Java/C2/Introduction-to-Array/Kannada
From Script | Spoken-Tutorial
Revision as of 11:35, 23 February 2017 by Pratik kamble (Talk | contribs)
Time | Narration |
00:02 | ಜಾವಾದಲ್ಲಿ Arrays ನ ಪರಿಚಯದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನೀವು ಅರೇಸ್ ಅನ್ನು ಹೇಗೆ ರಚಿಸುವುದು ಮತ್ತು ಅರೇ ಎಲಿಮೆಂಟ್ ಗಳನ್ನು ಹೇಗೆ ಉಪಯೋಗಿಸುವುದು ಎನ್ನುವುದನ್ನು ಕಲಿಯುತ್ತೀರಿ. |
00:14 | ಇಲ್ಲಿ ನಾವು
Ubuntu version 11.10 OS ( ಉಬಂಟು ಓಪರೇಟಿಂಗ್ ಸಿಸ್ಟಮ್ ನ ಆವೃತ್ತಿ ೧೧.೧೦) Java Development kit 1.6 (ಜಾವಾ ಡೆವೆಲೊಪ್ಮೆಂ ಟ್ ಕಿಟ್ ೧.೬) ಹಾಗೂ Eclipse 3.7.0 ಮತ್ತು (ಎಕ್ಲಿಪ್ಸ್ ೩.೭.೦) ಯನ್ನು ಉಪಯೋಗಿಸುತ್ತೇವೆ. |
00:25 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಡೇಟಾ ಟೈಪ್ ಮತ್ತು ಫಾರ್ ಲೂಪ್ ಗಳ ಬಗ್ಗೆ ತಿಳಿದಿರಬೇಕು. |
00:32 | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿ ಮಾಡಿ. |
00:38 | ಅರೇ ಗಳು ಡೇಟಾಗಳ ಸಂಗ್ರಹ. |
00:40 | ಉದಾಹರಣೆಗೆ ಅಂಕಗಳ ಪಟ್ಟಿ, ಹೆಸರುಗಳ ಪಟ್ಟಿ, ಉಷ್ಣತೆಗಳ ಪಟ್ಟಿ, ಮಳೆ ಪ್ರಮಾಣದ ಪಟ್ಟಿ. |
00:47 | ಪ್ರತಿಯೊಂದು ಎಲಿಮೆಂಟ್ ಅದರ ಸ್ಥಾನಕ್ಕೆ ಅನುಗುಣವಾಗಿ ಇಂಡೆಕ್ಸ್ ಅನ್ನು ಹೊಂದಿರುತ್ತದೆ. |
00:52 | ಮೊದಲ ಎಲಿಮೆಂಟ್ ನ ಇಂಡೆಕ್ಸ್ ಸೊನ್ನೆ ಆಗಿರುತ್ತದೆ. |
00:55 | ಎರಡನೇ ಎಲಿಮೆಂಟ್ ನ ಇಂಡೆಕ್ಸ್ ಒಂದು.. ಹೀಗೇ ಮುಂದುವರೆಯುತ್ತದೆ. |
00:59 | ಈಗ ಈ ಡೇಟಾಗಳನ್ನು ಸಂಗ್ರಹಿಸುವುದು ಹೇಗೆಂದು ನೋಡೋಣ. |
01:03 | ಇದಕ್ಕಾಗಿ ಎಕ್ಲಿಪ್ಸ್ ಅನ್ನು ಓಪನ್ ಮಾಡಿ. |
01:06 | ArraysDemo ಎಂಬ ಹೆಸರಿನ ಕ್ಲಾಸ್ ಆಗಲೇ ರಚನೆಯಾಗಿದೆ. |
01:11 | ಮೇಯ್ನ್ ಮೆಥಡ್ ನಲ್ಲಿ ಮಳೆ ಪ್ರಮಾಣದ ಡೇಟಾವನ್ನು ಸೇರಿಸೋಣ. |
01:16 | ಹಾಗಾಗಿ ಮೇಯ್ನ್ ಫಂಕ್ಷನ್ ನಲ್ಲಿ |
01:18 | int rainfall ಎಂದು ಟೈಪ್ ಮಾಡಿ, ಬ್ರ್ಯಾಕೆಟ್ ತೆರೆದು ಮುಚ್ಚಿ, ಸಮಚಿಹ್ನೆ ಕರ್ಲೀ ಬ್ರ್ಯಾಕೆಟ್ ನಲ್ಲಿ 25, 31, 29, 13, 27, 35, 12 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
01:53 | rainfall ವೇರಿಯೇಬಲ್ ಆದಮೇಲೆ ಸ್ಕ್ವೇರ್ ಬ್ರ್ಯಾಕೆಟ್ ಹಾಕುವುದನ್ನು ನೆನಪಿನಲ್ಲಿಡಿ. |
01:58 | ಅಂದರೆ ನಾವು rainfall ಎಂಬ ಇಂಟೀಜರ್ ಅರೆ ಅನ್ನು ಡಿಕ್ಲೇರ್ ಮಾಡಿದ್ದೇವೆ. |
02:03 | ಬ್ರ್ಯಾಕೆಟ್ ಗಳನ್ನು ಅರೇ ಎಲಿಮೆಂಟ್ ಗಳನ್ನು ಸೂಚಿಸಲು ಉಪಯೋಗಿಸುತ್ತೇವೆ. |
02:09 | ಈಗ ಡೇಟಾ ಗಳನ್ನು ಆಕ್ಸೆಸ್ಸ್ ಮಾಡುವುದು ಹೇಗೆಂದು ನೋಡೋಣ. |
02:12 | ಹಾಗಾಗಿ ಮುಂದಿನ ಸಾಲಿನಲ್ಲಿ |
02:14 | system ಡಾಟ್ out ಡಾಟ್ println ಎಂದು ಟೈಪ್ ಮಾಡಿ, rainfall ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ 2 ಎಂದು ಟೈಪ್ ಮಾಡಿ. |
02:28 | ನಾವು ಇಂಡೆಕ್ಸ್ ಸಂಖ್ಯೆ ಎರಡರಲ್ಲಿರುವ ಎಲಿಮೆಂಟ್ ಅನ್ನು ಪ್ರಿಂಟ್ ಮಾಡುತ್ತಿದ್ದೇವೆ. |
02:32 | ಅಂದರೆ ಅರೇ ಯ ಮೂರನೇ ಎಲಿಮೆಂಟ್ ಆದ 29 ಅನ್ನು ಪ್ರಿಂಟ್ ಮಾಡುತ್ತಿದ್ದೇವೆ. |
02:38 | ಸೇವ್ ಮಾಡಿ ರನ್ ಮಾಡೋಣ. |
02:43 | ನಾವು ಫಲಿತದಲ್ಲಿ ಅರೇ ಯ ಮೂರನೇ ಎಲಿಮೆಂಟ್ ಅಂದರೆ 29 ಅನ್ನು ಕಾಣಬಹುದು. |
02:49 | ಈಗ 2 ರ ಬದಲು 0 ಎಂದು ಟೈಪ್ ಮಾಡಿ. |
02:56 | ಪ್ರೋಗ್ರಾಮ್ ಅನ್ನು ಸೇವ್ ಮಾಡಿ ರನ್ ಮಾಡಿರಿ. |
03:00 | ಫಲಿತದಲ್ಲಿ ಮೊದಲನೇ ಎಲಿಮೆಂಟ್ 25 ಅನ್ನು ನೋಡುತ್ತೇವೆ. |
03:07 | ಈಗ ಮೊದಲನೇ ಎಲಿಮೆಂಟ್ ನ ಬೆಲೆಯನ್ನು ಬದಲಾಯಿಸೋಣ. |
03:13 | ಅದಕ್ಕಾಗಿ rainfall [0] = 11; ಎಂದು ಟೈಪ್ ಮಾಡಿ. |
03:27 | ಈಗ ಫಲಿತದಲ್ಲಿ ಅದರ ಬೆಲೆಯನ್ನು ನೋಡೋಣ. ಪ್ರೋಗ್ರಾಮ್ ಅನ್ನು ಸೇವ್ ಮಾಡಿ ರನ್ ಮಾಡಿರಿ. |
03:34 | ಅದರ ಬೆಲೆ 11 ಎಂದು ಬದಲಾಗಿರುವುದನ್ನು ನೋಡಬಹುದು. |
03:40 | ಅರೇ ಯ ಗಾತ್ರ ತಿಳಿದಿದ್ದು ಬೆಲೆಗಳು ಗೊತ್ತಿಲ್ಲದಿದ್ದಾಗ ಏನು ಮಾಡಬೇಕು ? |
03:45 | ಈಗ ಅಂತಹ ಅರೇ ಗಳನ್ನು ಹೇಗೆ ರಚಿಸುವುದೆಂದು ನೋಡೋಣ. |
03:49 | ಮೇಯ್ನ್ ಫಂಕ್ಷನ್ ನಲ್ಲಿ ಎಲ್ಲವನ್ನು ಅಳಿಸಿ. |
03:57 | int squares [] = new int [10]; ಎಂದು ಟೈಪ್ ಮಾಡಿ. |
04:19 | ಈ ಹೇಳಿಕೆಯು 'squares' ಎಂಬ 10 ಇಂಟೀಜರ್ ಎಲಿಮೆಂಟ್ ಗಳನ್ನು ಹೊಂದಿರುವ ಅರೇಯನ್ನು ರಚಿಸುತ್ತದೆ. |
04:30 | ಈಗ ಅದಕ್ಕೆ ಕೆಲವು ಬೆಲೆಗಳನ್ನು ಸೇರಿಸೋಣ. |
04:33 | ಹಾಗಾಗಿ |
04:35 | squares[0] = 1; ಎಂದು ಟೈಪ್ ಮಾಡಿ. |
04:43 | ಮುಂದಿನ ಸಾಲಿನಲ್ಲಿ squares[1] = 4;ಎಂದು |
04:53 | ಮುಂದಿನ ಸಾಲಿನಲ್ಲಿ squares[2] = 9;ಎಂದು |
05:04 | squares[3] = 16; ಎಂದೂ ಟೈಪ್ ಮಾಡಿ. |
05:15 | ಈಗ ನಾವು ಮೊದಲ ನಾಲ್ಕು ಸಂಖ್ಯೆಗಳ ವರ್ಗಗಳನ್ನು ನಮೂದಿಸಿದ್ದೇವೆ. |
05:20 | ಉಳಿದ ಎಲಿಮೆಂಟ್ ಗಳು ಯಾವ ಬೆಲೆ ಹೊಂದಿರುತ್ತವೆ ಎಂದು ಈಗ ನೋಡೋಣ. |
05:26 | ಅರೇಯ ಆರನೇ ಎಲಿಮೆಂಟ್ ನ ಬೆಲೆಯನ್ನು ಪ್ರಿಂಟ್ ಮಾಡೋಣ. |
05:30 | system ಡಾಟ್ out ಡಾಟ್ println (squares [5]); ಎಂದು ಟೈಪ್ ಮಾಡಿ. |
05:56 | ಪ್ರೋಗ್ರಾಮ್ ಅನ್ನು ಸೇವ್ ಮಾಡಿ ರನ್ ಮಾಡಿರಿ. ಬೆಲೆ ಸೊನ್ನೆ ಆಗಿರುವುದನ್ನು ನೋಡುತ್ತೇವೆ. |
06:05 | ಏಕೆಂದರೆ ಇಂಟೀಜರ್ ಅರೇ ಯು ರಚನೆಯಾದ ಸಂದರ್ಭದಲ್ಲಿ ಎಲ್ಲ ಬೆಲೆಗಳು ಸೊನ್ನೆಗೆ ಇನಿಷಿಯಲೈಜ್ ಆಗಿರುತ್ತದೆ. |
06:11 | ಹಾಗೆಯೇ ಫ್ಲೋಟ್ ಅರೇ ಯು ರಚನೆಯಾದ ಸಂದರ್ಭದಲ್ಲಿ ಎಲ್ಲ ಬೆಲೆಗಳು 0.0 ಗೆ ಇನಿಷಿಯಲೈಜ್ ಆಗಿರುತ್ತದೆ. |
06:18 | ಪ್ರತಿಯೊಂದು ಅರೇ ಎಲಿಮೆಂಟ್ ಗಳಿಗೂ ಬೆಲೆಯನ್ನು ಟೈಪ್ ಮಾಡುವುದು ತುಂಬಾ ದೊಡ್ಡ ಕ್ರಿಯೆಯಾಗುತ್ತದೆ. ಹಾಗಾಗಿ ಫಾರ್ ಲೂಪ್ ಅನ್ನು ಉಪಯೋಗಿಸುತ್ತೇವೆ. |
06:28 | ಹಾಗಾಗಿ
int n, x ; for(x = 4; x < 10; x = x + 1) { n = x + 1; squares [x] = n * n; } ಎಂದು ಟೈಪ್ ಮಾಡಿ. |
07:25 | 4 ರಿಂದ 9 ರವರೆಗೆ ಸಂಖ್ಯೆಗಳನ್ನು ಪುನಾರವರ್ತಿಸಿ ಮತ್ತು ಅರೇ ಎಲಿಮೆಂಟ್ ಗೆ ಅನುಗುಣವಾದ ಬೆಲೆಯನ್ನು ಸೇರಿಸಿದ್ದೇವೆ. |
07:36 | ಈಗ ಫಲಿತವನ್ನು ನೋಡೋಣ. |
07:38 | ನಾವು ಅರೇಯ ಆರನೇ ಎಲಿಮೆಂಟ್ ನ ಬೆಲೆಯನ್ನು ನಮೂದಿಸುತ್ತಿದ್ದೇವೆ. ಸೇವ್ ಮಾಡಿ ರನ್ ಮಾಡಿರಿ. |
07:52 | ನಾವು ಅರೇ ಯ ಆರನೇ ಎಲಿಮೆಂಟ್ 6 ರ ವರ್ಗ, ಅಂದರೆ 36 ಅನ್ನು ನೋಡಬಹುದು. |
07:57 | ನಾವು ಈಗ ಎಲ್ಲಾ ಬೆಲೆಗಳನ್ನು ಫಾರ್ ಲೂಪ್ ನಲ್ಲಿಯೇ ಸೇರಿಸೋಣ. |
08:03 | ನಾವು ಆಗಲೇ ನೀಡಿರುವ ಬೆಲೆಗಳನ್ನು ಅಳಿಸಿ ಮತ್ತು 4 ಅನ್ನು 0 ಎಂದು ಬದಲಾಯಿಸಿ. |
08:14 | ಈ ರೀತಿ 0 ಯಿಂದ 9 ರವರೆಗೆ ಎಲ್ಲ ಎಲಿಮೆಂಟ್ ಗಳ ಬೆಲೆಯೂ ಅನುಗುಣವಾದ ವರ್ಗಗಳಾಗುತ್ತವೆ. |
08:21 | ಈಗ ನಾವು ಮೂರನೇ ಎಲಿಮೆಂಟ್ ನ ಬೆಲೆಯನ್ನು ನೋಡೋಣ. |
08:25 | ಅದಕ್ಕಾಗಿ 5 ಅನ್ನು 2 ಎಂದು ಬದಲಾಯಿಸಿ. |
08:30 | ಸೇವ್ ಮಾಡಿ ರನ್ ಮಾಡಿರಿ. |
08:35 | ಈಗ ಮೂರನೇ ಎಲಿಮೆಂಟ್ ನ ಬೆಲೆಯು ಲೂಪ್ ನಲ್ಲಿ ಸೇರಿರುವುದರಿಂದ ಅದರ ಬೆಲೆ 9 ಆಗುತ್ತದೆ. |
08:42 | ಈ ರೀತಿಯಾಗಿ ಅರೇ ಯನ್ನು ರಚಿಸಬಹುದು ಮತ್ತು ಉಪಯೋಗಿಸಬಹುದು. |
08:50 | ನಾವು ಈಗ ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
08:53 | ಈ ಟ್ಯುಟೋರಿಯಲ್ ನಲ್ಲಿ ನಾವು, |
08:55 | ಅರೇ ಯನ್ನು ಡಿಕ್ಲೇರ್ ಮಾಡಿ , ಇನಿಷಿಯಲೈಜ್ ಮಾಡುವುದನ್ನು, |
08:58 | ಮತ್ತು ಅರೇ ಎಲಿಮೆಂಟ್ ಗಳನ್ನು ಎಕ್ಸೆಸ್ ಮಾಡುವುದನ್ನು ಕಲಿತಿದ್ದೇವೆ. |
09:01 | ಸ್ವಂತ ಅಭ್ಯಾಸಕ್ಕಾಗಿ, |
09:04 | ಕೊಟ್ಟಿರುವ ಒಂದು ಅರೇ ಯ ಎಲ್ಲಾ ಎಲಿಮೆಂಟ್ ಗಳ ಮೊತ್ತವನ್ನು ಕಂಡುಹಿಡಿಯಿರಿ. |
09:10 | ಸ್ಪೋಕನ್ ಟ್ಯುಟೋರಿಯಲ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, |
09:13 | ಮತ್ತು ವೀಡಿಯೋಗಾಗಿ [1] ಅಂತರ್ಜಾಲ ತಾಣವನ್ನು ಭೇಟಿಕೊಡಿ. |
09:19 | ಇದು ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ತಿಳಿಸಿಕೊಡುತ್ತದೆ. ನೀವು ಒಳ್ಳೆಯ ಬ್ಯಾಂಡ್ವಿoಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋನಡ್ ಮಾಡಿ ನೋಡಬಹುದು. |
09:26 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಸ್ಪೋಕನ್ ಟ್ಯುಟೋರಿಯಲ್ ಗಳ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. |
09:34 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ |
09:40 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ. |
09:44 | ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರ ದಿಂದ ಸಮರ್ಥಿತವಾಗಿದೆ. |
09:50 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.http://spoken-tutorial.org/NMEICT-Intro |
09:57 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ನಮಸ್ಕಾರ.. |