Advance-C/C2/Storage-class-specifiers/Kannada

From Script | Spoken-Tutorial
Revision as of 10:57, 14 December 2015 by Vasudeva ahitanal (Talk | contribs)

Jump to: navigation, search
Time
Narration
00:01 Storage class specifiers ಎಂಬ Spoken Tutorialಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ, ನಾವು:
  • 'ಸ್ಟೋರೇಜ್ ಕ್ಲಾಸ್ ಸ್ಪೆಸಿಫೈರ್ಸ್' (Storage class specifiers)
  • 'auto' ಕೀವರ್ಡ್
  • 'static' ಕೀವರ್ಡ್
  • 'extern' ಕೀವರ್ಡ್
  • 'register' ಕೀವರ್ಡ್ ಗಳನ್ನು ಉದಾಹರಣೆಗಳ ಸಹಾಯದಿಂದ ಕಲಿಯುವೆವು.
00:22 ಈ ಟ್ಯುಟೋರಿಯಲ್ ಗಾಗಿ, ನಾನು:
  • Ubuntu Operating system ಆವೃತ್ತಿ 11.10 ಮತ್ತು
  • gcc Compiler4.6.1 ನೇ ಆವೃತ್ತಿಗಳನ್ನು ಬಳಸುತ್ತಿದ್ದೇನೆ.
00:34 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'C' ಟ್ಯುಟೋರಿಯಲ್ ಗಳನ್ನು ಚೆನ್ನಾಗಿ ತಿಳಿದಿರಬೇಕು.
00:41 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಕೆಳಗೆ ತೋರಿಸಿದ ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:47 ನಾನು ’ಸ್ಟೋರೇಜ್ ಕ್ಲಾಸ್ ಸ್ಪೆಸಿಫೈರ್ಸ’ ಗಳ ಪರಿಚಯದೊಂದಿಗೆ ಆರಂಭಿಸುವೆನು.
00:52 'ಸ್ಪೆಸಿಫೈರ್'ಗಳು (specifiers) - * ವೇರಿಯೇಬಲ್ ಅನ್ನು ಎಲ್ಲಿ ಸ್ಟೋರ್ ಮಾಡುವುದು,
00:57 * ವೇರಿಯೇಬಲ್ ಅನ್ನು ಹೇಗೆ ಸ್ಟೋರ್ ಮಾಡುವುದು ,
00:59 * ಒಂದು ವೇರಿಯೇಬಲ್ ನ ಆರಂಭಿಕ ವ್ಯಾಲ್ಯೂ ಏನಿದೆ,
01:03 * ಒಂದು ವೇರಿಯೇಬಲ್ ಎಷ್ಟು ಅವಧಿಯ ವರೆಗೆ ಇರುತ್ತದೆ ಎಂಬುದರ ಬಗ್ಗೆ ಕಂಪೈಲರ್ ಗೆ ಹೇಳುತ್ತವೆ.
01:06 ಇದರ ಸಿಂಟ್ಯಾಕ್ಸ್ ಹೀಗಿದೆ: 'storage_specifier data_type variable _name'
01:13 ’ಸ್ಟೋರೇಜ್ ಕ್ಲಾಸ್ ಸ್ಪೆಸಿಫೈರ್ಸ’ ಗಳ (storage class specifiers) ಪ್ರಕಾರಗಳು ಹೀಗಿವೆ:
  • 'auto'
  • 'static'
  • 'extern'
  • 'register'.
01:21 'auto' ಎಂಬ ಕೀವರ್ಡ್ ನೊಂದಿಗೆ ನಾವು ಆರಂಭಿಸೋಣ.
01:24 'auto' ಎಂಬ ಕೀವರ್ಡ್, ಅಟೋಮ್ಯಾಟಿಕ್ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುತ್ತದೆ.
01:28 ಇದು ಲೋಕಲ್ ಸ್ಕೋಪನ್ನು ಹೊಂದಿದೆ.
01:30 ಕೀವರ್ಡ್ ಗಳು ತಮ್ಮಷ್ಟಕ್ಕೆ ತಾವೇ ಇನಿಶಿಯಲೈಸ್ ಮಾಡಲ್ಪಡುವುದಿಲ್ಲ.
01:34 ಡಿಕ್ಲೇರ್ ಮಾಡುವಾಗ ನೀವು ಕೀವರ್ಡ್ ಗಳನ್ನು ಸ್ಪಷ್ಟವಾಗಿ ಇನಿಶಿಯಲೈಸ್ ಮಾಡಬೇಕಾಗುತ್ತದೆ.
01:39 'CPU' ಮೆಮೊರೀ (memory), ಕೀವರ್ಡ್ ಗಳ ’ಸ್ಟೋರೇಜ್ ಸ್ಪೇಸ್’ ಆಗಿದೆ.
01:43 ನಾವು ಒಂದು ಉದಾಹರಣೆಯನ್ನು ನೋಡೋಣ. ನನ್ನ ಹತ್ತಿರ ಒಂದು ಕೋಡ್ ಫೈಲ್ ಇದೆ. ನಾವು ಇದನ್ನು ನೋಡೋಣ.
01:49 ನಮ್ಮ ಫೈಲ್ ನ ಹೆಸರು 'auto.c' ಎಂದು ಇರುವುದನ್ನು ಗಮನಿಸಿ.
01:54 ನಾವು “increment()” ಎಂಬ ಒಂದು ಫಂಕ್ಷನ್ ಅನ್ನು ಡಿಕ್ಲೇರ್ ಮಾಡಿದ್ದೇವೆ.
01:58 ಇದು 'main()' (ಮೇನ್) ಎಂಬ ಫಂಕ್ಷನ್ ಆಗಿದೆ.
02:00 'main()' ಫಂಕ್ಷನ್ ನಲ್ಲಿ, 'increment()' ಫಂಕ್ಷನ್ ಅನ್ನು ನಾಲ್ಕು ಸಲ ’ಕಾಲ್’ ಮಾಡಲಾಗಿದೆ.
02:06 ಆಮೇಲೆ, ನಾವು 'return 0' ಸ್ಟೇಟ್ಮೆಂಟ್ ಅನ್ನು ಪಡೆದಿದ್ದೇವೆ.
02:10 ನಾವು ಫಂಕ್ಷನ್ ನ ವ್ಯಾಖ್ಯಾನವನ್ನು (definition) ನೋಡೋಣ.
02:14 ಇಲ್ಲಿ, ನಾವು 'i' ಎಂಬ ವೇರಿಯೇಬಲ್ ಅನ್ನು 'auto int' ಎಂದು ಡಿಕ್ಲೇರ್ ಮಾಡಿದ್ದೇವೆ. ಇದು ’ಲೋಕಲ್’ ಸ್ಕೋಪನ್ನು ಹೊಂದಿದೆ.
02:21 ನಂತರ, ನಾವು 'printf' ಅನ್ನು ಬಳಸಿ 'i' ನ ವ್ಯಾಲ್ಯೂವನ್ನು ತೋರಿಸುತ್ತೇವೆ.
02:26 'i' ನ ವ್ಯಾಲ್ಯೂವನ್ನು ಇಲ್ಲಿ ಹೆಚ್ಚಿಸಲಾಗುತ್ತದೆ (increment).
02:30 ನಮ್ಮ ಕೀಬೋರ್ಡ್ ಮೇಲಿನ 'Ctrl+Alt+T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ನಾವು ಓಪನ್ ಮಾಡೋಣ.
02:38 ಹೀಗೆ ಟೈಪ್ ಮಾಡಿ: ' gcc space auto.c space hyphen o space auto'. 'Enter' ಅನ್ನು ಒತ್ತಿ.
02:48 ಟೈಪ್ ಮಾಡಿ: ' dot slash auto'
02:51 ಔಟ್ಪುಟ್ ಸೊನ್ನೆಯಾಗಿದೆ.
02:54 ಈಗ ನಮ್ಮ ಪ್ರೊಗ್ರಾಂಗೆ ಹಿಂದಿರುಗಿ.
02:57 ನಾವು 'main()' ಫಂಕ್ಷನ್ ನ ಮೇಲಿರುವ, 'auto' ವೇರಿಯೇಬಲ್ 'i ' ಅನ್ನು ಇನಿಶಿಯಲೈಸ್ ಮಾಡೋಣ.
03:02 ನಾನು ಇಲ್ಲಿಯ ಡಿಕ್ಲೆರೇಶನ್ ಮತ್ತು ಇನಿಶಿಯಲೈಸೇಶನ್ ಗಳನ್ನು ಇಲ್ಲಿಂದ ಕಟ್ ಮಾಡಿ ಇಲ್ಲಿ ಪೇಸ್ಟ್ ಮಾಡುವೆನು. 'Save' ಮೇಲೆ ಕ್ಲಿಕ್ ಮಾಡುವೆನು.
03:14 ನಾವು ಟರ್ಮಿನಲ್ ನ ಮೇಲೆ ಎಕ್ಸಿಕ್ಯೂಟ್ ಮಾಡೋಣ. ಅಪ್-ಆರೋ ಕೀಯನ್ನು ಎರಡು ಸಲ ಒತ್ತಿ. 'Enter' ಅನ್ನು ಒತ್ತಿ.
03:22 ನಾವು ಹೀಗೆ ಒಂದು ಎರರ್ ಅನ್ನು ಪಡೆಯುತ್ತೇವೆ: “file-scope declaration of 'i' specifies 'auto’ ”.
03:29 ಏಕೆಂದರೆ, 'auto' ವೇರಿಯೇಬಲ್, ಫಂಕ್ಷನ್ ಗೆ ಲೋಕಲ್ ಆಗಿದೆ.
03:34 ನಾವು ಇದನ್ನು ಗ್ಲೋಬಲ್ ಆಗಿ ಇನಿಶಿಯಲೈಸ್ ಮಾಡಲು ಸಾಧ್ಯವಿಲ್ಲ.
03:37 ನಾವು ಎರರ್ ಅನ್ನು ಸರಿಪಡಿಸೋಣ. ನಮ್ಮ ಪ್ರೊಗ್ರಾಂಗೆ ಹಿಂದಿರುಗಿ.
03:42 ಇದನ್ನು ಡಿಲೀಟ್ ಮಾಡಿ; ಇಲ್ಲಿ ಪೇಸ್ಟ್ ಮಾಡಿ.
03:47 'Save' ಮೇಲೆ ಕ್ಲಿಕ್ ಮಾಡಿ ಮತ್ತು ಟರ್ಮಿನಲ್ ನ ಮೇಲೆ ಎಕ್ಸಿಕ್ಯೂಟ್ ಮಾಡಿ.
03:52 ಅಪ್-ಆರೋ ಕೀಯನ್ನು ಒತ್ತಿ. ಹಿಂದಿನ ಕಮಾಂಡನ್ನು ಮರಳಿ ಪಡೆಯಿರಿ.
03:57 'Enter' ಅನ್ನು ಒತ್ತಿ. ಹೀಗೆ ಟೈಪ್ ಮಾಡಿ: dot slash auto. 'Enter' ಅನ್ನು ಒತ್ತಿ.
04:03 ಹೌದು, ಇದು ಕೆಲಸ ಮಾಡುತ್ತದೆ! ಔಟ್ಪುಟ್ ಸೊನ್ನೆಯಾಗಿದೆ.
04:07 ಏಕೆಂದರೆ ನಾವು 'i' ನ ವ್ಯಾಲ್ಯೂವನ್ನು ಸೊನ್ನೆಗೆ ಇನಿಶಿಯಲೈಸ್ ಮಾಡಿದ್ದೇವೆ.
04:13 ಈಗ, ನಾವು 'static' ಎಂಬ ವೇರಿಯೇಬಲ್ ಅನ್ನು ನೋಡೋಣ.
04:16 'ಸ್ಟ್ಯಾಟಿಕ್' (static) ವೇರಿಯೇಬಲ್ ನ ಬಗ್ಗೆ ಹಿಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ಅಭ್ಯಾಸ ಮಾಡಿದ್ದರೂ, ಇಲ್ಲಿ ನಾನು ಸಂಕ್ಷಿಪ್ತವಾಗಿ ವಿವರಿಸುವೆನು.
04:24 'static' ವೇರಿಯೇಬಲ್ ಗಳನ್ನು ಸೊನ್ನೆಗೆ ಇನಿಶಿಯಲೈಸ್ ಮಾಡಲಾಗುವುದು.
04:28 ಪ್ರೊಗ್ರಾಂ ಕಂಟ್ರೋಲ್, 'ಬ್ಲಾಕ್'ನಿಂದ ಹೊರಗೆ ಹೋದ ಮೇಲೆ ಸಹ ಅವುಗಳು ನಾಶವಾಗುವುದಿಲ್ಲ.
04:35 ವೇರಿಯೇಬಲ್ ನ ವ್ಯಾಲ್ಯೂ, ವಿವಿಧ 'ಫಂಕ್ಷನ್ ಕಾಲ್' ಗಳ ನಡುವೆಯೂ ಮುಂದುವರಿಯುತ್ತದೆ.
04:41 'CPU ಮೆಮೊರೀ', ಇವುಗಳನ್ನು ಸ್ಟೊರ್ ಮಾಡುವ ಸ್ಥಳ (ಸ್ಟೋರೇಜ್ ಸ್ಪೇಸ್) ಆಗಿದೆ.
04:45 ನಾವು ಒಂದು ಉದಾಹರಣೆಯನ್ನು ನೋಡೋಣ. ನಾನು ಇದೇ ಕೋಡ್ ಫೈಲನ್ನು ಎಡಿಟ್ ಮಾಡುವೆನು.
04:51 ನಮ್ಮ ಪ್ರೊಗ್ರಾಂಗೆ ಹಿಂದಿರುಗಿ.
04:54 'Ctrl + Shift + S' ಕೀಗಳನ್ನು ಒಟ್ಟಿಗೇ ಒತ್ತಿ.
05:01 ಈಗ, ನಾನು ಕೇವಲ ಫೈಲ್ ನ ಹೆಸರನ್ನು 'static' ಎಂದು ಬದಲಾಯಿಸುವೆನು. 'Save'ನ ಮೇಲೆ ಕ್ಲಿಕ್ ಮಾಡಿ.
05:10 ಈಗ, ನಾನು ವೇರಿಯೇಬಲ್ 'i' ನ ಇನಿಶಿಯಲೈಸೇಶನ್ ಅನ್ನು 'static int i equal to zero' ಎಂದು ಬದಲಾಯಿಸುವೆನು.

'Save'ನ ಮೇಲೆ ಕ್ಲಿಕ್ ಮಾಡಿ.

05:23 ಈಗ ಏನಾಗುತ್ತದೆ ಎಂದು ನಾವು ನೋಡೋಣ. ಫೈಲನ್ನು ಟರ್ಮಿನಲ್ ನ ಮೇಲೆ ಎಕ್ಸಿಕ್ಯೂಟ್ ಮಾಡಿ.
05:30 ಹೀಗೆ ಟೈಪ್ ಮಾಡಿ: 'gcc space static.c space hyphen o space stat'. 'Enter' ಅನ್ನು ಒತ್ತಿ.
05:41 ಹೀಗೆ ಟೈಪ್ ಮಾಡಿ: 'dot slash stat'. 'Enter' ಅನ್ನು ಒತ್ತಿ.
05:46 ಔಟ್ಪುಟ್ ಹೀಗೆ ಕಾಣುತ್ತದೆ: "0, 1, 2, 3"
05:51 ಏಕೆಂದರೆ, 'static' (ಸ್ಟ್ಯಾಟಿಕ್) ವೇರಿಯೇಬಲ್ ಗಳು ಗ್ಲೋಬಲ್ ವೇರಿಯೇಬಲ್ ಗಳಾಗಿವೆ.
05:56 'ಸ್ಟ್ಯಾಟಿಕ್' ವೇರಿಯೇಬಲ್ ನ ಸ್ಕೋಪ್, ಅವುಗಳನ್ನು ಡಿಫೈನ್ ಮಾಡಿದ ಫಂಕ್ಷನ್ ನಲ್ಲಿ ಲೋಕಲ್ ಆಗಿದೆ.
06:03 ಅವುಗಳು ತಮ್ಮ ವ್ಯಾಲ್ಯೂಅನ್ನು ಫಂಕ್ಷನ್-ಕಾಲ್ ಗಳ ನಡುವೆ ಕಳೆದುಕೊಳ್ಳುವುದಿಲ್ಲ.
06:08 ಈಗ, ನಾವು 'extern' ಎಂಬ ಕೀವರ್ಡ್ ಬಗ್ಗೆ ತಿಳಿಯೋಣ.
06:12 'extern' ವೇರಿಯೇಬಲ್ ನ ಸ್ಕೋಪ್, main ಪ್ರೊಗ್ರಾಂನ ಉದ್ದಕ್ಕೂ ಇರುತ್ತದೆ.
06:17 'extern' ವೇರಿಯೇಬಲ್ ನ ವ್ಯಾಖ್ಯಾನವು (definition), 'C' ಪ್ರೊಗ್ರಾಂನಲ್ಲಿ ಎಲ್ಲಿಯಾದರೂ ಇರಬಹುದು.
06:23 ಡೀಫಾಲ್ಟ್ ಆಗಿ, 'extern' (ಎಕ್ಸ್ಟರ್ನ್) ವೇರಿಯೇಬಲ್ ಗಳನ್ನು ಸೊನ್ನೆಗೆ (zero) ಇನಿಶಿಯಲೈಸ್ ಮಾಡಲಾಗುತ್ತದೆ.
06:28 ಪ್ರೊಗ್ರಾಂನಲ್ಲಿ, ಇವುಗಳನ್ನು ಎಲ್ಲ ಫಂಕ್ಷನ್ ಗಳಿಂದ ಆಕ್ಸೆಸ್ ಮಾಡಬಹುದು.
06:33 ಇವುಗಳನ್ನು 'CPU ಮೆಮೊರೀ'ಯಲ್ಲಿ ಸ್ಟೋರ್ ಮಾಡಲಾಗುವುದು.
06:36 ನಾವು ಒಂದು ಉದಾಹರಣೆಯನ್ನು ನೋಡೋಣ.
06:38 ನನ್ನ ಹತ್ತಿರ ಒಂದು ಕೋಡ್ ಫೈಲ್ ಇದೆ; ನಾವು ಅದನ್ನು ನೋಡೋಣ.
06:42 ನಮ್ಮ ಫೈಲ್ ನ ಹೆಸರು "extern.c" ಎಂದು ಇರುವುದನ್ನು ಗಮನಿಸಿ.
06:47 ನಾನು 'integer variable 'x' ' ಎಂಬ ಒಂದು ವೇರಿಯೇಬಲ್ ಅನ್ನು 10 (ಹತ್ತು) ಕ್ಕೆ ಇನಿಶಿಯಲೈಸ್ ಮಾಡಿದ್ದೇನೆ.
06:54 ಇದು 'main()' ಫಂಕ್ಷನ್ ಆಗಿದೆ. 'main()' ಫಂಕ್ಷನ್ ನಲ್ಲಿ, ನಾನು ಒಂದು 'extern integer variable y' ಯನ್ನು ಡಿಕ್ಲೇರ್ ಮಾಡಿದ್ದೇನೆ.
07:03 'printf' ಸ್ಟೇಟ್ಮೆಂಟ್ ಗಳನ್ನು ಬಳಸಿ, ನಾವು 'x' ಮತ್ತು 'y' ನ ವ್ಯಾಲ್ಯೂಗಳನ್ನು ತೋರಿಸುತ್ತೇವೆ.

ಇದು 'return' ಸ್ಟೇಟ್ಮೆಂಟ್ ಆಗಿದೆ.

07:12 'main()' ಫಂಕ್ಷನ್ ಮುಗಿದ ನಂತರ, ನಾವು 'y' ಯನ್ನು 50 ಗೆ ಇನಿಶಿಯಲೈಸ್ ಮಾಡುವೆವು.
07:18 ಈಗ, ಟರ್ಮಿನಲ್ ಗೆ ಬದಲಾಯಿಸಿ ಮತ್ತು ಔಟ್ಪುಟ್ ಏನಿರುವುದೆಂದು ನಾವು ನೋಡೋಣ.
07:24 ಹೀಗೆ ಟೈಪ್ ಮಾಡಿ: 'gcc space extern.c space hyphen o space ext'. 'Enter' ಅನ್ನು ಒತ್ತಿ.
07:35 ಟೈಪ್ ಮಾಡಿ: 'dot slash ext'. 'Enter' ಅನ್ನು ಒತ್ತಿ.
07:40 ಔಟ್ಪುಟ್ ಅನ್ನು ಹೀಗೆ ತೋರಿಸಲಾಗುತ್ತದೆ:

'The value of x is 10 ' 'The value of y is 50'

07:48 ನಾವು ತಿಳಿದಂತೆ, 'extern' ಕೀವರ್ಡ್ ನ ವ್ಯಾಲ್ಯೂ, ಮೇನ್ ಪ್ರೊಗ್ರಾಂನ ಉದ್ದಕ್ಕೂ ಇರುತ್ತದೆ.
07:55 ನಾವು ಇದನ್ನು ಪ್ರೊಗ್ರಾಂನಲ್ಲಿ ಎಲ್ಲಿಯಾದರೂ ಡಿಫೈನ್ ಮಾಡಬಹುದು.
07:59 ಎರಡೂ ಸ್ಟೇಟ್ಮೆಂಟ್ ಗಳು ಸಮರ್ಥಿಸಲ್ಪಡುತ್ತವೆ.
08:02 ಈಗ, ನಾವು 'register' ಎಂಬ ಕೀವರ್ಡ್ ನತ್ತ ನಡೆಯೋಣ.
08:06 'ರೆಜಿಸ್ಟರ್ ವೇರಿಯೇಬಲ್'ಗಳು, ಸಾಮಾನ್ಯ 'ವೇರಿಯೇಬಲ್'ಗಳಿಗಿಂತ ಬೇಗನೆ ಆಕ್ಸೆಸ್ ಮಾಡಲ್ಪಡುತ್ತವೆ.
08:13 ಅವುಗಳನ್ನು 'ಮೇನ್ ಮೆಮೊರೀ'ಗೆ ಬದಲಾಗಿ 'ರೆಜಿಸ್ಟರ್ ಮೆಮರೀ'ಯಲ್ಲಿ ಸ್ಟೋರ್ ಮಾಡಲಾಗುತ್ತದೆ.
08:19 'ರಜಿಸ್ಟರ್ ಸೈಜ್' ತುಂಬಾ ಚಿಕ್ಕದಾಗಿರುವುದರಿಂದ ಸೀಮಿತ ಸಂಖ್ಯೆಯ ವೇರಿಯೇಬಲ್ ಗಳನ್ನು ಬಳಸಬಹುದು.
08:25 16 ಬಿಟ್ಸ್, 32 ಬಿಟ್ಸ್ ಅಥವಾ 64 ಬಿಟ್ಸ್.
08:30 ಈಗ ನಾವು ಒಂದು ಉದಾಹರಣೆಯನ್ನು ನೋಡೋಣ. ನನ್ನ ಹತ್ತಿರ ಒಂದು ಕೋಡ್ ಫೈಲ್ ಇದೆ. ನಾವು ಅದನ್ನು ನೋಡೋಣ.
08:37 ಫೈಲ್ ನ ಹೆಸರು 'register.c' ಎಂದು ಇರುವುದನ್ನು ಗಮನಿಸಿ.
08:42 ಇಲ್ಲಿ, ನಾವು 'register integer variable' (ರೆಜಿಸ್ಟರ್ ಇಂಟೀಜರ್ ವೇರಿಯೇಬಲ್) ಅನ್ನು ಡಿಕ್ಲೇರ್ ಮಾಡಿದ್ದೇವೆ.
08:47 ಈ ವೇರಿಯೇಬಲ್, 'ರೆಜಿಸ್ಟರ್ ಮೆಮೊರೀ' ಯಲ್ಲಿ ನೇರವಾಗಿ ಸ್ಟೋರ್ ಆಗುವುದು.
08:53 ಇದು, 'i' ನ ವ್ಯಾಲ್ಯೂವನ್ನು '1' ರಿಂದ '5' ರ ವರೆಗೆ ತೋರಿಸುವ 'for' ಲೂಪ್ ಆಗಿದೆ.
08:59 ಇದು 'i' ನ ವ್ಯಾಲ್ಯೂವನ್ನು ತೋರಿಸುವುದು.
09:03 ನಾವು ಪ್ರೊಗ್ರಾಂಅನ್ನು ಎಕ್ಸಿಕ್ಯೂಟ್ ಮಾಡಿ ನೋಡೋಣ.
09:07 ಟರ್ಮಿನಲ್ ನ ಮೇಲೆ ಹೀಗೆ ಟೈಪ್ ಮಾಡಿ: 'gcc space register.c space hyphen o space register'
09:17 'Enter' ಅನ್ನು ಒತ್ತಿ. ಹೀಗೆ ಟೈಪ್ ಮಾಡಿ: 'dot slash register'. 'Enter' ಅನ್ನು ಒತ್ತಿ.
09:25 ಔಟ್ಪುಟ್ ಹೀಗೆ ಕಾಣುವುದನ್ನು ನೀವು ನೋಡಬಹುದು: “Values stored in register memory 1 2 3 4 5”.
09:34 ಇಲ್ಲಿಗೆ, ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿರುತ್ತೇವೆ. ಸಂಕ್ಷಿಪ್ತವಾಗಿ,
09:39 ಈ ಟ್ಯುಟೊರಿಯಲ್ ನಲ್ಲಿ, ನಾವು-
  • 'ಸ್ಟೋರೇಜ್ ಕ್ಲಾಸ್ ಸ್ಪೆಸಿಫೈರ್ಸ್' (Storage class specifiers)
  • 'auto' ಕೀವರ್ಡ್
  • 'static' ಕೀವರ್ಡ್
  • 'extern' ಕೀವರ್ಡ್
  • 'register' ಕೀವರ್ಡ್ ಗಳನ್ನು ಕಲಿತಿದ್ದೇವೆ.
09:52 ಒಂದು ಅಸೈನ್ಮೆಂಟ್, ಮೊದಲ 5 ಸಂಖ್ಯೆಗಳ ಮೊತ್ತವನ್ನು ಪ್ರಿಂಟ್ ಮಾಡಲು ಒಂದು ಪ್ರೊಗ್ರಾಂಅನ್ನು ಬರೆಯಿರಿ.
09:59 ಪ್ರೊಗ್ರಾಂ ನಲ್ಲಿ, 'auto' ಮತ್ತು 'static' ಎಂಬ ಎರಡೂ ಕೀವರ್ಡ್ ಗಳನ್ನು ಡಿಕ್ಲೇರ್ ಮಾಡಿ.
10:04 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
10:07 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
10:11 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:16 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
10:22 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org

10:33 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
10:38 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:45 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುತ್ತದೆ.

http://spoken-tutorial.org\NMEICT-Intro

10:52 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ.

ವಂದನೆಗಳು.

Contributors and Content Editors

PoojaMoolya, Pratik kamble, Sandhya.np14, Vasudeva ahitanal