Java/C2/Array-Operations/Kannada
From Script | Spoken-Tutorial
Revision as of 11:37, 23 February 2017 by Pratik kamble (Talk | contribs)
Time | Narration |
00:02 | ಜಾವಾದಲ್ಲಿ ಅರೇ ಓಪರೇಷನ್ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು , |
00:09 | ಅರೇ ಯ ಕ್ಲಾಸ್ ಅನ್ನು ಹೇಗೆ ಇಂಪೋರ್ಟ್ ಮಾಡುವುದು ಮತ್ತು |
00:12 | ಅರೇಯ ಕ್ರಿಯೆಗಳ ಕುರಿತು ಕಲಿಯುತ್ತೇವೆ. |
00:15 | ಇಲ್ಲಿ ನಾವು
Ubuntu version 11.10 OS ( ಉಬಂಟು ಓಪರೇಟಿಂಗ್ ಸಿಸ್ಟಮ್ ನ ಆವೃತ್ತಿ ೧೧.೧೦) Java Development kit 1.6 (ಜಾವಾ ಡೆವೆಲೊಪ್ಮೆಂಟ್ ಕಿಟ್ ೧.೬) ಹಾಗೂ Eclipse 3.7.0 ಮತ್ತು (ಎಕ್ಲಿಪ್ಸ್ ೩.೭.೦) ಯನ್ನು ಉಪಯೋಗಿಸುತ್ತೇವೆ. |
00:25 | ಈ ಟ್ಯುಟೋರಿಯಲ್ ಅನ್ನು ಕಲಿಯಲು ಅರೇಯ ಬಗ್ಗೆ ತಿಳಿದಿರಬೇಕು. |
00:30 | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಕೆಳಕಂಡ ಅಂತರ್ಜಾಲ ತಾಣವನ್ನು ಭೇಟಿಕೊಡಿ.(http://www.spoken-tutorial.org) |
00:35 | ಅರೇಯ ಕ್ರಿಯೆಗಳ ಮೆಥಡ್ ಗಳು Arrays ಎಂಬ ಕ್ಲಾಸ್ ನಲ್ಲಿ ದೊರೆಯುತ್ತವೆ. |
00:40 | ಅವುಗಳನ್ನು ಬಳಸಲು ಆ ಕ್ಲಾಸ್ ಅನ್ನು ಇಂಪೋರ್ಟ್ ಮಾಡಿಕೊಳ್ಳಬೇಕು. |
00:43 | ಅದಕ್ಕಾಗಿ import java.util.Arrays ಸೆಮಿಕೋಲನ್ ಎಂಬ ಹೇಳಿಕೆಯನ್ನು ಉಪಯೋಗಿಸಬೇಕು. |
00:50 | ಒಂದು ಮೆಥಡ್ ಅನ್ನುಅದರ ಕ್ಲಾಸ್ ನಿಂದ ಆಕ್ಸೆಸ್ ಮಾಡಬಹುದು. |
00:52 | ಡಾಟ್ ಮತ್ತು ಮೆಥಡ್ ನ ಹೆಸರನ್ನು ಸೇರಿಸಿದರೆ ಮೆಥಡ್ ಅನ್ನು ಆಕ್ಸೆಸ್ ಮಾಡಬಹುದು. |
00:56 | Arrays ಡಾಟ್ toString ಅಂದರೆ Arrays ಕ್ಲಾಸ್ ನ toString ಮೆಥಡ್ ಎಂದರ್ಥ |
01:05 | ಈಗ ಎಕ್ಲಿಪ್ಸ್ ಗೆ ಹೋಗೋಣ. |
01:08 | ನಾವು ಆಗಲೇ ArraysDemo ಎಂಬ ಕ್ಲಾಸ್ ಅನ್ನು ರಚಿಸಿದ್ದೇವೆ. |
01:13 | ಈಗ Arrays ಎಂಬ ಕ್ಲಾಸ್ ಅನ್ನು ಇಂಪೋರ್ಟ್ ಮಾಡೋಣ. |
01:16 | ಇಂಪೋರ್ಟ್ ಸ್ಟೇಟ್ಮೆಂಟ್ ಅನ್ನು ಕ್ಲಾಸ್ ನ ಡೆಫಿನೇಷನ್ ಗೂ ಮೊದಲು ಬರೆಯಬೇಕು. |
01:22 | ಹಾಗಾಗಿ public class ಗೂ ಮೊದಲು |
01:26 | import java.util.Arrays ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
01:46 | ಈ ಹೇಳಿಕೆಯು java ವು util ಎಂಬ ಪ್ಯಾಕೇಜ್ ಅನ್ನು ಹೊಂದಿದ್ದು ಅದು Arrays ಎಂಬ ಕ್ಲಾಸ್ ಅನ್ನು ಹೊಂದಿದೆ. ನಾವು ಈಗ ಅದನ್ನು ಇಂಪೋರ್ಟ್ ಮಾಡಬೇಕು ಎಂದು ತಿಳಿಸುತ್ತದೆ. |
01:59 | ಈಗ ಒಂದು ಅರೇ ಯನ್ನು ಸೇರಿಸೋಣ. |
02:01 | ಮೇಯ್ನ್ ಮೆಥಡ್ ನಲ್ಲಿ |
02:03 | int marks ಸ್ಕ್ವೇರ್ ಬ್ರ್ಯಾಕೆಟ್ ತೆರೆದು ಮುಚ್ಚಿ , ಸಮ ಬ್ರ್ಯಾಕೆಟ್ ನಲ್ಲಿ 2, 7, 5, 4, 8 ಎಂದು ಟೈಪ್ ಮಾಡಿ. |
02:20 | ಈಗ ನಾವು 'Arrays' ಕ್ಲಾಸ್ ನಲ್ಲಿರುವ ಮೆಥಡ್ ಅನ್ನು ಉಪಯೋಗಿಸಿ ಅರೇಯನ್ನು ಸ್ಟ್ರಿಂಗ್ ನ ರೂಪದಲ್ಲಿ ನಿರೂಪಿಸೋಣ ಮತ್ತು ಪ್ರಿಂಟ್ ಮಾಡೋಣ. |
02:28 | ಹಾಗಾಗಿ String mStr ಸಮ Arrays ಡಾಟ್ toString ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ ನಾವು ಅರೇಯ ಹೆಸರು ಅಂದರೆ marks ಎಂದು ಟೈಪ್ ಮಾಡೋಣ. |
02:50 | toString ಎಂಬ ಮೆಥಡ್ ಅರೇಯನ್ನು ಸ್ಟ್ರಿಂಗ್ ರೂಪದಲ್ಲಿ ನಿರೂಪಿಸುತ್ತದೆ. |
02:56 | ಮಾರ್ಕ್ಸ್ ಅನ್ನು ಪ್ರಿಂಟ್ ಮಾಡೋಣ. |
02:58 | ಅದಕ್ಕಾಗಿ System ಡಾಟ್ out ಡಾಟ್ println ಬ್ರ್ಯಾಕೆಟ್ ನಲ್ಲಿ mStr ಎಂದು ಟೈಪ್ ಮಾಡಿ. |
03:12 | ಫಲಿತವನ್ನು ನೋಡಲು ಪ್ರೋಗ್ರಾಮ್ ಅನ್ನು ಸೇವ್ ಮಾಡಿ ರನ್ ಮಾಡೋಣ. |
03:18 | ನಾವು ಫಲಿತದಲ್ಲಿ ನೋಡುವಂತೆ toString ಮೆಥಡ್ ಅರೇಯನ್ನು ಸ್ಟ್ರಿಂಗ್ ರೂಪದಲ್ಲಿ ನಿರೂಪಿಸಿದೆ. |
03:26 | ಈಗ ಅರೇ ಎಲಿಮೆಂಟ್ ಗಳನ್ನು ಏರಿಕೆ ಕ್ರಮದಲ್ಲಿ ಜೋಡಿಸುವುದನ್ನು ನೋಡೋಣ. |
03:31 | ಹಾಗಾಗಿ Arrays ಡಾಟ್ toString ಸಾಲಿಗೂ ಮೊದಲು Arrays ಡಾಟ್ sort ಎಂದು ಟೈಪ್ ಮಾಡಿ, ಬ್ರ್ಯಾಕೆಟ್ ನಲ್ಲಿ ಅರೇಯ ಹೆಸರು ಅಂದರೆ marks ಎಂದು ಟೈಪ್ ಮಾಡಿ. |
03:46 | Arrays ಕ್ಲಾಸ್ ನ sort ಮೆಥಡ್ ಅದಕ್ಕೆ ಕಳುಹಿಸಿದ ಅರೇ ಯನ್ನು ಏರಿಕೆ ಕ್ರಮದಲ್ಲಿ ಜೋಡಿಸುತ್ತದೆ. |
03:53 | ಅಂದರೆ ನಾವು ಈಗ marks ಅರೇಯ ಎಲಿಮೆಂಟ್ ಗಳನ್ನು ಏರಿಕೆಕ್ರಮದಲ್ಲಿ ಜೋಡಿಸಿ ಅದರ ಸ್ಟ್ರಿಂಗ್ ರೂಪವನ್ನು ಪ್ರಿಂಟ್ ಮಾಡುತ್ತಿದ್ದೇವೆ. |
04:04 | ಈಗ ಫಲಿತವನ್ನು ನೋಡಲು ಸೇವ್ ಮಾಡಿ ರನ್ ಮಾಡಿ. |
04:11 | ಫಲಿತದಲ್ಲಿ ಕಾಣುವಂತೆ sort ಮೆಥಡ್ ಅರೇಯನ್ನು ಏರಿಕೆ ಕ್ರಮದಲ್ಲಿ ಜೋಡಿಸಿದೆ. |
04:19 | sort ಮೆಥಡ್ ಅರೇಯ ಕ್ರಮಾಂಕವನ್ನೇ ಬದಲಾಯಿಸಿದೆ. |
04:22 | ಈ ಕ್ರಮವನ್ನು ಇನ್-ಪ್ಲೇಸ್ ಸಾರ್ಟಿಂಗ್ ಎಂದು ಕರೆಯುತ್ತಾರೆ. |
04:26 | ಅಂದರೆ ಸಾರ್ಟಿಂಗ್ ನ ಪರಿಣಾಮವಾಗಿ ಅರೇಯ ಎಲಿಮೆಂಟ್ ಗಳ ಸ್ಥಾನ ಬದಲಾವಣೆಯಾಗಿದೆ. |
04:33 | ಈಗ ನಾವು fill ಮೆಥಡ್ ಬಗ್ಗೆ ತಿಳಿಯೋಣ. |
04:38 | fill ಮೆಥಡ್ ಎರಡು ಆರ್ಗ್ಯುಮೆಂಟ್ ಗಳನ್ನು ತೆಗೆದುಕೊಳ್ಳುತ್ತದೆ. |
04:43 | ಸಾರ್ಟಿಂಗ್ ಮೆಥಡ್ ನ ಸಾಲನ್ನು ಅಳಿಸಿ. |
04:50 | Arraysಡಾಟ್ fill ಬ್ರ್ಯಾಕೆಟ್ ನಲ್ಲಿ ಅರೇ ಯ ಹೆಸರು ಅಂದರೆ marks ಎಂದು ಟೈಪ್ ಮಾಡಿ, |
05:05 | (ಇದು ನಾವು ಕೊಡುತ್ತಿರುವ ಮೊದಲ ಆರ್ಗ್ರ್ಯುಮೆಂಟ್) ಮತ್ತು ನಾವು ಕೊಡುವ ಹೊಸ ಬೆಲೆ ಎರಡನೇ ಆರ್ಗ್ಯುಮೆಂಟ್ ಆಗಿರುತ್ತದೆ. ಹಾಗಾಗಿ 6 ಎಂದು ಟೈಪ್ ಮಾಡಿ ಬ್ರ್ಯಾಕೆಟ್ ಮುಚ್ಚಿ ಸೆಮಿಕೋಲನ್ ಹಾಕಿ. ಸೇವ್ ಮಾಡಿ ರನ್ ಮಾಡಿ. |
05:24 | ಹೆಸರೇ ಸೂಚಿಸುವಂತೆ fill ಮೆಥಡ್ ನಾವು ಕಳುಹಿಸಿದ ಆರ್ಗ್ಯುಮೆಂಟ್ ಅಂದರೆ 6 ಅನ್ನು ಅರೇ ಗೆ ಸೇರಿಸುತ್ತದೆ. |
05:32 | ಈಗ ನಾವು ಮುಂದೆ ಕಲಿಯುವ ಮೆಥಡ್ copyOf. |
05:37 | ನಾವೀಗ marks ಅರೇ ಯ ಎಲ್ಲಾ ಎಲಿಮೆಂಟ್ ಗಳನ್ನೂ marksCopy ಅರೇಗೆ ನಕಲು ಮಾಡುತ್ತೇವೆ. |
05:44 | arrays ಡಾಟ್ fill ಅನ್ನು ಅಳಿಸಿ. |
05:48 | ಮತ್ತು int marksCopy []; ಎಂದು ಟೈಪ್ ಮಾಡಿ. |
05:59 | ಮುಂದಿನ ಸಾಲಿನಲ್ಲಿ marksCopy = arrays. copyOf(marks, 5); ಎಂದು ಟೈಪ್ ಮಾಡಿ. |
06:25 | ಈ ಮೆಥಡ್ ಎರಡು ಆರ್ಗ್ಯುಮೆಂಟ್ ಗಳನ್ನು ಪಡೆಯುತ್ತದೆ. |
06:29 | ಮೊದಲನೇ ಆರ್ಗ್ಯುಮೆಂಟ್ ಯಾವ ಅರೇಯಿಂದ ಎಲೆಮೆಂಟ್ ಗಳನ್ನು ನಕಲು ಮಾಡುತ್ತೇವೋ ಆ ಅರೇಯ ಹೆಸರು ಅಂದರೆ marks |
06:39 | ಎರಡನೆಯದು ನಕಲು ಮಾಡುವ ಎಲಿಮೆಂಟ್ ಗಳ ಸಂಖ್ಯೆ ಅಂದರೆ 5. |
06:47 | ನಂತರ arrays ಡಾಟ್ toString ನಲ್ಲಿ marks ಅನ್ನು marksCopy ಎಂದು ಬದಲಾಯಿಸಿ. |
06:55 | ಈಗ ಪ್ರೋಗ್ರಾಮ್ ಅನ್ನು ಸೇವ್ ಮಾಡಿ ರನ್ ಮಾಡಿರಿ. |
07:01 | ನಾವು marks ಅರೇಯ ಎಲಿಮೆಂಟ್ ಗಳು marksCopy ಅರೇಗೆ ನಕಲಾಗಿರುವುದನ್ನು ನೋಡುತ್ತೇವೆ. |
07:10 | ಈಗ ಎಲಿಮೆಂಟ್ ಗಳ ಸಂಖ್ಯೆಗಳನ್ನು ಬದಲಾಯಿಸಿದರೆ ಏನಾಗುತ್ತದೆ ಎನ್ನುವುದನ್ನು ನೋಡೋಣ. |
07:15 | ಹಾಗಾಗಿ 5 ಅನ್ನು 3 ಎಂದು ಬದಲಾಯಿಸಿ. |
07:19 | ಸೇವ್ ಮಾಡಿ ರನ್ ಮಾಡಿರಿ. |
07:24 | ನಾವು ಈಗ ಮೊದಲ ಮೂರು ಎಲಿಮೆಂಟ್ ಗಳನ್ನು ನಕಲಾಗಿರುವುದನ್ನು ನೋಡುತ್ತೇವೆ. |
07:31 | ಈಗ ನಕಲು ಮಾಡುವ ಎಲಿಮೆಂಟ್ ಗಳ ಸಂಖ್ಯೆ ಮೂಲ ಅರೇಯಲ್ಲಿರುವ ಎಲಿಮೆಂಟ್ ಗಳ ಸಂಖ್ಯೆ ಗಿಂತ ಹೆಚ್ಚಾಗಿದ್ದರೆ ಏನಾಗುವುದೆಂದು ನೋಡೋಣ. |
07:39 | 3 ಅನ್ನು 8 ಎಂದು ಬದಲಾಯಿಸಿ. |
07:44 | ಪ್ರೋಗ್ರಾಮ್ ಅನ್ನು ಸೇವ್ ಮಾಡಿ ರನ್ ಮಾಡಿರಿ |
07:48 | ಉಳಿದ ಎಲಿಮೆಂಟ್ ಗಳು ಡಿಫಾಲ್ಟ್ ಬೆಲೆಯಾದ 0 ಗೆ ನಮೂದಿಸಲ್ಪಟ್ಟಿರುವುದನ್ನು ನೋಡಬಹುದು. |
07:54 | ಮುಂದೆ ಬೆಲೆಗಳ ವ್ಯಾಪ್ತಿಯನ್ನು ಹೇಗೆ ನಕಲು ಮಾಡುವುದು ಎಂದು ನೋಡೋಣ. |
07:58 | ಹಾಗಾಗಿ copyOf ಅನ್ನು copyOfRange ಎಂದೂ ಮತ್ತು 8 ಅನ್ನು 1, 4 ಎಂದು ಬದಲಾಯಿಸಿ. |
08:15 | ಈ ಮೆಥಡ್ ಅರೇಯ ಇಂಡೆಕ್ಸ್ 1 ರಿಂದ 3 ರವರೆಗಿನ ಎಲ್ಲಾ ಎಲಿಮೆಂಟ್ ಗಳನ್ನೂ ನಕಲು ಮಾಡುತ್ತದೆ. |
08:27 | ಸೇವ್ ಮಾಡಿ ರನ್ ಮಾಡಿ. |
08:31 | ಫಲಿತದಲ್ಲಿ ಇಂಡೆಕ್ಸ್ 1 ರಿಂದ 3 ರವರೆಗಿನ ಎಲ್ಲಾ ಎಲಿಮೆಂಟ್ ಗಳೂ ನಕಲಾಗಿರುವುದನ್ನು ನೋಡಬಹುದು. |
08:39 | 1, 4 ಅನ್ನು ಆರ್ಗ್ಯುಮೆಂಟ್ ಆಗಿ ನೀಡಿರುವುದನ್ನು ಗಮನಿಸಿ. |
08:47 | ಆದರೂ 4 ನೇ ಸ್ಥಾನದಲ್ಲಿರುವ ಎಲಿಮೆಂಟ್ ನಕಲಾಗಿರುವುದಿಲ್ಲ. |
08:50 | ಕೇವಲ ಇಂಡೆಕ್ಸ್ 3 ರ ವರೆಗಿನ ಎಲಿಮೆಂಟಗಳು ಮಾತ್ರ ನಕಲಾಗಿರುತ್ತದೆ. ನೀಡಿರುವ ವ್ಯಾಪ್ತಿಯ ಹಿಂದಿನ ಇಂಡೆಕ್ಸ್ ನಲ್ಲಿಯೇ ಈ ಪ್ರಕ್ರಿಯೆಯು ನಿಲ್ಲುತ್ತದೆ. |
09:01 | ಹಾಗಾಗಿ ಈ ಗುಣವು ವ್ಯಾಪ್ತಿಯ ನಿರಂತರತೆಯನ್ನು ಕಾಯ್ದುಕೊಂಡಿರುವುದನ್ನು ತೋರಿಸುತ್ತದೆ. |
09:07 | (0, 4) ಎನ್ನುವುದು 0 ಯಿಂದ 3 ರವರೆಗಿನ ಎಲಿಮೆಂಟ್ ಗಳನ್ನು ಸೂಚಿಸುತ್ತದೆ. |
09:12 | (4, 6) ಎನ್ನುವುದು 4 ರಿಂದ 5 ರವರೆಗಿನ ಎಲಿಮೆಂಟಗಳನ್ನು ಸೂಚಿಸುತ್ತದೆ. |
09:17 | ಹಾಗಾಗಿ (0, 4) + (4, 6) = (0, 5) ಎಂದಾಗುತ್ತದೆ. |
09:26 | ಈ ಟ್ಯುಟೋರಿಯಲ್ ನ ಕೊನೆಯ ಹಂತವನ್ನು ತಲುಪಿದ್ದೇವೆ. |
09:31 | ಈ ಟ್ಯುಟೋರಿಯಲ್ ನಲ್ಲಿ ನಾವು, |
09:33 | Arrays ಎಂಬ ಕ್ಲಾಸ್ ಅನ್ನು ಹೇಗೆ ಇಂಪೋರ್ಟ್ ಮಾಡುವುದು, |
09:36 | ಮತ್ತು to strings,sort, copy, fill ಗಳಂತಹ ಅರೇಯ ಕ್ರಿಯೆಗಳನ್ನು ಉಪಯೋಗಿಸುವುದನ್ನು ಕಲಿತಿದ್ದೇವೆ. |
09:44 | ಸ್ವಂತ ಅಭ್ಯಾಸಕ್ಕಾಗಿ, |
09:46 | Arrays.equals ಮೆಥಡ್ ನ ಕುರಿತು ಓದಿ ಮತ್ತು ಅದರ ಕ್ರಿಯೆಯನ್ನು ತಿಳಿದುಕೊಳ್ಳಿ. |
09:53 | ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, |
09:55 | ಮತ್ತು ವೀಡಿಯೋಗಾಗಿ [1] ಅಂತರ್ಜಾಲ ತಾಣವನ್ನು ಭೇಟಿಕೊಡಿ. |
10:02 | ಇದು ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ತಿಳಿಸಿಕೊಡುತ್ತದೆ. |
10:05 | ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:09 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪತಂಡವು |
10:10 | ಸ್ಪೋಕನ್ ಟ್ಯುಟೋರಿಯಲ್ ಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಅಂತರ್ಜಾಲಾಧಾರಿತ ಪರೀಕ್ಷೆಯಲ್ಲಿ ಉತೀರ್ಣರಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
10:16 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ |
10:22 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ.
ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ. |
10:31 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ. |
10:39 | ಈ ಟ್ಯುಟೋರಿಯಲ್ ಅನ್ನು TalentSprintಪ್ರಸ್ತುತ ಪಡಿಸುತ್ತಿದೆ. |
10:43 | ಕೇಳಿದ್ದಕ್ಕೆ ಧನ್ಯವಾದ. ಅನುವಾದಕ ಮತ್ತು ವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. |