Difference between revisions of "PHP-and-MySQL/C4/MD5-Encryption/Kannada"

From Script | Spoken-Tutorial
Jump to: navigation, search
 
Line 103: Line 103:
 
|-
 
|-
 
|04:57
 
|04:57
|'''Method''' ಇದು '''POST''' ಆಗಿರುವುದು ಏಕೆಂದರೆ ನಾವು ಇಲ್ಲಿ ಮೇಲೆ  ''POST '''method''' '' ಅನ್ನು ಬಳಸಿದ್ದೇನೆ.  
+
|'''Method''' ಇದು '''POST''' ಆಗಿರುವುದು ಏಕೆಂದರೆ ನಾವು ಇಲ್ಲಿ ಮೇಲೆ  ''POST '''method''' '' ಅನ್ನು ಬಳಸಿದ್ದೇವೆ.  
 
|-
 
|-
 
|05:01
 
|05:01

Latest revision as of 18:29, 19 May 2020

Time Narration
00:00 ನಮಸ್ಕಾರ, ನೀವು ಪಿ.ಎಚ್.ಪಿ ಯ ಸುರಕ್ಷತೆ(ಸೆಕ್ಯುರಿಟಿ) ಯ ಕುರಿತು ಕಾಳಜಿ ಹೊಂದಿದ್ದರೆ ಇದು ನಿಮಗೆ ಸಹಾಯಕ ಮತ್ತು ಇದು MD5 function ನ ಕುರಿತು ತಿಳಿಸುತ್ತದೆ.
00:09 ಇದು ಒಂದು ಪ್ರಿಡಿಫೈನ್ಡ್ ಫಂಕ್ಷನ್ ಆಗಿದೆ ಮತ್ತು ಇದು ನಿಮ್ಮ string ಅನ್ನು MD5 hash ಗೆ ಪರಿವರ್ತಿಸುತ್ತದೆ ಮತ್ತು ಡಾಟಾವನ್ನು ರಕ್ಷಿಸಲು ಸಹಾಯಕವಾಗಿದೆ.
00:16 'MD5 hash' ಇದು ಏಕಮುಖವಾಗಿದ್ದು, ಇದನ್ನು ಡಿ-ಕ್ರಿಪ್ಟ್ ಮಾಡಲು ಸಾಧ್ಯವಿಲ್ಲ, ಇದನ್ನು ಕೇವಲ ಎನ್ಕ್ರಿಪ್ಟ್ ಮಾಡಬಹುದು.
00:21 'MD5 hash' ಅನ್ನು ಕಂಡುಹಿಡಿಯುವ ಏಕೈಕ ವಿಧಾನವೆಂದರೆ, ಸ್ಟ್ರಿಂಗ್ ಅನ್ನು ಕೂಡ 'MD5 hash' ಗೆ ಪರಿವರ್ತಿಸಿ, ಮೊದಲೆ ಹ್ಯಾಶ್ ಗೆ ಪರಿವರ್ತಿತವಾದ ಸ್ಟ್ರಿಂಗ್ ನೊಂದಿಗೆ ಹೋಲಿಕೆ ಮಾಡಬಹುದು.
00:31 ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗದಿದ್ದಲ್ಲಿ, ನಾನು ಈ ಟ್ಯುಟೋರಿಯಲ್ ನಲ್ಲಿ ಅದರ ಕುರಿತು ಹೇಳುವೆನು.
00:38 ನಾನು ಈಗ ಒಂದು ಸ್ಟ್ರಿಂಗ್ ಅನ್ನು ಡಿಫೈನ್ ಮಾಡುವುದರ ಮೂಲಕ ಆರಂಭಿಸುವೆನು ಮತ್ತು ಅದು ನನ್ನ ಪಾಸ್ವರ್ಡ್ ಆಗಿರುವುದು.
00:45 ನಾನು ಇದನ್ನು $user password ಎಂದು ಕರೆಯುವೆನು ಮತ್ತು ಅದು "abc" ಎಂಬ ವ್ಯಾಲ್ಯುವನ್ನು ಹೊಂದಿರುವುದು.
00:55 ನಂತರ ನಾನು ಇನ್ನೊಂದು ಹೊಸ ವೇರಿಯೇಬಲ್ '$user password e n c' ಯನ್ನು ರಚಿಸುವೆನು ಮತ್ತು ಇದು ಎನ್ಕ್ರಿಪ್ಷನ್ ಅನ್ನು ಸೂಚಿಸುತ್ತದೆ. ನಾನು ನನ್ನ 'MD5' ಫಂಕ್ಷನ್ ಅನ್ನು ಡಿಫೈನ್ ಮಾಡುವೆನು ಮತ್ತು ಅದು m,d ಮತ್ತು 5 ಎಂದಾಗಿರುತ್ತದೆ.
01:09 ಇದು ಏನನ್ನಾದರು ತೆಗೆದುಕೊಳ್ಳುತ್ತದೆ ಹಾಗಾಗಿ ನೀವು ಇಲ್ಲಿ ನೀವು ಏನನ್ನು ಎನ್ಕ್ರಿಪ್ಟ್ ಮಾಡಲು ಬಯಸುವಿರೋ ಅದನ್ನು ಕೊಡಬಹುದು.
01:13 ಆದರೆ ಈಗ ಸದ್ಯಕ್ಕೆ ನಾನು ಇಲ್ಲಿ ಮೇಲೆ ಡಿಫೈನ್ ಮಾಡಿದ ನನ್ನ $user password ವೇರಿಯೇಬಲ್ ಅನ್ನು ಕೊಡುವೆನು.
01:18 ಮತ್ತು ಈಗ ನಾವು ಇದನ್ನು ಎಕೋ ಮಾಡಿದರೆ, ನಾವು ಏನು ಪಡೆಯುವೆವು ಎಂದರೆ,
01:27 ನಮ್ಮ 'MD5' ಎನ್ಕ್ರಿಪ್ಟ್ ಆಗಿರುವ ಸ್ಕ್ರಿಪ್ಟ್ ನ ವ್ಯಾಲ್ಯುವನ್ನು ಪಡೆಯುವೆವು.
01:32 ಇದು ಒಂಬೈನೂರರಿಂದ ಆರಂಭವಾಗುವುದನ್ನು ನೀವು ನೋಡಬಹುದು, ಇಲ್ಲಿ ಸುಮಾರು ಇಪ್ಪತ್ತು ಸಾಮಾನ್ಯ ಅಕ್ಷರಗಳಿವೆ ಎಂದು ಕೊಳ್ಳುವೆನು.
01:39 ಆದರೆ ನಾನು ವ್ಯಾಲ್ಯುವನ್ನು ಬದಲಿಸದರೆ, ಇದರ ಅಳತೆಯು ಬಹುಮಟ್ಟಿಗೆ ಅಷ್ಟೆ ಇರುತ್ತದೆ.
01:44 ಆದರೆ ಕಂಟೆಂಟ್ ಮಾತ್ರ ಬದಲಾಗುವುದು.
01:52 ಹಾಗಾಗಿ ನಾವು ಇಲ್ಲಿ ಒಂದು ಎನ್ಕ್ರಿಪ್ಟ್ ಆಗಿರುವ ಸ್ಟ್ರಿಂಗ್, ಅಂದರೆ ಇಲ್ಲಿ ನೀವು ನೋಡುತ್ತಿರುವ ಹ್ಯಾಶ್ 'abc' ಗೆ ಸಮವಾಗಿದೆ.
02:00 ಈಗ ನಾನು ಒಂದು ಪ್ರೋಗ್ರಾಂ ಅಥವ ಸ್ಕ್ರಿಪ್ಟ್ ಅನ್ನು ತಯಾರಿಸುವೆನು ಮತ್ತು ಅದು ಬಳಕೆದಾರರಿಂದ ಇನ್ಪುಟ್ ಅನ್ನು ತೆಗೆದುಕೊಳ್ಳುವುದು ಮತ್ತು ಅದು ಪಾಸ್ವರ್ಡ್ 'abc' ಆಗಿದೆಯೇ ಎಂದು ಪರೀಕ್ಷಿಸುವುದು.
02:10 ನಾವು ಸಾಂಪ್ರದಾಯಿಕವಾಗಿ ಮಾಡಬಹುದಾದ ವಿಧಾನವೆಂದರೆ, ನಾವು ಈ ಎನ್ಕ್ರಿಪ್ಷನ್ ಅನ್ನು ತೆಗೆದು ಹಾಕುವುದು.
02:17 ನಾವು ಸರಳ ಪರೀಕ್ಷೆಯನ್ನು ಮಾಡಬಹುದು, POST password ಇದು ನಮ್ಮ $user password ಗೆ ಸಮವಾಗಿದ್ದರೆ, ಇಲ್ಲಿ ಏನನ್ನಾದರೂ ಮಾಡಿ, ಇಲ್ಲವಾದಲ್ಲಿ ಇನ್ನೆನಾದರೂ ಮಾಡಿ ಎಂದು ಹೇಳಬಹುದು.
02:29 ಉದಾಹರಣೆಗೆ ಇಲ್ಲಿ 'incorrect password' ಎಂಬ ಎರರ್ ಅನ್ನು ಹಾಕಬಹುದು ಮತ್ತು ಇಲ್ಲಿ ನೀವು 'your password has successfully matched the user password' ಎಂಬ ಮೆಸೇಜ್ ಅನ್ನು ಕೊಡಬಹುದು.
02:38 ಈಗ ನಾವು ಗಣನೆಗೆ ತೆಗೆದುಕೊಳ್ಳಬೇಕಾದ ವಿಷಯವೆಂದರೆ, ಡಾಟಾ ವು POST ವೇರಿಯೇಬಲ್ ಗಳಾಗಿರಬಹುದು ಅಥವಾ ಡಾಟಾಬೇಸ್ ನಲ್ಲಿ ಇರುವ ಡಾಟಾವೂ ಆಗಿರಬಹುದು.
02:45 ಈ ವ್ಯಾಲ್ಯುವು ಡಾಟಾಬೇಸ್ ನಿಂದ ಪಡೆದಿದ್ದಾಗಿರಬಹುದು ಮತ್ತು ದುರದೃಷ್ಟವಶಾತ್ ಡಾಟಾಬೇಸ್ ಅನ್ನು ಹಂಚಿಕೊಂಡಿದ್ದರೆ ಕಷ್ಟವಾಗುವುದು.
02:51 ಹಾಗಾಗಿ ಡಾಟಾಬೇಸ್ ಅನ್ನು ಬೇರೆ ಅಪ್ಲಿಕೇಷನ್ ನೊಂದಿಗೆ ಹಂಚಿಕೊಂಡಿದ್ದರೆ, ನಿಮ್ಮ ಬಳಕೆದಾರರ ಪ್ರತಿ ಪಾಸ್ವರ್ಡ್ ಎನ್ಕ್ರಿಪ್ಟ್ ಆಗಬೇಕಾಗುವುದು, ಹಾಗಾಗಿ ಅವುಗಳನ್ನು ಹುಡುಕುವುದು ತುಂಬ ಕಷ್ಟ.
03:04 'abc' ಯನ್ನು ಕಂಡುಹಿಡಿಯುವುದು ತುಂಬ ಸರಳ ಏಕೆಂದರೆ ಇದು ಸಾಮಾನ್ಯವಾದ ಪಾಸ್ವರ್ಡ್ ಆಗಿದೆ.
03:12 'abc' ಯನ್ನು MD5 ಹ್ಯಾಶ್ ಆಗಿ ಪರಿವರ್ತಿಸಿ, ನಂತರ ನೀವು ನಿಮ್ಮ ಡಾಟಾಬೇಸ್ ನಲ್ಲಿ ಈಗಾಗಲೇ ಸ್ಟೋರ್ ಆಗಿರುವ MD5 ಹ್ಯಾಶ್ ನೊಂದಿಗೆ ಹೋಲಿಕೆ ಮಾಡಿ, ಮತ್ತು ಈ ಎರಡೂ ಹ್ಯಾಶ್ ಗಳೂ ಹೋಲಿಕೆಯಾದಲ್ಲಿ, MD5 ಹ್ಯಾಶ್ 'abc' ಗೆ ಸಮವಾಗಿರುವುದು ಎಂದು ನೀವು ತಿಳಿದುಕೊಳ್ಳಬಹುದು, ಏಕೆಂದರೆ ಅವುಗಳು ಹ್ಯಾಶ್ ಆಗಿವೆ.
03:29 ಈಗ ನಾವು ಏನು ಮಾಡುವೆವೆಂದರೆ, ನಾವು ಇಲ್ಲಿ ಈ ವ್ಯಾಲ್ಯುವನ್ನು ತೆಗೆದುಕೊಳ್ಳುವೆವು, ಅಂದರೆ - 'user password encrypted' - ಮತ್ತು ನಾವು ಪೋಸ್ಟ್ ಆಗಿರುವ ಪಾಸ್ವರ್ಡ್ ನೊಂದಿಗೆ ನಮ್ಮ ಎನ್ಕ್ರಿಪ್ಟ್ ಪಾಸ್ವರ್ಡ್ ಅನ್ನು ಹೋಲಿಕೆ ಮಾಡಲಾಗುತ್ತದೆ.
03:47 ಈಗ ನಾವು ಏನು ಮಾಡಬೇಕೆಂದರೆ, $user password enc ಅನ್ನು ಹೋಲಿಕೆ ಮಾಡಲು ಸಾಧ್ಯವಾಗಬೇಕು.
03:55 ಈಗ ಇದು ಎನ್ಕ್ರಿಪ್ಟ್ ಆಗಿದೆ ಮತ್ತು ಪೋಸ್ಟ್ ಮಾಡಿದ ಪಾಸ್ವರ್ಡ್ ಎನ್ಕ್ರಿಪ್ಟ್ ಆಗಿಲ್ಲ.
04:01 ಹಾಗಾಗಿ ನೀವು ಪೋಸ್ಟ್ ಮಾಡಿದ ಪಾಸ್ವರ್ಡ್ ನ MD5 ಹ್ಯಾಶ್ ಅನ್ನು ತೆಗೆದುಕೊಂಡು, ಅದನ್ನು ಸ್ಟೋರ್ ಆಗಿರುವ ಪಾಸ್ವರ್ಡ್ ನ MD5 ಹ್ಯಾಶ್ ನೊಂದಿಗೆ ಹೋಲಿಕೆ ಮಾಡಿ, ನಾವು ಬಳಕೆದಾರ ಸರಿಯಾದ ಪಾಸ್ವರ್ಡ್ ಅನ್ನು ನಮೂದಿಸಿದ್ದಾರೋ, ಇಲ್ಲವೋ ಎಂದು ಕಂಡುಹಿಡಿಯಬಹುದು.
04:14 ಹಾಗಾಗಿ ನಾನು ಇಲ್ಲಿ ಈಗ ಪೋಸ್ಟ್ ಮಾಡಿದ ಪಾಸ್ವರ್ಡ್ ನ MD5 ಹ್ಯಾಶ್ ಇದು ಸ್ಟೋರ್ ಮಾಡಿದ ಪಾಸ್ವರ್ಡ್ ನ MD5 ಹ್ಯಾಶ್ ಗೆ ಸಮವಾಗಿದ್ದರೆ, ಈ ವೇರಿಯೇಬಲ್ ಅನ್ನು ನಾವು ಇಲ್ಲಿ ಬಳಸುತ್ತಿದ್ದೇವೆ, ಆಗ ನಾವು ಸರಿ ಎಂಬ ಮೆಸೇಜ್ ಅನ್ನು ತೋರಿಸಬಹುದು ಅಥವಾ ಎರರ್ ಮೆಸೇಜ್ ಅನ್ನು ತೋರಿಸಬಹುದು.
04:33 ಅವು ಹೋಲಿಕೆಯಾದರೆ ನಾನು die "Correct" ಎಂದೂ, ಇಲ್ಲವಾದಲ್ಲಿ die "Incorrect" ಎಂದೂ ಟೈಪ್ ಮಾಡುವೆನು.
04:48 ಈಗ ಸದ್ಯಕ್ಕೆ ನಾವು ಇದನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ, ಏಕೆಂದರೆ ನಾವು ವೇರಿಯೇಬಲ್ ಅನ್ನು ಪೋಸ್ಟ್ ಮಾಡಿಲ್ಲ.
04:53 ಇಲ್ಲಿ ಕೆಳಗೆ ನಾನು ಒಂದು form ಅನ್ನು ರಚಿಸುವೆನು.
04:57 Method ಇದು POST ಆಗಿರುವುದು ಏಕೆಂದರೆ ನಾವು ಇಲ್ಲಿ ಮೇಲೆ POST method ಅನ್ನು ಬಳಸಿದ್ದೇವೆ.
05:01 ಮತ್ತು action ಇದು ನನ್ನ ಪ್ರಸ್ತುತ ಪೇಜ್ ಅಂದರೆ 'md5 dot php' ಎಂದಾಗುವುದು.
05:08 ನಂತರ ನಾನು ಎರಡು ಎಲಿಮೆಂಟ್ ಗಳನ್ನು ರಚಿಸುವೆನು, ಮೊದಲನೆಯದು input text box ಮತ್ತು name ಇದು 'password' ಆಗಿರಲಿ.
05:14 ನಾನು ಇಲ್ಲಿ type 'text' ಎಂದು ಬಳಸಲು ಕಾರಣವೆಂದರೆ, ನೀವು ಕಂಟೆಂಟ್ ಅನ್ನು ನೋಡಬಹುದು ಇಲ್ಲವಾದಲ್ಲಿ, ನೀವು 'password' ಅನ್ನು ಬಳಸಿದರೆ ಖಾಲಿ ಅಕ್ಷರಗಳಾಗಿ ಕಾಣುವುದು.
05:22 ನಂತರ ನಾನು ಒಂದು input box ಅನ್ನು ಬಳಸುವೆನು ಈಗ ಇದನ್ನು 'Login' ಎಂದು ಕರೆಯೋಣ ಏಕೆಂದರೆ, ಲಾಗಿನ್ ಸ್ಕ್ರಿಪ್ಟ್ MD5 ನ ಬಹುಮುಖ್ಯ ಉಪಯೋಗವಾಗಿದೆ.
05:34 ನಾನು ರಿಫ್ರೆಶ್ ಮಾಡಿದಾಗ ಇದು ಈಗ Incorrect ಎಂದು ತೋರಿಸುತ್ತಿದೆ.
05:38 ಏಕೆಂದರೆ ನಾವು ಇಲ್ಲಿ POST ವೇರಿಯೇಬಲ್ ಅನ್ನು ಪರೀಕ್ಷಿಸಿಲ್ಲ.
05:41 ಇಲ್ಲಿ ನಾವು if 'password' ಎಂದು ಹೇಳಬಹುದು ಅಂದರೆ ಪಾಸ್ವರ್ಡ್ ಅಸ್ತಿತ್ವದಲ್ಲಿದ್ದರೆ, ನಾವು ಈ ಎಲ್ಲಾ ಕೋಡ್ ಅನ್ನು ಎಕೋ ಮಾಡಬಹುದು, ಮತ್ತು ಓದಲು ಸರಿಯಾಗಿ ಕಾಣುವಂತೆ ಇದನ್ನು ಸರಿಯಾಗಿ ಇಂಡೆಂಟ್ ಮಾಡೋಣ . ಈಗ ನಾನು ಹಿಂದಿರುಗುವೆನು.
06:00 ಈಗ ನಮ್ಮ ಪಾಸ್ವರ್ಡ್ ಸಬ್ಮಿಟ್ ಆದರೆ, ಅಂದರೆ ಫಾರ್ಮ್ ಸಬ್ಮಿಟ್ ಈ ವ್ಯಾಲ್ಯುವಿನೊಡನೆ ಸಬ್ಮಿಟ್ ಆದರೆ, ಆಗ ನಾವು ಎನ್ಕ್ರಿಪ್ಟ್ ಆದ ಪಾಸ್ವರ್ಡ್ ನ MD5 ಹ್ಯಾಶ್ ಅಂದರೆ ಫಾರ್ಮ್ ನಲ್ಲಿ ನಮೂದಿತವಾದ ಪಾಸ್ವರ್ಡ್ ಅಂದರೆ ಇಲ್ಲಿ ನಮ್ಮ ಪೋಸ್ಟ್ ವೇರಿಯೇಬಲ್ ಇದು ಸ್ಟೋರ್ ಆಗಿರುವ ಪಾಸ್ವರ್ಡ್ ನ ಹ್ಯಾಶ್ ಗೆ ಸಮವಾಗಿದೆಯೇ? ಎಂದು ಪರೀಕ್ಷಿಸುವೆವು.
06:18 ಹಾಗಾಗಿ ನಾವು ಇಲ್ಲಿ ಈ if ಸ್ಟೇಟ್ಮೆಂಟ್ ನಲ್ಲಿ ಎನ್ಕ್ರಿಪ್ಟ್ ಆಗಿರುವ ಡಾಟಾದೊಂದಿಗೆ ಕಾರ್ಯನಿರ್ವಹಿಸುವೆವು.
06:23 ಇದು ಹೋಲಿಕೆಯಾದರೆ ನಾವು ಇದನ್ನು ತೋರಿಸುವೆವು, ಇಲ್ಲವಾದಲ್ಲಿ ನಾವು "Incorrect" ಎಂದು ತೋರಿಸುವೆವು. ಈಗ ಮತ್ತೊಮ್ಮೆ ರಿಫ್ರೆಶ್ ಮಾಡೋಣ.
06:29 ಈಗ ನನ್ನ ಪಾಸ್ವರ್ಡ್ 'abc' ಆಗಿದೆ. ಹಾಗಾಗಿ ನಾನು ನನ್ನ ಪಾಸ್ವರ್ಡ್ ಅನ್ನು 'Alex' ಎಂದು ಟೈಪ್ ಮಾಡಿದರೆ, ನಾವು 'Incorrect' ಎಂಬ ಎರರ್ ಮೆಸೇಜ್ ಅನ್ನು ಪಡೆಯುವೆವು.
06:37 ಈಗ ನಾವು ನನ್ನ ಸರಿಯಾದ ಪಾಸ್ವರ್ಡ್ ಅನ್ನು 'abc' ಎಂದು ಟೈಪ್ ಮಾಡಿದರೆ, ನಾವು "Correct" ಎಂಬ ಮೆಸೇಜ್ ಅನ್ನು ಪಡೆಯುವೆವು.
06:43 ಇದರ ಕುರಿತು ಇನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ನಾನು ಇಲ್ಲಿ "compared" ಎಂದು ಎಕೋ ಮಾಡುವೆನು, ಈಗ ನಮ್ಮ '$user password' –ಅಲ್ಲ – ನಮ್ಮ ಎನ್ಕ್ರಿಪ್ಟ್ ಆದ ಪಾಸ್ವರ್ಡ್ ಅನ್ನು ತೆಗೆದುಕೊಳ್ಳೋಣ.
07:07 compare "$user password enc to" – ಎಂದು ಟೈಪ್ ಮಾಡಿ ಇದನ್ನು ಜೋಡಿಸಿ ಮತ್ತು ನಂತರ ಪೋಸ್ಟ್ ಮಾಡಿದ ಪಾಸ್ವರ್ಡ್
07:14 ಕ್ಷಮಿಸಿ ನಮಗೆ ಎನ್ಕ್ರಿಪ್ಟ್ ಆದ ಪಾಸ್ವರ್ಡ್ ಬೇಕು ಹಾಗಾಗಿ ನಾನು ಇಲ್ಲಿ 'md5' ಎಂದು ಟೈಪ್ ಮಾಡುವೆನು.
07:20 ಇನ್ನೊಂದು ಉತ್ತಮ ಮಾರ್ಗವೆಂದರೆ, ನಾವು ಇಲ್ಲಿಮೇಲೆ ಒಂದು ಹೊಸ ವೇರಿಯೇಬಲ್ ಅನ್ನು ರಚಿಸುವುದು, 'md5' – ಇದನ್ನು ಕಟ್ ಮಾಡಿ - enc ಅಥವಾ '$submitted enc' ಇಕ್ವಲ್ಸ್ ಎಂದು ಟೈಪ್ ಮಾಡಿ, ಅದನ್ನು ಪೇಸ್ಟ್ ಮಾಡಿ.
07:37 ನಂತರ ನಾವು ಇದನ್ನು ಇಲ್ಲಿ ನಮ್ಮ ವೇರಿಯೇಬಲ್ ಅನ್ನು ಇದರ ಬದಲು ಹಾಕೋಣ, ಇದು ಇನ್ನು ಸರಳವಾಗಿರುವುದು.
07:49 ಇದರ ಕಾರ್ಯದಲ್ಲಿ ಯಾವುದೇ ಬದಲಾವಣೆ ಗಳಿರುವುದಿಲ್ಲ.
07:56 ಈಗ ನಾವು ಇಲ್ಲಿ 'abc' ಅನ್ನು ಆಯ್ಕೆ ಮಾಡಿಕೊಂಡು, Login ಅನ್ನು ಕ್ಲಿಕ್ ಮಾಡಿದರೆ, ನಾವು ಒಂದು ಎರರ್ ಅನ್ನು ಪಡೆದಿದ್ದೇವೆ.
08:01 ಈಗ ಹಿಂದಿರುಗಿ ಪರೀಕ್ಷಿಸೋಣ. ಏಕೆಂದರೆ ನಾವು ಇವುಗಳನ್ನು ಕರ್ಲಿ ಬ್ರ್ಯಾಕೆಟ್ ನಲ್ಲಿ ಇಡಬೇಕು ಏಕೆಂದರೆ ನಾವು ಇಲ್ಲಿ ಎರಡು ಸಾಲು ಕೋಡ್ ಗಳನ್ನು ಹೊಂದಿದ್ದೇವೆ.
08:16 ಈಗ ಹಿಂದಿರುಗಿ, 'abc' ಯನ್ನು ಆಯ್ಕೆ ಮಾಡಿ. ನಾವು ಈಗ ಇಲ್ಲಿ ಇದನ್ನು ಇದರ ಜೊತೆಗೆ ಹೋಲಿಕೆ ಮಾಡುತ್ತಿದ್ದೇವೆ.
08:26 ಇಲ್ಲಿ ಮೇಲೆ ಒಂದು break ಅನ್ನು ಕೊಡೋಣ. ಈಗ ಏನಾಗುವುದೆಂದು ನೋಡಬಹುದು.
08:34 ಸರಿ, ನಾವು ಇದನ್ನು ಇದರೊಂದಿಗೆ ಹೋಲಿಕೆ ಮಾಡುತ್ತಿದ್ದೇವೆ.
08:38 ನೀವು ಇವೆರಡು ಒಂದೇ MD5 hash ಆಗಿರುವುದನ್ನು ನೋಡಬಹುದು. ಇಲ್ಲಿ ಇದು ಸ್ಟೋರ್ ಆದ ಪಾಸ್ವರ್ಡ್ ಆಗಿದೆ ಮತ್ತು ಇದು ನಾವು ಸಬ್ಮಿಟ್ ಮಾಡಿದ ಪಾಸ್ವರ್ಡ್ ಆಗಿದೆ.
08:46 ಇಲ್ಲಿ ನಾವು ಸಬ್ಮಿಟ್ ಮಾಡಿದ ಎನ್ಕ್ರಿಪ್ಟ್ ಆಗಿರುವ ಪಾಸ್ವರ್ಡ್ ಅನ್ನು ನಮ್ಮ ಸ್ಟೋರ್ ಆಗಿದ್ದು ಎನ್ಕ್ರಿಪ್ಟ್ ಆಗಿರವ ಪಾಸ್ವರ್ಡ್ ನೊಂದಿಗೆ ಹೋಲಿಕೆ ಮಾಡುತ್ತಿದ್ದೇವೆ.
08:51 ಇದು ತುಂಬ ಉಪಯೋಗಗಳನ್ನು ಹೊಂದಿದೆ, ನೀವು ಡಾಟಾಬೇಸ್ ನಲ್ಲಿ ದಾಖಲಾಗುವಾಗ, ನೀವು ಪಾಸ್ವರ್ಡ್ ಅನ್ನು ಎನ್ಕ್ರಿಪ್ಟ್ ಮಾಡಿ, ಸ್ಟೋರ್ ಮಾಡುವಿರಿ.
08:59 ಈಗ ನೀವು log-in form ನಲ್ಲಿ ಪಾಸ್ವರ್ಡ್ ಅನ್ನು ಪರೀಕ್ಷಿಸುತ್ತಿದ್ದರೆ, ಬಳಕೆದಾರ ಲಾಗಿನ್ ಫಾರ್ಮ್ ನಲ್ಲಿ ನಮೂದಿಸಿದ ಪಾಸ್ವರ್ಡ್ ಅನ್ನು ಎನ್ಕ್ರಿಪ್ಟ್ ಮಾಡಿ, ಅದನ್ನು ಡಾಟಾಬೇಸ್ ನಲ್ಲಿ ಸ್ಟೋರ್ ಆಗಿರುವ ಎನ್ಕ್ರಿಪ್ಟ್ ಆದ ಪಾಸ್ವರ್ಡ್ ನೊಂದಿಗೆ ಹೋಲಿಸಬೇಕು.
09:08 ಇದು ಹಲವಾರು ಉಪಯೋಗಗಳನ್ನು ಹೊಂದಿದೆ ಮತ್ತು ಇದನ್ನು ಡಿಕ್ಲೇರ್ ಮಾಡುವುದು ತುಂಬ ಸುಲಭವಾಗಿದೆ. ನೀವು ಒಂದು md5() ಫಂಕ್ಷನ್ ಅನ್ನು ಬಳಸಿದರೆ ಸಾಕು.
09:16 ಇವಿಷ್ಟು ನೀವು MD5 ಫಂಕ್ಷನ್ ನ ಕುರಿತು ಮತ್ತು ಅದನ್ನು ಬಳಸುವುದು ಹೇಗೆ ಮತ್ತು ಅವುಗಳನ್ನು ನಿಮ್ಮ ಫಾರ್ಮ್ ಗಳಿಗೆ ಅಳವಡಿಸುವುದು ಹೇಗೆ ಎಂದು ತಿಳಿಯಬೇಕಾದದ್ದಾಗಿದೆ.
09:23 ಧನ್ಯವಾದಗಳು.
09:26 ನಾನು ಇನ್ನಷ್ಟು ಸೆಕ್ಯುರಿಟಿಯ ಕುರಿತಾದ ಟ್ಯುಟೋರಿಯಲ್ ಗಳನ್ನು ಹೊಂದಿದ್ದೇನೆ, ಅವುಗಳನ್ನು ನೋಡಿ, ಧನ್ಯವಾದಗಳು.
09:29 ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

NaveenBhat, Sandhya.np14