PERL/C2/Conditional-statements/Kannada
From Script | Spoken-Tutorial
Revision as of 15:46, 31 July 2016 by Vasudeva ahitanal (Talk | contribs)
Time | Narration |
00:01 | Perl ನಲ್ಲಿ if and if-else conditional statements ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, Perl ನ |
00:09 | * 'if ' ಸ್ಟೇಟ್ಮೆಂಟ್ ಮತ್ತು |
00:11 | * ‘if-else’ ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿಯುವೆವು. |
00:12 | ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ Perl 5.14.2 ಇವುಗಳನ್ನು ಬಳಸುತ್ತಿದ್ದೇನೆ. |
00:20 | ನಾನು 'gedit Text Editor' (ಜಿ-ಎಡಿಟ್ ಟೆಕ್ಸ್ಟ್-ಎಡಿಟರ್) ಅನ್ನು ಸಹ ಬಳಸುತ್ತಿರುವೆನು. |
00:24 | ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು. |
00:28 | ನಿಮಗೆ Perl (ಪರ್ಲ್) ನಲ್ಲಿ ‘ವೇರಿಯೆಬಲ್’ ಮತ್ತು ‘ಕಾಮೆಂಟ್’ ಗಳ ಬಗ್ಗೆ ತಿಳಿದಿರುವುದು ಅವಶ್ಯಕ. |
00:33 | Perl ನಲ್ಲಿ, 'for', 'foreach' , 'while' ಮತ್ತು 'do-while' ಲೂಪ್ ಗಳ ಬಗ್ಗೆ ತಿಳಿದಿದ್ದರೆ ಇನ್ನೂ ಹೆಚ್ಚು ಲಾಭಕರ. |
00:40 | ಸಂಬಂಧಿತ ಸ್ಪೋಕನ್-ಟ್ಯುಟೋರಿಯಲ್ ಗಳನ್ನು ದಯವಿಟ್ಟು Spoken Tutorial ವೆಬ್ಸೈಟ್ ನಲ್ಲಿ ನೋಡಿ. |
00:45 | ಪರ್ಲ್, ಈ ಕೆಳಗಿನ ‘ಕಂಡಿಶನಲ್ ಸ್ಟೇಟ್ಮೆಂಟ್’ಗಳನ್ನು ಒದಗಿಸುತ್ತದೆ. |
00:49 | * ‘if ’ |
00:50 | * ‘if-else’ |
00:51 | * ‘if-elsif-else’ ಮತ್ತು |
00:53 | * ‘switch’. |
00:54 | ಈ ಟ್ಯುಟೋರಿಯಲ್ ನಲ್ಲಿ, ನಾವು ‘if ’ ಹಾಗೂ ‘if-else’ ಸ್ಟೇಟ್ಮೆಂಟ್’ಗಳನ್ನು ನೋಡುವೆವು. |
00:59 | ಪರ್ಲ್ ನಲ್ಲಿ, |
01:01 | ನಿಗದಿಪಡಿಸಿದ ಒಂದು ಕಂಡಿಶನ್ ನಿಜವಾಗಿದ್ದಾಗ ಮಾತ್ರ ಕೋಡ್ ನ ಒಂದು ಭಾಗವನ್ನು ಎಕ್ಸಿಕ್ಯೂಟ್ ಮಾಡಲು, ‘if ’ ಸ್ಟೇಟ್ಮೆಂಟ್ ಅನ್ನು ಬಳಸಬಹುದು. |
01:07 | ‘if ’ ‘ಕಂಡಿಶನಲ್ ಸ್ಟೇಟ್ಮೆಂಟ್’ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ. |
01:11 | if ಸ್ಪೇಸ್ ಓಪನ್ ಬ್ರಾಕೆಟ್ ಕಂಡಿಶನ್ ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ |
01:19 | Enter |
01:20 | ಪೀಸ್ ಆಫ್ ಕೋಡ್ ಸೆಮಿಕೋಲನ್, ಇದು ಕಂಡಿಶನ್ TRUE ಇದ್ದಾಗ ಎಕ್ಸಿಕ್ಯೂಟ್ ಮಾಡಬೇಕಾದ ಕೋಡ್ ನ ಭಾಗ. |
01:25 | Enter, ಕ್ಲೋಸ್ ಕರ್ಲಿ ಬ್ರಾಕೆಟ್. |
01:29 | ಕಂಡಿಶನ್ TRUE ಇದ್ದಾಗ ಮಾತ್ರ, ‘if ’ ಸ್ಟೇಟ್ಮೆಂಟ್ ನ ಒಳಗೆ ಇರುವ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುವುದು. |
01:36 | ಈಗ, ನಾವು ‘if ’ ಸ್ಟೇಟ್ಮೆಂಟ್ ನ ಒಂದು ಉದಾಹರಣೆಯನ್ನು ನೋಡೋಣ. |
01:40 | ‘ಟರ್ಮಿನಲ್’ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: |
01:43 | 'gedit conditionalBlocks ಡಾಟ್ pl' ಸ್ಪೇಸ್ & (ಆಂಪರ್ಸಂಡ್ ) |
01:49 | ಮತ್ತು Enter ಅನ್ನು ಒತ್ತಿ. |
01:52 | ಇದು, ‘gedit’ ನಲ್ಲಿ 'conditionalBlocks.pl' ಎಂಬ ಫೈಲನ್ನು ಓಪನ್ ಮಾಡುವುದು. |
01:57 | ಈ ಕೆಳಗಿನ ಕೋಡ್ ನ ಭಾಗವನ್ನು, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ. |
02:02 | ಇಲ್ಲಿ ನಾವು ‘if’ ಗಾಗಿ ಒಂದು ಕಂಡಿಶನ್ ಅನ್ನು ಸೂಚಿಸಿದ್ದೇವೆ. ಇದು, ‘count’ ಎಂಬ ವೇರಿಯೆಬಲ್ ನ ವ್ಯಾಲ್ಯೂ ಅನ್ನು ಪರೀಕ್ಷಿಸುತ್ತದೆ. |
02:09 | ಇಲ್ಲಿಯ ‘ಇಕ್ವಲ್ ಟು ಇಕ್ವಲ್ ಟು (==)’ ಚಿನ್ಹೆಯನ್ನು ಗಮನಿಸಿ. ಇದು ಹೋಲಿಕೆಯ ಚಿಹ್ನೆಯಾಗಿದೆ (comparison operator). |
02:15 | ‘count’ ವೇರಿಯೆಬಲ್ ನ ವ್ಯಾಲ್ಯೂವನ್ನು, ‘$count ಇಕ್ವಲ್ ಟು ಇಕ್ವಲ್ ಟು 5’ ಎಂಬ ಕಂಡಿಶನ್ ಗಾಗಿ ಪರೀಕ್ಷಿಸಲಾಗುತ್ತದೆ. |
02:23 | ಅದು 5 ಕ್ಕೆ (ಐದು) ಸಮವಿದ್ದಾಗ, ‘if’ ಬ್ಲಾಕ್ ನ ಒಳಗಿರುವ ಕೋಡ್, ಎಕ್ಸಿಕ್ಯೂಟ್ ಮಾಡಲ್ಪಡುವುದು. |
02:28 | ಈಗ, ಫೈಲನ್ನು ಸೇವ್ ಮಾಡಲು 'Ctrl+s' ಒತ್ತಿ. |
02:32 | ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ. |
02:36 | ನೀವು ನಿಮ್ಮ ಫೈಲನ್ನು ಸೇವ್ ಮಾಡಿದ ಡೈರೆಕ್ಟರಿಯಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳಿ. |
02:41 | ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಗಳನ್ನು ಪರೀಕ್ಷಿಸಲು, ಈ ಕೆಳಗಿನಂತೆ ಟೈಪ್ ಮಾಡಿ. |
02:46 | 'perl ಹೈಫನ್ c conditionalBlocks ಡಾಟ್ pl' |
02:53 | ಮತ್ತು Enter ಅನ್ನು ಒತ್ತಿ. |
02:55 | ‘ಟರ್ಮಿನಲ್ ವಿಂಡೋ’ದ ಮೇಲೆ, ಈ ಕೆಳಗಿನ ಸಾಲನ್ನು ತೋರಿಸಲಾಗುವುದು. |
02:59 | "conditionalBlocks.pl syntax OK". |
03:04 | ಇಲ್ಲಿ, ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಇಲ್ಲದೇ ಇರುವುದರಿಂದ, ನಾವು Perl ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡುವೆವು. ಇದಕ್ಕಾಗಿ ಹೀಗೆ ಟೈಪ್ ಮಾಡಿ. |
03:10 | 'perl conditionalBlocks ಡಾಟ್ pl' |
03:14 | ಮತ್ತು Enter ಅನ್ನು ಒತ್ತಿ. |
03:16 | ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು. |
03:19 | "I am inside if statement". |
03:23 | ‘gedit’ ಗೆ ಬದಲಾಯಿಸಿ. |
03:26 | ಪರ್ಯಾಯವಾಗಿ, ಮೇಲಿನ ‘if’ ಸ್ಟೇಟ್ಮೆಂಟ್ ಅನ್ನು ನಾವು ಹೀಗೆ ಬರೆಯಬಹುದು. |
03:31 | print ಸ್ಪೇಸ್ ಡಬಲ್ ಕೋಟ್ಸ್ I am inside if statement ಬ್ಯಾಕ್-ಸ್ಲ್ಯಾಶ್ n ಕ್ಲೋಸ್ ಡಬಲ್ ಕೋಟ್ಸ್ ಸ್ಪೇಸ್ if ಸ್ಪೇಸ್ ಓಪನ್ ಬ್ರಾಕೆಟ್ ಡಾಲರ್ count ಸ್ಪೇಸ್ ಇಕ್ವಲ್ ಟು ಇಕ್ವಲ್ ಟು ಸ್ಪೇಸ್ 5 ಕ್ಲೋಸ್ ಬ್ರಾಕೆಟ್ ಸೆಮಿಕೋಲನ್. |
03:57 | ಈಗ, ನಾವು ‘if-else’ ಸ್ಟೇಟ್ಮೆಂಟ್ ಅನ್ನು ನೋಡೋಣ. |
04:01 | ಯೂಸರ್ ನಿಗೆ, |
04:06 | ಯಾವುದೋ ಒಂದು ಕಂಡಿಶನ್ ‘True’ ಇದ್ದಾಗ, ಕೋಡ್ ನ ಒಂದು ಭಾಗವನ್ನು ಮತ್ತು ಆ ಕಂಡಿಶನ್ ‘False’ ಇದ್ದಾಗ ಕೋಡ್ ನ ಇನ್ನೊಂದು ಭಾಗವನ್ನು ಎಕ್ಸಿಕ್ಯೂಟ್ ಮಾಡಬೇಕಾದಾಗ, ಈ ಸ್ಟೇಟ್ಮೆಂಟ್ ಅನ್ನು ಬಳಸಲಾಗುತ್ತದೆ. |
04:13 | ‘if-else’ ಕಂಡಿಶನ್ ಗಾಗಿ, ಸಿಂಟ್ಯಾಕ್ಸ್ ಈ ಕೆಳಗಿನಂತಿದೆ: |
04:17 | 'if' ಸ್ಪೇಸ್ ಓಪನ್ ಬ್ರಾಕೆಟ್ 'ಕಂಡಿಶನ್' ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್. 'Enter' ಅನ್ನು ಒತ್ತಿ. |
04:27 | ಪೀಸ್ ಆಫ್ ಕೋಡ್ (ಕೋಡ್ ನ ಒಂದು ಭಾಗ) ಸೆಮಿಕೋಲನ್. |
04:29 | 'if ' ಕಂಡಿಶನ್ TRUE ಇದ್ದಾಗ ಮಾತ್ರ ಎಕ್ಸಿಕ್ಯೂಟ್ ಮಾಡಬೇಕಾದ ಕೋಡ್ ನ ಭಾಗ. |
04:32 | Enter ಅನ್ನು ಒತ್ತಿ. |
04:34 | ಕ್ಲೋಸ್ ಕರ್ಲಿ ಬ್ರಾಕೆಟ್ ಸ್ಪೇಸ್ ‘else’ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ 'Enter' |
04:41 | ಕೋಡ್ ನ ಇನ್ನೊಂದು ಭಾಗ, ಸೆಮಿಕೋಲನ್. |
04:43 | ಇದು, 'if' ಕಂಡಿಶನ್ FALSE ಇದ್ದಾಗ ಎಕ್ಸಿಕ್ಯೂಟ್ ಮಾಡಬೇಕಾದ ಕೋಡ್ ನ ಭಾಗ. |
04:47 | 'Enter' ಅನ್ನು ಒತ್ತಿ. ಕರ್ಲಿ ಬ್ರಾಕೆಟ್ ಮುಚ್ಚಿ. |
04:51 | ನಾವು ಈಗಾಗಲೇ 'gedit' ನಲ್ಲಿ ಕ್ರಿಯೇಟ್ ಮಾಡಿರುವ 'conditionalBlocks.pl' ಎಂಬ ಫೈಲ್ ಗೆ ಈಗ ಮತ್ತೊಮ್ಮೆ ಹೋಗೋಣ. |
04:58 | ‘count’ ವೇರಿಯೆಬಲ್ ಗೆ 4 (ನಾಲ್ಕು) ಅನ್ನು ಅಸೈನ್ ಮಾಡಿ (ನಿಗದಿಪಡಿಸಿ). ಆಮೇಲೆ, 'if' ಬ್ಲಾಕ್ ನ ಕೊನೆಗೆ ಹೀಗೆ ಟೈಪ್ ಮಾಡಿ: ಸ್ಪೇಸ್ |
05:07 | ‘else’ |
05:09 | ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್, Enter ಅನ್ನು ಒತ್ತಿ. |
05:14 | 'print' ಸ್ಪೇಸ್ ಡಬಲ್ ಕೋಟ್ಸ್ “I am inside else statement ಬ್ಯಾಕ್-ಸ್ಲ್ಯಾಶ್ n” ಡಬಲ್ ಕೋಟ್ಸ್ ಕಂಪ್ಲೀಟ್ ಸೆಮಿಕೋಲನ್. |
05:30 | 'Enter' ಅನ್ನು ಒತ್ತಿ ಮತ್ತು ಕರ್ಲಿ ಬ್ರಾಕೆಟ್ ಮುಚ್ಚಿ (close). |
05:34 | ಇಲ್ಲಿ, $count ಎಂಬ ವೇರಿಯೆಬಲ್ ಗೆ 4 (ನಾಲ್ಕು) ಅನ್ನು ಅಸೈನ್ ಮಾಡಲಾಗಿದೆ. |
05:38 | ‘count’ ವೇರಿಯೆಬಲ್ ನ ವ್ಯಾಲ್ಯೂ 5 ಆಗಿಲ್ಲ. ಆದ್ದರಿಂದ |
05:43 | 'if ' ಬ್ಲಾಕ್ ನ ಒಳಗಿರುವ ಕೋಡ್, ಎಕ್ಸಿಕ್ಯೂಟ್ ಮಾಡಲ್ಪಡುವುದಿಲ್ಲ. |
05:47 | ಅದರ ಬದಲಾಗಿ, 'else' ಬ್ಲಾಕ್ ನ ಒಳಗಿರುವ ಕೋಡ್, ಎಕ್ಸಿಕ್ಯೂಟ್ ಮಾಡಲ್ಪಡುವುದು. |
05:52 | ಈಗ, ಫೈಲನ್ನು ಸೇವ್ ಮಾಡಲು 'Ctrl+S' ಒತ್ತಿ. |
05:56 | ಈಗ ‘ಟರ್ಮಿನಲ್’ಗೆ ಬದಲಾಯಿಸಿ. |
05:59 | ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಗಳನ್ನು ಪರೀಕ್ಷಿಸಲು, ಹೀಗೆ ಟೈಪ್ ಮಾಡಿ: 'perl ಹೈಫನ್ c conditionalBlocks ಡಾಟ್ pl'. |
06:11 | ಈಗ Enter ಅನ್ನು ಒತ್ತಿ. |
06:13 | ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಸಾಲನ್ನು ತೋರಿಸಲಾಗುವುದು. |
06:17 | "conditionalBlocks.pl syntax OK" |
06:20 | ಇಲ್ಲಿ, ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಇಲ್ಲದೇ ಇರುವುದರಿಂದ, ಈಗ ನಾವು Perl ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡುವೆವು. |
06:27 | ಹೀಗೆ ಟೈಪ್ ಮಾಡಿ: 'perl conditionalBlocks ಡಾಟ್ pl' |
06:33 | ಮತ್ತು Enter ಅನ್ನು ಒತ್ತಿ. |
06:35 | ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು. |
06:39 | "I am inside else statement". |
06:44 | ಸಂಕ್ಷಿಪ್ತವಾಗಿ - |
06:46 | ಈ ಟ್ಯುಟೋರಿಯಲ್ ನಲ್ಲಿ ನಾವು, ಮಾದರಿಯ ಪ್ರೊಗ್ರಾಂಗಳನ್ನು ಬಳಸಿ Perl ನ |
06:49 | 'if' ಮತ್ತು |
06:50 | 'if-else' ಎಂಬ ಕಂಡಿಶನಲ್ ಸ್ಟೇಟ್ಮೆಂಟ್ ಗಳನ್ನು ಕಲಿತಿದ್ದೇವೆ. |
06:55 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. |
06:57 | ಡಿಕ್ಲೇರ್ ಮಾಡಿದ ವೇರಿಯೆಬಲ್ ನ ವ್ಯಾಲ್ಯೂ 'Perl' ಎಂದು ಇದ್ದಾಗ, |
07:01 | “It is an open source language” ಎಂದು ಪ್ರಿಂಟ್ ಮಾಡಿ. |
07:04 | ಇಲ್ಲದಿದ್ದರೆ, “It's a proprietary language” ಎಂದು ಪ್ರಿಂಟ್ ಮಾಡಿ. |
07:08 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
07:11 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
07:15 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
07:20 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
07:22 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
07:26 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:31 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
07:37 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
07:42 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
07:50 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro. |
08:00 | ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ. |
08:04 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ . |
08:06 | ವಂದನೆಗಳು. |