BASH/C2/Case-statement/Kannada

From Script | Spoken-Tutorial
Revision as of 08:26, 1 November 2015 by NaveenBhat (Talk | contribs)

Jump to: navigation, search
Time Narration
00:01 ಬ್ಯಾಶ್ ನಲ್ಲಿ Case statement ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ನಿಮಗೆಲ್ಲ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು
  • case statement ನ ಉಪಯೋಗ ಮತ್ತು
  • ಉದಾಹರಣೆಯೊಂದಿಗೆ case statement ನ ಸಿಂಟ್ಯಾಕ್ಸ್ ಅನ್ನು ಕಲಿಯುತ್ತೇವೆ.
00:17 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು.
00:23 ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಕೊಡಿ.
00:29 ಈ ಟ್ಯುಟೋರಿಯಲ್ ಗಾಗಿ ನಾನು:
  • Ubuntu Linux 12.04 OS ಮತ್ತು
  • GNU Bash version 4.1.10 ಗಳನ್ನು ಉಪಯೋಗಿಸುತ್ತೇನೆ.
00:39 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:47 ಬ್ಯಾಶ್ ಶೆಲ್ ನಲ್ಲಿ ಎರಡು ಬಗೆಯ conditional statement ಗಳಿವೆ. ಅವು - 'if' statement ಮತ್ತು 'case' statement .
00:56 Case ಸ್ಟೇಟ್ ಮೆಂಟ್ ಗಳನ್ನು if-else ಸ್ಟೇಟ್ ಮೆಂಟ್ ಗಳ ಬದಲಾಗಿ ಉಪಯೋಗಿಸಬಹುದು.
01:03 ತುಂಬಾ ಅಂಶಗಳಿಂದ ಒಂದನ್ನು ಆರಿಸಿಕೊಳ್ಳುವಾಗ ಕೇಸ್ ಸ್ಟೇಟ್ ಮೆಂಟ್ ಅನ್ನು ಆರಿಸಿಕೊಳ್ಳುತ್ತೇವೆ.
01:09 ಇದನ್ನು ಸ್ಕ್ರಿಪ್ಟ್ ನಲ್ಲಿ menu ವನ್ನು ತೋರಿಸಲು ಬಳಸುತ್ತೇವೆ.
01:14 ಸಿಂಟ್ಯಾಕ್ಸ್ ಅನ್ನು ನೋಡೋಣ.
01:15 case ಸ್ಪೇಸ್ $(ಡಾಲರ್) VARIABLE ಸ್ಪೇಸ್ in match_1 ರೌಂಡ್ ಬ್ರ್ಯಾಕೆಟ್ ಅನ್ನು ಮುಚ್ಚಿ ಸ್ಪೇಸ್ command ಅನ್ನು ಟೈಪ್ ಮಾಡಿ ಮತ್ತು ಎರಡು ಸೆಮಿಕೋಲನ್ ಹಾಕಿ.
01:27 match_n ರೌಂಡ್ ಬ್ರ್ಯಾಕೆಟ್ ಅನ್ನು ಮುಚ್ಚಿ ಸ್ಪೇಸ್ command ಅನ್ನು ಟೈಪ್ ಮಾಡಿ ಮತ್ತು ಎರಡು ಸೆಮಿಕೋಲನ್ ಹಾಕಿ. ಅಸ್ತೆರಿಕ್ಸ್ ಚಿಹ್ನೆ ರೌಂಡ್ ಬ್ರ್ಯಾಕೆಟ್ ಅನ್ನು ಮುಚ್ಚಿ ಸ್ಪೇಸ್ command_to_execute_by_default ಮತ್ತು ಎರಡು ಸೆಮಿಕೋಲನ್ ಹಾಕಿ esac ಎಂದು ಟೈಪ್ ಮಾಡಿ.
01:45 VARIABLE ಇದು match_1 ನೊಂದಿಗೆ ಹೋಲಿಸಲ್ಪಡುತ್ತದೆ.
01:48 ಇದು ಹೋಲಿಕೆಯಾಗದಿದ್ದಲ್ಲಿ ಮುಂದಿನ ಕೇಸ್ ಗೆ ಅಂದರೆ match_n ಗೆ ಹೋಗುತ್ತದೆ.
01:54 ಇದು ಯಾವುದಾದಾರೂ string VARIABLE ನೊಂದಿಗೆ ಹೊಂದಿಕೆಯಾಗುತ್ತದೆಯೇ ಎಂದು ಪರೀಕ್ಷಿಸುತ್ತದೆ.
02:01 ಹೊಂದಿಕೆಯಾದರೆ ಎರಡು ಸೆಮಿಕೋಲನ್ ವರೆಗಿನ ಎಲ್ಲಾ ಕಮಾಂಡ್ ಗಳೂ ಎಕ್ಸಿಕ್ಯೂಟ್ ಆಗುತ್ತವೆ.
02:07 ಯಾವುದೂ VARIABLE ಗೆ ಹೋಲಿಕೆಯಾಗದಿದ್ದಲ್ಲಿ , ಆಸ್ತೆರಿಸ್ಕ್ ನಲ್ಲಿರುವ ಕಮಾಂಡ್ ಗಳು ಎಕ್ಸಿಕ್ಯೂಟ್ ಆಗುತ್ತವೆ.
02:14 ಇದು ಡಿಫಾಲ್ಟ್ case ಕಂಡಿಷನ್ ಆಗಿದೆ ಏಕೆಂದರೆ ಆಸ್ತೆರಿಸ್ಕ್ ಎಲ್ಲಾ ಸ್ಟ್ರಿಂಗ್ ಗೂ ಹೊಂದಿಕೆಯಾಗುತ್ತದೆ.
02:21 esac ಇದು case block ನ ಕೊನೆಯನ್ನು ಸೂಚಿಸುತ್ತದೆ.
02:26 ಈಗ ಉದಾಹರಣೆಯೊಂದಿಗೆ case statement ನ ಕುರಿತು ನೋಡೋಣ.
02:32 ನಾನು ಈಗಾಗಲೇ ಪ್ರೋಗ್ರಾಂ ಅನ್ನು ಟೈಪ್ ಮಾಡಿದ್ದೇನೆ. ಹಾಗಾಗಿ ನಾನು case.sh ಫೈಲ್ ಅನ್ನು ತೆರೆಯುತ್ತೇನೆ.
02:38 ಈ ಪ್ರೋಗ್ರಾಂ ಡಿಸ್ಕ್ ಸ್ಪೇಸ್ ಒಂದು ಮಿತಿಯನ್ನು ತಲುಪಿದಾಗ ಎಚ್ಚರಿಕೆಯ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ.
02:45 ಇದು shebang line
02:47 Linux ನ ಬೇರೆ ಬೇರೆ ಫ್ಲೇವರ್ ಗಳಾದ CentOS, RedHat ಮುಂತಾದವುಗಳಲ್ಲಿ ಬ್ಯಾಶ್ ನ ಸ್ಥಾನವು ಬೇರೆಯಾಗಿರುತ್ತದೆ.
02:55 ಹಿಂದೆ ಉಪಯೋಗಿಸಿದ /bin/bash ಇದು ನೇರವಾಗಿ binary file ಅನ್ನು ಸೂಚಿಸುತ್ತದೆ.
03:01 ಇಲ್ಲಿ ಉಪಯೋಗಿಸಿದ env ಇದು ಬ್ಯಾಶ್ ನ ನಿಜವಾದ ಸ್ಥಾನವನ್ನು ಸೂಚಿಸುತ್ತದೆ.
03:07 shebang line ಯಾವುದೇ GNU/Linux ಸಿಸ್ಟಮ್ ನಲ್ಲಿ ಈ ಸ್ಕ್ರಿಪ್ಟ್ ಪೋರ್ಟೇಬಲ್ ಆಗಲು ಸಹಾಯ ಮಾಡುತ್ತದೆ.
03:16 df -(ಹೈಫನ್ )h ಇದು disk space ಅನ್ನು ಓದಲು ಸಾಧ್ಯಾವಾಗುವ ರೀತಿಯಲ್ಲಿ ಡಿಸ್ಪ್ಲೇ ಮಾಡುತ್ತದೆ.
03:22 output ಅನ್ನು sort -rk5 ಗೆ ಐದನೇ ಸ್ಥಂಬದಲ್ಲಿ ವ್ಯತಿರಿಕ್ತವಾಗಿ ಜೋಡಿಸಲು ಕಳುಹಿಸುತ್ತೇವೆ.
03:31 ನಂತರ ಫಲಿತವು awk 'FNR == 2 {print $5}' ಗೆ ಕಳುಹಿಸಲ್ಪಡುತ್ತದೆ.
03:38 ಇದು ಎರಡನೇ ಸಾಲಿನ ಐದನೇ field ಅನ್ನು ಹೊರತೆಗೆಯುತ್ತದೆ.
03:43 ಅಂತಿಮವಾಗಿ ಫಲಿತವು % ಚಿಹ್ನೆಯನ್ನು ತೆಗೆದು ಹಾಕಲು cut -(ಹೈಫನ್)d “% -(ಹೈಫನ್)f1” ಗೆ ಕಳುಹಿಸಲ್ಪಡುತ್ತದೆ..
03:55 ಇದು case statement. ನ ಮೊದಲ ಸಾಲು.
03:59 ಇಲ್ಲಿ ನಾವು 0 ಮತ್ತು 69 ರ ನಡುವಿನ space ಅನ್ನು ಹೋಲಿಸುತ್ತೇವೆ.
04:04 ಹೋಲಿಕೆಯಾದಲ್ಲಿ "Everything is OK” ಎಂದು ಪ್ರಿಂಟ್ ಆಗುತ್ತದೆ.
04:08 ನಂತರ ಇದು , 70 ಮತ್ತು 89 ರ ನಡುವಿನ ಅಥವಾ 91 ರಿಂದ 98 ವರೆಗಿನ space ಅನ್ನು ಹೋಲಿಸುತ್ತದೆ.
04:17 ಹೋಲಿಕೆಯಾದಲ್ಲಿ “Clean out. There's a partition that is $(ಡಾಲರ್) space % full.” ಎಂದು ಪ್ರಿಂಟ್ ಆಗುತ್ತದೆ.
04:27 ಇಲ್ಲಿ ಇದು space ಅನ್ನು 99 ರೊಂದಿಗೆ ಹೋಲಿಸುತ್ತದೆ.
04:30 ಹೋಲಿಕೆಯಾದಲ್ಲಿ “Hurry. There's a partition at $(ಡಾಲರ್) space %!” ಎಂದು ಪ್ರಿಂಟ್ ಆಗುತ್ತದೆ.
04:39 ಇದು ಡಿಫಾಲ್ಟ್ case ಕಂಡಿಶನ್ ಏಕೆಂದರೆ ಅಸ್ಟೆರಿಸ್ಕ್ ಎಲ್ಲಾ string ನ ಜೊತೆಗೂ ಹೋಲಿಕೆಯಾಗುತ್ತದೆ.
04:45 ಮತ್ತು ಇದು case statement. ನ ಕೊನೆ.
04:48 ಈಗ terminal ಗೆ ಹೋಗಿ ಫೈಲ್ ಎಕ್ಸಿಕ್ಯೂಟ್ ಆಗುವಂತೆ ಮಾಡಿ.
04:52 chmod ಪ್ಲಸ್ x caseಡಾಟ್ sh ಎಂದು ಟೈಪ್ ಮಾಡಿ.
04:57 ಡಾಟ್ ಸ್ಲ್ಯಾಶ್ case ಡಾಟ್ sh ಎಂದು ಟೈಪ್ ಮಾಡಿ.
05:02 "Everything is OK". ಗಮನಿಸಿ ಫಲಿತವು ನಿಮ್ಮ ಸಿಸ್ಟಮ್ ನ ಡಿಸ್ಕ್ ಸ್ಪೇಸ್ ಗೆ ಅನುಗುಣವಾಗಿ ಬದಲಾಗುತ್ತದೆ.
05:10 ನನ್ನ ಸಿಸ್ಟಮ್ ನಲ್ಲಿ 0 ಮತ್ತು 69 ರ ನಡುವೆ ಹೋಲಿಕೆಯಾಗಿರುವುದರಿಂದ "Everything is OK". ಎಂದು ಪ್ರಿಂಟ್ ಆಗಿದೆ.
05:18 ನಿಮ್ಮ ಸಿಸ್ಟಮ್ ನಲ್ಲಿ ಪ್ರಿಂಟ್ ಆದ ಸಂದೇಶವನ್ನು ಗಮನಿಸಿ.
05:20 ಇದರಿಂದ ನೀವು ಯಾವ case ಸ್ಟೇಟ್ ಮೆಂಟ್ ಎಕ್ಸಿಕ್ಯೂಟ್ ಆಗಿದೆ ಎಂದು ತಿಳಿದುಕೊಳ್ಳುವುದು.
05:27 ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಾರಾಂಶವನ್ನು ನೋಡೋಣ.
05:31 ಈ ಟ್ಯುಟೋರಿಯಲ್ ನಲ್ಲಿ ನಾವು,
  • case ಸ್ಟೇಟ್ ಮೆಂಟ್ ನ ಉಪಯೋಗವನ್ನು ,
  • case ಸ್ಟೇಟ್ ಮೆಂಟ್ ನ ಸಿಂಟ್ಯಾಕ್ಸ್ ಅನ್ನು disc-space ನ ಉದಾಹರಣೆಯೊಂದಿಗೆ ಕಲಿತಿದ್ದೇವೆ.
05:41 ಸ್ವಂತ ಅಭ್ಯಾಸಕ್ಕಾಗಿ,
05:42 ಗಣಿತದ ಲೆಕ್ಕ ಗಳನ್ನು ಮಾಡಲು ಮೆನು ಇರುವ ಪ್ರೋಗ್ರಾಂ ಅನ್ನು ಬರೆಯಿರಿ.
05:47 * ಇದು ಬಳಕೆದಾರರಿಂದ 'a' ಮತ್ತು 'b' ಯನ್ನು ಇನ್ ಪುಟ್ ಆಗಿ ಪಡೆಯಬೇಕು.
05:51 * ಇದು ಗಣಿತದ ಮುಖ್ಯ ಕ್ರಿಯೆಗಳಾದ (ಸಂಕಲನ +, ವ್ಯವಕಲನ -, ಭಾಗಾಕಾರ / ಮತ್ತು ಗುಣಾಕಾರ *) ಇವುಗಳಲ್ಲಿ ಒಂದನ್ನು ಬಳಕೆದಾರರಿಂದ ಪಡೆಯಬೇಕು. * ಲೆಕ್ಕವನ್ನು ಮಾಡಿ * ಫಲಿತವನ್ನು ಪ್ರಿಂಟ್ ಮಾಡಿ.
06:02 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ.
06:06 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
06:08 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
06:14 Spoken Tutorial Project Team ಇದು
06:16 spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ
06:23 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ
06:31 Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ.
06:35 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. http://spoken-tutorial.org\NMEICT-Intro
06:48 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
06:53 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ.. ಧನ್ಯವಾದಗಳು.

Contributors and Content Editors

NaveenBhat, Pratik kamble