PERL/C2/Conditional-statements/Kannada

From Script | Spoken-Tutorial
Jump to: navigation, search
Time Narration
00:01 Perl ನಲ್ಲಿ if and if-else conditional statements ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, Perl ನ
00:09 * 'if ' ಸ್ಟೇಟ್ಮೆಂಟ್ ಮತ್ತು
00:11 * ‘if-else’ ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿಯುವೆವು.
00:12 ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ Perl 5.14.2 ಇವುಗಳನ್ನು ಬಳಸುತ್ತಿದ್ದೇನೆ.
00:20 ನಾನು 'gedit Text Editor' (ಜಿ-ಎಡಿಟ್ ಟೆಕ್ಸ್ಟ್-ಎಡಿಟರ್) ಅನ್ನು ಸಹ ಬಳಸುತ್ತಿರುವೆನು.
00:24 ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು.
00:28 ನಿಮಗೆ Perl (ಪರ್ಲ್) ನಲ್ಲಿ ‘ವೇರಿಯೆಬಲ್’ ಮತ್ತು ‘ಕಾಮೆಂಟ್’ ಗಳ ಬಗ್ಗೆ ತಿಳಿದಿರುವುದು ಅವಶ್ಯಕ.
00:33 Perl ನಲ್ಲಿ, 'for', 'foreach' , 'while' ಮತ್ತು 'do-while' ಲೂಪ್ ಗಳ ಬಗ್ಗೆ ತಿಳಿದಿದ್ದರೆ ಇನ್ನೂ ಹೆಚ್ಚು ಲಾಭಕರ.
00:40 ಸಂಬಂಧಿತ ಸ್ಪೋಕನ್-ಟ್ಯುಟೋರಿಯಲ್ ಗಳನ್ನು ದಯವಿಟ್ಟು Spoken Tutorial ವೆಬ್ಸೈಟ್ ನಲ್ಲಿ ನೋಡಿ.
00:45 ಪರ್ಲ್, ಈ ಕೆಳಗಿನ ‘ಕಂಡಿಶನಲ್ ಸ್ಟೇಟ್ಮೆಂಟ್’ಗಳನ್ನು ಒದಗಿಸುತ್ತದೆ.
00:49 * ‘if ’
00:50 * ‘if-else’
00:51 * ‘if-elsif-else’ ಮತ್ತು
00:53 * ‘switch’.
00:54 ಈ ಟ್ಯುಟೋರಿಯಲ್ ನಲ್ಲಿ, ನಾವು ‘if ’ ಹಾಗೂ ‘if-else’ ಸ್ಟೇಟ್ಮೆಂಟ್’ಗಳನ್ನು ನೋಡುವೆವು.
00:59 ಪರ್ಲ್ ನಲ್ಲಿ,
01:01 ನಿಗದಿಪಡಿಸಿದ ಒಂದು ಕಂಡಿಶನ್ ನಿಜವಾಗಿದ್ದಾಗ ಮಾತ್ರ ಕೋಡ್ ನ ಒಂದು ಭಾಗವನ್ನು ಎಕ್ಸಿಕ್ಯೂಟ್ ಮಾಡಲು, ‘if ’ ಸ್ಟೇಟ್ಮೆಂಟ್ ಅನ್ನು ಬಳಸಬಹುದು.
01:07 ‘if ’ ‘ಕಂಡಿಶನಲ್ ಸ್ಟೇಟ್ಮೆಂಟ್’ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ.
01:11 if ಸ್ಪೇಸ್ ಓಪನ್ ಬ್ರಾಕೆಟ್ ಕಂಡಿಶನ್ ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್
01:19 Enter
01:20 ಪೀಸ್ ಆಫ್ ಕೋಡ್ ಸೆಮಿಕೋಲನ್, ಇದು ಕಂಡಿಶನ್ TRUE ಇದ್ದಾಗ ಎಕ್ಸಿಕ್ಯೂಟ್ ಮಾಡಬೇಕಾದ ಕೋಡ್ ನ ಭಾಗ.
01:25 Enter, ಕ್ಲೋಸ್ ಕರ್ಲಿ ಬ್ರಾಕೆಟ್.
01:29 ಕಂಡಿಶನ್ TRUE ಇದ್ದಾಗ ಮಾತ್ರ, ‘if ’ ಸ್ಟೇಟ್ಮೆಂಟ್ ನ ಒಳಗೆ ಇರುವ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುವುದು.
01:36 ಈಗ, ನಾವು ‘if ’ ಸ್ಟೇಟ್ಮೆಂಟ್ ನ ಒಂದು ಉದಾಹರಣೆಯನ್ನು ನೋಡೋಣ.
01:40 ‘ಟರ್ಮಿನಲ್’ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ:
01:43 'gedit conditionalBlocks ಡಾಟ್ pl' ಸ್ಪೇಸ್ & (ಆಂಪರ್ಸಂಡ್ )
01:49 ಮತ್ತು Enter ಅನ್ನು ಒತ್ತಿ.
01:52 ಇದು, ‘gedit’ ನಲ್ಲಿ 'conditionalBlocks.pl' ಎಂಬ ಫೈಲನ್ನು ಓಪನ್ ಮಾಡುವುದು.
01:57 ಈ ಕೆಳಗಿನ ಕೋಡ್ ನ ಭಾಗವನ್ನು, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ.
02:02 ಇಲ್ಲಿ ನಾವು ‘if’ ಗಾಗಿ ಒಂದು ಕಂಡಿಶನ್ ಅನ್ನು ಸೂಚಿಸಿದ್ದೇವೆ. ಇದು, ‘count’ ಎಂಬ ವೇರಿಯೆಬಲ್ ನ ವ್ಯಾಲ್ಯೂ ಅನ್ನು ಪರೀಕ್ಷಿಸುತ್ತದೆ.
02:09 ಇಲ್ಲಿಯ ‘ಇಕ್ವಲ್ ಟು ಇಕ್ವಲ್ ಟು (==)’ ಚಿನ್ಹೆಯನ್ನು ಗಮನಿಸಿ. ಇದು ಹೋಲಿಕೆಯ ಚಿಹ್ನೆಯಾಗಿದೆ (comparison operator).
02:15 ‘count’ ವೇರಿಯೆಬಲ್ ನ ವ್ಯಾಲ್ಯೂವನ್ನು, ‘$count ಇಕ್ವಲ್ ಟು ಇಕ್ವಲ್ ಟು 5’ ಎಂಬ ಕಂಡಿಶನ್ ಗಾಗಿ ಪರೀಕ್ಷಿಸಲಾಗುತ್ತದೆ.
02:23 ಅದು 5 ಕ್ಕೆ (ಐದು) ಸಮವಿದ್ದಾಗ, ‘if’ ಬ್ಲಾಕ್ ನ ಒಳಗಿರುವ ಕೋಡ್, ಎಕ್ಸಿಕ್ಯೂಟ್ ಮಾಡಲ್ಪಡುವುದು.
02:28 ಈಗ, ಫೈಲನ್ನು ಸೇವ್ ಮಾಡಲು 'Ctrl+s' ಒತ್ತಿ.
02:32 ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ.
02:36 ನೀವು ನಿಮ್ಮ ಫೈಲನ್ನು ಸೇವ್ ಮಾಡಿದ ಡೈರೆಕ್ಟರಿಯಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳಿ.
02:41 ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಗಳನ್ನು ಪರೀಕ್ಷಿಸಲು, ಈ ಕೆಳಗಿನಂತೆ ಟೈಪ್ ಮಾಡಿ.
02:46 'perl ಹೈಫನ್ c conditionalBlocks ಡಾಟ್ pl'
02:53 ಮತ್ತು Enter ಅನ್ನು ಒತ್ತಿ.
02:55 ‘ಟರ್ಮಿನಲ್ ವಿಂಡೋ’ದ ಮೇಲೆ, ಈ ಕೆಳಗಿನ ಸಾಲನ್ನು ತೋರಿಸಲಾಗುವುದು.
02:59 "conditionalBlocks.pl syntax OK".
03:04 ಇಲ್ಲಿ, ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಇಲ್ಲದೇ ಇರುವುದರಿಂದ, ನಾವು Perl ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡುವೆವು. ಇದಕ್ಕಾಗಿ ಹೀಗೆ ಟೈಪ್ ಮಾಡಿ.
03:10 'perl conditionalBlocks ಡಾಟ್ pl'
03:14 ಮತ್ತು Enter ಅನ್ನು ಒತ್ತಿ.
03:16 ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು.
03:19 "I am inside if statement".
03:23 ‘gedit’ ಗೆ ಬದಲಾಯಿಸಿ.
03:26 ಪರ್ಯಾಯವಾಗಿ, ಮೇಲಿನ ‘if’ ಸ್ಟೇಟ್ಮೆಂಟ್ ಅನ್ನು ನಾವು ಹೀಗೆ ಬರೆಯಬಹುದು.
03:31 print ಸ್ಪೇಸ್ ಡಬಲ್ ಕೋಟ್ಸ್ I am inside if statement ಬ್ಯಾಕ್-ಸ್ಲ್ಯಾಶ್ n ಕ್ಲೋಸ್ ಡಬಲ್ ಕೋಟ್ಸ್ ಸ್ಪೇಸ್ if ಸ್ಪೇಸ್ ಓಪನ್ ಬ್ರಾಕೆಟ್ ಡಾಲರ್ count ಸ್ಪೇಸ್ ಇಕ್ವಲ್ ಟು ಇಕ್ವಲ್ ಟು ಸ್ಪೇಸ್ 5 ಕ್ಲೋಸ್ ಬ್ರಾಕೆಟ್ ಸೆಮಿಕೋಲನ್.
03:57 ಈಗ, ನಾವು ‘if-else’ ಸ್ಟೇಟ್ಮೆಂಟ್ ಅನ್ನು ನೋಡೋಣ.
04:01 ಯೂಸರ್ ನಿಗೆ,
04:06 ಯಾವುದೋ ಒಂದು ಕಂಡಿಶನ್ ‘True’ ಇದ್ದಾಗ, ಕೋಡ್ ನ ಒಂದು ಭಾಗವನ್ನು ಮತ್ತು ಆ ಕಂಡಿಶನ್ ‘False’ ಇದ್ದಾಗ ಕೋಡ್ ನ ಇನ್ನೊಂದು ಭಾಗವನ್ನು ಎಕ್ಸಿಕ್ಯೂಟ್ ಮಾಡಬೇಕಾದಾಗ, ಈ ಸ್ಟೇಟ್ಮೆಂಟ್ ಅನ್ನು ಬಳಸಲಾಗುತ್ತದೆ.
04:13 ‘if-else’ ಕಂಡಿಶನ್ ಗಾಗಿ, ಸಿಂಟ್ಯಾಕ್ಸ್ ಈ ಕೆಳಗಿನಂತಿದೆ:
04:17 'if' ಸ್ಪೇಸ್ ಓಪನ್ ಬ್ರಾಕೆಟ್ 'ಕಂಡಿಶನ್' ಕ್ಲೋಸ್ ಬ್ರಾಕೆಟ್ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್. 'Enter' ಅನ್ನು ಒತ್ತಿ.
04:27 ಪೀಸ್ ಆಫ್ ಕೋಡ್ (ಕೋಡ್ ನ ಒಂದು ಭಾಗ) ಸೆಮಿಕೋಲನ್.
04:29 'if ' ಕಂಡಿಶನ್ TRUE ಇದ್ದಾಗ ಮಾತ್ರ ಎಕ್ಸಿಕ್ಯೂಟ್ ಮಾಡಬೇಕಾದ ಕೋಡ್ ನ ಭಾಗ.
04:32 Enter ಅನ್ನು ಒತ್ತಿ.
04:34 ಕ್ಲೋಸ್ ಕರ್ಲಿ ಬ್ರಾಕೆಟ್ ಸ್ಪೇಸ್ ‘else’ ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್ 'Enter'
04:41 ಕೋಡ್ ನ ಇನ್ನೊಂದು ಭಾಗ, ಸೆಮಿಕೋಲನ್.
04:43 ಇದು, 'if' ಕಂಡಿಶನ್ FALSE ಇದ್ದಾಗ ಎಕ್ಸಿಕ್ಯೂಟ್ ಮಾಡಬೇಕಾದ ಕೋಡ್ ನ ಭಾಗ.
04:47 'Enter' ಅನ್ನು ಒತ್ತಿ. ಕರ್ಲಿ ಬ್ರಾಕೆಟ್ ಮುಚ್ಚಿ.
04:51 ನಾವು ಈಗಾಗಲೇ 'gedit' ನಲ್ಲಿ ಕ್ರಿಯೇಟ್ ಮಾಡಿರುವ 'conditionalBlocks.pl' ಎಂಬ ಫೈಲ್ ಗೆ ಈಗ ಮತ್ತೊಮ್ಮೆ ಹೋಗೋಣ.
04:58 ‘count’ ವೇರಿಯೆಬಲ್ ಗೆ 4 (ನಾಲ್ಕು) ಅನ್ನು ಅಸೈನ್ ಮಾಡಿ (ನಿಗದಿಪಡಿಸಿ). ಆಮೇಲೆ, 'if' ಬ್ಲಾಕ್ ನ ಕೊನೆಗೆ ಹೀಗೆ ಟೈಪ್ ಮಾಡಿ: ಸ್ಪೇಸ್
05:07 ‘else’
05:09 ಸ್ಪೇಸ್ ಓಪನ್ ಕರ್ಲಿ ಬ್ರಾಕೆಟ್, Enter ಅನ್ನು ಒತ್ತಿ.
05:14 'print' ಸ್ಪೇಸ್ ಡಬಲ್ ಕೋಟ್ಸ್ “I am inside else statement ಬ್ಯಾಕ್-ಸ್ಲ್ಯಾಶ್ n” ಡಬಲ್ ಕೋಟ್ಸ್ ಕಂಪ್ಲೀಟ್ ಸೆಮಿಕೋಲನ್.
05:30 'Enter' ಅನ್ನು ಒತ್ತಿ ಮತ್ತು ಕರ್ಲಿ ಬ್ರಾಕೆಟ್ ಮುಚ್ಚಿ (close).
05:34 ಇಲ್ಲಿ, $count ಎಂಬ ವೇರಿಯೆಬಲ್ ಗೆ 4 (ನಾಲ್ಕು) ಅನ್ನು ಅಸೈನ್ ಮಾಡಲಾಗಿದೆ.
05:38 ‘count’ ವೇರಿಯೆಬಲ್ ನ ವ್ಯಾಲ್ಯೂ 5 ಆಗಿಲ್ಲ. ಆದ್ದರಿಂದ
05:43 'if ' ಬ್ಲಾಕ್ ನ ಒಳಗಿರುವ ಕೋಡ್, ಎಕ್ಸಿಕ್ಯೂಟ್ ಮಾಡಲ್ಪಡುವುದಿಲ್ಲ.
05:47 ಅದರ ಬದಲಾಗಿ, 'else' ಬ್ಲಾಕ್ ನ ಒಳಗಿರುವ ಕೋಡ್, ಎಕ್ಸಿಕ್ಯೂಟ್ ಮಾಡಲ್ಪಡುವುದು.
05:52 ಈಗ, ಫೈಲನ್ನು ಸೇವ್ ಮಾಡಲು 'Ctrl+S' ಒತ್ತಿ.
05:56 ಈಗ ‘ಟರ್ಮಿನಲ್’ಗೆ ಬದಲಾಯಿಸಿ.
05:59 ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಗಳನ್ನು ಪರೀಕ್ಷಿಸಲು, ಹೀಗೆ ಟೈಪ್ ಮಾಡಿ: 'perl ಹೈಫನ್ c conditionalBlocks ಡಾಟ್ pl'.
06:11 ಈಗ Enter ಅನ್ನು ಒತ್ತಿ.
06:13 ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಸಾಲನ್ನು ತೋರಿಸಲಾಗುವುದು.
06:17 "conditionalBlocks.pl syntax OK"
06:20 ಇಲ್ಲಿ, ಕಂಪೈಲೇಶನ್ ಅಥವಾ ಸಿಂಟ್ಯಾಕ್ಸ್ ಎರರ್ ಇಲ್ಲದೇ ಇರುವುದರಿಂದ, ಈಗ ನಾವು Perl ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡುವೆವು.
06:27 ಹೀಗೆ ಟೈಪ್ ಮಾಡಿ: 'perl conditionalBlocks ಡಾಟ್ pl'
06:33 ಮತ್ತು Enter ಅನ್ನು ಒತ್ತಿ.
06:35 ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗುವುದು.
06:39 "I am inside else statement".
06:44 ಸಂಕ್ಷಿಪ್ತವಾಗಿ -
06:46 ಈ ಟ್ಯುಟೋರಿಯಲ್ ನಲ್ಲಿ ನಾವು, ಮಾದರಿಯ ಪ್ರೊಗ್ರಾಂಗಳನ್ನು ಬಳಸಿ Perl ನ
06:49 'if' ಮತ್ತು
06:50 'if-else' ಎಂಬ ಕಂಡಿಶನಲ್ ಸ್ಟೇಟ್ಮೆಂಟ್ ಗಳನ್ನು ಕಲಿತಿದ್ದೇವೆ.
06:55 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
06:57 ಡಿಕ್ಲೇರ್ ಮಾಡಿದ ವೇರಿಯೆಬಲ್ ನ ವ್ಯಾಲ್ಯೂ 'Perl' ಎಂದು ಇದ್ದಾಗ,
07:01 “It is an open source language” ಎಂದು ಪ್ರಿಂಟ್ ಮಾಡಿ.
07:04 ಇಲ್ಲದಿದ್ದರೆ, “It's a proprietary language” ಎಂದು ಪ್ರಿಂಟ್ ಮಾಡಿ.
07:08 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
07:11 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
07:15 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:20 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
07:22 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
07:26 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:31 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

07:37 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
07:42 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
07:50 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

08:00 ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ.
08:04 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ .
08:06 ವಂದನೆಗಳು.

Contributors and Content Editors

Sandhya.np14, Vasudeva ahitanal