Health-and-Nutrition/C2/Non-vegetarian-recipes-for-adolescents/Kannada

From Script | Spoken-Tutorial
Jump to: navigation, search
Time
Narration
00:01 Non-vegetarian recipes for adolescents ಎಂಬ ಸ್ಪೋಕನ್-ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:

ಹದಿಹರೆಯ ಎಂದರೇನು?

00:10 ಹದಿಹರೆಯದ ಸಮಯದಲ್ಲಿ ಪೌಷ್ಠಿಕಾಂಶದ ಅವಶ್ಯಕತೆಗಳು ಮತ್ತು
00:13 ಕೆಳಗೆ ಹೇಳಿದ ಕೆಲವು ಮಾಂಸಾಹಾರಿ ಪಾಕವಿಧಾನಗಳ ಬಗ್ಗೆ ಕಲಿಯುತ್ತೇವೆ.
00:16 ಮೊಟ್ಟೆ ಹಾಗೂ ಪಾಲಕ ಭುರ್ಜಿ,
00:18 ಮಟನ್ ಲೆಗ್ ಸೂಪ್,
00:20 ಮಟನ್ ಲಿವರ್ ಮತ್ತು ಲಂಗ್ಸ್ ಕರಿ,
00:22 ಸಬ್ಬಸಿಗೆ ಎಲೆಗಳೊಂದಿಗೆ ಕೊಚ್ಚಿದ ಚಿಕನ್ ಮತ್ತು

ಮೀನಿನ ಕರಿ.

00:26 ಹದಿಹರೆಯ ಎಂದರೇನು? ಇದನ್ನು ಮೊದಲು ತಿಳಿದುಕೊಳ್ಳೋಣ.
00:30 ಇದು ಬಾಲ್ಯದಿಂದ ಪ್ರೌಢಾವಸ್ಥೆಗೆ ಪರಿವರ್ತನೆಯಾಗುವ ಅವಧಿಯಾಗಿದೆ.
00:33 10 ರಿಂದ 19 ವರ್ಷ ವಯಸ್ಸಿನವರನ್ನು ಹದಿಹರೆಯದವರು ಎನ್ನುತ್ತಾರೆ.
00:39 ಈ ಅವಧಿಯಲ್ಲಿ ಶಕ್ತಿಯ ಮತ್ತು ಪ್ರೋಟೀನ್ ಗಳ ಅವಶ್ಯಕತೆ ಹೆಚ್ಚಾಗಿರುತ್ತದೆ.
00:44 ಏಕೆಂದರೆ, ಈ ಅವಧಿಯಲ್ಲಿ ಭೌತಿಕ, ಲೈಂಗಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಬದಲಾವಣೆಗಳಾಗುತ್ತವೆ.
00:53 ಹದಿಹರೆಯದ ಹೆಣ್ಣಿಗೆ, ದಿನದಲ್ಲಿ 2000-2400 ಕ್ಯಾಲೋರಿಗಳು ಮತ್ತು 40-55 ಗ್ರಾಂ ಪ್ರೋಟೀನ್ ನ ಅಗತ್ಯವಿದೆ.
01:02 ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು, ಫೋಲೇಟ್ ಮತ್ತು ವಿಟಾಮಿನ್ B-12 ಗಳಂತಹ
01:07 ಇತರ ಮೈಕ್ರೋ ಪೋಷಕಾಂಶಗಳು ಸಹ ಸಾಕಷ್ಟು ಪ್ರಮಾಣದಲ್ಲಿ ಅವಶ್ಯವಾಗಿವೆ.
01:15 ಹದಿಹರೆಯದಲ್ಲಿ ಪೌಷ್ಠಿಕಾಂಶದ ಮಹತ್ವದ ಬಗ್ಗೆ ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
01:22 ಹದಿಹರೆಯದವರಿಗಾಗಿ ಈಗ ಕೆಲವು ಪಾಕವಿಧಾನಗಳನ್ನು ನಾವು ನೋಡೋಣ.
01:29 ಮೊದಲನೆಯದು ಮೊಟ್ಟೆ ಹಾಗೂ ಪಾಲಕ ಭುರ್ಜಿ ಆಗಿದೆ.
01:32 ಇದಕ್ಕಾಗಿ ನಿಮಗೆ:

1 ಮೊಟ್ಟೆ, ½ ಕಪ್ ಪಾಲಕ್ ಸೊಪ್ಪು, 1 ಸಣ್ಣ ಗಾತ್ರದ ಈರುಳ್ಳಿ, 1 ಹಸಿಮೆಣಸಿನಕಾಯಿ,

01:38 ½ ಟೀಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್,
01:41 ½ ಟೀಚಮಚ ಅರಿಶಿನ,
01:43 ರುಚಿಗೆ ತಕ್ಕಷ್ಟು ಉಪ್ಪು,

2 ಟೀಚಮಚ ಎಣ್ಣೆ ಅಥವಾ ಬೆಣ್ಣೆ ಇವುಗಳು ಬೇಕು.

01:47 ತಯಾರಿಸುವ ವಿಧಾನ:

ಬಾಣಲೆಯಲ್ಲಿ ಎಣ್ಣೆ ಅಥವಾ ಬೆಣ್ಣೆಯನ್ನು ಬಿಸಿ ಮಾಡಿ.

01:51 ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ ಮತ್ತು ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ.
01:55 ಇದನ್ನು 2 ನಿಮಿಷಗಳ ಕಾಲ ಹುರಿಯಿರಿ.
01:58 ಈಗ ಅರಿಶಿನ ಪುಡಿ ಮತ್ತು ಹೆಚ್ಚಿದ ಪಾಲಕ ಸೇರಿಸಿ.
02:02 ಪ್ಯಾನ್ ನಲ್ಲಿ ಮೊಟ್ಟೆಯನ್ನು ಒಡೆಯಿರಿ.
02:06 ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
02:08 ಈಗ, ಮೊಟ್ಟೆಯು ಮಧ್ಯಮ ಉರಿಯಲ್ಲಿ 2 ನಿಮಿಷ ಬೇಯಲು ಬಿಡಿ.
02:12 ಈಗ ಮೊಟ್ಟೆ ಹಾಗೂ ಪಾಲಕ ಭುರ್ಜಿ ಸಿದ್ಧವಾಗಿದೆ.
02:15 ಮುಂದಿನದು ಮಟನ್ ಲೆಗ್ ಸೂಪ್:
02:17 ಇದಕ್ಕಾಗಿ ನಿಮಗೆ:

200 ಗ್ರಾಂ ಅಥವಾ 1 ಸಂಪೂರ್ಣ ಮಟನ್ ಲೆಗ್,

02:22 ½ ಮಧ್ಯಮ ಗಾತ್ರದ ಈರುಳ್ಳಿ,
02:24 ½ ಟೀಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್,
02:26 ½ ಟೀಚಮಚ ಮಿಶ್ರ ಮಸಾಲೆಗಳು,
02:29 1 ಟೀಚಮಚ ಅರಿಶಿನ ಪುಡಿ,
02:31 ರುಚಿಗೆ ತಕ್ಕಷ್ಟು ಉಪ್ಪು,

1 ಟೀಚಮಚ ಕಡಲೆ ಹಿಟ್ಟು ಇವುಗಳು ಬೇಕು.

02:35 ಮಟನ್ ಲೆಗ್ ತುಂಡುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ.
02:38 ಮಟನ್ ಲೆಗ್ ತುಂಡುಗಳ ಮೇಲೆ ಅರ್ಧ ಟೀಸ್ಪೂನ್ ಅರಿಶಿನ ಪುಡಿಯನ್ನು ಹಚ್ಚಿ.
02:42 ಇದನ್ನು ಬದಿಯಲ್ಲಿರಿಸಿ. 15-20 ನಿಮಿಷಗಳ ನಂತರ ಮತ್ತೆ ತೊಳೆಯಿರಿ.
02:47 ಇದು ಕಾಲಿನ ತುಂಡುಗಳಿಂದ ವಾಸನೆಯನ್ನು ತೆಗೆದುಹಾಕುತ್ತದೆ.
02:50 ಪ್ರೆಶರ್ ಕುಕ್ಕರ್‌ನಲ್ಲಿ ಮಟನ್ ಲೆಗ್ ತುಂಡುಗಳು ಮತ್ತು ಕತ್ತರಿಸಿದ ಈರುಳ್ಳಿಯನ್ನು ಹಾಕಿ.
02:55 ಇಡೀ ಮಸಾಲೆಗಳು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ.
03:00 1 ಕಪ್ ನೀರು ಸೇರಿಸಿ ಮತ್ತು ಪ್ರೆಶರ್ ಕುಕ್ಕರ್ ಅನ್ನು ಮುಚ್ಚಿ.
03:03 ಒಂದು ಶಿಳ್ಳೆ ಆಗುವವರೆಗೆ ಅದನ್ನು ಅಧಿಕ ಉರಿಯಲ್ಲಿ ಬೇಯಿಸಿ.
03:07 ನಂತರ ಉರಿಯನ್ನು ಕಡಿಮೆ ಮಾಡಿ ಮತ್ತೆ 15-20 ನಿಮಿಷ ಬೇಯಿಸಿ.
03:11 ಕುಕ್ಕರ್‌ ನ ಒತ್ತಡ ತಾನಾಗಿಯೆ ಕಡಿಮೆಯಾಗಲು ಬಿಡಿ. ನಂತರ ಅದನ್ನು ತೆರೆಯಿರಿ.
03:16 ಕಡಲೆಹಿಟ್ಟನ್ನು ಎರಡು ಚಮಚ ನೀರಿನೊಂದಿಗೆ ಬೆರೆಸಿ ತೆಳುವಾದ ಪೇಸ್ಟ್ ತಯಾರಿಸಿ.
03:25 ಈ ಪೇಸ್ಟ್ ಅನ್ನು ಸೂಪ್ ಗೆ ಸೇರಿಸಿ ಚೆನ್ನಾಗಿ ಕಲಕಿ.
03:28 ಸೂಪ್ ಕುದಿಯಲು ಆರಂಭಿಸಿದ ನಂತರ, 2 ನಿಮಿಷ ಇದನ್ನು ಮಂದ ಉರಿಯಲ್ಲಿ ಇರಿಸಿ.
03:32 ಮಟನ್ ಲೆಗ್ ಸೂಪ್ ಸಿದ್ಧವಾಗಿದೆ.
03:35 ಮುಂದಿನ ಪಾಕವಿಧಾನ ಮಟನ್ ಲಿವರ್ ಮತ್ತು ಲಂಗ್ಸ್ ಕರಿ ಆಗಿದೆ.
03:38 ಇದಕ್ಕಾಗಿ ನಿಮಗೆ:

100 ಗ್ರಾಂ ಮಟನ್ ಲಿವರ್ ಮತ್ತು ಲಂಗ್ಸ್,

03:41 1 ಮಧ್ಯಮ ಗಾತ್ರದ ಈರುಳ್ಳಿ,

1 ಮಧ್ಯಮ ಗಾತ್ರದ ಟೊಮ್ಯಾಟೊ,

03:45 1 ಟೀಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್,

1 ಟೇಬಲ್ ಚಮಚ ಮೊಸರು,

03:50 ¼ ಟೀಚಮಚ ಅರಿಶಿನ ಪುಡಿ,
03:52 1 ಟೀಚಮಚ ಗರಂ ಮಸಾಲಾ ಪುಡಿ,
03:54 ರುಚಿಗೆ ತಕ್ಕಷ್ಟು ಉಪ್ಪು,

2 ಟೀಚಮಚ ಎಣ್ಣೆ ಅಥವಾ ತುಪ್ಪ ಇವುಗಳು ಬೇಕು.

03:58 ಮಟನ್ ಲಂಗ್ಸ್ ಮತ್ತು ಲಿವರ್ ಅನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.
04:02 ಪ್ರೆಶರ್ ಕುಕ್ಕರ್‌ನಲ್ಲಿ ಎಣ್ಣೆಯನ್ನು ಕಾಯಿಸಿ.
04:03 ಹೆಚ್ಚಿದ ಈರುಳ್ಳಿಯನ್ನು ಸೇರಿಸಿ, ತಿಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
04:08 ನಂತರ ಕತ್ತರಿಸಿದ ಟೊಮ್ಯಾಟೊ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಮತ್ತೆ ಹುರಿಯಿರಿ.
04:13 ಈಗ ಲಂಗ್ಸ್ ಮತ್ತು ಲಿವರ್ ಅನ್ನು ಇದಕ್ಕೆ ಸೇರಿಸಿ.
04:16 ಮಸಾಲೆ ಹಾಗೂ ಮೊಸರು ಸೇರಿಸಿ ಚೆನ್ನಾಗಿ ಕಲೆಸಿ. ಇದನ್ನು ಮತ್ತೆ 5 ನಿಮಿಷ ಹುರಿಯಿರಿ.
04:22 1 ಕಪ್ ನೀರು ಸೇರಿಸಿ ಮತ್ತು ಪ್ರೆಶರ್ ಕುಕ್ಕರ್ ಅನ್ನು ಮುಚ್ಚಿ.
04:25 ಮಧ್ಯಮ ಉರಿಯಲ್ಲಿ 15 ನಿಮಿಷ ಬೇಯಿಸಿ
04:28 ಮಟನ್ ಲಿವರ್ ಮತ್ತು ಲಂಗ್ ಕರಿ ಸಿದ್ಧವಾಗಿದೆ. ಇದನ್ನು ಸೆಜ್ಜೆ ರೊಟ್ಟಿ ಅಥವಾ ಜೋಳದ ರೊಟ್ಟಿಯೊಂದಿಗೆ ನೀಡಬಹುದು.
04:35 ಮಟನ್ ಲಂಗ್ಸ್ ಮತ್ತು ಲಿವರ್ ಲಭ್ಯವಿಲ್ಲದಿದ್ದರೆ, ನೀವು ಚಿಕನ್ ಲಿವರ್ ಮತ್ತು ಚಿಕನ್ ಹಾರ್ಟ್ ಅನ್ನು ಸಹ ಬಳಸಬಹುದು.
04:42 ನಾಲ್ಕನೆಯ ಪಾಕವಿಧಾನ, ಸಬ್ಬಸಿಗೆ ಸೊಪ್ಪಿನೊಂದಿಗೆ ಕೊಚ್ಚಿದ ಚಿಕನ್ ಆಗಿದೆ.
04:46 ಇದಕ್ಕಾಗಿ ನಿಮಗೆ: 100 ಗ್ರಾಂ ಕೊಚ್ಚಿದ ಚಿಕನ್,

1 ಕಪ್ ಸಬ್ಬಸಿಗೆ ಸೊಪ್ಪು,

04:50 ½ ಮಧ್ಯಮ ಗಾತ್ರದ ಈರುಳ್ಳಿ,

½ ಮಧ್ಯಮ ಗಾತ್ರದ ಟೊಮ್ಯಾಟೊ,

04:54 1 ಟೀಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್,
04:56 ½ ಟೀಚಮಚ ಕೆಂಪು ಮೆಣಸಿನ ಪುಡಿ,
04:59 ½ ಟೀಚಮಚ ಅರಿಶಿನ ಪುಡಿ,
05:01 1 ಟೀಚಮಚ ಗರಂ ಮಸಾಲಾ ಪುಡಿ,

¼ ಟೀಚಮಚ ಕೊತ್ತಂಬರಿ ಬೀಜದ ಪುಡಿ,

05:06 ರುಚಿಗೆ ತಕ್ಕಷ್ಟು ಉಪ್ಪು,

1 ಟೀಚಮಚ ಎಣ್ಣೆ ಅಥವಾ ತುಪ್ಪ ಇವುಗಳು ಬೇಕು.

05:10 ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿ.
05:11 ಈರುಳ್ಳಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ಅನ್ನು ಸೇರಿಸಿ,
05:14 ಈಗ ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ.
05:17 ಟೊಮ್ಯಾಟೊ, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ ಮತ್ತು ಕೊತ್ತಂಬರಿ ಬೀಜದ ಪುಡಿಯನ್ನು ಸೇರಿಸಿ.
05:22 ಚೆನ್ನಾಗಿ ಬೆರೆಸಿ ಮತ್ತು ಸ್ವಲ್ಪ ಉಪ್ಪು ಸೇರಿಸಿ.
05:25 ನಂತರ, ಕೊಚ್ಚಿದ ಚಿಕನ್ ಅನ್ನು ಸೇರಿಸಿ 4-5 ನಿಮಿಷ ಹುರಿಯಿರಿ.
05:30 ಅರ್ಧ ಕಪ್ ನೀರು ಹಾಕಿ ಪಾತ್ರೆಯನ್ನು ಮುಚ್ಚಿಡಿ.
05:32 ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ.
05:35 ಹೆಚ್ಚಿದ ತಾಜಾ ಸಬ್ಬಸಿಗೆ ಸೊಪ್ಪನ್ನು ಸೇರಿಸಿ.
05:37 ಚೆನ್ನಾಗಿ ಬೆರೆಸಿ, ಮಧ್ಯಮ ಉರಿಯಲ್ಲಿ ಇದನ್ನು 5 ನಿಮಿಷ ಬೇಯಿಸಿ.
05:41 ಸಬ್ಬಸಿಗೆ ಸೊಪ್ಪಿನೊಂದಿಗೆ ಕೊಚ್ಚಿದ ಚಿಕನ್ ಸಿದ್ಧವಾಗಿದೆ.
05:44 ಕೊನೆಯ ಪಾಕವಿಧಾನ ಮೀನಿನ ಪಲ್ಯ ಆಗಿದೆ.
05:47 ಇದಕ್ಕಾಗಿ ನಿಮಗೆ: 100 ಗ್ರಾಂ ಅಥವಾ 2 ತುಂಡು ರೋಹು,
05:50 1 ಸಣ್ಣ ಈರುಳ್ಳಿ,

1 ಸಣ್ಣ ಟೊಮ್ಯಾಟೊ,

05:53 1 ಟೇಬಲ್ ಚಮಚ ಕಡಲೆಕಾಯಿ,

3-4 ತೆಂಗಿನಕಾಯಿ ತುಂಡುಗಳು,

05:57 1 ಟೀಸ್ಪೂನ್ ಜೀರಿಗೆ,

½ ಟೀಚಮಚ ಕೊತ್ತಂಬರಿ ಬೀಜದ ಪುಡಿ,

06:01 ½ ಟೀಚಮಚ ಕೆಂಪು ಮೆಣಸಿನ ಪುಡಿ,

¼ ಟೀಚಮಚ ಅರಿಶಿನ ಪುಡಿ,

06:05 ರುಚಿಗೆ ತಕ್ಕಷ್ಟು ಉಪ್ಪು,

2 ಟೀಚಮಚ ಎಣ್ಣೆ ಅಥವಾ ತುಪ್ಪ ಇವುಗಳು ಬೇಕು.

06:09 ಗಮನಿಸಿ, ಸ್ಥಳೀಯವಾಗಿ ಲಭ್ಯವಿರುವ ಮೀನಿನೊಂದಿಗೆ ಈ ಪಾಕವಿಧಾನವನ್ನು ತಯಾರಿಸಬಹುದು.
06:15 ವಿಧಾನ -

ಮಧ್ಯಮ ಉರಿಯಲ್ಲಿ, ಪ್ಯಾನ್ ನಲ್ಲಿ ಕಡಲೆಕಾಯಿಯನ್ನು ಹುರಿಯಿರಿ.

06:19 ಸುಟ್ಟು ಕರಕಾಗುವುದನ್ನು ತಪ್ಪಿಸಲು ನಿರಂತರವಾಗಿ ಕಲಕುತ್ತಾ ಇರಿ.
06:22 ನಂತರ ಇದನ್ನು ತಣ್ಣಗಾಗಲು ಬಿಡಿ.
06:25 ಸಿಪ್ಪೆಯನ್ನು ತೆಗೆಯಲು, ನಿಮ್ಮ ಅಂಗೈಗಳ ನಡುವೆ ಕಡಲೆಕಾಯಿಯನ್ನು ಉಜ್ಜಿ.
06:28 ಈರುಳ್ಳಿ, ಟೊಮೆಟೊ, ಕಡಲೆಕಾಯಿ, ಜೀರಿಗೆ ಮತ್ತು ತೆಂಗಿನಕಾಯಿಯನ್ನು ರುಬ್ಬಿ ಪೇಸ್ಟ್ ತಯಾರಿಸಿ.
06:34 ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿ, ಇದಕ್ಕೆ ಪೇಸ್ಟ್ ಅನ್ನು ಸೇರಿಸಿ.
06:37 ಈಗ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಕೊತ್ತಂಬರಿಬೀಜದ ಪುಡಿ ಮತ್ತು ಉಪ್ಪು ಸೇರಿಸಿ.
06:41 ಇದನ್ನು 2-3 ನಿಮಿಷ ಹುರಿಯಿರಿ.
06:44 ಈಗ ಮೀನಿನ ತುಂಡುಗಳು ಮತ್ತು 1 ಕಪ್ ನೀರು ಸೇರಿಸಿ, ಅದನ್ನು ಕುದಿಸಿ.
06:49 ಪಾತ್ರೆಯನ್ನು ಮುಚ್ಚಿ, ಕಡಿಮೆ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿ.
06:53 ಅಲಂಕರಿಸಲು, ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಬಹುದು.

ಮೀನಿನ ಪಲ್ಯ ಸಿದ್ಧವಾಗಿದೆ.

06:59 ಈ ಎಲ್ಲಾ ಪಾಕವಿಧಾನಗಳು ಪ್ರೋಟೀನ್, ಕೊಬ್ಬು, ಕಬ್ಬಿಣ, ವಿಟಮಿನ್ ಬಿ -12, ಸತು, ಮೆಗ್ನೀಸಿಯಮ್
07:06 ಮತ್ತು ಫೋಲೇಟ್ ಮುಂತಾದ ಪೋಷಕಾಂಶಗಳ ಉತ್ತಮ ಮೂಲಗಳಾಗಿವೆ.
07:11 ಈ ಪಾಕವಿಧಾನಗಳ ಪ್ರಯೋಜನಗಳನ್ನು ನೋಡೋಣ.
07:15 ಕೋಳಿ, ಮೀನು, ಮೊಟ್ಟೆ, ಮಟನ್ ಎಲ್ಲವೂ ಸಂಪೂರ್ಣ ಪ್ರೋಟೀನ್‌ನ ಅತ್ಯುತ್ತಮ ಮೂಲಗಳಾಗಿವೆ.
07:22 ಅಲ್ಲದೆ, ಮಾಂಸಾಹಾರಿ ಆಹಾರದಲ್ಲಿ ಇರುವ ಕಬ್ಬಿಣವು ಸುಲಭವಾಗಿ ಹೀರಲ್ಪಡುತ್ತದೆ.
07:28 ಮುಟ್ಟಿನ ರಕ್ತದ ನಷ್ಟದಿಂದಾಗಿ ಹದಿಹರೆಯದ ಹೆಣ್ಣಿಗೆ ಕಬ್ಬಿಣದ ಅವಶ್ಯಕತೆಗಳು ಹೆಚ್ಚು.
07:34 ಶರೀರದಲ್ಲಿ ಕಬ್ಬಿಣದ ಕೊರತೆಯು ಆಯಾಸ, ಕಳೆಗುಂದಿದ ಚರ್ಮ ಮತ್ತು ಸೋಂಕುಗಳ ಅಪಾಯವನ್ನು ಉಂಟುಮಾಡುತ್ತದೆ.
07:40 ಸ್ನಾಯುಗಳ ಮತ್ತು ರಕ್ತಕಣಗಳ ಪ್ರಮಾಣದ ಬೆಳವಣಿಗೆಗೆ ಕಬ್ಬಿಣದ ಅಗತ್ಯವಿದೆ.
07:46 ಮೂರನೆಯದಾಗಿ, ಮ್ಯಾಕೆರೆಲ್, ಸಾಲ್ಮನ್, ಟ್ಯೂನಾ, ಕಾಡ್, ಹೆರಿಂಗ್ ಮತ್ತು ಸಾರ್ಡೈನ್ ಗಳಂತಹ ಮೀನುಗಳು ಒಮೆಗಾ 3 ಕೊಬ್ಬಿನಾಮ್ಲಗಳ (Omega 3 fatty acids) ಉತ್ತಮ ಮೂಲಗಳಾಗಿವೆ.
07:56 Omega 3 fatty acids ಮೆದುಳು ಮತ್ತು ದೃಷ್ಟಿಯ ಅಭಿವೃದ್ಧಿಗೆ ಅಗತ್ಯವಿದೆ.
08:01 ಮಾಂಸಾಹಾರಿ ಆಹಾರ, ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ವಿಟಮಿನ್ ಬಿ -12 ಇರುತ್ತದೆ.
08:08 ಕೆಂಪು ರಕ್ತಕಣಗಳ ಉತ್ಪತ್ತಿ, ಶಕ್ತಿಯ ಉತ್ಪಾದನೆ, ನರವೈಜ್ಞಾನಿಕ ಕಾರ್ಯಗಳಲ್ಲಿ ವಿಟಮಿನ್ ಬಿ -12 ನ ಅಗತ್ಯವಿದೆ.
08:17 ಗರ್ಭಾವಸ್ಥೆಯಲ್ಲಿ, ಭ್ರೂಣದ ಆರೋಗ್ಯಕರ ಬೆಳವಣಿಗೆಗೆ ಸಹ ಇದು ಸಹಾಯ ಮಾಡುತ್ತದೆ.
08:23 ಅಲ್ಲದೆ, ಮಾಂಸ ಮತ್ತು ಮೊಟ್ಟೆಗಳು ಸತುವಿನ ಉತ್ತಮ ಮೂಲಗಳಾಗಿವೆ.
08:27 ಹದಿಹರೆಯದ ಸಮಯದಲ್ಲಿ ಬೆಳವಣಿಗೆ, ತಿಳುವಳಿಕೆ ಮತ್ತು ಲೈಂಗಿಕ ಪಕ್ವತೆಗಳಿಗೆ ಸತುವು ಅಗತ್ಯವಾಗಿದೆ.
08:34 ಆದ್ದರಿಂದ, ಸಮತೋಲಿತ ಆಹಾರವು ಅತ್ಯಂತ ಮಹತ್ವದ್ದಾಗಿದೆ.
08:40 ನಮ್ಮ ಆಹಾರದಲ್ಲಿ ವಿಭಿನ್ನ ಮಾಂಸಾಹಾರಿ ಮತ್ತು ಸಸ್ಯಾಹಾರಿ ಆಹಾರಗಳ ಬಳಕೆಯನ್ನು ಮಾಡಬಹುದು.
08:47 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ಕೊನೆಗೆ ಬಂದಿದ್ದೇವೆ.
08:50 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀಮತಿ ನಯನಾ ಭಟ್.

ಧನ್ಯವಾದಗಳು.

Contributors and Content Editors

Debosmita, Sandhya.np14