Difference between revisions of "Health-and-Nutrition/C2/Non-vegetarian-recipes-for-adolescents/Kannada"
From Script | Spoken-Tutorial
Sandhya.np14 (Talk | contribs) (Created page with "{|border=1 |<center>Time</center> |<center>Narration</center> |- | 00:01 | '''Non-vegetarian recipes for adolescents''' ಎಂಬ ಸ್ಪೋಕನ್-ಟ್ಯುಟೋರ...") |
|||
Line 398: | Line 398: | ||
| ನಮ್ಮ ಆಹಾರದಲ್ಲಿ ವಿಭಿನ್ನ ಮಾಂಸಾಹಾರಿ ಮತ್ತು ಸಸ್ಯಾಹಾರಿ ಆಹಾರಗಳ ಬಳಕೆಯನ್ನು ಮಾಡಬಹುದು. | | ನಮ್ಮ ಆಹಾರದಲ್ಲಿ ವಿಭಿನ್ನ ಮಾಂಸಾಹಾರಿ ಮತ್ತು ಸಸ್ಯಾಹಾರಿ ಆಹಾರಗಳ ಬಳಕೆಯನ್ನು ಮಾಡಬಹುದು. | ||
|- | |- | ||
− | | 08: | + | | 08:47 |
|ಇಲ್ಲಿಗೆ ನಾವು ಈ ಟ್ಯುಟೋರಿಯಲ್ ಕೊನೆಗೆ ಬಂದಿದ್ದೇವೆ. | |ಇಲ್ಲಿಗೆ ನಾವು ಈ ಟ್ಯುಟೋರಿಯಲ್ ಕೊನೆಗೆ ಬಂದಿದ್ದೇವೆ. | ||
− | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀಮತಿ ನಯನಾ ಭಟ್. | + | |
+ | |- | ||
+ | | 08:50 | ||
+ | | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀಮತಿ ನಯನಾ ಭಟ್. | ||
+ | |||
ಧನ್ಯವಾದಗಳು. | ಧನ್ಯವಾದಗಳು. | ||
+ | |||
+ | |- | ||
|} | |} |
Latest revision as of 10:32, 27 August 2020
00:01 | Non-vegetarian recipes for adolescents ಎಂಬ ಸ್ಪೋಕನ್-ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು:
ಹದಿಹರೆಯ ಎಂದರೇನು? |
00:10 | ಹದಿಹರೆಯದ ಸಮಯದಲ್ಲಿ ಪೌಷ್ಠಿಕಾಂಶದ ಅವಶ್ಯಕತೆಗಳು ಮತ್ತು |
00:13 | ಕೆಳಗೆ ಹೇಳಿದ ಕೆಲವು ಮಾಂಸಾಹಾರಿ ಪಾಕವಿಧಾನಗಳ ಬಗ್ಗೆ ಕಲಿಯುತ್ತೇವೆ. |
00:16 | ಮೊಟ್ಟೆ ಹಾಗೂ ಪಾಲಕ ಭುರ್ಜಿ, |
00:18 | ಮಟನ್ ಲೆಗ್ ಸೂಪ್, |
00:20 | ಮಟನ್ ಲಿವರ್ ಮತ್ತು ಲಂಗ್ಸ್ ಕರಿ, |
00:22 | ಸಬ್ಬಸಿಗೆ ಎಲೆಗಳೊಂದಿಗೆ ಕೊಚ್ಚಿದ ಚಿಕನ್ ಮತ್ತು
ಮೀನಿನ ಕರಿ. |
00:26 | ಹದಿಹರೆಯ ಎಂದರೇನು? ಇದನ್ನು ಮೊದಲು ತಿಳಿದುಕೊಳ್ಳೋಣ. |
00:30 | ಇದು ಬಾಲ್ಯದಿಂದ ಪ್ರೌಢಾವಸ್ಥೆಗೆ ಪರಿವರ್ತನೆಯಾಗುವ ಅವಧಿಯಾಗಿದೆ. |
00:33 | 10 ರಿಂದ 19 ವರ್ಷ ವಯಸ್ಸಿನವರನ್ನು ಹದಿಹರೆಯದವರು ಎನ್ನುತ್ತಾರೆ. |
00:39 | ಈ ಅವಧಿಯಲ್ಲಿ ಶಕ್ತಿಯ ಮತ್ತು ಪ್ರೋಟೀನ್ ಗಳ ಅವಶ್ಯಕತೆ ಹೆಚ್ಚಾಗಿರುತ್ತದೆ. |
00:44 | ಏಕೆಂದರೆ, ಈ ಅವಧಿಯಲ್ಲಿ ಭೌತಿಕ, ಲೈಂಗಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಬದಲಾವಣೆಗಳಾಗುತ್ತವೆ. |
00:53 | ಹದಿಹರೆಯದ ಹೆಣ್ಣಿಗೆ, ದಿನದಲ್ಲಿ 2000-2400 ಕ್ಯಾಲೋರಿಗಳು ಮತ್ತು 40-55 ಗ್ರಾಂ ಪ್ರೋಟೀನ್ ನ ಅಗತ್ಯವಿದೆ. |
01:02 | ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು, ಫೋಲೇಟ್ ಮತ್ತು ವಿಟಾಮಿನ್ B-12 ಗಳಂತಹ |
01:07 | ಇತರ ಮೈಕ್ರೋ ಪೋಷಕಾಂಶಗಳು ಸಹ ಸಾಕಷ್ಟು ಪ್ರಮಾಣದಲ್ಲಿ ಅವಶ್ಯವಾಗಿವೆ. |
01:15 | ಹದಿಹರೆಯದಲ್ಲಿ ಪೌಷ್ಠಿಕಾಂಶದ ಮಹತ್ವದ ಬಗ್ಗೆ ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ. |
01:22 | ಹದಿಹರೆಯದವರಿಗಾಗಿ ಈಗ ಕೆಲವು ಪಾಕವಿಧಾನಗಳನ್ನು ನಾವು ನೋಡೋಣ. |
01:29 | ಮೊದಲನೆಯದು ಮೊಟ್ಟೆ ಹಾಗೂ ಪಾಲಕ ಭುರ್ಜಿ ಆಗಿದೆ. |
01:32 | ಇದಕ್ಕಾಗಿ ನಿಮಗೆ:
1 ಮೊಟ್ಟೆ, ½ ಕಪ್ ಪಾಲಕ್ ಸೊಪ್ಪು, 1 ಸಣ್ಣ ಗಾತ್ರದ ಈರುಳ್ಳಿ, 1 ಹಸಿಮೆಣಸಿನಕಾಯಿ, |
01:38 | ½ ಟೀಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, |
01:41 | ½ ಟೀಚಮಚ ಅರಿಶಿನ, |
01:43 | ರುಚಿಗೆ ತಕ್ಕಷ್ಟು ಉಪ್ಪು,
2 ಟೀಚಮಚ ಎಣ್ಣೆ ಅಥವಾ ಬೆಣ್ಣೆ ಇವುಗಳು ಬೇಕು. |
01:47 | ತಯಾರಿಸುವ ವಿಧಾನ:
ಬಾಣಲೆಯಲ್ಲಿ ಎಣ್ಣೆ ಅಥವಾ ಬೆಣ್ಣೆಯನ್ನು ಬಿಸಿ ಮಾಡಿ. |
01:51 | ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ ಮತ್ತು ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ. |
01:55 | ಇದನ್ನು 2 ನಿಮಿಷಗಳ ಕಾಲ ಹುರಿಯಿರಿ. |
01:58 | ಈಗ ಅರಿಶಿನ ಪುಡಿ ಮತ್ತು ಹೆಚ್ಚಿದ ಪಾಲಕ ಸೇರಿಸಿ. |
02:02 | ಪ್ಯಾನ್ ನಲ್ಲಿ ಮೊಟ್ಟೆಯನ್ನು ಒಡೆಯಿರಿ. |
02:06 | ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. |
02:08 | ಈಗ, ಮೊಟ್ಟೆಯು ಮಧ್ಯಮ ಉರಿಯಲ್ಲಿ 2 ನಿಮಿಷ ಬೇಯಲು ಬಿಡಿ. |
02:12 | ಈಗ ಮೊಟ್ಟೆ ಹಾಗೂ ಪಾಲಕ ಭುರ್ಜಿ ಸಿದ್ಧವಾಗಿದೆ. |
02:15 | ಮುಂದಿನದು ಮಟನ್ ಲೆಗ್ ಸೂಪ್: |
02:17 | ಇದಕ್ಕಾಗಿ ನಿಮಗೆ:
200 ಗ್ರಾಂ ಅಥವಾ 1 ಸಂಪೂರ್ಣ ಮಟನ್ ಲೆಗ್, |
02:22 | ½ ಮಧ್ಯಮ ಗಾತ್ರದ ಈರುಳ್ಳಿ, |
02:24 | ½ ಟೀಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, |
02:26 | ½ ಟೀಚಮಚ ಮಿಶ್ರ ಮಸಾಲೆಗಳು, |
02:29 | 1 ಟೀಚಮಚ ಅರಿಶಿನ ಪುಡಿ, |
02:31 | ರುಚಿಗೆ ತಕ್ಕಷ್ಟು ಉಪ್ಪು,
1 ಟೀಚಮಚ ಕಡಲೆ ಹಿಟ್ಟು ಇವುಗಳು ಬೇಕು. |
02:35 | ಮಟನ್ ಲೆಗ್ ತುಂಡುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. |
02:38 | ಮಟನ್ ಲೆಗ್ ತುಂಡುಗಳ ಮೇಲೆ ಅರ್ಧ ಟೀಸ್ಪೂನ್ ಅರಿಶಿನ ಪುಡಿಯನ್ನು ಹಚ್ಚಿ. |
02:42 | ಇದನ್ನು ಬದಿಯಲ್ಲಿರಿಸಿ. 15-20 ನಿಮಿಷಗಳ ನಂತರ ಮತ್ತೆ ತೊಳೆಯಿರಿ. |
02:47 | ಇದು ಕಾಲಿನ ತುಂಡುಗಳಿಂದ ವಾಸನೆಯನ್ನು ತೆಗೆದುಹಾಕುತ್ತದೆ. |
02:50 | ಪ್ರೆಶರ್ ಕುಕ್ಕರ್‌ನಲ್ಲಿ ಮಟನ್ ಲೆಗ್ ತುಂಡುಗಳು ಮತ್ತು ಕತ್ತರಿಸಿದ ಈರುಳ್ಳಿಯನ್ನು ಹಾಕಿ. |
02:55 | ಇಡೀ ಮಸಾಲೆಗಳು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ. |
03:00 | 1 ಕಪ್ ನೀರು ಸೇರಿಸಿ ಮತ್ತು ಪ್ರೆಶರ್ ಕುಕ್ಕರ್ ಅನ್ನು ಮುಚ್ಚಿ. |
03:03 | ಒಂದು ಶಿಳ್ಳೆ ಆಗುವವರೆಗೆ ಅದನ್ನು ಅಧಿಕ ಉರಿಯಲ್ಲಿ ಬೇಯಿಸಿ. |
03:07 | ನಂತರ ಉರಿಯನ್ನು ಕಡಿಮೆ ಮಾಡಿ ಮತ್ತೆ 15-20 ನಿಮಿಷ ಬೇಯಿಸಿ. |
03:11 | ಕುಕ್ಕರ್ ನ ಒತ್ತಡ ತಾನಾಗಿಯೆ ಕಡಿಮೆಯಾಗಲು ಬಿಡಿ. ನಂತರ ಅದನ್ನು ತೆರೆಯಿರಿ. |
03:16 | ಕಡಲೆಹಿಟ್ಟನ್ನು ಎರಡು ಚಮಚ ನೀರಿನೊಂದಿಗೆ ಬೆರೆಸಿ ತೆಳುವಾದ ಪೇಸ್ಟ್ ತಯಾರಿಸಿ. |
03:25 | ಈ ಪೇಸ್ಟ್ ಅನ್ನು ಸೂಪ್ ಗೆ ಸೇರಿಸಿ ಚೆನ್ನಾಗಿ ಕಲಕಿ. |
03:28 | ಸೂಪ್ ಕುದಿಯಲು ಆರಂಭಿಸಿದ ನಂತರ, 2 ನಿಮಿಷ ಇದನ್ನು ಮಂದ ಉರಿಯಲ್ಲಿ ಇರಿಸಿ. |
03:32 | ಮಟನ್ ಲೆಗ್ ಸೂಪ್ ಸಿದ್ಧವಾಗಿದೆ. |
03:35 | ಮುಂದಿನ ಪಾಕವಿಧಾನ ಮಟನ್ ಲಿವರ್ ಮತ್ತು ಲಂಗ್ಸ್ ಕರಿ ಆಗಿದೆ. |
03:38 | ಇದಕ್ಕಾಗಿ ನಿಮಗೆ:
100 ಗ್ರಾಂ ಮಟನ್ ಲಿವರ್ ಮತ್ತು ಲಂಗ್ಸ್, |
03:41 | 1 ಮಧ್ಯಮ ಗಾತ್ರದ ಈರುಳ್ಳಿ,
1 ಮಧ್ಯಮ ಗಾತ್ರದ ಟೊಮ್ಯಾಟೊ, |
03:45 | 1 ಟೀಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್,
1 ಟೇಬಲ್ ಚಮಚ ಮೊಸರು, |
03:50 | ¼ ಟೀಚಮಚ ಅರಿಶಿನ ಪುಡಿ, |
03:52 | 1 ಟೀಚಮಚ ಗರಂ ಮಸಾಲಾ ಪುಡಿ, |
03:54 | ರುಚಿಗೆ ತಕ್ಕಷ್ಟು ಉಪ್ಪು,
2 ಟೀಚಮಚ ಎಣ್ಣೆ ಅಥವಾ ತುಪ್ಪ ಇವುಗಳು ಬೇಕು. |
03:58 | ಮಟನ್ ಲಂಗ್ಸ್ ಮತ್ತು ಲಿವರ್ ಅನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. |
04:02 | ಪ್ರೆಶರ್ ಕುಕ್ಕರ್‌ನಲ್ಲಿ ಎಣ್ಣೆಯನ್ನು ಕಾಯಿಸಿ. |
04:03 | ಹೆಚ್ಚಿದ ಈರುಳ್ಳಿಯನ್ನು ಸೇರಿಸಿ, ತಿಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. |
04:08 | ನಂತರ ಕತ್ತರಿಸಿದ ಟೊಮ್ಯಾಟೊ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಮತ್ತೆ ಹುರಿಯಿರಿ. |
04:13 | ಈಗ ಲಂಗ್ಸ್ ಮತ್ತು ಲಿವರ್ ಅನ್ನು ಇದಕ್ಕೆ ಸೇರಿಸಿ. |
04:16 | ಮಸಾಲೆ ಹಾಗೂ ಮೊಸರು ಸೇರಿಸಿ ಚೆನ್ನಾಗಿ ಕಲೆಸಿ. ಇದನ್ನು ಮತ್ತೆ 5 ನಿಮಿಷ ಹುರಿಯಿರಿ. |
04:22 | 1 ಕಪ್ ನೀರು ಸೇರಿಸಿ ಮತ್ತು ಪ್ರೆಶರ್ ಕುಕ್ಕರ್ ಅನ್ನು ಮುಚ್ಚಿ. |
04:25 | ಮಧ್ಯಮ ಉರಿಯಲ್ಲಿ 15 ನಿಮಿಷ ಬೇಯಿಸಿ |
04:28 | ಮಟನ್ ಲಿವರ್ ಮತ್ತು ಲಂಗ್ ಕರಿ ಸಿದ್ಧವಾಗಿದೆ. ಇದನ್ನು ಸೆಜ್ಜೆ ರೊಟ್ಟಿ ಅಥವಾ ಜೋಳದ ರೊಟ್ಟಿಯೊಂದಿಗೆ ನೀಡಬಹುದು. |
04:35 | ಮಟನ್ ಲಂಗ್ಸ್ ಮತ್ತು ಲಿವರ್ ಲಭ್ಯವಿಲ್ಲದಿದ್ದರೆ, ನೀವು ಚಿಕನ್ ಲಿವರ್ ಮತ್ತು ಚಿಕನ್ ಹಾರ್ಟ್ ಅನ್ನು ಸಹ ಬಳಸಬಹುದು. |
04:42 | ನಾಲ್ಕನೆಯ ಪಾಕವಿಧಾನ, ಸಬ್ಬಸಿಗೆ ಸೊಪ್ಪಿನೊಂದಿಗೆ ಕೊಚ್ಚಿದ ಚಿಕನ್ ಆಗಿದೆ. |
04:46 | ಇದಕ್ಕಾಗಿ ನಿಮಗೆ: 100 ಗ್ರಾಂ ಕೊಚ್ಚಿದ ಚಿಕನ್,
1 ಕಪ್ ಸಬ್ಬಸಿಗೆ ಸೊಪ್ಪು, |
04:50 | ½ ಮಧ್ಯಮ ಗಾತ್ರದ ಈರುಳ್ಳಿ,
½ ಮಧ್ಯಮ ಗಾತ್ರದ ಟೊಮ್ಯಾಟೊ, |
04:54 | 1 ಟೀಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, |
04:56 | ½ ಟೀಚಮಚ ಕೆಂಪು ಮೆಣಸಿನ ಪುಡಿ, |
04:59 | ½ ಟೀಚಮಚ ಅರಿಶಿನ ಪುಡಿ, |
05:01 | 1 ಟೀಚಮಚ ಗರಂ ಮಸಾಲಾ ಪುಡಿ,
¼ ಟೀಚಮಚ ಕೊತ್ತಂಬರಿ ಬೀಜದ ಪುಡಿ, |
05:06 | ರುಚಿಗೆ ತಕ್ಕಷ್ಟು ಉಪ್ಪು,
1 ಟೀಚಮಚ ಎಣ್ಣೆ ಅಥವಾ ತುಪ್ಪ ಇವುಗಳು ಬೇಕು. |
05:10 | ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿ. |
05:11 | ಈರುಳ್ಳಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ಅನ್ನು ಸೇರಿಸಿ, |
05:14 | ಈಗ ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. |
05:17 | ಟೊಮ್ಯಾಟೊ, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ ಮತ್ತು ಕೊತ್ತಂಬರಿ ಬೀಜದ ಪುಡಿಯನ್ನು ಸೇರಿಸಿ. |
05:22 | ಚೆನ್ನಾಗಿ ಬೆರೆಸಿ ಮತ್ತು ಸ್ವಲ್ಪ ಉಪ್ಪು ಸೇರಿಸಿ. |
05:25 | ನಂತರ, ಕೊಚ್ಚಿದ ಚಿಕನ್ ಅನ್ನು ಸೇರಿಸಿ 4-5 ನಿಮಿಷ ಹುರಿಯಿರಿ. |
05:30 | ಅರ್ಧ ಕಪ್ ನೀರು ಹಾಕಿ ಪಾತ್ರೆಯನ್ನು ಮುಚ್ಚಿಡಿ. |
05:32 | ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ. |
05:35 | ಹೆಚ್ಚಿದ ತಾಜಾ ಸಬ್ಬಸಿಗೆ ಸೊಪ್ಪನ್ನು ಸೇರಿಸಿ. |
05:37 | ಚೆನ್ನಾಗಿ ಬೆರೆಸಿ, ಮಧ್ಯಮ ಉರಿಯಲ್ಲಿ ಇದನ್ನು 5 ನಿಮಿಷ ಬೇಯಿಸಿ. |
05:41 | ಸಬ್ಬಸಿಗೆ ಸೊಪ್ಪಿನೊಂದಿಗೆ ಕೊಚ್ಚಿದ ಚಿಕನ್ ಸಿದ್ಧವಾಗಿದೆ. |
05:44 | ಕೊನೆಯ ಪಾಕವಿಧಾನ ಮೀನಿನ ಪಲ್ಯ ಆಗಿದೆ. |
05:47 | ಇದಕ್ಕಾಗಿ ನಿಮಗೆ: 100 ಗ್ರಾಂ ಅಥವಾ 2 ತುಂಡು ರೋಹು, |
05:50 | 1 ಸಣ್ಣ ಈರುಳ್ಳಿ,
1 ಸಣ್ಣ ಟೊಮ್ಯಾಟೊ, |
05:53 | 1 ಟೇಬಲ್ ಚಮಚ ಕಡಲೆಕಾಯಿ,
3-4 ತೆಂಗಿನಕಾಯಿ ತುಂಡುಗಳು, |
05:57 | 1 ಟೀಸ್ಪೂನ್ ಜೀರಿಗೆ,
½ ಟೀಚಮಚ ಕೊತ್ತಂಬರಿ ಬೀಜದ ಪುಡಿ, |
06:01 | ½ ಟೀಚಮಚ ಕೆಂಪು ಮೆಣಸಿನ ಪುಡಿ,
¼ ಟೀಚಮಚ ಅರಿಶಿನ ಪುಡಿ, |
06:05 | ರುಚಿಗೆ ತಕ್ಕಷ್ಟು ಉಪ್ಪು,
2 ಟೀಚಮಚ ಎಣ್ಣೆ ಅಥವಾ ತುಪ್ಪ ಇವುಗಳು ಬೇಕು. |
06:09 | ಗಮನಿಸಿ, ಸ್ಥಳೀಯವಾಗಿ ಲಭ್ಯವಿರುವ ಮೀನಿನೊಂದಿಗೆ ಈ ಪಾಕವಿಧಾನವನ್ನು ತಯಾರಿಸಬಹುದು. |
06:15 | ವಿಧಾನ -
ಮಧ್ಯಮ ಉರಿಯಲ್ಲಿ, ಪ್ಯಾನ್ ನಲ್ಲಿ ಕಡಲೆಕಾಯಿಯನ್ನು ಹುರಿಯಿರಿ. |
06:19 | ಸುಟ್ಟು ಕರಕಾಗುವುದನ್ನು ತಪ್ಪಿಸಲು ನಿರಂತರವಾಗಿ ಕಲಕುತ್ತಾ ಇರಿ. |
06:22 | ನಂತರ ಇದನ್ನು ತಣ್ಣಗಾಗಲು ಬಿಡಿ. |
06:25 | ಸಿಪ್ಪೆಯನ್ನು ತೆಗೆಯಲು, ನಿಮ್ಮ ಅಂಗೈಗಳ ನಡುವೆ ಕಡಲೆಕಾಯಿಯನ್ನು ಉಜ್ಜಿ. |
06:28 | ಈರುಳ್ಳಿ, ಟೊಮೆಟೊ, ಕಡಲೆಕಾಯಿ, ಜೀರಿಗೆ ಮತ್ತು ತೆಂಗಿನಕಾಯಿಯನ್ನು ರುಬ್ಬಿ ಪೇಸ್ಟ್ ತಯಾರಿಸಿ. |
06:34 | ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿ, ಇದಕ್ಕೆ ಪೇಸ್ಟ್ ಅನ್ನು ಸೇರಿಸಿ. |
06:37 | ಈಗ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಕೊತ್ತಂಬರಿಬೀಜದ ಪುಡಿ ಮತ್ತು ಉಪ್ಪು ಸೇರಿಸಿ. |
06:41 | ಇದನ್ನು 2-3 ನಿಮಿಷ ಹುರಿಯಿರಿ. |
06:44 | ಈಗ ಮೀನಿನ ತುಂಡುಗಳು ಮತ್ತು 1 ಕಪ್ ನೀರು ಸೇರಿಸಿ, ಅದನ್ನು ಕುದಿಸಿ. |
06:49 | ಪಾತ್ರೆಯನ್ನು ಮುಚ್ಚಿ, ಕಡಿಮೆ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿ. |
06:53 | ಅಲಂಕರಿಸಲು, ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಬಹುದು.
ಮೀನಿನ ಪಲ್ಯ ಸಿದ್ಧವಾಗಿದೆ. |
06:59 | ಈ ಎಲ್ಲಾ ಪಾಕವಿಧಾನಗಳು ಪ್ರೋಟೀನ್, ಕೊಬ್ಬು, ಕಬ್ಬಿಣ, ವಿಟಮಿನ್ ಬಿ -12, ಸತು, ಮೆಗ್ನೀಸಿಯಮ್ |
07:06 | ಮತ್ತು ಫೋಲೇಟ್ ಮುಂತಾದ ಪೋಷಕಾಂಶಗಳ ಉತ್ತಮ ಮೂಲಗಳಾಗಿವೆ. |
07:11 | ಈ ಪಾಕವಿಧಾನಗಳ ಪ್ರಯೋಜನಗಳನ್ನು ನೋಡೋಣ. |
07:15 | ಕೋಳಿ, ಮೀನು, ಮೊಟ್ಟೆ, ಮಟನ್ ಎಲ್ಲವೂ ಸಂಪೂರ್ಣ ಪ್ರೋಟೀನ್‌ನ ಅತ್ಯುತ್ತಮ ಮೂಲಗಳಾಗಿವೆ. |
07:22 | ಅಲ್ಲದೆ, ಮಾಂಸಾಹಾರಿ ಆಹಾರದಲ್ಲಿ ಇರುವ ಕಬ್ಬಿಣವು ಸುಲಭವಾಗಿ ಹೀರಲ್ಪಡುತ್ತದೆ. |
07:28 | ಮುಟ್ಟಿನ ರಕ್ತದ ನಷ್ಟದಿಂದಾಗಿ ಹದಿಹರೆಯದ ಹೆಣ್ಣಿಗೆ ಕಬ್ಬಿಣದ ಅವಶ್ಯಕತೆಗಳು ಹೆಚ್ಚು. |
07:34 | ಶರೀರದಲ್ಲಿ ಕಬ್ಬಿಣದ ಕೊರತೆಯು ಆಯಾಸ, ಕಳೆಗುಂದಿದ ಚರ್ಮ ಮತ್ತು ಸೋಂಕುಗಳ ಅಪಾಯವನ್ನು ಉಂಟುಮಾಡುತ್ತದೆ. |
07:40 | ಸ್ನಾಯುಗಳ ಮತ್ತು ರಕ್ತಕಣಗಳ ಪ್ರಮಾಣದ ಬೆಳವಣಿಗೆಗೆ ಕಬ್ಬಿಣದ ಅಗತ್ಯವಿದೆ. |
07:46 | ಮೂರನೆಯದಾಗಿ, ಮ್ಯಾಕೆರೆಲ್, ಸಾಲ್ಮನ್, ಟ್ಯೂನಾ, ಕಾಡ್, ಹೆರಿಂಗ್ ಮತ್ತು ಸಾರ್ಡೈನ್ ಗಳಂತಹ ಮೀನುಗಳು ಒಮೆಗಾ 3 ಕೊಬ್ಬಿನಾಮ್ಲಗಳ (Omega 3 fatty acids) ಉತ್ತಮ ಮೂಲಗಳಾಗಿವೆ. |
07:56 | Omega 3 fatty acids ಮೆದುಳು ಮತ್ತು ದೃಷ್ಟಿಯ ಅಭಿವೃದ್ಧಿಗೆ ಅಗತ್ಯವಿದೆ. |
08:01 | ಮಾಂಸಾಹಾರಿ ಆಹಾರ, ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ವಿಟಮಿನ್ ಬಿ -12 ಇರುತ್ತದೆ. |
08:08 | ಕೆಂಪು ರಕ್ತಕಣಗಳ ಉತ್ಪತ್ತಿ, ಶಕ್ತಿಯ ಉತ್ಪಾದನೆ, ನರವೈಜ್ಞಾನಿಕ ಕಾರ್ಯಗಳಲ್ಲಿ ವಿಟಮಿನ್ ಬಿ -12 ನ ಅಗತ್ಯವಿದೆ. |
08:17 | ಗರ್ಭಾವಸ್ಥೆಯಲ್ಲಿ, ಭ್ರೂಣದ ಆರೋಗ್ಯಕರ ಬೆಳವಣಿಗೆಗೆ ಸಹ ಇದು ಸಹಾಯ ಮಾಡುತ್ತದೆ. |
08:23 | ಅಲ್ಲದೆ, ಮಾಂಸ ಮತ್ತು ಮೊಟ್ಟೆಗಳು ಸತುವಿನ ಉತ್ತಮ ಮೂಲಗಳಾಗಿವೆ. |
08:27 | ಹದಿಹರೆಯದ ಸಮಯದಲ್ಲಿ ಬೆಳವಣಿಗೆ, ತಿಳುವಳಿಕೆ ಮತ್ತು ಲೈಂಗಿಕ ಪಕ್ವತೆಗಳಿಗೆ ಸತುವು ಅಗತ್ಯವಾಗಿದೆ. |
08:34 | ಆದ್ದರಿಂದ, ಸಮತೋಲಿತ ಆಹಾರವು ಅತ್ಯಂತ ಮಹತ್ವದ್ದಾಗಿದೆ. |
08:40 | ನಮ್ಮ ಆಹಾರದಲ್ಲಿ ವಿಭಿನ್ನ ಮಾಂಸಾಹಾರಿ ಮತ್ತು ಸಸ್ಯಾಹಾರಿ ಆಹಾರಗಳ ಬಳಕೆಯನ್ನು ಮಾಡಬಹುದು. |
08:47 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ಕೊನೆಗೆ ಬಂದಿದ್ದೇವೆ. |
08:50 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀಮತಿ ನಯನಾ ಭಟ್.
ಧನ್ಯವಾದಗಳು. |