LibreOffice-Suite-Writer/C4/Headers-Footers-and-notes/Kannada

From Script | Spoken-Tutorial
Jump to: navigation, search
Time Narration
00:00 ಲಿಬ್ರೆ ಆಫೀಸ್ ರೈಟರ್ ನಲ್ಲಿ ಹೆಡರ್, ಫೂಟರ್ ಮತ್ತು ಎಂಡ್-ನೋಟ್ ಗಳ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು,
00:09 ಡಾಕ್ಯುಮೆಂಟ್ ನಲ್ಲಿ ಹೆಡರ್ ಅನ್ನು ಹೇಗೆ ಸೇರಿಸುವುದು,
00:12 ಫೂಟರ್ ಅನ್ನು ಹೇಗೆ ಸೇರಿಸುವುದು,
00:15 ಹೆಡರ್ ಅನ್ನು ಮೊದಲ ಪುಟದಿಂದ ಹೇಗೆ ತೆಗೆಯುವುದು ಹಾಗೂ
00:19 ಡಾಕ್ಯುಮೆಂಟ್ ನಲ್ಲಿ ಫುಟ್ನೋಟ್ ಅನ್ನು ಮತ್ತು ಎಂಡ್ನೋಟ್ ಅನ್ನು ಹೇಗೆ ಸೇರಿಸುವುದು ಇತ್ಯಾದಿಗಳ ಬಗ್ಗೆ ಕಲಿಯಲಿದ್ದೇವೆ.
00:24 ಇಲ್ಲಿ ನಾವು ಉಬಂಟು ಲಿನಕ್ಸ್ 10.04 ಅನ್ನು ಮತ್ತು ಲಿಬ್ರೆ ಆಫೀಸ್ ಸೂಟ್ ನ 3.3.4 ನೇ ಆವೃತ್ತಿಯನ್ನು ಬಳಸುತ್ತಿದ್ದೇವೆ.
00:33 ಲಿಬ್ರೆ ಆಫೀಸ್ ರೈಟರ್ ನಲ್ಲಿ ನಾವು ಡಾಕ್ಯುಮೆಂಟ್ ನಲ್ಲಿ ಪುಟಗಳಿಗೆ ಸಂಖ್ಯೆಗಳನ್ನು ಸೇರಿಸಬಹುದಾಗಿದೆ.
00:38 ನಾವು ನಮ್ಮ resume.odt ಎಬ ಫೈಲ್ ಅನ್ನು ತೆರೆಯೋಣ.
00:42 ಫುಟರ್ ನಲ್ಲಿ ಪುಟ ಸಂಖ್ಯೆಯನ್ನು ಸೇರಿಸಲು ನೀವು ಸೇರಿಸಲಿಚ್ಛಿಸಿದ ಪುಟದ ಮೇಲೆ ಕ್ಲಿಕ್ ಮಾಡಬೇಕು.
00:49 ಹಾಗಾಗಿ ನಾವೀಗ ಡಾಕ್ಯುಮೆಂಟ್ ನ ಪುಟದ ಮೇಲೆ ಕ್ಲಿಕ್ ಮಾಡೋಣ.
00:51 ಈಗ ಮೆನ್ಯು ಬಾರ್ ನಲ್ಲಿರುವ Insert ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಹಾಗೂ Footer ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
00:58 ನಂತರ Default ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
01:01 ಈಗ ನಾವು ಪುಟದ ಕೆಳಗಡೆ ಫುಟರ್ ಸೇರಿರುವುದನ್ನು ನೋಡಬಹುದು.
01:06 ಅಲ್ಲಿ ಪುಟ ಸಂಖ್ಯೆಯನ್ನು ತೋರಿಸಲು ನಾವು ಮೊದಲು Insert ಆಯ್ಕೆಯನ್ನು ಕ್ಲಿಕ್ ಮಾಡೋಣ.
01:12 ನಂತರ Fields ನ ಮೇಲೆ ಕ್ಲಿಕ್ ಮಾಡೋಣ.
01:15 ನೀವಿಲ್ಲಿ ಹಲವಾರು ಫುಟರ್ ಆಯ್ಕೆಗಳನ್ನು ಕಾಣುವಿರಿ.
01:19 ಡಾಕ್ಯುಮೆಂಟ್ ನಲ್ಲಿ ಪುಟ ಸಂಖ್ಯೆಯನ್ನು ಸೇರಿಸಲು Page Number ಎಂಬುದರ ಮೇಲೆ ಕ್ಲಿಕ್ ಮಾಡಿ.
01:24 ಅನುಕ್ಷಣ ನಾವು ಫುಟರ್ ನಲ್ಲಿ 1 ಅನ್ನು ಕಾಣಬಹುದು.
01:29 ಪುಟ ಸಂಖ್ಯೆಯನ್ನು ಬೇರೆ ಬೇರೆ ಶೈಲಿಯಲ್ಲಿ ಬಳಸಲು, ಪುಟ ಸಂಖ್ಯೆಯ ಮೇಲೆ ಡಬಲ್ ಕ್ಲಿಕ್ ಮಾಡಿ.
01:35 ನಾವು Edit Fields: Document ಎಂಬ ಡಯಲಾಗ್ ಬಾಕ್ಸ್ ಅನ್ನು ನೋಡುತ್ತೇವೆ.
01:41 Format ಆಯ್ಕೆಯ ಕೆಳಗೆ A B C ಎಂದು ಅಪ್ಪರ್ ಕೇಸ್ನಲ್ಲಿ, a b c ಎಂದು ಲೋವರ್ ಕೆಸ್ ನಲ್ಲಿ, Arabic 1 2 3” ಎಂಬೀ ಮುಂತಾದ ಹಲವಾರು ಶೈಲಿ ಗಳನ್ನು ನೊಡಬಹುದು.
01:53 ಇಲ್ಲಿ ನೀವು ನೀವಿಚ್ಛಿಸಿದ ಸಂಖ್ಯಾ ಶೈಲಿಯನ್ನು ಆಯ್ಕೆಮಾಡಬಹುದು.
01:58 ನಾವು ಇಲ್ಲಿ Roman i,ii,iii ಎಂಬ ಆಯ್ಕೆಯನ್ನು ಆರಿಸಿ OK ಬಟನ್ ಮೇಲೆ ಕ್ಲಿಕ್ ಮಾಡೋಣ.
02:05 ಈಗ ನೋಡಿ, ಪುಟದಲ್ಲಿನ ಸಂಖ್ಯೆಯ ಶೈಲಿಯು ಬದಲಾಗಿದೆ.
02:09 ಹೀಗೆಯೇ, ನಾವು ಡಾಕ್ಯುಮೆಂಟ್ ನಲ್ಲಿ ಹೆಡರ್ ಅನ್ನು ಸೇರಿಸಬಹುದು.
02:13 ಮೊದಲಿಗೆ ನೀವು ಎಲ್ಲಿ ಹೆಡರ್ ಅನ್ನು ಸೇರಿಸಲಿಚ್ಛಿಸುವಿರೋ ಆ ಪುಟದ ಮೇಲೆ ಕ್ಲಿಕ್ ಮಾಡಿ.
02:17 ಈಗ Insert ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ Header ಆಯ್ಕೆಯನ್ನು ಕ್ಲಿಕ್ ಮಾಡಿ.
02:23 ಅಲ್ಲಿ Default ಆಯ್ಕೆಯನ್ನು ಕ್ಲಿಕ್ ಮಾಡಿ.
02:26 ನೀವು ಪುಟದ ಮೇಲ್ಭಾಗದಲ್ಲಿ ಹೆಡರ್ ಸೇರಿರುವುದನ್ನು ನೋಡಬಹುದು.
02:30 ಹೆಡರ್ ನಲ್ಲಿ ದಿನಾಂಕವನ್ನು ಸೇರಿಸಲು ಕ್ರಮವಾಗಿ “Insert” ನ ಮೇಲೆ ಹಾಗೂ ನಂತರ “Fields” ನ ಮೇಲೆ ಕ್ಲಿಕ್ ಮಾಡಿ.
02:37 ಅಲ್ಲಿ ಕಾಣುವ ಸೈಡ್ ಮೆನ್ಯುವಿನಲ್ಲಿ “Date” ನ ಮೇಲೆ ಕ್ಲಿಕ್ ಮಾಡಿ.
02:42 ಈಗ ದಿನಾಂಕವು ಹೆಡರ್ ನಲ್ಲಿ ಕಾಣಿಸುತ್ತಿದೆ.
02:45 ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡುವುದರಿಂದ ನಾವು ದಿನಾಂಕದ ಪ್ರದರ್ಶನಕ್ಕಾಗಿ ಇರುವ ಎಲ್ಲಾ ಸಂಭವನೀಯ ಶೈಲಿಗಳನ್ನು ನೋಡಬಹುದು.
02:51 ಇಲ್ಲಿ ನಾವು 31 Dec, 1999 ಎಂಬುದನ್ನು ಆಯ್ಕೆಮಾಡಿ OK ಮೇಲೆ ಕ್ಲಿಕ್ ಮಾಡಿ.
02:58 ಈಗ ಮೆನ್ಯುಬಾರ್ ನಲ್ಲಿ “File” ಎಂಬುದರ ಮೇಲೆ ಕ್ಲಿಕ್ ಮಾಡಿ ಹಾಗೂ ಅಲ್ಲಿ “Page preview” ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
03:05 ಈಗ ಡಾಕ್ಯುಮೆಂಟ್ ಅನ್ನು 50 ಪ್ರತಿಶತದಷ್ಟು ದೊಡ್ಡದಾಗಿಸೋಣ.
03:09 ಈಗ ನೋಡಿ, ಪೇಜ್ ನ ಮೇಲ್ಭಾಗದಲ್ಲಿ ದಿನಾಂಕ ಹಾಗೂ ಕೆಳಭಾಗದಲ್ಲಿ ಪುಟಸಂಖ್ಯೆಯು ಕಾಣುತ್ತಿದೆ.
03:15 ಈ ಪ್ರಕಾರವಾಗಿ ಇದು ಡಾಕ್ಯುಮೆಂಟ್ ನ ಎಲ್ಲಾ ಪುಟಗಳಲ್ಲೂ ಅನ್ವಯಗೊಳ್ಳುತ್ತದೆ.
03:19 ಮೂಲ ಡಾಕ್ಯುಮೆಂಟ್ ಗೆ ಹಿಂತಿರುಗಲು “Close Preview” ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.
03:25 ನಾವು ಹೆಡರ್ ಅಥವಾ ಫುಟರ್ ನಲ್ಲಿರುವ ಟೆಕ್ಸ್ಟ್ ನ ಸ್ಪೇಸಿಂಗ್ ಅನ್ನು ಕೂಡಾ ಸರಿಪಡಿಸಬಹುದು.
03:30 ಅಥವಾ ನಾವು ಹೆಡರ್ ಮತ್ತು ಫುಟರ್ ಗೆ ಅಂಚನ್ನು ಕೂಡಾ ಸೇರಿಸಬಹುದು.
03:34 ಮೆನ್ಯುಬಾರ್ ನಲ್ಲಿ “Format” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ ನಂತರ “Page” ಎಂಬಲ್ಲಿ ಕ್ಲಿಕ್ ಮಾಡಿ.
03:40 ಡಯಲಾಗ್ ಬಾಕ್ಸ್ ನಲ್ಲಿ “Footer” ಎಂಬ ಟ್ಯಾಬ್ ಅನ್ನು ಆಯ್ಕೆ ಮಾಡಿ.
03:43 Left margin ನ ವ್ಯಾಲ್ಯೂವನ್ನು 1 ಸೆಂಟಿಮೀಟರ್ ಗೆ ಬದಲಾಯಿಸುವುದರ ಮೂಲಕ ಸ್ಪೇಸಿಂಗ್ ಅನ್ನು ಸೆಟ್ ಮಾಡಿ.
03:52 ಫುಟರ್ ಗೆ ಅಂಚನ್ನು ಅಥವಾ ಛಾಯೆಯನ್ನು ಸೇರಿಸಲು “More” ವಿಕಲ್ಪದ ಮೇಲೆ ಕ್ಲಿಕ್ ಮಾಡಿ ನಂತರ ಫುಟರ್ ಗೆ ನೀಡಾಬೇಕಾದ ವಿಕಲ್ಪದ ವ್ಯಾಲ್ಯೂವನ್ನು ಸೆಟ್ ಮಾಡಿ.
04:03 ಉದಾಹರಣೆಗಾಗಿ, ಫುಟರ್ ಗೆ ಛಾಯಾಶೈಲಿಯನ್ನು ಸೇರಿಸಲು ನಾವು “Cast Shadow to Top Right” ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡೋಣ.
04:10 ಇದು Shadow style ಎಂಬ ವಿಕಲ್ಪದ Position ಎಂಬ ಟ್ಯಾಬ್ ನ ಕೆಳಗಿರುವ ವಿವಿಧ ಐಕಾನ್ ಗಳಲ್ಲಿ ಒಂದಾಗಿದೆ.
04:18 ನೀವಿಲ್ಲಿ ಅಂಚಿನ ಮತ್ತು ಛಾಯೆಯ ಬಣ್ಣವನ್ನು ಇಲ್ಲಿ ಆರಿಸಬಹುದು.
04:23 ಲಭ್ಯವಿರುವ ಪ್ರತಿಯೊಂದು ವಿಕಲ್ಪಗಳ ಬಗ್ಗೂ ತಿಳಿಯಲು ಈ ಡಯಲಾಗ್ ಬಾಕ್ಸ್ ಅನ್ನು ಅನ್ವೇಷಿಸಿ.
04:28 ಈಗ “OK” ಮೇಲೆ ಕ್ಲಿಕ್ ಮಾಡಿ.
04:30 ಪುನಃ OK ಕ್ಲಿಕ್ ಮಾಡಿ ಹಾಗೂ ಈಗ ನೋಡಿ, ಫುಟರ್ ನಲ್ಲಿ ಪರಿಣಾಮ ಮೂಡಿದೆ.
04:36 ಮುಂದುವರೆಯುವ ಮುನ್ನ ನಮ್ಮ ಡಾಕ್ಯುಮೆಂಟ್ ಗೆ ಮತ್ತೊಂದು ಪುಟವನ್ನು ಸೇರಿಸೋಣ.
04:41 ಸೇರಿಸಲು, Insert ಹಾಗೂ ಅಲ್ಲಿ Manual Break ಅನ್ನು ಕ್ಲಿಕ್ ಮಾಡಿ ಅಲ್ಲಿ Page break ವಿಕಲ್ಪವನ್ನು ಆಯ್ಕೆಮಾಡಿ.
04:47 ನಂತರ “OK” ಕ್ಲಿಕ್ ಮಾಡಿ.
04:50 ಗಮನಿಸಿ ಪುಟ ಸಂಖ್ಯೆಯು 2 ಎಂದು ತೋರಿಸುತ್ತಿದೆ.
04:54 ನಿಮಗೆ ನಿಮ್ಮ ಡಾಕ್ಯುಮೆಂಟ್ ನ ಮೊದಲ ಪುಟಕ್ಕೆ ಫುಟರ್ ಬೇಡವೆಂದಾದಲ್ಲಿ ಕರ್ಸರ್ ಅನ್ನು ಮೊದಲ ಪುಟದಲ್ಲಿಡಿ.
05:01 ಹಾಗೂ ಮೆನ್ಯುಬಾರ್ ನಲ್ಲಿ “Format” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Styles and Formatting” ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
05:08 ಈಗ ಕಾಣುವ ಡಯಲಾಗ್ ಬಾಕ್ಸ್ ನಲ್ಲಿ ಮೇಲ್ಗಡೆ Page Styles ಎಂಬ ಹೆಸರಿನ ನಾಲ್ಕನೇ ಐಕಾನ್ ಅನ್ನು ಕ್ಲಿಕ್ ಮಾಡಿ.
05:16 ನಂತರ First Page ವಿಕಲ್ಪದ ಮೇಲೆ ರೈಟ್ ಕ್ಲಿಕ್ ಮಾಡಿ.
05:20 ಅಲ್ಲಿ New ಎಂಬುದರ ಮೇಲೆ ಕ್ಲಿಕ್ ಮಾಡಿ ಹಾಗೂ Organiser ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
05:25 Name ಎಂಬಲ್ಲಿ ನೀವು ನೀವಿಚ್ಛಿಸಿದ ಶೈಲಿಯ ಹೆಸರನ್ನು ಟೈಪ್ ಮಾಡಿ.
04:30 ನಾವಿಲ್ಲಿnew first page ಎಂದು ಟೈಪ್ ಮಾಡೋಣ.
05:35 Next Style ಅನ್ನು ಡೀಫಾಲ್ಟ್ ಆಗಿಯೇ ಇಡಿ.
05:38 ಈಗ ಡಯಲಾಗ್ ಬಾಕ್ಸ್ ನಲ್ಲಿ Footer ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
05:42 ಅಲ್ಲಿರುವ Footer on ಎಂಬ ಚೆಕ್ಬಾಕ್ಸ್ ಡೀಫಾಲ್ಟ್ ಆಗಿ ಅನ್ ಚೆಕ್ ಆಗದಿದ್ದಲ್ಲಿ ಅದನ್ನು ಅನ್ ಚೆಕ್ ಮಾಡಿ.
05:48 ಕೊನೆಯಲ್ಲಿ, OK ಬಟನ್ ಕ್ಲಿಕ್ ಮಾಡಿ.
05:51 ನಾವೀಗ Styles and Formatting ಎಂಬ ಡಯಲಾಗ್ ಬಾಕ್ಸ್ ಗೆ ಹಿಂತಿರುಗಿದ್ದೇವೆ.
05:55 ಗಮನಿಸಿ, ಪೇಜ್ ಸ್ಟೈಲ್ ವಿಕಲ್ಪದ ಕೆಳಗೆ new first page ಎಂಬುದು ಕಾಣುತ್ತಿದೆ.
06:01 ಈಗ new first page ನ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.
06:04 ಈಗ ನೊಡಿ, ನಿಮ್ಮ ಡಾಕ್ಯುಮೆಂಟ್ ನಲ್ಲಿ ಮೊದಲ ಪುಟವನ್ನು ಹೊರತುಪಡಿಸಿ ಉಳಿದೆಲ್ಲಾ ಪುಟಗಳಲ್ಲೂ ಫುಟರ್ ಇದೆ.
06:11 ಹೀಗೆ ನೀವು ಲಭ್ಯವಿರುವ ಎಲ್ಲಾ ಶೈಲಿಗಳನ್ನು ನವೀಕರಿಸಬಹುದು ಹಾಗೂ ಅದನ್ನು ಡಾಕ್ಯುಮೆಂಟ್ ನ ಪ್ರತಿ ಪೇಜ್ ಗೂ ಅನ್ವಯಿಸಬಹುದು.
06:19 ಈಗ ಈ ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡೋಣ.
06:22 ಈಗ, ಲಿಬ್ರೆ ಆಫೀಸ್ ರೈಟರ್ ನಲ್ಲಿ ಫುಟ್ ನೋಟ್ ಮತ್ತು ಎಂಡ್ ನೋಟ್ ಗಳ ಬಗ್ಗೆ ಕಲಿಯೋಣ.
06:27 ಫುಟ್ ನೋಟ್ ಎಂಬುದು ಉಲ್ಲೇಖಸೂಚಿಯನ್ನು ಪುಟದ ಕೊನೆಯಲ್ಲಿ ತೋರಿಸಿದರೆ ,
06:31 ಎಂಡ್ ನೋಟ್ ಎಂಬುದು ಅವುಗಳನ್ನು ಡಾಕ್ಯುಮೆಂಟ್ ನ ಕೊನೆಯಲ್ಲಿ ತೋರಿಸುತ್ತದೆ.
06:35 ಉಲ್ಲೇಖದ ಆಧಾರವು ಪ್ರಸ್ತುತ ಕರ್ಸರ್ ಇರುವಲ್ಲಿ ಸೇರಲ್ಪಡುತ್ತದೆ.
06:40 ನೀವು ಅಧಾರಕ್ಕಾಗಿ ಸಂಖ್ಯೆಯನ್ನು ಅಥವಾ ಚಿಹ್ನೆಯನ್ನು ಆಯ್ಕೆ ಮಾಡಬಹುದು.
06:45 ಈ ವಿಕಲ್ಪವನ್ನು ಉಪಯೋಗಿಸಲು ಮೊದಲು ಮೆನ್ಯು ಬಾರ್ ನಲ್ಲಿರುವ “Insert” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
06:51 ನಂತರ Footnote/Endnote ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
06:55 Numbering ಮತ್ತು Type ಎಂಬ ಶೀರ್ಷಕವಿರುವ ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
07:02 ಇಲ್ಲಿ Automatic, Character, Footnote ಮತ್ತು Endnote ಎಂಬ ಚೆಕ್ ಬಾಕ್ಸ್ ಗಳು ಕಾಣಿಸುತ್ತವೆ.
07:08 Numbering ಎಂಬುದು ನೀವು ಫುಟ್ನೋಟ್ ಹಾಗೂ ಎಂಡ್ನೊಟ್ ಗಾಗಿ ಉಪಯೋಗಿಸಲಿಚ್ಛಿಸುವ ಸಂಖ್ಯಾ ಪ್ರಕಾರವನ್ನು ಆರಿಸಲು ಅನುವುಮಾಡಿಕೊಡುತ್ತದೆ.
07:15 Automatic ಎಂಬ ವಿಕಲ್ಪವು ತಾನಾಗಿಯೇ ನೀವು ಕೊಟ್ಟ ಫುಟ್ನೋಟ್ ಹಾಗೂ ಎಂಡ್ನೋಟ್ ಗೆ ಕ್ರಮಾನುಗತವಾದ ಸಂಖ್ಯೆಗಳನ್ನು ನೀಡುತ್ತದೆ.
07:24 ಈಗ ಈ ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡೋಣ.
07:26 ಅಟೊಮೆಟಿಕ್ ನಂಬರಿಂಗ್ ನ ಸೆಟ್ಟಿಂಗ್ ಅನ್ನು ಬದಲಾಯಿಸಲು ಮೆನ್ಯು ಬಾರ್ ನಲ್ಲಿ Tools ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ.
07:33 ನಂತರ Footnotes/Endnotes ಎಂಬಲ್ಲಿ ಕ್ಲಿಕ್ ಮಾಡಿ.
07:37 ಇಲ್ಲಿ ನೀವು AutoNumbering ಮತ್ತು Styles ಗಾಗಿ ಅಟೊಮೆಟಿಕ್ ಸೆಟ್ಟಿಂಗ್ ಅನ್ನು ಹೊಂದಿದ್ದೀರಿ.
07:42 ನಿಮಗೆ ಬೇಕಾದ ವಿಕಲ್ಪಗಳನ್ನು ಇಲ್ಲಿ ಆಯ್ಕೆ ಮಾಡಿ OK ಬಟನ್ ಒತ್ತಿ.
07:49 ಈಗ Insert Footnote/Endnote option ಗೆ ಹಿಂತಿರುಗೋಣ..
07:54 Character ಎಂಬ ವಿಕಲ್ಪವು ಪ್ರಸ್ತುತ ಫುಟ್ನೊಟ್ ಗೆ ಅಕ್ಷರವನ್ನು ಅಥವಾ ಚಿಹ್ನೆಯನ್ನು ನಿಶ್ಚಯಿಸುತ್ತದೆ.
08:00 ಇದು ಒಂದೇ ಸಂಖ್ಯೆಯಾಗಿರಬಹುದು ಅಥವಾ ಅಕ್ಷರವಾಗಿರಬಹುದು.
08:03 ವಿಶಿಷ್ಟ ಅಕ್ಷರವನ್ನು ಸೇರಿಸಲು ಕ್ಯಾರೆಕ್ಟರ್ ಸ್ಥಾನದ ಕೆಳಗಿರುವ ಬಟನ್ ಅನ್ನು ಕ್ಲಿಕ್ ಮಾಡಿ.
08:09 ಈಗ ಇಲ್ಲಿ ನಿಮಗೆ ಬೇಕಾದ ವಿಶಿಷ್ಟ ಅಕ್ಷರವನ್ನು ಆಯ್ಕೆ ಮಾಡಿ OK ಬಟನ್ ಕ್ಲಿಕ್ ಮಾಡಿ.
08:17 Type ವಿಕಲ್ಪದ ಕೆಳಗೆ Footnote ಅಥವಾ Endnote ಎಂಬುದನ್ನು ಆಯ್ಕೆ ಮಾಡಿ.
08:24 ಇಲ್ಲಿ ನಾವು Numbering ನ ಕೆಳಗೆ Automatic ಅನ್ನು ಹಾಗೂ Type ನ ಕೆಳಗೆ Footnote ಅನ್ನು ಆಯ್ಕೆಮಾಡೋಣ.
08:29 ಈಗ OK ಬಟನ್ ನ ಮೇಲೆ ಕ್ಲಿಕ್ ಮಾಡಿ.
08:32 ಗಮನಿಸಿ, ಫುಟ್ನೋಟ್ ಎಂಬುದು ಪುಟದ ಕೆಳಭಾಗದಲ್ಲಿ ಒಂದು ಸಂಖ್ಯೆಯೊಂದಿಗೆ ಕಾಣಿಸುತ್ತದೆ.
08:39 ನೀವು This is the end of first page ಎಂದು ಅಲ್ಲಿ ಬರೆಯಬಹುದು.
08:45 ನಂತರ ಕೀಬೋರ್ಡ್ ನಲ್ಲಿ Enter ಕೀಯನ್ನು ಒತ್ತಿ.
08:48 ನೀವು ನಿಮಗೆ ಬೇಕಾದ ಫುಟ್ನೋಟ್ ಅನ್ನು ಪಠ್ಯದ ಜೊತೆಗೆ ಪುಟದ ಕೆಳಗಡೆ ನೋಡಬಹುದು.
08:55 ಹೀಗೆಯೇ ನೀವು ಡಾಕ್ಯುಮೆಂಟ್ ನ ಕೊನೆಯಲ್ಲಿ ಎಂಡ್ನೋಟ್ ಅನ್ನು ಕೂಡಾ ಸೇರಿಸಬಹುದು.
09:00 ಇಲ್ಲಿಗೆ ನಾವು ಈ ಪಾಠದ ಕೊನೆಗೆ ಬಂದೆವು.
09:04 ಸಾರಾಂಶವಾಗಿ ಹೇಳುವುದಾದರೆ, ನಾವು
09:06 ಡಾಕ್ಯುಮೆಂಟ್ ನಲ್ಲಿ ಹೆಡರ್ ಅನ್ನು ಹೇಗೆ ಸೇರಿಸುವುದು,
09:09 ಡಾಕ್ಯುಮೆಂಟ್ ನಲ್ಲಿ ಫುಟರ್ ಅನ್ನು ಹೇಗೆ ಸೇರಿಸುವುದು,
09:12 ಮೊದಲ ಪುಟದಿಂದ ಹೆಡರ್ ಅನ್ನು ಹೇಗೆ ತೆಗೆಯುವುದು,
09:15 ಡಾಕ್ಯುಮೆಂಟ್ ನಲ್ಲಿ ಫುಟ್ನೋಟ್ ಹಾಗೂ ಎಂಡ್ನೋಟ್ ಅನ್ನು ಹೇಗೆ ಸೇರಿಸುವುದು ಮುಂತಾದವುಗಳನ್ನು ಕಲಿತೆವು.
09:19 ಅಭ್ಯಾಸಗಳು
09:22 practice.odt ಎಂಬ ಫೈಲ್ ಅನ್ನು ತೆರೆಯಿರಿ.
09:25 ಡಾಕ್ಯುಮೆಂಟ್ ನಲ್ಲಿ ಹೆಡರ್ ಮತ್ತು ಫುಟರ್ ಅನ್ನು ಸೇರಿಸಿ.
09:28 ಹೆಡರ್ ನಲ್ಲಿ author ಎಂಬ ಹೆಸರನ್ನು ಸೇರಿಸಿ.
09:31 ಫುಟರ್ ನಲ್ಲಿ Page Count ಅನ್ನು ಸೇರಿಸಿ.
09:35 page ends ಎಂಬ ಹೇಳಿಕೆಯುಳ್ಳ ಎಂಡ್ನೋಟ್ ಅನ್ನು ಸೇರಿಸಿ.
09:39 ಡಾಕ್ಯುಮೆಂಟ್ ನ ಮೊದಲ ಪುಟದಿಂದ ಹೆಡರ್ ಅನ್ನು ತೆಗೆಯಿರಿ.
09:43 ಈ ಕೆಳಗಿನ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ.
09:46 ಇದು ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವನ್ನು ಹೇಳುತ್ತದೆ.
09:49 ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ಇದನ್ನು ಡೌನ್ಲೋಡ್ ಮಾಡಿ ನೋಡಿ.
09:54 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪಗಣವು,
09:56 ಈ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
10:00 ಯಾರು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ಕೊಡುತ್ತದೆ.
10:04 ಹೆಚ್ಚಿನ ವಿವರಗಳಿಗಾಗಿ contact at spoken hyphen tutorial dot org ಇಲ್ಲಿ ಸಂಪರ್ಕಿಸಿ.
10:10 ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ಟಾಕ್ ಟು ಅ ಟೀಚರ್ ಪ್ರೋಜೆಕ್ಟ್ ನ ಭಾಗವಾಗಿದೆ.
10:15 ಈ ಪ್ರಕಲ್ಪವನ್ನು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
10:22 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
10:33 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal