Arduino/C2/Electronic-components-and-connections/Kannada

From Script | Spoken-Tutorial
Jump to: navigation, search
Time Narration


00:01 ಎಲೆಕ್ಟ್ರಾನಿಕ್ ಕಾಂಪೋನೆಂಟ್ ಗಳು ಮತ್ತು ಸಂಪರ್ಕಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, ಬ್ರೆಡ್ ಬೋರ್ಡ್ ಮತ್ತು ಇದರ ಆಂತರಿಕ ಸಂಪರ್ಕಗಳು,
00:14 ಬ್ರೆಡ್ ಬೋರ್ಡ್ ನಲ್ಲಿ ಎಲ್.ಇ.ಡಿ, ಬ್ರೆಡ್ ಬೋರ್ಡ್ ನಲ್ಲಿ ಪುಶ್ ಬಟನ್ ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಬಳಸಲು ಕಲಿಯಲಿದ್ದೇವೆ.
00:23 ಈ ಸರಣಿಯನ್ನು ಅನುಸರಿಸಲು ನೀವು ರೆಸಿಸ್ಟರ್ ಗಳು, ಪುಶ್ ಬಟನ್, ಎಲ್.ಇ.ಡಿ, ಓಪನ್ ಸರ್ಕಿಟ್,

ಕ್ಲೋಸ್ಡ್ ಸರ್ಕಿಟ್,

00:34 ಸರಣಿ ಮತ್ತು ಸಮಾಂತರ ಸಂಪರ್ಕಗಳು,
00:38 ಬ್ಯಾಟರಿಗಳು, ಪಾಸಿಟಿವ್ ಮತ್ತು ನೆಗೆಟಿವ್ ವೋಲ್ಟೆಜ್ -
00:41 ಮುಂತಾದ ಎಲೆಕ್ಟ್ರಾನಿಕ್ ಘಟಕಗಳ ಮೂಲಭೂತ ಜ್ಞಾನ ಹೊಂದಿರಬೇಕು.
00:47 ಈ ಕೆಳಗಿನ ಘಟಕಗಳನ್ನು ಬಳಸಿ ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲಾಗಿದೆ:

ಬ್ರೆಡ್ ಬೋರ್ಡ್,

00:54 ಎಲ್.ಇ.ಡಿ, ಅಥವಾ ಟ್ರೈಕಲರ್ ಎಲ್.ಇ.ಡಿ, ಪುಶ್ ಬಟನ್,
01:00 ರೆಸಿಸ್ಟರ್ ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ.
01:06 ಬ್ರೆಡ್ ಬೋರ್ಡ್ ಈ ರೀತಿ ಕಾಣಿಸುತ್ತದೆ.
01:11 ಬ್ರೆಡ್ ಬೋರ್ಡ್ ಎನ್ನುವುದು ಒಂದು ಸಾಧನವಾಗಿದ್ದು, ಸರ್ಕಿಟ್ ನ ಘಟಕಗಳನ್ನು ಹಿಡಿದಿಟ್ಟು ಕೊಳ್ಳುತ್ತದೆ ಮತ್ತು ಅವುಗಳನ್ನು ಒಟ್ಟಿಗೆ ಸಂಪರ್ಕಿಸುತ್ತದೆ.
01:18 ಯಾವುದೇ ಬೆಸುಗೆ ಮಾಡದೆಯೇ ನಾವು ಬ್ರೆಡ್ ಬೋರ್ಡ್ ಮೇಲೆ ಎಲೆಕ್ಟ್ರಾನಿಕ್ ಸರ್ಕಿಟ್ ಅನ್ನು ನಿರ್ಮಿಸಬಹುದು.
01:25 ಮೇಲಿನ ಎರಡು ರೇಲ್ ಗಳು ಮತ್ತು ಕೆಳಗಿನ ಎರಡು ರೇಲ್ ಗಳನ್ನು ಪವರ್ ರೇಲ್ ಗಳೆಂದು ಕರೆಯಲಾಗುತ್ತದೆ.
01:31 ಮೇಲಿನ ಎಲ್ಲಾ ತೂತುಗಳ ಸಾಲನ್ನು ಒಟ್ಟಿಗೆ ಸಂಪರ್ಕಿಸಲಾಗಿದೆ ಮತ್ತು ಇವುಗಳನ್ನು ಕೆಂಪು ಚುಕ್ಕೆಗಳು ಮತ್ತು ನೀಲಿ ಚುಕ್ಕೆಗಳಿಂದ ಗುರುತಿಸಲಾಗಿದೆ.
01:41 ಬ್ರೆಡ್ ಬೋರ್ಡ್ ನ ನಡುವೆ ಸಂಪರ್ಕವು ಬೇರ್ಪಡಿಸುತ್ತದೆ ಎಂಬುದನ್ನು ಗಮನಿಸಿ.
01:46 ಇದರ ನಡುವೆ ತಂತಿಗಳ ಸಾಲುಗಳನ್ನು ಒಟ್ಟಿಗೆ ಸಂಪರ್ಕಿಸಲಾಗಿದೆ.
01:51 ಉದಾಹರಣೆಗೆ, ಹಸಿರು ಬಣ್ಣದಿಂದ ಗುರುತಿಸಿದ ಎಲ್ಲಾ ತೂತುಗಳನ್ನು ಒಟ್ಟಿಗೆ ಸಂಪರ್ಕಿಸಲಾಗಿದೆ.

ಆದರೆ ಅವುಗಳನ್ನು ಹಳದಿ ತೂತುಗಳಿಗೆ ಸಂಪರ್ಕಿಸಿಲ್ಲ.

02:02 ನಾವೀಗ ಎಲ್.ಇ.ಡಿ ಕುರಿತು ಕಲಿಯೋಣ.

ಎಲ್.ಇ.ಡಿ ಎಂದರೆ ಲೈಟ್ ಎಮಿಟಿಂಗ್ ಡಯೋಡ್ ಎಂದರ್ಥ.

02:11 ತನ್ನ ಮೂಲಕ ವಿದ್ಯುತ್ ಪ್ರವಾಹ ಹರಿದಾಗ ಇದು ಬಣ್ಣದ ಬೆಳಕನ್ನು ಹೊರಸೂಸುತ್ತದೆ.
02:16 ಎಲ್.ಇ.ಡಿ ಯು ಆನೋಡ್ ಮತ್ತು ಕ್ಯಾಥೋಡ್ ಎಂಬ ಎರಡು ಲೀಡ್ ಗಳನ್ನು ಹೊಂದಿದೆ.
02:22 ಆನೋಡ್ ಲೀಡ್ ಹೆಚ್ಚು ಉದ್ದವಿದೆ. ಇದನ್ನು ಪಾಸಿಟಿವ್ ವೋಲ್ಟೇಜ್ ಗೆ ಸಂಪರ್ಕಿಸಬೇಕು.
02:29 ಕ್ಯಾಥೋಡ್ ಲೀಡ್ ಗಿಡ್ಡದಾಗಿದೆ. ಇದನ್ನು ಗ್ರೌಂಡ್ ಗೆ ಸಂಪರ್ಕಿಸಬೇಕು.
02:35 ಟ್ರೈ-ಕಲರ್ ಎಲ್.ಇ.ಡಿ ಎನ್ನುವುದು ಎಲ್.ಇ.ಡಿ ಯ ಸುಧಾರಿತ ಆವೃತ್ತಿಯಾಗಿದ್ದು, ಇದು ಮೂರು ವಿಭಿನ್ನ ಬಣ್ಣಗಳನ್ನು ಹೊರಸೂಸುತ್ತದೆ.
02:43 ಇದು ನಾಲ್ಕು ಪಿನ್ ಗಳನ್ನು ಹೊಂದಿದೆ. ಅತ್ಯಂತ ದೀರ್ಘ ಲೀಡ್ ಅನ್ನು ಕಾಮನ್ ಲೀಡ್ ಎನ್ನಲಾಗುತ್ತದೆ.
02:50 ಉಳಿದ ಮೂರು ಪಿನ್ ಗಳು ಕೆಂಪು, ಹಸಿರು, ಮತ್ತು ನೀಲಿ ಬಣ್ಣದ ಎಲ್.ಇ.ಡಿ ಗಳಿಗಾಗಿ ಇವೆ.
02:57 ಎರಡು ಪ್ರಕಾರದ ಟ್ರೈ-ಕಲರ್ ಎಲ್.ಇ.ಡಿ ಗಳಿವೆ: ಅವೆಂದರೆ ಕಾಮನ್ ಆನೋಡ್ ಮತ್ತು ಕಾಮನ್ ಕ್ಯಾಥೋಡ್.
03:07 ಕಾಮನ್ ಆನೋಡ್ ಆವೃತ್ತಿಯಲ್ಲಿ ಕಾಮನ್ ಲೀಡ್ ಅನ್ನು ಪಾಸಿಟಿವ್ ವೋಲ್ಟೇಜ್ ಗೆ ಸಂಪರ್ಕಿಸಬೇಕು.
03:14 ಕಾಮನ್ ಕ್ಯಾಥೋಡ್ ಆವೃತ್ತಿಯಲ್ಲಿ ಕಾಮನ್ ಲೀಡ್ ಅನ್ನು ಗ್ರೌಂಡ್ ಗೆ ಸಂಪರ್ಕಿಸಬೇಕು.
03:21 ನಂತರ ನಾವು ರೆಸಿಸ್ಟರ್ ಕುರಿತು ಕಲಿಯೋಣ.
03:25 ಸರ್ಕಿಟ್ ನಲ್ಲಿ ಹರಿಯುವ ವಿದ್ಯುತ್ ಪ್ರವಾಹವನ್ನು ಮಿತಿಗೊಳಿಸಲು ರೆಸಿಸ್ಟರ್ ಬಳಸಲಾಗುತ್ತದೆ.
03:30 ನಾವೀಗ ಎಲ್.ಇ.ಡಿ, ರೆಸಿಸ್ಟರ್ ಮತ್ತು ಬ್ರೆಡ್ ಬೋರ್ಡ್ ಬಳಸಿ ಸರಳವಾದ ಸರ್ಕಿಟ್ ರಚಿಸೋಣ.
03:37 ಈ ಚಿತ್ರವು ಸರಿಯಾದ ಸಂಪರ್ಕಗಳನ್ನು ತೋರಿಸುತ್ತದೆ.
03:41 9 ವೋಲ್ಟ್ ಬ್ಯಾಟರಿಯ ಪಾಸಿಟಿವ್ ಅನ್ನು ಎರಡನೇ ರೇಲ್ ಗೆ ಸಂಪರ್ಕಿಸಲಾಗಿದೆ.
03:46 9 ವೋಲ್ಟ್ ಬ್ಯಾಟರಿಯ ನೆಗೆಟಿವ್ ಅನ್ನು 1ನೇ ರೇಲ್ ಗೆ ಸಂಪರ್ಕಿಸಲಾಗಿದೆ.
03:51 ಎಲ್.ಇ.ಡಿ ಯ ಆನೋಡ್ (ಅಂದರೆ ಬಲಗಡೆಯ ಲೀಡ್) ಅನ್ನು, ರೆಸಿಸ್ಟರ್ ಮೂಲಕ ಬ್ರೆಡ್ ಬೋರ್ಡ್ ನ 2ನೇ ರೇಲ್ ಗೆ ಸಂಪರ್ಕಿಸಲಾಗಿದೆ.
04:00 ಎಲ್.ಇ.ಡಿ ಯ ಕ್ಯಾಥೋಡ್ (ಅಂದರೆ ಎಡಗಡೆಯ ಲೀಡ್) ಅನ್ನು ಬ್ರೆಡ್ ಬೋರ್ಡ್ ನ 1ನೇ ರೇಲ್ ಗೆ ಸಂಪರ್ಕಿಸಲಾಗಿದೆ.
04:08 ಇದು ಎಲ್.ಇ.ಡಿ ಸಂಪರ್ಕಗಳ ಲೈವ್ ಸೆಟಪ್ ಆಗಿದೆ.
04:13 ಎಲ್.ಇ.ಡಿ ಮಿನುಗುತ್ತಿರುವುದನ್ನು ನೀವು ನೋಡಬಹುದು. ಏಕೆಂದರೆ ನಾವು ಬಳಸಿದ ಸಂಪರ್ಕಗಳು ಸರಿ ಇವೆ.
04:21 ಸಂಪರ್ಕ ಮಾಡಲು ಬ್ರೆಡ್ ಬೋರ್ಡ್ ಬಳಸುವಾಗ ಜನರು ಮಾಡುವ ಸಾಮಾನ್ಯ ತಪ್ಪುಗಳತ್ತ ನಾವೀಗ ಗಮನ ಹರಿಸೋಣ.
04:29 ಈ ಸಂಪರ್ಕದಲ್ಲಿ, ಎಲ್.ಇ.ಡಿ ಮಿನುಗುವುದಿಲ್ಲ. ಏಕೆಂದರೆ ಸಂಪರ್ಕಗಳು ಸರಿ ಇಲ್ಲ.
04:36 ರೆಸಿಸ್ಟರ್ ಮತ್ತು ಎಲ್.ಇ.ಡಿ ಗಳನ್ನು ಅಕ್ಕಪಕ್ಕ ಇಡಲಾಗಿದೆ.
04:41 ಪವರ್ ರೇಲ್ ಗಳನ್ನು ಹೊರತುಪಡಿಸಿ, ಬ್ರೆಡ್ ಬೋರ್ಡ್ ನಲ್ಲಿ ಉಳಿದ ತೂತುಗಳನ್ನು ಕಾಲಂ ಪ್ರಕಾರ ಸಂಪರ್ಕಿಸಲಾಗಿದೆ.
04:47 ಹೀಗಾಗಿ ಎಲ್.ಇ.ಡಿ ಯ ಆನೋಡ್ ಮತ್ತು ರೆಸಿಸ್ಟರ್ ಲೀಡ್ ನಡುವೆ ಸಂಪರ್ಕ ಏರ್ಪಟ್ಟಿಲ್ಲ.

ಇದು ಎಲ್.ಇ.ಡಿ ಯನ್ನು ಪ್ರತ್ಯೇಕಿಸುತ್ತದೆ.

04:57 ಮುಂದಿನ ಸಂಪರ್ಕದಲ್ಲಿ, ಎಲ್.ಇ.ಡಿ ಯ ಕ್ಯಾಥೋಡ್ ಅನ್ನು 2ನೇ ರೇಲ್ ಗೆ ಸಂಪರ್ಕಿಸಲಾಗಿದೆ.
05:04 ಎಲ್.ಇ.ಡಿ ಯ ಆನೋಡ್ ಅನ್ನು ರೆಸಿಸ್ಟರ್ ಮೂಲಕ 1ನೇ ರೇಲ್ ಗೆ ಸಂಪರ್ಕಿಸಲಾಗಿದೆ.
05:10 ಈ ಸರ್ಕಿಟ್ ನಲ್ಲಿ ಸಂಪರ್ಕಗಳು ಹೇಗಿರಬೇಕಿತ್ತೋ, ಅದಕ್ಕೆ ತದ್ವಿರುದ್ಧವಾಗಿದೆ.

ಹೀಗಾಗಿ ಎಲ್.ಇ.ಡಿ ಮಿನುಗುತ್ತಿಲ್ಲ.

05:18 ನಾವೀಗ ಪುಶ್ ಬಟನ್ ಗಳ ಕುರಿತು ಕಲಿಯೋಣ.
05:23 ಪುಶ್ ಬಟನ್ ಎನ್ನುವುದು ಸರಳ ಸ್ವಿಚ್ ಮೆಕಾನಿಸಂ ಆಗಿದ್ದು, ಒತ್ತಿದಾಗ ಇದು ಸರ್ಕಿಟ್ ನಲ್ಲಿ ಎರಡು ಪಾಯಿಂಟ್ ಗಳನ್ನು ಸಂಪರ್ಕಿಸುತ್ತದೆ.
05:31 ಪುಶ್ ಬಟನ್ ಸಾಮಾನ್ಯವಾಗಿ ನಾಲ್ಕು ಕಾಲುಗಳೊಂದಿಗೆ ಬರುತ್ತದೆ.
05:35 ಸ್ವಿಚ್ ನ ಸ್ಥಾನ ಯಾವುದೇ ಇರಲಿ, A ಮತ್ತು C ಕಾಲುಗಳು ಯಾವಾಗಲೂ ಸಂಪರ್ಕಿತವಾಗಿರುತ್ತವೆ.
05:43 ಇದೇ ರೀತಿ B ಮತ್ತು D ಕಾಲುಗಳು ಸಂಪರ್ಕಿತವಾಗಿರುತ್ತವೆ.
05:48 ಸ್ವಿಚ್ ಅನ್ನು ಒತ್ತಿದಾಗ, ಎಲ್ಲಾ ನಾಲ್ಕು ಕಾಲುಗಳು ಪರಸ್ಪರ ಸಂಪರ್ಕಕ್ಕೆ ಬರುತ್ತವೆ.
05:53 ನಾವೀಗ ಪುಶ್ ಬಟನ್ ಅನ್ನು ಹಿಂದಿನ ಸರ್ಕಿಟ್ ಗೆ ಸೇರಿಸೋಣ ಮತ್ತು ಎಲ್.ಇ.ಡಿ ಯ ಸ್ಥಾನವನ್ನು ಬದಲಾಯಿಸಲು ಬಳಸೋಣ.
06:02 ಈ ಚಿತ್ರವು ಸರಿಯಾದ ಸಂಪರ್ಕಗಳನ್ನು ತೋರಿಸುತ್ತದೆ.

ಎಲ್.ಇ.ಡಿ ಅನೋಡ್ ಅನ್ನು 2ನೇ ಪವರ್ ರೇಲ್ ಗೆ, ಅಂದರೆ ರೆಸಿಸ್ಟರ್ ಮತ್ತು ಪುಶ್ ಬಟನ್ ಮೂಲಕ ಪಾಸಿಟಿವ್ ವೋಲ್ಟೆಜ್ ಗೆ ಸಂಪರ್ಕಿಸಲಾಗುತ್ತದೆ.

06:15 ನಾವೀಗ ಲೈವ್ ಸೆಟಪ್ ಕನೆಕ್ಶನ್ ನೋಡೋಣ.
06:19 ಪುಶ್ ಬಟನ್ ಒತ್ತಿದಾಗ, ಎಲ್.ಇ.ಡಿ ಯು ನಿರೀಕ್ಷೆಯಂತೆ ಮಿನುಗುತ್ತದೆ.
06:25 ಪುಶ್ ಬಟನ್ ನಲ್ಲಿ ನಾಲ್ಕು ಕಾಲುಗಳು ಇರುವುದರಿಂದ, ಸರ್ಕಿಟ್ ಅನ್ನು ಇನ್ನೊಂದು ರೀತಿಯಲ್ಲೂ ನಿರ್ಮಿಸಬಹುದು.
06:32 ಪುಶ್ ಬಟನ್ ನ B ಕಾಲಿನ ಬದಲಿಗೆ ನಾವು D ಕಾಲನ್ನು ಬಳಸುತ್ತಿದ್ದೇವೆ.
06:38 ಅವು ಆಂತರಿಕ ಪರಸ್ಪರ ಸಂಪರ್ಕ ಹೊಂದಿರುವುದರಿಂದ, ಪುಶ್ ಬಟನ್ ಒತ್ತಿದಾಗ ಎಲ್.ಇ.ಡಿ ಮಿನುಗುತ್ತದೆ.
06:45 ನಂತರ, ಪುಶ್ ಬಟನ್ ಗಳನ್ನು ಬಳಸುವಾಗ ಜನರು ಮಾಡುವ ಸಾಮಾನ್ಯ ತಪ್ಪುಗಳನ್ನು ನಾವು ನೋಡೋಣ.
06:52 ಈ ಚಿತ್ರವನ್ನು ನೋಡಿ.

ಎಲ್.ಇ.ಡಿ ಯ ಅನೋಡ್ ಅನ್ನು ಪುಶ್ ಬಟನ್ ನ A ಮತ್ತು C ಕಾಲುಗಳ ಮೂಲಕ 2ನೇ ಪವರ್ ರೇಲ್ ಗೆ ಸಂಪರ್ಕಿಸಲಾಗಿದೆ.

07:03 A ಮತ್ತು C ಪುಶ್ ಬಟನ್ ಗಳು ಆಂತರಿಕವಾಗಿ ಸಂಪರ್ಕಿತವಾಗಿವೆ ಎಂಬುದನ್ನು ನೆನಪಿಸಿ.
07:10 ಹೀಗೆ, ಪುಶ್ ಬಟನ್ ಹೇಗೂ ಇರಲಿ, ಎಲ್.ಇ.ಡಿ ಯ ಆನೋಡ್ ಯಾವಾಗಲೂ 2ನೇ ಪವರ್ ರೇಲ್ ಗೆ ಸಂಪರ್ಕಿತವಾಗಿರುತ್ತದೆ.
07:19 ಪುಶ್ ಬಟನ್ ಆಫ್ ಆಗಿದ್ದರೂ ಸಹ, ಸರ್ಕಿಟ್ ನಲ್ಲಿ ಎಲ್.ಇ.ಡಿ ಯಾವಾಗಲೂ ಮಿನುಗುತ್ತದೆ.
07:26 ನಾವೀಗ ಸೆವೆನ್-ಸೆಗ್ಮೆಂಟ್ ಡಿಸ್ಪ್ಲೇಗೆ ಸಾಗೋಣ.
07:31 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯು, ಎಂಟರ ಅಂಕಿಯ ಆಕಾರದಲ್ಲಿ ಅಣಿಗೊಳಿಸಿರುವ ಏಳು ಎಲ್.ಇ.ಡಿ ಗಳನ್ನು ಹೊಂದಿದೆ.
07:38 ಎರಡು ವಿಧದ ಸೆವೆನ್-ಸೆಗ್ಮೆಂಟ್ ಡಿಸ್ಪ್ಲೇಗಳಿವೆ. ಅವೆಂದರೆ ಕಾಮನ್ ಅನೋಡ್ ಮತ್ತು ಕಾಮನ್ ಕ್ಯಾಥೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ.
07:49 ಕಾಮನ್ ಕ್ಯಾಥೋಡ್ ಸೆವೆನ್-ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ a, b, c, d, e, f, g ಮತ್ತು dot ಪಿನ್ ಗಳು +5 ವೋಲ್ಟ್ಸ್ ಗೆ ಸಂಪರ್ಕ ಹೊಂದಿರಬೇಕು.
08:02 ಎರಡು COM ಪಿನ್ ಗಳು ಗ್ರೌಂಡ್ (GND) ಗೆ ಸಂಪರ್ಕಿಸಿರಬೇಕು.
08:07 ಕಾಮನ್ ಆನೋಡ್ ಡಿಸ್ಪ್ಲೇಯು ಇದಕ್ಕೆ ತದ್ವಿರುದ್ಧವಾಗಿರುತ್ತದೆ.
08:11 ಇಲ್ಲಿ, a, b, c, d, e, f, g ಮತ್ತು dot ಪಿನ್ ಗಳು ಗ್ರೌಂಡ್ ಗೆ ಸಂಪರ್ಕಿಸಿರಬೇಕು.

ಮತ್ತು COM ಪಿನ್ ಗಳನ್ನು +5 ವೋಲ್ಟ್ಸ್ ಗೆ ಸಂಪರ್ಕಿಸಿರಬೇಕು.

08:26 ಈಗ, ಸೆವೆನ್-ಸೆಗ್ಮೆಂಟ್ ಡಿಸ್ಪ್ಲೇಯನ್ನು ಬ್ರೆಡ್ ಬೋರ್ಡ್ ನಲ್ಲಿ ಹೇಗೆ ಸಂಪರ್ಕಿಸುವುದು ಮತ್ತು ಎಲ್ಲಾ ಎಲ್.ಇ.ಡಿ ಗಳನ್ನು ಮಿನುಗಿಸುವುದು ಹೇಗೆ ಎಂದು ನೋಡೋಣ.
08:35 ಈ ಚಿತ್ರದಲ್ಲಿ ಬಳಸಿರುವ ಸೆವೆನ್-ಸೆಗ್ಮೆಂಟ್ ಡಿಸ್ಪ್ಲೇಯು ಕಾಮನ್ ಅನೋಡ್ ಆಗಿದೆ.
08:41 ಹೀಗಾಗಿ, ಕಾಮನ್ ಅನೋಡ್ ಅನ್ನು ರೆಸಿಸ್ಟರ್ ಮೂಲಕ 2ನೇ ಪವರ್ ರೇಲ್ ಗೆ ಸಂಪರ್ಕಿಸಲಾಗಿದೆ.
08:48 a, b, c, d, e, f, g, dot ಎಲ್.ಇ.ಡಿ ಪಿನ್ ಗಳನ್ನು 1ನೇ ಪವರ್ ರೇಲ್ ಗೆ ಸಂಪರ್ಕಿಸಲಾಗಿದೆ.
08:56 ಸಂಪರ್ಕ ಸರಿ ಇದ್ದರೆ, ಎಲ್ಲಾ ಎಲ್.ಇ.ಡಿ ಗಳು ಮಿನುಗುವುದನ್ನು ನಾವು ನೋಡಬಹುದು.
09:02 ಲೈವ್ ಸೆಟಪ್ ಸಂಪರ್ಕವನ್ನು ನಾವು ನೋಡೋಣ.
09:05 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಎಲ್ಲಾ ವಿಭಾಗಗಳು ಮಿನುಗುತ್ತಿರುವುದನ್ನು ನಾವು ನೋಡಬಹುದು.
09:11 ಇದರೊಂದಿಗೆ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ನಾವು ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
09:17 ಈ ಟ್ಯುಟೋರಿಯಲ್ ನಲ್ಲಿ ನಾವು ಬ್ರೆಡ್ ಬೋರ್ಡ್ ಮತ್ತು ಇದರ ಆಂತರಿಕ ಸಂಪರ್ಕಗಳು,
09:24 ಬ್ರೆಡ್ ಬೋರ್ಡ್ ನಲ್ಲಿ ಎಲ್.ಇ.ಡಿ, ಬ್ರೆಡ್ ಬೋರ್ಡ್ ನಲ್ಲಿ ಪುಶ್ ಬಟನ್ ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಕಲಿತೆವು.
09:33 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
09:41 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
09:51 ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?

ದಯವಿಟ್ಟು ಈ ಸೈಟ್ ಗೆ ಭೇಟಿ ನೀಡಿ.

09:57 ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ. ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
10:04 ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ.
10:07 ಸ್ಪೋಕನ್ ಟ್ಯುಟೋರಿಯಲ್ ಫೋರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ.

ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.

10:17 ಇದು ಅಸ್ತವ್ಯಸ್ತತೆಯನ್ನು ಕಡಿಮೆ ಮಾಡಲು ಸಹಕರಿಸಲಿದೆ. ಕಡಿಮೆ ಅಸ್ತವ್ಯಸ್ತತೆಯೊಂದಿಗೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು.
10:26 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ.

10.37 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Melkamiyar, Sandhya.np14