Xfig/C2/Feedback-control-diagram/Kannada

From Script | Spoken-Tutorial
Jump to: navigation, search
Time Narration
00:00 Xfig ನ್ನು ಬಳಸಿ, feedback diagram creation ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ.
00:07 block diagram creation ನ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ, ನಾವು ಇಲ್ಲಿ ತೋರಿಸಲಾದ ಬ್ಲಾಕ್ ಡೈಗ್ರಾಮ್ ಅನ್ನು ರಚಿಸಿದ್ದೇವೆ.
00:14 ಇನ್ನುಮುಂದೆ ಇದನ್ನು ನಾವು blocks tutorial ಎಂದು ಕರೆಯುವೆವು.
00:18 ಈ ಟ್ಯುಟೋರಿಯಲ್ ಅನ್ನು ಪ್ರಾರಂಭಿಸುವ ಮೊದಲು, blocks tutorial ನ್ನು ಚೆನ್ನಾಗಿ ಅಭ್ಯಾಸಮಾಡಿ.
00:22 ಈ ಪೇಜ್ ನಲ್ಲಿ ತೋರಿಸಿರುವ ವಿಧದ ಬ್ಲಾಕ್ ಡೈಗ್ರಾಮ್ ಗಳನ್ನು ಹೇಗೆ ರಚಿಸಬೇಕೆಂದು ಈ ಟ್ಯುಟೋರಿಯಲ್ ನಲ್ಲಿ ನಾವು ವಿವರಿಸಲಿದ್ದೇವೆ.
00:31 ನಾನು Xfig ಆವೃತ್ತಿ 3.2, patch level 5 ಇವುಗಳನ್ನು ಬಳಸುವೆನು.
00:37 ನಾವು blocks ಟ್ಯುಟೋರಿಯಲ್ ನಲ್ಲಿ ಕ್ರಿಯೇಟ್ ಮಾಡಿದ "block.fig" ನಿಂದ ಆರಂಭಿಸುವೆವು.
00:43 Xfig ಗೆ ಹೋಗೋಣ.
00:47 File ಅನ್ನು, ನಂತರ Open ಅನ್ನು ಆಯ್ಕೆ ಮಾಡೋಣ.
00:52 ಎಂಟ್ರಿ ಬಾಕ್ಸ್ ನಲ್ಲಿ, "block" ಎಂದು ನಮೂದಿಸಿ Open ಅನ್ನು ಕ್ಲಿಕ್ ಮಾಡಬಹುದು. ಅಥವಾ “block.fig” ನ ಮೇಲೆ ಡಬಲ್-ಕ್ಲಿಕ್ ಮಾಡಬಹುದು.
01:04 File ನಲ್ಲಿಯ Save as ಆಯ್ಕೆಯನ್ನು ಬಳಸಿ, ನಾವು ಈ ಆಕೃತಿಯನ್ನು "feedback" ಎಂದು ಸೇವ್ ಮಾಡುವೆವು.
01:24 ಈಗ ನಮ್ಮ ಹತ್ತಿರ "feedback.fig" ಎಂಬ ಫೈಲ್ ಇದೆ.
01:28 ನಾವು Grids ಮೇಲೆ ಕ್ಲಿಕ್ ಮಾಡಿ, ಗ್ರಿಡ್ ಗಳನ್ನು ಸೇರಿಸೋಣ.
01:34 ಕ್ಯಾನ್ವಾಸ್ ಅನ್ನು ಮೇಲೆ ಅಥವಾ ಕೆಳಗೆ ಸರಿಸಲು, ಬಲಗಡೆಯಲ್ಲಿರುವ ಸ್ಕ್ರೋಲ್ ಬಾರ್ ನ್ನು ಬಳಸಬಹುದು.
01:41 ಪ್ರತಿಯೊಂದು ಮೌಸ್-ಬಟನ್ ಮಾಡುವ ಕೆಲಸವನ್ನು ಮೇಲ್ತುದಿಯ ಬಲಬದಿಯಲ್ಲಿ ತೋರಿಸಲಾಗಿದೆ.
01:46 ಈ ಕೆಲಸವು, ಆಗಬೇಕಾದ ಕಾರ್ಯವನ್ನು ಅವಲಂಬಿಸಿದೆ.
01:49 ಇದನ್ನು ವಿವರಿಸಲು, ನಾನು ಮೌಸ್ ಅನ್ನು ಸ್ಕ್ರೋಲ್-ಬಾರ್ ಗೆ ಕೊಂಡೊಯ್ಯುತ್ತೇನೆ.
01:55 'ಲೆಫ್ಟ್-ಬಟನ್' ನ ಬದಿಯಲ್ಲಿರುವ ಟಿಪ್ಪಣಿಯನ್ನು ಗಮನಿಸಿ.
01:59 ಇದನ್ನು ತೋರಿಸಲು, ನಾನು ಮೌಸ್ ಅನ್ನು ಸರಿದಾಡಿಸಲು ಸಾಧ್ಯವಿಲ್ಲ. ಏಕೆಂದರೆ, ನಾನು ಕರ್ಸರ್ ನ್ನು ಸ್ಕ್ರೋಲ್-ಬಾರ್ ನಿಂದ ದೂರ ಸರಿಸಿದರೆ, ಬಟನ್ ಗಳ ಪಾತ್ರವು ಬದಲಾಗುತ್ತದೆ.
02:08 ಎಡಗಡೆಯ ಬಟನ್, ಕ್ಯಾನ್ವಾಸ್ ಅನ್ನು ಮೇಲಕ್ಕೆ ಮತ್ತು ಬಲಗಡೆಯ ಬಟನ್ ಕೆಳಗೆ ಚಲಿಸುವಂತೆ ಮಾಡುತ್ತದೆ.
02:17 ಎಡ ಅಥವಾ ಬಲಭಾಗದ ಬಟನ್ ಅನ್ನು ಕ್ಲಿಕ್ ಮಾಡುವ ಬದಲು, ನಾವು ಮಧ್ಯದಲ್ಲಿರುವ ಬಟನ್ ಅನ್ನು ಕ್ಲಿಕ್ ಮಾಡಿ, ಅದನ್ನು ಒತ್ತಿ ಹಿಡಿದು, ಕ್ಯಾನ್ವಾಸ್ ಅನ್ನು ಮೇಲೆ ಕೆಳಗೆ ಎಳೆದೊಯ್ಯಬಹುದು.
02:31 ಇದೇ ರೀತಿ, ಮೇಲಿರುವ ಸ್ಕ್ರೋಲ್-ಬಾರ್ ಅನ್ನು ಬಳಸಿ, ನೀವು ಕ್ಯಾನ್ವಾಸ್ ಅನ್ನು ಬಲಕ್ಕೆ ಅಥವಾ ಎಡಕ್ಕೆ ಕೊಂಡೊಯ್ಯಬಹುದು. ಎಡಕ್ಕೆ, ಬಲಕ್ಕೆ ..
02:44 ಈಗ ನಾನು ಮಧ್ಯದ ಬಟನ್ ಅನ್ನು ಕ್ಲಿಕ್ ಮಾಡಿ, ಕ್ಯಾನ್ವಾಸ್ ಅನ್ನು ಒತ್ತಿಹಿಡಿದು, ಅದನ್ನು ಮಧ್ಯಭಾಗಕ್ಕೆ ಎಳೆದು, ಬಾಕ್ಸ್ ಅನ್ನು ಮಧ್ಯಭಾಗಕ್ಕೆ ವರ್ಗಾಯಿಸುವೆನು.
02:57 ನಾನು ಮೌಸ್ ಅನ್ನು ಬಿಡುತ್ತಿದ್ದಂತೆಯೇ, ಬಾಕ್ಸ್, ಮಧ್ಯಭಾಗಕ್ಕೆ ಬಂದು ಸೇರುತ್ತದೆ.
03:03 ಈಗ, ಈ ಬ್ಲಾಕ್ ನಿಂದ ಆರಂಭಿಸಿ, ನಾವು ಫೀಡ್ ಬ್ಯಾಕ್ ಡೈಗ್ರಾಮ್ ಅನ್ನು ರಚಿಸೋಣ.
03:08 ಈ ಬಾಕ್ಸ್ ಅನ್ನು ಕಾಪಿ ಮಾಡೋಣ.
03:13 ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಅದನ್ನು ಆಯ್ಕೆ ಮಾಡಿ.
03:16 ಮೌಸ್ ಅನ್ನು ಹೊಸಸ್ಥಳಕ್ಕೆ ಕೊಂಡೊಯ್ದು, ಅಲ್ಲಿ ಕ್ಲಿಕ್ ಮಾಡಿ.
03:27 ಈಗ ನಾವು ಸ್ವಲ್ಪ ಟೆಕ್ಸ್ಟ್ ಅನ್ನು ಸೇರಿಸೋಣ.
03:29 ಎಡಭಾಗದ ಪ್ಯಾನಲ್ ನಲ್ಲಿ, T ಯಿಂದ ಸೂಚಿತವಾಗಿರುವ ಟೆಕ್ಸ್ಟ್ ಬಾಕ್ಸ್ ಅನ್ನು ಕ್ಲಿಕ್ ಮಾಡೋಣ.
03:37 ಟೆಕ್ಸ್ಟ್ ನ ಸೈಜ್ ಅನ್ನು ಆಯ್ಕೆ ಮಾಡೋಣ.
03:43 ಮೌಸ್ ಅನ್ನು ವ್ಯಾಲ್ಯು–ಬಾಕ್ಸ್ ಗೆ ಕೊಂಡೊಯ್ದು, ಅಲ್ಲಿ 16 ಎಂದು ನಮೂದಿಸಿ.
03:51 Set ಅನ್ನು ಕ್ಲಿಕ್ ಮಾಡಿ.
03:53 'ಅಟ್ರೀಬ್ಯೂಟ್ಸ್' ಪ್ಯಾನಲ್ ನಲ್ಲಿರುವ Text Just ಬಟನ್ ಅನ್ನು ನಾವು ಕ್ಲಿಕ್ ಮಾಡೋಣ.
04:02 'ಸೆಂಟರ್ ಅಲೈನ್ಮೆಂಟ್' ಅನ್ನು ಆಯ್ಕೆ ಮಾಡೋಣ.
04:05 ಮೊದಲನೆಯ ಬಾಕ್ಸ್ ನ ಮಧ್ಯದಲ್ಲಿ ಕ್ಲಿಕ್ ಮಾಡೋಣ.
04:11 ಕ್ಷಮಿಸಿ, ನಾನು ಸರಿಯಾದ ಜಾಗವನ್ನು ಆಯ್ಕೆ ಮಾಡಲಿಲ್ಲ.
04:15 ಕರ್ಸರ್ ಅನ್ನು ದೂರ ಸರಿಸಲು, ನಾನು ಬೇರೊಂದು ಸ್ಥಳದಲ್ಲಿ ಕ್ಲಿಕ್ ಮಾಡುತ್ತೇನೆ.
04:19 ಬಳಿಕ ನಾನು ಸರಿಯಾದ ಸ್ಥಳದಲ್ಲಿ ಕ್ಲಿಕ್ ಮಾಡುತ್ತೇನೆ.
04:27 ನಾವೀಗ ಟೆಕ್ಸ್ಟ್ ಅನ್ನು “Control” ಎಂದು ಟೈಪ್ ಮಾಡಿ, ಮೌಸ್ ಅನ್ನು ಕ್ಲಿಕ್ ಮಾಡೋಣ.
04:35 ನಮಗೆ ಈಗ, ಬಾಣದ ಚಿಹ್ನೆಯಿರುವ ಕೆಲವು ರೇಖೆಗಳನ್ನು ಸೇರಿಸಬೇಕಾಗಿದೆ.
04:40 POLYLINE ಎಂಬ ಬಟನ್ ಅನ್ನು ನಾವು ಆಯ್ಕೆಮಾಡೋಣ.
04:43 'ಅಟ್ರೀಬ್ಯೂಟ್ಸ್' ಪ್ಯಾನಲ್ ನಿಂದ, Arrow Mode ಬಟನ್ ಅನ್ನು ಆಯ್ಕೆಮಾಡಿ, ಎರಡನೆಯ ಆಯ್ಕೆಯನ್ನು ಆರಿಸಿಕೊಳ್ಳೋಣ.
04:53 Arrow Type ಬಟನ್ ಅನ್ನು ಮತ್ತು ಒಂದು ಆರೊ-ಹೆಡ್ ಅನ್ನು ಕ್ಲಿಕ್ ಮಾಡೋಣ.
05:00 ಗೆರೆಯನ್ನು ಆರಂಭಿಸಬೇಕಾದ ಸ್ಥಾನದಲ್ಲಿ ಕ್ಲಿಕ್ ಮಾಡೋಣ.
05:08 ಈ ರೇಖೆಯ ಕೊನೆಯ ಬಿಂದುವಿನೆಡೆಗೆ ಮೌಸ್ ಅನ್ನು ಒಯ್ಯೋಣ.
05:14 middle mouse button ನಿಂದ, ಅಲ್ಲಿ ಕ್ಲಿಕ್ ಮಾಡೋಣ.
05:20 ಈಗ ಬಾಣದ ಚಿಹ್ನೆಯೊಂದಿಗೆ ರೇಖೆಯ ರಚನೆಯಾಗಿದೆ.
05:25 ನನಗೆ ಒಂದು ವೃತ್ತವನ್ನು ಸೇರಿಸಬೇಕಾಗಿದೆ.
05:27 ಎಡಭಾಗದ ಪ್ಯಾನಲ್ ನಿಂದ, ಎಡಗಡೆಯ ವೃತ್ತವನ್ನು ನಾವು ಆಯ್ಕೆಮಾಡೋಣ.
05:33 ನಾವು ಇದನ್ನು ಮೊದಲನೆಯ ಬಾಕ್ಸ್ ನ ಎಡಭಾಗದಲ್ಲಿ ಸೇರಿಸುವೆವು.
05:37 ಮೌಸ್ ಅನ್ನು ಕ್ಲಿಕ್ ಮಾಡಿ. ನಾನು ಮೌಸ್ ಅನ್ನು ಸರಿದಾಡಿಸುತ್ತಿದ್ದಂತೆ ವೃತ್ತವು ದೊಡ್ಡದಾಗುತ್ತದೆ.
05:47 ಸರಿಯಾದ ಗಾತ್ರವನ್ನು ಪಡೆದಾಗ, ಮೌಸ್-ಬಟನ್ ಅನ್ನು ಬಿಟ್ಟುಬಿಡೋಣ.
05:54 ಓಹ್, ವೃತ್ತವು ನನಗೆ ಅಗತ್ಯ ಇದ್ದುದಕ್ಕಿಂತ ದೊಡ್ಡದಾಗಿದೆ.
05:57 ಮೇಲ್ತುದಿಯಲ್ಲಿರುವ Edit ಬಟನ್ ನ್ನು ಬಳಸಿ, ನಾನು ಈ ಕಾರ್ಯಾಚರಣೆಯನ್ನು undo ಮಾಡಬಹುದು.
06:02 ಎಡಭಾಗದ ಪ್ಯಾನಲ್ ನಲ್ಲಿರುವ Delete ಬಟನ್ ನ್ನು ಬಳಸಿ, ನಾವು ಈ ಆಬ್ಜೆಕ್ಟ್ ನ್ನು ಡಿಲೀಟ್ ಸಹ ಮಾಡಬಹುದು.
06:10 ನಾವೀಗ ಅದನ್ನು ಮಾಡೋಣ.
06:14 cross hairs ನೊಂದಿಗೆ ಒಂದು ಸ್ಕೆಲೆಟನ್ ಕಾಣಿಸಿಕೊಳ್ಳುತ್ತದೆ.
06:18 ಎಲ್ಲ ಆಬ್ಜೆಕ್ಟ್ ಗಳ ಕೀ ಪಾಯಿಂಟ್ ಗಳೂ (ಮುಖ್ಯ ಅಂಶಗಳು) ಸಹ ಕಾಣಿಸಿಕೊಳ್ಳುತ್ತವೆ.
06:22 ವೃತ್ತವನ್ನು ಸೂಚಿಸುವ ಕೀ ಪಾಯಿಂಟ್ ನೆಡೆಗೆ ಕ್ರಾಸ್ ಹೇರ್ ಗಳನ್ನು ಕೊಂಡೊಯ್ದು ಕ್ಲಿಕ್ ಮಾಡಿ.
06:32 ಒಂದುವೇಳೆ, ಬೇರೆ ಆಬ್ಜೆಟ್ ಡಿಲೀಟ್ ಆದಲ್ಲಿ, ಗಾಬರಿಯಾಗುವ ಅವಶ್ಯಕತೆ ಇಲ್ಲ.
06:35 ನೀವು ಅದನ್ನು undo ಮಾಡಬಹುದು: Edit ಬಟನ್ ಅನ್ನು ಕ್ಲಿಕ್ ಮಾಡಿ ಹಿಡಿದು, Undo ಗೆ ಹೋಗಿ ಮೌಸ್ ಅನ್ನು ಬಿಟ್ಟುಬಿಡಿ.
06:44 ಒಂದುವೇಳೆ, ಕೆಲವು ಆಬ್ಜೆಕ್ಟ್ ಗಳು ಹತ್ತಿರ ಹತ್ತಿರ ಇದ್ದಲ್ಲಿ, ಅವುಗಳನ್ನು ಆಯ್ಕೆ ಮಾಡಲು ನಿಮಗೆ ಕಷ್ಟವಾಗಬಹುದು.
06:49 zoom ಎಂಬ ಆಯ್ಕೆಯ ಮೂಲಕ ನೀವಿದನ್ನು ಸರಿಮಾಡಬಹುದು.
06:55 ಮೇಲ್ಭಾಗದ ಎಡಬದಿಯ View ಬಟನ್ ನ್ನು ಕ್ಲಿಕ್ ಮಾಡಿ, ಮೌಸ್ ಅನ್ನು ಹಿಡಿದು, ಝೂಮ್ ಆಯ್ಕೆಗಳಲ್ಲಿ ಒಂದನ್ನು ಆರಿಸಿಕೊಳ್ಳಿ.
07:00 ನಾನು ಮೌಸ್ ಅನ್ನು Zoom to fit the canvas ನಲ್ಲಿ ಬಿಟ್ಟುಬಿಡುತ್ತೇನೆ.
07:04 ಈಗ ಆಬ್ಜೆಟ್ ಗಳ ನಡುವೆ ಇರುವ ವ್ಯತ್ಯಾಸಗಳನ್ನು ಕಂಡುಹಿಡಿಯುವುದು ಸುಲಭ.
07:08 ಈಗ ನಾನು ಸರ್ಕಲ್ ಅನ್ನು ಡಿಲೀಟ್ ಮಾಡುತ್ತೇನೆ.
07:12 ಈಗ unzoom ಮಾಡುವೆನು.
07:20 ಸ್ಕ್ರೋಲ್ ಬಟನ್ ಗಳ ಸಹಾಯದಿಂದ ನಾನು ಡೈಗ್ರಾಮ್ ಅನ್ನು ಮಧ್ಯಭಾಗಕ್ಕೆ ಕೊಂಡೊಯ್ಯುತ್ತೇನೆ.
07:35 delete ಚಿಹ್ನೆಯನ್ನು ನಾನು ON ಆಗಿಡಲು ಇಚ್ಛಿಸುವುದಿಲ್ಲ. ಏಕೆಂದರೆ, ಆಕಸ್ಮಿಕವಾಗಿ ಬೇರೆ ಯಾವುದನ್ನೊ ನಾನು ಡಿಲೀಟ್ ಮಾಡಬಹುದು.
07:41 ಬೇರೊಂದು ಬಟನ್ ಅನ್ನು ಆಯ್ಕೆಮಾಡಿ, ನಾನಿದನ್ನು ಬದಲಾಯಿಸಬಹುದು.
07:44 ನಾನು ಎಡಭಾಗದ ವೃತ್ತವನ್ನು ಆಯ್ಕೆ ಮಾಡುತ್ತೇನೆ.
07:47 ವೃತ್ತವನ್ನು ಮತ್ತೊಮ್ಮೆ ರಚಿಸುತ್ತೇನೆ.
08:00 ನನಗೆ ಈ ರೇಖೆಯಿಂದ ಮತ್ತೊಂದು ರೇಖೆಯನ್ನು ರಚಿಸಬೇಕಾಗಿದೆ.
08:04 ಇದಕ್ಕಾಗಿ, ನಾವು ರೇಖೆಯ ಮೇಲೆ ಮೊದಲು ಒಂದು dot ನ್ನು ಇಡೋಣ.
08:07 ಎಡಭಾಗದ ಪ್ಯಾನಲ್ ನಲ್ಲಿರುವ Library ಯನ್ನು ಕ್ಲಿಕ್ ಮಾಡೋಣ.
08:11 ಪೇರಿಸಿಟ್ಟ ಪುಸ್ತಕಗಳಿಂದ Library ಸೂಚಿತವಾಗಿದೆ.
08:15 ಒಂದು ಡೈಲಾಗ್ ವಿಂಡೋ ತೆರೆಯುತ್ತದೆ.
08:17 Library ಎಂಬ ಬಾಕ್ಸ್ ನಲ್ಲಿ, None Loaded ಎಂದು ಇದೆ.
08:20 ನಾವು ಕ್ಲಿಕ್ ಮಾಡಿ ಹಿಡಿದುಕೊಳ್ಳೋಣ.
08:22 ಲಭ್ಯವಿರುವ ಲೈಬ್ರರಿಗಳ ಒಂದು ಪಟ್ಟಿ ಕಂಡುಬರುತ್ತದೆ.
08:25 ಮೌಸ್ ಅನ್ನು 'Logic' ಎಂಬ ಲೈಬ್ರರಿ ಗೆ ಕೊಂಡೊಯ್ದು ಅಲ್ಲಿ ಬಿಟ್ಟುಬಿಡಿ.
08:31 ಚಿಕ್ಕ ಡಾಟ್ ಅನ್ನು, ಅದರ ಮೇಲೆ ಡಬಲ್ ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡೋಣ.
08:36 ಡೈಲಾಗ್ ವಿಂಡೋ ಕ್ಲೋಸ್ ಆಗುತ್ತದೆ.
08:38 ಆಯ್ಕೆ ಮಾಡಿದ ಚಿಕ್ಕ ಡಾಟ್ ನೊಂದಿಗೆ, ಕ್ರಾಸ್ ಹೇರ್ ಅನ್ನುನಾವು ನೋಡುತ್ತೇವೆ.
08:42 ಕ್ಲಿಕ್ ಮಾಡುವುದರ ಮೂಲಕ, ರೇಖೆಯ ಮೇಲೆ ಡಾಟ್ ಅನ್ನು ಇಡೋಣ.
08:51 ಕರ್ಸರ್ ಮತ್ತು ಚಿಕ್ಕ ಡಾಟ್ ಮತ್ತೊಮ್ಮೆ ಕಾಣಿಸುತ್ತವೆ. ಬೇರೆ ಸ್ಥಾನದಲ್ಲಿ ಸಹ ನಾವು ಇದನ್ನು ಇಡಬಹುದು ಎಂದು ಇದು ಸೂಚಿಸುತ್ತದೆ.
08:57 ನಮಗೆ ಬೇರೆ ಯಾವುದೇ ಸ್ಥಳದಲ್ಲಿ ಡಾಟ್ ಅನ್ನು ಇಡಬೇಕಾಗಿಲ್ಲ.
09:00 ಮೌಸ್ ನ ಬಲಗಡೆಯ ಬಟನ್ ಅನ್ನು ಕ್ಲಿಕ್ ಮಾಡಿ, ನಾವು ಇದನ್ನು ಕ್ಲೋಸ್ ಮಾಡೋಣ.
09:05 ಬಲಗಡೆಯ ಬಟನ್, undo ಆಪರೇಷನ್ ಅನ್ನು ಮಾಡುತ್ತದೆ.
09:08 ಈ ಸಂದರ್ಭದಲ್ಲಿ, ಡಾಟ್ ನ ಆಯ್ಕೆಯನ್ನು ತೆಗೆದು ಹಾಕಲಾಗಿದೆ.
09:10 ಈ ಡಾಟ್ ನಿಂದ ವೃತ್ತಕ್ಕೆ ಒಂದು ರೇಖೆಯನ್ನು ಎಳೆಯೋಣ.
09:15 Polyline ಅನ್ನು ನಾವು ಆಯ್ಕೆ ಮಾಡೋಣ.
09:18 ಮುಂಚಿನ ಆಯ್ಕೆಗಳಾದ Arrow Mode ಮತ್ತು Arrow Type ಗಳನ್ನು ನೆನಪಿಟ್ಟಿರುವುದನ್ನು ಗಮನಿಸಿ.
09:24 ಒಂದು ಸೆಷನ್ ನಲ್ಲಿನ ಪ್ಯಾರಾಮೀಟರ್ ವ್ಯಾಲ್ಯುಗಳನ್ನು, Xfig ನೆನಪಿಟ್ಟುಕೊಳ್ಳುತ್ತದೆ.
09:28 ಡಾಟ್ ನ್ನು ಕ್ಲಿಕ್ ಮಾಡಿ.
09:34 ಮೌಸ್ ಅನ್ನು ಕೆಳಗೆ ನಡೆಸಿ, ಕ್ಲಿಕ್ ಮಾಡಿ.
09:41 ಈಗ ಮೌಸ್ ಅನ್ನು, ಎಡಕ್ಕೆ, ವೃತ್ತದ ಕೆಳಭಾಗದವರೆಗೆ ನಡೆಸಿ ಕ್ಲಿಕ್ ಮಾಡಿ.
09:47 ಮೌಸ್ ಅನ್ನು ವೃತ್ತದೆಡೆಗೆ ಒಯ್ದು, 'ಮಿಡಲ್ ಮೌಸ್ ಬಟನ್' ಅನ್ನು ಕ್ಲಿಕ್ ಮಾಡಿ.
09:54 ಕಾಪಿ ಮಾಡುವುದರ ಮೂಲಕ, ವೃತ್ತದ ಎಡಕ್ಕೆ ಮತ್ತೊಂದು ರೇಖೆಯನ್ನು ಎಳೆಯೋಣ.
10:08 Xfig ನ ಮೇಲಿನ ಎಡಮೂಲೆಯಲ್ಲಿರುವ File ಬಟನ್ ಅನ್ನು ಬಳಸಿ, Save ಅನ್ನು ಆಯ್ಕೆ ಮಾಡಿ, ನಾವು ಈ ಚಿತ್ರವನ್ನು ಸೇವ್ ಮಾಡೋಣ.
10:19 ಈಗ ಫೈಲ್ ಅನ್ನು Export ಮಾಡೋಣ.
10:22 File ಬಟನ್ ಅನ್ನು ಮತ್ತೊಮ್ಮೆ ಕ್ಲಿಕ್ ಮಾಡಿ Export ಅನ್ನು ಆಯ್ಕೆ ಮಾಡೋಣ.
10:30 ನಾವು Language, ನಂತರ PDF ಅನ್ನು ಆಯ್ಕೆ ಮಾಡೋಣ.
10:36 "feedback.pdf" ಫೈಲ್ ನಮಗೆ ಸಿಗುತ್ತದೆ.
10:43 open feedback.pdf ಕಮಾಂಡ್ ಮೂಲಕ, ಈಗ ನಾವು ಈ ಫೈಲ್ ಅನ್ನು ಓಪನ್ ಮಾಡೋಣ.
10:56 ನಮಗೆ ಬೇಕಾದ ಬ್ಲಾಕ್ ಡೈಗ್ರಾಮ್ ಅನ್ನು, ಈಗ ನಾವು ಪಡೆದಿದ್ದೇವೆ.
11:00 ನಾವು ನಮ್ಮ ಗುರಿಯನ್ನು ಮುಟ್ಟಿದ್ದೇವೆ.
11:04 ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
11:08 ಬ್ಲಾಕ್ಸ್ ಗಳನ್ನು ವಿಭಿನ್ನ ಆಬ್ಜೆಕ್ಟ್ ಗಳಿಂದ ಬದಲಾಯಿಸಿ.
11:13 rotate ಮತ್ತು flip ಗಳಂತಹ ಆಪರೇಷನ್ ಗಳನ್ನು ಪ್ರಯತ್ನಿಸಿ.
11:19 ಎಡಿಟರ್ ನಲ್ಲಿ “feedback.fig” ಫೈಲ್ ನ್ನು ವೀಕ್ಷಿಸಿ ಮತ್ತು ವಿವಿಧ ಘಟಕಗಳನ್ನು ಗುರುತಿಸಿ.
11:25 'ಲೈಬ್ರರಿ' ಯನ್ನು ಬಳಸಿ, ಸಂಪೂರ್ಣವಾಗಿ ಬೇರೆಯದೇ ಆದ ಬ್ಲಾಕ್ ಡೈಗ್ರಾಮ್ ಗಳನ್ನು ರಚಿಸಿ.
11:32 ಸ್ಪೋಕನ್ ಟ್ಯುಟೋರಿಯಲ್, 'ಟಾಕ್ ಟು ಎ ಟೀಚರ್' ಎಂಬ ಪ್ರೊಜೆಕ್ಟ್ ನ ಒಂದು ಭಾಗವಾಗಿದ್ದು, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
11:44 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro

11:53 ನಾವು ನಿಮ್ಮ ಭಾಗವಹಿಸುವಿಕೆ ಮತ್ತು ಅಭಿಪ್ರಾಯವನ್ನು ಸ್ವಾಗತಿಸುತ್ತೇವೆ.
11:57 ಈ ಟ್ಯುಟೋರಿಯಲ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14