BASH/C2/Nested-and-multilevel-if-elsif-statements/Kannada
From Script | Spoken-Tutorial
Revision as of 15:33, 17 March 2017 by PoojaMoolya (Talk | contribs)
|
|
00:00 | ಬ್ಯಾಶ್ ನಲ್ಲಿ Nested ಮತ್ತು multilevel if statement. ಬಗೆಗಿನ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ ನಾವು |
00:12 | Nested if-else ಮತ್ತು |
00:14 | Multilevel if-else ಸ್ಟೇಟ್-ಮೆಂಟ್ ಗಳ ಕುರಿತು ಕಲಿಯುತ್ತೇವೆ. |
00:17 | ಕೆಲವು ಉದಾಹರಣೆ ಯೊಂದಿಗೆ ನೋಡೋಣ. |
00:22 | ಈ ಪಾಠವನ್ನು ಕಲಿಯಲು ನೀವು Linux Operating System ಅನ್ನು ಉಪಯೋಗಿಸಲು ತಿಳಿದಿರಬೇಕು. |
00:28 | ತಿಳಿದಿಲ್ಲವಾದಲ್ಲಿ ಸಂಬಂಧಿತ Linux ಟ್ಯುಟೊರಿಯಲ್ ಗಾಗಿ ಕೆಳಕಂಡ ಜಾಲತಾಣವನ್ನು ಭೇಟಿಮಾಡಿ. |
00:35 | ಈ ಪಾಠಕ್ಕಾಗಿ ನಾನು |
00:38 | Ubuntu Linux 12.04 OS ಮತ್ತು |
00:42 | GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ. |
00:46 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
00:52 | ನಾವು ಈಗ Nested if-else ಸ್ಟೇಟ್ ಮೆಂಟ್ ನ ಫ್ಲೋ ವನ್ನು ನೋಡೋಣ. |
00:57 | ಇಲ್ಲಿ condition1 ಇದು 'true ಆಗಿದ್ದರೆ ಆಗ condition 2 ಅನ್ನು ಮೌಲ್ಯ ಮಾಪನ ಮಾಡುತ್ತೇವೆ. |
01:04 | condition2 ಇದು 'true' ಆಗಿದ್ದರೆ ಆಗ ' statement 1' ಎಕ್ಸಿಕ್ಯೂಟ್ ಆಗುತ್ತದೆ. |
01:10 | ಅಂದರೆ ಯಾವಾಗ conditions1 ಮತ್ತು 2 ಎರಡೂ true ಆಗಿರುತ್ತದೋ ಆಗ ಮಾತ್ರ statement 1 ಎಕ್ಸಿಕ್ಯೂಟ್ ಆಗುತ್ತದೆ. |
01:19 | ' condition1 ಇದು false ಆಗಿದ್ದರೆ ಆಗ statement 3 ಎಕ್ಸಿಕ್ಯೂಟ್ ಆಗುತ್ತದೆ. |
01:25 | ಮತ್ತು condition 2 ಇದು false ಆಗಿದ್ದರೆ ಆಗ statement 2 ಎಕ್ಸಿಕ್ಯೂಟ್ ಆಗುತ್ತದೆ. |
01:31 | ಒಂದು ಉದಾಹರಣೆಯನ್ನು ನೋಡೋಣ. |
01:33 | ನಾನು ಕೋಡ್ ಅನ್ನು 'nestedifelse.sh ಫೈಲ್ ನಲ್ಲಿ ಬರೆದಿದ್ದೇನೆ. |
01:38 | ಅದನ್ನು ಓಪನ್ ಮಾಡುತ್ತೇನೆ. |
01:40 | ಈಗ ಕೋಡ್ ಅನ್ನು ವಿವರಿಸುತ್ತೇನೆ. |
01:43 | ಇದು shebang line. |
01:45 | NAME ಎಂಬ ವೇರಿಯೇಬಲ್ ಗೆ anusha ಎಂಬ ಬೆಲೆಯು ಅಸೈನ್ ಆಗಿದೆ. |
01:50 | PASSWORD ಎಂಬ ವೇರಿಯೇಬಲ್ ಗೆ abc123 ಎಂಬ ಬೆಲೆಯು ಅಸೈನ್ ಆಗಿದೆ. |
01:56 | read ಕಮಾಂಡ್ ಸ್ಟ್ಯಾಂಡರ್ಡ್ ಇನ್ ಪುಟ್ ನಿಂದ ಒಂದು ಸಾಲು ಡಾಟಾವನ್ನು ಪಡೆದುಕೊಳ್ಳುತ್ತದೆ. |
02:02 | - (ಹೈಫನ್) p ಫ್ಲಾಗ್ ಪ್ರಾಮ್ಟ್ ಅನ್ನು ಡಿಸ್ಪ್ಲೇ ಮಾಡುತ್ತದೆ. |
02:05 | - (ಹೈಫನ್) p ನ ನಂತರದ ಸ್ಟ್ರಿಂಗ್ “Enter name: ” ಎಂಬ ಸಂದೇಶ ಟರ್ಮಿನಲ್ ನಲ್ಲಿ ಡಿಸ್ಪ್ಲೇ ಆಗುತ್ತದೆ. |
02:11 | myname ಇದು ಬಳಕೆದಾರರಿಂದ ಪಡೆದ ಇನ್ ಪುಟ್ ಅನ್ನು ಸ್ಟೋರ್ ಮಾಡುತ್ತದೆ. |
02:18 | ಮೊದಲ if ಸ್ಟೇಟ್ ಮೆಂಟ್ ಎರಡು ವೇರಿಯೇಬಲ್ ಗಳಾದ myname ಮತ್ತು NAME ಗಳನ್ನು ಹೋಲಿಸುತ್ತದೆ. |
02:24 | ಅಂದರೆ ಬಳಕೆದಾರ ಇನ್ಪುಟ್ ಮಾಡಿದ ಬೆಲೆ ಮತ್ತು NAME ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಆಗಿರುವ ಬೆಲೆ ಅಂದರೆ anusha . |
02:31 | ಈ ಎರಡೂ ಬೆಲೆಗಳೂ ಹೊಂದಿಕೆಯಾದರೆ ಈ if statement ನಲ್ಲಿರುವ ಉಳಿದ ಕೋಡ್ ಗಳನ್ನು ಮೌಲ್ಯಮಾಪನ ಮಾಡುತ್ತದೆ. |
02:38 | read ಕಮಾಂಡ್ ಎಂಟರ್ ಮಾಡಿದ ಪಾಸ್ ವರ್ಡ್ ಅನ್ನು mypassword ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ. |
02:46 | ಇಲ್ಲಿ - (ಹೈಫನ್) s ಫ್ಲ್ಯಾ ಗ್ ಸೈಲಂಟ್ ಮೋಡ್ ಗಾಗಿ. |
02:49 | ಅಂದರೆ ಬಳಕೆದಾರ ಎಂಟರ್ ಮಾಡಿದ ಪದ ಟರ್ಮಿನಲ್ ನಲ್ಲಿ ಡಿಸ್ಪ್ಲೇ ಆಗುವುದಿಲ್ಲ. |
02:56 | ಇಲ್ಲಿ ನಾವು ಇನ್ನೊಂದು if-else ಸ್ಟೇಟ್ ಮೆಂಟ್ ಗಳ ಜೊತೆಯನ್ನು ಹೊಂದಿದ್ದೇವೆ. |
02:59 | ಈ if-else statement ಜೊತೆ ಮೊದಲನೇ 'if ' ಸ್ಟೇಟ್ ಮೆಂಟ್ ನ ಒಳಗೆ ಅಡಕವಾಗಿದೆ. |
03:05 | ಎರಡನೇ if ಸ್ಟೇಟ್-ಮೆಂಟ್ ವೇರಿಯೇಬಲ್ ಗಳಾದ 'mypassword ' ಮತ್ತು 'PASSWORD' ಗಳನ್ನು ಹೋಲಿಕೆ ಮಾಡುತ್ತದೆ. |
03:12 | echo ಕಮಾಂಡ್ if ಕಂಡಿಷನ್ true ಆಗಿದ್ದರೆ ಟರ್ಮಿನಲ್ ನಲ್ಲಿ “Welcome” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. |
03:18 | ಅಂದರೆ ಪಾಸ್ ವರ್ಡ್ ಗಳು ಹೊಂದಿಕೆಯಾಗುತ್ತದೆ. |
03:21 | -e ಇದು ಬ್ಯಾಕ್-ಸ್ಲ್ಯಾ ಶ್ ಅನ್ನು ವ್ಯಾಖ್ಯಾನಿಸಲು ಸಹಾಯ ಮಾಡುತ್ತದೆ. |
03:27 | \n ಹೊಸ ಸಾಲನ್ನು ಸೂಚಿಸುತ್ತದೆ. ಅಂದರೆ Welcome” ಎಂಬ ಸ್ಟ್ರಿಂಗ್ ಹೊಸ ಸಾಲಿನಲ್ಲಿ ಪ್ರಿಂಟ್ ಆಗುತ್ತದೆ. |
03:35 | 'if ಕಂಡಿಶನ್ 'true' ಆಗಿರದಿದ್ದಲ್ಲಿ ಆಗ else ಕಂಡಿಷನ್ ಎಕ್ಸಿಕ್ಯೂಟ್ ಆಗುತ್ತದೆ. |
03:42 | ಅಂದರೆ ಪಾಸ್ ವರ್ಡ್ ಹೊಂದಿಕೆಯಾಗದಿದ್ದರೆ else ಕಂಡಿಷನ್ ಎಕ್ಸಿಕ್ಯೂಟ್ ಆಗುತ್ತದೆ. |
03:48 | ಈ ಸಂದರ್ಭದಲ್ಲಿ , echo' ಕಮಾಂಡ್ “Wrong password” ಎಂದು ಡಿಸ್ಪ್ಲೇ ಮಾಡುತ್ತದೆ. |
03:53 | fi ಇದು ಒಳಗಿನ if-else ಸ್ಟೇಟ್ ಮೆಂಟ್ ಅನ್ನು ಕೊನೆಗೊಳಿಸುತ್ತದೆ. |
03:57 | ಮೊದಲನೇ if-else ಸ್ಟೇಟ್ ಮೆಂಟ್ ಗೆ ಹಿಂದಿರುಗೋಣ. |
04:01 | 'myname' ಮತ್ತು NAME ಬೆಲೆಗಳು ಹೊಂದಿಕೆಯಾಗದಿದ್ದರೆ ಆಗ ಈ else ಸ್ಟೇಟ್ ಮೆಂಟ್ ಎಕ್ಸಿಕ್ಯೂಟ್ ಆಗುತ್ತದೆ. |
04:09 | ಈ 'echo ' ಕಮಾಂಡ್ ಟರ್ಮಿನಲ್ ನಲ್ಲಿ “Wrong Name” ಎಂದು ಡಿಸ್ಪ್ಲೇ ಮಾಡುತ್ತದೆ. |
04:14 | ಈ 'fi ಹೊರಗಿನ if-else ಸ್ಟೇಟ್ ಮೆಂಟ್ ಅನ್ನು ಕೊನೆಗೊಳಿಸುತ್ತದೆ. |
04:18 | ನಿಮ್ಮ ಕೀ ಬೋರ್ಡ್ ನಲ್ಲಿ ctrl alt ಮತ್ತು t ಕೀಲಿಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಅನ್ನು ತೆರೆಯಿರಿ. |
04:27 | ಫೈಲ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಿ. |
04:29 | ಅದಕ್ಕಾಗಿ chmodಸ್ಪೇಸ್ ಪ್ಲಸ್ x ಸ್ಪೇಸ್ nestedifelse.sh ಎಂದು ಟೈಪ್ ಮಾಡಿ. |
04:38 | ಈಗ ಡಾಟ್ ಸ್ಲ್ಯಾಶ್ nestedifelse.sh ಎಂದು ಟೈಪ್ ಮಾಡಿ. |
04:43 | ಈ ಪ್ರೋಗ್ರಾಮ್ ಎರಡು ಕಂಡಿಷನ್ ಗಳನ್ನು |
04:46 | ಅಂದರೆ Name ಮತ್ತು Password ಗಳನ್ನು |
04:48 | ಟರ್ಮಿನಲ್ ನಲ್ಲಿ ಎಕ್ಸಿಕ್ಯೂಟ್ ಆದಾಗ ಪರೀಕ್ಷಿಸುತ್ತದೆ. |
04:52 | ಇಲ್ಲಿ ಪ್ರಾಮ್ಟ್ 'Enter Name ಎಂದು ಡಿಸ್ಪ್ಲೇ ಮಾಡುತ್ತದೆ. |
04:55 | anusha. ಎಂದು ಟೈಪ್ ಮಾಡೋಣ. |
04:57 | ಈಗ ಕಂಡಿಷನ್ true ಆಗಿರುವುದರಿಂದ ಮುಂದಿನ if ಕಂಡಿಷನ್ ಮೌಲ್ಯಮಾಪನಕ್ಕೊಳಪಡುತ್ತದೆ. |
05:02 | ಪ್ರಾಮ್ಟ್ 'Password ಎಂದು ಕೇಳುತ್ತದೆ. |
05:05 | ನಾನು ಪಾಸ್ ವರ್ಡ್ ಅನ್ನು abc123 ಎಂದು ಟೈಪ್ ಮಾಡುತ್ತೇನೆ. |
05:10 | PASSWORD ವೇರಿಯೇಬಲ್ ನ ಬೆಲೆಯೊಂದಿಗೆ ನಮೂದಿಸಿದ ಪಾಸ್ ವರ್ಡ್ ಹೊಂದಿಕೆಯಾಗುತ್ತದೆ. |
05:15 | ಹಾಗಾಗಿ ಪ್ರಾಮ್ಟ್ Welcome ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. |
05:19 | ಸ್ಕ್ರಿಪ್ಟ್ ಅನ್ನ್ನು ಇನ್ನೊಮ್ಮೆ ಎಕ್ಸಿಕ್ಯೂಟ್ ಮಾಡೋಣ. |
05:21 | up arrow ಕೀಲಿಯನ್ನು ಒತ್ತಿ. |
05:24 | ಡಾಟ್ ಸ್ಲ್ಯಾಶ್ nestedifelse.sh ಗೆ ಹೋಗಿ. |
05:29 | Enter ಅನ್ನು ಒತ್ತಿರಿ. |
05:31 | ಈ ಬಾರಿ ಅದೇ ನೇಮ್ ಅನ್ನು ಮತ್ತು ಬೇರೆ ಪಾಸ್ ವರ್ಡ್ ಅನ್ನು ನಮೂದಿಸೋಣ. |
05:37 | ಹಾಗಾಗಿ ನಾನು name ಅನ್ನು anusha ಎಂದು ಮತ್ತು password ಅನ್ನು 123 ಎಂದು ನಮೂದಿಸುತ್ತೇನೆ. |
05:44 | name ನ ಬೆಲೆಯು ಹೊಂದಿಕೆಯಾಗುತ್ತದೆ ಆದರೆ password ನ ಬೆಲೆಯು ಹೊಂದಿಕೆಯಾಗುವುದಿಲ್ಲ. |
05:49 | ಹಾಗಾಗಿ 'Wrong password' ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ. |
05:53 | ಇದು ಮೊದಲ if statement ನಲ್ಲಿ ಅಡಕವಾಗಿರುವ else statement ಎಕ್ಸಿಕ್ಯೂಟ್ ಆಗಿದೆ ಎಂದು ತೋರಿಸುತ್ತದೆ. |
06:01 | ಇನ್ನೊಮ್ಮೆ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
06:04 | ಈ ಬಾರಿ ನಾವು name ಅನ್ನು swati ಎಂದು ನಮೂದಿಸೋಣ. |
06:08 | Wrong name” ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ. |
06:12 | ಏಕೆಂದರೆ 'swati' ಎಂಬ ಬೆಲೆಯು ಈ ಹಿಂದೆಯೇ ಡಿಕ್ಲೇರ್ ಮಾಡಿದ ಬೆಲೆಯಾದ anusha ದೊಂದಿಕೆ ಹೊಂದಿಕೆಯಾಗುವುದಿಲ್ಲ. |
06:19 | ನಿಯಂತ್ರಣವು 'if statement' ನ ಹೊರಬಂದು else statement ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ. |
06:25 | ಹಾಗಾಗಿ ಇದು Wrong name. ಎಂಬ ಸಂದೇಶವನ್ನು ಪ್ರಿಂಟ್ ಮಾಡುತ್ತದೆ. |
06:29 | ಈಗ 'multilevel if-else statement ಅನ್ನು ನೋಡೋಣ. |
06:34 | condition1 ಇದು true ಆಗಿದ್ದರೆ ಆಗ statement1 ಎಕ್ಸಿಕ್ಯೂಟ್ ಆಗುತ್ತದೆ. |
06:40 | ಒಂದು ವೇಳೆ'condition1' ಇದು 'false' ಆಗಿದ್ದರೆ ಆಗ 'condition 2 ಮೌಲ್ಯಮಾಪನಕ್ಕೊಳಪಡುತ್ತದೆ. |
06:46 | 'condition2' ಇದು 'true' ಆಗಿದ್ದರೆ ಆಗ 'statement 2' ಎಕ್ಸಿಕ್ಯೂಟ್ ಆಗುತ್ತದೆ. |
06:52 | ಒಂದು ವೇಳೆ 'condition 2' ಇದು 'false’ ಆಗಿದ್ದರೆ ಆಗ “condition N” ಮೌಲ್ಯಮಾಪನಕ್ಕೊಳಪಡುತ್ತದೆ. |
06:58 | condition N ಇದು true,' ಆಗಿದ್ದರೆ ಆಗ “ statement N” ಎಕ್ಸಿಕ್ಯೂಟ್ ಆಗುತ್ತದೆ. |
07:03 | ಒಂದು ವೇಳೆ “Condition N' ಇದು “false” ಆಗಿದ್ದರೆ ಆಗ “statement X” ಎಕ್ಸಿಕ್ಯೂಟ್ ಆಗುತ್ತದೆ. |
07:10 | ಉದಾಹರಣೆಯನ್ನು ನೋಡೋಣ. |
07:12 | ನಾನು ಒಂದು ಉದಾಹರಣೆಯನ್ನು ತೆಗೆದುಕೊಂಡಿದ್ದೇನೆ. |
07:14 | ಅದನ್ನು ತೆರೆಯುತ್ತೇನೆ. ಗಮನಿಸಿ ನಮ್ಮ ಫೈಲ್ ಹೆಸರು multilevel ಹೈಫನ್ ifelse ಡಾಟ್ sh. |
07:23 | ಕೋಡ್ ಅನ್ನು ಗಮನಿಸೋಣ. |
07:25 | ಇದು shebang line. |
07:27 | mystring ' ಇದು ಎಕ್ಸಿಕ್ಯೂಶನ್ ಸಮಯದಲ್ಲಿ ಬಳಕೆದಾರರಿಂದ ಪಡೆದ ಇನ್ ಪುಟ್ ಅನ್ನು ಸ್ಟೋರ್ ಮಾಡುವ ವೇರಿಯೇಬಲ್ ಆಗಿದೆ. |
07:34 | 'if condition ಇನ್ ಪುಟ್ ಮಾಡಿದ ಸ್ಟ್ರಿಂಗ್ 'null' ಆಗಿದೆಯೇ ಎಂದು ಪರೀಕ್ಷಿಸುತ್ತದೆ. |
07:39 | '- (ಹೈಫನ್) z ಸ್ಟ್ರಿಂಗ್ ನ ಉದ್ದ ಸೊನ್ನೆಯೇ ಎಂದು ಪರೀಕ್ಷಿಸುತ್ತದೆ. |
07:44 | ಟರ್ಮಿನಲ್ ನಲ್ಲಿ 'man test ' ಎಂದು ಟೈಪ್ ಮಾಡಿ ವಿವಿಧ ಸ್ಟ್ರಿಂಗ್ ಕಂಪೇರಿಸನ್ ಅನ್ನು ತಿಳಿಯಿರಿ. |
07:51 | ಈ ಎನನ್ನೂ ನಮೂದಿಸದಿದ್ದರೆ echo ಸ್ಟೇಟ್ ಮೆಂಟ್ ಪ್ರಿಂಟ್ ಆಗುತ್ತದೆ. |
07:56 | ಮೊದಲ elif condition ನಾವು ಇನ್ ಪುಟ್ ಮಾಡಿದ ಸ್ಟ್ರಿಂಗ್ 'raj' ಎಂಬುದನ್ನು ಹೊಂದಿದೆಯೇ ಎಂದು ಪರೀಕ್ಷಿಸುತ್ತದೆ. |
08:03 | ಹೊಂದಿದ್ದರೆ echo ಸ್ಟೇಟ್ ಮೆಂಟ್ ಪ್ರಿಂಟ್ ಆಗುತ್ತದೆ. |
08:08 | ಈ wildcard character ನಮೂದಿಸಿದ ಪದದಲ್ಲಿ raj ಎಂಬ ಪದವನ್ನು ಒಳಗೊಂಡಿದೆಯೇ ಎಂದು ಹುಡುಕಿ ಖಚಿತಪಡಿಸುತ್ತದೆ. |
08:15 | ಮುಂದಿನ elif condition ನಾವು ಇನ್ ಪುಟ್ ಮಾಡಿದ ಸ್ಟ್ರಿಂಗ್ 'jit' ಎಂಬುದನ್ನು ಹೊಂದಿದೆಯೇ ಎಂದು ಪರೀಕ್ಷಿಸುತ್ತದೆ. |
08:22 | ಹೊಂದಿದ್ದಲ್ಲಿ ಈ echo statement ಪ್ರಿಂಟ್ ಆಗುತ್ತದೆ. |
08:27 | ಮೇಲಿನ ಎಲ್ಲ ಕಂಡಿಶನ್ ಗಳೂ ಸರಿಹೊಂದದಿದ್ದಲ್ಲಿ else condition ಎಕ್ಸಿಕ್ಯೂಟ್ ಆಗುತ್ತದೆ. |
08:33 | ಮತ್ತು 'Sorry! Input does not contain either 'raj' or jit ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ. |
08:41 | fi ಇದು multilevel if-else ಸ್ಟೇಟ್ ಮೆಂಟ್ ನ ಕೊನೆಯನ್ನು ಸೂಚಿಸುತ್ತದೆ. |
08:46 | ಈಗ ನಾವು ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ. |
08:48 | ಟರ್ಮಿನಲ್ ಗೆ ಹಿಂದಿರುಗೋಣ. |
08:51 | chmod ಸ್ಪೇಸ್ ಪ್ಲಸ್ x ಸ್ಪೇಸ್ multilevel ಹೈಫನ್ ifelse ಡಾಟ್ sh ಎಂದು ಟೈಪ್ ಮಾಡಿ. |
09:00 | ಡಾಟ್ ಸ್ಲ್ಯಾಶ್ multilevel ಹೈಫನ್ ifelse ಡಾಟ್ sh ಎಂದು ಟೈಪ್ ಮಾಡಿ. |
09:06 | ನಾವು ಇನ್ ಪುಟ್ ಗಾಗಿ ಪ್ರಾಮ್ಟ್ ಮಾಡಿದ್ದೇವೆ. |
09:09 | ಬೇರೆ ಬೇರೆ ಇನ್ಪುಟ್ ಗಳನ್ನು ಕೊಟ್ಟು ಏನಾಗುವುದು ಎಂದು ಪರೀಕ್ಷಿಸೋಣ. |
09:14 | ಮೊದಲು ಏನನ್ನು ಟೈಪ್ ಮಾಡದೇ Enter ಒತ್ತೋಣ. |
09:19 | Nothing was Entered ಎಂಬ ಸಂದೇಶ ಡಿಸ್ಪ್ಲೇ ಆಗುತ್ತದೆ. |
09:22 | ಮತ್ತು ನಿಯಂತ್ರಣವು 'multilevel if-else statement. ನ ಹೊರಗೆ ಬರುತ್ತದೆ. |
09:28 | ಪ್ರಾಮ್ಟ್ ಅನ್ನು ಖಾಲಿ ಮಾಡೋಣ. |
09:30 | ಈಗ ಬೇರೆ ಇನ್ ಪುಟ್ ನಿಂದ ಎಕ್ಸಿಕ್ಯೂಟ್ ಮಾಡಲು ಪ್ರಯತ್ನಿಸೋಣ. |
09:34 | up arrow ಕೀಲಿಯನ್ನು ಒತ್ತಿ. |
09:36 | ಡಾಟ್ ಸ್ಲ್ಯಾಶ್multilevel ಹೈಫನ್ ifelse ಡಾಟ್ sh ಗೆ ಹೋಗಿ. |
09:41 | Enter' ಅನ್ನು ಒತ್ತಿ. |
09:43 | ಪ್ರಾಮ್ಟ್ '"Enter a Word" ಎಂದು ಡಿಸ್ಪ್ಲೇ ಮಾಡುತ್ತದೆ. |
09:45 | 'abhijit' ಎಂದು ಟೈಪ್ ಮಾಡೋಣ. |
09:48 | “abhijit contains word jit”. ಎಂಬ ಫಲಿತವು ಡಿಸ್ಪ್ಲೇ ಆಗುತ್ತದೆ. |
09:53 | ಇದು ನಿಯಂತ್ರಣವು ಮೂರನೇ ಕಂಡಿಷನ್ ಗೆ ಹೋಗಿದೆ ಎಂದು ತೋರಿಸುತ್ತದೆ. |
09:59 | ಮೊದಲ ಎರಡು ಕಂಡಿಷನ್ ಗಳು ಹೊಂದಿಕೆಯಾಗಿಲ್ಲ. |
10:03 | ಇದೇ ಲೋಜಿಕ್ ಎಲ್ಲಾ ಕಂಡಿಷನ್ ಗೂ ಅನ್ವಯವಾಗುತ್ತದೆ. |
10:07 | ಬೇರೆ ಬೇರೆ ಇನ್ ಪುಟ್ ಗಳೊಂದಿಗೆ ಪರೀಕ್ಷಿಸಿ ಫಲಿತಾಂಶವನ್ನು ನೋಡಿ. |
10:13 | ಸಾರಾಂಶವನ್ನು ನೋಡೋಣ. |
10:15 | ಈ ಟ್ಯುಟೋರಿಯಲ್ ನಲ್ಲಿ ನಾವು |
10:18 | Nested If-else: ಅನ್ನು ಉಪಯೋಗಿಸಿ Name ಮತ್ತು Password ಅನ್ನು ತಾಳೆ ನೋಡುವುದು ಮತ್ತು |
10:23 | 'Multilevel if-else: String comparison ಪ್ರೋಗ್ರಾಮ್ ಅನ್ನು ಕಲಿತಿದ್ದೇವೆ. |
10:28 | ಸ್ವಂತ ಅಭ್ಯಾಸಕ್ಕಾಗಿ , ಇವುಗಳಿಗೆ ಬೇರೆ ಬೇರೆ ಫಲಿತವನ್ನು ಕೊಡುವ ಪ್ರೋಗ್ರಾಮ್ ಅನ್ನು ಬರೆಯಿರಿ: ಕೊಟ್ಟ ಸಂಖ್ಯೆಯು |
10:34 | 3 ಕ್ಕಿಂತ ಹೆಚ್ಚಾಗಿದ್ದಾಗ, 3 ಕ್ಕಿಂತ ಕಡಿಮೆ ಇದ್ದಾಗ |
10:37 | ಅಥವಾ 3 ಕ್ಕೆ ಸಮವಾಗಿದ್ದಾಗ , |
10:39 | ಅಥವಾ ಯಾವುದೇ ಇನ್ ಪುಟ್ ಅನ್ನು ಕೊಡದೇ ಇದ್ದಾಗ |
10:42 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ.. |
10:45 | ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. |
10:48 | ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
10:53 | Spoken Tutorial Project Team ಇದು |
10:55 | spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. |
10:58 | online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
11:02 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ. |
11:09 | Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ. |
11:13 | ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. |
11:20 | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org\NMEICT-Intro |
11:26 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ |
11:31 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.. |