GIMP/C2/Selecting-Sections-Part-2/Kannada

From Script | Spoken-Tutorial
Revision as of 12:04, 25 September 2015 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:23 Meet The GIMP (ಮೀಟ್ ದ ಗಿಂಪ್) ಗೆ ನಿಮಗೆ ಸ್ವಾಗತ.
00:25 ಇದನ್ನು ರೋಲ್ಫ್ ಸ್ಟೇನೋರ್ಟ್ ಅವರು ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ.
00:31 ಇವತ್ತು ನಾವು Fuzzy Select Tool (ಫಝಿ ಸೆಲೆಕ್ಟ್ ಟೂಲ್) ನ ಬಗ್ಗೆ ಮಾತನಾಡುವೆವು.
00:36 ಇದು Select by Colour Tool (ಸೆಲೆಕ್ಟ್ ಬೈ ಕಲರ್ ಟೂಲ್) ನ ಹತ್ತಿರದ ಸಂಬಂಧಿಯಾಗಿದೆ.
00:40 ‘ಫಝಿ ಸೆಲೆಕ್ಟ್ ಟೂಲ್’, ಒಂದೇ ಒಂದು ಹೊಂದಿಕೊಂಡಿರುವ ಪ್ರದೇಶವನ್ನು ಆಯ್ಕೆಮಾಡುತ್ತದೆ. ‘ಕಲರ್ ಸೆಲೆಕ್ಟ್ ಟೂಲ್’, ಒಂದೇ ತರಹದ ಬಣ್ಣಗಳನ್ನು ಹೊಂದಿರುವ ಪ್ರದೇಶಗಳನ್ನು ಆಯ್ಕೆಮಾಡುತ್ತದೆ.
00:54 ಇಲ್ಲಿ, ರಿಪ್ಲೇಸ್, ಆಡ್, ಸಬ್ಸ್ಟ್ರ್ಯಾಕ್ಟ್ (Substract) ಮತ್ತು ‘ಇಂಟರ್ಸೆಕ್ಟ್ ವಿಥ್ ದ ಕರೆಂಟ್ ಸೆಲೆಕ್ಶನ್’ಗಳನ್ನು ಹೋಲುವ ಕೆಲವು ಆಯ್ಕೆಗಳಿವೆ. ಈಗ ನಾನು Replace ಅನ್ನು ಆಯ್ಕೆ ಮಾಡುತ್ತೇನೆ.
01:08 ಇಲ್ಲಿ ನೀವು ‘ಆಂಟಿಅಲಿಯಾಸಿಂಗ್’ ಎನ್ನುವ ಅದೇ ಆಯ್ಕೆಯನ್ನು ನೋಡಬಹುದು.
01:13 ನಾವು ‘ಆಂಟಿಅಲಿಯಾಸಿಂಗ್’ಅನ್ನು ಆಯ್ಕೆಮಾಡಿದರೆ, ‘ಸೆಲೆಕ್ಶನ್’ನ ಅಂಚು ಶಾರ್ಪ್ ಆಗಿರುವದಿಲ್ಲ, ನಿಮಗೆ ನಯವಾದ ಮೂಲೆಗಳು ಸಿಗುತ್ತವೆ.
01:23 ಇದನ್ನು ಆಯ್ಕೆಮಾಡದಿದ್ದರೆ, ಆಯ್ಕೆಯಾದ ಮತ್ತು ಆಯ್ಕೆಯಾಗಿರದ ಜಾಗಗಳ ಮಧ್ಯದಲ್ಲಿ ನಿಜವಾಗಿಯೂ ಶಾರ್ಪ್ ಆಗಿರುವ ಅಂಚು ಇರುತ್ತದೆ.
01:33 Feather Edges (ಫೆದರ್ ಎಡ್ಜಸ್) ಮತ್ತು Select Transparent Areas (ಸೆಲೆಕ್ಟ್ ಟ್ರಾನ್ಸ್ಪರೆಂಟ್ ಏರಿಯಾಸ್), ಇವು ಮುಂದಿನ ಆಯ್ಕೆಗಳಾಗಿವೆ.
01:41 ‘ಸೆಲೆಕ್ಟ್ ಟ್ರಾನ್ಸ್ಪರೆಂಟ್ ಏರಿಯಾಸ್’, ಬಹುಶಃ ‘ಮಾಸ್ಕ್ ಸೆನ್ಸರ್’ಅನ್ನು ಬಳಸುವಾಗ ಉಪಯುಕ್ತವಾಗಿದೆ.
01:50 Sample merged (ಸ್ಯಾಂಪಲ್ ಮರ್ಜ್ಡ್), ಉಳಿದುದರಂತೆಯೇ ಆಗಿದೆ, ಇದು ಕಾಣುತ್ತಿರುವ ಎಲ್ಲ ಲೇಯರ್ ಗಳನ್ನು ಆಯ್ಕೆಮಾಡುತ್ತದೆ.
01:58 ಆಯ್ಕೆಯಾಗಿಲ್ಲದಿದ್ದರೆ, ಆವಾಗ ಅದು, ಸಧ್ಯದ ಲೇಯರ್ ನ ಮೇಲೆ ಕೆಲಸ ಮಾಡುತ್ತದೆ.
02:04 ಇಮೇಜ್ ನ ಒಟ್ಟಾರೆ ಉತ್ಪತ್ತಿಯಿಂದ ನಿಮಗೆ ಏನಾದರೂ ಆಯ್ಕೆ ಮಾಡಬೇಕಾಗಿದ್ದರೆ, ಆಗ ಈ ಆಯ್ಕೆಯನ್ನು ಆಯ್ಕೆಮಾಡಿ.
02:11 ಇಲ್ಲಿರುವುದು Threshold (ಥ್ರೆಶೋಲ್ಡ್), ಆಗಿದೆ. ಇದು ‘ಸೆಲೆಕ್ಶನ್’ ನಲ್ಲಿ ಇರಲು, ಅಥವಾ ಸ್ವಲ್ಪ ಭಾಗ ‘ಸೆಲೆಕ್ಶನ್’ ನ ಹೊರಗೆ ಇರುವಾಗ, ಬಣ್ಣಗಳ ನಡುವೆ ಎಷ್ಟು ವ್ಯತ್ಯಾಸಕ್ಕೆ ಅವಕಾಶವಿದೆ ಎನ್ನುವುದನ್ನು ‘ಡಿಫೈನ್’ ಮಾಡುತ್ತದೆ.
02:24 ಒಂದು ನಿರ್ದಿಷ್ಟ ಬಣ್ಣವನ್ನು ಹೊಂದಿರುವ ‘ಪಿಕ್ಸೆಲ್’ಗಳನ್ನು ಆಯ್ಕೆಮಾಡಲು ಇದು ಸಹಾಯ ಮಾಡುತ್ತದೆ.
02:30 ‘ಸೆಲೆಕ್ಶನ್’ ನಲ್ಲಿ ನಿಮಗೆ ಯಾವ ‘ಮೋಡ್’ ಬೇಕಾಗಿದೆ ಎನ್ನುವುದು ಮುಂದಿನ ಮುಖ್ಯವಾದ ಆಯ್ಕೆಯಾಗಿದೆ.
02:37 Composite ಮೋಡ್ ಎನ್ನುವುದು ರೆಡ್, ಗ್ರೀನ್ ಮತ್ತು ಬ್ಲೂ ಚಾನೆಲ್ ಗಳನ್ನು ಸೇರಿಸಿದ, ಬೂದುಬಣ್ಣದ ವ್ಯಾಲ್ಯೂ ಆಗಿದೆ.
02:44 ರೆಡ್, ಗ್ರೀನ್, ಬ್ಲೂ ಚಾನೆಲ್ ಅಥವಾ ಹ್ಯೂ, ಸ್ಯಾಚುರೇಶನ್ ಅಥವಾ ವ್ಯಾಲ್ಯೂ ಚಾನೆಲ್ಗಳನ್ನು, ನಿಮ್ಮ ‘ಸೆಲೆಕ್ಶನ್’ಗೆ ‘ಬೇಸ್’ ಎಂದು, ನೀವು ಆಯ್ಕೆಮಾಡಬಹುದು.
02:56 ಈಗ, ನಾವು Fuzzy Select Tool ಅನ್ನು ಪ್ರಯತ್ನಿಸೋಣ.
03:01 ಇಮೇಜ್ನಲ್ಲಿ ಸುಮ್ಮನೆ ಕ್ಲಿಕ್ ಮಾಡುತ್ತೇನೆ. ಈ ‘ಥ್ರೆಶೋಲ್ಡ್’, ಸೊನ್ನೆಯಾಗಿದೆ. ಏನು ಆಗುತ್ತದೋ ಎಂದು ನೋಡೋಣ.
03:08 ನಾನು, ಒಂದು ಪಿಕ್ಸೆಲ್ ಸೈಜ್ ನ ‘ಸೆಲೆಕ್ಶನ್’ಅನ್ನು ಮಾಡುತ್ತೇನೆ.
03:13 ಈಗ ನಾನು ‘ಥ್ರೆಶೋಲ್ಡ್’ನ ಪ್ರಮಾಣವನ್ನು 30 ಕ್ಕೆ (ಮೂವತ್ತಕ್ಕೆ) ಹೆಚ್ಚಿಸುತ್ತೇನೆ ಮತ್ತು ಇಮೇಜ್ನಲ್ಲಿ ಕ್ಲಿಕ್ ಮಾಡುತ್ತೇನೆ. ಇಲ್ಲಿ, Toggle Quick Mask ನ ಮೇಲೆ, ಕ್ಲಿಕ್ ಮಾಡುತ್ತೇನೆ.
03:28 ಈಗ, ಆಯ್ಕೆಯಾಗಿರುವ ಜಾಗವನ್ನು ನೀವು ನೋಡಬಹುದು.
03:37 ನಾನು Quick Mask ಟಾಗಲ್ ಅನ್ನು ಡೀ-ಸೆಲೆಕ್ಟ್ ಮಾಡುತ್ತೇನೆ. ಟೂಲ್ ಬಾಕ್ಸನ್ನು ಪಡೆಯಲು Tab ಅನ್ನು ಒತ್ತುತ್ತೇನೆ. ಎಲ್ಲವನ್ನೂ ‘ಅನ್-ಸೆಲೆಕ್ಟ್’ ಮಾಡಲು Shift+Ctrl+A ಒತ್ತುತ್ತೇನೆ.
03:49 ಇದನ್ನು ನಾನು ಬೇರೆ ವಿಧದಲ್ಲಿ ಮಾಡಬಹುದು. ಅದಕ್ಕಾಗಿ, ನಾನು ‘ಥ್ರೆಶೋಲ್ಡ್’ಅನ್ನು ಸೊನ್ನೆಗೆ ಇಳಿಸುತ್ತೇನೆ.ಇಮೇಜ್ನಲ್ಲಿ ಕ್ಲಿಕ್ ಮಾಡುತ್ತೇನೆ. ಈಗ, ನಾನು ಮೌಸನ್ನು ಕೆಳಗೆ ಹಾಗೂ ಬಲಗಡೆಗೆ ಎಳೆಯುತ್ತೇನೆ.
04:03 ‘ಥ್ರೆಶೋಲ್ಡ್’ಅನ್ನು ಹೆಚ್ಚಿಸಿದಾಗ, ನಾನು ಈ ನೀಲಿ ಜಾಗದಲ್ಲಿ ಹೋಗುತ್ತಿರುವುದನ್ನು ನೀವು ನೋಡಬಹುದು. ಆದರೆ, ನಾನು ಇನ್ನೂ ಗೋಡೆಯ ಮೇಲೆ ಇದ್ದೇನೆ.
04:13 ಈ ಟೂಲ್, ‘ಗ್ರಾಫಿಕ್ ಡಿಸೈನರ್’ಗಳಿಗೆ ಹೆಚ್ಚು ಉಪಯುಕ್ತವಾಗಿದೆ, ‘ಫೋಟೋಗ್ರಾಫರ್’ಗಳಿಗೆ ಅಲ್ಲ.
04:22 ಮೌಸನ್ನು ಕೇವಲ ಎಳೆಯುವುದರಿಂದ, ನೀವು ‘ಥ್ರೆಶೋಲ್ಡ್’ಅನ್ನು ಬದಲಾಯಿಸಬಹುದು.
04:26 ಕಲರ್ ಸೆಲೆಕ್ಶನ್ ಟೂಲ್ನಲ್ಲಿ, ಇದು ಹೀಗೆಯೇ ಕೆಲಸ ಮಾಡುತ್ತದೆ.
04:32 Select by ಎನ್ನುವುದನ್ನು Composite ನಿಂದ Hue ಗೆ ಬದಲಾಯಿಸುತ್ತೇನೆ ಮತ್ತು ಅದೇ ಪಾಯಿಂಟ್ ನಲ್ಲಿ ಕ್ಲಿಕ್ ಮಾಡಿ ಅಡಿಭಾಗಕ್ಕೆ ಎಳೆಯುತ್ತೇನೆ.
04:43 ಮೊದಲು ಇದ್ದ, ಗೋಡೆಯ ನೀಲಿ, ಹಸಿರು ಭಾಗಕ್ಕಿಂತ ಬಹಳ ಚೆನ್ನಾದ ‘ಸೆಲೆಕ್ಶನ್’, ನನಗೆ ಸಿಕ್ಕಿದೆ ಎಂದು ನೀವು ನೋಡಬಹುದು.
04:54 ಆದ್ದರಿಂದ, ಈ ‘ಟೂಲ್’ನೊಂದಿಗೆ ಬಣ್ಣವನ್ನು ವ್ಯಾಖ್ಯಾನಿಸುವ ಸರಿಯಾದ ವಿಧಾನದ ಆಯ್ಕೆ, ಉತ್ತಮವಾದ ಪರಿಣಾಮವನ್ನು ಕೊಡುತ್ತದೆ.
05:05 ನಾನು ‘ಕ್ವಿಕ್ ಮಾಸ್ಕ್’ನಲ್ಲಿ ಕ್ಲಿಕ್ ಮಾಡುತ್ತೇನೆ. ಇಲ್ಲಿ, ಇದು ಹೆಚ್ಚುಕಡಿಮೆ ಪರಿಪೂರ್ಣವಾಗಿದೆ, ಕೆಲವು ಭಾಗಗಳನ್ನು ಮಾತ್ರ ಸರಿಪಡಿಸಬೇಕಾಗಿದೆ. ನಾನು ಅದನ್ನು ‘ಕ್ವಿಕ್ ಮಾಸ್ಕ್’ನಲ್ಲಿ, ‘ಪೇಂಟಿಂಗ್’ನೊಂದಿಗೆ ಮಾಡಬಹುದಿತ್ತು, ಈ ಸೆಲೆಕ್ಶನ್ ‘ಟೂಲ್’ಗಳೊಂದಿಗೆ ಅಲ್ಲ.
05:25 ನಿಮಗೆ ‘ಮೋಡ್’ಅನ್ನು ಆಯ್ಕೆಮಾಡುವ ಬಗ್ಗೆ ಗೊಂದಲವಾಗುತ್ತಿದ್ದರೆ ಆವಾಗ, ನಿಮ್ಮ ಇಮೇಜನ್ನು ‘ಚಾನೆಲ್’ ‘ಮೋಡ್’ನಲ್ಲಿ, ವಿಭಿನ್ನ ‘ಚಾನೆಲ್’ಗಳಲ್ಲಿ ನೀವು ನೋಡಬಹುದು.
05:41 ಬ್ಲೂ ‘ಚಾನೆಲ್’ಅನ್ನು ಆಯ್ಕೆಮಾಡಿ. ಎಲ್ಲವೂ ಸುಮಾರು ಒಂದೇ ಬ್ಲೂ ವ್ಯಾಲ್ಯೂವನ್ನು ಹೊಂದಿದೆ ಎಂದು ನೀವು ನೋಡುತ್ತೀರಿ.
05:50 ಗ್ರೀನ್ ‘ಚಾನೆಲ್’ನಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ.
05:55 ರೆಡ್ ‘ಚಾನೆಲ್’ನಲ್ಲಿ, ಇದು ಹೆಚ್ಚುಕಡಿಮೆ ಹೀಗೆಯೇ ಆಗಿದೆ.
05:59 ಆದ್ದರಿಂದ, ಆಯ್ಕೆಮಾಡಲು, ನಾನು ಗ್ರೀನ್ ‘ಚಾನೆಲ್’ಅನ್ನು ಅಥವಾ ಈ ಸಂದರ್ಭದಲ್ಲಿ ‘ಹ್ಯೂ’ ‘ಚಾನೆಲ್’ಅನ್ನು ಆರಿಸಬಹುದಿತ್ತು.
06:10 Selecting colour ಎನ್ನುವುದು, ಮುಂದಿನ ಟೂಲ್ ಆಗಿದೆ. ಅದೇ ‘ಫಂಕ್ಶನ್’ಗಳು ಮತ್ತು ಆಯ್ಕೆಗಳನ್ನು ಇದು, ಇಲ್ಲಿ ಹೊಂದಿದೆ.
06:19 ಇದು ಒಂದೇ ವ್ಯತ್ಯಾಸವನ್ನು ಹೊಂದಿದೆ.
06:22 ನೀವು ಇಲ್ಲಿ ಕ್ಲಿಕ್ ಮಾಡಿದರೆ, ಈ ಬಣ್ಣದ ಎಲ್ಲ ‘ಫೀಲ್ಡ್’ಗಳನ್ನು ಆಯ್ಕೆಮಾಡುವಿರಿ, ಹೊಂದಿಕೊಂಡಿರುವ ಒಂದು ಜಾಗವನ್ನು ಮಾತ್ರ ಅಲ್ಲ.
06:32 ‘ಕಲರ್ ಸೆಲೆಕ್ಶನ್ ಟೂಲ್’ ಎನ್ನುವುದು, ಒಂದೇ ತರಹದ ಬಣ್ಣವನ್ನು ಹೊಂದಿದ, ಎಲ್ಲ ಜಾಗಗಳನ್ನು ಆಯ್ಕೆಮಾಡುತ್ತದೆ.
06:41 ಮುಂದಿನ ‘ಟೂಲ್’ನ ಹೆಸರು ‘ಇಂಟೆಲಿಜೆಂಟ್ ಸಿಸರ್ಸ್’ ಅಥವಾ ‘ಸಿಸರ್ಸ್ ಸೆಲೆಕ್ಶನ್ ಟೂಲ್’ ಆಗಿದೆ.
06:48 ಈ ಅಲ್ಗೊರಿದಮ್, ‘ಸೆಲೆಕ್ಶನ್’ನಲ್ಲಿ ಅಂಚುಗಳಿಗಾಗಿ ಹುಡುಕುತ್ತದೆ ಮತ್ತು ಅವುಗಳನ್ನು ಅನುಸರಿಸುತ್ತದೆ.
06:56 ನನಗೆ, ಇಲ್ಲಿ, ಈ ‘ಲೆಟರ್ ಬಾಕ್ಸ್’ಗಳನ್ನು ಆಯ್ಕೆಮಾಡಬೇಕಾಗಿದೆ.
07:10 ಹೀಗಾಗಿ, ನಾನು ‘ಸೆಲೆಕ್ಶನ್’ ಟೂಲನ್ನು ಸಕ್ರಿಯಗೊಳಿಸುತ್ತೇನೆ. ಇಲ್ಲಿ ಒಂದು ಪಾಯಿಂಟ್ ಅನ್ನು ಎಳೆಯುತ್ತೇನೆ. ನನಗೆ ಕರ್ಸರ್ ನ ಬಳಿಯಲ್ಲಿ ‘ಪ್ಲಸ್’ ಚಿನ್ಹೆ (+) ಸಿಗುತ್ತದೆ. ನಾನು ಕೇವಲ ಪಾಯಿಂಟ್ ಗಳನ್ನು ಆಯ್ಕೆಮಾಡುತ್ತೇನೆ.
07:42 ಈ ಅಲ್ಗೋರಿದಮ್, ಅಂಚುಗಳನ್ನು ಅನುಸರಿಸಬೇಕು. ಅದು ಬೇರೆ ಹಾದಿಯನ್ನು ಹಿಡಿದಿಲ್ಲ, ಒಳಹಾದಿಯನ್ನು ಹಿಡಿದಿದೆ ಎನ್ನುವುದನ್ನು ನೀವು ಇಲ್ಲಿ ನೋಡಬಹುದು.
07:56 ಇಮೇಜ್ನಲ್ಲಿ ‘ಝೂಮ್’ ಮಾಡುತ್ತೇನೆ. ಈ ಪಾಯಿಂಟನ್ನು ನಾನು ಇಲ್ಲಿಯವರೆಗೆ ಎಳೆಯಬಹುದು. ಈ ಪಾಯಿಂಟನ್ನು ಆಯ್ಕೆಮಾಡುವಾಗ ಒಂದು ತಪ್ಪು ಆಗಿತ್ತು.
08:13 ಆದ್ದರಿಂದ ನಾನು ಈ ಪಾಯಿಂಟನ್ನು ಮೇಲೆ ಎಳೆಯುತ್ತೇನೆ. ಎಲ್ಲಿಗೆ ಅನುಸರಿಸಬೇಕು ಎನ್ನುವ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀವು ಕೊಟ್ಟರೆ, ಈ ಅಲ್ಗೊರಿದಮ್, ಅಂಚುಗಳನ್ನು ಅನುಸರಿಸುತ್ತದೆ ಎಂದು ನೋಡಬಹುದು.
08:30 ಇದು ಬಹಳ ಚೆನ್ನಾಗಿ ಕಾಣುತ್ತದೆ. ಆದರೆ ಸಾಮಾನ್ಯವಾಗಿ ನಾನು ಇದನ್ನು ಬಳಸುವುದಿಲ್ಲ, ಏಕೆಂದರೆ ಇದನ್ನು ಮಾಡಲು ಇನ್ನೂ ಉತ್ತಮ ವಿಧಾನಗಳಿವೆ.
08:44 ನಾನು ‘ಕಲರ್ ಸೆಲೆಕ್ಶನ್ ಟೂಲ್’ಅನ್ನು ಬಳಸಬಹುದಾಗಿತ್ತು ಎಂದು ನನಗೆನಿಸುತ್ತಿದೆ, ಏಕೆಂದರೆ ಇದು ಯಾವಾಗಲೂ ತಪ್ಪು ಹಾದಿಯನ್ನು ಬಳಸುತ್ತದೆ.
08:56 ಹೀಗೆ, ‘ಸೆಲೆಕ್ಶನ್’ಅನ್ನು ನಾನು ಮುಗಿಸಿದ್ದೇನೆ.
09:10 ಇಲ್ಲಿಯ ಮೊದಲನೆಯ ಪಾಯಿಂಟ್ ನ ಮೇಲೆ ಕ್ಲಿಕ್ ಮಾಡುತ್ತೇನೆ ಹಾಗೂ ಕರ್ಸರ್ ಪ್ಲಸ್ (+) ಚಿನ್ಹೆಗೆ ಬದಲಾಯಿಸುತ್ತದೆ.
09:17 ಈಗ ಮುಂದಿನ ಪಾಯಿಂಟನ್ನು ಇಡುತ್ತೇನೆ. ನನ್ನ ಹತ್ತಿರ, ಒಂದು ‘ಲೂಪ್’ಅನ್ನು ರಚಿಸುತ್ತಿರುವ ಈ ಎರಡು ‘ರಿಂಗ್’ಗಳಿವೆ,
09:25 ನಾನು ಈ ಪಾಯಿಂಟನ್ನು, ಇಲ್ಲಿ, ಇನ್ನೂ ಅತ್ತಿತ್ತ ಸರಿಸಬಹುದು ಹಾಗೂ ‘ಸೆಲೆಕ್ಶನ್’ಅನ್ನು ಉತ್ತಮಗೊಳಿಸಬಹುದು.
09:33 ಈಗ, ಎರಡನೆಯ ಸಲ ನಾನು ‘ಸೆಲೆಕ್ಶನ್’ನಲ್ಲಿ ಕ್ಲಿಕ್ ಮಾಡಿದಾಗ, ‘ಸೆಲೆಕ್ಶನ್’ ಆಯ್ಕೆಯಾಗಿದೆ.
09:42 ಗುಣಮಟ್ಟವನ್ನು ನೋಡಲು, ನಾನು ‘ಕ್ವಿಕ್ ಮಾಸ್ಕ್’ಅನ್ನು ಸಕ್ರಿಯಗೊಳಿಸಿ, ಅದರಲ್ಲಿ ‘ಝೂಮ್-ಇನ್’ ಮಾಡುತ್ತೇನೆ.
09:57 ಈಗ ನಾನು ‘ಸೆಲೆಕ್ಶನ್’ನಲ್ಲಿ ಅತ್ತಿತ್ತ ನೋಡುತ್ತೇನೆ.
10:04 ಇಲ್ಲಿ ನನ್ನ ತಪ್ಪು ಇದೆ. ನಾನು ಇಲ್ಲಿ ಕ್ಲಿಕ್ ಮಾಡಬೇಕಾಗಿತ್ತು.
10:10 ಆದ್ದರಿಂದ,ಇದು ಸಾಕಷ್ಟು ಜಾಣ ಕತ್ತರಿ ಆಗಿದೆ.
10:17 ಇವತ್ತು, ನಾನು ಮುಗಿಸಬೇಕೆಂದಿರುವ ಮುಂದಿನ ಹಾಗೂ ಕೊನೆಯ ಟೂಲ್, Foreground Selection Tool (ಫೋರ್ಗ್ರೌಂಡ್ ಸೆಲೆಕ್ಶನ್ ಟೂಲ್) ಎನ್ನುವುದಾಗಿದೆ.
10:24 ಕೆಲವು ಸಮಯದ ಹಿಂದೆ ಈ ಅಲ್ಗೊರಿದಮ್, ಹೊರಗೆ ಬಂದಾಗ ಸಾಕಷ್ಟು ಕೋಲಾಹಲವಾಗಿತ್ತು. ಗಿಂಪ್ ನಲ್ಲಿ ಬಳಸುವಾಗ ಅದು ಅಷ್ಟು ಗುಲ್ಲು ಎಬ್ಬಿಸಲಿಲ್ಲ.
10:37 ಆದರೆ, ಇದನ್ನು ನಾವು ಒಂದುಸಲ ಪ್ರಯತ್ನಿಸೋಣ.
10:41 ಇಲ್ಲಿರುವುದು, ಅದೇ ಮೋಡ್ ಗಳಾಗಿವೆ ಮತ್ತು ‘ಆಂಟಿಅಲಿಯಾಸಿಂಗ್’ಅನ್ನು ಸಕ್ರಿಯಗೊಳಿಸಲು ಸಾಧ್ಯವಿಲ್ಲ.
10:48 ಇಲ್ಲಿ ನನಗೆ ಒಂದೇ ಒಂದು ಜಾಗವನ್ನು ಆರಿಸಬೇಕಾಗಿದೆ ಮತ್ತು ನನಗೆ ಈ ಪ್ರತಿಮೆಯನ್ನು ಆಯ್ಕೆಮಾಡಬೇಕಾಗಿದೆ.
10:57 ಆದ್ದರಿಂದ, ಉತ್ತಮ ನಿಯಂತ್ರಣವನ್ನು ಪಡೆಯಲು, ಮೊದಲು ಇಮೇಜ್ನಲ್ಲಿ ಝೂಮ್ ಮಾಡುತ್ತೇನೆ.
11:06 ಈಗ ನಾನು Selection Tool ಅನ್ನು ಆಯ್ಕೆಮಾಡುತ್ತೇನೆ. ನಾನು ಹೊಂದಿಕೊಂಡಿರುವ ಜಾಗವನ್ನು ಅಥವಾ ಬೇರೆ ಜಾಗವನ್ನು ಆರಿಸಬಹುದು ಆದರೆ ನಾನು ಹೊಂದಿಕೊಂಡಿರುವ ಜಾಗವನ್ನು ಆಯ್ಕೆಮಾಡುತ್ತೇನೆ.
11:21 ಮೊದಲು, ’ಆಟೋಮ್ಯಾಟಿಕ್ ಲೇಸರ್ ಟೂಲ್’ ನಿಂದ, ನಾನು ಇಲ್ಲಿ ಒಂದು ಕಚ್ಚಾ ‘ಸೆಲೆಕ್ಶನ್’, ಮಾಡುತ್ತೇನೆ. ಆಯ್ಕೆಯಾಗಿರದ ಜಾಗವು, ನೀಲಿ ಬಣ್ಣದಲ್ಲಿ ಇರುವುದನ್ನು ಈಗ ನೀವು ನೋಡಬಹುದು.
11:44 ಇಲ್ಲಿ ಒಂದು ‘ಬ್ರಶ್’ಅನ್ನು ಆಯ್ಕೆಮಾಡಿದ್ದೇನೆ. ‘ಬ್ರಶ್’ನ ವ್ಯಾಸವನ್ನು, ಈ ‘ಸ್ಲೈಡರ್’ನಿಂದ ನಾನು ನಿಯಂತ್ರಿಸಬಹುದು. ಇದರಲ್ಲಿ, ನನಗೆ ಆರಿಸಬೇಕಾಗಿರುವುದನ್ನು ನಾನು ಪೇಂಟ್ ಮಾಡುತ್ತೇನೆ.
11:59 ಇಮೇಜ್ನಲ್ಲಿ, ನನಗೆ ಬೇಡವಾದದ್ದನ್ನು ನಾನು ಆಯ್ಕೆಮಾಡಬಾರದು ಎನ್ನುವುದನ್ನು ನಾನು ನೋಡಬೇಕು.
12:17 ನಾನು ಮೌಸ್ ‘ಬಟನ್’ಅನ್ನು ಬಿಟ್ಟಾಗ, ಅಲ್ಗೋರಿದಮ್ ಕೆಲಸ ಮಾಡಲು ಆರಂಭಿಸುವುದು. ಇಲ್ಲಿ ಕೆಲವು ಜಾಗಗಳನ್ನು ಆಯ್ಕೆಮಾಡಬೇಕು.
12:27 ಪ್ರತಿಸಲ ‘ಸೆಲೆಕ್ಶನ್’, ಅಪ್ಡೇಟ್ ಆಗುತ್ತದೆ ಮತ್ತು ನಾನು ಈಗಷ್ಟೇ ಪೇಂಟ್ ಮಾಡಿದ್ದನ್ನು ಹೋಲುವಂತಹ ಜಾಗವು ಆಯ್ಕೆಯಾಗುತ್ತದೆ.
12:42 ಈಗ, Mark Background (ಮಾರ್ಕ್ ಬ್ಯಾಕ್ಗ್ರೌಂಡ್) ಎನ್ನುವುದರ ಮೇಲೆ ಕ್ಲಿಕ್ ಮಾಡಿ, ಇಮೇಜ್ನಲ್ಲಿ ನನಗೆ ಬೇಡವಾದ ಬ್ಯಾಕ್ಗ್ರೌಂಡ್ ನ ಮೇಲೆ, ಪೇಂಟ್ ಮಾಡಲು ಆರಂಭಿಸುತ್ತೇನೆ.
12:54 ಆಯ್ಕೆಯಾದ ಮತ್ತು ಆಯ್ಕೆಯಾಗಿರದ ಭಾಗಗಳ ನಡುವೆ ಹೆಚ್ಚು ವ್ಯತ್ಯಾಸವಿದ್ದಾಗ, ಈ ಟೂಲ್, ಚೆನ್ನಾಗಿ ಕೆಲಸ ಮಾಡುತ್ತದೆ. ಇಲ್ಲಿ ಆ ವ್ಯತ್ಯಾಸವು ಸಾಕಷ್ಟು ದೊಡ್ಡದಾಗಿಲ್ಲ.
13:12 ‘ಸೆಲೆಕ್ಶನ್’ಅನ್ನು ಒಪ್ಪಿಕೊಳ್ಳಲು, ಕೇವಲ Enter ಅನ್ನು ಒತ್ತಿರಿ.
13:17 ಈ ಟೂಲ್, ಹೇಗೆ ಕೆಲಸ ಮಾಡುವದೆಂಬ ಕಲ್ಪನೆ ನಿಮಗೆ ಬಂದಿರಬೇಕು.
13:27 ‘ಪಾಥ್ ಟೂಲ್’ ಎನ್ನುವುದು ಈ ಭಾಗಕ್ಕೂ ಸೇರಿದೆ ಆದರೆ ಅದನ್ನು ಮತ್ತೆ ಯಾವಾಗಲಾದರೂ ವಿವರಿಸುತ್ತೇನೆ.
13:36 ‘ಸೆಲೆಕ್ಶನ್’ನ ಜೊತೆಗೆ ನೀವು ಮಾಡಬಹುದಾದ ಬೇರೆ ಕೆಲವು ವಿಷಯಗಳು ‘ಸೆಲೆಕ್ಟ್’ ಮೆನ್ಯೂನಲ್ಲಿ ಇರುತ್ತವೆ. ಅದನ್ನು ಸಹ ಮತ್ತೆ ಯಾವಾಗಲಾದರೂ ವಿವರಿಸುತ್ತೇನೆ.
13:48 ಇದು,ಈ 'ಟ್ಯುಟೋರಿಯಲ್'ಗಾಗಿ ಆಗಿತ್ತು.
13:52 ನನಗೆ ಸ್ವಲ್ಪ ಕಾಮೆಂಟ್ಗಳನ್ನು ತಿಳಿಸಿರಿ. ವೀಕ್ಷಕರಿಂದ ಪಡೆದ ಹೊಸ ವಿಷಯಗಳನ್ನು, ಮುಂದಿನ ‘ಶೋ’ ಗಾಗಿ, ನಿಮಗೆ ವಾಗ್ದಾನ ಮಾಡುತ್ತೇನೆ.
14:05 ಈ ಕೆಳಗೆ ತೋರಿಸಿದ ‘ಲಿಂಕ್’ನಲ್ಲಿಯ ‘ಶೋ ನೋಟ್ಸ್’ನಲ್ಲಿ, ಈ ಫೈಲ್ ಗಾಗಿ ನಿಮಗೆ ಲಿಂಕ್ ಸಿಗುವುದು. ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕೆಂದಿದ್ದರೆ ದಯವಿಟ್ಟು ತಿಳಿಸಿರಿ. meetthegimp.org
14:19 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ ವಂದನೆಗಳು.

Contributors and Content Editors

NaveenBhat, Sandhya.np14