Inkscape/C2/Create-and-edit-multiple-objects/Kannada

From Script | Spoken-Tutorial
Revision as of 02:23, 30 April 2016 by Rakeshkkrao (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ನಮಸ್ಕಾರ, ಕ್ರಿಯೇಟ್ ಆಂಡ್ ಎಡಿಟ್ ಮಲ್ಟಿಪಲ್ ಆಬ್ಜೆಕ್ಟ್ಸ್ ಎನ್ನುವ ಇಂಕ್-ಸ್ಕೇಪ್-ನ ಟ್ಯುಟೊರಿಯಲ್-ಗೆ ಸ್ವಾಗತ
00:08 ಈ ಟ್ಯುಟೋರಿಯಲ್ ನಲ್ಲಿ, ನಾವು ಕಲಿಯುವ ಅಂಶಗಳು : ಆಬ್ಜೆಕ್ಟ್ ಗಳನ್ನು ಕಾಪಿ ಮತ್ತು ಪೇಸ್ಟ್ ಮಾಡುವುದು
00:13 ನಕಲು ಮಾಡುವುದು ಮತ್ತು ತದ್ರೂಪವನ್ನು ಸೃಷ್ಟಿಸುವುದು.
00:16 ವಿವಿಧ ಆಬ್ಜೆಕ್ಟ್ ಗಳನ್ನು ಗುಂಪು ಮಾಡುವುದು ಮತ್ತು ಜೋಡಿಸುವುದು.
00:19 ಅನೇಕ ಆಬ್ಜೆಕ್ಟ್ ಗಳ ಆಯ್ಕೆ ಮತ್ತು ಆಯ್ಕೆಯನ್ನು ತಿರುವುಮುರುವುಗೊಳಿಸುವುದು.
00:22 ಕತ್ತರಿಸುವುದು ಮತ್ತು ಮರೆಮಾಚುವುದು.
00:25 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಲಿನಕ್ಸ್ ನ 12.04 ನೇ ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಮತ್ತು ಇಂಕ್ ಸ್ಕೇಪ್ ನ 0.48.4 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ.
00:35 ಡ್ಯಾಶ್ ಹೋಮ್ ಗೆ ಹೋಗಿ, ಇಂಕ್ ಸ್ಕೇಪ್ ಎಂದು ಟೈಪ್ ಮಾಡಿ.
00:39 ಲೋಗೋ ಅನ್ನು ಡಬಲ್ ಕ್ಲಿಕ್ ಮಾಡಿ ಇಂಕ್ ಸ್ಕೇಪ್ ಅನ್ನು ಓಪನ್ ಮಾಡಬಹುದು.
00:42 ನಾವು ಈ ಮೊದಲು ರಚಿಸಿದ ಅಸೈನ್ಮೆಂಟ್ ಅಂಡರ್ಸ್ಕೋರ್ ಒನ್ ಡಾಟ್ ಎಸ್ ವಿ ಜಿ ಯನ್ನು ಓಪನ್ ಮಾಡೋಣ.
00:49 ಇದನ್ನು ನಾವು ಮೈ ಡಾಕ್ಯುಮೆಂಟ್ಸ್ ಎಂಬ ಫೋಲ್ಡರ್ ನಲ್ಲಿ ಸೇವ್ ಮಾಡಿದ್ದೇನೆ.
00:52 ಮೊದಲು ನಾವು, ಆಬ್ಜೆಕ್ಟ್ ಗಳನ್ನು ಕಾಪಿ ಮತ್ತು ಪೇಸ್ಟ್ ಮಾಡುವುದನ್ನು ಕಲಿಯೋಣ.
00:56 ಇದಕ್ಕಾಗಿ, ಮೊದಲು ನಾವು ಆಬ್ಜೆಕ್ಟ್ ಅನ್ನು ಸೆಲೆಕ್ಟ್ ಮಾಡಬೇಕು. ಹಾಗಾಗಿ, ಪೆಂಟಗಾನ್ ನ ಮೇಲೆ ಕ್ಲಿಕ್ ಮಾಡಿ.
01:02 ಈಗ, ಇದನ್ನು ಕಾಪಿ ಮಾಡಲು, ನಿಮ್ಮ ಕೀ ಬೋರ್ಡ್ ನಲ್ಲಿ, ctrl ಮತ್ತು c(ಸಿ) ಕೀಯನ್ನು ಒತ್ತಿ.
01:07 ಈಗ ಆಬ್ಜೆಕ್ಟ್ ಅನ್ನು ಪೇಸ್ಟ್ ಮಾಡಲು, ctrl ಮತ್ತು v(ವಿ) ಕೀಯನ್ನು ಒತ್ತಿ. ಈಗ ನೀವು ಕ್ಯಾನ್ವಾಸ್ ನ ಮೇಲೆ, ಪೆಂಟಗಾನ್ ನ ಪ್ರತಿಯನ್ನು ನೋಡಬಹುದು.
01:17 ಆಬ್ಜೆಕ್ಟ್ ನ ಪ್ರತಿಯನ್ನು ಸೃಷ್ಟಿಸಲು ೩ ವಿಧಾನಗಳಿವೆ.
01:21 ಈ ಮೂರೂ ವಿಧಾನಗಳಲ್ಲೂ, ಆಬ್ಜೆಕ್ಟ್ ನ ಪ್ರತಿಯು ಮೂಲದ ಮೇಲೆಯೇ ಸೃಷ್ಟಿಯಾಗುತ್ತದೆ.
01:29 ಮೊದಲನೇಯ ವಿಧಾನ : ಪೇಸ್ಟ್ ಸ್ಪೆಶಲ್
01:32 ನಾವೀಗಾಗಲೇ ಆಬ್ಜೆಕ್ಟ್ ಅನ್ನು ಕಾಪಿ ಮಾಡಲು ctrl ಮತ್ತು c ಯನ್ನು ಒತ್ತಿದ್ದೇವೆ ಎಂಬುದನ್ನು ನೆನಪಿನಲ್ಲಿಡಿ.
01:38 ಆಬ್ಜೆಕ್ಟ್ ಅನ್ನು ಎಲ್ಲಿಂದ ಕಾಪಿ ಮಾಡಿದ್ದೆವೋ ಅಲ್ಲಿಗೇ ಪೇಸ್ಟ್ ಮಾಡಲು, ctrl, alt(ಆಲ್ಟ್) ಮತ್ತು v ಕೀಗಳನ್ನು ಒತ್ತಿ.
01:47 ಕಾಪಿ ಮಾಡಿದ ಆಬ್ಜೆಕ್ಟ್ ಅನ್ನು ಸರಿಸಿದರೆ, ಅದರ ಕೆಳಗೇ ಇದ್ದ, ಮೊದಲಿನ ಆಬ್ಜೆಕ್ಟ್ ಅನ್ನು ನೋಡಬಹುದು.
01:54 ಇವೆರಡನ್ನೂ ಸರಿಸಿ ಪಕ್ಕದಲ್ಲಿಡೋಣ.
01:57 ಎರಡನೇ ವಿಧಾನ, ಡುಪ್ಲಿಕೇಶನ್. ಡುಪ್ಲಿಕೇಶನ್ ಮಾಡಲು, ಆಬ್ಜೆಕ್ಟ್ ಅನ್ನು ಮೊದಲು ಕಾಪಿ ಮಾಡುವ ಅವಶ್ಯಕತೆ ಇಲ್ಲ.
02:05 ಪೆಂಟಗನ್ ಅನ್ನು ಸೆಲೆಕ್ಟ್ ಮಾಡಿ, ನಿಮ್ಮ ಕೀ ಬೋರ್ಡ್ ನಲ್ಲಿ, ctrl ಮತ್ತು D (ಡಿ) ಕೀಗಳನ್ನು ಒತ್ತಿ.
02:13 ಈಗ, ಮೂಲ ಪೆಂಟಗಾನ್ ನ ಮೇಲೆಯೇ ಪೆಂಟಗಾನ್ ನ ನಕಲು ಪ್ರತಿಯು ರಚಿತವಾಗಿರುತ್ತದೆ.
02:19 ನಕಲು ಪ್ರತಿಯನ್ನು ಸರಿಸಿ ಮೂಲ ಆಬ್ಜೆಕ್ಟ್ ಅನ್ನು ನೋಡೋಣ.
02:25 ನಕಲು ಪ್ರತಿಗೆ ಮಾಡಿದ ಬದಲಾವಣೆಗಳು ಮೂಲ ಪ್ರತಿಗೆ ಪರಿಣಾಮ ಬೀರುವುದಿಲ್ಲ.
02:32 ಇದನ್ನು ಪರೀಕ್ಷಿಸಲು, ಅದರ ಬಣ್ಣವನ್ನು ಹಸಿರಿಗೆ ಬದಲಾಯಿಸಿ, ಗಾತ್ರವನ್ನು ಕಿರಿದುಗೊಳಿಸೋಣ.
02:40 ಮೂರನೇಯ ವಿಧಾನ : ಕ್ಲೋನಿಂಗ್
02:44 ಕ್ಲೋನ್ ಮಾಡಲು, ದೀರ್ಘವೃತ್ತದ ಮೇಲೆ ಕ್ಲಿಕ್ ಮಾಡಿ, alt ಮತ್ತು ಡಿ(D) ಕೀ ಗಳನ್ನು ಒತ್ತಿ.
02:49 ಮೊದಲಿನಂತೆಯೇ, ತದ್ರೂಪವು ಮೂಲ ಪ್ರತಿಯ ಮೇಲೆಯೇ ರಚಿತವಾಗಿರುತ್ತದೆ.
02:55 ಇದನ್ನು ಸರಿಸಿ, ಮೂಲ ಪ್ರತಿಯನ್ನು ನೋಡೋಣ.
02:58 ತದ್ರೂಪವು ಯಾವಾಗಲೂ, ಮೂಲ ಆಬ್ಜೆಕ್ಟ್ ನೊಂದಿಗೆ ಸಂಪರ್ಕ ಹೊಂದಿರುತ್ತದೆ ಎಂಬುದನ್ನು ಗಮನದಲ್ಲಿಡಿ.
03:04 ಮೂಲ ಆಬ್ಜೆಕ್ಟ್ ಅನ್ನು ಇದರ ಪೋಷಕ ಎನ್ನುತ್ತಾರೆ.
03:08 ಮೂಲ ಆಬ್ಜೆಕ್ಟ್ ಗೆ ಮಾಡಲಾದ ಎಲ್ಲ ಬದಲಾವಣೆಗಳು, ಉದಾಹರಣೆಗೆ, ಗಾತ್ರ, ಬಣ್ಣ ಇತ್ಯಾದಿ, ತದ್ರೂಪ ಪ್ರತಿಗೆ ಪರಿಣಾಮ ಬೀರುತ್ತದೆ.
03:16 ಇದನ್ನು ಪರೀಕ್ಷಿಸಲು, ಮೂಲ ಪ್ರತಿಗೆ ಗುಲಾಬಿ ಬಣ್ಣವನ್ನು ತುಂಬಿ, ಅದನ್ನು ತಿರುಗಿಸಿ, ಗ್ರಾತ್ರವನ್ನು ಕಡಿಮೆ ಮಾಡಿ.
03:30 ಇದೇ ಬದಲಾವಣೆಗಳು, ತದ್ರೂಪಿ ಪ್ರತಿಯಲ್ಲಿಯೂ ತಾನಾಗಿಯೇ ಆಗುವುದನ್ನು ನೀವು ಗಮನಿಸಬಹುದು.
03:36 ತದ್ರೂಪ ಮತ್ತು ಮೂಲ ಆಬ್ಜೆಕ್ಟ್ ನ ಸಂಪರ್ಕ ತಪ್ಪಿಸಲು, ತದ್ರೂಪವನ್ನು ಆಯ್ಕೆ ಮಾಡಿ, Shift, Alt ಮತ್ತು D ಕೀಗಳನ್ನು ಒತ್ತಿ.
03:44 ಈಗ, ಪುನಃ ಮೂಲ ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ ಮತ್ತು ಅದರ ಗಾತ್ರದ ಬದಲಾವಣೆ ಮಾಡಿ.
03:50 ತದ್ರೂಪ ಆಬ್ಜೆಕ್ಟ್ ನಲ್ಲಿ ಯಾವುದೇ ಬದಲಾವಣೆ ಆಗದಿರುವುದನ್ನು ನೀವು ಗಮನಿಸಬಹುದು.
03:54 ಇಲ್ಲಿ ತೋರಿಸಿದಂತೆ, ಈ ಕಾರ್ಯ ನಿರ್ವಹಿಸಲು ಶಾರ್ಟ್ ಕಟ್ ಐಕಾನ್ ಗಳು ಕಮಾಂಡ್ ಬಾರ್ ನಲ್ಲಿ ಇರುತ್ತವೆ.
04:01 ಅನೇಕ ಆಬ್ಜೆಕ್ಟ್ ಗಳನ್ನು ಆಯ್ಕೆ ಮಾಡಲು, shift ಕೀಯನ್ನು ಒತ್ತಿ, ನೀವು ಆಯ್ಕೆ ಮಾಡಾಬೇಕಾದ ಆಬ್ಜೆಕ್ಟ್ ಗಳನ್ನು ಕ್ಲಿಕ್ ಮಾಡಿ.
04:08 ನಾನು ಮೊದಲಿಗೆ ಒಂದು ದೀರ್ಘವೃತ್ತವನ್ನು ಆಯ್ಕೆ ಮಾಡುತ್ತೇನೆ. ನಂತರ, shift ಕೀಯನ್ನು ಒತ್ತಿ, ಇನ್ನೊಂದು ದೀರ್ಘವೃತ್ತವನ್ನು ಆಯ್ಕೆ ಮಾಡುತ್ತೇನೆ.
04:15 ಈಗ, ಎರಡೂ ಆಬ್ಜೆಕ್ಟ್ ಗಳೂ ಆಯ್ಕೆ ಆಗಿರುವುದನ್ನು ನೋಡಬಹುದು.
04:19 ಈಗ, ctrl ಮತ್ತು G ಕೀಗಳನ್ನು ಒತ್ತಿ, ಇವುಗಳನ್ನು ಗುಂಪು ಮಾಡಬಹುದು.
04:24 ದೀರ್ಘವೃತ್ತಗಳು, ಈಗ ಒಂದೇ ಆಬ್ಜೆಕ್ಟ್ ಆಗಿರುವುದನ್ನು ನೀವು ಗಮನಿಸಬಹುದು.
04:28 ನೀವು ಅವುಗಳನ್ನು ಸರಿಸಿದರೆ , ಎರಡೂ ಆಬ್ಜೆಕ್ಟ್ ಗಳೂ ಒಂದೇ ಆಬ್ಜೆಕ್ಟ್ ನಂತೆ ಚಲಿಸುವುದನ್ನು ನೀವು ಗಮನಿಸಬಹುದು.
04:35 ಈ ಗುಂಪಿನ ಗಾತ್ರ ಬದಲಾವಣೆ ಮಾಡಿ, ಎರಡೂ ಆಬ್ಜೆಕ್ಟ್ ಗಳ ಗಾತ್ರವೂ ಬದಲಾವಣೆ ಹೊಂದುವುದನ್ನು ನೀವು ಗಮನಿಸಬಹುದು.
04:43 ಬಣ್ಣವನ್ನು ನೀಲಿ ಗೆ ಬಲಾಯಿಸಿ. ಎರಡೂ ಆಬ್ಜೆಕ್ಟ್ ಗಳ ಬಣ್ಣ ಒಂದೇ ಬಣ್ಣಕ್ಕೆ ತಿರುಗುವುದನ್ನು ನೀವು ಗಮನಿಸಬಹುದು.
04:53 ಒಂದು ಗುಂಪಿನಲ್ಲಿರುವ ಒಂದು ಆಬ್ಜೆಕ್ಟ್ ನ ಗುಣಗಳನ್ನು ಬದಲಾಯಿಸಲು ಬಯಸಿದರೆ ನಾವು ಏನು ಮಾಡಬೇಕು?
05:01 ಒಂದು ಗುಂಪಿನಲ್ಲಿರುವ ಒಂದು ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಲು, ctrl ಕೀಯನ್ನು ಒತ್ತಿ, ಆಬ್ಜೆಕ್ಟ್ ಅನ್ನು ಕ್ಲಿಕ್ ಮಾಡಿ.
05:08 ಹೀಗೆ ಮಾಡುವುದರಿಂದ, ನಾವು ಗುಂಪಿನ ಒಳಗೆ ಹೋಗಿ, ಪ್ರತಿಯೊಂದು ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಬಹುದು.
05:13 ಈ ಗುಂಪಿನಿಂದ ಹೊರಬರಲು, ಕ್ಯಾನ್ವಾಸ್ ನ ಮೇಲೆ ಖಾಲಿ ಜಾಗದಲ್ಲಿ ಕ್ಲಿಕ್ ಮಾಡಿ.
05:18 ಆಬ್ಜೆಕ್ಟ್ ಗಳನ್ನು ಗುಂಪಿನಿಂದ ಹೊರತೆಗೆಯಲು, ಮೊದಲು ಗುಂಪನ್ನು ಆಯ್ಕೆ ಮಾಡಿ, ನಂತರ, Ctrl, Shift ಮತ್ತು ಜಿ ಅಥವಾ Ctrl ಮತ್ತು u ಕೀಗಳನ್ನು ಒತ್ತಿ.
05:28 ಈಗ ದೀರ್ಘವೃತ್ತಗಳು ಗುಂಪಾಗಿಲ್ಲ.
05:31 ಇಲ್ಲಿ ತೋರಿಸಿದಂತೆ, ಈ ಕಾರ್ಯಗಳನ್ನು ನಿರ್ವಹಿಸಲು, ಶಾರ್ಟ್ ಕಟ್ ಐಕಾನ್ ಗಳು ಕಮಾಂಡ್ ಬಾರ್ ನಲ್ಲಿ ಇವೆ.
05:36 ಕ್ಯಾನ್ವಾಸ್ ನ ಮೇಲಿರುವ ಎಲ್ಲ ಆಬ್ಜೆಕ್ಟ್ ಗಳನ್ನು ಆಯ್ಕೆ ಮಾಡಲು, Ctrl ಮತ್ತು A ಕೀಗಳನ್ನು ಒತ್ತಿ.
05:42 ಯಾವ ಆಬ್ಜೆಕ್ಟ್ ಗಳೂ ಆಯ್ಕೆ ಆಗಿರದಂತೆ ಮಾಡಲು, ಕ್ಯಾನ್ವಾಸ್ ನ ಮೇಲೆ ಖಾಲಿ ಜಾಗದಲ್ಲಿ ಕ್ಲಿಕ್ ಮಾಡಿ.
05:48 ನಾವು ಒಂದು ಆಬ್ಜೆಕ್ಟ್ ಅನ್ನು ಬಿಟ್ಟು, ಉಳಿದ ಎಲ್ಲ ಆಬ್ಜೆಕ್ಟ್ ಗಳನ್ನು ಆಯ್ಕೆ ಮಾಡಲು, ಇನ್ವರ್ಟ್ ಸೆಲೆಕ್ಷನ್ ಎಂಬುದನ್ನು ಬಳಸಬಹುದು.
05:55 ಆರೋ(arrow) ಒಂದನ್ನು ಬಿಟ್ಟು ಉಳಿದ ಎಲ್ಲ ಆಬ್ಜೆಕ್ಟ್ ಗಳನ್ನು ಆಯ್ಕೆ ಮಾಡಬೇಕಾದರೆ,
05:59 ಮೊದಲು, arrow ಅನ್ನು ಆಯ್ಕೆ ಮಾಡಿ. ಈಗ ಎಡಿಟ್(edit) ಮೆನುವಿನಲ್ಲಿ, ಇನ್ವರ್ಟ್ ಸೆಲೆಕ್ಷನ್ ಎಂಬುದನ್ನು ಆಯ್ಕೆ ಮಾಡಿ.
06:08 arrow ಅನ್ನು ಬಿಟ್ಟು, ಕ್ಯಾನ್ವಾಸ್ ನ ಮೇಲಿರುವ, ಎಲ್ಲ ಆಬ್ಜೆಕ್ಟ್ ಗಳೂ ಆಯ್ಕೆಯಾಗಿರುವುದನ್ನು ನೀವು ನೋಡಬಹುದು.
06:16 ಈಗ, ಆಬ್ಜೆಕ್ಟ್ ಗಳನ್ನು ವ್ಯವಸ್ಥಿತಗೊಳಿಸುವುದು ಹೇಗೆ ಎಂಬುದನ್ನು ನೋಡೋಣ.
06:20 ಸಣ್ಣ ಪೆಂಟಗಾನ್ ಅನ್ನು ದೊಡ್ಡ ಪೆಂಟಗಾನ್ ನ ಮೇಲೆ ಸರಿಸುತ್ತೇನೆ.
06:25 ಈಗ, ಒಂದು ಸಣ್ಣ ನಕ್ಷತ್ರವನ್ನು ಬಿಡಿಸಿ, ಸಣ್ಣ ಪೆಂಟಗಾನ್ ನ ಮೇಲೆ ಸರಿಸೋಣ.
06:36 ಸಣ್ಣ ಪೆಂಟಗಾನ್ ಅನ್ನು ಆಯ್ಕೆ ಮಾಡಿ. ಆಬ್ಜೆಕ್ಟ್ ಮೆನುವಿನಲ್ಲಿ, ರೈಸ್(raise) ಅನ್ನು ಕ್ಲಿಕ್ ಮಾಡಿ.
06:42 ಸಣ್ಣ ಪೆಂಟಾಗಾನ್ ಈಗ ಮೇಲೆ ಏರಿ, ನಕ್ಷತ್ರದ ಮೇಲೆ ಬಂದಿದೆ.
06:47 ಈಗ, ನಕ್ಷತ್ರದ ಮೇಲೆ ಕ್ಲಿಕ್ ಮಾಡಿ. ಆಬ್ಜೆಕ್ಟ್ ಮೆನುವಿನಲ್ಲಿ ಲೋಯರ್(lower) ಎಂಬುದನ್ನು ಕ್ಲಿಕ್ ಮಾಡಿ.
06:53 ಈಗ, ನಕ್ಷತ್ರವು ಕೆಳಗಿ ಸರಿಸಲ್ಪಟ್ಟಿದೆ ಮತ್ತು ದೊಡ್ಡ ಪೆಂಟಗಾನ್ ಅದರ ಮೇಲೆ ಕಾಣುತ್ತದೆ.
07:00 ಈಗ, ದೊಡ್ಡ ಪೆಂಟಗಾನ್ ನ ಮೇಲೆ ಕ್ಲಿಕ್ ಮಾಡೋಣ. ಆಬ್ಜೆಕ್ಟ್ ಮೆನುವಿನಲ್ಲಿ, raise ಅನ್ನು ಕ್ಲಿಕ್ ಮಾಡಿ. ಈಗ, ದೊಡ್ಡ ಪೆಂಟಗಾನ್ ಅದರ ಮೇಲೆ ಕಾಣುತ್ತದೆ.
07:11 ಈಗ ಪುನಃ ಆಬ್ಜೆಕ್ಟ್ ಮೆನುವಿನಲ್ಲಿ, ಲೋಯರ್ ಟು ಬಾಟಮ್ ಎಂಬುದನ್ನು ಕ್ಲಿಕ್ ಮಾಡಿ. ದೊಡ್ಡ ಪೆಂಟಗಾನ್ ಕೆಳಗೆ ಸರಿದಿರುವುದನ್ನು ನೀವು ಗಮನಿಸಬಹುದು.
07:20 ನಾವು ಈ ಆಯ್ಕೆಗಳನ್ನು ಟೂಲ್ ಕಂಟ್ರೋಲ್ ಬಾರ್ ನಲ್ಲಿ ಕಾಣಬಹುದು.
07:25 ಈಗ, ಕ್ಲಿಪ್ಪಿಂಗ್ ಅನ್ನು ಹೇಗೆ ಮಾಡುವುದು ಎಂಬುದನ್ನು ಕಲಿಯೋಣ.
07:28 ನಿಮ್ಮ ಸಂಕೀರ್ಣ ಆಬ್ಜೆಕ್ಟ್ ಗಳನ್ನು ರಚಿಸಲು ಕ್ಲಿಪ್ಪಿಂಗ್ ಸಹಾಯ ಮಾಡುತ್ತದೆ.
07:31 ಅವುಗಳ ಆಕಾರವನ್ನು ಸುಲಭ ಮತ್ತು ವೇಗವಾಗಿ,ಇನ್ನೊಂದು ಎಲಿಮೆಂಟ್ ಅಥವಾ ನಿಮ್ಮ ವಿನ್ಯಾಸವನ್ನು ಅನುಕರಣೆ ಮಾಡುವುದು
07:39 ನಾನು ಒಂದು ಚಿತ್ರವನ್ನು ಈ ಟ್ಯುಟೋರಿಯಲ್ ನಲ್ಲಿ ಬಳಸುತ್ತೇನೆ. ಈ ಹೊಸ ಇಂಕ್ ಸ್ಕೇಪ್ ಫೈಲ್ ನಲ್ಲಿ ಒಂದು ಚಿತ್ರವಿದೆ.
07:45 ಈ ಚಿತ್ರದ ಮೇಲೆ ನಾನು ಒಂದು ದೀರ್ಘವೃತ್ತವನ್ನು ರಚಿಸುತ್ತೇನೆ.
07:49 ಈಗ ಚಿತ್ರ ಮತ್ತು ದೀರ್ಘವ್ರುತ್ತವನ್ನು ಆಯ್ಕೆ ಮಾಡಿ.
07:53 ಆಬ್ಜೆಕ್ಟ್ ಮೆನುವಿನಲ್ಲಿ, ಕ್ಲಿಪ್ ಅನ್ನು ಕ್ಲಿಕ್ ಮಾಡಿ, ನಂತರ ಸೆಟ್ ಅನ್ನು ಒತ್ತಿ.
07:59 ಈಗ ಚಿತ್ರವು ದೀರ್ಘವ್ರುತ್ತದ ಆಕಾರಕ್ಕೆ ಕ್ಲಿಪ್ ಆಗಿರುವುದನ್ನು ನೀವು ಗಮನಿಸಬಹುದು.
08:04 ಕ್ಲಿಪ್ಪಿಂಗ್ ನಲ್ಲಿ, ಕ್ಲಿಪ್ ಮಾಡಲು ಬಳಸಲಾದ, ಆಬ್ಜೆಕ್ಟ್ ನ ಆಕಾರವು, ಕ್ಲಿಪ್ ಮಾಡಬೇಕಾದ ಪ್ರದೇಶವನ್ನು ಸೂಚಿಸುತ್ತದೆ.
08:09 ಕ್ಲಿಪ್ ಅನ್ನು ತೆಗೆಯಲು,ಆಬ್ಜೆಕ್ಟ್ ಮೆನುವಿನಲ್ಲಿ, ಕ್ಲಿಪ್ ಅನ್ನು ಕ್ಲಿಕ್ ಮಾಡಿ, ನಂತರ ರಿಲೀಸ್ ಅನ್ನು ಒತ್ತಿ.
08:17 ಈಗ ಕ್ಲಿಪ್ ರಿಲೀಸ್ ಆಗುತ್ತದೆ.
08:19 ಈಗ ಮಾಸ್ಕಿಂಗ್ ನ ಬಗೆಗೆ ತಿಳಿಯೋಣ.
08:22 ಮಾಸ್ಕಿಂಗ್ ಎಂಬುದು ಕ್ಲಿಪ್ಪಿಂಗ್ ಗೆ ಹೋಲುತ್ತದೆ.
08:25 ಮಾಸ್ಕಿಂಗ್ ನಲ್ಲಿ, ಒಂದು ವಸ್ತುವಿನ ಪಾರದರ್ಶಕತೆ ಅಥವಾ ಚುರುಕುತನ ಎರಡನೇ ವಸ್ತುವಿನ ಅಪಾರದರ್ಶಕತೆಯನ್ನು ನಿರ್ಧರಿಸುತ್ತದೆ.
08:32 ಮಾಸ್ಕಿಂಗ್ ನ ಪ್ರಾತ್ಯಕ್ಷಿಕೆಗೆ, ನಾನು ಮೊದಲು, ಒಂದು ದೀರ್ಘವೃತ್ತವನ್ನು, ಗ್ರೇಡಿಯಂಟ್ ಟೂಲ್ ಅನ್ನು ಬಳಸಿ, ಅರೆ ಪಾರದರ್ಶಕವನ್ನಾಗಿ ಮಾಡುತ್ತೇನೆ.
08:38 ಈಗ, ದೀರ್ಘವೃತ್ತವನ್ನು ಆಯ್ಕೆ ಮಾಡಿ.
08:40 ಆಬ್ಜೆಕ್ಟ್ ಮೆನುವಿನಲ್ಲಿ, ಫಿಲ್ ಎಂಡ್ ಸ್ಟ್ರೋಕ್ ಅನ್ನು ಆಯ್ಕೆ ಮಾಡಿ.
08:44 ರೇಡಿಯಲ್ ಗ್ರೇಡಿಯಂಟ್ ಅನ್ನು ಕ್ಲಿಕ್ ಮಾಡಿ, ನಂತರ ಎಡಿಟ್ ಅನ್ನು ಒತ್ತಿ.
08:50 ಬಣ್ಣವನ್ನು ಬಿಳಿ ಮಾಡಲು, RGB ಸ್ಲೈಡರ್ ಅನ್ನು ಬಲತುದಿಗೆ ಸರಿಸಿ.
09:00 ಸ್ಟಾಪ್ ಡ್ರಾಪ್ ಡೌನ್ ಆರೋ (arrow) ಅನ್ನು ಕ್ಲಿಕ್ ಮಾಡಿ, ಸ್ಟಾಪ್ ಅನ್ನು ಕ್ಲಿಕ್ ಮಾಡಿ.
09:05 ಬಣ್ಣವನ್ನು ಕಪ್ಪು ಮಾಡಲು, RGB ಸ್ಲೈಡರ್ ಅನ್ನು ಎಡತುದಿಗೆ ಸರಿಸಿ. ಈಗ ಅಲ್ಫಾ ನ ಮೌಲ್ಯವು ಎರಡುನೂರಾ ಐವತ್ತೈದು ಆಗುತ್ತದೆ.
09:15 ಇವೆರಡರ ನಡುವೆ, ಮತ್ತೊಂದು ಬಣ್ಣ ಸೇರಿಸಲು, ಆಡ್ ಸ್ಟಾಪ್(add stop) ನ ಮೇಲೆ ಕ್ಲಿಕ್ ಮಾಡಿ.
09:20 ನೋಡ್ ಟೂಲ್ ನ ಮೇಲೆ ಕ್ಲಿಕ್ ಮಾಡಿ, ಡೈಮಂಡ್ ಹ್ಯಾಂಡಲ್ ಅನ್ನು ಮೇಲಕ್ಕೆ ಸರಿಸಿ.
09:27 ಈಗ, ಚಿತ್ರ ಮತ್ತು ದೀರ್ಘವೃತ್ತವನ್ನು ಆಯ್ಕೆ ಮಾಡಿ.
09:30 ಆಬ್ಜೆಕ್ಟ್ ಮೆನುವಿನಲ್ಲಿ,ಮಾಸ್ಕ್ ಅನ್ನು ಒತ್ತಿ, ನಂತರ ಸೆಟ್ ಅನ್ನು ಕ್ಲಿಕ್ ಮಾಡಿ.
09:36 ಚಿತ್ರದ ಮೇಲೆ ಒಂದು ಮಸುಕು ಮೂಡಿರುವುದನ್ನು ಗಮನಿಸಬಹುದು.
09:40 ಚಿತ್ರವು, ಮಾಸ್ಕಿಂಗ್ ಆಬ್ಜೆಕ್ಟ್ ಆದ, ದೀರ್ಘವೃತ್ತದ, ಪಾರದರ್ಶಕ ಗುಣವನ್ನು ಪಡೆದಿರುವುದನ್ನು ಗಮನಿಸಿ.
09:47 ಮಾಸ್ಕ್ ಅನ್ನು ತೆಗೆಯಲು, ಆಬ್ಜೆಕ್ಟ್ ಮೆನು ಗೆ ಹಿಂತಿರುಗಿ.
09:51 ಮಾಸ್ಕ್ ಅನ್ನು ಕ್ಲಿಕ್ ಮಾಡಿ, ನಂತರ ರಿಲೀಸ್ ಅನ್ನು ಒತ್ತಿ.
09:54 ಈಗ ಮಾಸ್ಕ್ ತೆಗೆಯಲ್ಪಟ್ಟಿದೆ.
09:56 ಸಾರಾಂಶ ತಿಳಿಯೋಣ.
09:57 ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು : ಆಬ್ಜೆಕ್ಟ್ ಗಳನ್ನು ಕಾಪಿ ಮತ್ತು ಪೇಸ್ಟ್ ಮಾಡುವುದು.
10:02 ನಕಲು ಮತ್ತು ತದ್ರೂಪವನ್ನು ಮಾಡುವುದು.
10:05 ವಿವಿಧ ಆಬ್ಜೆಕ್ಟ್ ಗಳನ್ನು, ಗುಂಪು ಮಾಡುವುದು ಮತ್ತು ವ್ಯವಸ್ಥಿತಗೊಳಿಸುವುದು.
10:08 ಅನೇಕ ಆಬ್ಜೆಕ್ಟ್ ಗಳನ್ನು ಆಯ್ಕೆ ಮಾಡುವುದು ಮತ್ತು ಆಯ್ಕೆಯನ್ನು ತಿರುವುಮುರುವುಗೊಳಿಸುವುದು.
10:10 ಕ್ಲಿಪ್ಪಿಂಗ್ ಮತ್ತು ಮಾಸ್ಕಿಂಗ್
10:12 ನಿಮಗಾಗಿ ಇಲ್ಲಿ ಎರಡು ಅಸೈನ್ಮೆಂಟ್ ಗಳಿವೆ-
10:15 ಒಂದು ಬೂದು ಬಣ್ಣದ ಲಂಬ ದೀರ್ಘವೃತ್ತ, ಮತ್ತು ಒಂದು ಕಪ್ಪು ಬಣ್ಣದ ವೃತ್ತ ರಚಿಸಿ.
10:20 ವೃತ್ತವನ್ನು ದೀರ್ಘವೃತ್ತದ ಮೇಲೆ ಕೇಂದ್ರೀಯವಾಗಿ ಇಡಿ.
10:23 ಅದು ಒಂದು ಕಣ್ಣಿನಂತೆ ಕಾಣಬೇಕು.
10:25 ಈಗ ಇವನ್ನು ಗುಂಪು ಮಾಡಿ.
10:27 ನಂತರ, ಇನ್ನೊಂದು ಕಣ್ಣಿಗಾಗಿ, ಇದರ ತದ್ರೂಪ ಸೃಷ್ಟಿಸಿ.
10:31 ಎರಡೂ ಕಣ್ಣುಗಳೂ ಕಾಣುವಂತೆ ಮಾಡಲು, ಇದನ್ನು ಸರಿಸಿ.
10:35 ಒಂದು ನೀಲಿ ಬಣ್ಣದ ವೃತ್ತ ಮತ್ತು ಕೆಂಪು ಬಣ್ಣದ ಚೌಕವನ್ನು ರಚಿಸಿ.
10:40 ಚೌಕದ ನಕಲನ್ನು ಸೃಷ್ಟಿಸಿ, ಎರಡನ್ನೂ ಕರ್ಣೀಯವಾಗಿ ವಿರುದ್ಧ ದಿಕ್ಕಿನಲ್ಲಿ ಇಡಿ.
10:45 ಎರಡೂ ಚೌಕಗಳನ್ನೂ ಗುಂಪು ಮಾಡಿ, ಒಂದೇ ಆಬ್ಜೆಕ್ಟ್ ಆಗಿ ಮಾಡಿ.
10:50 ವೃತ್ತವನ್ನು ಕೇಂದ್ರೀಯವಾಗಿ, ಗುಂಪು ಮಾಡಿದ, ಚೌಕಗಳ ಮೇಲೆ ಇಡಿ.
10:54 ಎರಡನ್ನೂ ಆಯ್ಕೆ ಮಾಡಿ ಮತ್ತು ಕ್ಲಿಪ್ ಮಾಡಿ. ಇದು ಬಿಲ್ಲಿನಂತೆ ಕಾಣಬೇಕು.
11:00 ನಿಮ್ಮ ಅಸೈನ್ಮೆಂಟ್ ಈ ರೀತಿ ಕಾಣಬೇಕು.
11:03 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
11:12 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
11:21 ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ.
11:23 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
11:31 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ.
11:35 ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
11:38 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Chetana, Rakeshkkrao