Jmol-Application/C2/Create-and-edit-molecular-models/Kannada

From Script | Spoken-Tutorial
Revision as of 18:06, 1 March 2016 by Sandhya.np14 (Talk | contribs)

Jump to: navigation, search
Time Narration
00:01 Jmol Application (ಜೆಮೋಲ್ ಅಪ್ಲಿಕೇಶನ್) ನಲ್ಲಿಯ Create and Edit molecular models ( ಕ್ರಿಯೇಟ್ ಆಂಡ್ ಎಡಿಟ್ ಮೊಲೆಕ್ಯುಲರ್ ಮೊಡೆಲ್ಸ್) ಎನ್ನುವ ಟ್ಯುಟೋರಿಯಲ್ ಗೆ ತಮ್ಮೆಲ್ಲರಿಗೂ ಸುಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನಾವು:
00:12 * ಫಂಕ್ಷನಲ್ ಗ್ರುಪ್ ಅನ್ನು ಹೊಂದಿರುವ ಮೊಲೆಕ್ಯುಲರ್-ಮೊಡೆಲ್ ನಲ್ಲಿ “hydrogen”(ಹೈಡ್ರೋಜನ್) ಅಣುವನ್ನು ಸೇರಿಸುವುದು
00:17 * ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು
00:20 * ಪರಮಾಣುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು
00:23 * ಮತ್ತು ಕೊಂಟೆಕ್ಷ್ಟುಅಲ್ (contextual) ಮೆನ್ಯು ಅರ್ಥಾತ್ ಪಾಪ್-ಅಪ್ ಮೆನ್ಯುವನ್ನು ಬಳಸುವುದನ್ನು ಕಲಿಯುವೆವು.
00:29 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು
00:32 * ’Jmol Application’ (ಜೆಮೋಲ್ ಅಪ್ಲಿಕೇಶನ್) ವಿಂಡೊ ಮತ್ತು
00:36 * ಅಣುಗಳ ಮಾದರಿಗಳನ್ನು ರಚಿಸಲು ಬಳಸುವ ’Modelkit’ (ಮಾಡೆಲ್ ಕಿಟ್) ಎಂಬ ಫಂಕ್ಷನ್ ಬಗ್ಗೆ ತಿಳಿದಿರಬೇಕು.
00:41 ಸಂಬಂಧಿತ ಟ್ಯುಟೋರಿಯಲ್ಸ್ ಗಳಿಗಾಗಿ ನಮ್ಮ ವೆಬ್ ಸೈಟ್ ನ್ನು ನೋಡಿ.
00:46 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು
00:49 * Ubuntu (ಉಬಂಟು) ಆಪರೇಟಿಂಗ್ ಸಿಸ್ಟಂ ಆವೃತ್ತಿ 12.04
00:53 * “Jmol” (ಜೆಮೋಲ್) ಆವೃತ್ತಿ 12.2.2
00:57 * ಮತ್ತು 'Java ' ಆವೃತ್ತಿ 7 ಬಳಸುತ್ತಿದ್ದೇನೆ.
01:00 ’Jmol Application’ (ಜೆಮೋಲ್ ಅಪ್ಲಿಕೇಶನ್) ಅನ್ನು ಓಪನ್ ಮಾಡಲು 'Dash home' (ಡ್ಯಾಷ್ ಹೋಮ್) ಮೇಲೆ ಕ್ಲಿಕ್ ಮಾಡಿ.
01:05 ಸರ್ಚ್-ಬಾಕ್ಸ್ ನಲ್ಲಿ ’Jmol’ (ಜೆಮೋಲ್) ಎಂದು ಟೈಪ್ ಮಾಡಿ.
01:08 ಸ್ಕ್ರೀನ್ ನ ಮೇಲೆ 'Jmol' (ಜೆಮೋಲ್) ಐಕಾನ್ ಕಾಣಿಸುತ್ತದೆ.
01:11 ಜೆಮೋಲ್ ಅಪ್ಲಿಕೇಶನ್ ವಿಂಡೋವನ್ನು ತೆರೆಯಲು, 'Jmol' (ಜೆಮೋಲ್) ಐಕಾನ್ ಮೇಲೆ ಕ್ಲಿಕ್ ಮಾಡಿ.
01:17 ನಾವು ಮೊದಲು ರಚನೆ ಮಾಡಿದ ”Propane” ನ (ಪ್ರೋಪೇನ್) ಮಾಡೆಲ್ ನಿಂದ ಪ್ರಾರಂಭಿಸೋಣ.
01:22 ಫೈಲನ್ನು ಓಪನ್ ಮಾಡಲು, ಟೂಲ್-ಬಾರ್ ಮೇಲಿನ “Open file” ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
01:27 ಸ್ಕ್ರೀನ್ ಮೇಲೆ ಒಂದು ಡೈಲಾಗ್-ಬಾಕ್ಸ್ ಕಾಣಿಸುತ್ತದೆ.
01:30 ನಿಮಗೆ ಬೇಕಾದ ಫೈಲ್ ಅನ್ನು ಇಟ್ಟಿರುವ ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ.
01:34 ನನ್ನ ಫೈಲ್, ಡೆಸ್ಕ್ಟಾಪ್ ನ ಮೇಲೆ ಇದೆ.
01:37 ಹೀಗಾಗಿ, ನಾನು ಡೆಸ್ಕ್ಟಾಪ್ ಅನ್ನು ಆಯ್ಕೆಮಾಡುವೆನು ಮತ್ತು 'Open' ಬಟನ್ ಮೇಲೆ ಕ್ಲಿಕ್ ಮಾಡುವೆನು.
01:43 “File or URL” ಎಂಬ ಟೆಕ್ಸ್ಟ್-ಬಾಕ್ಸ್ ನಲ್ಲಿ, ಫೈಲ್ ಹೆಸರನ್ನು ಟೈಪ್ ಮಾಡಿ.
01:48 ನಂತರ, 'Open' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
01:51 'Propane'ನ (ಪ್ರೊಪೇನ್) ಮಾಡೆಲ್, ಸ್ಕ್ರೀನ್ ನ ಮೇಲೆ ಕಾಣಿಸಿಕೊಳ್ಳುತ್ತದೆ.
01:55 ನಾವು ಫಂಕ್ಷನಲ್ ಗ್ರೂಪ್ ಗಳಾದ ಹೈಡ್ರಾಕ್ಸೀ, ಅಮೀನೋ, ಫ್ಲೋರೊ, ಕ್ಲೋರೋ, ಬ್ರೋಮೋ ಗಳಂತಹ ಹ್ಯಲೋಜೆನ್ ಗಳನ್ನು ಹೊಂದಿದ 'Propane' ನಲ್ಲಿ, ಹೈಡ್ರೋಜನ್ ಗಳನ್ನು ಸೇರಿಸಬಹುದು.
02:07 'Propane' ಅಣುವನ್ನು 'Propanol' ಆಗಿ ಪರಿವರ್ತಿಸಲು, ಅದಕ್ಕೆ ಒಂದು 'hydroxy' ಗ್ರುಪ್ ಅನ್ನು ನಾನು ಸೇರಿಸಬೇಕಾಗಿದೆ.
02:13 'model kit' (ಮೊಡೆಲ್ ಕಿಟ್) ಮೆನ್ಯುವನ್ನು ಒಪನ್ ಮಾಡಿ. ಫಂಕ್ಶನಲ್ ಗ್ರೂಪ್ ಗಳ ಒಂದು ಲಿಸ್ಟ್ ಇಲ್ಲಿ ಸಿಗುತ್ತದೆ.
02:20 'oxygen'(ಆಕ್ಸಿಜೆನ್) ಪರಮಾಣುವಿನ ಪಕ್ಕದ ಬಾಕ್ಸನ್ನು ಚೆಕ್ ಮಾಡಿ.
02:23 ಮೊದಲನೆಯ ಕಾರ್ಬನ್ ಪರಮಾಣುವಿಗೆ ಜೋಡಿಸಿರುವ ಹೈಡ್ರೋಜೆನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ.
02:28 ಹೈಡ್ರೋಜನ್ ಪರಮಾಣುವಿಗೆ ಬದಲಾಗಿ 'hydroxy ' ಗ್ರೂಪ್ ಅನ್ನು ಸೇರಿಸಿರುವುದನ್ನು ಗಮನಿಸಿ. ಇಲ್ಲಿ, 'Oxygen' ಪರಮಾಣು, ಕೆಂಪು ಬಣ್ಣದಲ್ಲಿ ಕಾಣುತ್ತಿದೆ.
02:37 ಈಗ 'Propane', '1-Propanol' ಆಗಿ ಬದಲಾಗಿದೆ.
02:41 ಈಗ ನಾವು 1-Propanol (1-ಪ್ರೊಪೆನಾಲ್) ಅನ್ನು '2-chloro-1-propanol' (2-ಕ್ಲೋರೊ-1-ಪ್ರೊಪೆನಾಲ್) ಆಗಿ ಪರಿವರ್ತಿಸಲು ಪ್ರಯತ್ನಿಸೋಣ.
02:47 'model kit' (ಮಾಡೆಲ್ ಕಿಟ್) ಮೆನ್ಯುನಿಂದ, 'Chloro' (ಕ್ಲೋರೊ) ಗ್ರುಪ್ ಅನ್ನು ಆಯ್ಕೆ ಮಾಡಿ.
02:51 ಎರಡನೆಯ ಕಾರ್ಬನ್ ಪರಮಾಣುವಿಗೆ ಜೋಡಿಸಿದ ಹೈಡ್ರೋಜೆನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ.
02:57 ಈಗ ನಮ್ಮ ಹತ್ತಿರ '2-chloro-1-propanol' ನ ಮಾದರಿ ಇದೆ. ಇಲ್ಲಿ, ಕ್ಲೋರಿನ್ ಹಸಿರು ಬಣ್ಣದಲ್ಲಿ ಕಾಣುತ್ತಿದೆ.
03:04 ನೀವು 'ಎನರ್ಜಿ ಮಿನಿಮೈಜೇಶನ್' ಅನ್ನು ಮಾಡಬಹುದು ಮತ್ತು ಇಮೇಜ್ ಅನ್ನು 'dot mol' ಫೈಲ್ ಎಂದು ಸೇವ್ ಮಾಡಬಹುದು.
03:10 ಇಲ್ಲಿ ಒಂದು ಅಸೈನ್ಮೆಂಟ್ ಇದೆ.
03:11 * '3-bromo-1-butanol' ಮತ್ತು 2-amino-4-chloro-pentane' ಎಂಬ ಅಣುಗಳ ಮಾಡೆಲ್ ಗಳನ್ನು ಮಾಡಿ.
03:20 * ಎನರ್ಜಿ ಮಿನಿಮೈಜೇಶನ್ ಮಾಡಿ ಮತ್ತು ಇಮೇಜ್ ಅನ್ನು ಜೆಪೆಗ್ ಫಾರ್ಮ್ಯಾಟ್ (JPEG format) ನಲ್ಲಿ ಸೇವ್ ಮಾಡಿ.
03:25 ಇಮೇಜ್ ಅನ್ನು ವಿವಿಧ ಫೈಲ್ ಫಾರ್ಮ್ಯಾಟ್ ಗಳಲ್ಲಿ ಸೇವ್ ಮಾಡಲು,
03:28 ಟೂಲ್-ಬಾರ್ ನಲ್ಲಿಯ “Save current view as an image” ಎಂಬ ಐಕಾನ್ ಅನ್ನು ಬಳಸಿ.
03:33 ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಈ ಕೆಳಗಿನಂತೆ ಕಾಣಬೇಕು.
03:40 ಈಗ ನಾವು ಜೆಮೋಲ್ ಅಪ್ಲಿಕೇಶನ್ ವಿಂಡೋಗೆ ಹಿಂದಿರುಗೋಣ.
03:45 ಜೆಮೋಲ್ ಅಪ್ಲಿಕೇಶನ್, ಒಂದು ಪಾಪ್-ಅಪ್ (Pop-up) ಮೆನ್ಯುವನ್ನು ಸಹ ಒದಗಿಸುತ್ತದೆ.
03:50 ಪಾಪ್-ಅಪ್ ಮೆನ್ಯುವನ್ನು ಎರಡು ವಿಧಗಳಲ್ಲಿ ಬಳಸಲು ಸಾಧ್ಯವಿದೆ.
03:55 'model kit' ಮೆನ್ಯು ಒಪನ್ ಇದ್ದರೆ, ಅದರಿಂದ ಹೊರಗೆ ಬನ್ನಿ.
03:59 'model kit' ಮೆನ್ಯುವನ್ನು ಕೆಳಗೆ ಸ್ಕ್ರೋಲ್ ಮಾಡಿ ಮತ್ತು “exit model kit mode” ನ ಮೇಲೆ ಕ್ಲಿಕ್ ಮಾಡಿ.
04:04 ಪಾಪ್-ಅಪ್ ಮೆನ್ಯುವನ್ನು ತೆರೆಯಲು, ಪ್ಯಾನೆಲ್ ನ ಮೇಲೆ ಮೌಸ್-ಬಟನ್ ಅನ್ನು ರೈಟ್-ಕ್ಲಿಕ್ ಮಾಡಿ.
04:09 ಪಾಪ್-ಅಪ್ ಮೆನ್ಯು, ಪ್ಯಾನೆಲ್ ನ ಮೇಲೆ ಕಾಣಿಸಿಕೊಳ್ಳುತ್ತದೆ.
04:12 ಪಾಪ್-ಅಪ್ ಮೆನ್ಯು, ಪರಮಾಣುಗಳ ಪ್ರದರ್ಶನವನ್ನು (display) ಮಾರ್ಪಡಿಸಲು ಅನೇಕ ಫಂಕ್ಷನ್ ಗಳನ್ನು ಒದಗಿಸುತ್ತದೆ.
04:18 ಇದು ಆರಿಸಿಕೊಳ್ಳಲು ಮತ್ತು ರೆಂಡರ್ ಮಾಡಲು ವಿವಿಧ ಆಯ್ಕೆಗಳನ್ನು ಹೊಂದಿದೆ.
04:22 ಈ ಮೆನ್ಯುನಲ್ಲಿರುವ ಹಲವಾರು ಫಂಕ್ಷನ್ ಗಳು, ಮೆನ್ಯು ಬಾರ್ ನಲ್ಲಿ ಸಹ ಇರುತ್ತವೆ.
04:28 ಪಾಪ್-ಅಪ್ ಮೆನ್ಯುನಲ್ಲಿರುವ ಐಟಂ ಗಳು ಸ್ವ-ವಿವರಣಾತ್ಮಕವಾಗಿವೆ.
04:32 ಅವುಗಳಿಗೆ ವಿಸ್ತಾರವಾದ ವಿವರಣೆಯ ಅವಶ್ಯಕತೆ ಇಲ್ಲ.
04:35 ಪಾಪ್-ಅಪ್ ಮೆನ್ಯುನಿಂದ ಹೊರಗೆ ಬರಲು, 'Jmol' ಪ್ಯಾನೆಲ್ ನ ಮೇಲೆ ಕ್ಲಿಕ್ ಮಾಡಿ.
04:39 ಪಾಪ್-ಅಪ್ ಮೆನ್ಯುವನ್ನು ಆಕ್ಸೆಸ್ ಮಾಡುವ ಇನ್ನೊಂದು ರೀತಿ: 'Jmol' ಲೋಗೋದ ಮೇಲೆ ಕ್ಲಿಕ್ ಮಾಡುವುದು.
04:44 ಅದು 'Jmol' ಪ್ಯಾನೆಲ್ ನ ಕೆಳಗೆ ಬಲಮೂಲೆಯಲ್ಲಿದೆ.
04:49 ಈಗ ನಾವು ಈ ಅಣುವನ್ನು ಎಡಿಟ್ ಮಾಡಿ, ಅದನ್ನು 'Ethane' (ಇಥೇನ್) ಅಣುವಿಗೆ ಹೇಗೆ ಪರಿವರ್ತನೆ ಮಾಡುವುದೆಂದು ನೋಡೋಣ.
04:55 ಇದಕ್ಕಾಗಿ ನಾವು ಹೈಡ್ರಾಕ್ಸೀ ಗ್ರೂಪ್, 'ಕ್ಲೋರಿನ್' ಗ್ರೂಪ್, 'ಕಾರ್ಬನ್' ಮತ್ತು ಎರಡು 'ಹೈಡ್ರೋಜನ್' ಪರಮಾಣುಗಳನ್ನು ಡಿಲೀಟ್ ಮಾಡೋಣ.
05:05 'model kit' ಮೆನ್ಯುವನ್ನು ಒಪನ್ ಮಾಡಿ.
05:08 “delete atom” ನ ಬದಿಯಲ್ಲಿರುವ ಬಾಕ್ಸ್ ಅನ್ನು ಚೆಕ್ ಮಾಡಿ.
05:12 ನೀವು ಡಿಲೀಟ್ ಮಾಡಬೇಕೆಂದಿರುವ
05:15 'ಆಕ್ಸೀಜನ್, ಕ್ಲೋರಿನ್' ಮತ್ತು 'ಕಾರ್ಬನ್' ಪರಮಾಣುಗಳ ಮೇಲೆ ಕ್ಲಿಕ್ ಮಾಡಿ.
05:21 'ಇಥೇನ್' ಅಣುವನ್ನು ರಚಿಸಲು, ನಾವು ಹೈಡ್ರೋಜನ್ ಗಳನ್ನು ಈ ಅಣುವಿಗೆ ಸೇರಿಸಬೇಕು.
05:26 'model kit' ಮೆನ್ಯುವಿನ “add hydrogens” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
05:32 ಎರಡು 'ಹೈಡ್ರೋಜನ್' ಪರಮಾಣುಗಳನ್ನು ಈ ಅಣುವಿಗೆ ಸೇರಿಸಲಾಯಿತು.
05:36 ಈಗ ನಮ್ಮ ಹತ್ತಿರ ಇಥೇನ್ ನ ಮಾಡೆಲ್, ಸ್ಕ್ರೀನ್ ಮೇಲಿದೆ.
05:40 'alkenes ಮತ್ತು alkynes ಗಳ ರಚನೆಯನ್ನು ಕಲಿಯೋಣ.
05:45 ಪರಮಾಣುವಿನಲ್ಲಿ ಡಬಲ್ ಬಾಂಡ್ ಅನ್ನು ಪರಿಚಯಿಸಲು model kit' ಮೆನ್ಯುವನ್ನು ಒಪನ್ ಮಾಡಿ.
05:50 double ಆಯ್ಕೆಯನ್ನು ಚೆಕ್ ಮಾಡಿ.
05:53 Ethane ಪರಮಾಣುವಿನಲ್ಲಿಯ ಎರಡು ಕಾರ್ಬನ್ ಅಣುಗಳ ಬಾಂಡ್ ಮೇಲೆ ಕರ್ಸರ್ ಇಡಿ.
05:58 'carbon' ಅಣುವಿನ ಸುತ್ತ ಕೆಂಪು ಬಣ್ಣದ ರಿಂಗಗಳು ಕಾಣುತ್ತವೆ.
06:01 ಬಾಂಡ್ ಮೇಲೆ ಕ್ಲಿಕ್ ಮಾಡಿ.
06:05 ಸಿಂಗಲ್ ಬಾಂಡ್ ಡಬಲ್ ಬಾಂಡ್ ಆಗುವುದನ್ನು ಗಮನಿಸಿ.
06:09 ನಮಗೀಗ 'Ethene'ನ ಮಾದರಿ ಪ್ಯಾನೆಲ್ ಮೇಲಿದೆ.
06:13 ನಾವೀಗ Ethene ಅನ್ನು Ethyne ಆಗಿ ಬದಲಾಯಿಸೋಣ.
06:16 modelkit ' ಮೆನ್ಯುನ ಮೇಲೆ ಕ್ಲಿಕ್ ಮಾಡಿ ಮತ್ತು 'triple ಆಯ್ಕೆಯನ್ನು ಚೆಕ್ ಮಾಡಿ.
06:21 'Ethene ಪರಮಾಣುವಿನ್ ಡಬಲ್ ಬಾಂಡ್ ಮೇಲೆ ಕರ್ಸರ್ ಇಟ್ಟು ಕ್ಲಿಕ್ ಮಾಡಿ.
06:28 ಡಬಲ್-ಬಾಂಡ್ ಈಗ ಟ್ರಿಪಲ್-ಬಾಂಡ್ ಆಗಿ ಬದಲಾಯಿಸಿದೆ.
06:31 ಇದು ಇಥೈನ್ 'Ethyne' ನ ಮಾಡೆಲ್ ಆಗಿದೆ.
06:34 ಹೆಚ್ಚು ಸ್ಟಿರವಾದ ಕನ್ಫರ್ಮೇಶನ್ ಪಡೆಯಲು, ಎನರ್ಜಿ ಮಿನಿಮೈಸೇಶನ್ ಮಾಡಿ ಮತ್ತು ಸೇವ್ ಮಾಡಿ.
06:40 ಈಗ ನಾವು ಸಾರಾಂಶಗೊಳಿಸೋಣ.
06:41 ಈ ಟ್ಯುಟೋರಿಯಲ್ ನಲ್ಲಿ, ನಾವು:
06:43 * ಅಲ್ಕೇನ್ ಗಳಲ್ಲಿಯ ಹೈಡ್ರೋಜನ್ ಪರಮಾಣುವಿಗೆ ಬದಲಾಗಿ ಒಂದು ಫಂಕ್ಶನಲ್ ಗ್ರೂಪ್ ಅನ್ನು ಸೇರಿಸುವುದು
06:48 * ಅಲ್ಕೇನ್ ಗಳನ್ನು, ಅಲ್ಕೀನ್ ಗಳು ಮತ್ತು ಅಲ್ಕೈನ್ ಗಳಾಗಿ ಬದಲಾಯಿಸಲು ಬಾಂಡ್ ಗಳನ್ನು ಸೇರಿಸುವುದು
06:52 * ಪರಮಾಣುಗಳನ್ನು ಸೇರಿಸುವುದು ಹಾಗೂ ತೆಗೆದುಹಾಕುವುದು ಮತ್ತು
06:54 * ಪಾಪ್–ಅಪ್ ಮೆನ್ಯುವನ್ನು ಉಪಯೋಗಿಸುವುದು ಇತ್ಯಾದಿಗಳನ್ನು ಕಲಿತಿದ್ದೇವೆ.
06:58 ಅಸೈನ್ಮೆಂಟ್ ಗಾಗಿ:
06:59 # '2-fluoro-1,3-butadiene' (ಟು ಫ್ಲೋರೊ ವನ್ ಥ್ರೀ ಬ್ಯೂಟಾಡೈನ್) ಮತ್ತು '2-pentyne' (ಟು ಪೆಂಟೈನ್) ಗಳ ಮಾಡೆಲ್ ಗಳನ್ನು ರಚಿಸಿ.
07:06 # ಮಾಡೆಲ್ ನ ಡಿಸ್ಪ್ಲೇಯನ್ನು 'wireframe' (ವೈರ್ ಫ್ರೇಮ್) ಗೆ ಬದಲಾಯಿಸಲು, ಪಾಪ್-ಅಪ್ ಮೆನ್ಯುವನ್ನು ಉಪಯೋಗಿಸಿ.
07:10 # ಎನರ್ಜಿ ಮಿನಿಮೈಸೇಶನ್ ಅನ್ನು ಮಾಡಿ ಮತ್ತು ಇಮೇಜ್ ಅನ್ನು 'PDF' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ.
07:16 ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್, ಈ ಕೆಳಗಿನಂತೆ ಕಾಣಬೇಕು.
07:24 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋಅನ್ನು ನೋಡಿ:

http://spoken-tutorial.org/What_is_a_Spoken_Tutorial

07:27 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
07:31 ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:36 ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಟೀಮ್:
07:38 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
07:41 * ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ.
07:45 ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:

contact@spoken-tutorial.org

07:52 ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೋಜೆಕ್ಟ್’ ನ ಭಾಗವಾಗಿದೆ.
07:57 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ.
08:04 ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.

http://spoken-tutorial.org/NMEICT-Intro

08:08 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………………….

ವಂದನೆಗಳು.

Contributors and Content Editors

Sandhya.np14