Advance-C/C2/Storage-class-specifiers/Kannada
From Script | Spoken-Tutorial
Time | Narration |
00:01 | Storage class specifiers ಎಂಬ Spoken Tutorialಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, ನಾವು:
'ಸ್ಟೋರೇಜ್ ಕ್ಲಾಸ್ ಸ್ಪೆಸಿಫೈರ್ಸ್' (Storage class specifiers) 'auto' ಕೀವರ್ಡ್ 'static' ಕೀವರ್ಡ್ 'extern' ಕೀವರ್ಡ್ 'register' ಕೀವರ್ಡ್ ಗಳನ್ನು ಉದಾಹರಣೆಗಳ ಸಹಾಯದಿಂದ ಕಲಿಯುವೆವು. |
00:22 | ಈ ಟ್ಯುಟೋರಿಯಲ್ ಗಾಗಿ, ನಾನು:
Ubuntu Operating system ಆವೃತ್ತಿ 11.10 ಮತ್ತು gcc Compiler ನ 4.6.1 ನೇ ಆವೃತ್ತಿಗಳನ್ನು ಬಳಸುತ್ತಿದ್ದೇನೆ. |
00:34 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'C' ಟ್ಯುಟೋರಿಯಲ್ ಗಳನ್ನು ಚೆನ್ನಾಗಿ ತಿಳಿದಿರಬೇಕು. |
00:41 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಕೆಳಗೆ ತೋರಿಸಿದ ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. |
00:47 | ನಾನು ’ಸ್ಟೋರೇಜ್ ಕ್ಲಾಸ್ ಸ್ಪೆಸಿಫೈರ್ಸ’ ಗಳ ಪರಿಚಯದೊಂದಿಗೆ ಆರಂಭಿಸುವೆನು. |
00:52 | 'ಸ್ಪೆಸಿಫೈರ್'ಗಳು (specifiers) - * ವೇರಿಯೇಬಲ್ ಅನ್ನು ಎಲ್ಲಿ ಸ್ಟೋರ್ ಮಾಡುವುದು, |
00:57 | ವೇರಿಯೇಬಲ್ ಅನ್ನು ಹೇಗೆ ಸ್ಟೋರ್ ಮಾಡುವುದು , |
00:59 | ಒಂದು ವೇರಿಯೇಬಲ್ ನ ಆರಂಭಿಕ ವ್ಯಾಲ್ಯೂ ಏನಿದೆ, |
01:03 | * ಒಂದು ವೇರಿಯೇಬಲ್ ಎಷ್ಟು ಅವಧಿಯ ವರೆಗೆ ಇರುತ್ತದೆ ಎಂಬುದರ ಬಗ್ಗೆ ಕಂಪೈಲರ್ ಗೆ ಹೇಳುತ್ತವೆ. |
01:06 | ಇದರ ಸಿಂಟ್ಯಾಕ್ಸ್ ಹೀಗಿದೆ: 'storage_specifier data_type variable _name' |
01:13 | ’ಸ್ಟೋರೇಜ್ ಕ್ಲಾಸ್ ಸ್ಪೆಸಿಫೈರ್ಸ’ ಗಳ (storage class specifiers) ಪ್ರಕಾರಗಳು ಹೀಗಿವೆ:
'auto' 'static' 'extern' 'register'. |
01:21 | 'auto' ಎಂಬ ಕೀವರ್ಡ್ ನೊಂದಿಗೆ ನಾವು ಆರಂಭಿಸೋಣ. |
01:24 | 'auto' ಎಂಬ ಕೀವರ್ಡ್, ಅಟೋಮ್ಯಾಟಿಕ್ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುತ್ತದೆ. |
01:28 | ಇದು ಲೋಕಲ್ ಸ್ಕೋಪನ್ನು ಹೊಂದಿದೆ. |
01:30 | ಕೀವರ್ಡ್ ಗಳು ತಮ್ಮಷ್ಟಕ್ಕೆ ತಾವೇ ಇನಿಶಿಯಲೈಸ್ ಮಾಡಲ್ಪಡುವುದಿಲ್ಲ. |
01:34 | ಡಿಕ್ಲೇರ್ ಮಾಡುವಾಗ ನೀವು ಕೀವರ್ಡ್ ಗಳನ್ನು ಸ್ಪಷ್ಟವಾಗಿ ಇನಿಶಿಯಲೈಸ್ ಮಾಡಬೇಕಾಗುತ್ತದೆ. |
01:39 | 'CPU' ಮೆಮೊರೀ (memory), ಕೀವರ್ಡ್ ಗಳ ’ಸ್ಟೋರೇಜ್ ಸ್ಪೇಸ್’ ಆಗಿದೆ. |
01:43 | ನಾವು ಒಂದು ಉದಾಹರಣೆಯನ್ನು ನೋಡೋಣ. ನನ್ನ ಹತ್ತಿರ ಒಂದು ಕೋಡ್ ಫೈಲ್ ಇದೆ. ನಾವು ಇದನ್ನು ನೋಡೋಣ. |
01:49 | ನಮ್ಮ ಫೈಲ್ ನ ಹೆಸರು 'auto.c' ಎಂದು ಇರುವುದನ್ನು ಗಮನಿಸಿ. |
01:54 | ನಾವು “increment()” ಎಂಬ ಒಂದು ಫಂಕ್ಷನ್ ಅನ್ನು ಡಿಕ್ಲೇರ್ ಮಾಡಿದ್ದೇವೆ. |
01:58 | ಇದು 'main()' (ಮೇನ್) ಎಂಬ ಫಂಕ್ಷನ್ ಆಗಿದೆ. |
02:00 | 'main()' ಫಂಕ್ಷನ್ ನಲ್ಲಿ, 'increment()' ಫಂಕ್ಷನ್ ಅನ್ನು ನಾಲ್ಕು ಸಲ ’ಕಾಲ್’ ಮಾಡಲಾಗಿದೆ. |
02:06 | ಆಮೇಲೆ, ನಾವು 'return 0' ಸ್ಟೇಟ್ಮೆಂಟ್ ಅನ್ನು ಪಡೆದಿದ್ದೇವೆ. |
02:10 | ನಾವು ಫಂಕ್ಷನ್ ನ ವ್ಯಾಖ್ಯಾನವನ್ನು (definition) ನೋಡೋಣ. |
02:14 | ಇಲ್ಲಿ, ನಾವು 'i' ಎಂಬ ವೇರಿಯೇಬಲ್ ಅನ್ನು 'auto int' ಎಂದು ಡಿಕ್ಲೇರ್ ಮಾಡಿದ್ದೇವೆ. ಇದು ’ಲೋಕಲ್’ ಸ್ಕೋಪನ್ನು ಹೊಂದಿದೆ. |
02:21 | ನಂತರ, ನಾವು 'printf' ಅನ್ನು ಬಳಸಿ 'i' ನ ವ್ಯಾಲ್ಯೂವನ್ನು ತೋರಿಸುತ್ತೇವೆ. |
02:26 | 'i' ನ ವ್ಯಾಲ್ಯೂವನ್ನು ಇಲ್ಲಿ ಹೆಚ್ಚಿಸಲಾಗುತ್ತದೆ (increment). |
02:30 | ನಮ್ಮ ಕೀಬೋರ್ಡ್ ಮೇಲಿನ 'Ctrl+Alt+T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ನಾವು ಓಪನ್ ಮಾಡೋಣ. |
02:38 | ಹೀಗೆ ಟೈಪ್ ಮಾಡಿ: ' gcc space auto.c space hyphen o space auto'. 'Enter' ಅನ್ನು ಒತ್ತಿ. |
02:48 | ಟೈಪ್ ಮಾಡಿ: ' dot slash auto' |
02:51 | ಔಟ್ಪುಟ್ ಸೊನ್ನೆಯಾಗಿದೆ. |
02:54 | ಈಗ ನಮ್ಮ ಪ್ರೊಗ್ರಾಂಗೆ ಹಿಂದಿರುಗಿ. |
02:57 | ನಾವು 'main()' ಫಂಕ್ಷನ್ ನ ಮೇಲಿರುವ, 'auto' ವೇರಿಯೇಬಲ್ 'i ' ಅನ್ನು ಇನಿಶಿಯಲೈಸ್ ಮಾಡೋಣ. |
03:02 | ನಾನು ಇಲ್ಲಿಯ ಡಿಕ್ಲೆರೇಶನ್ ಮತ್ತು ಇನಿಶಿಯಲೈಸೇಶನ್ ಗಳನ್ನು ಇಲ್ಲಿಂದ ಕಟ್ ಮಾಡಿ ಇಲ್ಲಿ ಪೇಸ್ಟ್ ಮಾಡುವೆನು. 'Save' ಮೇಲೆ ಕ್ಲಿಕ್ ಮಾಡುವೆನು. |
03:14 | ನಾವು ಟರ್ಮಿನಲ್ ನ ಮೇಲೆ ಎಕ್ಸಿಕ್ಯೂಟ್ ಮಾಡೋಣ. ಅಪ್-ಆರೋ ಕೀಯನ್ನು ಎರಡು ಸಲ ಒತ್ತಿ. 'Enter' ಅನ್ನು ಒತ್ತಿ. |
03:22 | ನಾವು ಹೀಗೆ ಒಂದು ಎರರ್ ಅನ್ನು ಪಡೆಯುತ್ತೇವೆ: “file-scope declaration of 'i' specifies 'auto’ ”. |
03:29 | ಏಕೆಂದರೆ, 'auto' ವೇರಿಯೇಬಲ್, ಫಂಕ್ಷನ್ ಗೆ ಲೋಕಲ್ ಆಗಿದೆ. |
03:34 | ನಾವು ಇದನ್ನು ಗ್ಲೋಬಲ್ ಆಗಿ ಇನಿಶಿಯಲೈಸ್ ಮಾಡಲು ಸಾಧ್ಯವಿಲ್ಲ. |
03:37 | ನಾವು ಎರರ್ ಅನ್ನು ಸರಿಪಡಿಸೋಣ. ನಮ್ಮ ಪ್ರೊಗ್ರಾಂಗೆ ಹಿಂದಿರುಗಿ. |
03:42 | ಇದನ್ನು ಡಿಲೀಟ್ ಮಾಡಿ; ಇಲ್ಲಿ ಪೇಸ್ಟ್ ಮಾಡಿ. |
03:47 | 'Save' ಮೇಲೆ ಕ್ಲಿಕ್ ಮಾಡಿ ಮತ್ತು ಟರ್ಮಿನಲ್ ನ ಮೇಲೆ ಎಕ್ಸಿಕ್ಯೂಟ್ ಮಾಡಿ. |
03:52 | ಅಪ್-ಆರೋ ಕೀಯನ್ನು ಒತ್ತಿ. ಹಿಂದಿನ ಕಮಾಂಡನ್ನು ಮರಳಿ ಪಡೆಯಿರಿ. |
03:57 | 'Enter' ಅನ್ನು ಒತ್ತಿ. ಹೀಗೆ ಟೈಪ್ ಮಾಡಿ: dot slash auto. 'Enter' ಅನ್ನು ಒತ್ತಿ. |
04:03 | ಹೌದು, ಇದು ಕೆಲಸ ಮಾಡುತ್ತದೆ! ಔಟ್ಪುಟ್ ಸೊನ್ನೆಯಾಗಿದೆ. |
04:07 | ಏಕೆಂದರೆ ನಾವು 'i' ನ ವ್ಯಾಲ್ಯೂವನ್ನು ಸೊನ್ನೆಗೆ ಇನಿಶಿಯಲೈಸ್ ಮಾಡಿದ್ದೇವೆ. |
04:13 | ಈಗ, ನಾವು 'static' ಎಂಬ ವೇರಿಯೇಬಲ್ ಅನ್ನು ನೋಡೋಣ. |
04:16 | 'ಸ್ಟ್ಯಾಟಿಕ್' (static) ವೇರಿಯೇಬಲ್ ನ ಬಗ್ಗೆ ಹಿಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ಅಭ್ಯಾಸ ಮಾಡಿದ್ದರೂ, ಇಲ್ಲಿ ನಾನು ಸಂಕ್ಷಿಪ್ತವಾಗಿ ವಿವರಿಸುವೆನು. |
04:24 | 'static' ವೇರಿಯೇಬಲ್ ಗಳನ್ನು ಸೊನ್ನೆಗೆ ಇನಿಶಿಯಲೈಸ್ ಮಾಡಲಾಗುವುದು. |
04:28 | ಪ್ರೊಗ್ರಾಂ ಕಂಟ್ರೋಲ್, 'ಬ್ಲಾಕ್'ನಿಂದ ಹೊರಗೆ ಹೋದ ಮೇಲೆ ಸಹ ಅವುಗಳು ನಾಶವಾಗುವುದಿಲ್ಲ. |
04:35 | ವೇರಿಯೇಬಲ್ ನ ವ್ಯಾಲ್ಯೂ, ವಿವಿಧ 'ಫಂಕ್ಷನ್ ಕಾಲ್' ಗಳ ನಡುವೆಯೂ ಮುಂದುವರಿಯುತ್ತದೆ. |
04:41 | 'CPU ಮೆಮೊರೀ', ಇವುಗಳನ್ನು ಸ್ಟೊರ್ ಮಾಡುವ ಸ್ಥಳ (ಸ್ಟೋರೇಜ್ ಸ್ಪೇಸ್) ಆಗಿದೆ. |
04:45 | ನಾವು ಒಂದು ಉದಾಹರಣೆಯನ್ನು ನೋಡೋಣ. ನಾನು ಇದೇ ಕೋಡ್ ಫೈಲನ್ನು ಎಡಿಟ್ ಮಾಡುವೆನು. |
04:51 | ನಮ್ಮ ಪ್ರೊಗ್ರಾಂಗೆ ಹಿಂದಿರುಗಿ. |
04:54 | 'Ctrl + Shift + S' ಕೀಗಳನ್ನು ಒಟ್ಟಿಗೇ ಒತ್ತಿ. |
05:01 | ಈಗ, ನಾನು ಕೇವಲ ಫೈಲ್ ನ ಹೆಸರನ್ನು static ಎಂದು ಬದಲಾಯಿಸುವೆನು. Saveನ ಮೇಲೆ ಕ್ಲಿಕ್ ಮಾಡಿ. |
05:10 | ಈಗ, ನಾನು ವೇರಿಯೇಬಲ್ 'i' ನ ಇನಿಶಿಯಲೈಸೇಶನ್ ಅನ್ನು static int i equal to zero ಎಂದು ಬದಲಾಯಿಸುವೆನು.
'Save'ನ ಮೇಲೆ ಕ್ಲಿಕ್ ಮಾಡಿ. |
05:23 | ಈಗ ಏನಾಗುತ್ತದೆ ಎಂದು ನಾವು ನೋಡೋಣ. ಫೈಲನ್ನು ಟರ್ಮಿನಲ್ ನ ಮೇಲೆ ಎಕ್ಸಿಕ್ಯೂಟ್ ಮಾಡಿ. |
05:30 | ಹೀಗೆ ಟೈಪ್ ಮಾಡಿ: gcc space static.c space hyphen o space stat. Enter ಅನ್ನು ಒತ್ತಿ. |
05:41 | ಹೀಗೆ ಟೈಪ್ ಮಾಡಿ: dot slash stat. Enter ಅನ್ನು ಒತ್ತಿ. |
05:46 | ಔಟ್ಪುಟ್ ಹೀಗೆ ಕಾಣುತ್ತದೆ: "0, 1, 2, 3" |
05:51 | ಏಕೆಂದರೆ, 'static' (ಸ್ಟ್ಯಾಟಿಕ್) ವೇರಿಯೇಬಲ್ ಗಳು ಗ್ಲೋಬಲ್ ವೇರಿಯೇಬಲ್ ಗಳಾಗಿವೆ. |
05:56 | 'ಸ್ಟ್ಯಾಟಿಕ್' ವೇರಿಯೇಬಲ್ ನ ಸ್ಕೋಪ್, ಅವುಗಳನ್ನು ಡಿಫೈನ್ ಮಾಡಿದ ಫಂಕ್ಷನ್ ನಲ್ಲಿ ಲೋಕಲ್ ಆಗಿದೆ. |
06:03 | ಅವುಗಳು ತಮ್ಮ ವ್ಯಾಲ್ಯೂಅನ್ನು ಫಂಕ್ಷನ್-ಕಾಲ್ ಗಳ ನಡುವೆ ಕಳೆದುಕೊಳ್ಳುವುದಿಲ್ಲ. |
06:08 | ಈಗ, ನಾವು extern ಎಂಬ ಕೀವರ್ಡ್ ಬಗ್ಗೆ ತಿಳಿಯೋಣ. |
06:12 | extern ವೇರಿಯೇಬಲ್ ನ ಸ್ಕೋಪ್, main ಪ್ರೊಗ್ರಾಂನ ಉದ್ದಕ್ಕೂ ಇರುತ್ತದೆ. |
06:17 | extern ವೇರಿಯೇಬಲ್ ನ ವ್ಯಾಖ್ಯಾನವು (definition), 'C' ಪ್ರೊಗ್ರಾಂನಲ್ಲಿ ಎಲ್ಲಿಯಾದರೂ ಇರಬಹುದು. |
06:23 | ಡೀಫಾಲ್ಟ್ ಆಗಿ, 'extern' (ಎಕ್ಸ್ಟರ್ನ್) ವೇರಿಯೇಬಲ್ ಗಳನ್ನು ಸೊನ್ನೆಗೆ (zero) ಇನಿಶಿಯಲೈಸ್ ಮಾಡಲಾಗುತ್ತದೆ. |
06:28 | ಪ್ರೊಗ್ರಾಂನಲ್ಲಿ, ಇವುಗಳನ್ನು ಎಲ್ಲ ಫಂಕ್ಷನ್ ಗಳಿಂದ ಆಕ್ಸೆಸ್ ಮಾಡಬಹುದು. |
06:33 | ಇವುಗಳನ್ನು 'CPU ಮೆಮೊರೀ'ಯಲ್ಲಿ ಸ್ಟೋರ್ ಮಾಡಲಾಗುವುದು. |
06:36 | ನಾವು ಒಂದು ಉದಾಹರಣೆಯನ್ನು ನೋಡೋಣ. |
06:38 | ನನ್ನ ಹತ್ತಿರ ಒಂದು ಕೋಡ್ ಫೈಲ್ ಇದೆ; ನಾವು ಅದನ್ನು ನೋಡೋಣ. |
06:42 | ನಮ್ಮ ಫೈಲ್ ನ ಹೆಸರು "extern.c" ಎಂದು ಇರುವುದನ್ನು ಗಮನಿಸಿ. |
06:47 | ನಾನು 'integer variable x ' ಎಂಬ ಒಂದು ವೇರಿಯೇಬಲ್ ಅನ್ನು 10 (ಹತ್ತು) ಕ್ಕೆ ಇನಿಶಿಯಲೈಸ್ ಮಾಡಿದ್ದೇನೆ. |
06:54 | ಇದು main() ಫಂಕ್ಷನ್ ಆಗಿದೆ. main() ಫಂಕ್ಷನ್ ನಲ್ಲಿ, ನಾನು ಒಂದು 'extern integer variable y' ಯನ್ನು ಡಿಕ್ಲೇರ್ ಮಾಡಿದ್ದೇನೆ. |
07:03 | printf ಸ್ಟೇಟ್ಮೆಂಟ್ ಗಳನ್ನು ಬಳಸಿ, ನಾವು 'x' ಮತ್ತು 'y' ನ ವ್ಯಾಲ್ಯೂಗಳನ್ನು ತೋರಿಸುತ್ತೇವೆ.
ಇದು 'return' ಸ್ಟೇಟ್ಮೆಂಟ್ ಆಗಿದೆ. |
07:12 | 'main()' ಫಂಕ್ಷನ್ ಮುಗಿದ ನಂತರ, ನಾವು 'y' ಯನ್ನು 50 ಗೆ ಇನಿಶಿಯಲೈಸ್ ಮಾಡುವೆವು. |
07:18 | ಈಗ, ಟರ್ಮಿನಲ್ ಗೆ ಬದಲಾಯಿಸಿ ಮತ್ತು ಔಟ್ಪುಟ್ ಏನಿರುವುದೆಂದು ನಾವು ನೋಡೋಣ. |
07:24 | ಹೀಗೆ ಟೈಪ್ ಮಾಡಿ: gcc space extern.c space hyphen o space ext. 'Enter' ಅನ್ನು ಒತ್ತಿ. |
07:35 | ಟೈಪ್ ಮಾಡಿ: 'dot slash ext'. 'Enter' ಅನ್ನು ಒತ್ತಿ. |
07:40 | ಔಟ್ಪುಟ್ ಅನ್ನು ಹೀಗೆ ತೋರಿಸಲಾಗುತ್ತದೆ:
'The value of x is 10 ' 'The value of y is 50' |
07:48 | ನಾವು ತಿಳಿದಂತೆ, 'extern' ಕೀವರ್ಡ್ ನ ವ್ಯಾಲ್ಯೂ, ಮೇನ್ ಪ್ರೊಗ್ರಾಂನ ಉದ್ದಕ್ಕೂ ಇರುತ್ತದೆ. |
07:55 | ನಾವು ಇದನ್ನು ಪ್ರೊಗ್ರಾಂನಲ್ಲಿ ಎಲ್ಲಿಯಾದರೂ ಡಿಫೈನ್ ಮಾಡಬಹುದು. |
07:59 | ಎರಡೂ ಸ್ಟೇಟ್ಮೆಂಟ್ ಗಳು ಸಮರ್ಥಿಸಲ್ಪಡುತ್ತವೆ. |
08:02 | ಈಗ, ನಾವು register ಎಂಬ ಕೀವರ್ಡ್ ನತ್ತ ನಡೆಯೋಣ. |
08:06 | 'ರೆಜಿಸ್ಟರ್ ವೇರಿಯೇಬಲ್'ಗಳು, ಸಾಮಾನ್ಯ 'ವೇರಿಯೇಬಲ್'ಗಳಿಗಿಂತ ಬೇಗನೆ ಆಕ್ಸೆಸ್ ಮಾಡಲ್ಪಡುತ್ತವೆ. |
08:13 | ಅವುಗಳನ್ನು 'ಮೇನ್ ಮೆಮೊರೀ'ಗೆ ಬದಲಾಗಿ 'ರೆಜಿಸ್ಟರ್ ಮೆಮರೀ'ಯಲ್ಲಿ ಸ್ಟೋರ್ ಮಾಡಲಾಗುತ್ತದೆ. |
08:19 | 'ರಜಿಸ್ಟರ್ ಸೈಜ್' ತುಂಬಾ ಚಿಕ್ಕದಾಗಿರುವುದರಿಂದ ಸೀಮಿತ ಸಂಖ್ಯೆಯ ವೇರಿಯೇಬಲ್ ಗಳನ್ನು ಬಳಸಬಹುದು. |
08:25 | 16 ಬಿಟ್ಸ್, 32 ಬಿಟ್ಸ್ ಅಥವಾ 64 ಬಿಟ್ಸ್. |
08:30 | ಈಗ ನಾವು ಒಂದು ಉದಾಹರಣೆಯನ್ನು ನೋಡೋಣ. ನನ್ನ ಹತ್ತಿರ ಒಂದು ಕೋಡ್ ಫೈಲ್ ಇದೆ. ನಾವು ಅದನ್ನು ನೋಡೋಣ. |
08:37 | ಫೈಲ್ ನ ಹೆಸರು register.c ಎಂದು ಇರುವುದನ್ನು ಗಮನಿಸಿ. |
08:42 | ಇಲ್ಲಿ, ನಾವು register integer variable (ರೆಜಿಸ್ಟರ್ ಇಂಟೀಜರ್ ವೇರಿಯೇಬಲ್) ಅನ್ನು ಡಿಕ್ಲೇರ್ ಮಾಡಿದ್ದೇವೆ. |
08:47 | ಈ ವೇರಿಯೇಬಲ್, 'ರೆಜಿಸ್ಟರ್ ಮೆಮೊರೀ' ಯಲ್ಲಿ ನೇರವಾಗಿ ಸ್ಟೋರ್ ಆಗುವುದು. |
08:53 | ಇದು, 'i' ನ ವ್ಯಾಲ್ಯೂವನ್ನು '1' ರಿಂದ '5' ರ ವರೆಗೆ ತೋರಿಸುವ 'for' ಲೂಪ್ ಆಗಿದೆ. |
08:59 | ಇದು 'i' ನ ವ್ಯಾಲ್ಯೂವನ್ನು ತೋರಿಸುವುದು. |
09:03 | ನಾವು ಪ್ರೊಗ್ರಾಂಅನ್ನು ಎಕ್ಸಿಕ್ಯೂಟ್ ಮಾಡಿ ನೋಡೋಣ. |
09:07 | ಟರ್ಮಿನಲ್ ನ ಮೇಲೆ ಹೀಗೆ ಟೈಪ್ ಮಾಡಿ: gcc space register.c space hyphen o space register |
09:17 | 'Enter' ಅನ್ನು ಒತ್ತಿ. ಹೀಗೆ ಟೈಪ್ ಮಾಡಿ: 'dot slash register'. 'Enter' ಅನ್ನು ಒತ್ತಿ. |
09:25 | ಔಟ್ಪುಟ್ ಹೀಗೆ ಕಾಣುವುದನ್ನು ನೀವು ನೋಡಬಹುದು: “Values stored in register memory 1 2 3 4 5”. |
09:34 | ಇಲ್ಲಿಗೆ, ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿರುತ್ತೇವೆ. ಸಂಕ್ಷಿಪ್ತವಾಗಿ, |
09:39 | ಈ ಟ್ಯುಟೊರಿಯಲ್ ನಲ್ಲಿ, ನಾವು-
'ಸ್ಟೋರೇಜ್ ಕ್ಲಾಸ್ ಸ್ಪೆಸಿಫೈರ್ಸ್' (Storage class specifiers) 'auto' ಕೀವರ್ಡ್ 'static' ಕೀವರ್ಡ್ 'extern' ಕೀವರ್ಡ್ 'register' ಕೀವರ್ಡ್ ಗಳನ್ನು ಕಲಿತಿದ್ದೇವೆ. |
09:52 | ಒಂದು ಅಸೈನ್ಮೆಂಟ್, ಮೊದಲ 5 ಸಂಖ್ಯೆಗಳ ಮೊತ್ತವನ್ನು ಪ್ರಿಂಟ್ ಮಾಡಲು ಒಂದು ಪ್ರೊಗ್ರಾಂಅನ್ನು ಬರೆಯಿರಿ. |
09:59 | ಪ್ರೊಗ್ರಾಂ ನಲ್ಲಿ, 'auto' ಮತ್ತು 'static' ಎಂಬ ಎರಡೂ ಕೀವರ್ಡ್ ಗಳನ್ನು ಡಿಕ್ಲೇರ್ ಮಾಡಿ. |
10:04 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
10:07 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
10:11 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:16 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
10:22 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
10:33 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
10:38 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:45 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುತ್ತದೆ.http://spoken-tutorial.org\NMEICT-Intro |
10:52 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ.ವಂದನೆಗಳು. |