Difference between revisions of "Arduino/C2/Electronic-components-and-connections/Kannada"
From Script | Spoken-Tutorial
Melkamiyar (Talk | contribs) (Created page with "{| border=1 ||'''Time''' || '''Narration''' |- ||00:01 || ಎಲೆಕ್ಟ್ರಾನಿಕ್ ಕಾಂಪೋನೆಂಟ್ ಗಳು ಮತ್ತು ಸಂಪರ್ಕ...") |
Sandhya.np14 (Talk | contribs) |
||
Line 90: | Line 90: | ||
|- | |- | ||
||02:16 | ||02:16 | ||
− | || ಎಲ್.ಇ.ಡಿ ಯು ಆನೋಡ್ ಮತ್ತು ಕ್ಯಾಥೋಡ್ ಎಂಬ ಎರಡು | + | || ಎಲ್.ಇ.ಡಿ ಯು ಆನೋಡ್ ಮತ್ತು ಕ್ಯಾಥೋಡ್ ಎಂಬ ಎರಡು ಲೀಡ್ ಗಳನ್ನು ಹೊಂದಿದೆ. |
|- | |- | ||
||02:22 | ||02:22 | ||
− | || ಆನೋಡ್ | + | || ಆನೋಡ್ ಲೀಡ್ ಹೆಚ್ಚು ಉದ್ದವಿದೆ. ಇದನ್ನು ಪಾಸಿಟಿವ್ ವೋಲ್ಟೇಜ್ ಗೆ ಸಂಪರ್ಕಿಸಬೇಕು. |
|- | |- | ||
||02:29 | ||02:29 | ||
− | || ಕ್ಯಾಥೋಡ್ | + | || ಕ್ಯಾಥೋಡ್ ಲೀಡ್ ಗಿಡ್ಡದಾಗಿದೆ. ಇದನ್ನು ಗ್ರೌಂಡ್ ಗೆ ಸಂಪರ್ಕಿಸಬೇಕು. |
|- | |- | ||
Line 106: | Line 106: | ||
|- | |- | ||
||02:43 | ||02:43 | ||
− | || ಇದು ನಾಲ್ಕು ಪಿನ್ ಗಳನ್ನು ಹೊಂದಿದೆ. ಅತ್ಯಂತ ದೀರ್ಘ | + | || ಇದು ನಾಲ್ಕು ಪಿನ್ ಗಳನ್ನು ಹೊಂದಿದೆ. ಅತ್ಯಂತ ದೀರ್ಘ ಲೀಡ್ ಅನ್ನು ಕಾಮನ್ ಲೀಡ್ ಎನ್ನಲಾಗುತ್ತದೆ. |
|- | |- | ||
Line 118: | Line 118: | ||
|- | |- | ||
||03:07 | ||03:07 | ||
− | || ಕಾಮನ್ ಆನೋಡ್ ಆವೃತ್ತಿಯಲ್ಲಿ ಕಾಮನ್ | + | || ಕಾಮನ್ ಆನೋಡ್ ಆವೃತ್ತಿಯಲ್ಲಿ ಕಾಮನ್ ಲೀಡ್ ಅನ್ನು ಪಾಸಿಟಿವ್ ವೋಲ್ಟೇಜ್ ಗೆ ಸಂಪರ್ಕಿಸಬೇಕು. |
|- | |- | ||
||03:14 | ||03:14 | ||
− | || ಕಾಮನ್ ಕ್ಯಾಥೋಡ್ ಆವೃತ್ತಿಯಲ್ಲಿ ಕಾಮನ್ | + | || ಕಾಮನ್ ಕ್ಯಾಥೋಡ್ ಆವೃತ್ತಿಯಲ್ಲಿ ಕಾಮನ್ ಲೀಡ್ ಅನ್ನು ಗ್ರೌಂಡ್ ಗೆ ಸಂಪರ್ಕಿಸಬೇಕು. |
|- | |- | ||
Line 130: | Line 130: | ||
|- | |- | ||
||03:25 | ||03:25 | ||
− | || ಸರ್ಕಿಟ್ ನಲ್ಲಿ | + | || ಸರ್ಕಿಟ್ ನಲ್ಲಿ ಹರಿಯುವ ವಿದ್ಯುತ್ ಪ್ರವಾಹವನ್ನು ಮಿತಿಗೊಳಿಸಲು ರೆಸಿಸ್ಟರ್ ಬಳಸಲಾಗುತ್ತದೆ. |
|- | |- | ||
Line 150: | Line 150: | ||
|- | |- | ||
||03:51 | ||03:51 | ||
− | || ಎಲ್.ಇ.ಡಿ ಯ ಆನೋಡ್ (ಅಂದರೆ ಬಲಗಡೆಯ | + | || ಎಲ್.ಇ.ಡಿ ಯ ಆನೋಡ್ (ಅಂದರೆ ಬಲಗಡೆಯ ಲೀಡ್) ಅನ್ನು, ರೆಸಿಸ್ಟರ್ ಮೂಲಕ ಬ್ರೆಡ್ ಬೋರ್ಡ್ ನ 2ನೇ ರೇಲ್ ಗೆ ಸಂಪರ್ಕಿಸಲಾಗಿದೆ. |
|- | |- | ||
||04:00 | ||04:00 | ||
− | || ಎಲ್.ಇ.ಡಿ ಯ ಕ್ಯಾಥೋಡ್ (ಅಂದರೆ ಎಡಗಡೆಯ | + | || ಎಲ್.ಇ.ಡಿ ಯ ಕ್ಯಾಥೋಡ್ (ಅಂದರೆ ಎಡಗಡೆಯ ಲೀಡ್) ಅನ್ನು ಬ್ರೆಡ್ ಬೋರ್ಡ್ ನ 1ನೇ ರೇಲ್ ಗೆ ಸಂಪರ್ಕಿಸಲಾಗಿದೆ. |
|- | |- | ||
Line 182: | Line 182: | ||
|- | |- | ||
||04:47 | ||04:47 | ||
− | || ಹೀಗಾಗಿ ಎಲ್.ಇ.ಡಿ ಯ ಆನೋಡ್ ಮತ್ತು ರೆಸಿಸ್ಟರ್ | + | || ಹೀಗಾಗಿ ಎಲ್.ಇ.ಡಿ ಯ ಆನೋಡ್ ಮತ್ತು ರೆಸಿಸ್ಟರ್ ಲೀಡ್ ನಡುವೆ ಸಂಪರ್ಕ ಏರ್ಪಟ್ಟಿಲ್ಲ. |
ಇದು ಎಲ್.ಇ.ಡಿ ಯನ್ನು ಪ್ರತ್ಯೇಕಿಸುತ್ತದೆ. | ಇದು ಎಲ್.ಇ.ಡಿ ಯನ್ನು ಪ್ರತ್ಯೇಕಿಸುತ್ತದೆ. | ||
Line 343: | Line 343: | ||
|- | |- | ||
||09:33 | ||09:33 | ||
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು | + | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
|- | |- | ||
Line 356: | Line 356: | ||
|- | |- | ||
||09:57 | ||09:57 | ||
− | || ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ. | + | || ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ. ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. |
− | ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. | + | |
|- | |- | ||
Line 380: | Line 379: | ||
|- | |- | ||
||10.37 | ||10.37 | ||
− | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ | + | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |
ಧನ್ಯವಾದಗಳು. | ಧನ್ಯವಾದಗಳು. | ||
|- | |- |
Revision as of 15:40, 25 June 2020
Time | Narration
|
00:01 | ಎಲೆಕ್ಟ್ರಾನಿಕ್ ಕಾಂಪೋನೆಂಟ್ ಗಳು ಮತ್ತು ಸಂಪರ್ಕಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, ಬ್ರೆಡ್ ಬೋರ್ಡ್ ಮತ್ತು ಇದರ ಆಂತರಿಕ ಸಂಪರ್ಕಗಳು, |
00:14 | ಬ್ರೆಡ್ ಬೋರ್ಡ್ ನಲ್ಲಿ ಎಲ್.ಇ.ಡಿ, ಬ್ರೆಡ್ ಬೋರ್ಡ್ ನಲ್ಲಿ ಪುಶ್ ಬಟನ್ ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಬಳಸಲು ಕಲಿಯಲಿದ್ದೇವೆ. |
00:23 | ಈ ಸರಣಿಯನ್ನು ಅನುಸರಿಸಲು ನೀವು ರೆಸಿಸ್ಟರ್ ಗಳು, ಪುಶ್ ಬಟನ್, ಎಲ್.ಇ.ಡಿ, ಓಪನ್ ಸರ್ಕಿಟ್,
ಕ್ಲೋಸ್ಡ್ ಸರ್ಕಿಟ್, |
00:34 | ಸರಣಿ ಮತ್ತು ಸಮಾಂತರ ಸಂಪರ್ಕಗಳು, |
00:38 | ಬ್ಯಾಟರಿಗಳು, ಪಾಸಿಟಿವ್ ಮತ್ತು ನೆಗೆಟಿವ್ ವೋಲ್ಟೆಜ್ - |
00:41 | ಮುಂತಾದ ಎಲೆಕ್ಟ್ರಾನಿಕ್ ಘಟಕಗಳ ಮೂಲಭೂತ ಜ್ಞಾನ ಹೊಂದಿರಬೇಕು. |
00:47 | ಈ ಕೆಳಗಿನ ಘಟಕಗಳನ್ನು ಬಳಸಿ ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲಾಗಿದೆ:
ಬ್ರೆಡ್ ಬೋರ್ಡ್, |
00:54 | ಎಲ್.ಇ.ಡಿ, ಅಥವಾ ಟ್ರೈಕಲರ್ ಎಲ್.ಇ.ಡಿ, ಪುಶ್ ಬಟನ್, |
01:00 | ರೆಸಿಸ್ಟರ್ ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ. |
01:06 | ಬ್ರೆಡ್ ಬೋರ್ಡ್ ಈ ರೀತಿ ಕಾಣಿಸುತ್ತದೆ. |
01:11 | ಬ್ರೆಡ್ ಬೋರ್ಡ್ ಎನ್ನುವುದು ಒಂದು ಸಾಧನವಾಗಿದ್ದು, ಸರ್ಕಿಟ್ ನ ಘಟಕಗಳನ್ನು ಹಿಡಿದಿಟ್ಟು ಕೊಳ್ಳುತ್ತದೆ ಮತ್ತು ಅವುಗಳನ್ನು ಒಟ್ಟಿಗೆ ಸಂಪರ್ಕಿಸುತ್ತದೆ. |
01:18 | ಯಾವುದೇ ಬೆಸುಗೆ ಮಾಡದೆಯೇ ನಾವು ಬ್ರೆಡ್ ಬೋರ್ಡ್ ಮೇಲೆ ಎಲೆಕ್ಟ್ರಾನಿಕ್ ಸರ್ಕಿಟ್ ಅನ್ನು ನಿರ್ಮಿಸಬಹುದು. |
01:25 | ಮೇಲಿನ ಎರಡು ರೇಲ್ ಗಳು ಮತ್ತು ಕೆಳಗಿನ ಎರಡು ರೇಲ್ ಗಳನ್ನು ಪವರ್ ರೇಲ್ ಗಳೆಂದು ಕರೆಯಲಾಗುತ್ತದೆ. |
01:31 | ಮೇಲಿನ ಎಲ್ಲಾ ತೂತುಗಳ ಸಾಲನ್ನು ಒಟ್ಟಿಗೆ ಸಂಪರ್ಕಿಸಲಾಗಿದೆ ಮತ್ತು ಇವುಗಳನ್ನು ಕೆಂಪು ಚುಕ್ಕೆಗಳು ಮತ್ತು ನೀಲಿ ಚುಕ್ಕೆಗಳಿಂದ ಗುರುತಿಸಲಾಗಿದೆ. |
01:41 | ಬ್ರೆಡ್ ಬೋರ್ಡ್ ನ ನಡುವೆ ಸಂಪರ್ಕವು ಬೇರ್ಪಡಿಸುತ್ತದೆ ಎಂಬುದನ್ನು ಗಮನಿಸಿ. |
01:46 | ಇದರ ನಡುವೆ ತಂತಿಗಳ ಸಾಲುಗಳನ್ನು ಒಟ್ಟಿಗೆ ಸಂಪರ್ಕಿಸಲಾಗಿದೆ. |
01:51 | ಉದಾಹರಣೆಗೆ, ಹಸಿರು ಬಣ್ಣದಿಂದ ಗುರುತಿಸಿದ ಎಲ್ಲಾ ತೂತುಗಳನ್ನು ಒಟ್ಟಿಗೆ ಸಂಪರ್ಕಿಸಲಾಗಿದೆ.
ಆದರೆ ಅವುಗಳನ್ನು ಹಳದಿ ತೂತುಗಳಿಗೆ ಸಂಪರ್ಕಿಸಿಲ್ಲ. |
02:02 | ನಾವೀಗ ಎಲ್.ಇ.ಡಿ ಕುರಿತು ಕಲಿಯೋಣ.
ಎಲ್.ಇ.ಡಿ ಎಂದರೆ ಲೈಟ್ ಎಮಿಟಿಂಗ್ ಡಯೋಡ್ ಎಂದರ್ಥ. |
02:11 | ತನ್ನ ಮೂಲಕ ವಿದ್ಯುತ್ ಪ್ರವಾಹ ಹರಿದಾಗ ಇದು ಬಣ್ಣದ ಬೆಳಕನ್ನು ಹೊರಸೂಸುತ್ತದೆ. |
02:16 | ಎಲ್.ಇ.ಡಿ ಯು ಆನೋಡ್ ಮತ್ತು ಕ್ಯಾಥೋಡ್ ಎಂಬ ಎರಡು ಲೀಡ್ ಗಳನ್ನು ಹೊಂದಿದೆ. |
02:22 | ಆನೋಡ್ ಲೀಡ್ ಹೆಚ್ಚು ಉದ್ದವಿದೆ. ಇದನ್ನು ಪಾಸಿಟಿವ್ ವೋಲ್ಟೇಜ್ ಗೆ ಸಂಪರ್ಕಿಸಬೇಕು. |
02:29 | ಕ್ಯಾಥೋಡ್ ಲೀಡ್ ಗಿಡ್ಡದಾಗಿದೆ. ಇದನ್ನು ಗ್ರೌಂಡ್ ಗೆ ಸಂಪರ್ಕಿಸಬೇಕು. |
02:35 | ಟ್ರೈ-ಕಲರ್ ಎಲ್.ಇ.ಡಿ ಎನ್ನುವುದು ಎಲ್.ಇ.ಡಿ ಯ ಸುಧಾರಿತ ಆವೃತ್ತಿಯಾಗಿದ್ದು, ಇದು ಮೂರು ವಿಭಿನ್ನ ಬಣ್ಣಗಳನ್ನು ಹೊರಸೂಸುತ್ತದೆ. |
02:43 | ಇದು ನಾಲ್ಕು ಪಿನ್ ಗಳನ್ನು ಹೊಂದಿದೆ. ಅತ್ಯಂತ ದೀರ್ಘ ಲೀಡ್ ಅನ್ನು ಕಾಮನ್ ಲೀಡ್ ಎನ್ನಲಾಗುತ್ತದೆ. |
02:50 | ಉಳಿದ ಮೂರು ಪಿನ್ ಗಳು ಕೆಂಪು, ಹಸಿರು, ಮತ್ತು ನೀಲಿ ಬಣ್ಣದ ಎಲ್.ಇ.ಡಿ ಗಳಿಗಾಗಿ ಇವೆ. |
02:57 | ಎರಡು ಪ್ರಕಾರದ ಟ್ರೈ-ಕಲರ್ ಎಲ್.ಇ.ಡಿ ಗಳಿವೆ: ಅವೆಂದರೆ ಕಾಮನ್ ಆನೋಡ್ ಮತ್ತು ಕಾಮನ್ ಕ್ಯಾಥೋಡ್. |
03:07 | ಕಾಮನ್ ಆನೋಡ್ ಆವೃತ್ತಿಯಲ್ಲಿ ಕಾಮನ್ ಲೀಡ್ ಅನ್ನು ಪಾಸಿಟಿವ್ ವೋಲ್ಟೇಜ್ ಗೆ ಸಂಪರ್ಕಿಸಬೇಕು. |
03:14 | ಕಾಮನ್ ಕ್ಯಾಥೋಡ್ ಆವೃತ್ತಿಯಲ್ಲಿ ಕಾಮನ್ ಲೀಡ್ ಅನ್ನು ಗ್ರೌಂಡ್ ಗೆ ಸಂಪರ್ಕಿಸಬೇಕು. |
03:21 | ನಂತರ ನಾವು ರೆಸಿಸ್ಟರ್ ಕುರಿತು ಕಲಿಯೋಣ. |
03:25 | ಸರ್ಕಿಟ್ ನಲ್ಲಿ ಹರಿಯುವ ವಿದ್ಯುತ್ ಪ್ರವಾಹವನ್ನು ಮಿತಿಗೊಳಿಸಲು ರೆಸಿಸ್ಟರ್ ಬಳಸಲಾಗುತ್ತದೆ. |
03:30 | ನಾವೀಗ ಎಲ್.ಇ.ಡಿ, ರೆಸಿಸ್ಟರ್ ಮತ್ತು ಬ್ರೆಡ್ ಬೋರ್ಡ್ ಬಳಸಿ ಸರಳವಾದ ಸರ್ಕಿಟ್ ರಚಿಸೋಣ. |
03:37 | ಈ ಚಿತ್ರವು ಸರಿಯಾದ ಸಂಪರ್ಕಗಳನ್ನು ತೋರಿಸುತ್ತದೆ. |
03:41 | 9 ವೋಲ್ಟ್ ಬ್ಯಾಟರಿಯ ಪಾಸಿಟಿವ್ ಅನ್ನು ಎರಡನೇ ರೇಲ್ ಗೆ ಸಂಪರ್ಕಿಸಲಾಗಿದೆ. |
03:46 | 9 ವೋಲ್ಟ್ ಬ್ಯಾಟರಿಯ ನೆಗೆಟಿವ್ ಅನ್ನು 1ನೇ ರೇಲ್ ಗೆ ಸಂಪರ್ಕಿಸಲಾಗಿದೆ. |
03:51 | ಎಲ್.ಇ.ಡಿ ಯ ಆನೋಡ್ (ಅಂದರೆ ಬಲಗಡೆಯ ಲೀಡ್) ಅನ್ನು, ರೆಸಿಸ್ಟರ್ ಮೂಲಕ ಬ್ರೆಡ್ ಬೋರ್ಡ್ ನ 2ನೇ ರೇಲ್ ಗೆ ಸಂಪರ್ಕಿಸಲಾಗಿದೆ. |
04:00 | ಎಲ್.ಇ.ಡಿ ಯ ಕ್ಯಾಥೋಡ್ (ಅಂದರೆ ಎಡಗಡೆಯ ಲೀಡ್) ಅನ್ನು ಬ್ರೆಡ್ ಬೋರ್ಡ್ ನ 1ನೇ ರೇಲ್ ಗೆ ಸಂಪರ್ಕಿಸಲಾಗಿದೆ. |
04:08 | ಇದು ಎಲ್.ಇ.ಡಿ ಸಂಪರ್ಕಗಳ ಲೈವ್ ಸೆಟಪ್ ಆಗಿದೆ. |
04:13 | ಎಲ್.ಇ.ಡಿ ಮಿನುಗುತ್ತಿರುವುದನ್ನು ನೀವು ನೋಡಬಹುದು. ಏಕೆಂದರೆ ನಾವು ಬಳಸಿದ ಸಂಪರ್ಕಗಳು ಸರಿ ಇವೆ. |
04:21 | ಸಂಪರ್ಕ ಮಾಡಲು ಬ್ರೆಡ್ ಬೋರ್ಡ್ ಬಳಸುವಾಗ ಜನರು ಮಾಡುವ ಸಾಮಾನ್ಯ ತಪ್ಪುಗಳತ್ತ ನಾವೀಗ ಗಮನ ಹರಿಸೋಣ. |
04:29 | ಈ ಸಂಪರ್ಕದಲ್ಲಿ, ಎಲ್.ಇ.ಡಿ ಮಿನುಗುವುದಿಲ್ಲ. ಏಕೆಂದರೆ ಸಂಪರ್ಕಗಳು ಸರಿ ಇಲ್ಲ. |
04:36 | ರೆಸಿಸ್ಟರ್ ಮತ್ತು ಎಲ್.ಇ.ಡಿ ಗಳನ್ನು ಅಕ್ಕಪಕ್ಕ ಇಡಲಾಗಿದೆ. |
04:41 | ಪವರ್ ರೇಲ್ ಗಳನ್ನು ಹೊರತುಪಡಿಸಿ, ಬ್ರೆಡ್ ಬೋರ್ಡ್ ನಲ್ಲಿ ಉಳಿದ ತೂತುಗಳನ್ನು ಕಾಲಂ ಪ್ರಕಾರ ಸಂಪರ್ಕಿಸಲಾಗಿದೆ. |
04:47 | ಹೀಗಾಗಿ ಎಲ್.ಇ.ಡಿ ಯ ಆನೋಡ್ ಮತ್ತು ರೆಸಿಸ್ಟರ್ ಲೀಡ್ ನಡುವೆ ಸಂಪರ್ಕ ಏರ್ಪಟ್ಟಿಲ್ಲ.
ಇದು ಎಲ್.ಇ.ಡಿ ಯನ್ನು ಪ್ರತ್ಯೇಕಿಸುತ್ತದೆ. |
04:57 | ಮುಂದಿನ ಸಂಪರ್ಕದಲ್ಲಿ, ಎಲ್.ಇ.ಡಿ ಯ ಕ್ಯಾಥೋಡ್ ಅನ್ನು 2ನೇ ರೇಲ್ ಗೆ ಸಂಪರ್ಕಿಸಲಾಗಿದೆ. |
05:04 | ಎಲ್.ಇ.ಡಿ ಯ ಆನೋಡ್ ಅನ್ನು ರೆಸಿಸ್ಟರ್ ಮೂಲಕ 1ನೇ ರೇಲ್ ಗೆ ಸಂಪರ್ಕಿಸಲಾಗಿದೆ. |
05:10 | ಈ ಸರ್ಕಿಟ್ ನಲ್ಲಿ ಸಂಪರ್ಕಗಳು ಹೇಗಿರಬೇಕಿತ್ತೋ, ಅದಕ್ಕೆ ತದ್ವಿರುದ್ಧವಾಗಿದೆ.
ಹೀಗಾಗಿ ಎಲ್.ಇ.ಡಿ ಮಿನುಗುತ್ತಿಲ್ಲ. |
05:18 | ನಾವೀಗ ಪುಶ್ ಬಟನ್ ಗಳ ಕುರಿತು ಕಲಿಯೋಣ. |
05:23 | ಪುಶ್ ಬಟನ್ ಎನ್ನುವುದು ಸರಳ ಸ್ವಿಚ್ ಮೆಕಾನಿಸಂ ಆಗಿದ್ದು, ಒತ್ತಿದಾಗ ಇದು ಸರ್ಕಿಟ್ ನಲ್ಲಿ ಎರಡು ಪಾಯಿಂಟ್ ಗಳನ್ನು ಸಂಪರ್ಕಿಸುತ್ತದೆ. |
05:31 | ಪುಶ್ ಬಟನ್ ಸಾಮಾನ್ಯವಾಗಿ ನಾಲ್ಕು ಕಾಲುಗಳೊಂದಿಗೆ ಬರುತ್ತದೆ. |
05:35 | ಸ್ವಿಚ್ ನ ಸ್ಥಾನ ಯಾವುದೇ ಇರಲಿ, A ಮತ್ತು C ಕಾಲುಗಳು ಯಾವಾಗಲೂ ಸಂಪರ್ಕಿತವಾಗಿರುತ್ತವೆ. |
05:43 | ಇದೇ ರೀತಿ B ಮತ್ತು D ಕಾಲುಗಳು ಸಂಪರ್ಕಿತವಾಗಿರುತ್ತವೆ. |
05:48 | ಸ್ವಿಚ್ ಅನ್ನು ಒತ್ತಿದಾಗ, ಎಲ್ಲಾ ನಾಲ್ಕು ಕಾಲುಗಳು ಪರಸ್ಪರ ಸಂಪರ್ಕಕ್ಕೆ ಬರುತ್ತವೆ. |
05:53 | ನಾವೀಗ ಪುಶ್ ಬಟನ್ ಅನ್ನು ಹಿಂದಿನ ಸರ್ಕಿಟ್ ಗೆ ಸೇರಿಸೋಣ ಮತ್ತು ಎಲ್.ಇ.ಡಿ ಯ ಸ್ಥಾನವನ್ನು ಬದಲಾಯಿಸಲು ಬಳಸೋಣ. |
06:02 | ಈ ಚಿತ್ರವು ಸರಿಯಾದ ಸಂಪರ್ಕಗಳನ್ನು ತೋರಿಸುತ್ತದೆ.
ಎಲ್.ಇ.ಡಿ ಅನೋಡ್ ಅನ್ನು 2ನೇ ಪವರ್ ರೇಲ್ ಗೆ, ಅಂದರೆ ರೆಸಿಸ್ಟರ್ ಮತ್ತು ಪುಶ್ ಬಟನ್ ಮೂಲಕ ಪಾಸಿಟಿವ್ ವೋಲ್ಟೆಜ್ ಗೆ ಸಂಪರ್ಕಿಸಲಾಗುತ್ತದೆ. |
06:15 | ನಾವೀಗ ಲೈವ್ ಸೆಟಪ್ ಕನೆಕ್ಶನ್ ನೋಡೋಣ. |
06:19 | ಪುಶ್ ಬಟನ್ ಒತ್ತಿದಾಗ, ಎಲ್.ಇ.ಡಿ ಯು ನಿರೀಕ್ಷೆಯಂತೆ ಮಿನುಗುತ್ತದೆ. |
06:25 | ಪುಶ್ ಬಟನ್ ನಲ್ಲಿ ನಾಲ್ಕು ಕಾಲುಗಳು ಇರುವುದರಿಂದ, ಸರ್ಕಿಟ್ ಅನ್ನು ಇನ್ನೊಂದು ರೀತಿಯಲ್ಲೂ ನಿರ್ಮಿಸಬಹುದು. |
06:32 | ಪುಶ್ ಬಟನ್ ನ B ಕಾಲಿನ ಬದಲಿಗೆ ನಾವು D ಕಾಲನ್ನು ಬಳಸುತ್ತಿದ್ದೇವೆ. |
06:38 | ಅವು ಆಂತರಿಕ ಪರಸ್ಪರ ಸಂಪರ್ಕ ಹೊಂದಿರುವುದರಿಂದ, ಪುಶ್ ಬಟನ್ ಒತ್ತಿದಾಗ ಎಲ್.ಇ.ಡಿ ಮಿನುಗುತ್ತದೆ. |
06:45 | ನಂತರ, ಪುಶ್ ಬಟನ್ ಗಳನ್ನು ಬಳಸುವಾಗ ಜನರು ಮಾಡುವ ಸಾಮಾನ್ಯ ತಪ್ಪುಗಳನ್ನು ನಾವು ನೋಡೋಣ. |
06:52 | ಈ ಚಿತ್ರವನ್ನು ನೋಡಿ.
ಎಲ್.ಇ.ಡಿ ಯ ಅನೋಡ್ ಅನ್ನು ಪುಶ್ ಬಟನ್ ನ A ಮತ್ತು C ಕಾಲುಗಳ ಮೂಲಕ 2ನೇ ಪವರ್ ರೇಲ್ ಗೆ ಸಂಪರ್ಕಿಸಲಾಗಿದೆ. |
07:03 | A ಮತ್ತು C ಪುಶ್ ಬಟನ್ ಗಳು ಆಂತರಿಕವಾಗಿ ಸಂಪರ್ಕಿತವಾಗಿವೆ ಎಂಬುದನ್ನು ನೆನಪಿಸಿ. |
07:10 | ಹೀಗೆ, ಪುಶ್ ಬಟನ್ ಹೇಗೂ ಇರಲಿ, ಎಲ್.ಇ.ಡಿ ಯ ಆನೋಡ್ ಯಾವಾಗಲೂ 2ನೇ ಪವರ್ ರೇಲ್ ಗೆ ಸಂಪರ್ಕಿತವಾಗಿರುತ್ತದೆ. |
07:19 | ಪುಶ್ ಬಟನ್ ಆಫ್ ಆಗಿದ್ದರೂ ಸಹ, ಸರ್ಕಿಟ್ ನಲ್ಲಿ ಎಲ್.ಇ.ಡಿ ಯಾವಾಗಲೂ ಮಿನುಗುತ್ತದೆ. |
07:26 | ನಾವೀಗ ಸೆವೆನ್-ಸೆಗ್ಮೆಂಟ್ ಡಿಸ್ಪ್ಲೇಗೆ ಸಾಗೋಣ. |
07:31 | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯು, ಎಂಟರ ಅಂಕಿಯ ಆಕಾರದಲ್ಲಿ ಅಣಿಗೊಳಿಸಿರುವ ಏಳು ಎಲ್.ಇ.ಡಿ ಗಳನ್ನು ಹೊಂದಿದೆ. |
07:38 | ಎರಡು ವಿಧದ ಸೆವೆನ್-ಸೆಗ್ಮೆಂಟ್ ಡಿಸ್ಪ್ಲೇಗಳಿವೆ. ಅವೆಂದರೆ ಕಾಮನ್ ಅನೋಡ್ ಮತ್ತು ಕಾಮನ್ ಕ್ಯಾಥೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ. |
07:49 | ಕಾಮನ್ ಕ್ಯಾಥೋಡ್ ಸೆವೆನ್-ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ a, b, c, d, e, f, g ಮತ್ತು dot ಪಿನ್ ಗಳು +5 ವೋಲ್ಟ್ಸ್ ಗೆ ಸಂಪರ್ಕ ಹೊಂದಿರಬೇಕು. |
08:02 | ಎರಡು COM ಪಿನ್ ಗಳು ಗ್ರೌಂಡ್ (GND) ಗೆ ಸಂಪರ್ಕಿಸಿರಬೇಕು. |
08:07 | ಕಾಮನ್ ಆನೋಡ್ ಡಿಸ್ಪ್ಲೇಯು ಇದಕ್ಕೆ ತದ್ವಿರುದ್ಧವಾಗಿರುತ್ತದೆ. |
08:11 | ಇಲ್ಲಿ, a, b, c, d, e, f, g ಮತ್ತು dot ಪಿನ್ ಗಳು ಗ್ರೌಂಡ್ ಗೆ ಸಂಪರ್ಕಿಸಿರಬೇಕು.
ಮತ್ತು COM ಪಿನ್ ಗಳನ್ನು +5 ವೋಲ್ಟ್ಸ್ ಗೆ ಸಂಪರ್ಕಿಸಿರಬೇಕು. |
08:26 | ಈಗ, ಸೆವೆನ್-ಸೆಗ್ಮೆಂಟ್ ಡಿಸ್ಪ್ಲೇಯನ್ನು ಬ್ರೆಡ್ ಬೋರ್ಡ್ ನಲ್ಲಿ ಹೇಗೆ ಸಂಪರ್ಕಿಸುವುದು ಮತ್ತು ಎಲ್ಲಾ ಎಲ್.ಇ.ಡಿ ಗಳನ್ನು ಮಿನುಗಿಸುವುದು ಹೇಗೆ ಎಂದು ನೋಡೋಣ. |
08:35 | ಈ ಚಿತ್ರದಲ್ಲಿ ಬಳಸಿರುವ ಸೆವೆನ್-ಸೆಗ್ಮೆಂಟ್ ಡಿಸ್ಪ್ಲೇಯು ಕಾಮನ್ ಅನೋಡ್ ಆಗಿದೆ. |
08:41 | ಹೀಗಾಗಿ, ಕಾಮನ್ ಅನೋಡ್ ಅನ್ನು ರೆಸಿಸ್ಟರ್ ಮೂಲಕ 2ನೇ ಪವರ್ ರೇಲ್ ಗೆ ಸಂಪರ್ಕಿಸಲಾಗಿದೆ. |
08:48 | a, b, c, d, e, f, g, dot ಎಲ್.ಇ.ಡಿ ಪಿನ್ ಗಳನ್ನು 1ನೇ ಪವರ್ ರೇಲ್ ಗೆ ಸಂಪರ್ಕಿಸಲಾಗಿದೆ. |
08:56 | ಸಂಪರ್ಕ ಸರಿ ಇದ್ದರೆ, ಎಲ್ಲಾ ಎಲ್.ಇ.ಡಿ ಗಳು ಮಿನುಗುವುದನ್ನು ನಾವು ನೋಡಬಹುದು. |
09:02 | ಲೈವ್ ಸೆಟಪ್ ಸಂಪರ್ಕವನ್ನು ನಾವು ನೋಡೋಣ. |
09:05 | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಎಲ್ಲಾ ವಿಭಾಗಗಳು ಮಿನುಗುತ್ತಿರುವುದನ್ನು ನಾವು ನೋಡಬಹುದು. |
09:11 | ಇದರೊಂದಿಗೆ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ನಾವು ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ. |
09:17 | ಈ ಟ್ಯುಟೋರಿಯಲ್ ನಲ್ಲಿ ನಾವು ಬ್ರೆಡ್ ಬೋರ್ಡ್ ಮತ್ತು ಇದರ ಆಂತರಿಕ ಸಂಪರ್ಕಗಳು, |
09:24 | ಬ್ರೆಡ್ ಬೋರ್ಡ್ ನಲ್ಲಿ ಎಲ್.ಇ.ಡಿ, ಬ್ರೆಡ್ ಬೋರ್ಡ್ ನಲ್ಲಿ ಪುಶ್ ಬಟನ್ ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಕಲಿತೆವು. |
09:33 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
09:41 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ. |
09:51 | ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?
ದಯವಿಟ್ಟು ಈ ಸೈಟ್ ಗೆ ಭೇಟಿ ನೀಡಿ. |
09:57 | ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ. ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. |
10:04 | ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ. |
10:07 | ಸ್ಪೋಕನ್ ಟ್ಯುಟೋರಿಯಲ್ ಫಾರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ.
ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. |
10:17 | ಇದು ಅಸ್ತವ್ಯಸ್ತತೆಯನ್ನು ಕಡಿಮೆ ಮಾಡಲು ಸಹಕರಿಸಲಿದೆ.
ಕಡಿಮೆ ಅಸ್ತವ್ಯಸ್ತತೆಯೊಂದಿಗೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು. |
10:26 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ. |
10.37 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |