Difference between revisions of "Xfig/C2/Feedback-control-diagram/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 286: | Line 286: | ||
| '''Polyline''' ಅನ್ನು ನಾವು ಆಯ್ಕೆ ಮಾಡೋಣ. | | '''Polyline''' ಅನ್ನು ನಾವು ಆಯ್ಕೆ ಮಾಡೋಣ. | ||
|- | |- | ||
− | | 09: | + | | 09:18 |
− | | ಮುಂಚಿನ ಆಯ್ಕೆಗಳಾದ '''Arrow Mode''' ಮತ್ತು '''Arrow Type''' | + | | ಮುಂಚಿನ ಆಯ್ಕೆಗಳಾದ '''Arrow Mode''' ಮತ್ತು '''Arrow Type''' ಗಳನ್ನು ನೆನಪಿಟ್ಟಿರುವುದನ್ನು ಗಮನಿಸಿ. |
|- | |- | ||
| 09:24 | | 09:24 |
Latest revision as of 16:38, 30 January 2019
Time | Narration |
00:00 | Xfig ನ್ನು ಬಳಸಿ, feedback diagram creation ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ. |
00:07 | block diagram creation ನ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ, ನಾವು ಇಲ್ಲಿ ತೋರಿಸಲಾದ ಬ್ಲಾಕ್ ಡೈಗ್ರಾಮ್ ಅನ್ನು ರಚಿಸಿದ್ದೇವೆ. |
00:14 | ಇನ್ನುಮುಂದೆ ಇದನ್ನು ನಾವು blocks tutorial ಎಂದು ಕರೆಯುವೆವು. |
00:18 | ಈ ಟ್ಯುಟೋರಿಯಲ್ ಅನ್ನು ಪ್ರಾರಂಭಿಸುವ ಮೊದಲು, blocks tutorial ನ್ನು ಚೆನ್ನಾಗಿ ಅಭ್ಯಾಸಮಾಡಿ. |
00:22 | ಈ ಪೇಜ್ ನಲ್ಲಿ ತೋರಿಸಿರುವ ವಿಧದ ಬ್ಲಾಕ್ ಡೈಗ್ರಾಮ್ ಗಳನ್ನು ಹೇಗೆ ರಚಿಸಬೇಕೆಂದು ಈ ಟ್ಯುಟೋರಿಯಲ್ ನಲ್ಲಿ ನಾವು ವಿವರಿಸಲಿದ್ದೇವೆ. |
00:31 | ನಾನು Xfig ಆವೃತ್ತಿ 3.2, patch level 5 ಇವುಗಳನ್ನು ಬಳಸುವೆನು. |
00:37 | ನಾವು blocks ಟ್ಯುಟೋರಿಯಲ್ ನಲ್ಲಿ ಕ್ರಿಯೇಟ್ ಮಾಡಿದ "block.fig" ನಿಂದ ಆರಂಭಿಸುವೆವು. |
00:43 | Xfig ಗೆ ಹೋಗೋಣ. |
00:47 | File ಅನ್ನು, ನಂತರ Open ಅನ್ನು ಆಯ್ಕೆ ಮಾಡೋಣ. |
00:52 | ಎಂಟ್ರಿ ಬಾಕ್ಸ್ ನಲ್ಲಿ, "block" ಎಂದು ನಮೂದಿಸಿ Open ಅನ್ನು ಕ್ಲಿಕ್ ಮಾಡಬಹುದು. ಅಥವಾ “block.fig” ನ ಮೇಲೆ ಡಬಲ್-ಕ್ಲಿಕ್ ಮಾಡಬಹುದು. |
01:04 | File ನಲ್ಲಿಯ Save as ಆಯ್ಕೆಯನ್ನು ಬಳಸಿ, ನಾವು ಈ ಆಕೃತಿಯನ್ನು "feedback" ಎಂದು ಸೇವ್ ಮಾಡುವೆವು. |
01:24 | ಈಗ ನಮ್ಮ ಹತ್ತಿರ "feedback.fig" ಎಂಬ ಫೈಲ್ ಇದೆ. |
01:28 | ನಾವು Grids ಮೇಲೆ ಕ್ಲಿಕ್ ಮಾಡಿ, ಗ್ರಿಡ್ ಗಳನ್ನು ಸೇರಿಸೋಣ. |
01:34 | ಕ್ಯಾನ್ವಾಸ್ ಅನ್ನು ಮೇಲೆ ಅಥವಾ ಕೆಳಗೆ ಸರಿಸಲು, ಬಲಗಡೆಯಲ್ಲಿರುವ ಸ್ಕ್ರೋಲ್ ಬಾರ್ ನ್ನು ಬಳಸಬಹುದು. |
01:41 | ಪ್ರತಿಯೊಂದು ಮೌಸ್-ಬಟನ್ ಮಾಡುವ ಕೆಲಸವನ್ನು ಮೇಲ್ತುದಿಯ ಬಲಬದಿಯಲ್ಲಿ ತೋರಿಸಲಾಗಿದೆ. |
01:46 | ಈ ಕೆಲಸವು, ಆಗಬೇಕಾದ ಕಾರ್ಯವನ್ನು ಅವಲಂಬಿಸಿದೆ. |
01:49 | ಇದನ್ನು ವಿವರಿಸಲು, ನಾನು ಮೌಸ್ ಅನ್ನು ಸ್ಕ್ರೋಲ್-ಬಾರ್ ಗೆ ಕೊಂಡೊಯ್ಯುತ್ತೇನೆ. |
01:55 | 'ಲೆಫ್ಟ್-ಬಟನ್' ನ ಬದಿಯಲ್ಲಿರುವ ಟಿಪ್ಪಣಿಯನ್ನು ಗಮನಿಸಿ. |
01:59 | ಇದನ್ನು ತೋರಿಸಲು, ನಾನು ಮೌಸ್ ಅನ್ನು ಸರಿದಾಡಿಸಲು ಸಾಧ್ಯವಿಲ್ಲ. ಏಕೆಂದರೆ, ನಾನು ಕರ್ಸರ್ ನ್ನು ಸ್ಕ್ರೋಲ್-ಬಾರ್ ನಿಂದ ದೂರ ಸರಿಸಿದರೆ, ಬಟನ್ ಗಳ ಪಾತ್ರವು ಬದಲಾಗುತ್ತದೆ. |
02:08 | ಎಡಗಡೆಯ ಬಟನ್, ಕ್ಯಾನ್ವಾಸ್ ಅನ್ನು ಮೇಲಕ್ಕೆ ಮತ್ತು ಬಲಗಡೆಯ ಬಟನ್ ಕೆಳಗೆ ಚಲಿಸುವಂತೆ ಮಾಡುತ್ತದೆ. |
02:17 | ಎಡ ಅಥವಾ ಬಲಭಾಗದ ಬಟನ್ ಅನ್ನು ಕ್ಲಿಕ್ ಮಾಡುವ ಬದಲು, ನಾವು ಮಧ್ಯದಲ್ಲಿರುವ ಬಟನ್ ಅನ್ನು ಕ್ಲಿಕ್ ಮಾಡಿ, ಅದನ್ನು ಒತ್ತಿ ಹಿಡಿದು, ಕ್ಯಾನ್ವಾಸ್ ಅನ್ನು ಮೇಲೆ ಕೆಳಗೆ ಎಳೆದೊಯ್ಯಬಹುದು. |
02:31 | ಇದೇ ರೀತಿ, ಮೇಲಿರುವ ಸ್ಕ್ರೋಲ್-ಬಾರ್ ಅನ್ನು ಬಳಸಿ, ನೀವು ಕ್ಯಾನ್ವಾಸ್ ಅನ್ನು ಬಲಕ್ಕೆ ಅಥವಾ ಎಡಕ್ಕೆ ಕೊಂಡೊಯ್ಯಬಹುದು. ಎಡಕ್ಕೆ, ಬಲಕ್ಕೆ .. |
02:44 | ಈಗ ನಾನು ಮಧ್ಯದ ಬಟನ್ ಅನ್ನು ಕ್ಲಿಕ್ ಮಾಡಿ, ಕ್ಯಾನ್ವಾಸ್ ಅನ್ನು ಒತ್ತಿಹಿಡಿದು, ಅದನ್ನು ಮಧ್ಯಭಾಗಕ್ಕೆ ಎಳೆದು, ಬಾಕ್ಸ್ ಅನ್ನು ಮಧ್ಯಭಾಗಕ್ಕೆ ವರ್ಗಾಯಿಸುವೆನು. |
02:57 | ನಾನು ಮೌಸ್ ಅನ್ನು ಬಿಡುತ್ತಿದ್ದಂತೆಯೇ, ಬಾಕ್ಸ್, ಮಧ್ಯಭಾಗಕ್ಕೆ ಬಂದು ಸೇರುತ್ತದೆ. |
03:03 | ಈಗ, ಈ ಬ್ಲಾಕ್ ನಿಂದ ಆರಂಭಿಸಿ, ನಾವು ಫೀಡ್ ಬ್ಯಾಕ್ ಡೈಗ್ರಾಮ್ ಅನ್ನು ರಚಿಸೋಣ. |
03:08 | ಈ ಬಾಕ್ಸ್ ಅನ್ನು ಕಾಪಿ ಮಾಡೋಣ. |
03:13 | ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಅದನ್ನು ಆಯ್ಕೆ ಮಾಡಿ. |
03:16 | ಮೌಸ್ ಅನ್ನು ಹೊಸಸ್ಥಳಕ್ಕೆ ಕೊಂಡೊಯ್ದು, ಅಲ್ಲಿ ಕ್ಲಿಕ್ ಮಾಡಿ. |
03:27 | ಈಗ ನಾವು ಸ್ವಲ್ಪ ಟೆಕ್ಸ್ಟ್ ಅನ್ನು ಸೇರಿಸೋಣ. |
03:29 | ಎಡಭಾಗದ ಪ್ಯಾನಲ್ ನಲ್ಲಿ, T ಯಿಂದ ಸೂಚಿತವಾಗಿರುವ ಟೆಕ್ಸ್ಟ್ ಬಾಕ್ಸ್ ಅನ್ನು ಕ್ಲಿಕ್ ಮಾಡೋಣ. |
03:37 | ಟೆಕ್ಸ್ಟ್ ನ ಸೈಜ್ ಅನ್ನು ಆಯ್ಕೆ ಮಾಡೋಣ. |
03:43 | ಮೌಸ್ ಅನ್ನು ವ್ಯಾಲ್ಯು–ಬಾಕ್ಸ್ ಗೆ ಕೊಂಡೊಯ್ದು, ಅಲ್ಲಿ 16 ಎಂದು ನಮೂದಿಸಿ. |
03:51 | Set ಅನ್ನು ಕ್ಲಿಕ್ ಮಾಡಿ. |
03:53 | 'ಅಟ್ರೀಬ್ಯೂಟ್ಸ್' ಪ್ಯಾನಲ್ ನಲ್ಲಿರುವ Text Just ಬಟನ್ ಅನ್ನು ನಾವು ಕ್ಲಿಕ್ ಮಾಡೋಣ. |
04:02 | 'ಸೆಂಟರ್ ಅಲೈನ್ಮೆಂಟ್' ಅನ್ನು ಆಯ್ಕೆ ಮಾಡೋಣ. |
04:05 | ಮೊದಲನೆಯ ಬಾಕ್ಸ್ ನ ಮಧ್ಯದಲ್ಲಿ ಕ್ಲಿಕ್ ಮಾಡೋಣ. |
04:11 | ಕ್ಷಮಿಸಿ, ನಾನು ಸರಿಯಾದ ಜಾಗವನ್ನು ಆಯ್ಕೆ ಮಾಡಲಿಲ್ಲ. |
04:15 | ಕರ್ಸರ್ ಅನ್ನು ದೂರ ಸರಿಸಲು, ನಾನು ಬೇರೊಂದು ಸ್ಥಳದಲ್ಲಿ ಕ್ಲಿಕ್ ಮಾಡುತ್ತೇನೆ. |
04:19 | ಬಳಿಕ ನಾನು ಸರಿಯಾದ ಸ್ಥಳದಲ್ಲಿ ಕ್ಲಿಕ್ ಮಾಡುತ್ತೇನೆ. |
04:27 | ನಾವೀಗ ಟೆಕ್ಸ್ಟ್ ಅನ್ನು “Control” ಎಂದು ಟೈಪ್ ಮಾಡಿ, ಮೌಸ್ ಅನ್ನು ಕ್ಲಿಕ್ ಮಾಡೋಣ. |
04:35 | ನಮಗೆ ಈಗ, ಬಾಣದ ಚಿಹ್ನೆಯಿರುವ ಕೆಲವು ರೇಖೆಗಳನ್ನು ಸೇರಿಸಬೇಕಾಗಿದೆ. |
04:40 | POLYLINE ಎಂಬ ಬಟನ್ ಅನ್ನು ನಾವು ಆಯ್ಕೆಮಾಡೋಣ. |
04:43 | 'ಅಟ್ರೀಬ್ಯೂಟ್ಸ್' ಪ್ಯಾನಲ್ ನಿಂದ, Arrow Mode ಬಟನ್ ಅನ್ನು ಆಯ್ಕೆಮಾಡಿ, ಎರಡನೆಯ ಆಯ್ಕೆಯನ್ನು ಆರಿಸಿಕೊಳ್ಳೋಣ. |
04:53 | Arrow Type ಬಟನ್ ಅನ್ನು ಮತ್ತು ಒಂದು ಆರೊ-ಹೆಡ್ ಅನ್ನು ಕ್ಲಿಕ್ ಮಾಡೋಣ. |
05:00 | ಗೆರೆಯನ್ನು ಆರಂಭಿಸಬೇಕಾದ ಸ್ಥಾನದಲ್ಲಿ ಕ್ಲಿಕ್ ಮಾಡೋಣ. |
05:08 | ಈ ರೇಖೆಯ ಕೊನೆಯ ಬಿಂದುವಿನೆಡೆಗೆ ಮೌಸ್ ಅನ್ನು ಒಯ್ಯೋಣ. |
05:14 | middle mouse button ನಿಂದ, ಅಲ್ಲಿ ಕ್ಲಿಕ್ ಮಾಡೋಣ. |
05:20 | ಈಗ ಬಾಣದ ಚಿಹ್ನೆಯೊಂದಿಗೆ ರೇಖೆಯ ರಚನೆಯಾಗಿದೆ. |
05:25 | ನನಗೆ ಒಂದು ವೃತ್ತವನ್ನು ಸೇರಿಸಬೇಕಾಗಿದೆ. |
05:27 | ಎಡಭಾಗದ ಪ್ಯಾನಲ್ ನಿಂದ, ಎಡಗಡೆಯ ವೃತ್ತವನ್ನು ನಾವು ಆಯ್ಕೆಮಾಡೋಣ. |
05:33 | ನಾವು ಇದನ್ನು ಮೊದಲನೆಯ ಬಾಕ್ಸ್ ನ ಎಡಭಾಗದಲ್ಲಿ ಸೇರಿಸುವೆವು. |
05:37 | ಮೌಸ್ ಅನ್ನು ಕ್ಲಿಕ್ ಮಾಡಿ. ನಾನು ಮೌಸ್ ಅನ್ನು ಸರಿದಾಡಿಸುತ್ತಿದ್ದಂತೆ ವೃತ್ತವು ದೊಡ್ಡದಾಗುತ್ತದೆ. |
05:47 | ಸರಿಯಾದ ಗಾತ್ರವನ್ನು ಪಡೆದಾಗ, ಮೌಸ್-ಬಟನ್ ಅನ್ನು ಬಿಟ್ಟುಬಿಡೋಣ. |
05:54 | ಓಹ್, ವೃತ್ತವು ನನಗೆ ಅಗತ್ಯ ಇದ್ದುದಕ್ಕಿಂತ ದೊಡ್ಡದಾಗಿದೆ. |
05:57 | ಮೇಲ್ತುದಿಯಲ್ಲಿರುವ Edit ಬಟನ್ ನ್ನು ಬಳಸಿ, ನಾನು ಈ ಕಾರ್ಯಾಚರಣೆಯನ್ನು undo ಮಾಡಬಹುದು. |
06:02 | ಎಡಭಾಗದ ಪ್ಯಾನಲ್ ನಲ್ಲಿರುವ Delete ಬಟನ್ ನ್ನು ಬಳಸಿ, ನಾವು ಈ ಆಬ್ಜೆಕ್ಟ್ ನ್ನು ಡಿಲೀಟ್ ಸಹ ಮಾಡಬಹುದು. |
06:10 | ನಾವೀಗ ಅದನ್ನು ಮಾಡೋಣ. |
06:14 | cross hairs ನೊಂದಿಗೆ ಒಂದು ಸ್ಕೆಲೆಟನ್ ಕಾಣಿಸಿಕೊಳ್ಳುತ್ತದೆ. |
06:18 | ಎಲ್ಲ ಆಬ್ಜೆಕ್ಟ್ ಗಳ ಕೀ ಪಾಯಿಂಟ್ ಗಳೂ (ಮುಖ್ಯ ಅಂಶಗಳು) ಸಹ ಕಾಣಿಸಿಕೊಳ್ಳುತ್ತವೆ. |
06:22 | ವೃತ್ತವನ್ನು ಸೂಚಿಸುವ ಕೀ ಪಾಯಿಂಟ್ ನೆಡೆಗೆ ಕ್ರಾಸ್ ಹೇರ್ ಗಳನ್ನು ಕೊಂಡೊಯ್ದು ಕ್ಲಿಕ್ ಮಾಡಿ. |
06:32 | ಒಂದುವೇಳೆ, ಬೇರೆ ಆಬ್ಜೆಟ್ ಡಿಲೀಟ್ ಆದಲ್ಲಿ, ಗಾಬರಿಯಾಗುವ ಅವಶ್ಯಕತೆ ಇಲ್ಲ. |
06:35 | ನೀವು ಅದನ್ನು undo ಮಾಡಬಹುದು: Edit ಬಟನ್ ಅನ್ನು ಕ್ಲಿಕ್ ಮಾಡಿ ಹಿಡಿದು, Undo ಗೆ ಹೋಗಿ ಮೌಸ್ ಅನ್ನು ಬಿಟ್ಟುಬಿಡಿ. |
06:44 | ಒಂದುವೇಳೆ, ಕೆಲವು ಆಬ್ಜೆಕ್ಟ್ ಗಳು ಹತ್ತಿರ ಹತ್ತಿರ ಇದ್ದಲ್ಲಿ, ಅವುಗಳನ್ನು ಆಯ್ಕೆ ಮಾಡಲು ನಿಮಗೆ ಕಷ್ಟವಾಗಬಹುದು. |
06:49 | zoom ಎಂಬ ಆಯ್ಕೆಯ ಮೂಲಕ ನೀವಿದನ್ನು ಸರಿಮಾಡಬಹುದು. |
06:55 | ಮೇಲ್ಭಾಗದ ಎಡಬದಿಯ View ಬಟನ್ ನ್ನು ಕ್ಲಿಕ್ ಮಾಡಿ, ಮೌಸ್ ಅನ್ನು ಹಿಡಿದು, ಝೂಮ್ ಆಯ್ಕೆಗಳಲ್ಲಿ ಒಂದನ್ನು ಆರಿಸಿಕೊಳ್ಳಿ. |
07:00 | ನಾನು ಮೌಸ್ ಅನ್ನು Zoom to fit the canvas ನಲ್ಲಿ ಬಿಟ್ಟುಬಿಡುತ್ತೇನೆ. |
07:04 | ಈಗ ಆಬ್ಜೆಟ್ ಗಳ ನಡುವೆ ಇರುವ ವ್ಯತ್ಯಾಸಗಳನ್ನು ಕಂಡುಹಿಡಿಯುವುದು ಸುಲಭ. |
07:08 | ಈಗ ನಾನು ಸರ್ಕಲ್ ಅನ್ನು ಡಿಲೀಟ್ ಮಾಡುತ್ತೇನೆ. |
07:12 | ಈಗ unzoom ಮಾಡುವೆನು. |
07:20 | ಸ್ಕ್ರೋಲ್ ಬಟನ್ ಗಳ ಸಹಾಯದಿಂದ ನಾನು ಡೈಗ್ರಾಮ್ ಅನ್ನು ಮಧ್ಯಭಾಗಕ್ಕೆ ಕೊಂಡೊಯ್ಯುತ್ತೇನೆ. |
07:35 | delete ಚಿಹ್ನೆಯನ್ನು ನಾನು ON ಆಗಿಡಲು ಇಚ್ಛಿಸುವುದಿಲ್ಲ. ಏಕೆಂದರೆ, ಆಕಸ್ಮಿಕವಾಗಿ ಬೇರೆ ಯಾವುದನ್ನೊ ನಾನು ಡಿಲೀಟ್ ಮಾಡಬಹುದು. |
07:41 | ಬೇರೊಂದು ಬಟನ್ ಅನ್ನು ಆಯ್ಕೆಮಾಡಿ, ನಾನಿದನ್ನು ಬದಲಾಯಿಸಬಹುದು. |
07:44 | ನಾನು ಎಡಭಾಗದ ವೃತ್ತವನ್ನು ಆಯ್ಕೆ ಮಾಡುತ್ತೇನೆ. |
07:47 | ವೃತ್ತವನ್ನು ಮತ್ತೊಮ್ಮೆ ರಚಿಸುತ್ತೇನೆ. |
08:00 | ನನಗೆ ಈ ರೇಖೆಯಿಂದ ಮತ್ತೊಂದು ರೇಖೆಯನ್ನು ರಚಿಸಬೇಕಾಗಿದೆ. |
08:04 | ಇದಕ್ಕಾಗಿ, ನಾವು ರೇಖೆಯ ಮೇಲೆ ಮೊದಲು ಒಂದು dot ನ್ನು ಇಡೋಣ. |
08:07 | ಎಡಭಾಗದ ಪ್ಯಾನಲ್ ನಲ್ಲಿರುವ Library ಯನ್ನು ಕ್ಲಿಕ್ ಮಾಡೋಣ. |
08:11 | ಪೇರಿಸಿಟ್ಟ ಪುಸ್ತಕಗಳಿಂದ Library ಸೂಚಿತವಾಗಿದೆ. |
08:15 | ಒಂದು ಡೈಲಾಗ್ ವಿಂಡೋ ತೆರೆಯುತ್ತದೆ. |
08:17 | Library ಎಂಬ ಬಾಕ್ಸ್ ನಲ್ಲಿ, None Loaded ಎಂದು ಇದೆ. |
08:20 | ನಾವು ಕ್ಲಿಕ್ ಮಾಡಿ ಹಿಡಿದುಕೊಳ್ಳೋಣ. |
08:22 | ಲಭ್ಯವಿರುವ ಲೈಬ್ರರಿಗಳ ಒಂದು ಪಟ್ಟಿ ಕಂಡುಬರುತ್ತದೆ. |
08:25 | ಮೌಸ್ ಅನ್ನು 'Logic' ಎಂಬ ಲೈಬ್ರರಿ ಗೆ ಕೊಂಡೊಯ್ದು ಅಲ್ಲಿ ಬಿಟ್ಟುಬಿಡಿ. |
08:31 | ಚಿಕ್ಕ ಡಾಟ್ ಅನ್ನು, ಅದರ ಮೇಲೆ ಡಬಲ್ ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡೋಣ. |
08:36 | ಡೈಲಾಗ್ ವಿಂಡೋ ಕ್ಲೋಸ್ ಆಗುತ್ತದೆ. |
08:38 | ಆಯ್ಕೆ ಮಾಡಿದ ಚಿಕ್ಕ ಡಾಟ್ ನೊಂದಿಗೆ, ಕ್ರಾಸ್ ಹೇರ್ ಅನ್ನುನಾವು ನೋಡುತ್ತೇವೆ. |
08:42 | ಕ್ಲಿಕ್ ಮಾಡುವುದರ ಮೂಲಕ, ರೇಖೆಯ ಮೇಲೆ ಡಾಟ್ ಅನ್ನು ಇಡೋಣ. |
08:51 | ಕರ್ಸರ್ ಮತ್ತು ಚಿಕ್ಕ ಡಾಟ್ ಮತ್ತೊಮ್ಮೆ ಕಾಣಿಸುತ್ತವೆ. ಬೇರೆ ಸ್ಥಾನದಲ್ಲಿ ಸಹ ನಾವು ಇದನ್ನು ಇಡಬಹುದು ಎಂದು ಇದು ಸೂಚಿಸುತ್ತದೆ. |
08:57 | ನಮಗೆ ಬೇರೆ ಯಾವುದೇ ಸ್ಥಳದಲ್ಲಿ ಡಾಟ್ ಅನ್ನು ಇಡಬೇಕಾಗಿಲ್ಲ. |
09:00 | ಮೌಸ್ ನ ಬಲಗಡೆಯ ಬಟನ್ ಅನ್ನು ಕ್ಲಿಕ್ ಮಾಡಿ, ನಾವು ಇದನ್ನು ಕ್ಲೋಸ್ ಮಾಡೋಣ. |
09:05 | ಬಲಗಡೆಯ ಬಟನ್, undo ಆಪರೇಷನ್ ಅನ್ನು ಮಾಡುತ್ತದೆ. |
09:08 | ಈ ಸಂದರ್ಭದಲ್ಲಿ, ಡಾಟ್ ನ ಆಯ್ಕೆಯನ್ನು ತೆಗೆದು ಹಾಕಲಾಗಿದೆ. |
09:10 | ಈ ಡಾಟ್ ನಿಂದ ವೃತ್ತಕ್ಕೆ ಒಂದು ರೇಖೆಯನ್ನು ಎಳೆಯೋಣ. |
09:15 | Polyline ಅನ್ನು ನಾವು ಆಯ್ಕೆ ಮಾಡೋಣ. |
09:18 | ಮುಂಚಿನ ಆಯ್ಕೆಗಳಾದ Arrow Mode ಮತ್ತು Arrow Type ಗಳನ್ನು ನೆನಪಿಟ್ಟಿರುವುದನ್ನು ಗಮನಿಸಿ. |
09:24 | ಒಂದು ಸೆಷನ್ ನಲ್ಲಿನ ಪ್ಯಾರಾಮೀಟರ್ ವ್ಯಾಲ್ಯುಗಳನ್ನು, Xfig ನೆನಪಿಟ್ಟುಕೊಳ್ಳುತ್ತದೆ. |
09:28 | ಡಾಟ್ ನ್ನು ಕ್ಲಿಕ್ ಮಾಡಿ. |
09:34 | ಮೌಸ್ ಅನ್ನು ಕೆಳಗೆ ನಡೆಸಿ, ಕ್ಲಿಕ್ ಮಾಡಿ. |
09:41 | ಈಗ ಮೌಸ್ ಅನ್ನು, ಎಡಕ್ಕೆ, ವೃತ್ತದ ಕೆಳಭಾಗದವರೆಗೆ ನಡೆಸಿ ಕ್ಲಿಕ್ ಮಾಡಿ. |
09:47 | ಮೌಸ್ ಅನ್ನು ವೃತ್ತದೆಡೆಗೆ ಒಯ್ದು, 'ಮಿಡಲ್ ಮೌಸ್ ಬಟನ್' ಅನ್ನು ಕ್ಲಿಕ್ ಮಾಡಿ. |
09:54 | ಕಾಪಿ ಮಾಡುವುದರ ಮೂಲಕ, ವೃತ್ತದ ಎಡಕ್ಕೆ ಮತ್ತೊಂದು ರೇಖೆಯನ್ನು ಎಳೆಯೋಣ. |
10:08 | Xfig ನ ಮೇಲಿನ ಎಡಮೂಲೆಯಲ್ಲಿರುವ File ಬಟನ್ ಅನ್ನು ಬಳಸಿ, Save ಅನ್ನು ಆಯ್ಕೆ ಮಾಡಿ, ನಾವು ಈ ಚಿತ್ರವನ್ನು ಸೇವ್ ಮಾಡೋಣ. |
10:19 | ಈಗ ಫೈಲ್ ಅನ್ನು Export ಮಾಡೋಣ. |
10:22 | File ಬಟನ್ ಅನ್ನು ಮತ್ತೊಮ್ಮೆ ಕ್ಲಿಕ್ ಮಾಡಿ Export ಅನ್ನು ಆಯ್ಕೆ ಮಾಡೋಣ. |
10:30 | ನಾವು Language, ನಂತರ PDF ಅನ್ನು ಆಯ್ಕೆ ಮಾಡೋಣ. |
10:36 | "feedback.pdf" ಫೈಲ್ ನಮಗೆ ಸಿಗುತ್ತದೆ. |
10:43 | open feedback.pdf ಕಮಾಂಡ್ ಮೂಲಕ, ಈಗ ನಾವು ಈ ಫೈಲ್ ಅನ್ನು ಓಪನ್ ಮಾಡೋಣ. |
10:56 | ನಮಗೆ ಬೇಕಾದ ಬ್ಲಾಕ್ ಡೈಗ್ರಾಮ್ ಅನ್ನು, ಈಗ ನಾವು ಪಡೆದಿದ್ದೇವೆ. |
11:00 | ನಾವು ನಮ್ಮ ಗುರಿಯನ್ನು ಮುಟ್ಟಿದ್ದೇವೆ. |
11:04 | ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. |
11:08 | ಬ್ಲಾಕ್ಸ್ ಗಳನ್ನು ವಿಭಿನ್ನ ಆಬ್ಜೆಕ್ಟ್ ಗಳಿಂದ ಬದಲಾಯಿಸಿ. |
11:13 | rotate ಮತ್ತು flip ಗಳಂತಹ ಆಪರೇಷನ್ ಗಳನ್ನು ಪ್ರಯತ್ನಿಸಿ. |
11:19 | ಎಡಿಟರ್ ನಲ್ಲಿ “feedback.fig” ಫೈಲ್ ನ್ನು ವೀಕ್ಷಿಸಿ ಮತ್ತು ವಿವಿಧ ಘಟಕಗಳನ್ನು ಗುರುತಿಸಿ. |
11:25 | 'ಲೈಬ್ರರಿ' ಯನ್ನು ಬಳಸಿ, ಸಂಪೂರ್ಣವಾಗಿ ಬೇರೆಯದೇ ಆದ ಬ್ಲಾಕ್ ಡೈಗ್ರಾಮ್ ಗಳನ್ನು ರಚಿಸಿ. |
11:32 | ಸ್ಪೋಕನ್ ಟ್ಯುಟೋರಿಯಲ್, 'ಟಾಕ್ ಟು ಎ ಟೀಚರ್' ಎಂಬ ಪ್ರೊಜೆಕ್ಟ್ ನ ಒಂದು ಭಾಗವಾಗಿದ್ದು, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
11:44 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
11:53 | ನಾವು ನಿಮ್ಮ ಭಾಗವಹಿಸುವಿಕೆ ಮತ್ತು ಅಭಿಪ್ರಾಯವನ್ನು ಸ್ವಾಗತಿಸುತ್ತೇವೆ. |
11:57 | ಈ ಟ್ಯುಟೋರಿಯಲ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |