Difference between revisions of "LibreOffice-Suite-Draw/C3/Flow-Charts-Connectors-Glue-Points/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 137: | Line 137: | ||
|- | |- | ||
|02:54 | |02:54 | ||
− | | '''Edit Points''' ಟೂಲ್-ಬಾರ್ ಅನ್ನು ಬಳಸಿಕೊಂಡು, ಎಲ್ಲ | + | | '''Edit Points''' ಟೂಲ್-ಬಾರ್ ಅನ್ನು ಬಳಸಿಕೊಂಡು, ಎಲ್ಲ ಆಯ್ಕೆಗಳನ್ನು ಉಪಯೋಗಿಸಿ, |
|- | |- |
Latest revision as of 16:43, 29 January 2019
Time | Narration |
00:01 | LibreOffice Draw (ಲಿಬ್ರೆ ಆಫೀಸ್ ಡ್ರಾ) ನಲ್ಲಿಯ Flowcharts, Glue Points and Beizer curves (ಫ್ಲೋ ಚಾರ್ಟ್ಸ್, ಗ್ಲು ಪಾಯಿಂಟ್ಸ್ ಆಂಡ್ ಬೇಝಿಯರ್ ಕರ್ವ್ಸ್) ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನೀವು, 'ಬೇಝಿಯರ್ ಕರ್ವ್ಸ್' ಮತ್ತು 'ಫ್ಲೋ ಚಾರ್ಟ್ಸ್ ' ಗಳನ್ನು ಡ್ರಾ ಮಾಡಲು ಕಲಿಯುವಿರಿ. |
00:14 | ಅಲ್ಲದೆ, 'ಕನೆಕ್ಟರ್' (Connectors) ಗಳನ್ನು ಮತ್ತು 'ಗ್ಲು ಪಾಯಿಂಟ್' ಗಳನ್ನು (Glue points) ಬಳಸಿ, 'ಫ್ಲೋ ಚಾರ್ಟ್' ಗಳನ್ನು ಜೋಡಿಸುವುದನ್ನು ಸಹ ಕಲಿಯುವಿರಿ. |
00:20 | ಇಲ್ಲಿ, ನಾವು: Ubuntu Linux ಆವೃತ್ತಿ 10.04 ಮತ್ತು LibreOffice Suite ಆವೃತ್ತಿ 3.3.4 ಇವುಗಳನ್ನು ಬಳಸುತ್ತಿದ್ದೇವೆ. |
00:29 | ನಾವು 'ಬೇಝಿಯರ್ ಕರ್ವ್ಸ್' ಬಗ್ಗೆ ತಿಳಿದುಕೊಳ್ಳೋಣ. |
00:33 | 'ಬೆಝಿಯರ್ ಕರ್ವ್ಸ್' ಅನ್ನು ಮುಖ್ಯವಾಗಿ ಕಂಪ್ಯೂಟರ್ ಗ್ರಾಫಿಕ್ಸ್ ನಲ್ಲಿ ವಕ್ರರೇಖೆಗಳನ್ನು ನಯಗೊಳಿಸಲು ಬಳಸಲಾಗುತ್ತದೆ. |
00:40 | ವಕ್ರಾಕೃತಿಗಳ ಆಕಾರ ಮತ್ತು ಗಾತ್ರದೊಂದಿಗೆ ಪ್ರಯೋಗ ಮಾಡಲು, ನೀವು ಈ ವಕ್ರಾಕೃತಿಗಳನ್ನು ಬಳಸಬಹುದು. |
00:45 | ಎಲ್ಲಾ ವಕ್ರಾಕೃತಿಗಳು ಪ್ರಾರಂಭದ ಮತ್ತು ಅಂತಿಮ ಬಿಂದುವನ್ನು ಹೊಂದಿವೆ. |
00:50 | ವಕ್ರರೇಖೆಯ ಮೇಲಿನ ಬಿಂದುಗಳನ್ನು 'ನೋಡ್' ಎಂದು ಕರೆಯಲಾಗುತ್ತದೆ. |
00:54 | ನಮ್ಮ 'Routemap' ಎಂಬ ಫೈಲ್ ಗೆ ಹೋಗೋಣ. |
00:58 | ನಾವು Home ನಿಂದ, Commercial Complex ಗೆ ಹೋಗೋಣ. |
01:03 | ಇದಕ್ಕಾಗಿ, ನಾವು Parking Lot ನಿಂದ ಬಲಗಡೆಗೆ ಹೋಗಬೇಕು. |
01:08 | ನೆನಪಿನಲ್ಲಿಡಿ, ಈ ಹಿಂದೆ ನಾವು ಡ್ರಾಯಿಂಗ್ ಅನ್ನು ಗುಂಪು ಮಾಡಿದ್ದೆವು. ಹಾಗಾಗಿ, ನಾವು ಅದನ್ನು ungroup (ಅನ್-ಗ್ರುಪ್) ಮಾಡೋಣ. |
01:14 | ಈಗ, Drawing ಟೂಲ್ ಬಾರ್ ನಿಂದ, Curve ಅನ್ನು ಕ್ಲಿಕ್ ಮಾಡಿ ಮತ್ತು Curve ಅನ್ನು ಆಯ್ಕೆಮಾಡಿ. |
01:20 | Draw ಪೇಜ್ ನ ಮೇಲೆ, ದಾರಿಯು ಆರಂಭವಾಗುವಲ್ಲಿ ಕ್ಲಿಕ್ ಮಾಡಿ - ಇದು Home ಆಗಿದೆ. |
01:27 | ಲೆಫ್ಟ್-ಮೌಸ್-ಬಟನ್ ಅನ್ನು ಒತ್ತಿ ಹಿಡಿದು Play Ground ವರೆಗೂ ಎಳೆಯಿರಿ. |
01:32 | ನೀವು ಒಂದು ಸರಳ ರೇಖೆಯನ್ನು ನೋಡುವಿರಿ. |
01:36 | ಮೌಸ್-ಬಟನ್ ಅನ್ನು ಬಿಟ್ಟುಬಿಡಿ. |
01:39 | ಈಗ, ಪಾಯಿಂಟರ್ ಅನ್ನು Commercial Complex ಗೆ ಸರಿಸಿ. |
01:43 | ಮೌಸ್ ಸರಿದಂತೆಲ್ಲ ರೇಖೆಯು ವಕ್ರವಾಗುವುದು. |
01:47 | ಕೊನೆಯಲ್ಲಿ, ಎಂದರೆ, 'ಕಮರ್ಷಿಯಲ್ ಕಾಂಪ್ಲೆಕ್ಸ್' ಮೇಲೆ ಡಬಲ್-ಕ್ಲಿಕ್ ಮಾಡಿ. |
01:52 | ನಾವು ಒಂದು ವಕ್ರರೇಖೆಯನ್ನು ಎಳೆದಿದ್ದೇವೆ! |
01:55 | ಕರ್ವ್ ನ ಮಾರ್ಪಾಟು ಸರಾಗವಾಗಿರುವುದನ್ನು ಗಮನಿಸಿ. |
01:59 | ಈಗ, ನಾವು Edit Points ಟೂಲ್-ಬಾರ್ ಅನ್ನು ಬಳಸಿ, ಈ ವಕ್ರರೇಖೆಯ ಮೇಲಿರುವ ಪಾಯಿಂಟುಗಳನ್ನು ಎಡಿಟ್ ಮಾಡೋಣ. |
02:05 | ಕರ್ವ್ ಮೇಲೆ ಕ್ಲಿಕ್ ಮಾಡಿ. |
02:07 | Edit Points ಟೂಲ್-ಬಾರ್ ಅನ್ನು ಸಕ್ರಿಯಗೊಳಿಸಲು, ಕರ್ವ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Edit Points ಅನ್ನು ಆರಿಸಿಕೊಳ್ಳಿ. |
02:14 | ವಕ್ರರೇಖೆಯ ತುದಿ-ಬಿಂದುಗಳಲ್ಲಿ ನೀಲಿ ಬಾಕ್ಸ್ ಗಳು ಕಾಣಿಸಿಕೊಂಡಾಗ, ನಾವು ವಕ್ರರೇಖೆಯನ್ನು ಎಡಿಟ್ ಮಾಡಬಹುದು. |
02:21 | ಕರ್ವ್ ನ ಪ್ರಾರಂಭದ ಬಿಂದುವಿನ ಮೇಲೆ ಕ್ಲಿಕ್ ಮಾಡಿ. |
02:24 | ನೀವು ಒಂದು ಕಂಟ್ರೋಲ್ ಪಾಯಿಂಟ್ ನೊಂದಿಗೆ, ಚುಕ್ಕೆಗಳ ಒಂದು ರೇಖೆಯನ್ನು ನೋಡುತ್ತೀರಿ. |
02:29 | ಅಗತ್ಯಕ್ಕೆ ತಕ್ಕಂತೆ, ವಕ್ರರೇಖೆಯನ್ನು ಮೊಟಕುಗೊಳಿಸಲು ಅಥವಾ ವಿಸ್ತರಿಸಲು ನೀವು ಈಗ ಚುಕ್ಕೆಗಳ ರೇಖೆಯನ್ನು ಎಳೆಯಬಹುದು. |
02:35 | ನೀವು ಬದಲಾವಣೆ ಮಾಡಿದ ನಂತರ, 'ಡ್ರಾ' ಪೇಜ್ ನಲ್ಲಿ ಎಲ್ಲಿಯಾದರೂ ಡಬಲ್-ಕ್ಲಿಕ್ ಮಾಡಿ. |
02:41 | ನಯವಾದ ಕರ್ವ್ ಅನ್ನು ಪಡೆಯಲು, ವಕ್ರರೇಖೆಯ ಮೇಲೆ ಬಿಂದುಗಳನ್ನು ಸೇರಿಸಲು, ಸರಿಸಲು ಅಥವಾ ತೆಗೆದುಬಿಡಲು ನೀವು Edit Points ಟೂಲ್-ಬಾರ್ ಅನ್ನು ಬಳಸಬಹುದು. |
02:50 | ಇಲ್ಲಿ ನಿಮಗಾಗಿ ಒಂದು ಸಣ್ಣ ಅಸೈನ್ಮೆಂಟ್ ಇದೆ. |
02:54 | Edit Points ಟೂಲ್-ಬಾರ್ ಅನ್ನು ಬಳಸಿಕೊಂಡು, ಎಲ್ಲ ಆಯ್ಕೆಗಳನ್ನು ಉಪಯೋಗಿಸಿ, |
02:59 | ಒಂದು 'ಬೇಝಿಯರ್ ಕರ್ವ್' ಅನ್ನು ರಚಿಸಿ. |
03:02 | ಈಗ, ನಾವು 'ಫ್ಲೋಚಾರ್ಟ್' ಗಳನ್ನು ರಚಿಸಲು ಕಲಿಯೋಣ. |
03:05 | ನಾವು RouteMap ಫೈಲ್ ಗೆ 2 ಹೊಸ ಪೇಜ್ ಗಳನ್ನು ಸೇರಿಸೋಣ. |
03:10 | Draw, 'ಫ್ಲೋಚಾರ್ಟ್ಸ್' ಗಾಗಿ, Drawing ಟೂಲ್-ಬಾರ್ ನಲ್ಲಿ ಒಂದು ಪ್ರತ್ಯೇಕ ಆಯ್ಕೆಯನ್ನು ಒದಗಿಸುತ್ತದೆ. |
03:17 | ಈ ಫ್ಲೋಚಾರ್ಟ್, 'ಸ್ಪೋಕನ್ ಟ್ಯುಟೋರಿಯಲ್' ಪ್ರಕ್ರಿಯೆಯಲ್ಲಿರುವ ಎಲ್ಲಾ ಹಂತಗಳನ್ನು ತೋರಿಸುತ್ತದೆ. |
03:22 | ನಾವು ಈ ಫ್ಲೋಚಾರ್ಟ್ ಅನ್ನು ರಚಿಸೋಣ. |
03:26 | Drawing ಟೂಲ್-ಬಾರ್ ನಿಂದ, Flowcharts ಮೇಲೆ ಕ್ಲಿಕ್ ಮಾಡಿ. |
03:30 | ಸಣ್ಣ ಕಪ್ಪು ತ್ರಿಕೋನದ ಮೇಲೆ ಕ್ಲಿಕ್ ಮಾಡಿ ಮತ್ತು Flowchart: Process ಅನ್ನು ಆಯ್ಕೆಮಾಡಿ. |
03:37 | ಕರ್ಸರ್ ಅನ್ನು Draw ಪೇಜ್ ನಲ್ಲಿ ಇರಿಸಿ, ಎಡ ಮೌಸ್-ಬಟನ್ ಅನ್ನು ಒತ್ತಿ ಹಿಡಿದುಕೊಂಡು, ಅದನ್ನು ಕೆಳಗೆ ಎಳೆಯಿರಿ. |
03:44 | ನೀವು ಒಂದು 'ಪ್ರೊಸೆಸ್' (Process) ಬಾಕ್ಸ್ ಅನ್ನು ರಚಿಸಿದ್ದೀರಿ. |
03:47 | 'ಪ್ರೊಸೆಸ್' ಬಾಕ್ಸ್, ಸಂಪೂರ್ಣ ಪ್ರಕ್ರಿಯೆಯಲ್ಲಿಯ ಒಂದು ಹಂತ ಅಥವಾ ಕ್ರಿಯೆಯನ್ನು ಪ್ರತಿನಿಧಿಸುತ್ತದೆ. |
03:54 | ಫ್ಲೋಚಾರ್ಟ್ ಆಬ್ಜೆಕ್ಟ್ ಗಳಲ್ಲಿ, ನಾವು ಟೆಕ್ಸ್ಟ್ ಅನ್ನು ಸಹ ಸೇರಿಸಬಹುದು. |
03:59 | ನಾವು Process ಬಾಕ್ಸ್ ನ ಮೇಲೆ ಡಬಲ್ ಕ್ಲಿಕ್ ಮಾಡಿ, ಅದರೊಳಗೆ ಹೀಗೆ ಟೈಪ್ ಮಾಡೋಣ: "Create the Tutorial Outline to chunk content into 10-minute scripts". |
04:13 | 'ಫ್ಲೋಚಾರ್ಟ್ಸ್' ಗಾಗಿ ಫಾರ್ಮ್ಯಾಟಿಂಗ್ ಆಯ್ಕೆಗಳು, ಇತರ ಆಬ್ಜೆಕ್ಟ್ ಗಳಿಗೆ ಇದ್ದಂತೆಯೇ ಇರುತ್ತವೆ. |
04:20 | ಈಗ, ನಾವು 'ಪ್ರೊಸೆಸ್' ಬಾಕ್ಸ್ ನ ಒಳಗೆ, ಟೆಕ್ಸ್ಟ್ ಅನ್ನು ಅಲೈನ್ ಮಾಡೋಣ. |
04:24 | ನಾವು ಟೆಕ್ಸ್ಟ್ ಅನ್ನು ಸೆಲೆಕ್ಟ್ ಮಾಡೋಣ. |
04:27 | 'ಕಾಂಟೆಕ್ಸ್ಟ್ ಮೆನ್ಯು' ವನ್ನು (Context menu) ನೋಡಲು ರೈಟ್- ಕ್ಲಿಕ್ ಮಾಡಿ ಮತ್ತು Text ಮೇಲೆ ಕ್ಲಿಕ್ ಮಾಡಿ. |
04:32 | Text ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
04:35 | Text ಡೈಲಾಗ್ ಬಾಕ್ಸ್ ನಲ್ಲಿ, '"Resize shape to fit text width"' ಎಂಬ ಬಾಕ್ಸ್ ಅನ್ನು ಚೆಕ್ ಮಾಡಿ. OK ಯನ್ನು ಕ್ಲಿಕ್ ಮಾಡಿ. |
04:43 | ಟೆಕ್ಸ್ಟ್ ಗೆ ಹೊಂದುವಂತೆ, Process ಬಾಕ್ಸ್, ಅದರ ಆಕಾರವನ್ನು ಬದಲಿಸಿದೆ ಎಂದು ನೀವು ನೋಡುತ್ತೀರಿ! |
04:49 | ಈಗ, ನಾವು Ctrl + Z ಕೀಗಳನ್ನು ಒಟ್ಟಿಗೆ ಒತ್ತುವ ಮೂಲಕ, ಈ ಕ್ರಿಯೆಯನ್ನು undo ಮಾಡೋಣ. |
04:55 | ಮತ್ತೊಮ್ಮೆ, ನಾವು ಟೆಕ್ಸ್ಟ್ ಅನ್ನು ಆಯ್ಕೆ ಮಾಡೋಣ. |
04:59 | ಮೇನ್ ಮೆನ್ಯು ಗೆ ಹೋಗಿ, Format ಅನ್ನು ಆಯ್ಕೆ ಮಾಡಿ ಮತ್ತು Text ಮೇಲೆ ಕ್ಲಿಕ್ ಮಾಡಿ. |
05:05 | Text ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
05:08 | ನಾವು Word wrap text in shape ಎಂಬ ಆಯ್ಕೆಯನ್ನು ಗುರುತು ಹಾಕೋಣ. OK ಮೇಲೆ ಕ್ಲಿಕ್ ಮಾಡಿ. |
05:15 | Process ಬಾಕ್ಸ್ ನ ಆಕಾರಕ್ಕೆ ಸರಿಹೊಂದುವಂತೆ ಟೆಕ್ಸ್ಟ್, ತನ್ನನ್ನು ಹೊಂದಿಸಿಕೊಂಡಿದೆ. |
05:21 | ಅದೇ ರೀತಿಯಾಗಿ, ನಾವು ಈಗ ಮೊದಲಿನ Process ಬಾಕ್ಸ್ ನ ಕೆಳಗಡೆ ಇನ್ನೊಂದನ್ನು ರಚಿಸೋಣ. |
05:28 | ಅದರೊಳಗೆ, ನಾವು "Create Scripts" ಎಂಬ ಟೆಕ್ಸ್ಟ್ ಅನ್ನು ಸೇರಿಸೋಣ. |
05:33 | ಈಗ, ನಾವು ಒಂದು Decision ಬಾಕ್ಸ್ ಅನ್ನು ರಚಿಸೋಣ ಮತ್ತು ಅದರಲ್ಲಿ "Review Okay?" ಎಂಬ ಟೆಕ್ಸ್ಟ್ ಅನ್ನು ಸೇರಿಸೋಣ. |
05:42 | Decision ಬಾಕ್ಸ್, ಮಾಡಬೇಕಾದ ನಿರ್ಧಾರವನ್ನು ಪ್ರತಿನಿಧಿಸುತ್ತದೆ. |
05:46 | ನಿರ್ಧಾರದ ಫಲಿತಾಂಶವನ್ನು ಆಧರಿಸಿ, ಇದು ನಮಗೆ ಮುಂದಿನ ಪ್ರಕ್ರಿಯೆಯನ್ನು ನಿರ್ದೇಶಿಸುತ್ತದೆ. |
05:52 | ಈಗ ನಾವು Decision ಬಾಕ್ಸ್ ನ ಕೆಳಗೆ, ಇನ್ನೊಂದು Process ಬಾಕ್ಸ್ ಅನ್ನು ರಚಿಸೋಣ. |
05:58 | ಇದರ ಒಳಗೆ ನಾವು "Record Video" ಎಂಬ ಟೆಕ್ಸ್ಟ್ ಅನ್ನು ಸೇರಿಸೋಣ. |
06:04 | ನಂತರ, "Review Okay?" ಎಂಬ ಟೆಕ್ಸ್ಟ್ ನೊಂದಿಗೆ, ಇನ್ನೊಂದು Decision ಬಾಕ್ಸ್ ನಮಗೆ ಇಲ್ಲಿ ಬೇಕು. |
06:12 | ನಾವು ಈಮೊದಲು ರಚಿಸಿದ್ದ Decision ಬಾಕ್ಸ್ ಅನ್ನು ಕಾಪಿ ಮಾಡಿ ಅದನ್ನು ಇಲ್ಲಿ ಇಡೋಣ. |
06:18 | ಆದ್ದರಿಂದ, Decision ಬಾಕ್ಸ್ ಅನ್ನು ಆಯ್ಕೆ ಮಾಡಿ ಮತ್ತು Ctrl + C ಕೀಗಳನ್ನು ಒಟ್ಟಿಗೆ ಒತ್ತಿ. |
06:25 | ಈಗ, Ctrl + V ಕೀಗಳನ್ನು ಒಟ್ಟಿಗೆ ಒತ್ತಿರಿ. |
06:29 | ನಾವು ಈ ಬಾಕ್ಸ್ ಅನ್ನು ಹಿಂದಿನ Process ಬಾಕ್ಸ್ ನ ಕೆಳಗೆ ಚಲಿಸೋಣ. |
06:35 | ಈಗ, ಅದರೊಳಗೆ "Review Okay" ಎಂಬ ಟೆಕ್ಸ್ಟ್ ಅನ್ನು ನಮೂದಿಸಿ. |
06:40 | ಕೊನೆಯದಾಗಿ, ನಾವು ಒಂದು 'ಫ್ಲೋಚಾರ್ಟ್-ಕನೆಕ್ಟರ್' ಅನ್ನು ರಚಿಸೋಣ ಮತ್ತು ಅದರೊಳಗೆ 'A' ಎಂದು ಟೈಪ್ ಮಾಡೋಣ. |
06:48 | ಫ್ಲೋಚಾರ್ಟ್-ಕನೆಕ್ಟರ್, ಫ್ಲೋಚಾರ್ಟ್ ನ ಎರಡು ಭಾಗಗಳನ್ನು ಜೋಡಿಸುತ್ತದೆ. |
06:53 | ಫ್ಲೋಚಾರ್ಟ್ ನ ಮೊದಲ ಭಾಗವು ಒಂದು ಪೇಜ್ ನಲ್ಲಿದೆ |
06:58 | ಮತ್ತು ಎರಡನೇ ಭಾಗವು ಮತ್ತೊಂದು ಪೇಜ್ ನಲ್ಲಿದೆ ಎಂದುಕೊಳ್ಳೋಣ. |
07:02 | ನಾವು ಮೊದಲ ಪೇಜ್ ನ ಫ್ಲೋಚಾರ್ಟ್ ನ ಕೊನೆಯಲ್ಲಿ, ಫ್ಲೋಚಾರ್ಟ್-ಕನೆಕ್ಟರ್ ಅನ್ನು ರಚಿಸುತ್ತೇವೆ. |
07:08 | ನಂತರ, ಎರಡನೇ ಪೇಜ್ ನ ಆರಂಭದಲ್ಲಿ, ನಾವು ಅದೇ ಕನೆಕ್ಟರ್ ಅನ್ನು ರಚಿಸುತ್ತೇವೆ. |
07:13 | ನಾವು ಈ ಆಬ್ಜೆಕ್ಟ್ ಗಳನ್ನು ಜೋಡಿಸುವ ಮೊದಲು, Draw ನಲ್ಲಿ ಕನೆಕ್ಟರ್, ಲೈನ್ಸ್ ಮತ್ತು ಗ್ಲು-ಪಾಯಿಂಟ್ ಗಳು ಇವುಗಳ ಬಗ್ಗೆ ಕಲಿಯೋಣ. |
07:21 | 'ಕನೆಕ್ಟರ್ಸ್', ಲೈನ್ ಅಥವಾ ಆರೋಗಳಾಗಿದ್ದು, ಇದರ ತುದಿಗಳನ್ನು ಆಬ್ಜೆಕ್ಟ್ ಗೆ ಜೋಡಿಸಲಾಗಿದೆ. |
07:28 | 'ಗ್ಲು ಪಾಯಿಂಟ್ಗಳು' - ಹೆಸರೇ ಸೂಚಿಸುವಂತೆ, ಇವುಗಳು ಕನೆಕ್ಟರ್ ಗಳನ್ನು ಆಬ್ಜೆಕ್ಟ್ ಗಳಿಗೆ ಅಂಟಿಸುತ್ತವೆ. |
07:35 | ಎಲ್ಲಾ ಆಬ್ಜೆಕ್ಟ್ ಗಳು 'ಗ್ಲು ಪಾಯಿಂಟ್' ಗಳನ್ನು ಹೊಂದಿರುತ್ತವೆ. |
07:39 | ಇವುಗಳು ಅದೃಶ್ಯವಾಗಿವೆ; |
07:41 | Drawing ಟೂಲ್-ಬಾರ್ ನಿಂದ ಒಂದು ಕನೆಕ್ಟರ್ ಅನ್ನು ಆಯ್ಕೆ ಮಾಡಿದಾಗ ಅಥವಾ 'ಮೌಸ್ ಪಾಯಿಂಟರ್' ಅನ್ನು ಒಂದು ಆಬ್ಜೆಕ್ಟ್ ನ ಮೇಲೆ ಚಲಿಸಿದಾಗ ಇವುಗಳು ಗೋಚರಿಸುತ್ತವೆ. |
07:51 | 'ಗ್ಲು ಪಾಯಿಂಟ್ಗಳು' ಹ್ಯಾಂಡಲ್ ಗಳಲ್ಲ. |
07:54 | ಆಬ್ಜೆಕ್ಟ್ ಅನ್ನು ರಿ-ಸೈಜ್ ಮಾಡಲು ನಾವು ಹ್ಯಾಂಡಲ್ ಗಳನ್ನು ಬಳಸುತ್ತೇವೆ. |
07:58 | ಕನೆಕ್ಟರ್ ಅನ್ನು ಆಬ್ಜೆಕ್ಟ್ ಗೆ ಅಂಟಿಸಲು, 'ಗ್ಲು ಪಾಯಿಂಟ್'ಗಳನ್ನು ಬಳಸಲಾಗುತ್ತದೆ. |
08:02 | ಈಗ, ನಾವು 'ಕನೆಕ್ಟರ್' ಗಳನ್ನು ಬಳಸಿ, ಫ್ಲೋಚಾರ್ಟ್ ನಲ್ಲಿನ ಆಬ್ಜೆಕ್ಟ್ ಗಳನ್ನು ಜೋಡಿಸೋಣ. |
08:07 | Drawing ಟೂಲ್ ಬಾರ್ ಗೆ ಹೋಗಿ ಮತ್ತು Connector ಅನ್ನು ಆಯ್ಕೆಮಾಡಿ. |
08:12 | ವಿವಿಧ ರೀತಿಯ 'ಕನೆಕ್ಟರ್' ಗಳನ್ನು ನೋಡಲು, ಸಣ್ಣ ಕಪ್ಪು ತ್ರಿಕೋನದ ಮೇಲೆ ಕ್ಲಿಕ್ ಮಾಡಿ. |
08:18 | ನಾವು Straight Connector ends with Arrow ಎಂಬ ಆಯ್ಕೆಯನ್ನು ಆರಿಸಿಕೊಳ್ಳೋಣ. |
08:23 | Connector ಅನ್ನು ಆಯ್ಕೆಮಾಡಿದಾಗ, 'ಡ್ರಾ' ಪೇಜ್ ನಲ್ಲಿನ ಎಲ್ಲಾ ಆಬ್ಜೆಕ್ಟ್ ಗಳ ಮೇಲೆ ನೀವು ಕ್ರಾಸ್ ಗುರುತನ್ನು ನೋಡುತ್ತೀರಿ. |
08:31 | ಇವುಗಳು 'ಗ್ಲು ಪಾಯಿಂಟ್' ಗಳಾಗಿವೆ. |
08:34 | ಈಗ ನಾವು, ಮೊದಲನೆಯ ಪ್ರೊಸೆಸ್ ಬಾಕ್ಸ್ ನ ಗ್ಲು-ಪಾಯಿಂಟ್ ನಿಂದ, ಅದರ ಮುಂದಿನ ಪ್ರೊಸೆಸ್ ಬಾಕ್ಸ್ ನ ಗ್ಲು-ಪಾಯಿಂಟ್ ಗೆ ಒಂದು ರೇಖೆಯನ್ನು ಎಳೆಯೋಣ. |
08:44 | ನಾವು 'ಕನೆಕ್ಟರ್' ಗಳನ್ನು ಬಳಸಿ, ಎಲ್ಲ ಫ್ಲೋಚಾರ್ಟ್ ಆಬ್ಜೆಕ್ಟ್ಗಳನ್ನು ಮೇಲಿನಿಂದ ಕೆಳಕ್ಕೆ ಜೋಡಿಸುವೆವು. |
08:52 | ನೀವು ಕರ್ಸರ್ ಅನ್ನು ಎಲ್ಲಿ ಇರಿಸಿದರೂ, ಪ್ರತಿಯೊಂದು ಲೈನ್, ತಂತಾನೆ ಹತ್ತಿರದ 'ಗ್ಲು-ಪಾಯಿಂಟ್' ಗೆ ಸ್ವತಃ ಜೋಡಿಸಿಕೊಳ್ಳುತ್ತದೆ ಎಂದು ನೀವು ಗಮನಿಸಬಹುದು. |
09:03 | ಈಗ, ನಾವು Process ಮತ್ತು Decision ಬಾಕ್ಸ್ ಗಳನ್ನು ಜೋಡಿಸೋಣ. |
09:08 | Drawing ಟೂಲ್ಬಾರ್ ನಿಂದ, Connector Ends with Arrow ಎಂಬ ಆಯ್ಕೆಯನ್ನು ಆರಿಸಿ. |
09:14 | Process ಬಾಕ್ಸ್ ನಿಂದ, ನಾವು Decision ಬಾಕ್ಸ್ ಗೆ ಜೋಡಿಸೋಣ. |
09:19 | ಹೀಗೆಯೇ, ನಾವು Decision ಬಾಕ್ಸ್ ಅನ್ನು ಮುಂದಿನ Process ಬಾಕ್ಸ್ ಗೆ ಜೋಡಿಸೋಣ. |
09:25 | ನೀವು ಕನೆಕ್ಟರ್ ಗೆ, ಟೆಕ್ಸ್ಟ್ ಅನ್ನು ಕೂಡ ಸೇರಿಸಬಹುದು. |
09:29 | Decision ಬಾಕ್ಸ್ ನಿಂದ Process ಬಾಕ್ಸ್ ಗೆ ಇರುವ 'ಕನೆಕ್ಟರ್' ನ ಮೇಲೆ, ನಾವು "No" ಎಂದು ಟೈಪ್ ಮಾಡೋಣ. |
09:35 | connector ಅನ್ನು ಆಯ್ಕೆ ಮಾಡಲು, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. |
09:39 | ಕೊನೆಯಲ್ಲಿರುವ ಕಂಟ್ರೋಲ್ ಪಾಯಿಂಟ್ ಗಳು ಸಕ್ರಿಯವಾಗುತ್ತವೆ |
09:43 | ಮತ್ತು ಟೆಕ್ಸ್ಟ್ ಕರ್ಸರ್ ಕಾಣಿಸಿಕೊಳ್ಳುತ್ತದೆ. |
09:46 | ನಾವು "No" ಎಂದು ಟೆಕ್ಸ್ಟ್ ಅನ್ನು ಟೈಪ್ ಮಾಡೋಣ. |
09:49 | ಬೇರೆ ಕನೆಕ್ಟರ್ ಗಾಗಿ, ನಾವು ಮತ್ತೊಮ್ಮೆ ಇದನ್ನು ಮಾಡೋಣ. |
09:54 | ನಾವು ಒಂದು ಸರಳವಾದ ಫ್ಲೋಚಾರ್ಟ್ ಅನ್ನು ರಚಿಸಿದ್ದೇವೆ! |
09:57 | ನಾವು Ctrl + S ಕೀಗಳನ್ನು ಒತ್ತುವ ಮೂಲಕ, ನಮ್ಮ ಫ್ಲೋಚಾರ್ಟ್ ಅನ್ನು ಸೇವ್ ಮಾಡೋಣ. |
10:03 | ನೀವು ಲೈನ್ಸ್ ಮತ್ತು ಆರೋಗಳನ್ನು ಬಳಸಿ ಸಹ ಆಬ್ಜೆಕ್ಟ್ ಗಳನ್ನು ಜೋಡಿಸಬಹುದು. |
10:08 | ಆದರೆ ಆ ಸಂದರ್ಭದಲ್ಲಿ, ನೀವು ಆಬ್ಜೆಕ್ಟ್ ಗಳನ್ನು ಗುಂಪು ಮಾಡಬೇಕು. |
10:11 | ಏಕೆಂದರೆ, ಆರೋಗಳು ಆಬ್ಜೆಕ್ಟ್ ಗಳ ಜೊತೆಗೆ ಜೋಡಿಸಿಕೊಂಡು ಇರುವುದಿಲ್ಲ. |
10:16 | 'ಕನೆಕ್ಟರ್' ಗಳು ಹೇಗೆ ಲೈನ್ಸ್ ಮತ್ತು ಆರೋಗಳಿಂದ ವಿಭಿನ್ನವಾಗಿವೆ? |
10:21 | 'ಕನೆಕ್ಟರ್' ಗಳು, ಲೈನ್ ಅಥವಾ ಆರೋ ಗಳಾಗಿದ್ದು, |
10:24 | ಇವುಗಳ ಕೊನೆಗಳು ಆಬ್ಜೆಕ್ಟ್ ನ 'ಗ್ಲು ಪಾಯಿಂಟ್'ಗಳಿಗೆ ತಂತಾನೆ ಜೋಡಿಸಲ್ಪಡುತ್ತವೆ. |
10:31 | ಆದರೆ ಲೈನ್ ಮತ್ತು ಆರೋ ಗಳು ತಂತಾನೇ ಜೋಡಿಸಿಕೊಳ್ಳುವುದಿಲ್ಲ. |
10:36 | ಈ ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ ಮತ್ತು ಈ ಅಸೈನ್ಮೆಂಟ್ ಅನ್ನು ಮಾಡಿ. |
10:40 | 'ಸ್ಪೋಕನ್ ಟ್ಯುಟೋರಿಯಲ್' ಫ್ಲೋಚಾರ್ಟ್ ನ ಎರಡನೇ ಭಾಗವನ್ನು ರಚಿಸಿ. |
10:45 | ಪ್ರೊಸೆಸ್ ಬಾಕ್ಸ್ ಗಳಿಗೆ ಬಣ್ಣ ತುಂಬಿ. |
10:48 | 'A' ಅಕ್ಷರದೊಂದಿಗೆ ಒಂದು 'ಕನೆಕ್ಟರ್' ಅನ್ನು ರಚಿಸಿ. |
10:51 | ಈ ಫ್ಲೋಚಾರ್ಟ್ ನಲ್ಲಿ, ಇದು ಮೊದಲನೆಯ ಆಬ್ಜೆಕ್ಟ್ ಆಗಿರಬೇಕು. |
10:55 | ಅದು ಹೀಗೆ ಕಾಣಬೇಕು. |
10:59 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
11:02 | ಈ ಟ್ಯುಟೋರಿಯಲ್ ನಲ್ಲಿ, ನೀವು 'ಫ್ಲೋಚಾರ್ಟ್', 'ಕನೆಕ್ಟರ್' ಮತ್ತು 'ಗ್ಲು ಪಾಯಿಂಟ್' ಇವುಗಳ ಬಗ್ಗೆ ಕಲಿತಿದ್ದೀರಿ. |
11:09 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
11:13 | ಇದು 'ಸ್ಪೋಕನ್ ಟ್ಯುಟೋರಿಯಲ್' ಪ್ರಕಲ್ಪದ ಸಾರಾಂಶವಾಗಿದೆ. |
11:17 | ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
11:22 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: |
11:24 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
11:28 | ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
11:32 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:
contact at spoken hyphen tutorial dot org. |
11:40 | Spoken Tutorial ಪ್ರಕಲ್ಪವು, Talk to a Teacher ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. |
11:45 | ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
11:53 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
spoken hyphen tutorial dot org slash NMEICT hyphen Intro. |
12:05 | ಈ ಟ್ಯುಟೋರಿಯಲ್, DesiCrew Solutions Pvt. Ltd. ಅವರ ಕೊಡುಗೆಯಾಗಿದೆ.
ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ವಂದನೆಗಳು. |