LibreOffice-Suite-Draw/C3/Flow-Charts-Connectors-Glue-Points/Kannada

From Script | Spoken-Tutorial
Jump to: navigation, search
Time Narration
00:01 LibreOffice Draw (ಲಿಬ್ರೆ ಆಫೀಸ್ ಡ್ರಾ) ನಲ್ಲಿಯ Flowcharts, Glue Points and Beizer curves (ಫ್ಲೋ ಚಾರ್ಟ್ಸ್, ಗ್ಲು ಪಾಯಿಂಟ್ಸ್ ಆಂಡ್ ಬೇಝಿಯರ್ ಕರ್ವ್ಸ್) ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನೀವು, 'ಬೇಝಿಯರ್ ಕರ್ವ್ಸ್' ಮತ್ತು 'ಫ್ಲೋ ಚಾರ್ಟ್ಸ್ ' ಗಳನ್ನು ಡ್ರಾ ಮಾಡಲು ಕಲಿಯುವಿರಿ.
00:14 ಅಲ್ಲದೆ, 'ಕನೆಕ್ಟರ್' (Connectors) ಗಳನ್ನು ಮತ್ತು 'ಗ್ಲು ಪಾಯಿಂಟ್' ಗಳನ್ನು (Glue points) ಬಳಸಿ, 'ಫ್ಲೋ ಚಾರ್ಟ್' ಗಳನ್ನು ಜೋಡಿಸುವುದನ್ನು ಸಹ ಕಲಿಯುವಿರಿ.
00:20 ಇಲ್ಲಿ, ನಾವು: Ubuntu Linux ಆವೃತ್ತಿ 10.04 ಮತ್ತು LibreOffice Suite ಆವೃತ್ತಿ 3.3.4 ಇವುಗಳನ್ನು ಬಳಸುತ್ತಿದ್ದೇವೆ.
00:29 ನಾವು 'ಬೇಝಿಯರ್ ಕರ್ವ್ಸ್' ಬಗ್ಗೆ ತಿಳಿದುಕೊಳ್ಳೋಣ.
00:33 'ಬೆಝಿಯರ್ ಕರ್ವ್ಸ್' ಅನ್ನು ಮುಖ್ಯವಾಗಿ ಕಂಪ್ಯೂಟರ್ ಗ್ರಾಫಿಕ್ಸ್ ನಲ್ಲಿ ವಕ್ರರೇಖೆಗಳನ್ನು ನಯಗೊಳಿಸಲು ಬಳಸಲಾಗುತ್ತದೆ.
00:40 ವಕ್ರಾಕೃತಿಗಳ ಆಕಾರ ಮತ್ತು ಗಾತ್ರದೊಂದಿಗೆ ಪ್ರಯೋಗ ಮಾಡಲು, ನೀವು ಈ ವಕ್ರಾಕೃತಿಗಳನ್ನು ಬಳಸಬಹುದು.
00:45 ಎಲ್ಲಾ ವಕ್ರಾಕೃತಿಗಳು ಪ್ರಾರಂಭದ ಮತ್ತು ಅಂತಿಮ ಬಿಂದುವನ್ನು ಹೊಂದಿವೆ.
00:50 ವಕ್ರರೇಖೆಯ ಮೇಲಿನ ಬಿಂದುಗಳನ್ನು 'ನೋಡ್' ಎಂದು ಕರೆಯಲಾಗುತ್ತದೆ.
00:54 ನಮ್ಮ 'Routemap' ಎಂಬ ಫೈಲ್ ಗೆ ಹೋಗೋಣ.
00:58 ನಾವು Home ನಿಂದ, Commercial Complex ಗೆ ಹೋಗೋಣ.
01:03 ಇದಕ್ಕಾಗಿ, ನಾವು Parking Lot ನಿಂದ ಬಲಗಡೆಗೆ ಹೋಗಬೇಕು.
01:08 ನೆನಪಿನಲ್ಲಿಡಿ, ಈ ಹಿಂದೆ ನಾವು ಡ್ರಾಯಿಂಗ್ ಅನ್ನು ಗುಂಪು ಮಾಡಿದ್ದೆವು. ಹಾಗಾಗಿ, ನಾವು ಅದನ್ನು ungroup (ಅನ್-ಗ್ರುಪ್) ಮಾಡೋಣ.
01:14 ಈಗ, Drawing ಟೂಲ್ ಬಾರ್ ನಿಂದ, Curve ಅನ್ನು ಕ್ಲಿಕ್ ಮಾಡಿ ಮತ್ತು Curve ಅನ್ನು ಆಯ್ಕೆಮಾಡಿ.
01:20 Draw ಪೇಜ್ ನ ಮೇಲೆ, ದಾರಿಯು ಆರಂಭವಾಗುವಲ್ಲಿ ಕ್ಲಿಕ್ ಮಾಡಿ - ಇದು Home ಆಗಿದೆ.
01:27 ಲೆಫ್ಟ್-ಮೌಸ್-ಬಟನ್ ಅನ್ನು ಒತ್ತಿ ಹಿಡಿದು Play Ground ವರೆಗೂ ಎಳೆಯಿರಿ.
01:32 ನೀವು ಒಂದು ಸರಳ ರೇಖೆಯನ್ನು ನೋಡುವಿರಿ.
01:36 ಮೌಸ್-ಬಟನ್ ಅನ್ನು ಬಿಟ್ಟುಬಿಡಿ.
01:39 ಈಗ, ಪಾಯಿಂಟರ್ ಅನ್ನು Commercial Complex ಗೆ ಸರಿಸಿ.
01:43 ಮೌಸ್ ಸರಿದಂತೆಲ್ಲ ರೇಖೆಯು ವಕ್ರವಾಗುವುದು.
01:47 ಕೊನೆಯಲ್ಲಿ, ಎಂದರೆ, 'ಕಮರ್ಷಿಯಲ್ ಕಾಂಪ್ಲೆಕ್ಸ್' ಮೇಲೆ ಡಬಲ್-ಕ್ಲಿಕ್ ಮಾಡಿ.
01:52 ನಾವು ಒಂದು ವಕ್ರರೇಖೆಯನ್ನು ಎಳೆದಿದ್ದೇವೆ!
01:55 ಕರ್ವ್ ನ ಮಾರ್ಪಾಟು ಸರಾಗವಾಗಿರುವುದನ್ನು ಗಮನಿಸಿ.
01:59 ಈಗ, ನಾವು Edit Points ಟೂಲ್-ಬಾರ್ ಅನ್ನು ಬಳಸಿ, ಈ ವಕ್ರರೇಖೆಯ ಮೇಲಿರುವ ಪಾಯಿಂಟುಗಳನ್ನು ಎಡಿಟ್ ಮಾಡೋಣ.
02:05 ಕರ್ವ್ ಮೇಲೆ ಕ್ಲಿಕ್ ಮಾಡಿ.
02:07 Edit Points ಟೂಲ್-ಬಾರ್ ಅನ್ನು ಸಕ್ರಿಯಗೊಳಿಸಲು, ಕರ್ವ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Edit Points ಅನ್ನು ಆರಿಸಿಕೊಳ್ಳಿ.
02:14 ವಕ್ರರೇಖೆಯ ತುದಿ-ಬಿಂದುಗಳಲ್ಲಿ ನೀಲಿ ಬಾಕ್ಸ್ ಗಳು ಕಾಣಿಸಿಕೊಂಡಾಗ, ನಾವು ವಕ್ರರೇಖೆಯನ್ನು ಎಡಿಟ್ ಮಾಡಬಹುದು.
02:21 ಕರ್ವ್ ನ ಪ್ರಾರಂಭದ ಬಿಂದುವಿನ ಮೇಲೆ ಕ್ಲಿಕ್ ಮಾಡಿ.
02:24 ನೀವು ಒಂದು ಕಂಟ್ರೋಲ್ ಪಾಯಿಂಟ್ ನೊಂದಿಗೆ, ಚುಕ್ಕೆಗಳ ಒಂದು ರೇಖೆಯನ್ನು ನೋಡುತ್ತೀರಿ.
02:29 ಅಗತ್ಯಕ್ಕೆ ತಕ್ಕಂತೆ, ವಕ್ರರೇಖೆಯನ್ನು ಮೊಟಕುಗೊಳಿಸಲು ಅಥವಾ ವಿಸ್ತರಿಸಲು ನೀವು ಈಗ ಚುಕ್ಕೆಗಳ ರೇಖೆಯನ್ನು ಎಳೆಯಬಹುದು.
02:35 ನೀವು ಬದಲಾವಣೆ ಮಾಡಿದ ನಂತರ, 'ಡ್ರಾ' ಪೇಜ್ ನಲ್ಲಿ ಎಲ್ಲಿಯಾದರೂ ಡಬಲ್-ಕ್ಲಿಕ್ ಮಾಡಿ.
02:41 ನಯವಾದ ಕರ್ವ್ ಅನ್ನು ಪಡೆಯಲು, ವಕ್ರರೇಖೆಯ ಮೇಲೆ ಬಿಂದುಗಳನ್ನು ಸೇರಿಸಲು, ಸರಿಸಲು ಅಥವಾ ತೆಗೆದುಬಿಡಲು ನೀವು Edit Points ಟೂಲ್-ಬಾರ್ ಅನ್ನು ಬಳಸಬಹುದು.
02:50 ಇಲ್ಲಿ ನಿಮಗಾಗಿ ಒಂದು ಸಣ್ಣ ಅಸೈನ್ಮೆಂಟ್ ಇದೆ.
02:54 Edit Points ಟೂಲ್-ಬಾರ್ ಅನ್ನು ಬಳಸಿಕೊಂಡು, ಎಲ್ಲ ಆಯ್ಕೆಗಳನ್ನು ಉಪಯೋಗಿಸಿ,
02:59 ಒಂದು 'ಬೇಝಿಯರ್ ಕರ್ವ್' ಅನ್ನು ರಚಿಸಿ.
03:02 ಈಗ, ನಾವು 'ಫ್ಲೋಚಾರ್ಟ್' ಗಳನ್ನು ರಚಿಸಲು ಕಲಿಯೋಣ.
03:05 ನಾವು RouteMap ಫೈಲ್ ಗೆ 2 ಹೊಸ ಪೇಜ್ ಗಳನ್ನು ಸೇರಿಸೋಣ.
03:10 Draw, 'ಫ್ಲೋಚಾರ್ಟ್ಸ್' ಗಾಗಿ, Drawing ಟೂಲ್-ಬಾರ್ ನಲ್ಲಿ ಒಂದು ಪ್ರತ್ಯೇಕ ಆಯ್ಕೆಯನ್ನು ಒದಗಿಸುತ್ತದೆ.
03:17 ಈ ಫ್ಲೋಚಾರ್ಟ್, 'ಸ್ಪೋಕನ್ ಟ್ಯುಟೋರಿಯಲ್' ಪ್ರಕ್ರಿಯೆಯಲ್ಲಿರುವ ಎಲ್ಲಾ ಹಂತಗಳನ್ನು ತೋರಿಸುತ್ತದೆ.
03:22 ನಾವು ಈ ಫ್ಲೋಚಾರ್ಟ್ ಅನ್ನು ರಚಿಸೋಣ.
03:26 Drawing ಟೂಲ್-ಬಾರ್ ನಿಂದ, Flowcharts ಮೇಲೆ ಕ್ಲಿಕ್ ಮಾಡಿ.
03:30 ಸಣ್ಣ ಕಪ್ಪು ತ್ರಿಕೋನದ ಮೇಲೆ ಕ್ಲಿಕ್ ಮಾಡಿ ಮತ್ತು Flowchart: Process ಅನ್ನು ಆಯ್ಕೆಮಾಡಿ.
03:37 ಕರ್ಸರ್ ಅನ್ನು Draw ಪೇಜ್ ನಲ್ಲಿ ಇರಿಸಿ, ಎಡ ಮೌಸ್-ಬಟನ್ ಅನ್ನು ಒತ್ತಿ ಹಿಡಿದುಕೊಂಡು, ಅದನ್ನು ಕೆಳಗೆ ಎಳೆಯಿರಿ.
03:44 ನೀವು ಒಂದು 'ಪ್ರೊಸೆಸ್' (Process) ಬಾಕ್ಸ್ ಅನ್ನು ರಚಿಸಿದ್ದೀರಿ.
03:47 'ಪ್ರೊಸೆಸ್' ಬಾಕ್ಸ್, ಸಂಪೂರ್ಣ ಪ್ರಕ್ರಿಯೆಯಲ್ಲಿಯ ಒಂದು ಹಂತ ಅಥವಾ ಕ್ರಿಯೆಯನ್ನು ಪ್ರತಿನಿಧಿಸುತ್ತದೆ.
03:54 ಫ್ಲೋಚಾರ್ಟ್ ಆಬ್ಜೆಕ್ಟ್ ಗಳಲ್ಲಿ, ನಾವು ಟೆಕ್ಸ್ಟ್ ಅನ್ನು ಸಹ ಸೇರಿಸಬಹುದು.
03:59 ನಾವು Process ಬಾಕ್ಸ್ ನ ಮೇಲೆ ಡಬಲ್ ಕ್ಲಿಕ್ ಮಾಡಿ, ಅದರೊಳಗೆ ಹೀಗೆ ಟೈಪ್ ಮಾಡೋಣ: "Create the Tutorial Outline to chunk content into 10-minute scripts".
04:13 'ಫ್ಲೋಚಾರ್ಟ್ಸ್' ಗಾಗಿ ಫಾರ್ಮ್ಯಾಟಿಂಗ್ ಆಯ್ಕೆಗಳು, ಇತರ ಆಬ್ಜೆಕ್ಟ್ ಗಳಿಗೆ ಇದ್ದಂತೆಯೇ ಇರುತ್ತವೆ.
04:20 ಈಗ, ನಾವು 'ಪ್ರೊಸೆಸ್' ಬಾಕ್ಸ್ ನ ಒಳಗೆ, ಟೆಕ್ಸ್ಟ್ ಅನ್ನು ಅಲೈನ್ ಮಾಡೋಣ.
04:24 ನಾವು ಟೆಕ್ಸ್ಟ್ ಅನ್ನು ಸೆಲೆಕ್ಟ್ ಮಾಡೋಣ.
04:27 'ಕಾಂಟೆಕ್ಸ್ಟ್ ಮೆನ್ಯು' ವನ್ನು (Context menu) ನೋಡಲು ರೈಟ್- ಕ್ಲಿಕ್ ಮಾಡಿ ಮತ್ತು Text ಮೇಲೆ ಕ್ಲಿಕ್ ಮಾಡಿ.
04:32 Text ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
04:35 Text ಡೈಲಾಗ್ ಬಾಕ್ಸ್ ನಲ್ಲಿ, '"Resize shape to fit text width"' ಎಂಬ ಬಾಕ್ಸ್ ಅನ್ನು ಚೆಕ್ ಮಾಡಿ. OK ಯನ್ನು ಕ್ಲಿಕ್ ಮಾಡಿ.
04:43 ಟೆಕ್ಸ್ಟ್ ಗೆ ಹೊಂದುವಂತೆ, Process ಬಾಕ್ಸ್, ಅದರ ಆಕಾರವನ್ನು ಬದಲಿಸಿದೆ ಎಂದು ನೀವು ನೋಡುತ್ತೀರಿ!
04:49 ಈಗ, ನಾವು Ctrl + Z ಕೀಗಳನ್ನು ಒಟ್ಟಿಗೆ ಒತ್ತುವ ಮೂಲಕ, ಈ ಕ್ರಿಯೆಯನ್ನು undo ಮಾಡೋಣ.
04:55 ಮತ್ತೊಮ್ಮೆ, ನಾವು ಟೆಕ್ಸ್ಟ್ ಅನ್ನು ಆಯ್ಕೆ ಮಾಡೋಣ.
04:59 ಮೇನ್ ಮೆನ್ಯು ಗೆ ಹೋಗಿ, Format ಅನ್ನು ಆಯ್ಕೆ ಮಾಡಿ ಮತ್ತು Text ಮೇಲೆ ಕ್ಲಿಕ್ ಮಾಡಿ.
05:05 Text ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
05:08 ನಾವು Word wrap text in shape ಎಂಬ ಆಯ್ಕೆಯನ್ನು ಗುರುತು ಹಾಕೋಣ. OK ಮೇಲೆ ಕ್ಲಿಕ್ ಮಾಡಿ.
05:15 Process ಬಾಕ್ಸ್ ನ ಆಕಾರಕ್ಕೆ ಸರಿಹೊಂದುವಂತೆ ಟೆಕ್ಸ್ಟ್, ತನ್ನನ್ನು ಹೊಂದಿಸಿಕೊಂಡಿದೆ.
05:21 ಅದೇ ರೀತಿಯಾಗಿ, ನಾವು ಈಗ ಮೊದಲಿನ Process ಬಾಕ್ಸ್ ನ ಕೆಳಗಡೆ ಇನ್ನೊಂದನ್ನು ರಚಿಸೋಣ.
05:28 ಅದರೊಳಗೆ, ನಾವು "Create Scripts" ಎಂಬ ಟೆಕ್ಸ್ಟ್ ಅನ್ನು ಸೇರಿಸೋಣ.
05:33 ಈಗ, ನಾವು ಒಂದು Decision ಬಾಕ್ಸ್ ಅನ್ನು ರಚಿಸೋಣ ಮತ್ತು ಅದರಲ್ಲಿ "Review Okay?" ಎಂಬ ಟೆಕ್ಸ್ಟ್ ಅನ್ನು ಸೇರಿಸೋಣ.
05:42 Decision ಬಾಕ್ಸ್, ಮಾಡಬೇಕಾದ ನಿರ್ಧಾರವನ್ನು ಪ್ರತಿನಿಧಿಸುತ್ತದೆ.
05:46 ನಿರ್ಧಾರದ ಫಲಿತಾಂಶವನ್ನು ಆಧರಿಸಿ, ಇದು ನಮಗೆ ಮುಂದಿನ ಪ್ರಕ್ರಿಯೆಯನ್ನು ನಿರ್ದೇಶಿಸುತ್ತದೆ.
05:52 ಈಗ ನಾವು Decision ಬಾಕ್ಸ್ ನ ಕೆಳಗೆ, ಇನ್ನೊಂದು Process ಬಾಕ್ಸ್ ಅನ್ನು ರಚಿಸೋಣ.
05:58 ಇದರ ಒಳಗೆ ನಾವು "Record Video" ಎಂಬ ಟೆಕ್ಸ್ಟ್ ಅನ್ನು ಸೇರಿಸೋಣ.
06:04 ನಂತರ, "Review Okay?" ಎಂಬ ಟೆಕ್ಸ್ಟ್ ನೊಂದಿಗೆ, ಇನ್ನೊಂದು Decision ಬಾಕ್ಸ್ ನಮಗೆ ಇಲ್ಲಿ ಬೇಕು.
06:12 ನಾವು ಈಮೊದಲು ರಚಿಸಿದ್ದ Decision ಬಾಕ್ಸ್ ಅನ್ನು ಕಾಪಿ ಮಾಡಿ ಅದನ್ನು ಇಲ್ಲಿ ಇಡೋಣ.
06:18 ಆದ್ದರಿಂದ, Decision ಬಾಕ್ಸ್ ಅನ್ನು ಆಯ್ಕೆ ಮಾಡಿ ಮತ್ತು Ctrl + C ಕೀಗಳನ್ನು ಒಟ್ಟಿಗೆ ಒತ್ತಿ.
06:25 ಈಗ, Ctrl + V ಕೀಗಳನ್ನು ಒಟ್ಟಿಗೆ ಒತ್ತಿರಿ.
06:29 ನಾವು ಈ ಬಾಕ್ಸ್ ಅನ್ನು ಹಿಂದಿನ Process ಬಾಕ್ಸ್ ನ ಕೆಳಗೆ ಚಲಿಸೋಣ.
06:35 ಈಗ, ಅದರೊಳಗೆ "Review Okay" ಎಂಬ ಟೆಕ್ಸ್ಟ್ ಅನ್ನು ನಮೂದಿಸಿ.
06:40 ಕೊನೆಯದಾಗಿ, ನಾವು ಒಂದು 'ಫ್ಲೋಚಾರ್ಟ್-ಕನೆಕ್ಟರ್' ಅನ್ನು ರಚಿಸೋಣ ಮತ್ತು ಅದರೊಳಗೆ 'A' ಎಂದು ಟೈಪ್ ಮಾಡೋಣ.
06:48 ಫ್ಲೋಚಾರ್ಟ್-ಕನೆಕ್ಟರ್, ಫ್ಲೋಚಾರ್ಟ್ ನ ಎರಡು ಭಾಗಗಳನ್ನು ಜೋಡಿಸುತ್ತದೆ.
06:53 ಫ್ಲೋಚಾರ್ಟ್ ನ ಮೊದಲ ಭಾಗವು ಒಂದು ಪೇಜ್ ನಲ್ಲಿದೆ
06:58 ಮತ್ತು ಎರಡನೇ ಭಾಗವು ಮತ್ತೊಂದು ಪೇಜ್ ನಲ್ಲಿದೆ ಎಂದುಕೊಳ್ಳೋಣ.
07:02 ನಾವು ಮೊದಲ ಪೇಜ್ ನ ಫ್ಲೋಚಾರ್ಟ್ ನ ಕೊನೆಯಲ್ಲಿ, ಫ್ಲೋಚಾರ್ಟ್-ಕನೆಕ್ಟರ್ ಅನ್ನು ರಚಿಸುತ್ತೇವೆ.
07:08 ನಂತರ, ಎರಡನೇ ಪೇಜ್ ನ ಆರಂಭದಲ್ಲಿ, ನಾವು ಅದೇ ಕನೆಕ್ಟರ್ ಅನ್ನು ರಚಿಸುತ್ತೇವೆ.
07:13 ನಾವು ಈ ಆಬ್ಜೆಕ್ಟ್ ಗಳನ್ನು ಜೋಡಿಸುವ ಮೊದಲು, Draw ನಲ್ಲಿ ಕನೆಕ್ಟರ್, ಲೈನ್ಸ್ ಮತ್ತು ಗ್ಲು-ಪಾಯಿಂಟ್ ಗಳು ಇವುಗಳ ಬಗ್ಗೆ ಕಲಿಯೋಣ.
07:21 'ಕನೆಕ್ಟರ್ಸ್', ಲೈನ್ ಅಥವಾ ಆರೋಗಳಾಗಿದ್ದು, ಇದರ ತುದಿಗಳನ್ನು ಆಬ್ಜೆಕ್ಟ್ ಗೆ ಜೋಡಿಸಲಾಗಿದೆ.
07:28 'ಗ್ಲು ಪಾಯಿಂಟ್ಗಳು' - ಹೆಸರೇ ಸೂಚಿಸುವಂತೆ, ಇವುಗಳು ಕನೆಕ್ಟರ್ ಗಳನ್ನು ಆಬ್ಜೆಕ್ಟ್ ಗಳಿಗೆ ಅಂಟಿಸುತ್ತವೆ.
07:35 ಎಲ್ಲಾ ಆಬ್ಜೆಕ್ಟ್ ಗಳು 'ಗ್ಲು ಪಾಯಿಂಟ್' ಗಳನ್ನು ಹೊಂದಿರುತ್ತವೆ.
07:39 ಇವುಗಳು ಅದೃಶ್ಯವಾಗಿವೆ;
07:41 Drawing ಟೂಲ್-ಬಾರ್ ನಿಂದ ಒಂದು ಕನೆಕ್ಟರ್ ಅನ್ನು ಆಯ್ಕೆ ಮಾಡಿದಾಗ ಅಥವಾ 'ಮೌಸ್ ಪಾಯಿಂಟರ್' ಅನ್ನು ಒಂದು ಆಬ್ಜೆಕ್ಟ್ ನ ಮೇಲೆ ಚಲಿಸಿದಾಗ ಇವುಗಳು ಗೋಚರಿಸುತ್ತವೆ.
07:51 'ಗ್ಲು ಪಾಯಿಂಟ್ಗಳು' ಹ್ಯಾಂಡಲ್ ಗಳಲ್ಲ.
07:54 ಆಬ್ಜೆಕ್ಟ್ ಅನ್ನು ರಿ-ಸೈಜ್ ಮಾಡಲು ನಾವು ಹ್ಯಾಂಡಲ್ ಗಳನ್ನು ಬಳಸುತ್ತೇವೆ.
07:58 ಕನೆಕ್ಟರ್ ಅನ್ನು ಆಬ್ಜೆಕ್ಟ್ ಗೆ ಅಂಟಿಸಲು, 'ಗ್ಲು ಪಾಯಿಂಟ್'ಗಳನ್ನು ಬಳಸಲಾಗುತ್ತದೆ.
08:02 ಈಗ, ನಾವು 'ಕನೆಕ್ಟರ್' ಗಳನ್ನು ಬಳಸಿ, ಫ್ಲೋಚಾರ್ಟ್ ನಲ್ಲಿನ ಆಬ್ಜೆಕ್ಟ್ ಗಳನ್ನು ಜೋಡಿಸೋಣ.
08:07 Drawing ಟೂಲ್ ಬಾರ್ ಗೆ ಹೋಗಿ ಮತ್ತು Connector ಅನ್ನು ಆಯ್ಕೆಮಾಡಿ.
08:12 ವಿವಿಧ ರೀತಿಯ 'ಕನೆಕ್ಟರ್' ಗಳನ್ನು ನೋಡಲು, ಸಣ್ಣ ಕಪ್ಪು ತ್ರಿಕೋನದ ಮೇಲೆ ಕ್ಲಿಕ್ ಮಾಡಿ.
08:18 ನಾವು Straight Connector ends with Arrow ಎಂಬ ಆಯ್ಕೆಯನ್ನು ಆರಿಸಿಕೊಳ್ಳೋಣ.
08:23 Connector ಅನ್ನು ಆಯ್ಕೆಮಾಡಿದಾಗ, 'ಡ್ರಾ' ಪೇಜ್ ನಲ್ಲಿನ ಎಲ್ಲಾ ಆಬ್ಜೆಕ್ಟ್ ಗಳ ಮೇಲೆ ನೀವು ಕ್ರಾಸ್ ಗುರುತನ್ನು ನೋಡುತ್ತೀರಿ.
08:31 ಇವುಗಳು 'ಗ್ಲು ಪಾಯಿಂಟ್' ಗಳಾಗಿವೆ.
08:34 ಈಗ ನಾವು, ಮೊದಲನೆಯ ಪ್ರೊಸೆಸ್ ಬಾಕ್ಸ್ ನ ಗ್ಲು-ಪಾಯಿಂಟ್ ನಿಂದ, ಅದರ ಮುಂದಿನ ಪ್ರೊಸೆಸ್ ಬಾಕ್ಸ್ ನ ಗ್ಲು-ಪಾಯಿಂಟ್ ಗೆ ಒಂದು ರೇಖೆಯನ್ನು ಎಳೆಯೋಣ.
08:44 ನಾವು 'ಕನೆಕ್ಟರ್' ಗಳನ್ನು ಬಳಸಿ, ಎಲ್ಲ ಫ್ಲೋಚಾರ್ಟ್ ಆಬ್ಜೆಕ್ಟ್ಗಳನ್ನು ಮೇಲಿನಿಂದ ಕೆಳಕ್ಕೆ ಜೋಡಿಸುವೆವು.
08:52 ನೀವು ಕರ್ಸರ್ ಅನ್ನು ಎಲ್ಲಿ ಇರಿಸಿದರೂ, ಪ್ರತಿಯೊಂದು ಲೈನ್, ತಂತಾನೆ ಹತ್ತಿರದ 'ಗ್ಲು-ಪಾಯಿಂಟ್' ಗೆ ಸ್ವತಃ ಜೋಡಿಸಿಕೊಳ್ಳುತ್ತದೆ ಎಂದು ನೀವು ಗಮನಿಸಬಹುದು.
09:03 ಈಗ, ನಾವು Process ಮತ್ತು Decision ಬಾಕ್ಸ್ ಗಳನ್ನು ಜೋಡಿಸೋಣ.
09:08 Drawing ಟೂಲ್ಬಾರ್ ನಿಂದ, Connector Ends with Arrow ಎಂಬ ಆಯ್ಕೆಯನ್ನು ಆರಿಸಿ.
09:14 Process ಬಾಕ್ಸ್ ನಿಂದ, ನಾವು Decision ಬಾಕ್ಸ್ ಗೆ ಜೋಡಿಸೋಣ.
09:19 ಹೀಗೆಯೇ, ನಾವು Decision ಬಾಕ್ಸ್ ಅನ್ನು ಮುಂದಿನ Process ಬಾಕ್ಸ್ ಗೆ ಜೋಡಿಸೋಣ.
09:25 ನೀವು ಕನೆಕ್ಟರ್ ಗೆ, ಟೆಕ್ಸ್ಟ್ ಅನ್ನು ಕೂಡ ಸೇರಿಸಬಹುದು.
09:29 Decision ಬಾಕ್ಸ್ ನಿಂದ Process ಬಾಕ್ಸ್ ಗೆ ಇರುವ 'ಕನೆಕ್ಟರ್' ನ ಮೇಲೆ, ನಾವು "No" ಎಂದು ಟೈಪ್ ಮಾಡೋಣ.
09:35 connector ಅನ್ನು ಆಯ್ಕೆ ಮಾಡಲು, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
09:39 ಕೊನೆಯಲ್ಲಿರುವ ಕಂಟ್ರೋಲ್ ಪಾಯಿಂಟ್ ಗಳು ಸಕ್ರಿಯವಾಗುತ್ತವೆ
09:43 ಮತ್ತು ಟೆಕ್ಸ್ಟ್ ಕರ್ಸರ್ ಕಾಣಿಸಿಕೊಳ್ಳುತ್ತದೆ.
09:46 ನಾವು "No" ಎಂದು ಟೆಕ್ಸ್ಟ್ ಅನ್ನು ಟೈಪ್ ಮಾಡೋಣ.
09:49 ಬೇರೆ ಕನೆಕ್ಟರ್ ಗಾಗಿ, ನಾವು ಮತ್ತೊಮ್ಮೆ ಇದನ್ನು ಮಾಡೋಣ.
09:54 ನಾವು ಒಂದು ಸರಳವಾದ ಫ್ಲೋಚಾರ್ಟ್ ಅನ್ನು ರಚಿಸಿದ್ದೇವೆ!
09:57 ನಾವು Ctrl + S ಕೀಗಳನ್ನು ಒತ್ತುವ ಮೂಲಕ, ನಮ್ಮ ಫ್ಲೋಚಾರ್ಟ್ ಅನ್ನು ಸೇವ್ ಮಾಡೋಣ.
10:03 ನೀವು ಲೈನ್ಸ್ ಮತ್ತು ಆರೋಗಳನ್ನು ಬಳಸಿ ಸಹ ಆಬ್ಜೆಕ್ಟ್ ಗಳನ್ನು ಜೋಡಿಸಬಹುದು.
10:08 ಆದರೆ ಆ ಸಂದರ್ಭದಲ್ಲಿ, ನೀವು ಆಬ್ಜೆಕ್ಟ್ ಗಳನ್ನು ಗುಂಪು ಮಾಡಬೇಕು.
10:11 ಏಕೆಂದರೆ, ಆರೋಗಳು ಆಬ್ಜೆಕ್ಟ್ ಗಳ ಜೊತೆಗೆ ಜೋಡಿಸಿಕೊಂಡು ಇರುವುದಿಲ್ಲ.
10:16 'ಕನೆಕ್ಟರ್' ಗಳು ಹೇಗೆ ಲೈನ್ಸ್ ಮತ್ತು ಆರೋಗಳಿಂದ ವಿಭಿನ್ನವಾಗಿವೆ?
10:21 'ಕನೆಕ್ಟರ್' ಗಳು, ಲೈನ್ ಅಥವಾ ಆರೋ ಗಳಾಗಿದ್ದು,
10:24 ಇವುಗಳ ಕೊನೆಗಳು ಆಬ್ಜೆಕ್ಟ್ ನ 'ಗ್ಲು ಪಾಯಿಂಟ್'ಗಳಿಗೆ ತಂತಾನೆ ಜೋಡಿಸಲ್ಪಡುತ್ತವೆ.
10:31 ಆದರೆ ಲೈನ್ ಮತ್ತು ಆರೋ ಗಳು ತಂತಾನೇ ಜೋಡಿಸಿಕೊಳ್ಳುವುದಿಲ್ಲ.
10:36 ಈ ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ ಮತ್ತು ಈ ಅಸೈನ್ಮೆಂಟ್ ಅನ್ನು ಮಾಡಿ.
10:40 'ಸ್ಪೋಕನ್ ಟ್ಯುಟೋರಿಯಲ್' ಫ್ಲೋಚಾರ್ಟ್ ನ ಎರಡನೇ ಭಾಗವನ್ನು ರಚಿಸಿ.
10:45 ಪ್ರೊಸೆಸ್ ಬಾಕ್ಸ್ ಗಳಿಗೆ ಬಣ್ಣ ತುಂಬಿ.
10:48 'A' ಅಕ್ಷರದೊಂದಿಗೆ ಒಂದು 'ಕನೆಕ್ಟರ್' ಅನ್ನು ರಚಿಸಿ.
10:51 ಈ ಫ್ಲೋಚಾರ್ಟ್ ನಲ್ಲಿ, ಇದು ಮೊದಲನೆಯ ಆಬ್ಜೆಕ್ಟ್ ಆಗಿರಬೇಕು.
10:55 ಅದು ಹೀಗೆ ಕಾಣಬೇಕು.
10:59 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
11:02 ಈ ಟ್ಯುಟೋರಿಯಲ್ ನಲ್ಲಿ, ನೀವು 'ಫ್ಲೋಚಾರ್ಟ್', 'ಕನೆಕ್ಟರ್' ಮತ್ತು 'ಗ್ಲು ಪಾಯಿಂಟ್' ಇವುಗಳ ಬಗ್ಗೆ ಕಲಿತಿದ್ದೀರಿ.
11:09 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
11:13 ಇದು 'ಸ್ಪೋಕನ್ ಟ್ಯುಟೋರಿಯಲ್' ಪ್ರಕಲ್ಪದ ಸಾರಾಂಶವಾಗಿದೆ.
11:17 ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
11:22 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು:
11:24 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
11:28 ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:32 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:

contact at spoken hyphen tutorial dot org.

11:40 Spoken Tutorial ಪ್ರಕಲ್ಪವು, Talk to a Teacher ಎಂಬ ಪ್ರಕಲ್ಪದ ಒಂದು ಭಾಗವಾಗಿದೆ.
11:45 ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
11:53 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:

spoken hyphen tutorial dot org slash NMEICT hyphen Intro.

12:05 ಈ ಟ್ಯುಟೋರಿಯಲ್, DesiCrew Solutions Pvt. Ltd. ಅವರ ಕೊಡುಗೆಯಾಗಿದೆ.

ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ವಂದನೆಗಳು.

Contributors and Content Editors

Sandhya.np14