Inkscape/C2/Create-and-edit-multiple-objects/Kannada
From Script | Spoken-Tutorial
Time | Narration |
00:01 | ನಮಸ್ಕಾರ, ಕ್ರಿಯೇಟ್ ಆಂಡ್ ಎಡಿಟ್ ಮಲ್ಟಿಪಲ್ ಆಬ್ಜೆಕ್ಟ್ಸ್ ಎನ್ನುವ ಇಂಕ್-ಸ್ಕೇಪ್-ನ ಟ್ಯುಟೊರಿಯಲ್-ಗೆ ಸ್ವಾಗತ |
00:08 | ಈ ಟ್ಯುಟೋರಿಯಲ್ ನಲ್ಲಿ, ನಾವು ಕಲಿಯುವ ಅಂಶಗಳು : ಆಬ್ಜೆಕ್ಟ್ ಗಳನ್ನು ಕಾಪಿ ಮತ್ತು ಪೇಸ್ಟ್ ಮಾಡುವುದು |
00:13 | ನಕಲು ಮಾಡುವುದು ಮತ್ತು ತದ್ರೂಪವನ್ನು ಸೃಷ್ಟಿಸುವುದು. |
00:16 | ವಿವಿಧ ಆಬ್ಜೆಕ್ಟ್ ಗಳನ್ನು ಗುಂಪು ಮಾಡುವುದು ಮತ್ತು ಜೋಡಿಸುವುದು. |
00:19 | ಅನೇಕ ಆಬ್ಜೆಕ್ಟ್ ಗಳ ಆಯ್ಕೆ ಮತ್ತು ಆಯ್ಕೆಯನ್ನು ತಿರುವುಮುರುವುಗೊಳಿಸುವುದು. |
00:22 | ಕತ್ತರಿಸುವುದು ಮತ್ತು ಮರೆಮಾಚುವುದು. |
00:25 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಲಿನಕ್ಸ್ ನ 12.04 ನೇ ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಮತ್ತು ಇಂಕ್ ಸ್ಕೇಪ್ ನ 0.48.4 ನೇ ಆವೃತ್ತಿಯನ್ನು ಉಪಯೋಗಿಸಿದ್ದೇನೆ. |
00:35 | ಡ್ಯಾಶ್ ಹೋಮ್ ಗೆ ಹೋಗಿ, ಇಂಕ್ ಸ್ಕೇಪ್ ಎಂದು ಟೈಪ್ ಮಾಡಿ. |
00:39 | ಲೋಗೋ ಅನ್ನು ಡಬಲ್ ಕ್ಲಿಕ್ ಮಾಡಿ ಇಂಕ್ ಸ್ಕೇಪ್ ಅನ್ನು ಓಪನ್ ಮಾಡಬಹುದು. |
00:42 | ನಾವು ಈ ಮೊದಲು ರಚಿಸಿದ ಅಸೈನ್ಮೆಂಟ್ ಅಂಡರ್ಸ್ಕೋರ್ ಒನ್ ಡಾಟ್ ಎಸ್ ವಿ ಜಿ ಯನ್ನು ಓಪನ್ ಮಾಡೋಣ. |
00:49 | ಇದನ್ನು ನಾವು ಮೈ ಡಾಕ್ಯುಮೆಂಟ್ಸ್ ಎಂಬ ಫೋಲ್ಡರ್ ನಲ್ಲಿ ಸೇವ್ ಮಾಡಿದ್ದೇನೆ. |
00:52 | ಮೊದಲು ನಾವು, ಆಬ್ಜೆಕ್ಟ್ ಗಳನ್ನು ಕಾಪಿ ಮತ್ತು ಪೇಸ್ಟ್ ಮಾಡುವುದನ್ನು ಕಲಿಯೋಣ. |
00:56 | ಇದಕ್ಕಾಗಿ, ಮೊದಲು ನಾವು ಆಬ್ಜೆಕ್ಟ್ ಅನ್ನು ಸೆಲೆಕ್ಟ್ ಮಾಡಬೇಕು. ಹಾಗಾಗಿ, ಪೆಂಟಗಾನ್ ನ ಮೇಲೆ ಕ್ಲಿಕ್ ಮಾಡಿ. |
01:02 | ಈಗ, ಇದನ್ನು ಕಾಪಿ ಮಾಡಲು, ನಿಮ್ಮ ಕೀ ಬೋರ್ಡ್ ನಲ್ಲಿ, ctrl ಮತ್ತು c(ಸಿ) ಕೀಯನ್ನು ಒತ್ತಿ. |
01:07 | ಈಗ ಆಬ್ಜೆಕ್ಟ್ ಅನ್ನು ಪೇಸ್ಟ್ ಮಾಡಲು, ctrl ಮತ್ತು v(ವಿ) ಕೀಯನ್ನು ಒತ್ತಿ. ಈಗ ನೀವು ಕ್ಯಾನ್ವಾಸ್ ನ ಮೇಲೆ, ಪೆಂಟಗಾನ್ ನ ಪ್ರತಿಯನ್ನು ನೋಡಬಹುದು. |
01:17 | ಆಬ್ಜೆಕ್ಟ್ ನ ಪ್ರತಿಯನ್ನು ಸೃಷ್ಟಿಸಲು ೩ ವಿಧಾನಗಳಿವೆ. |
01:21 | ಈ ಮೂರೂ ವಿಧಾನಗಳಲ್ಲೂ, ಆಬ್ಜೆಕ್ಟ್ ನ ಪ್ರತಿಯು ಮೂಲದ ಮೇಲೆಯೇ ಸೃಷ್ಟಿಯಾಗುತ್ತದೆ. |
01:29 | ಮೊದಲನೇಯ ವಿಧಾನ : ಪೇಸ್ಟ್ ಸ್ಪೆಶಲ್ |
01:32 | ನಾವೀಗಾಗಲೇ ಆಬ್ಜೆಕ್ಟ್ ಅನ್ನು ಕಾಪಿ ಮಾಡಲು ctrl ಮತ್ತು c ಯನ್ನು ಒತ್ತಿದ್ದೇವೆ ಎಂಬುದನ್ನು ನೆನಪಿನಲ್ಲಿಡಿ. |
01:38 | ಆಬ್ಜೆಕ್ಟ್ ಅನ್ನು ಎಲ್ಲಿಂದ ಕಾಪಿ ಮಾಡಿದ್ದೆವೋ ಅಲ್ಲಿಗೇ ಪೇಸ್ಟ್ ಮಾಡಲು, ctrl, alt(ಆಲ್ಟ್) ಮತ್ತು v ಕೀಗಳನ್ನು ಒತ್ತಿ. |
01:47 | ಕಾಪಿ ಮಾಡಿದ ಆಬ್ಜೆಕ್ಟ್ ಅನ್ನು ಸರಿಸಿದರೆ, ಅದರ ಕೆಳಗೇ ಇದ್ದ, ಮೊದಲಿನ ಆಬ್ಜೆಕ್ಟ್ ಅನ್ನು ನೋಡಬಹುದು. |
01:54 | ಇವೆರಡನ್ನೂ ಸರಿಸಿ ಪಕ್ಕದಲ್ಲಿಡೋಣ. |
01:57 | ಎರಡನೇ ವಿಧಾನ, ಡುಪ್ಲಿಕೇಶನ್. ಡುಪ್ಲಿಕೇಶನ್ ಮಾಡಲು, ಆಬ್ಜೆಕ್ಟ್ ಅನ್ನು ಮೊದಲು ಕಾಪಿ ಮಾಡುವ ಅವಶ್ಯಕತೆ ಇಲ್ಲ. |
02:05 | ಪೆಂಟಗನ್ ಅನ್ನು ಸೆಲೆಕ್ಟ್ ಮಾಡಿ, ನಿಮ್ಮ ಕೀ ಬೋರ್ಡ್ ನಲ್ಲಿ, ctrl ಮತ್ತು D (ಡಿ) ಕೀಗಳನ್ನು ಒತ್ತಿ. |
02:13 | ಈಗ, ಮೂಲ ಪೆಂಟಗಾನ್ ನ ಮೇಲೆಯೇ ಪೆಂಟಗಾನ್ ನ ನಕಲು ಪ್ರತಿಯು ರಚಿತವಾಗಿರುತ್ತದೆ. |
02:19 | ನಕಲು ಪ್ರತಿಯನ್ನು ಸರಿಸಿ ಮೂಲ ಆಬ್ಜೆಕ್ಟ್ ಅನ್ನು ನೋಡೋಣ. |
02:25 | ನಕಲು ಪ್ರತಿಗೆ ಮಾಡಿದ ಬದಲಾವಣೆಗಳು ಮೂಲ ಪ್ರತಿಗೆ ಪರಿಣಾಮ ಬೀರುವುದಿಲ್ಲ. |
02:32 | ಇದನ್ನು ಪರೀಕ್ಷಿಸಲು, ಅದರ ಬಣ್ಣವನ್ನು ಹಸಿರಿಗೆ ಬದಲಾಯಿಸಿ, ಗಾತ್ರವನ್ನು ಕಿರಿದುಗೊಳಿಸೋಣ. |
02:40 | ಮೂರನೇಯ ವಿಧಾನ : ಕ್ಲೋನಿಂಗ್ |
02:44 | ಕ್ಲೋನ್ ಮಾಡಲು, ದೀರ್ಘವೃತ್ತದ ಮೇಲೆ ಕ್ಲಿಕ್ ಮಾಡಿ, alt ಮತ್ತು ಡಿ(D) ಕೀ ಗಳನ್ನು ಒತ್ತಿ. |
02:49 | ಮೊದಲಿನಂತೆಯೇ, ತದ್ರೂಪವು ಮೂಲ ಪ್ರತಿಯ ಮೇಲೆಯೇ ರಚಿತವಾಗಿರುತ್ತದೆ. |
02:55 | ಇದನ್ನು ಸರಿಸಿ, ಮೂಲ ಪ್ರತಿಯನ್ನು ನೋಡೋಣ. |
02:58 | ತದ್ರೂಪವು ಯಾವಾಗಲೂ, ಮೂಲ ಆಬ್ಜೆಕ್ಟ್ ನೊಂದಿಗೆ ಸಂಪರ್ಕ ಹೊಂದಿರುತ್ತದೆ ಎಂಬುದನ್ನು ಗಮನದಲ್ಲಿಡಿ. |
03:04 | ಮೂಲ ಆಬ್ಜೆಕ್ಟ್ ಅನ್ನು ಇದರ ಪೋಷಕ ಎನ್ನುತ್ತಾರೆ. |
03:08 | ಮೂಲ ಆಬ್ಜೆಕ್ಟ್ ಗೆ ಮಾಡಲಾದ ಎಲ್ಲ ಬದಲಾವಣೆಗಳು, ಉದಾಹರಣೆಗೆ, ಗಾತ್ರ, ಬಣ್ಣ ಇತ್ಯಾದಿ, ತದ್ರೂಪ ಪ್ರತಿಗೆ ಪರಿಣಾಮ ಬೀರುತ್ತದೆ. |
03:16 | ಇದನ್ನು ಪರೀಕ್ಷಿಸಲು, ಮೂಲ ಪ್ರತಿಗೆ ಗುಲಾಬಿ ಬಣ್ಣವನ್ನು ತುಂಬಿ, ಅದನ್ನು ತಿರುಗಿಸಿ, ಗ್ರಾತ್ರವನ್ನು ಕಡಿಮೆ ಮಾಡಿ. |
03:30 | ಇದೇ ಬದಲಾವಣೆಗಳು, ತದ್ರೂಪಿ ಪ್ರತಿಯಲ್ಲಿಯೂ ತಾನಾಗಿಯೇ ಆಗುವುದನ್ನು ನೀವು ಗಮನಿಸಬಹುದು. |
03:36 | ತದ್ರೂಪ ಮತ್ತು ಮೂಲ ಆಬ್ಜೆಕ್ಟ್ ನ ಸಂಪರ್ಕ ತಪ್ಪಿಸಲು, ತದ್ರೂಪವನ್ನು ಆಯ್ಕೆ ಮಾಡಿ, Shift, Alt ಮತ್ತು D ಕೀಗಳನ್ನು ಒತ್ತಿ. |
03:44 | ಈಗ, ಪುನಃ ಮೂಲ ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ ಮತ್ತು ಅದರ ಗಾತ್ರದ ಬದಲಾವಣೆ ಮಾಡಿ. |
03:50 | ತದ್ರೂಪ ಆಬ್ಜೆಕ್ಟ್ ನಲ್ಲಿ ಯಾವುದೇ ಬದಲಾವಣೆ ಆಗದಿರುವುದನ್ನು ನೀವು ಗಮನಿಸಬಹುದು. |
03:54 | ಇಲ್ಲಿ ತೋರಿಸಿದಂತೆ, ಈ ಕಾರ್ಯ ನಿರ್ವಹಿಸಲು ಶಾರ್ಟ್ ಕಟ್ ಐಕಾನ್ ಗಳು ಕಮಾಂಡ್ ಬಾರ್ ನಲ್ಲಿ ಇರುತ್ತವೆ. |
04:01 | ಅನೇಕ ಆಬ್ಜೆಕ್ಟ್ ಗಳನ್ನು ಆಯ್ಕೆ ಮಾಡಲು, shift ಕೀಯನ್ನು ಒತ್ತಿ, ನೀವು ಆಯ್ಕೆ ಮಾಡಾಬೇಕಾದ ಆಬ್ಜೆಕ್ಟ್ ಗಳನ್ನು ಕ್ಲಿಕ್ ಮಾಡಿ. |
04:08 | ನಾನು ಮೊದಲಿಗೆ ಒಂದು ದೀರ್ಘವೃತ್ತವನ್ನು ಆಯ್ಕೆ ಮಾಡುತ್ತೇನೆ. ನಂತರ, shift ಕೀಯನ್ನು ಒತ್ತಿ, ಇನ್ನೊಂದು ದೀರ್ಘವೃತ್ತವನ್ನು ಆಯ್ಕೆ ಮಾಡುತ್ತೇನೆ. |
04:15 | ಈಗ, ಎರಡೂ ಆಬ್ಜೆಕ್ಟ್ ಗಳೂ ಆಯ್ಕೆ ಆಗಿರುವುದನ್ನು ನೋಡಬಹುದು. |
04:19 | ಈಗ, ctrl ಮತ್ತು G ಕೀಗಳನ್ನು ಒತ್ತಿ, ಇವುಗಳನ್ನು ಗುಂಪು ಮಾಡಬಹುದು. |
04:24 | ದೀರ್ಘವೃತ್ತಗಳು, ಈಗ ಒಂದೇ ಆಬ್ಜೆಕ್ಟ್ ಆಗಿರುವುದನ್ನು ನೀವು ಗಮನಿಸಬಹುದು. |
04:28 | ನೀವು ಅವುಗಳನ್ನು ಸರಿಸಿದರೆ , ಎರಡೂ ಆಬ್ಜೆಕ್ಟ್ ಗಳೂ ಒಂದೇ ಆಬ್ಜೆಕ್ಟ್ ನಂತೆ ಚಲಿಸುವುದನ್ನು ನೀವು ಗಮನಿಸಬಹುದು. |
04:35 | ಈ ಗುಂಪಿನ ಗಾತ್ರ ಬದಲಾವಣೆ ಮಾಡಿ, ಎರಡೂ ಆಬ್ಜೆಕ್ಟ್ ಗಳ ಗಾತ್ರವೂ ಬದಲಾವಣೆ ಹೊಂದುವುದನ್ನು ನೀವು ಗಮನಿಸಬಹುದು. |
04:43 | ಬಣ್ಣವನ್ನು ನೀಲಿ ಗೆ ಬಲಾಯಿಸಿ. ಎರಡೂ ಆಬ್ಜೆಕ್ಟ್ ಗಳ ಬಣ್ಣ ಒಂದೇ ಬಣ್ಣಕ್ಕೆ ತಿರುಗುವುದನ್ನು ನೀವು ಗಮನಿಸಬಹುದು. |
04:53 | ಒಂದು ಗುಂಪಿನಲ್ಲಿರುವ ಒಂದು ಆಬ್ಜೆಕ್ಟ್ ನ ಗುಣಗಳನ್ನು ಬದಲಾಯಿಸಲು ಬಯಸಿದರೆ ನಾವು ಏನು ಮಾಡಬೇಕು? |
05:01 | ಒಂದು ಗುಂಪಿನಲ್ಲಿರುವ ಒಂದು ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಲು, ctrl ಕೀಯನ್ನು ಒತ್ತಿ, ಆಬ್ಜೆಕ್ಟ್ ಅನ್ನು ಕ್ಲಿಕ್ ಮಾಡಿ. |
05:08 | ಹೀಗೆ ಮಾಡುವುದರಿಂದ, ನಾವು ಗುಂಪಿನ ಒಳಗೆ ಹೋಗಿ, ಪ್ರತಿಯೊಂದು ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಬಹುದು. |
05:13 | ಈ ಗುಂಪಿನಿಂದ ಹೊರಬರಲು, ಕ್ಯಾನ್ವಾಸ್ ನ ಮೇಲೆ ಖಾಲಿ ಜಾಗದಲ್ಲಿ ಕ್ಲಿಕ್ ಮಾಡಿ. |
05:18 | ಆಬ್ಜೆಕ್ಟ್ ಗಳನ್ನು ಗುಂಪಿನಿಂದ ಹೊರತೆಗೆಯಲು, ಮೊದಲು ಗುಂಪನ್ನು ಆಯ್ಕೆ ಮಾಡಿ, ನಂತರ, Ctrl, Shift ಮತ್ತು ಜಿ ಅಥವಾ Ctrl ಮತ್ತು u ಕೀಗಳನ್ನು ಒತ್ತಿ. |
05:28 | ಈಗ ದೀರ್ಘವೃತ್ತಗಳು ಗುಂಪಾಗಿಲ್ಲ. |
05:31 | ಇಲ್ಲಿ ತೋರಿಸಿದಂತೆ, ಈ ಕಾರ್ಯಗಳನ್ನು ನಿರ್ವಹಿಸಲು, ಶಾರ್ಟ್ ಕಟ್ ಐಕಾನ್ ಗಳು ಕಮಾಂಡ್ ಬಾರ್ ನಲ್ಲಿ ಇವೆ. |
05:36 | ಕ್ಯಾನ್ವಾಸ್ ನ ಮೇಲಿರುವ ಎಲ್ಲ ಆಬ್ಜೆಕ್ಟ್ ಗಳನ್ನು ಆಯ್ಕೆ ಮಾಡಲು, Ctrl ಮತ್ತು A ಕೀಗಳನ್ನು ಒತ್ತಿ. |
05:42 | ಯಾವ ಆಬ್ಜೆಕ್ಟ್ ಗಳೂ ಆಯ್ಕೆ ಆಗಿರದಂತೆ ಮಾಡಲು, ಕ್ಯಾನ್ವಾಸ್ ನ ಮೇಲೆ ಖಾಲಿ ಜಾಗದಲ್ಲಿ ಕ್ಲಿಕ್ ಮಾಡಿ. |
05:48 | ನಾವು ಒಂದು ಆಬ್ಜೆಕ್ಟ್ ಅನ್ನು ಬಿಟ್ಟು, ಉಳಿದ ಎಲ್ಲ ಆಬ್ಜೆಕ್ಟ್ ಗಳನ್ನು ಆಯ್ಕೆ ಮಾಡಲು, ಇನ್ವರ್ಟ್ ಸೆಲೆಕ್ಷನ್ ಎಂಬುದನ್ನು ಬಳಸಬಹುದು. |
05:55 | ಆರೋ(arrow) ಒಂದನ್ನು ಬಿಟ್ಟು ಉಳಿದ ಎಲ್ಲ ಆಬ್ಜೆಕ್ಟ್ ಗಳನ್ನು ಆಯ್ಕೆ ಮಾಡಬೇಕಾದರೆ, |
05:59 | ಮೊದಲು, arrow ಅನ್ನು ಆಯ್ಕೆ ಮಾಡಿ. ಈಗ ಎಡಿಟ್(edit) ಮೆನುವಿನಲ್ಲಿ, ಇನ್ವರ್ಟ್ ಸೆಲೆಕ್ಷನ್ ಎಂಬುದನ್ನು ಆಯ್ಕೆ ಮಾಡಿ. |
06:08 | arrow ಅನ್ನು ಬಿಟ್ಟು, ಕ್ಯಾನ್ವಾಸ್ ನ ಮೇಲಿರುವ, ಎಲ್ಲ ಆಬ್ಜೆಕ್ಟ್ ಗಳೂ ಆಯ್ಕೆಯಾಗಿರುವುದನ್ನು ನೀವು ನೋಡಬಹುದು. |
06:16 | ಈಗ, ಆಬ್ಜೆಕ್ಟ್ ಗಳನ್ನು ವ್ಯವಸ್ಥಿತಗೊಳಿಸುವುದು ಹೇಗೆ ಎಂಬುದನ್ನು ನೋಡೋಣ. |
06:20 | ಸಣ್ಣ ಪೆಂಟಗಾನ್ ಅನ್ನು ದೊಡ್ಡ ಪೆಂಟಗಾನ್ ನ ಮೇಲೆ ಸರಿಸುತ್ತೇನೆ. |
06:25 | ಈಗ, ಒಂದು ಸಣ್ಣ ನಕ್ಷತ್ರವನ್ನು ಬಿಡಿಸಿ, ಸಣ್ಣ ಪೆಂಟಗಾನ್ ನ ಮೇಲೆ ಸರಿಸೋಣ. |
06:36 | ಸಣ್ಣ ಪೆಂಟಗಾನ್ ಅನ್ನು ಆಯ್ಕೆ ಮಾಡಿ. ಆಬ್ಜೆಕ್ಟ್ ಮೆನುವಿನಲ್ಲಿ, ರೈಸ್(raise) ಅನ್ನು ಕ್ಲಿಕ್ ಮಾಡಿ. |
06:42 | ಸಣ್ಣ ಪೆಂಟಾಗಾನ್ ಈಗ ಮೇಲೆ ಏರಿ, ನಕ್ಷತ್ರದ ಮೇಲೆ ಬಂದಿದೆ. |
06:47 | ಈಗ, ನಕ್ಷತ್ರದ ಮೇಲೆ ಕ್ಲಿಕ್ ಮಾಡಿ. ಆಬ್ಜೆಕ್ಟ್ ಮೆನುವಿನಲ್ಲಿ ಲೋಯರ್(lower) ಎಂಬುದನ್ನು ಕ್ಲಿಕ್ ಮಾಡಿ. |
06:53 | ಈಗ, ನಕ್ಷತ್ರವು ಕೆಳಗಿ ಸರಿಸಲ್ಪಟ್ಟಿದೆ ಮತ್ತು ದೊಡ್ಡ ಪೆಂಟಗಾನ್ ಅದರ ಮೇಲೆ ಕಾಣುತ್ತದೆ. |
07:00 | ಈಗ, ದೊಡ್ಡ ಪೆಂಟಗಾನ್ ನ ಮೇಲೆ ಕ್ಲಿಕ್ ಮಾಡೋಣ. ಆಬ್ಜೆಕ್ಟ್ ಮೆನುವಿನಲ್ಲಿ, raise ಅನ್ನು ಕ್ಲಿಕ್ ಮಾಡಿ. ಈಗ, ದೊಡ್ಡ ಪೆಂಟಗಾನ್ ಅದರ ಮೇಲೆ ಕಾಣುತ್ತದೆ. |
07:11 | ಈಗ ಪುನಃ ಆಬ್ಜೆಕ್ಟ್ ಮೆನುವಿನಲ್ಲಿ, ಲೋಯರ್ ಟು ಬಾಟಮ್ ಎಂಬುದನ್ನು ಕ್ಲಿಕ್ ಮಾಡಿ. ದೊಡ್ಡ ಪೆಂಟಗಾನ್ ಕೆಳಗೆ ಸರಿದಿರುವುದನ್ನು ನೀವು ಗಮನಿಸಬಹುದು. |
07:20 | ನಾವು ಈ ಆಯ್ಕೆಗಳನ್ನು ಟೂಲ್ ಕಂಟ್ರೋಲ್ ಬಾರ್ ನಲ್ಲಿ ಕಾಣಬಹುದು. |
07:25 | ಈಗ, ಕ್ಲಿಪ್ಪಿಂಗ್ ಅನ್ನು ಹೇಗೆ ಮಾಡುವುದು ಎಂಬುದನ್ನು ಕಲಿಯೋಣ. |
07:28 | ನಿಮ್ಮ ಸಂಕೀರ್ಣ ಆಬ್ಜೆಕ್ಟ್ ಗಳನ್ನು ರಚಿಸಲು ಕ್ಲಿಪ್ಪಿಂಗ್ ಸಹಾಯ ಮಾಡುತ್ತದೆ. |
07:31 | ಅವುಗಳ ಆಕಾರವನ್ನು ಸುಲಭ ಮತ್ತು ವೇಗವಾಗಿ,ಇನ್ನೊಂದು ಎಲಿಮೆಂಟ್ ಅಥವಾ ನಿಮ್ಮ ವಿನ್ಯಾಸವನ್ನು ಅನುಕರಣೆ ಮಾಡುವುದು |
07:39 | ನಾನು ಒಂದು ಚಿತ್ರವನ್ನು ಈ ಟ್ಯುಟೋರಿಯಲ್ ನಲ್ಲಿ ಬಳಸುತ್ತೇನೆ. ಈ ಹೊಸ ಇಂಕ್ ಸ್ಕೇಪ್ ಫೈಲ್ ನಲ್ಲಿ ಒಂದು ಚಿತ್ರವಿದೆ. |
07:45 | ಈ ಚಿತ್ರದ ಮೇಲೆ ನಾನು ಒಂದು ದೀರ್ಘವೃತ್ತವನ್ನು ರಚಿಸುತ್ತೇನೆ. |
07:49 | ಈಗ ಚಿತ್ರ ಮತ್ತು ದೀರ್ಘವ್ರುತ್ತವನ್ನು ಆಯ್ಕೆ ಮಾಡಿ. |
07:53 | ಆಬ್ಜೆಕ್ಟ್ ಮೆನುವಿನಲ್ಲಿ, ಕ್ಲಿಪ್ ಅನ್ನು ಕ್ಲಿಕ್ ಮಾಡಿ, ನಂತರ ಸೆಟ್ ಅನ್ನು ಒತ್ತಿ. |
07:59 | ಈಗ ಚಿತ್ರವು ದೀರ್ಘವ್ರುತ್ತದ ಆಕಾರಕ್ಕೆ ಕ್ಲಿಪ್ ಆಗಿರುವುದನ್ನು ನೀವು ಗಮನಿಸಬಹುದು. |
08:04 | ಕ್ಲಿಪ್ಪಿಂಗ್ ನಲ್ಲಿ, ಕ್ಲಿಪ್ ಮಾಡಲು ಬಳಸಲಾದ, ಆಬ್ಜೆಕ್ಟ್ ನ ಆಕಾರವು, ಕ್ಲಿಪ್ ಮಾಡಬೇಕಾದ ಪ್ರದೇಶವನ್ನು ಸೂಚಿಸುತ್ತದೆ. |
08:09 | ಕ್ಲಿಪ್ ಅನ್ನು ತೆಗೆಯಲು,ಆಬ್ಜೆಕ್ಟ್ ಮೆನುವಿನಲ್ಲಿ, ಕ್ಲಿಪ್ ಅನ್ನು ಕ್ಲಿಕ್ ಮಾಡಿ, ನಂತರ ರಿಲೀಸ್ ಅನ್ನು ಒತ್ತಿ. |
08:17 | ಈಗ ಕ್ಲಿಪ್ ರಿಲೀಸ್ ಆಗುತ್ತದೆ. |
08:19 | ಈಗ ಮಾಸ್ಕಿಂಗ್ ನ ಬಗೆಗೆ ತಿಳಿಯೋಣ. |
08:22 | ಮಾಸ್ಕಿಂಗ್ ಎಂಬುದು ಕ್ಲಿಪ್ಪಿಂಗ್ ಗೆ ಹೋಲುತ್ತದೆ. |
08:25 | ಮಾಸ್ಕಿಂಗ್ ನಲ್ಲಿ, ಒಂದು ವಸ್ತುವಿನ ಪಾರದರ್ಶಕತೆ ಅಥವಾ ಚುರುಕುತನ ಎರಡನೇ ವಸ್ತುವಿನ ಅಪಾರದರ್ಶಕತೆಯನ್ನು ನಿರ್ಧರಿಸುತ್ತದೆ. |
08:32 | ಮಾಸ್ಕಿಂಗ್ ನ ಪ್ರಾತ್ಯಕ್ಷಿಕೆಗೆ, ನಾನು ಮೊದಲು, ಒಂದು ದೀರ್ಘವೃತ್ತವನ್ನು, ಗ್ರೇಡಿಯಂಟ್ ಟೂಲ್ ಅನ್ನು ಬಳಸಿ, ಅರೆ ಪಾರದರ್ಶಕವನ್ನಾಗಿ ಮಾಡುತ್ತೇನೆ. |
08:38 | ಈಗ, ದೀರ್ಘವೃತ್ತವನ್ನು ಆಯ್ಕೆ ಮಾಡಿ. |
08:40 | ಆಬ್ಜೆಕ್ಟ್ ಮೆನುವಿನಲ್ಲಿ, ಫಿಲ್ ಎಂಡ್ ಸ್ಟ್ರೋಕ್ ಅನ್ನು ಆಯ್ಕೆ ಮಾಡಿ. |
08:44 | ರೇಡಿಯಲ್ ಗ್ರೇಡಿಯಂಟ್ ಅನ್ನು ಕ್ಲಿಕ್ ಮಾಡಿ, ನಂತರ ಎಡಿಟ್ ಅನ್ನು ಒತ್ತಿ. |
08:50 | ಬಣ್ಣವನ್ನು ಬಿಳಿ ಮಾಡಲು, RGB ಸ್ಲೈಡರ್ ಅನ್ನು ಬಲತುದಿಗೆ ಸರಿಸಿ. |
09:00 | ಸ್ಟಾಪ್ ಡ್ರಾಪ್ ಡೌನ್ ಆರೋ (arrow) ಅನ್ನು ಕ್ಲಿಕ್ ಮಾಡಿ, ಸ್ಟಾಪ್ ಅನ್ನು ಕ್ಲಿಕ್ ಮಾಡಿ. |
09:05 | ಬಣ್ಣವನ್ನು ಕಪ್ಪು ಮಾಡಲು, RGB ಸ್ಲೈಡರ್ ಅನ್ನು ಎಡತುದಿಗೆ ಸರಿಸಿ. ಈಗ ಅಲ್ಫಾ ನ ಮೌಲ್ಯವು ಎರಡುನೂರಾ ಐವತ್ತೈದು ಆಗುತ್ತದೆ. |
09:15 | ಇವೆರಡರ ನಡುವೆ, ಮತ್ತೊಂದು ಬಣ್ಣ ಸೇರಿಸಲು, ಆಡ್ ಸ್ಟಾಪ್(add stop) ನ ಮೇಲೆ ಕ್ಲಿಕ್ ಮಾಡಿ. |
09:20 | ನೋಡ್ ಟೂಲ್ ನ ಮೇಲೆ ಕ್ಲಿಕ್ ಮಾಡಿ, ಡೈಮಂಡ್ ಹ್ಯಾಂಡಲ್ ಅನ್ನು ಮೇಲಕ್ಕೆ ಸರಿಸಿ. |
09:27 | ಈಗ, ಚಿತ್ರ ಮತ್ತು ದೀರ್ಘವೃತ್ತವನ್ನು ಆಯ್ಕೆ ಮಾಡಿ. |
09:30 | ಆಬ್ಜೆಕ್ಟ್ ಮೆನುವಿನಲ್ಲಿ,ಮಾಸ್ಕ್ ಅನ್ನು ಒತ್ತಿ, ನಂತರ ಸೆಟ್ ಅನ್ನು ಕ್ಲಿಕ್ ಮಾಡಿ. |
09:36 | ಚಿತ್ರದ ಮೇಲೆ ಒಂದು ಮಸುಕು ಮೂಡಿರುವುದನ್ನು ಗಮನಿಸಬಹುದು. |
09:40 | ಚಿತ್ರವು, ಮಾಸ್ಕಿಂಗ್ ಆಬ್ಜೆಕ್ಟ್ ಆದ, ದೀರ್ಘವೃತ್ತದ, ಪಾರದರ್ಶಕ ಗುಣವನ್ನು ಪಡೆದಿರುವುದನ್ನು ಗಮನಿಸಿ. |
09:47 | ಮಾಸ್ಕ್ ಅನ್ನು ತೆಗೆಯಲು, ಆಬ್ಜೆಕ್ಟ್ ಮೆನು ಗೆ ಹಿಂತಿರುಗಿ. |
09:51 | ಮಾಸ್ಕ್ ಅನ್ನು ಕ್ಲಿಕ್ ಮಾಡಿ, ನಂತರ ರಿಲೀಸ್ ಅನ್ನು ಒತ್ತಿ. |
09:54 | ಈಗ ಮಾಸ್ಕ್ ತೆಗೆಯಲ್ಪಟ್ಟಿದೆ. |
09:56 | ಸಾರಾಂಶ ತಿಳಿಯೋಣ. |
09:57 | ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು : ಆಬ್ಜೆಕ್ಟ್ ಗಳನ್ನು ಕಾಪಿ ಮತ್ತು ಪೇಸ್ಟ್ ಮಾಡುವುದು. |
10:02 | ನಕಲು ಮತ್ತು ತದ್ರೂಪವನ್ನು ಮಾಡುವುದು. |
10:05 | ವಿವಿಧ ಆಬ್ಜೆಕ್ಟ್ ಗಳನ್ನು, ಗುಂಪು ಮಾಡುವುದು ಮತ್ತು ವ್ಯವಸ್ಥಿತಗೊಳಿಸುವುದು. |
10:08 | ಅನೇಕ ಆಬ್ಜೆಕ್ಟ್ ಗಳನ್ನು ಆಯ್ಕೆ ಮಾಡುವುದು ಮತ್ತು ಆಯ್ಕೆಯನ್ನು ತಿರುವುಮುರುವುಗೊಳಿಸುವುದು. |
10:10 | ಕ್ಲಿಪ್ಪಿಂಗ್ ಮತ್ತು ಮಾಸ್ಕಿಂಗ್ |
10:12 | ನಿಮಗಾಗಿ ಇಲ್ಲಿ ಎರಡು ಅಸೈನ್ಮೆಂಟ್ ಗಳಿವೆ- |
10:15 | ಒಂದು ಬೂದು ಬಣ್ಣದ ಲಂಬ ದೀರ್ಘವೃತ್ತ, ಮತ್ತು ಒಂದು ಕಪ್ಪು ಬಣ್ಣದ ವೃತ್ತ ರಚಿಸಿ. |
10:20 | ವೃತ್ತವನ್ನು ದೀರ್ಘವೃತ್ತದ ಮೇಲೆ ಕೇಂದ್ರೀಯವಾಗಿ ಇಡಿ. |
10:23 | ಅದು ಒಂದು ಕಣ್ಣಿನಂತೆ ಕಾಣಬೇಕು. |
10:25 | ಈಗ ಇವನ್ನು ಗುಂಪು ಮಾಡಿ. |
10:27 | ನಂತರ, ಇನ್ನೊಂದು ಕಣ್ಣಿಗಾಗಿ, ಇದರ ತದ್ರೂಪ ಸೃಷ್ಟಿಸಿ. |
10:31 | ಎರಡೂ ಕಣ್ಣುಗಳೂ ಕಾಣುವಂತೆ ಮಾಡಲು, ಇದನ್ನು ಸರಿಸಿ. |
10:35 | ಒಂದು ನೀಲಿ ಬಣ್ಣದ ವೃತ್ತ ಮತ್ತು ಕೆಂಪು ಬಣ್ಣದ ಚೌಕವನ್ನು ರಚಿಸಿ. |
10:40 | ಚೌಕದ ನಕಲನ್ನು ಸೃಷ್ಟಿಸಿ, ಎರಡನ್ನೂ ಕರ್ಣೀಯವಾಗಿ ವಿರುದ್ಧ ದಿಕ್ಕಿನಲ್ಲಿ ಇಡಿ. |
10:45 | ಎರಡೂ ಚೌಕಗಳನ್ನೂ ಗುಂಪು ಮಾಡಿ, ಒಂದೇ ಆಬ್ಜೆಕ್ಟ್ ಆಗಿ ಮಾಡಿ. |
10:50 | ವೃತ್ತವನ್ನು ಕೇಂದ್ರೀಯವಾಗಿ, ಗುಂಪು ಮಾಡಿದ, ಚೌಕಗಳ ಮೇಲೆ ಇಡಿ. |
10:54 | ಎರಡನ್ನೂ ಆಯ್ಕೆ ಮಾಡಿ ಮತ್ತು ಕ್ಲಿಪ್ ಮಾಡಿ. ಇದು ಬಿಲ್ಲಿನಂತೆ ಕಾಣಬೇಕು. |
11:00 | ನಿಮ್ಮ ಅಸೈನ್ಮೆಂಟ್ ಈ ರೀತಿ ಕಾಣಬೇಕು. |
11:03 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
11:12 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
11:21 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
11:23 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
11:31 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
11:35 | ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
11:38 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |