Difference between revisions of "FrontAccounting-2.4.7/C2/Items-and-Inventory-in-FrontAccounting/Kannada"
Sandhya.np14 (Talk | contribs) |
Sandhya.np14 (Talk | contribs) |
||
Line 147: | Line 147: | ||
|- | |- | ||
||03:08 | ||03:08 | ||
− | || ಇದೇ ರೀತಿ, ನೀವು ನಿಮ್ಮ ಕಂಪನಿಯ ಐಟಂಗಳಿಗೆ ಅಗತ್ಯವಿರುವ ‘ಯೂನಿಟ್ಸ್ ಆಫ್ | + | || ಇದೇ ರೀತಿ, ನೀವು ನಿಮ್ಮ ಕಂಪನಿಯ ಐಟಂಗಳಿಗೆ ಅಗತ್ಯವಿರುವ ‘ಯೂನಿಟ್ಸ್ ಆಫ್ ಮೆಜರ್’ ಸೇರಿಸಬೇಕು. |
|- | |- |
Latest revision as of 15:43, 16 June 2020
Time | Narration |
00:01 | FrontAccounting ನಲ್ಲಿ ಐಟಂಗಳು ಮತ್ತು ಇನ್ವೆಂಟರಿ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, FrontAccounting ನಲ್ಲಿ:
ಯೂನಿಟ್ಸ್ ಆಫ್ ಮೆಜರ್ (ಮಾಪನದ ಮಾನಗಳು), |
00:14 | ಐಟಂಗಳು, |
00:16 | ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್ ಇವುಗಳನ್ನು ಸೇರಿಸಲು ಕಲಿಯುವೆವು. |
00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು |
00:28 | FrontAccounting ವರ್ಶನ್ 2.4.7 ಇವುಗಳನ್ನು ಬಳಸುತ್ತಿದ್ದೇನೆ. |
00:32 | ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು, ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಹಾಗೂ ಬುಕ್-ಕೀಪಿಂಗ್ ನ ಬಗ್ಗೆ ನೀವು ತಿಳಿದಿರಬೇಕು. |
00:42 | ಅಲ್ಲದೆ, ನೀವು ಈಗಾಗಲೇ FrontAccounting ನಲ್ಲಿ ಒಂದು ಸಂಸ್ಥೆ/ಕಂಪನಿಯನ್ನು ಸೆಟಪ್ ಮಾಡಿರಬೇಕು. |
00:48 | ಇಲ್ಲದಿದ್ದಲ್ಲಿ, ಸಂಬಂಧಿತ FrontAccounting ಟ್ಯಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ. |
00:54 | FrontAccounting ಇಂಟರ್ ಫೇಸ್ ನಲ್ಲಿ ನೀವು ಕೆಲಸ ಪ್ರಾರಂಭಿಸುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ. |
01:00 | ಮೊದಲು, FrontAccounting ನಲ್ಲಿಯ ಐಟಂಗಳ ಬಗ್ಗೆ ನಾವು ತಿಳಿದುಕೊಳ್ಳೋಣ. |
01:06 | ಐಟಂಗಳು ಎಂದರೆ ವ್ಯವಹಾರದಲ್ಲಿ ನಾವು ಖರೀದಿಸಬಹುದಾದ ಮತ್ತು ಮಾರಬಲ್ಲ ವಸ್ತುಗಳಾಗಿವೆ. |
01:11 | ಒಂದು ಇನ್ವೆಂಟರಿ ಐಟಂ ಕುರಿತು ಅಗತ್ಯ ಮಾಹಿತಿಯನ್ನು ಪಟ್ಟಿ ಮಾಡುವ ದಾಖಲೆಯನ್ನು ನಾವು ಇಡಬೇಕು. |
01:18 | ಇನ್ವೆಂಟರಿ ಎಂದರೆ:
ಕೈಯಲ್ಲಿರುವ ಸರಕು, |
01:23 | ನಡೆಯುತ್ತಿರುವ ಕೆಲಸ,
ಕೈಯಲ್ಲಿರುವ ಕಚ್ಚಾ ಸಾಮಗ್ರಿಗಳು ಮತ್ತು ತಯಾರಾದ ಸರಕುಗಳ ಸಂಪೂರ್ಣ ಪಟ್ಟಿಯಾಗಿದೆ. |
01:30 | ನಾವೀಗ Frontaccounting ಇಂಟರ್ಫೇಸ್ ತೆರೆಯೋಣ. |
01:34 | ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ Enter ಒತ್ತಿ. |
01:43 | ಈಗ ಲಾಗಿನ್-ಪೇಜ್ ಕಾಣಿಸಿಕೊಳ್ಳುತ್ತದೆ. |
01:46 | admin ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ವರ್ಡ್ ಟೈಪ್ ಮಾಡಿ.
Login ಬಟನ್ ಮೇಲೆ ಕ್ಲಿಕ್ ಮಾಡಿ. |
01:54 | Frontaccounting ಇಂಟರ್ಫೇಸ್ ತೆರೆದುಕೊಳ್ಳುತ್ತದೆ. |
01:57 | Items and Inventory ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
02:01 | ಐಟಂಗಳು ಮತ್ತು ಇನ್ವೆಂಟರಿ ವಿವರಗಳನ್ನು ಸೆಟಪ್ ಮಾಡಲು Maintenance ಪ್ಯಾನೆಲ್ ಅನ್ನು ಬಳಸಲಾಗುತ್ತದೆ. |
02:06 | ಸೆಟಪ್ ಮಾಡಲು ನಾವು:
Units of Measure, |
02:13 | Items ಮತ್ತು Item Categories ಈ ಆಯ್ಕೆಗಳನ್ನು ಬಳಸಬೇಕು. |
02:18 | ಯೂನಿಟ್ಸ್ ಆಫ್ ಮೆಜರ್ ನ್ನು ಸೆಟ್ ಮಾಡುವುದು ಹೇಗೆ ಎಂದು ನೋಡೋಣ. |
02:22 | ಪ್ರತಿಯೊಂದು Item ಗಾಗಿ, Units of Measure ಆಯ್ಕೆಯನ್ನು ಸೂಚಿಸಬೇಕು. |
02:27 | Maintenance ಪ್ಯಾನೆಲ್‌ನಲ್ಲಿ, Units of Measure ಲಿಂಕ್ ಮೇಲೆ ಕ್ಲಿಕ್ ಮಾಡಿ. |
02:32 | ಡಿಫಾಲ್ಟ್ ಆಗಿ, ನೀವು each ಮತ್ತು hour ಅನ್ನು ‘ಯೂನಿಟ್ಸ್ ಆಫ್ ಮೆಜರ್’ ಆಗಿ ನೋಡುವಿರಿ. |
02:38 | ಕಿಲೋಗ್ರಾಂಗಳಿಗೆ ಹೊಸ ‘ಯೂನಿಟ್ಸ್ ಆಫ್ ಮೆಜರ್’ ಅನ್ನು ಸೇರಿಸುವುದು ಹೇಗೆಂದು ನೋಡೋಣ. |
02:43 | ಇಲ್ಲಿ ತೋರಿಸಿರುವಂತೆ kilograms ಯೂನಿಟ್ ಗಾಗಿ ವಿವರಗಳನ್ನು ಟೈಪ್ ಮಾಡಿ. |
02:48 | Decimal places ಡ್ರಾಪ್ ಡೌನ್ ಬಾಕ್ಸ್ನಲ್ಲಿ, zero ಆರಿಸಿಕೊಳ್ಳಿ. |
02:53 | ಈ ಯೂನಿಟ್ ಅನ್ನು ಸೇರಿಸಲು, ವಿಂಡೋದ ಕೆಳಗಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ. |
02:59 | ನಾವು ಹೊಸ ಯೂನಿಟ್ ಅನ್ನು ಯಶಸ್ವಿಯಾಗಿ ಸೇರಿಸಿದ್ದೇವೆ ಎಂದು ಈ ಪಾಪ್-ಅಪ್ ಮೆಸೆಜ್ ತಿಳಿಸುತ್ತದೆ. |
03:04 | ಅಪ್ಡೇಟ್ ಮಾಡಿದ ನಮೂದುಗಳೊಂದಿಗೆ ಟೇಬಲ್ ಅನ್ನು ಸಹ ನಾವು ನೋಡಬಹುದು. |
03:08 | ಇದೇ ರೀತಿ, ನೀವು ನಿಮ್ಮ ಕಂಪನಿಯ ಐಟಂಗಳಿಗೆ ಅಗತ್ಯವಿರುವ ‘ಯೂನಿಟ್ಸ್ ಆಫ್ ಮೆಜರ್’ ಸೇರಿಸಬೇಕು. |
03:15 | Frontaccounting ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಗಿರುವ Back ಲಿಂಕ್ ಮೇಲೆ ಕ್ಲಿಕ್ ಮಾಡಿ. |
03:22 | ಈಗ, ಐಟಂಗೆ ಸಂಬಂಧಪಟ್ಟ ಐಟಂ ಕೆಟಗರಿಗಳನ್ನು ನಾವು ಸೆಟ್ ಮಾಡೋಣ. |
03:28 | ನಾವು ಖರೀದಿಸುವ ಮತ್ತು ಮಾರುವ ಐಟಂಗಳನ್ನು ಗುಂಪುಗೂಡಿಸಲು, ಐಟಂ ಕೆಟಗರಿಗಳು ಸಹಾಯ ಮಾಡುತ್ತವೆ. |
03:33 | Item Categories ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
03:35 | ನಾವಿಲ್ಲಿ Charges, Components, Services ಮತ್ತು Systems ಮುಂತಾದ ಕೆಲವು ಡಿಫಾಲ್ಟ್ ಐಟಂ ಕೆಟಗರಿಗಳನ್ನು ನೋಡಬಹುದು. |
03:48 | ನಾವು Item tax type, Item Type ಮತ್ತು Units of Measure |
03:54 | ಇವುಗಳನ್ನು ಡಿಫೈನ್ ಮಾಡುವ, ನಮ್ಮದೇ ಆದ ಐಟಂ ಕೆಟಗರಿಯನ್ನು ರಚಿಸಬೇಕು. |
03:58 | ಉದಾಹರಣೆಗೆ, ನಮ್ಮ ಕಂಪನಿಯು ತಯಾರಾದ ಸರಕು ಎಂದರೆ ಲ್ಯಾಪ್-ಟಾಪ್ ಗಳ ವ್ಯವಹಾರ ಮಾಡುತ್ತದೆ ಎನ್ನೋಣ. |
04:04 | ಆದ್ದರಿಂದ ನಾವು Finished Goods ಎನ್ನುವ ಒಂದು ಹೊಸ ‘ಐಟಂ ಕೆಟಗರಿ’ಯನ್ನು ಸೇರಿಸುವೆವು. |
04:09 | ಇಲ್ಲಿ ತೋರಿಸಿರುವಂತೆ ವಿವರಗಳನ್ನು ತುಂಬಿ.
Category Name – Finished Goods, |
04:15 | Item Tax Type – Regular,
Item Type - Purchased ಮತ್ತು |
04:21 | Units of Measure - Each. |
04:24 | ಉಳಿದ ಎಲ್ಲಾ ಫೀಲ್ಡ್ ಗಳಲ್ಲಿ ಡಿಫಾಲ್ಟ್ ವ್ಯಾಲ್ಯೂಗಳನ್ನೇ ಉಳಿಸಿ. |
04:28 | ಈ ವಿವರಗಳನ್ನು ಸೇವ್ ಮಾಡಲು, ವಿಂಡೋದ ಕೆಳಗಿರುವ Add New ಬಟನ್ ಮೇಲೆ ಕ್ಲಿಕ್ ಮಾಡಿ. |
04:34 | ಮೇಲಿನ ಟೇಬಲ್ ನಲ್ಲಿ, ಹೊಸದಾಗಿ ಸೇರಿಸಿದ ವಿವರಗಳು ಅಪ್ಡೇಟ್ ಆಗಿರುವುದನ್ನು ನಾವು ನೋಡಬಹುದು. |
04:40 | FrontAccounting ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಗಿರುವ Back ಲಿಂಕ್ ಮೇಲೆ ಕ್ಲಿಕ್ ಮಾಡಿ. |
04:47 | ನಂತರ ನಾವು ಈ ಐಟಂ ಕೆಟಗರಿಗೆ, ಹೊಸ ಐಟಂ ಅನ್ನು ರಚಿಸೋಣ. |
04:52 | Maintenance ಪ್ಯಾನಲ್ ನಲ್ಲಿ, Items ಲಿಂಕ್ ಮೇಲೆ ಕ್ಲಿಕ್ ಮಾಡಿ. |
04:57 | ಇಲ್ಲಿ ಐಟಂಗಾಗಿ, ಎಲ್ಲಾ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಲು ನಮಗೆ ಸೂಚಿಸಲಾಗುತ್ತದೆ.
ಇಲ್ಲಿ ತೋರಿಸಿರುವಂತೆ ವಿವರಗಳನ್ನು ತುಂಬಿ. |
05:06 | ನೀವು ನಮೂದಿಸುವ ಪ್ರತಿಯೊಂದು ಐಟಂಗೆ, ವಿಶಿಷ್ಟ ಕೋಡ್ ಕೊಟ್ಟಿರುವುದನ್ನು ಖಚಿತಪಡಿಸಿ. ಇದು ಕಡ್ಡಾಯವಾಗಿದೆ. |
05:13 | Category- ಇದು, ಐಟಂ ಸೇರಿರುವ ಐಟಂ ಕೆಟಗರಿ ಆಗಿದೆ.
ನಾವು Finished Goods ಆಯ್ಕೆಮಾಡಿದ್ದೇವೆ. |
05:21 | Item type ನಲ್ಲಿ, ಐಟಂ ಅನ್ನು:
ತಯಾರಿಕೆಯಲ್ಲಿ ಬಳಸಲಾಗಿದೆಯೇ, |
05:28 | ಸಪ್ಲೈಯರ್ ನಿಂದ ಖರೀದಿಸಲಾಗಿದೆಯೇ ಅಥವಾ ಸರ್ವಿಸ್ ಗಾಗಿ ಇದೆಯೇ ಎಂದು ಸೂಚಿಸಲಾಗುತ್ತದೆ. |
05:33 | ಕೆಳಕ್ಕೆ ಸ್ಕ್ರೋಲ್ ಮಾಡಿ.
ವಿಂಡೋದ ಕೆಳಗಿರುವ Insert New Item ಬಟನ್ ಮೇಲೆ ಕ್ಲಿಕ್ ಮಾಡಿ. |
05:41 | ನಾವು ಹೊಸ ಐಟಂ ಅನ್ನು ಯಶಸ್ವಿಯಾಗಿ ಸೇರಿಸಿದ್ದೇವೆ ಎಂದು ಈ ಪಾಪ್-ಅಪ್ ಮೆಸೆಜ್ ತೋರಿಸುತ್ತದೆ. |
05:47 | ವಿಂಡೋವಿನ ಮೇಲಿನ ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. |
05:51 | ಹೊಸ ಐಟಂ ಅನ್ನು ಸೇರಿಸಿರುವುದನ್ನು ನಾವು ನೋಡಬಹುದು. |
05:56 | ಅಸೈನ್ಮೆಂಟ್ ಗಾಗಿ:
Finished goods ಎಂಬ ಐಟಂ ಕೆಟಗರಿಯ ಅಡಿಯಲ್ಲಿ, ಎರಡು ಹೊಸ ಐಟಂಗಳನ್ನು ಸೇರಿಸಿ. |
06:02 | Components ಎಂಬ ಐಟಂ ಕೆಟಗರಿಯ ಅಡಿಯಲ್ಲಿ, ಎರಡು ಹೊಸ ಐಟಂಗಳನ್ನು ಸೇರಿಸಿ. |
06:07 | ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ನೋಡಿ. |
06:12 | ಅಸೈನ್ಮೆಂಟ್ ಮುಗಿಸಿದ ನಂತರ, ವಿಂಡೋದ ಮೇಲಿರುವ ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. |
06:18 | ಈಗ ನೀವು Components ಅಡಿಯಲ್ಲಿ 2 ಐಟಂಗಳು ಮತ್ತು Finished goods ಅಡಿಯಲ್ಲಿ 3 ಐಟಂಗಳನ್ನು ನೋಡಬಹುದು. |
06:26 | Frontaccounting ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಗಿರುವ Back ಲಿಂಕ್ ಮೇಲೆ ಕ್ಲಿಕ್ ಮಾಡಿ. |
06:33 | ಐಟಂಗಳು ಅಥವಾ ಇನ್ವೆಂಟರಿಯ ಬೆಲೆಯ ಮಟ್ಟವನ್ನು ಆಯ್ದುಕೊಳ್ಳಲು, Pricing and Costs ಪ್ಯಾನೆಲ್ ಅನ್ನು ಬಳಸಲಾಗುತ್ತದೆ. |
06:40 | ಪ್ರತ್ಯೇಕ ಸೇಲ್ಸ್ ಐಟಂಗಾಗಿ ಸೇಲ್ಸ್ ಪ್ರೈಸ್ ಅನ್ನು ನಿಗದಿಪಡಿಸಲು, ಈ ಆಯ್ಕೆಯನ್ನು ಬಳಸಲಾಗುತ್ತದೆ.
Sales Pricing ಲಿಂಕ್ನ ಮೇಲೆ ಕ್ಲಿಕ್ ಮಾಡಿ. |
06:49 | Item ಡ್ರಾಪ್ ಡೌನ್ ಬಾಕ್ಸ್ನ ಮೇಲೆ ಕ್ಲಿಕ್ ಮಾಡಿ.
Dell Laptop ಐಟಂ ಅನ್ನು ಆಯ್ಕೆಮಾಡಿ. ನಮಗೆ ಇದಕ್ಕಾಗಿ ಸೇಲ್ಸ್ ಪ್ರೈಸ್ ಅನ್ನು ನಿಗದಿಮಾಡಬೇಕಾಗಿದೆ. |
06:58 | ಈಗ Currency ಡ್ರಾಪ್ ಡೌನ್ ಬಾಕ್ಸ್ನ ಮೇಲೆ ಕ್ಲಿಕ್ ಮಾಡಿ. |
07:02 | ಕರೆನ್ಸಿಯನ್ನು Indian Rupees ಎಂದು ಆರಿಸಿಕೊಳ್ಳಿ. |
07:06 | Sales Type ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. |
07:10 | ಇಲ್ಲಿ ಎರಡು ಆಯ್ಕೆಗಳಿವೆ: Retail ಮತ್ತು Wholesale. |
07:15 | ಇಲ್ಲಿ Retail ಆಯ್ಕೆಯನ್ನು ಆರಿಸಿ. |
07:19 | ನಂತರ Price ಫೀಲ್ಡ್ ಮೇಲೆ ಕ್ಲಿಕ್ ಮಾಡಿ.
ಐಟಂನ Price ಅನ್ನು 53,000 per each ಎಂದು ಟೈಪ್ ಮಾಡಿ. |
07:28 | ನಂತರ ವಿಂಡೋದ ಕೆಳಗಿರುವ Add New ಬಟನ್ ಮೇಲೆ ಕ್ಲಿಕ್ ಮಾಡಿ. |
07:33 | ನಾವು ಡೆಲ್ ಲ್ಯಾಪ್ ಟಾಪ್ ಐಟಂಗೆ, ಸೇಲ್ಸ್ ಪ್ರೈಸ್ ಅನ್ನು ಯಶಸ್ವಿಯಾಗಿ ಸೇರಿಸಿದ್ದೇವೆ ಎಂದು ಪಾಪ್-ಅಪ್ ಮೆಸೆಜ್ ತೋರಿಸುತ್ತದೆ. |
07:41 | ಇಲ್ಲಿ ಟೇಬಲ್ನಲ್ಲಿ, ನಾವು ಅಪ್ಡೇಟ್ ಆದ ವ್ಯಾಲ್ಯೂಗಳನ್ನು ಸಹ ನೋಡಬಹುದು. |
07:45 | Frontaccounting ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಗಿರುವ Back ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
07:52 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. |
07:56 | ಸಂಕ್ಷಿಪ್ತವಾಗಿ, |
07:58 | ಈ ಟ್ಯುಟೋರಿಯಲ್ ನಲ್ಲಿ ನಾವು:
ಯೂನಿಟ್ಸ್ ಆಫ್ ಮೆಜರ್, ಐಟಂಗಳು, |
08:06 | ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್ ರಚಿಸಲು ಕಲಿತೆವು. |
08:10 | ಅಸೈನ್ಮೆಂಟ್ ಗಾಗಿ, ಈ ಕೆಳಗೆ ತೋರಿಸಿರುವ ಐಟಂಗಳಿಗೆ ಸೇಲ್ಸ್ ಪ್ರೈಸ್ ಸೇರಿಸಿ:
ಸೇಲ್ಸ್ ಟೈಪ್ ಅನ್ನು Retail ಎಂದು ಕೊಡಿ. |
08:20 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
08:27 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
08:35 | ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ. |
08:39 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |