ಇದು ಗಿಟ್ ನ ಡೀಫಾಲ್ಟ್ 'ಬ್ರಾಂಚ್' ಆಗಿದೆ. |
01:02 | ಹೊಸ ಮೊಡ್ಯುಲ್ ಗಳನ್ನು ಡೆವಲಪ್ ಮಾಡಲು ನಾವು ವಿವಿಧ ಬ್ರಾಂಚ್ ಗಳನ್ನು ಬಳಸುತ್ತೇವೆ |
01:06 | ಮತ್ತು ಆನಂತರ ಇವುಗಳನ್ನು ' ಮಾಸ್ಟರ್' ಬ್ರಾಂಚ್ ನೊಂದಿಗೆ ಮರ್ಜ್ ಮಾಡಲಾಗುತ್ತದೆ. |
01:11 | ಉದಾಹರಣೆಗೆ, ಈ ಚಿತ್ರವು 'master' ಹಾಗೂ 'new-module' ಎಂಬ ಬ್ರಾಂಚ್ ಗಳೊಂದಿಗೆ ಒಂದು ರಿಪಾಸಿಟರಿಯನ್ನು ತೋರಿಸುತ್ತದೆ. |
01:18 | 'master' ಬ್ರಾಂಚ್ ನಲ್ಲಿ, 'C1, C2' ಹಾಗೂ 'C3' ಎಂಬ ಹೆಸರಿನ ‘ಕಮಿಟ್’ ಗಳಿವೆ. |
01:25 | ಆಮೇಲೆ, 'C3' ‘ಕಮಿಟ್’ ನಲ್ಲಿ 'new-module' ಎಂಬ ಒಂದು ಬ್ರಾಂಚ್ ಅನ್ನು ಕ್ರಿಯೇಟ್ ಮಾಡಲಾಗಿದೆ. |
01:30 | 'C4, C5' ಹಾಗೂ 'C8' ಗಳು, 'new-module' 'ಬ್ರಾಂಚ್' ನ ‘ಕಮಿಟ್’ ಗಳಾಗಿವೆ. |
01:36 | ಇದರಂತೆಯೇ, 'master' ಬ್ರಾಂಚ್ ನಲ್ಲಿ C6 ಹಾಗೂ C7 ‘ಕಮಿಟ್’ ಗಳನ್ನು ಮಾಡಲಾಗಿದೆ. |
01:43 | ಇಲ್ಲಿ, 'new-module' ಬ್ರಾಂಚ್, 'master' ಬ್ರಾಂಚ್ ಅನ್ನು ಅಡ್ಡಿಪಡಿಸುತ್ತಿಲ್ಲ ಎಂಬುದನ್ನು ನೀವು ನೋಡಬಹುದು. |
01:49 | ಒಂದುಸಲ 'new-module' ಸಿದ್ಧವಾಯಿತೆಂದರೆ, ನಾವು ಅದನ್ನು ಮರಳಿ 'master' ಬ್ರಾಂಚ್ ನೊಂದಿಗೆ ಮರ್ಜ್ ಮಾಡುವೆವು. |
01:55 | ಈ ಟ್ಯುಟೋರಿಯಲ್ ನಲ್ಲಿ, ಬ್ರಾಂಚ್ ಹೇಗೆ ಕೆಲಸ ಮಾಡುವುದೆಂದು ನಾನು ಪ್ರದರ್ಶಿಸುವೆನು. 'ಮರ್ಜಿಂಗ್' ಅನ್ನು (Merging) ಮುಂದಿನ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗುವುದು. |
02:03 | ಟರ್ಮಿನಲ್ ಅನ್ನು ಓಪನ್ ಮಾಡಲು 'Ctrl+Alt+T' ಕೀಗಳನ್ನು ಒತ್ತಿ. |
02:07 | ನಾವು ಈಮೊದಲು ಕ್ರಿಯೇಟ್ ಮಾಡಿರುವ ನಮ್ಮ ಗಿಟ್ ರಿಪಾಸಿಟರಿ 'mywebpage' ಅನ್ನು ತೆರೆಯುವೆವು. |
02:13 | ಹೀಗೆ ಟೈಪ್ ಮಾಡಿ: 'cd space mywebpage' ಮತ್ತು 'Enter' ಅನ್ನು ಒತ್ತಿ. |
02:19 | ಪ್ರದರ್ಶಿಸುವುದಕ್ಕಾಗಿ, ನಾನು 'html' ಫೈಲ್ ಗಳನ್ನು ಬಳಸುವುದನ್ನು ಮುಂದುವರೆಸುವೆನು. ನೀವು ನಿಮಗಿಷ್ಟವಾದ ಯಾವುದೇ ಪ್ರಕಾರದ ಫೈಲನ್ನು ಬಳಸಬಹುದು. |
02:28 | ನಾವು 'git space log space hyphen hyphen oneline' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ, 'ಗಿಟ್ ಲಾಗ್' ಅನ್ನು ಪರೀಕ್ಷಿಸೋಣ. |
02:37 | ಮೊದಲು ನಾವು, ರಿಪಾಸಿಟರಿಯಲ್ಲಿ ಯಾವುದಾದರೂ 'ಬ್ರಾಂಚ್' ಇದೆಯೇ ಎಂದು ಪರೀಕ್ಷಿಸುವೆವು. |
02:43 | 'git space branch' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ. |
02:48 | ಮೊದಲೇ ಹೇಳಿದಂತೆ, ಅದು 'master' ಎಂಬ ಡೀಫಾಲ್ಟ್ ಬ್ರಾಂಚ್ ಅನ್ನು ತೋರಿಸುತ್ತದೆ. |
02:53 | ಈಗ, ನನಗೆ “new-chapter” ಎಂಬ ಹೆಸರಿನ ಒಂದು 'ಬ್ರಾಂಚ್' ಅನ್ನು ಕ್ರಿಯೇಟ್ ಮಾಡಬೇಕಾಗಿದೆ ಎಂದುಕೊಳ್ಳಿ. |
02:57 | ಹೀಗೆ ಟೈಪ್ ಮಾಡಿ: ' git space branch space new-chapter' ಮತ್ತು ‘Enter’ ಅನ್ನು ಒತ್ತಿ. |
03:04 | ನಾವು 'git space branch' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ, 'ಬ್ರಾಂಚ್ ಲಿಸ್ಟ್' ಅನ್ನು ನೋಡೋಣ. |
03:12 | ಇಲ್ಲಿ, ಲಿಸ್ಟ್ ನಲ್ಲಿ, “new-chapter” ಎಂಬ ಬ್ರಾಂಚ್ ಅನ್ನು ನಾವು ನೋಡಬಹುದು. |
03:16 | ನಾವು 'ಮಾಸ್ಟರ್ ಬ್ರಾಂಚ್' ನೊಂದಿಗೆ ಅಸ್ಟೆರಿಸ್ಕ್ ಚಿಹ್ನೆಯನ್ನು ಸಹ ನೋಡಬಹುದು. |
03:20 | ಇದು, ಸಧ್ಯಕ್ಕೆ ನಾವು 'ಮಾಸ್ಟರ್ ಬ್ರಾಂಚ್' ನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಸೂಚಿಸುತ್ತದೆ. |
03:25 | “new-chapter” ಬ್ರಾಂಚ್ ನ ಒಳಗೆ ಹೋಗಲು, ಹೀಗೆ ಟೈಪ್ ಮಾಡಿ: 'git space checkout space new-chapter' ಮತ್ತು ‘Enter’ ಅನ್ನು ಒತ್ತಿ. |
03:36 | ಬ್ರಾಂಚ್ ನ ಹೆಸರನ್ನು ಪರಿಶೀಲಿಸಲು, 'git space branch' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ. |
03:42 | ಈಗ ನಾವು “new-chapter” ಬ್ರಾಂಚ್ ನಲ್ಲಿ ಇದ್ದೇವೆ ಎಂದು ಆಸ್ಟೆರಿಸ್ಕ್ ಅನ್ನು ನೋಡಿ ತಿಳಿದುಕೊಳ್ಳಬಹುದು. |
03:49 | ನಂತರ, ನಾನು 'story.html' ಎಂಬ ಒಂದು html ಫೈಲನ್ನು ಕ್ರಿಯೇಟ್ ಮಾಡುವೆನು ಮತ್ತು ಪ್ರದರ್ಶಿಸುವ ಉದ್ದೇಶಕ್ಕಾಗಿ ಅದನ್ನು ‘ಕಮಿಟ್’ ಮಾಡುವೆನು. |
03:57 | ಹೀಗೆ ಟೈಪ್ ಮಾಡಿ: 'gedit space story.html space ampersand' ಮತ್ತು ‘Enter’ ಅನ್ನು ಒತ್ತಿ. |
04:05 | ಮೊದಲು ನಾನು ಸೇವ್ ಮಾಡಿದ್ದ ನನ್ನ 'Writer' ಡಾಕ್ಯೂಮೆಂಟ್ ನಿಂದ, ಈ ಫೈಲ್ ನಲ್ಲಿ ಸ್ವಲ್ಪ ಕೋಡ್ ಅನ್ನು ಕಾಪಿ ಮತ್ತು ಪೇಸ್ಟ್ ಮಾಡುವೆನು. |
04:12 | ಫೈಲನ್ನು ಸೇವ್ ಮಾಡಿ ಮುಚ್ಚಿಬಿಡಿ. |
04:15 | ನೆನಪಿಡಿ, ನಾವು ಯಾವುದೇ ಫೈಲನ್ನು ಸೇರಿಸಿದಾಗ ಅಥವಾ ತೆಗೆದುಹಾಕಿದಾಗಲೆಲ್ಲ ನಮ್ಮ ಕೆಲಸವನ್ನು ‘ಕಮಿಟ್’ ಮಾಡಲೇಬೇಕು. |
04:21 | ಫೈಲನ್ನು 'ಸ್ಟೇಜಿಂಗ್ ಏರಿಯಾ' ಗೆ ಸೇರಿಸಲು, ಹೀಗೆ ಟೈಪ್ ಮಾಡಿ: 'git space add space story.html' ಮತ್ತು ‘Enter’ ಅನ್ನು ಒತ್ತಿ. |
04:31 | ನಮ್ಮ ಕೆಲಸವನ್ನು ‘ಕಮಿಟ್’ ಮಾಡಲು, ಹೀಗೆ ಟೈಪ್ ಮಾಡಿ: 'git space commit space hyphen m space' ಡಬಲ್ ಕೋಟ್ಸ್ ನಲ್ಲಿ “Added story.html in new-chapter branch” ಮತ್ತು ‘Enter’ ಅನ್ನು ಒತ್ತಿ. |
04:47 | ನಾವು 'git space log space hyphen hyphen oneline' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ, “new-chapter” ಎಂಬ ಬ್ರಾಂಚ್ ನ 'ಗಿಟ್-ಲಾಗ್' ಅನ್ನು ಪರೀಕ್ಷಿಸೋಣ. |
04:57 | ಇಲ್ಲಿ ನಾವು, “Added story.html in new-chapter branch” ಎಂಬ ನಮ್ಮ ಇತ್ತೀಚಿನ ‘ಕಮಿಟ್’ಅನ್ನು ನೋಡಬಹುದು. |
05:04 | ಈಗ, ಸ್ವಲ್ಪ ಕೆಲಸಮಾಡಲು ನಮಗೆ ನಮ್ಮ 'ಮಾಸ್ಟರ್ ಬ್ರಾಂಚ್'ಗೆ ಹಿಂದಿರುಗಬೇಕಾಗಿದೆ ಎಂದುಕೊಳ್ಳೋಣ. |
05:10 | ಆದ್ದರಿಂದ, ನಾವು 'git space checkout space master' ಎಂದು ಟೈಪ್ ಮಾಡಿ, ‘Enter’ ಅನ್ನು ಒತ್ತುವೆವು. |
05:18 | 'ಗಿಟ್ ಲಾಗ್' ಅನ್ನು ಪರೀಕ್ಷಿಸಲು, ಹೀಗೆ ಟೈಪ್ ಮಾಡಿ: 'git space log space hyphen hyphen oneline' ಮತ್ತು ‘Enter’ ಅನ್ನು ಒತ್ತಿ. |
05:27 | ಇಲ್ಲಿ, ನಾವು “Added story.html in new-chapter branch” ಎಂಬ ‘ಕಮಿಟ್’ ಅನ್ನು ನೋಡಲು ಸಾಧ್ಯವಿಲ್ಲ. |
05:34 | ಏಕೆಂದರೆ, ಆ ‘ಕಮಿಟ್’, “new-chapter” ಬ್ರಾಂಚ್ ಗೆ ಮಾತ್ರ ಸೇರಿದೆ. |
05:39 | ನಾವು “ls” ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ, ಫೋಲ್ಡರ್ ನಲ್ಲಿ ಇರುವುದನ್ನು ಪರೀಕ್ಷಿಸೋಣ. |
05:45 | ಇಲ್ಲಿ, ನಾವು 'story.html' ಎಂಬ ಫೈಲನ್ನು ಸಹ ನೋಡಲು ಸಾಧ್ಯವಿಲ್ಲ. |
05:49 | ಆಮೇಲೆ, ನಾವು 'history.html' ಎಂಬ ಫೈಲ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವೆವು. |
05:55 | 'gedit space history.html space ampersand' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ, ನಾವು ಫೈಲನ್ನು ತೆರೆಯೋಣ. |
06:05 | ನಾವು ಇದರಲ್ಲಿ ಕೆಲವು ಸಾಲುಗಳನ್ನು ಸೇರಿಸೋಣ. |
06:08 | ಫೈಲನ್ನು ಸೇವ್ ಮಾಡಿ, ಮುಚ್ಚಿಬಿಡಿ. |
06:10 | ಈ ಘಟ್ಟದಲ್ಲಿ, 'git space commit space hyphen am space' ಡಬಲ್ ಕೋಟ್ಸ್ ನಲ್ಲಿ “Added chapter two in history.html” ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ, ನಾವು ನಮ್ಮ ಕೆಲಸವನ್ನು ‘ಕಮಿಟ್’ ಮಾಡೋಣ. |
06:26 | ಇಲ್ಲಿಯವರೆಗೆ, ನಾವು 'ಮಾಸ್ಟರ್ ಬ್ರಾಂಚ್' ನೊಂದಿಗೆ ಕೆಲಸ ಮಾಡುತ್ತಿದ್ದೇವೆ. |
06:30 | ಈಗ, ಈ ‘ಕಮಿಟ್’, 'new-chapter' ಎಂಬ ಬ್ರಾಂಚ್ ನಲ್ಲಿ ಕಾಣಿಸಿಕೊಂಡಿದೆಯೇ ಎಂಬುದನ್ನು ನಾವು ಪರೀಕ್ಷಿಸೋಣ. |
06:36 | “new-chapter” ಬ್ರಾಂಚ್ ನಲ್ಲಿ ಹೋಗಲು, ಹೀಗೆ ಟೈಪ್ ಮಾಡಿ: 'git space checkout space new-chapter' ಮತ್ತು ‘Enter’ ಅನ್ನು ಒತ್ತಿ. |
06:46 | ನಾವು 'git space log space hyphen hyphen oneline' ಎಂದು ಟೈಪ್ ಮಾಡಿ, ‘Enter’ ಅನ್ನು ಒತ್ತಿ 'ಗಿಟ್ ಲಾಗ್' ಅನ್ನು ಪರೀಕ್ಷಿಸೋಣ. |
06:55 | ಇಲ್ಲಿ, ನಾವು “Added chapter two in history.html” ಎಂಬ ‘ಕಮಿಟ್’ಅನ್ನು ನೋಡಲು ಸಾಧ್ಯವಿಲ್ಲ. ಏಕೆಂದರೆ ಅದು 'ಮಾಸ್ಟರ್ ಬ್ರಾಂಚ್' ನಲ್ಲಿ ಇರುತ್ತದೆ. |
07:04 | ನಾವು 'story.html' ಎಂಬ ನಮ್ಮ ಫೈಲ್ ನಲ್ಲಿ ಕೆಲವು ಸಾಲುಗಳನ್ನು ಸೇರಿಸೋಣ. ಹೀಗೆ ಟೈಪ್ ಮಾಡಿ: 'gedit space story.html space ampersand' ಮತ್ತು ‘Enter’ ಅನ್ನು ಒತ್ತಿ. |
07:16 | ನಾನು, ನನ್ನ 'Writer' ಎಂಬ ಡಾಕ್ಯೂಮೆಂಟ್ ನಿಂದ ಕೆಲವು ಸಾಲುಗಳನ್ನು ಸೇರಿಸುವೆನು. |
07:20 | ಫೈಲನ್ನು ಸೇವ್ ಮಾಡಿ, ಕ್ಲೋಸ್ ಮಾಡಿ. |
07:22 | 'ಗಿಟ್ ಸ್ಟ್ಯಾಟಸ್' ಅನ್ನು ಪರೀಕ್ಷಿಸಲು, 'git space status' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ. |
07:29 | ನಾವು ಈ ಹಂತದಲ್ಲಿ ನಮ್ಮ ಕೆಲಸವನ್ನು ‘ಕಮಿಟ್’ ಮಾಡಿಲ್ಲ ಎಂಬುದನ್ನು ಗಮನಿಸಿ. |
07:33 | ನಾವು ‘ಕಮಿಟ್’ ಮಾಡದೇ ಬ್ರಾಂಚ್ ಅನ್ನು ಬದಲಾಯಿಸಲು ಪ್ರಯತ್ನಿಸಿದರೆ ಏನಾಗಬಹುದು ಎಂದು ನಿಮಗೆ ತಿಳಿದಿದೆಯೇ? ಇದು ಎರರ್ ಗೆ ದಾರಿಯಾಗುತ್ತದೆ. |
07:41 | ನಾವು 'master' ಬ್ರಾಂಚ್ ಗೆ ಹಿಂದಿರುಗಲು ಪ್ರಯತ್ನಿಸೋಣ. ಹೀಗೆ ಟೈಪ್ ಮಾಡಿ: 'git space checkout space master' ಮತ್ತು ‘Enter’ ಅನ್ನು ಒತ್ತಿ. |
07:51 | ಬದಲಾವಣೆಗಳನ್ನು ‘ಕಮಿಟ್’ ಮಾಡದೇ ಇತರ ಬ್ರಾಂಚ್ ಗಳಿಗೆ ನಾವು ಮತ್ತೆ ಬದಲಾಯಿಸಲು ಸಾಧ್ಯವಿಲ್ಲ ಎಂಬುದನ್ನು ಈ ಎರರ್ ತೋರಿಸುತ್ತದೆ. |
07:59 | ಒಂದುವೇಳೆ, ಈ ಹಂತದಲ್ಲಿ ಬದಲಾವಣೆಗಳು ಮುಖ್ಯವಾಗಿಲ್ಲ ಎಂದು ನನಗೆ ಅವುಗಳನ್ನು ‘ಕಮಿಟ್’ ಮಾಡುವುದು ಬೇಡವಾಗಿದ್ದರೆ? 'ಸ್ಟ್ಯಾಶಿಂಗ್' ಅನ್ನು ಬಳಸಿ ಇದನ್ನು ಮಾಡಬಹುದು. |
08:08 | ನಾವು ಸ್ಟ್ಯಾಶಿಂಗ್ (stashing) ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿಯುವೆವು. |
08:13 | ಸಧ್ಯಕ್ಕೆ, ನಾವು 'hyphen hyphen force' ಎಂಬ ಫ್ಲ್ಯಾಗ್ ಅನ್ನು ಬಳಸಿ ಬಲವಂತವಾಗಿ ಈ 'ಬ್ರಾಂಚ್' ನಿಂದ ಹೊರಬರುವೆವು. |
08:19 | ಹೀಗೆ ಟೈಪ್ ಮಾಡಿ: 'git space checkout space hyphen hyphen force space master' ಮತ್ತು ‘Enter’ ಅನ್ನು ಒತ್ತಿ. |
08:28 | ಮತ್ತೊಮ್ಮೆ, ಬದಲಾವಣೆಗಳನ್ನು ತ್ಯಜಿಸಲಾಗಿದೆಯೇ, ಇಲ್ಲವೇ ಎಂಬುದನ್ನು ಪರೀಕ್ಷಿಸಲು, ನಾವು “new-chapter” ಬ್ರಾಂಚ್' ಗೆ ಹಿಂದಿರುಗುವೆವು. |
08:36 | ಹೀಗೆ ಟೈಪ್ ಮಾಡಿ: 'git space checkout space new-chapter' ಮತ್ತು ‘Enter’ ಅನ್ನು ಒತ್ತಿ. |
08:42 | ನಾವು 'gedit space story.html space ampersand' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ, 'story.html' ಎಂಬ ಫೈಲನ್ನು ತೆರೆಯೋಣ. |
08:54 | ಇಲ್ಲಿ ನಮ್ಮ ಬದಲಾವಣೆಗಳನ್ನು ತ್ಯಜಿಸಲಾಗಿರುವುದನ್ನು ನಾವು ನೋಡಬಹುದು. ನಾವು ಜಿ-ಎಡಿಟ್ ಅನ್ನು ಕ್ಲೋಸ್ ಮಾಡೋಣ. |
09:01 | ಮುಂದಿನ ಟ್ಯುಟೊರಿಯಲ್ ನಲ್ಲಿ, ಈ “new-chapter” ಬ್ರಾಂಚ್ ಅನ್ನು ಮಾಸ್ಟರ್ ಬ್ರಾಂಚ್ ನೊಂದಿಗೆ ಮರ್ಜ್ ಮಾಡಲು ನಾವು ಕಲಿಯುವೆವು. |
09:07 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
09:11 | ಸಂಕ್ಷಿಪ್ತವಾಗಿ, |
09:12 | ಈ ಟ್ಯುಟೋರಿಯಲ್ ನಲ್ಲಿ ನಾವು:
|
09:23 | ಒಂದು ಅಸೈನ್ಮೆಂಟ್- “chapter-two” ಎಂಬ ಹೆಸರಿನ ಒಂದು ಬ್ರಾಂಚ್ ಅನ್ನು ಕ್ರಿಯೇಟ್ ಮಾಡಿ. |
09:28 | ಈ “chapter-two” ಬ್ರಾಂಚ್ ನ ಒಳಗೆ ಹೋಗಿ. |
09:31 | ಕೆಲವು ‘ಕಮಿಟ್’ ಗಳನ್ನು ಮಾಡಿ. |
09:33 | 'master' ಬ್ರಾಂಚ್ ಗೆ ಹಿಂದಿರುಗಿ. |
09:36 | 'ಗಿಟ್-ಲಾಗ್' ಅನ್ನು ಪರೀಕ್ಷಿಸಿ ಮತ್ತು 'master' ಬ್ರಾಂಚ್ ನಲ್ಲಿ ನೀವು “chapter-two” ಎಂಬ ಬ್ರಾಂಚ್ ನ ‘ಕಮಿಟ್’ ಗಳನ್ನು ನೋಡಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ. |
09:44 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
09:52 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:59 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
contact@spoken-tutorial.org |
10:03 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: [1] |
10:15 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..
ವಂದನೆಗಳು. |