LibreOffice-Suite-Writer/C4/Headers-Footers-and-notes/Kannada
From Script | Spoken-Tutorial
Revision as of 15:01, 20 March 2017 by PoojaMoolya (Talk | contribs)
Time | Narration |
00:00 | ಲಿಬ್ರೆ ಆಫೀಸ್ ರೈಟರ್ ನಲ್ಲಿ ಹೆಡರ್, ಫೂಟರ್ ಮತ್ತು ಎಂಡ್-ನೋಟ್ ಗಳ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:09 | ಡಾಕ್ಯುಮೆಂಟ್ ನಲ್ಲಿ ಹೆಡರ್ ಅನ್ನು ಹೇಗೆ ಸೇರಿಸುವುದು, |
00:12 | ಫೂಟರ್ ಅನ್ನು ಹೇಗೆ ಸೇರಿಸುವುದು, |
00:15 | ಹೆಡರ್ ಅನ್ನು ಮೊದಲ ಪುಟದಿಂದ ಹೇಗೆ ತೆಗೆಯುವುದು ಹಾಗೂ |
00:19 | ಡಾಕ್ಯುಮೆಂಟ್ ನಲ್ಲಿ ಫುಟ್ನೋಟ್ ಅನ್ನು ಮತ್ತು ಎಂಡ್ನೋಟ್ ಅನ್ನು ಹೇಗೆ ಸೇರಿಸುವುದು ಇತ್ಯಾದಿಗಳ ಬಗ್ಗೆ ಕಲಿಯಲಿದ್ದೇವೆ. |
00:24 | ಇಲ್ಲಿ ನಾವು ಉಬಂಟು ಲಿನಕ್ಸ್ 10.04 ಅನ್ನು ಮತ್ತು ಲಿಬ್ರೆ ಆಫೀಸ್ ಸೂಟ್ ನ 3.3.4 ನೇ ಆವೃತ್ತಿಯನ್ನು ಬಳಸುತ್ತಿದ್ದೇವೆ. |
00:33 | ಲಿಬ್ರೆ ಆಫೀಸ್ ರೈಟರ್ ನಲ್ಲಿ ನಾವು ಡಾಕ್ಯುಮೆಂಟ್ ನಲ್ಲಿ ಪುಟಗಳಿಗೆ ಸಂಖ್ಯೆಗಳನ್ನು ಸೇರಿಸಬಹುದಾಗಿದೆ. |
00:38 | ನಾವು ನಮ್ಮ resume.odt ಎಬ ಫೈಲ್ ಅನ್ನು ತೆರೆಯೋಣ. |
00:42 | ಫುಟರ್ ನಲ್ಲಿ ಪುಟ ಸಂಖ್ಯೆಯನ್ನು ಸೇರಿಸಲು ನೀವು ಸೇರಿಸಲಿಚ್ಛಿಸಿದ ಪುಟದ ಮೇಲೆ ಕ್ಲಿಕ್ ಮಾಡಬೇಕು. |
00:49 | ಹಾಗಾಗಿ ನಾವೀಗ ಡಾಕ್ಯುಮೆಂಟ್ ನ ಪುಟದ ಮೇಲೆ ಕ್ಲಿಕ್ ಮಾಡೋಣ. |
00:51 | ಈಗ ಮೆನ್ಯು ಬಾರ್ ನಲ್ಲಿರುವ Insert ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಹಾಗೂ Footer ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
00:58 | ನಂತರ Default ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
01:01 | ಈಗ ನಾವು ಪುಟದ ಕೆಳಗಡೆ ಫುಟರ್ ಸೇರಿರುವುದನ್ನು ನೋಡಬಹುದು. |
01:06 | ಅಲ್ಲಿ ಪುಟ ಸಂಖ್ಯೆಯನ್ನು ತೋರಿಸಲು ನಾವು ಮೊದಲು Insert ಆಯ್ಕೆಯನ್ನು ಕ್ಲಿಕ್ ಮಾಡೋಣ. |
01:12 | ನಂತರ Fields ನ ಮೇಲೆ ಕ್ಲಿಕ್ ಮಾಡೋಣ. |
01:15 | ನೀವಿಲ್ಲಿ ಹಲವಾರು ಫುಟರ್ ಆಯ್ಕೆಗಳನ್ನು ಕಾಣುವಿರಿ. |
01:19 | ಡಾಕ್ಯುಮೆಂಟ್ ನಲ್ಲಿ ಪುಟ ಸಂಖ್ಯೆಯನ್ನು ಸೇರಿಸಲು Page Number ಎಂಬುದರ ಮೇಲೆ ಕ್ಲಿಕ್ ಮಾಡಿ. |
01:24 | ಅನುಕ್ಷಣ ನಾವು ಫುಟರ್ ನಲ್ಲಿ 1 ಅನ್ನು ಕಾಣಬಹುದು. |
01:29 | ಪುಟ ಸಂಖ್ಯೆಯನ್ನು ಬೇರೆ ಬೇರೆ ಶೈಲಿಯಲ್ಲಿ ಬಳಸಲು, ಪುಟ ಸಂಖ್ಯೆಯ ಮೇಲೆ ಡಬಲ್ ಕ್ಲಿಕ್ ಮಾಡಿ. |
01:35 | ನಾವು Edit Fields: Document ಎಂಬ ಡಯಲಾಗ್ ಬಾಕ್ಸ್ ಅನ್ನು ನೋಡುತ್ತೇವೆ. |
01:41 | Format ಆಯ್ಕೆಯ ಕೆಳಗೆ A B C ಎಂದು ಅಪ್ಪರ್ ಕೇಸ್ನಲ್ಲಿ, a b c ಎಂದು ಲೋವರ್ ಕೆಸ್ ನಲ್ಲಿ, Arabic 1 2 3” ಎಂಬೀ ಮುಂತಾದ ಹಲವಾರು ಶೈಲಿ ಗಳನ್ನು ನೊಡಬಹುದು. |
01:53 | ಇಲ್ಲಿ ನೀವು ನೀವಿಚ್ಛಿಸಿದ ಸಂಖ್ಯಾ ಶೈಲಿಯನ್ನು ಆಯ್ಕೆಮಾಡಬಹುದು. |
01:58 | ನಾವು ಇಲ್ಲಿ Roman i,ii,iii ಎಂಬ ಆಯ್ಕೆಯನ್ನು ಆರಿಸಿ OK ಬಟನ್ ಮೇಲೆ ಕ್ಲಿಕ್ ಮಾಡೋಣ. |
02:05 | ಈಗ ನೋಡಿ, ಪುಟದಲ್ಲಿನ ಸಂಖ್ಯೆಯ ಶೈಲಿಯು ಬದಲಾಗಿದೆ. |
02:09 | ಹೀಗೆಯೇ, ನಾವು ಡಾಕ್ಯುಮೆಂಟ್ ನಲ್ಲಿ ಹೆಡರ್ ಅನ್ನು ಸೇರಿಸಬಹುದು. |
02:13 | ಮೊದಲಿಗೆ ನೀವು ಎಲ್ಲಿ ಹೆಡರ್ ಅನ್ನು ಸೇರಿಸಲಿಚ್ಛಿಸುವಿರೋ ಆ ಪುಟದ ಮೇಲೆ ಕ್ಲಿಕ್ ಮಾಡಿ. |
02:17 | ಈಗ Insert ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ Header ಆಯ್ಕೆಯನ್ನು ಕ್ಲಿಕ್ ಮಾಡಿ. |
02:23 | ಅಲ್ಲಿ Default ಆಯ್ಕೆಯನ್ನು ಕ್ಲಿಕ್ ಮಾಡಿ. |
02:26 | ನೀವು ಪುಟದ ಮೇಲ್ಭಾಗದಲ್ಲಿ ಹೆಡರ್ ಸೇರಿರುವುದನ್ನು ನೋಡಬಹುದು. |
02:30 | ಹೆಡರ್ ನಲ್ಲಿ ದಿನಾಂಕವನ್ನು ಸೇರಿಸಲು ಕ್ರಮವಾಗಿ “Insert” ನ ಮೇಲೆ ಹಾಗೂ ನಂತರ “Fields” ನ ಮೇಲೆ ಕ್ಲಿಕ್ ಮಾಡಿ. |
02:37 | ಅಲ್ಲಿ ಕಾಣುವ ಸೈಡ್ ಮೆನ್ಯುವಿನಲ್ಲಿ “Date” ನ ಮೇಲೆ ಕ್ಲಿಕ್ ಮಾಡಿ. |
02:42 | ಈಗ ದಿನಾಂಕವು ಹೆಡರ್ ನಲ್ಲಿ ಕಾಣಿಸುತ್ತಿದೆ. |
02:45 | ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡುವುದರಿಂದ ನಾವು ದಿನಾಂಕದ ಪ್ರದರ್ಶನಕ್ಕಾಗಿ ಇರುವ ಎಲ್ಲಾ ಸಂಭವನೀಯ ಶೈಲಿಗಳನ್ನು ನೋಡಬಹುದು. |
02:51 | ಇಲ್ಲಿ ನಾವು 31 Dec, 1999 ಎಂಬುದನ್ನು ಆಯ್ಕೆಮಾಡಿ OK ಮೇಲೆ ಕ್ಲಿಕ್ ಮಾಡಿ. |
02:58 | ಈಗ ಮೆನ್ಯುಬಾರ್ ನಲ್ಲಿ “File” ಎಂಬುದರ ಮೇಲೆ ಕ್ಲಿಕ್ ಮಾಡಿ ಹಾಗೂ ಅಲ್ಲಿ “Page preview” ವಿಕಲ್ಪದ ಮೇಲೆ ಕ್ಲಿಕ್ ಮಾಡಿ. |
03:05 | ಈಗ ಡಾಕ್ಯುಮೆಂಟ್ ಅನ್ನು 50 ಪ್ರತಿಶತದಷ್ಟು ದೊಡ್ಡದಾಗಿಸೋಣ. |
03:09 | ಈಗ ನೋಡಿ, ಪೇಜ್ ನ ಮೇಲ್ಭಾಗದಲ್ಲಿ ದಿನಾಂಕ ಹಾಗೂ ಕೆಳಭಾಗದಲ್ಲಿ ಪುಟಸಂಖ್ಯೆಯು ಕಾಣುತ್ತಿದೆ. |
03:15 | ಈ ಪ್ರಕಾರವಾಗಿ ಇದು ಡಾಕ್ಯುಮೆಂಟ್ ನ ಎಲ್ಲಾ ಪುಟಗಳಲ್ಲೂ ಅನ್ವಯಗೊಳ್ಳುತ್ತದೆ. |
03:19 | ಮೂಲ ಡಾಕ್ಯುಮೆಂಟ್ ಗೆ ಹಿಂತಿರುಗಲು “Close Preview” ಎಂಬ ಬಟನ್ ಅನ್ನು ಕ್ಲಿಕ್ ಮಾಡಿ. |
03:25 | ನಾವು ಹೆಡರ್ ಅಥವಾ ಫುಟರ್ ನಲ್ಲಿರುವ ಟೆಕ್ಸ್ಟ್ ನ ಸ್ಪೇಸಿಂಗ್ ಅನ್ನು ಕೂಡಾ ಸರಿಪಡಿಸಬಹುದು. |
03:30 | ಅಥವಾ ನಾವು ಹೆಡರ್ ಮತ್ತು ಫುಟರ್ ಗೆ ಅಂಚನ್ನು ಕೂಡಾ ಸೇರಿಸಬಹುದು. |
03:34 | ಮೆನ್ಯುಬಾರ್ ನಲ್ಲಿ “Format” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ ನಂತರ “Page” ಎಂಬಲ್ಲಿ ಕ್ಲಿಕ್ ಮಾಡಿ. |
03:40 | ಡಯಲಾಗ್ ಬಾಕ್ಸ್ ನಲ್ಲಿ “Footer” ಎಂಬ ಟ್ಯಾಬ್ ಅನ್ನು ಆಯ್ಕೆ ಮಾಡಿ. |
03:43 | Left margin ನ ವ್ಯಾಲ್ಯೂವನ್ನು 1 ಸೆಂಟಿಮೀಟರ್ ಗೆ ಬದಲಾಯಿಸುವುದರ ಮೂಲಕ ಸ್ಪೇಸಿಂಗ್ ಅನ್ನು ಸೆಟ್ ಮಾಡಿ. |
03:52 | ಫುಟರ್ ಗೆ ಅಂಚನ್ನು ಅಥವಾ ಛಾಯೆಯನ್ನು ಸೇರಿಸಲು “More” ವಿಕಲ್ಪದ ಮೇಲೆ ಕ್ಲಿಕ್ ಮಾಡಿ ನಂತರ ಫುಟರ್ ಗೆ ನೀಡಾಬೇಕಾದ ವಿಕಲ್ಪದ ವ್ಯಾಲ್ಯೂವನ್ನು ಸೆಟ್ ಮಾಡಿ. |
04:03 | ಉದಾಹರಣೆಗಾಗಿ, ಫುಟರ್ ಗೆ ಛಾಯಾಶೈಲಿಯನ್ನು ಸೇರಿಸಲು ನಾವು “Cast Shadow to Top Right” ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡೋಣ. |
04:10 | ಇದು Shadow style ಎಂಬ ವಿಕಲ್ಪದ Position ಎಂಬ ಟ್ಯಾಬ್ ನ ಕೆಳಗಿರುವ ವಿವಿಧ ಐಕಾನ್ ಗಳಲ್ಲಿ ಒಂದಾಗಿದೆ. |
04:18 | ನೀವಿಲ್ಲಿ ಅಂಚಿನ ಮತ್ತು ಛಾಯೆಯ ಬಣ್ಣವನ್ನು ಇಲ್ಲಿ ಆರಿಸಬಹುದು. |
04:23 | ಲಭ್ಯವಿರುವ ಪ್ರತಿಯೊಂದು ವಿಕಲ್ಪಗಳ ಬಗ್ಗೂ ತಿಳಿಯಲು ಈ ಡಯಲಾಗ್ ಬಾಕ್ಸ್ ಅನ್ನು ಅನ್ವೇಷಿಸಿ. |
04:28 | ಈಗ “OK” ಮೇಲೆ ಕ್ಲಿಕ್ ಮಾಡಿ. |
04:30 | ಪುನಃ OK ಕ್ಲಿಕ್ ಮಾಡಿ ಹಾಗೂ ಈಗ ನೋಡಿ, ಫುಟರ್ ನಲ್ಲಿ ಪರಿಣಾಮ ಮೂಡಿದೆ. |
04:36 | ಮುಂದುವರೆಯುವ ಮುನ್ನ ನಮ್ಮ ಡಾಕ್ಯುಮೆಂಟ್ ಗೆ ಮತ್ತೊಂದು ಪುಟವನ್ನು ಸೇರಿಸೋಣ. |
04:41 | ಸೇರಿಸಲು, Insert ಹಾಗೂ ಅಲ್ಲಿ Manual Break ಅನ್ನು ಕ್ಲಿಕ್ ಮಾಡಿ ಅಲ್ಲಿ Page break ವಿಕಲ್ಪವನ್ನು ಆಯ್ಕೆಮಾಡಿ. |
04:47 | ನಂತರ “OK” ಕ್ಲಿಕ್ ಮಾಡಿ. |
04:50 | ಗಮನಿಸಿ ಪುಟ ಸಂಖ್ಯೆಯು 2 ಎಂದು ತೋರಿಸುತ್ತಿದೆ. |
04:54 | ನಿಮಗೆ ನಿಮ್ಮ ಡಾಕ್ಯುಮೆಂಟ್ ನ ಮೊದಲ ಪುಟಕ್ಕೆ ಫುಟರ್ ಬೇಡವೆಂದಾದಲ್ಲಿ ಕರ್ಸರ್ ಅನ್ನು ಮೊದಲ ಪುಟದಲ್ಲಿಡಿ. |
05:01 | ಹಾಗೂ ಮೆನ್ಯುಬಾರ್ ನಲ್ಲಿ “Format” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Styles and Formatting” ವಿಕಲ್ಪದ ಮೇಲೆ ಕ್ಲಿಕ್ ಮಾಡಿ. |
05:08 | ಈಗ ಕಾಣುವ ಡಯಲಾಗ್ ಬಾಕ್ಸ್ ನಲ್ಲಿ ಮೇಲ್ಗಡೆ Page Styles ಎಂಬ ಹೆಸರಿನ ನಾಲ್ಕನೇ ಐಕಾನ್ ಅನ್ನು ಕ್ಲಿಕ್ ಮಾಡಿ. |
05:16 | ನಂತರ First Page ವಿಕಲ್ಪದ ಮೇಲೆ ರೈಟ್ ಕ್ಲಿಕ್ ಮಾಡಿ. |
05:20 | ಅಲ್ಲಿ New ಎಂಬುದರ ಮೇಲೆ ಕ್ಲಿಕ್ ಮಾಡಿ ಹಾಗೂ Organiser ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
05:25 | Name ಎಂಬಲ್ಲಿ ನೀವು ನೀವಿಚ್ಛಿಸಿದ ಶೈಲಿಯ ಹೆಸರನ್ನು ಟೈಪ್ ಮಾಡಿ. |
04:30 | ನಾವಿಲ್ಲಿnew first page ಎಂದು ಟೈಪ್ ಮಾಡೋಣ. |
05:35 | Next Style ಅನ್ನು ಡೀಫಾಲ್ಟ್ ಆಗಿಯೇ ಇಡಿ. |
05:38 | ಈಗ ಡಯಲಾಗ್ ಬಾಕ್ಸ್ ನಲ್ಲಿ Footer ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
05:42 | ಅಲ್ಲಿರುವ Footer on ಎಂಬ ಚೆಕ್ಬಾಕ್ಸ್ ಡೀಫಾಲ್ಟ್ ಆಗಿ ಅನ್ ಚೆಕ್ ಆಗದಿದ್ದಲ್ಲಿ ಅದನ್ನು ಅನ್ ಚೆಕ್ ಮಾಡಿ. |
05:48 | ಕೊನೆಯಲ್ಲಿ, OK ಬಟನ್ ಕ್ಲಿಕ್ ಮಾಡಿ. |
05:51 | ನಾವೀಗ Styles and Formatting ಎಂಬ ಡಯಲಾಗ್ ಬಾಕ್ಸ್ ಗೆ ಹಿಂತಿರುಗಿದ್ದೇವೆ. |
05:55 | ಗಮನಿಸಿ, ಪೇಜ್ ಸ್ಟೈಲ್ ವಿಕಲ್ಪದ ಕೆಳಗೆ new first page ಎಂಬುದು ಕಾಣುತ್ತಿದೆ. |
06:01 | ಈಗ new first page ನ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ. |
06:04 | ಈಗ ನೊಡಿ, ನಿಮ್ಮ ಡಾಕ್ಯುಮೆಂಟ್ ನಲ್ಲಿ ಮೊದಲ ಪುಟವನ್ನು ಹೊರತುಪಡಿಸಿ ಉಳಿದೆಲ್ಲಾ ಪುಟಗಳಲ್ಲೂ ಫುಟರ್ ಇದೆ. |
06:11 | ಹೀಗೆ ನೀವು ಲಭ್ಯವಿರುವ ಎಲ್ಲಾ ಶೈಲಿಗಳನ್ನು ನವೀಕರಿಸಬಹುದು ಹಾಗೂ ಅದನ್ನು ಡಾಕ್ಯುಮೆಂಟ್ ನ ಪ್ರತಿ ಪೇಜ್ ಗೂ ಅನ್ವಯಿಸಬಹುದು. |
06:19 | ಈಗ ಈ ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡೋಣ. |
06:22 | ಈಗ, ಲಿಬ್ರೆ ಆಫೀಸ್ ರೈಟರ್ ನಲ್ಲಿ ಫುಟ್ ನೋಟ್ ಮತ್ತು ಎಂಡ್ ನೋಟ್ ಗಳ ಬಗ್ಗೆ ಕಲಿಯೋಣ. |
06:27 | ಫುಟ್ ನೋಟ್ ಎಂಬುದು ಉಲ್ಲೇಖಸೂಚಿಯನ್ನು ಪುಟದ ಕೊನೆಯಲ್ಲಿ ತೋರಿಸಿದರೆ , |
06:31 | ಎಂಡ್ ನೋಟ್ ಎಂಬುದು ಅವುಗಳನ್ನು ಡಾಕ್ಯುಮೆಂಟ್ ನ ಕೊನೆಯಲ್ಲಿ ತೋರಿಸುತ್ತದೆ. |
06:35 | ಉಲ್ಲೇಖದ ಆಧಾರವು ಪ್ರಸ್ತುತ ಕರ್ಸರ್ ಇರುವಲ್ಲಿ ಸೇರಲ್ಪಡುತ್ತದೆ. |
06:40 | ನೀವು ಅಧಾರಕ್ಕಾಗಿ ಸಂಖ್ಯೆಯನ್ನು ಅಥವಾ ಚಿಹ್ನೆಯನ್ನು ಆಯ್ಕೆ ಮಾಡಬಹುದು. |
06:45 | ಈ ವಿಕಲ್ಪವನ್ನು ಉಪಯೋಗಿಸಲು ಮೊದಲು ಮೆನ್ಯು ಬಾರ್ ನಲ್ಲಿರುವ “Insert” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ. |
06:51 | ನಂತರ Footnote/Endnote ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ. |
06:55 | Numbering ಮತ್ತು Type ಎಂಬ ಶೀರ್ಷಕವಿರುವ ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
07:02 | ಇಲ್ಲಿ Automatic, Character, Footnote ಮತ್ತು Endnote ಎಂಬ ಚೆಕ್ ಬಾಕ್ಸ್ ಗಳು ಕಾಣಿಸುತ್ತವೆ. |
07:08 | Numbering ಎಂಬುದು ನೀವು ಫುಟ್ನೋಟ್ ಹಾಗೂ ಎಂಡ್ನೊಟ್ ಗಾಗಿ ಉಪಯೋಗಿಸಲಿಚ್ಛಿಸುವ ಸಂಖ್ಯಾ ಪ್ರಕಾರವನ್ನು ಆರಿಸಲು ಅನುವುಮಾಡಿಕೊಡುತ್ತದೆ. |
07:15 | Automatic ಎಂಬ ವಿಕಲ್ಪವು ತಾನಾಗಿಯೇ ನೀವು ಕೊಟ್ಟ ಫುಟ್ನೋಟ್ ಹಾಗೂ ಎಂಡ್ನೋಟ್ ಗೆ ಕ್ರಮಾನುಗತವಾದ ಸಂಖ್ಯೆಗಳನ್ನು ನೀಡುತ್ತದೆ. |
07:24 | ಈಗ ಈ ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡೋಣ. |
07:26 | ಅಟೊಮೆಟಿಕ್ ನಂಬರಿಂಗ್ ನ ಸೆಟ್ಟಿಂಗ್ ಅನ್ನು ಬದಲಾಯಿಸಲು ಮೆನ್ಯು ಬಾರ್ ನಲ್ಲಿ Tools ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ. |
07:33 | ನಂತರ Footnotes/Endnotes ಎಂಬಲ್ಲಿ ಕ್ಲಿಕ್ ಮಾಡಿ. |
07:37 | ಇಲ್ಲಿ ನೀವು AutoNumbering ಮತ್ತು Styles ಗಾಗಿ ಅಟೊಮೆಟಿಕ್ ಸೆಟ್ಟಿಂಗ್ ಅನ್ನು ಹೊಂದಿದ್ದೀರಿ. |
07:42 | ನಿಮಗೆ ಬೇಕಾದ ವಿಕಲ್ಪಗಳನ್ನು ಇಲ್ಲಿ ಆಯ್ಕೆ ಮಾಡಿ OK ಬಟನ್ ಒತ್ತಿ. |
07:49 | ಈಗ Insert Footnote/Endnote option ಗೆ ಹಿಂತಿರುಗೋಣ.. |
07:54 | Character ಎಂಬ ವಿಕಲ್ಪವು ಪ್ರಸ್ತುತ ಫುಟ್ನೊಟ್ ಗೆ ಅಕ್ಷರವನ್ನು ಅಥವಾ ಚಿಹ್ನೆಯನ್ನು ನಿಶ್ಚಯಿಸುತ್ತದೆ. |
08:00 | ಇದು ಒಂದೇ ಸಂಖ್ಯೆಯಾಗಿರಬಹುದು ಅಥವಾ ಅಕ್ಷರವಾಗಿರಬಹುದು. |
08:03 | ವಿಶಿಷ್ಟ ಅಕ್ಷರವನ್ನು ಸೇರಿಸಲು ಕ್ಯಾರೆಕ್ಟರ್ ಸ್ಥಾನದ ಕೆಳಗಿರುವ ಬಟನ್ ಅನ್ನು ಕ್ಲಿಕ್ ಮಾಡಿ. |
08:09 | ಈಗ ಇಲ್ಲಿ ನಿಮಗೆ ಬೇಕಾದ ವಿಶಿಷ್ಟ ಅಕ್ಷರವನ್ನು ಆಯ್ಕೆ ಮಾಡಿ OK ಬಟನ್ ಕ್ಲಿಕ್ ಮಾಡಿ. |
08:17 | Type ವಿಕಲ್ಪದ ಕೆಳಗೆ Footnote ಅಥವಾ Endnote ಎಂಬುದನ್ನು ಆಯ್ಕೆ ಮಾಡಿ. |
08:24 | ಇಲ್ಲಿ ನಾವು Numbering ನ ಕೆಳಗೆ Automatic ಅನ್ನು ಹಾಗೂ Type ನ ಕೆಳಗೆ Footnote ಅನ್ನು ಆಯ್ಕೆಮಾಡೋಣ. |
08:29 | ಈಗ OK ಬಟನ್ ನ ಮೇಲೆ ಕ್ಲಿಕ್ ಮಾಡಿ. |
08:32 | ಗಮನಿಸಿ, ಫುಟ್ನೋಟ್ ಎಂಬುದು ಪುಟದ ಕೆಳಭಾಗದಲ್ಲಿ ಒಂದು ಸಂಖ್ಯೆಯೊಂದಿಗೆ ಕಾಣಿಸುತ್ತದೆ. |
08:39 | ನೀವು This is the end of first page ಎಂದು ಅಲ್ಲಿ ಬರೆಯಬಹುದು. |
08:45 | ನಂತರ ಕೀಬೋರ್ಡ್ ನಲ್ಲಿ Enter ಕೀಯನ್ನು ಒತ್ತಿ. |
08:48 | ನೀವು ನಿಮಗೆ ಬೇಕಾದ ಫುಟ್ನೋಟ್ ಅನ್ನು ಪಠ್ಯದ ಜೊತೆಗೆ ಪುಟದ ಕೆಳಗಡೆ ನೋಡಬಹುದು. |
08:55 | ಹೀಗೆಯೇ ನೀವು ಡಾಕ್ಯುಮೆಂಟ್ ನ ಕೊನೆಯಲ್ಲಿ ಎಂಡ್ನೋಟ್ ಅನ್ನು ಕೂಡಾ ಸೇರಿಸಬಹುದು. |
09:00 | ಇಲ್ಲಿಗೆ ನಾವು ಈ ಪಾಠದ ಕೊನೆಗೆ ಬಂದೆವು. |
09:04 | ಸಾರಾಂಶವಾಗಿ ಹೇಳುವುದಾದರೆ, ನಾವು |
09:06 | ಡಾಕ್ಯುಮೆಂಟ್ ನಲ್ಲಿ ಹೆಡರ್ ಅನ್ನು ಹೇಗೆ ಸೇರಿಸುವುದು, |
09:09 | ಡಾಕ್ಯುಮೆಂಟ್ ನಲ್ಲಿ ಫುಟರ್ ಅನ್ನು ಹೇಗೆ ಸೇರಿಸುವುದು, |
09:12 | ಮೊದಲ ಪುಟದಿಂದ ಹೆಡರ್ ಅನ್ನು ಹೇಗೆ ತೆಗೆಯುವುದು, |
09:15 | ಡಾಕ್ಯುಮೆಂಟ್ ನಲ್ಲಿ ಫುಟ್ನೋಟ್ ಹಾಗೂ ಎಂಡ್ನೋಟ್ ಅನ್ನು ಹೇಗೆ ಸೇರಿಸುವುದು ಮುಂತಾದವುಗಳನ್ನು ಕಲಿತೆವು. |
09:19 | ಅಭ್ಯಾಸಗಳು |
09:22 | practice.odt ಎಂಬ ಫೈಲ್ ಅನ್ನು ತೆರೆಯಿರಿ. |
09:25 | ಡಾಕ್ಯುಮೆಂಟ್ ನಲ್ಲಿ ಹೆಡರ್ ಮತ್ತು ಫುಟರ್ ಅನ್ನು ಸೇರಿಸಿ. |
09:28 | ಹೆಡರ್ ನಲ್ಲಿ author ಎಂಬ ಹೆಸರನ್ನು ಸೇರಿಸಿ. |
09:31 | ಫುಟರ್ ನಲ್ಲಿ Page Count ಅನ್ನು ಸೇರಿಸಿ. |
09:35 | page ends ಎಂಬ ಹೇಳಿಕೆಯುಳ್ಳ ಎಂಡ್ನೋಟ್ ಅನ್ನು ಸೇರಿಸಿ. |
09:39 | ಡಾಕ್ಯುಮೆಂಟ್ ನ ಮೊದಲ ಪುಟದಿಂದ ಹೆಡರ್ ಅನ್ನು ತೆಗೆಯಿರಿ. |
09:43 | ಈ ಕೆಳಗಿನ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ. |
09:46 | ಇದು ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
09:49 | ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ಇದನ್ನು ಡೌನ್ಲೋಡ್ ಮಾಡಿ ನೋಡಿ. |
09:54 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪಗಣವು, |
09:56 | ಈ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
10:00 | ಯಾರು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ಕೊಡುತ್ತದೆ. |
10:04 | ಹೆಚ್ಚಿನ ವಿವರಗಳಿಗಾಗಿ contact at spoken hyphen tutorial dot org ಇಲ್ಲಿ ಸಂಪರ್ಕಿಸಿ. |
10:10 | ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಟಾಕ್ ಟು ಅ ಟೀಚರ್ ಪ್ರೋಜೆಕ್ಟ್ ನ ಭಾಗವಾಗಿದೆ. |
10:15 | ಈ ಪ್ರಕಲ್ಪವನ್ನು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
10:22 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
10:33 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |