Introduction-to-Computers/C2/Printer-Connection/Kannada
From Script | Spoken-Tutorial
Revision as of 10:58, 14 December 2015 by Vasudeva ahitanal (Talk | contribs)
Digital Divide - Printer Connection
Time | Narration |
ನಮಸ್ಕಾರ. Printer Connection ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ (Spoken Tutorial) ನಿಮಗೆ ಸ್ವಾಗತ. | |
ಈ ಟ್ಯುಟೋರಿಯಲ್ ನಲ್ಲಿ ನಾವು, ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಜೋಡಿಸುವುದನ್ನು (connect) ಕಲಿಯುವೆವು. | |
ಈ ಟ್ಯುಟೋರಿಯಲ್ ಗಾಗಿ, ನಾನು | |
* Ubuntu Linux 12.10 OS ಮತ್ತು | |
* Cannon printer ಇವುಗಳನ್ನು ಬಳಸುತ್ತಿದ್ದೇನೆ. | |
ನಾನು ಸಂಕ್ಷಿಪ್ತವಾಗಿ ಕಂಪ್ಯೂಟರ್ ನ ವಿವಿಧ ಘಟಕಗಳನ್ನು ನಿಮಗೆ ಪರಿಚಯ ಮಾಡಿ ಕೊಡುತ್ತೇನೆ. | |
ಇದು CPU (ಸಿ-ಪಿ-ಯು), | |
ಮಾನಿಟರ್, | |
ಕೀಬೋರ್ಡ್, | |
ಮೌಸ್, | |
ಮತ್ತು ಪ್ರಿಂಟರ್. | |
ನಾವು CPU ನತ್ತ ನೋಡೋಣ. | |
ಬಹಳಷ್ಟು CPU ಗಳಲ್ಲಿ, ಕೆಲವು USB ಪೋರ್ಟ್ ಗಳು ಮುಂಭಾಗದಲ್ಲಿ | |
ಮತ್ತು ಕೆಲವು ಹಿಂಭಾಗದಲ್ಲಿ ಇರುತ್ತವೆ. | |
ಈಗ, ನಾವು ಪ್ರಿಂಟರ್ ನತ್ತ ನೋಡೋಣ. | |
ಸಾಮಾನ್ಯವಾಗಿ, ಪ್ರಿಂಟರ್ ನ ಮುಂಭಾಗದಲ್ಲಿ ಅಥವಾ ಮೇಲ್ಭಾಗದಲ್ಲಿ ಒಂದು ‘ಪವರ್ ಸ್ವಿಚ್’ ಇರುತ್ತದೆ. | |
ಮತ್ತು ಪ್ರಿಂಟರ್ ನ ಹಿಂಭಾಗದಲ್ಲಿ ಒಂದು ‘ಪವರ್ ಸ್ಲಾಟ್’ ಹಾಗೂ ಒಂದು USB ಪೋರ್ಟ್ ಇರುತ್ತವೆ. | |
ಒಂದು ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಕನೆಕ್ಟ್ ಮಾಡಲು, ನಾವು 'USB ಕೇಬಲ್' ಅನ್ನು ಉಪಯೋಗಿಸಬೇಕು. | |
ನಾವು 'USB ಕೇಬಲ್' ಅನ್ನು ‘ಪ್ರಿಂಟರ್’ಗೆ ಕನೆಕ್ಟ್ ಮಾಡೋಣ. | |
ಈಗ, ಕೇಬಲ್ ನ ಇನ್ನೊಂದು ಕೊನೆಯನ್ನು 'CPU' ನ 'USB ಪೋರ್ಟ್'ಗೆ ಸೇರಿಸೋಣ. | |
ಈಗ, ನಮ್ಮ ‘ಪ್ರಿಂಟರ್’, ಕಂಪ್ಯೂಟರ್ ಗೆ ಜೋಡಿಸಲ್ಪಟ್ಟಿದೆ. | |
‘ಪ್ರಿಂಟರ್’ನ ಮೇಲಿರುವ ‘ಪವರ್ ಬಟನ್’ಅನ್ನು ಸ್ವಿಚ್-ಆನ್ ಮಾಡಿ. | |
ಈಗ, ನಮ್ಮ ಕಂಪ್ಯೂಟರ್ ಅನ್ನು ಬಳಸಿ, ನಾವು ಪ್ರಿಂಟರ್ ಅನ್ನು ಕಾನ್ಫಿಗರ್ ಮಾಡೋಣ. | |
ನಾವು ಡೆಸ್ಕ್ಟಾಪ್ ಗೆ ಹೋಗೋಣ. | |
‘ಲಾಂಚರ್ ಬಾರ್’ನ ಮೇಲ್ಗಡೆ ಎಡಭಾಗದಲ್ಲಿ ಇರುವ 'Dash Home' (ಡ್ಯಾಶ್ ಹೋಮ್) ಐಕಾನ್ ಮೇಲೆ ಕ್ಲಿಕ್ ಮಾಡಿ. | |
‘ಸರ್ಚ್ ಬಾರ್’ನಲ್ಲಿ, “Printing” ಎಂದು ಟೈಪ್ ಮಾಡಿ. | |
ಪ್ರಿಂಟರ್ ಐಕಾನ್ ಕಾಣಿಸಿಕೊಳ್ಳುವುದು. | |
ಅದರ ಮೇಲೆ ಕ್ಲಿಕ್ ಮಾಡಿ. | |
Ubuntu ನ ಹಳೆಯ ಆವೃತ್ತಿಗಳಲ್ಲಿ, ಇವುಗಳ ಮೇಲೆ ಕ್ಲಿಕ್ ಮಾಡಿ- | |
'System' (ಸಿಸ್ಟಂ), | |
'Administration' (ಅಡ್ಮಿನಿಸ್ಟ್ರೇಶನ್), | |
ಮತ್ತು 'Printing' (ಪ್ರಿಂಟಿಂಗ್). | |
ಈಗ, 'Printing' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. | |
ಇದು - 'There are no printers configured yet' ಎಂದು ಹೇಳುತ್ತದೆ. | |
ಮೇಲ್ಗಡೆ ಎಡಭಾಗದಲ್ಲಿ, ಹಸಿರು ಬಣ್ಣದ ‘Plus’ ಚಿಹ್ನೆಯನ್ನು ಹೊಂದಿದ 'Add' ಎಂಬ ಹೆಸರಿನ ಒಂದು ಬಟನ್ ಇದೆ. ಅದರ ಮೇಲೆ ಕ್ಲಿಕ್ ಮಾಡಿ. | |
ಇದು, ‘New Printer’ ಎಂಬ ಡೈಲಾಗ್-ಬಾಕ್ಸ್ ಅನ್ನು ಓಪನ್ ಮಾಡುವುದು. | |
ಎಡಭಾಗದಲ್ಲಿ, ಕಂಪ್ಯೂಟರ್ ಗೆ ಕನೆಕ್ಟ್ ಮಾಡಲಾದ ಪ್ರಿಂಟರ್ ಸಾಧನಗಳ ಒಂದು ಪಟ್ಟಿಯನ್ನು ತೋರಿಸಲಾಗುವುದು. | |
ಇಲ್ಲಿ, ನಾವು ನಮ್ಮ ಪ್ರಿಂಟರ್ ಅನ್ನು, ಎಂದರೆ, 'Cannon Printer' ಅನ್ನು ಆಯ್ಕೆಮಾಡಿ ನಂತರ 'Forward'ನ ಮೇಲೆ ಕ್ಲಿಕ್ ಮಾಡೋಣ. | |
ಆಗ, ಅದು ತನ್ನಷ್ಟಕ್ಕೆ ತಾನೇ ‘ಡ್ರೈವರ್’ಗಳಿಗಾಗಿ ಹುಡುಕಲು ಆರಂಭಿಸುವುದು. ನಾನು 'Cancel' ನ ಮೇಲೆ ಕ್ಲಿಕ್ ಮಾಡುವೆನು. | |
ಈಗ, 'Choose Driver' ಎಂಬ ಡೈಲಾಗ್-ಬಾಕ್ಸ್ ಕಾಣಿಸುವುದು. | |
ಬಹಳಷ್ಟು ಸಂದರ್ಭಗಳಲ್ಲಿ 'Default' ಆಯ್ಕೆಯು ಕೆಲಸ ಮಾಡುವುದು. | |
ನನ್ನ ಹತ್ತಿರ 'Canon Printer' ಇರುವುದರಿಂದ, ಇಲ್ಲಿ ಈ ಲಿಸ್ಟ್ ನಲ್ಲಿ, ಇದು ಡೀಫಾಲ್ಟ್ ಆಗಿ ಆಯ್ಕೆಯಾಗಿದೆ. | |
ಈಗ 'Forward' ನ ಮೇಲೆ ಕ್ಲಿಕ್ ಮಾಡಿ. | |
'Model' ಪೇಜ್ ನಲ್ಲಿ, ನನ್ನ ಪ್ರಿಂಟರ್ ನ ಮಾಡೆಲ್ ತನ್ನಷ್ಟಕ್ಕೆ ತಾನೇ ಪತ್ತೆಯಾಗುವುದು. | |
ಇದನ್ನು ಬ್ರಾಕೆಟ್ಸ್ ನಲ್ಲಿ 'Recommended' ಎಂದು ತೋರಿಸಲಾಗಿದೆ. | |
ಅಲ್ಲದೇ, 'Drivers ' ವಿಭಾಗದಲ್ಲಿ, ಇದು ನನ್ನ ಪ್ರಿಂಟರ್ ಗೆ ಯೋಗ್ಯವಾದ ‘ಡ್ರೈವರ್’ಅನ್ನು ತೋರಿಸುತ್ತದೆ. | |
ಈಗ, 'Forward ' ನ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ. | |
ಈಗ, ನಮ್ಮ ಪ್ರಿಂಟರ್ ಅನ್ನು ವಿವರಿಸಲು ನಮಗೆ ಸೂಚಿಸಲಾಗಿದೆ - 'printer name' ಮತ್ತು ಅದರ 'location'. | |
ನಾನು ಇದನ್ನು 'Default' ಗೆ ಇಟ್ಟು 'Apply' ದ ಮೇಲೆ ಕ್ಲಿಕ್ ಮಾಡುವೆನು. | |
ನಮ್ಮ ಪ್ರಿಂಟರ್, ಯಶಸ್ವಿಯಾಗಿ ನಮ್ಮ ಕಂಪ್ಯೂಟರ್ ಗೆ ಸೇರಿಸಲ್ಪಟ್ಟಿದೆ. | |
“Would you like to print a test page? ” ಎಂಬ ಒಂದು ಮೆಸೇಜ್ (ಸಂದೇಶ) ಕಾಣಿಸಿಕೊಳ್ಳುತ್ತದೆ. | |
'Print Test Page ' ಎಂಬ ಆಯ್ಕೆಯ ಮೇಲೆ ನಾವು ಕ್ಲಿಕ್ ಮಾಡೋಣ. | |
ಈ ಕೆಳಗಿನ ಮೆಸೇಜ್ ನೊಂದಿಗೆ ಒಂದು ಪಾಪ್-ಅಪ್ ಕಾಣಿಸಿಕೊಳ್ಳುವುದು: | |
“Submitted – Test Page submitted as job ...” ಮತ್ತು ಅದರ ನಂಬರ್. | |
'OK' ಯ ಮೇಲೆ ಕ್ಲಿಕ್ ಮಾಡಿ. | |
'Printer Properties' ಎಂಬ ಡೈಲಾಗ್-ಬಾಕ್ಸ್ ನಲ್ಲಿ, 'OK' ಯ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ. | |
ಇದು, ನಮ್ಮ ಪ್ರಿಂಟರ್ ನಿಂದ ನಮ್ಮ ಟೆಸ್ಟ್ ಪ್ರಿಂಟ್ ಆಗಿದೆ. | |
ನಮ್ಮ ಪ್ರಿಂಟರ್, ಈಗ ಡಾಕ್ಯೂಮೆಂಟ್ ಗಳನ್ನು ಪ್ರಿಂಟ್ ಮಾಡಲು ಸಿದ್ಧವಾಗಿದೆ. | |
ನಾವು 'Printer' ಡೈಲಾಗ್-ಬಾಕ್ಸ್ ಅನ್ನು ಕ್ಲೋಸ್ ಮಾಡೋಣ. | |
ನಾನೀಗ ಡಾಕ್ಯೂಮೆಂಟ್ ಅನ್ನು ಹೇಗೆ ಪ್ರಿಂಟ್ ಮಾಡುವುದೆಂದು ತೋರಿಸುತ್ತೇನೆ. | |
ನಾವು ಒಂದು ಡಾಕ್ಯೂಮೆಂಟ್ ಅನ್ನು ಓಪನ್ ಮಾಡೋಣ. | |
ಆಮೇಲೆ, 'Ctrl' ಮತ್ತು 'P' ಕೀಗಳನ್ನು ಒಟ್ಟಿಗೇ ಒತ್ತಿ. | |
'Print ' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. | |
ಕನೆಕ್ಟ್ ಮಾಡಲಾದ ಪ್ರಿಂಟರ್, ಡೀಫಾಲ್ಟ್ ಆಗಿ ಆಯ್ಕೆಯಾಗಿದೆ ಎಂಬುದನ್ನು ಗಮನಿಸಿ. | |
ಈ ಡೈಲಾಗ್-ಬಾಕ್ಸ್ ನಲ್ಲಿ, ನಮಗೆ ಹಲವಾರು ಆಯ್ಕೆಗಳಿವೆ. | |
'Range', ಪ್ರಿಂಟ್ ಮಾಡಬೇಕಾಗಿರುವ ಪುಟಗಳ ಶ್ರೇಣಿಯನ್ನು (range) ಆಯ್ಕೆಮಾಡಲು ನಮಗೆ ಅನುಮತಿಸುತ್ತದೆ. | |
'Range' ನ ಅಡಿಯಲ್ಲಿ ಕೆಲವು ಆಯ್ಕೆಗಳು ಲಭ್ಯವಾಗಿರುತ್ತವೆ: | |
* 'All pages' ಎಂಬ ಆಯ್ಕೆಯು, ಡಾಕ್ಯೂಮೆಂಟ್ ನಲ್ಲಿಯ ಎಲ್ಲ ಪುಟಗಳನ್ನು ಪ್ರಿಂಟ್ ಮಾಡುತ್ತದೆ. | |
* 'Current page' ಎಂಬ ಆಯ್ಕೆಯು, ಈಗ ಆಯ್ಕೆ ಮಾಡಿದ ಪುಟವನ್ನು ಮಾತ್ರ ಪ್ರಿಂಟ್ ಮಾಡುತ್ತದೆ. | |
* 'Pages' ಎಂಬ ಆಯ್ಕೆಯು, ನಮ್ಮ ಸೂಚನೆಯಂತೆ ಪುಟಗಳನ್ನು ಪ್ರಿಂಟ್ ಮಾಡುತ್ತದೆ.
ಉದಾಹರಣೆಗೆ, 3-4. | |
ನಂತರ, 'Copies'ನ ಅಡಿಯಲ್ಲಿ ಲಭ್ಯವಿರುವ ಆಯ್ಕೆಗಳನ್ನು ನೋಡೋಣ. | |
'Copies' ಎಂಬ ಆಯ್ಕೆಯಲ್ಲಿ, ನಮಗೆ ಪ್ರಿಂಟ್ ಮಾಡಬೇಕಾಗಿರುವ ಪ್ರತಿಗಳ ಸಂಖ್ಯೆಯನ್ನು ನಾವು ಆರಿಸಿಕೊಳ್ಳುತ್ತೇವೆ. | |
ಒಂದುವೇಳೆ, 'Copies' ಅನ್ನು ನಾವು '2' ಕ್ಕೆ ಬದಲಾಯಿಸಿದರೆ, ಆಗ ಆಯ್ಕೆಯಾದ ಪುಟಗಳ '2' ಪ್ರತಿಗಳು ಪ್ರಿಂಟ್ ಆಗುತ್ತವೆ. | |
ಈಗ, 'Print' ಬಟನ್ ನ ಮೇಲೆ ಕ್ಲಿಕ್ ಮಾಡಿ. | |
ನೀವು ನಿಮ್ಮ ಪ್ರಿಂಟರ್ ಅನ್ನು ಸರಿಯಾಗಿ ಕಾನ್ಫಿಗರ್ ಮಾಡಿದ್ದರೆ, ನಿಮ್ಮ ಡಾಕ್ಯೂಮೆಂಟ್ ಪ್ರಿಂಟ್ ಆಗಲು ಆರಂಭಿಸುವುದು. | |
ಇಲ್ಲಿಗೆ, ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ . ಈ ಟ್ಯುಟೋರಿಯಲ್ ನಲ್ಲಿ, | |
* ‘ಪ್ರಿಂಟರ್’ಅನ್ನು ‘ಕಂಪ್ಯೂಟರ್’ಗೆ ಹೇಗೆ ಜೋಡಿಸುವುದು | |
* ‘ಪ್ರಿಂಟರ್’ನ ‘ಸೆಟ್ಟಿಂಗ್’ಗಳನ್ನು ಕಾನ್ಫಿಗರ್ ಮಾಡುವುದು ಮತ್ತು | |
* ‘ಡಾಕ್ಯೂಮೆಂಟ್’ಅನ್ನು ಪ್ರಿಂಟ್ ಮಾಡುವುದು, ಇವುಗಳನ್ನು ನಾವು ಕಲಿತಿದ್ದೇವೆ, | |
ಮತ್ತು ಲಭ್ಯವಿರುವ ವಿವಿಧ ‘ಪ್ರಿಂಟ್’ ಆಯ್ಕೆಗಳನ್ನು ಸಹ ನಾವು ಕಲಿತಿದ್ದೇವೆ. | |
ಈ ಮಾಹಿತಿಯು ನಿಮಗೆ ಉಪಯುಕ್ತವಾಗಿತ್ತು ಎಂದು ನಾವು ಆಶಿಸುತ್ತೇವೆ. | |
ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. | |
ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. | |
ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. | |
“ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org | |
"ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: spoken hyphen tutorial dot org slash NMEICT hyphen Intro. | |
ವಂದನೆಗಳು. | |
ಈ ಟ್ಯುಟೋರಿಯಲ್ ನ ಸ್ಕ್ರಿಪ್ಟ್, ಪ್ರವೀಣ್ ಅವರ ಕೊಡುಗೆಯಾಗಿದೆ. | |
IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ . |