Difference between revisions of "Scilab/C2/Plotting-2D-graphs/Kannada"

From Script | Spoken-Tutorial
Jump to: navigation, search
Line 16: Line 16:
 
|-
 
|-
 
|00:15
 
|00:15
|ಸೈಲ್ಯಾಬ್ ನಲ್ಲಿ ರಚನೆ ಮಾಡಬಹುದಾದ ಗ್ರಾಫ್ ಗಳು : '''x-y plots, contour plots, 3D plots, histograms, bar charts''' ಮುಂತಾದವು.
+
|ಸೈಲ್ಯಾಬ್ ನಲ್ಲಿ '''x-y plots, contour plots, 3D plots, histograms, bar charts''' ಮುಂತಾದ ಬಗೆಯ ಗ್ರಾಫ್ ಗಳನ್ನು ರಚನೆ ಮಾಡಬಹುದು.
 
|-
 
|-
 
| 00:24
 
| 00:24
| ಈಗ ಸೈಲ್ಯಾಬ್ ಕನ್ಸೋಲ್ ವಿಂಡೋ ವನ್ನು ಓಪನ್ ಮಾಡೋಣ.  
+
| ಈಗ ಸೈಲ್ಯಾಬ್ ಕನ್ಸೋಲ್ ವಿಂಡೋ ವನ್ನು ತೆರೆಯೋಣ.
 
|-
 
|-
 
|00:28
 
|00:28
Line 35: Line 35:
 
|-
 
|-
 
|00:48
 
|00:48
| '''x'''  ಇದು ಒಂದು ನೇರವಾಗಿ, ಸಮಾನ ಅಂತರದಲ್ಲಿ,  1 ಮತ್ತು  10 ರ ನಡುವೆ  5  ಬಿಂದುಗಳನ್ನು ಹೊಂದಿರುವ ರೋ ವೆಕ್ಟರ್ ಆಗಿದೆ
+
| '''x'''  ಇದು ಒಂದು ನೇರವಾಗಿ, ಸಮಾನ ಅಂತರದಲ್ಲಿ,  1 ಮತ್ತು  10 ರ ನಡುವೆ  5  ಬಿಂದುಗಳನ್ನು ಹೊಂದಿರುವ ರೋ ವೆಕ್ಟರ್ ಆಗಿದೆ.
 
|-
 
|-
 
| 00:57
 
| 00:57
Line 348: Line 348:
 
|10:32
 
|10:32
  
| | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.  
+
| | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.  
 
ಧನ್ಯವಾದಗಳು.
 
ಧನ್ಯವಾದಗಳು.
 
|}
 
|}

Revision as of 19:28, 31 October 2017

Time Narration
00:00 Scilab (ಸೈಲ್ಯಾಬ್) ನ Plotting 2D graphs ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ.
00:04 ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿದೆ ಎಂದುಕೊಂಡು, ಸೈಲ್ಯಾಬ್ ನ plots ಗಳ ಕುರಿತು ಚರ್ಚೆಯನ್ನು ಪ್ರಾರಂಭಿಸೋಣ.
00:10 ಸೈಲ್ಯಾಬ್ ವಿವಿಧ ಬಗೆಯ '2D' ಮತ್ತು '3D' ಪ್ಲಾಟ್ ಗಳನ್ನು ರಚನೆ ಮಾಡಲು ಮತ್ತು ವಿನ್ಯಾಸಗೊಳಿಸಲು ಅವಕಾಶವನ್ನು ಕೊಡುತ್ತದೆ.
00:15 ಸೈಲ್ಯಾಬ್ ನಲ್ಲಿ x-y plots, contour plots, 3D plots, histograms, bar charts ಮುಂತಾದ ಬಗೆಯ ಗ್ರಾಫ್ ಗಳನ್ನು ರಚನೆ ಮಾಡಬಹುದು.
00:24 ಈಗ ಸೈಲ್ಯಾಬ್ ಕನ್ಸೋಲ್ ವಿಂಡೋ ವನ್ನು ತೆರೆಯೋಣ.
00:28 ನಾನು ಕಮಾಂಡ್ ಗಳನ್ನು ಕಟ್ ಮತ್ತು ಪೇಸ್ಟ್ ಮಾಡಲು, 'Plotting.sce' ಎಂಬ ಫೈಲ್ ಅನ್ನು ಬಳಸುತ್ತೇನೆ.
00:34 ಪ್ಲಾಟ್ ಮಾಡಲು ನಮಗೆ ಬಿಂದುಗಳ ಸಮೂಹ ಬೇಕು. ಈಗ ಸಮಾನ ಅಂತರವನ್ನು ಹೊಂದಿದ ಬಿಂದುಗಳ ಸಮೂಹವನ್ನು ರಚಿಸೋಣ.
00:39 ಇದನ್ನು linspace ಕಮಾಂಡ್ ಅನ್ನು ಬಳಸಿ ಮಾಡಬಹುದು ಮತ್ತು ಇದು ಸಮಾನ ಅಂತರವನ್ನು ಹೊಂದಿದ ವೆಕ್ಟರ್ ಅನ್ನು ರಚಿಸುತ್ತದೆ.
00:45 ಉದಾಹರಣೆಗೆ,
00:48 x ಇದು ಒಂದು ನೇರವಾಗಿ, ಸಮಾನ ಅಂತರದಲ್ಲಿ, 1 ಮತ್ತು 10 ರ ನಡುವೆ 5 ಬಿಂದುಗಳನ್ನು ಹೊಂದಿರುವ ರೋ ವೆಕ್ಟರ್ ಆಗಿದೆ.
00:57 ಇದೇ ರೀತಿ, y ಇದು ಒಂದು ನೇರವಾಗಿ, ಸಮಾನ ಅಂತರದಲ್ಲಿ, 1 ಮತ್ತು 20 ರ ನಡುವೆ 5 ಬಿಂದುಗಳನ್ನು ಹೊಂದಿರುವ ರೋ ವೆಕ್ಟರ್ ಆಗಿದೆ.
01:08 linspace ನ ಕುರಿತು ಹೆಚ್ಚಿನ ಮಾಹಿತಿಯನ್ನು Help ಡಾಕ್ಯುಮೆಂಟೇಷನ್ ನಲ್ಲಿ ಪಡೆಯಬಹುದು.
01:14 ಈಗ ನಾವು plot ಫಂಕ್ಷನ್ ಅನ್ನು ಬಳಸಿ, x ಮತ್ತು y ಆರ್ಗ್ಯುಮೆಂಟ್ ಗಳೊಂದಿಗೆ ಒಂದು ಗ್ರಾಫ್ ಅನ್ನು ಪ್ಲಾಟ್ ಮಾಡೋಣ.
01:19 ಇದು matlab ನಲ್ಲಿ ಬಳಸುವಂತೇ ಇದೆ.
01:23 ನೀವು ಇಲ್ಲಿ ನೋಡುವಂತೆ plot(x,y) ಇದು x ಮತ್ತು y ಗಳ ನಡುವೆ ಗ್ರಾಫ್ ಅನ್ನು ರಚಿಸುತ್ತದೆ.
01:31 Graphics window ವು '0' ಎಂದು ಲೇಬಲ್ ಆಗಿರುವುದನ್ನು ಗಮನಿಸಿ.
01:36 ನಾವು xset ಫಂಕ್ಷನ್ ಅನ್ನು ಬಳಸಿ ಇನ್ನೊಂದು ವಿಂಡೋವನ್ನು ಓಪನ್ ಮಾಡಬಹುದು.
01:41 ನಾನು ಇದನ್ನು ಕ್ಲೋಸ್ ಮಾಡುತ್ತೇನೆ.
01:43 xset ಫಂಕ್ಷನ್ ಅನ್ನು ಕಟ್ ಮಾಡಿ, ಸೈಲ್ಯಾಬ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತಿ.
01:50 ನೀವು Graphic window number 1 ಅನ್ನು ನೋಡಬಹುದು.
01:54 ಈ ಫಂಕ್ಷನ್ ಗೆ ಪಾಸ್ ಮಾಡಿದ ಎರಡು ಆರ್ಗ್ಯುಮೆಂಟ್ ಗಳನ್ನು ಅಂದರೆ, 'window' ಮತ್ತು 1 ಅನ್ನು, ಗಮನಿಸಿ.
02:03 ಮುಂದಿನ ಗ್ರಾಫ್ ಅನ್ನು ಈ ವಿಂಡೋ ನಲ್ಲಿ ಪ್ಲಾಟ್ ಮಾಡುತ್ತೇವೆ.
02:06 '2d' ಗ್ರಾಫ್ ಅನ್ನು ಪ್ಲಾಟ್ ಮಾಡಲು, plot2d ಫಂಕ್ಷನ್ ಸೈಲ್ಯಾಬ್ ಗೆ ನೇಟಿವ್ ಫಂಕ್ಷನ್ ಆಗಿದೆ.
02:14 plot2d ಕಮಾಂಡ್ ನೀವು ಇಲ್ಲಿ ಕಾಣುವಂಟೆ x ಮತ್ತು y ಗಳ ಮೇಲೆ ಗ್ರಾಫ್ ಅನ್ನು ಪ್ಲಾಟ್ ಮಾಡುತ್ತದೆ.
02:26 ಇಲ್ಲಿ ಮೂರನೇ ಆರ್ಗ್ಯುಮೆಂಟ್ ಆದ 'style' ಇರುವುದನ್ನು ಗಮನಿಸಿ.
02:31 style ಆರ್ಗ್ಯುಮೆಂಟ್ ಐಚ್ಛಿಕ. ಇದು ಗ್ರಾಫ್ ಅನ್ನು ವಿನ್ಯಾಸಗೊಳಿಸಲು ಉಪಯುಕ್ತ.
02:36 ಸ್ಟೈಲ್ ನ ಧನಾತ್ಮಕ ಬೆಲೆಗೆ, ಕರ್ವ್ ಪ್ಲೇಯ್ನ್ ಆಗಿದ್ದು ಬೇರೆ ಬೇರೆ ಬಣ್ಣವನ್ನು ಹೊಂದಿರುತ್ತದೆ. ನಮ್ಮ ಉದಾಹರಣೆಯಲ್ಲಿ, 3 ಕ್ಕೆ ಹಸಿರು ಬಣ್ಣವಾಗಿದೆ.
02:44 'style' ನ ಡಿಫಾಲ್ಟ್ ವ್ಯಾಲ್ಯೂ 1 ಆಗಿರುತ್ತದೆ.
02:46 ಋಣಾತ್ಮಕ ಬೆಲೆಯನ್ನು ಕೊಟ್ಟು ಗ್ರಾಫ್ ಅನ್ನು ಪ್ಲಾಟ್ ಮಾಡಿ, ವ್ಯತ್ಯಾಸವನ್ನು ನೀವೇ ಗಮನಿಸಿ.
02:51 ಮತ್ತು ನಾವು x ಮತ್ತು y ಎಕ್ಸಿಸ್ ಗಳ ಪ್ರಾರಂಭಿಕ ಬಿಂದು ಮತ್ತು ಅಂತಿಮ ಬಿಂದುಗಳನ್ನು, ನಾಲ್ಕನೇ ಆರ್ಗ್ಯುಮೆಂಟ್ ಅನ್ನು ಪಾಸ್ ಮಾಡುವುದರ ಮೂಲಕ ಸೆಟ್ ಮಾಡಬಹುದು.
02:57 ಇದನ್ನು rect ಎಂದು ಕರೆಯುತ್ತಾರೆ. ಇಲ್ಲಿ,
03:07 x ಆಕ್ಸಿಸ್ 1 ರಿಂದ 10 ರ ವರೆಗೆ ಮತ್ತು y ಆಕ್ಸಿಸ್ 1 ರಿಂದ 20 ರವರೆಗೆ ಇರುವುದನ್ನು ನೋಡಬಹುದು.
03:14 rect ಕಮಾಂಡ್ ನಲ್ಲಿ ಆರ್ಗ್ಯುಮೆಂಟ್ ಗಳು xmin, ymin, xmax ಮತ್ತು ymax ಈ ಕ್ರಮದಲ್ಲಿ ಇರುತ್ತದೆ.
03:24 ಈಗ ಟೈಟಲ್, ಆಕ್ಸಿಸ್ ಮತ್ತು ಲೆಜೆಂಡ್ಸ್ ಗಳ ಕುರಿತು ಕಲಿಯೋಣ.
03:28 ಆಕ್ಸಿಸ್ ಗಳಿಗೆ ಲೇಬಲ್ ಅನ್ನು ಕೊಡಲು ಮತ್ತು ಪ್ಲಾಟ್ ಗೆ ಟೈಟಲ್ ಅನ್ನು ಕೊಡಲು ನಾವು title, xlabel ಮತ್ತು ylabel ಕಮಾಂಡ್ ಗಳನ್ನು ಬಳಸಬಹುದು.
03:38 ನಾನು ಈ ಕಮಾಂಡ್ ಗಳನ್ನು ಕಟ್ ಮಾಡಿ, ಕನ್ಸೋಲ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತುತ್ತೇನೆ.
03:45 ಗ್ರಾಫ್ ನಲ್ಲಿ x-axis ಗೆ ' x ' ಎಂದೂ, y-axis ಗೆ 'y' ಎಂದೂ, ಗ್ರಾಫ್ ನ ಟೈಟಲ್ 'My title' ಎಂದೂ ಲೇಬಲ್ ಬಂದಿರುವುದನ್ನು ನೀವು ನೋಡಬಹುದು.
03:58 ನೀವು ಪ್ಲಾಟ್ ನ title ಮತ್ತು axes ಅನ್ನು 3 ರ ಬದಲು ಒಂದೇ ಕಮಾಂಡ್ ನಲ್ಲಿ ಕಾನ್ಫಿಗರ್ ಮಾಡಲು ಬಯಸಬಹುದು.
04:04 ಇದಕ್ಕಾಗಿ xtitle ಕಮಾಂಡ್ ಅನ್ನು ಎಲ್ಲಾ 3 ಆರ್ಗ್ಯುಮೆಂಟ್ ಗಳೊಂದಿಗೆ ಬಳಸಬಹುದು.
04:11 ನಾನು ಈ ಕಮಾಂಡ್ ಗಳನ್ನು ಕಟ್ ಮಾಡಿ, ಸೈಲ್ಯಾಬ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತುತ್ತೇನೆ.
04:18 ಈಗ ನೀವು x axis ನ ಲೇಬಲ್ X axis , Y axis ಮತ್ತು ಟೈಟಲ್ 'My title' ಎಂದು ಬಂದಿರುವುದನ್ನು ನೋಡಬಹುದು.
04:26 ಈಗ ನಾನು ಟೈಪ್ ಮಾಡುತ್ತಿರುವ clf() ಫಂಕ್ಷನ್ ಗ್ರಾಫಿಕ್ ವಿಂಡೋವನ್ನು ಖಾಲಿ ಮಾಡುತ್ತಿರುವುದನ್ನು ನೀವು ನೋಡಬಹುದು.
04:36 ಒಂದೇ ಗ್ರಾಫಿಕ್ ವಿಂಡೋ ದಲ್ಲಿ ಅನೇಕ ಗ್ರಾಫ್ ಗಳನ್ನು ಪ್ಲಾಟ್ ಮಾಡುವಾಗ ಇದು ಉಪಯುಕ್ತ.
04:41 ನಾನು ಈ ವಿಂಡೋವನ್ನು ಕ್ಲೋಸ್ ಮಾಡುತ್ತೇನೆ.
04:44 ಕೆಲವೊಮ್ಮೆ ನಾವು, ಒಂದೇ ಪ್ಲಾಟ್ ನಲ್ಲಿ ಎರಡು ಸೆಟ್ ಡಾಟಾ ,ಅಂದರೆ ಒಂದು ಸೆಟ್ x ಡಾಟಾ ಮತ್ತು ಎರಡು ಸೆಟ್ y ಡಾಟಾ, ಗಳನ್ನು ಹೋಲಿಕೆ ಮಾಡಬೇಕಾಗುತ್ತದೆ.
04:51 ಈಗ ಇದಕ್ಕೆ ಒಂದು ಉದಾಹರಣೆಯನ್ನು ನೋಡೋಣ, ನಾನು ಕೆಳಕ್ಕೆ ಸ್ಕ್ರೋಲ್ ಮಾಡುತ್ತೇನೆ.
04:56 ನಾವು linspace ಕಮಾಂಡ್ ಅನ್ನು ಬಳಸಿ x-ಆಕ್ಸಿಸ್ ಬಿಂದುಗಳನ್ನು ರೋ ವೆಕ್ಟರ್ x ನಲ್ಲಿ ಡಿಫೈನ್ ಮಾಡುತ್ತೇವೆ.
05:03 ಈಗ ಒಂದು ಫಂಕ್ಷನ್ ಅನ್ನು ಡಿಫೈನ್ ಮಾಡೋಣ.
05:05 y1 = x square.
05:07 plot x verses y1.
05:10 ಇನ್ನೊಂದು ಫಂಕ್ಷನ್ y2 = 2 x square ಎಂದು ಡಿಫೈನ್ ಮಾಡಿ.
05:15 plot x verses y2.
05:17 ನಾವು ನಮ್ಮ ಗ್ರಾಫ್ ಗೆ ಲೇಬಲ್ ಮತ್ತು ಟೈಟಲ್ ಅನ್ನು ಕೂಡ ಕೊಡೋಣ.
05:22 ನಾವು ಕರ್ವ್ ನ ವಿನ್ಯಾಸವನ್ನು ಬದಲಿಸಲು, ”o-” ಮತ್ತು ”+ -” ಕಮಾಂಡ್ ಗಳನ್ನು ಹೆಚ್ಚುವರಿಯಾಗಿ ಪಾಸ್ ಮಾಡಿದ್ದೇವೆ.
05:33 ಈ ಆರ್ಗ್ಯುಮೆಂಟ್ ಗಳು plot2d ಫಂಕ್ಷನ್ ನ ಭಾಗವಲ್ಲ.
05:37 ಅವುಗಳನ್ನು plot ಫಂಕ್ಷನ್ ನೊಂದಿಗೆ ಮಾತ್ರ ಬಳಸಬಹುದು.
05:41 ನಾನು ಈ ಕಮಾಂಡ್ ಗಳನ್ನು ಕಾಪಿ ಮಾಡಿ, ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡುತ್ತೇನೆ.
05:49 ನೀವು ಗ್ರಾಫ್ ಅನ್ನು ನೋಡಿ.
05:51 ಯಾವ ಕರ್ವ್ ಯಾವ ಫಂಕ್ಷನ್ ನೊಂದಿಗೆ ಸಂಯೋಜನೆಗೊಂಡಿದೆ ಎಂದು ತಿಳಿಯುವುದು ಉತ್ತಮವಲ್ಲವೇ?
05:56 ಇದನ್ನು legend ಕಮಾಂಡ್ ಅನ್ನು ಬಳಸಿ ಮಾಡಬಹುದು.
06:08 "o-" ಕರ್ವ್ y1=x square ಫಂಕ್ಷನ್ ಅನ್ನೂ, "+-" ಕರ್ವ್ y2=2*x^2 (y2=2x square) ಫಂಕ್ಷನ್ ಅನ್ನೂ ಪ್ರತಿನಿಧಿಸುತ್ತದೆ.
06:19 ನಾನು ಈ ಗ್ರಾಫಿಕ್ ವಿಂಡೋ ವನ್ನು ಕ್ಲೋಸ್ ಮಾಡುತ್ತೇನೆ.
06:22 ನಾವು ಈಗ plot2d demos ಮತ್ತು subplot ಫಂಕ್ಷನ್ ಗಳ ಕುರಿತು ಚರ್ಚೆ ಮಾಡೋಣ.
06:28 ಸೈಲ್ಯಾಬ್ ಅದರ ಎಲ್ಲಾ ಮುಖ್ಯ ಫಂಕ್ಷನ್ ಗಳ ಕುರಿತು ಡೆಮೋವನ್ನು ಕೊಡುತ್ತದೆ.
06:31 demonstration ಟ್ಯಾಬ್ ನ ಮೂಲಕ plot2d ಯ ಡೆಮೋವನ್ನು ನೋಡಬಹುದು.
06:39 Graphics ನ ಮೇಲೆ ಕ್ಲಿಕ್ ಮಾಡಿ, 2D and 3D plots ಅನ್ನು ಕ್ಲಿಕ್ ಮಾಡಿ ಮತ್ತು ಕೊಟ್ಟಿರುವ ಅನೇಕ ಡೆಮೋಗಳಲ್ಲಿ ಒಂದನ್ನು ಆರಿಸಿಕೊಳ್ಳಿ.
06:51 plot2d ಯ ಮೇಲೆ ಕ್ಲಿಕ್ ಮಾಡುತ್ತೇನೆ.
06:54 ನೀವು ಡೆಮೋ ಗ್ರಾಫ್ ಅನ್ನು ನೋಡಬಹುದು.
06:55 ಈ ಗ್ರಾಫ್ ನ ಕೋಡ್ ಅನ್ನು ಇಲ್ಲಿ view code ಬಟನ್ ಅನ್ನು ಕ್ಲಿಕ್ ಮಾಡಿ ನೋಡಬಹುದು.
07:02 ಈ ಲಿಂಕ್ Mac OS ನಲ್ಲಿ ಕಾರ್ಯ ನಿರ್ವಹಿಸುವುದಿಲ್ಲ, ಆದರೆ Windows ಮತ್ತು Linux ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.
07:07 Mac ನಲ್ಲಿ ಕೋಡ್ ಅನ್ನು ಡೈರಕ್ಟರಿಯ ಮೂಲಕ ನೋಡಬಹುದು.
07:12 ಈಗ ಟರ್ಮಿನಲ್ ಗೆ ಹೋಗೋಣ.
07:15 ನಾನು ಈಗ ಇಲ್ಲಿ ತೋರಿಸಿರುವಂತೆ Scilab 5.2 ನ 'demos' ಡೈರಕ್ಟರಿಯಲ್ಲಿದ್ದೇನೆ.
07:21 ಈ ಡೈರಕ್ಟರಿಯ ಪೂರ್ಣ ಪಾಥ್ ಅನ್ನು ಇಲ್ಲಿ ತೋರಿಸಿದೆ.
07:27 ನಾವು ಇಲ್ಲಿ ತೋರಿಸಿರುವಂತೆ, ಲಭ್ಯವಿರುವ ಡೆಮೋ ಪಟ್ಟಿಯನ್ನು ನೋಡಲು ls ಎಂದು ಟೈಪ್ ಮಾಡಬಹುದು.
07:36 ನಂತರ ನಾವು 2d_3d_plots ಡೈರಕ್ಟರಿಯನ್ನು ಆರಿಸಿಕೊಂಡು, Enter ಅನ್ನು ಒತ್ತಬೇಕು.
07:46 'sce' ಫೈಲ್ ನಲ್ಲಿ ಲಭ್ಯವಿರುವ ಅನೇಕ ಡೆಮೋಕೋಡ್ ಗಳನ್ನು ನೋಡಲು ls ಎಂದು ಟೈಪ್ ಮಾಡಿ.
07:55 ನಾವು ಈಗ ಮೊದಲೇ ನೋಡಿದ ಡೆಮೋಗೆ ಕೋಡ್ ಅನ್ನು ನೋಡೋಣ.
08:00 more plot2d.dem.sce ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
08:11 ಇಲ್ಲಿ ನಾವು plot2d ಫಂಕ್ಷನ್ ನ ಡೆಮೋ ಗ್ರಾಫ್ ನ ಕೋಡ್ ಅನ್ನು ನೋಡಬಹುದು.
08:18 ನಾನು ಟರ್ಮಿನಲ್ ಅನ್ನು ಕ್ಲೋಸ್ ಮಾಡುತ್ತೇನೆ.
08:21 ನಾನು ಡೆಮೋ ಗ್ರಾಫ್ ಮತ್ತು ಡೆಮೋ ವಿಂಡೋವನ್ನು ಕ್ಲೋಸ್ ಮಾಡುತ್ತೇನೆ.
08:26 ಇದೇ ರೀತಿಯಲ್ಲಿ ನೀವು ಸೈಲ್ಯಾಬ್ ನ ಬೇರೆ ಡೆಮೋ ಗಳನ್ನು ನೋಡಿ, ಅದರ ಕುರಿತು ತಿಳಿದುಕೊಳ್ಳಬಹುದು.
08:29 ಈಗ subplot ಫಂಕ್ಷನ್ ನ ಕುರಿತು ಚರ್ಚಿಸೋಣ.
08:33 subplot() ಫಂಕ್ಷನ್ ಗ್ರಾಫಿಕ್ ವಿಂಡೋವನ್ನು ಉಪವಿಂಡೋಗಳ ಮ್ಯಾಟ್ರಿಕ್ಸ್ ಆಗಿ ವಿಭಜಿಸುತ್ತದೆ.
08:37 ಈ ಫಂಕ್ಷನ್ ಅನ್ನು ವಿವರಿಸಲು, ನಾವು ಸೈಲ್ಯಾಬ್ ನಲ್ಲಿ 'plotting 2D graphs' ನ ಡೆಮೋ ವನ್ನು ಬಳಸೋಣ.
08:43 ಉದಾಹರಣೆಗೆ ನಿಮ್ಮ ಕನ್ಸೋಲ್ ನಲ್ಲಿ, plot2d ಎಂದು ಟೈಪ್ ಮಾಡಿ ಮತ್ತು ಈ ಫಂಕ್ಷನ್ ನ ಡೆಮೋ ಪ್ಲಾಟ್ ಅನ್ನು ನೋಡಬೇಕು.
08:58 ನಾನು ಈ ವಿಂಡೋವನ್ನು ಕ್ಲೋಸ್ ಮಾಡುತ್ತೇನೆ.
09:00 subplot ಕಮಾಂಡ್ ಗ್ರಾಫಿಕ್ಸ್ ವಿಂಡೋವನ್ನು '2 by 2' ಮ್ಯಾಟ್ರಿಕ್ಸ್ ನಲ್ಲಿ ಉಪವಿಂಡೋಗಳಾಗಿ ವಿಭಜಿಸಿರುತ್ತದೆ. ಇದನ್ನು subplot ಕಮಾಂಡ್ ನ ಮೊದಲ ಎರಡು ಆರ್ಗ್ಯುಮೆಂಟ್ ಗಳು ಪ್ರತಿನಿಧಿಸುತ್ತವೆ.
09:10 ಮೂರನೆಯ ಆರ್ಗ್ಯುಮೆಂಟ್ ಯಾವ ವಿಂಡೋದಲ್ಲಿ ಗ್ರಾಫ್ ಅನ್ನು ರಚಿಸಬೇಕು ಎಂಬುದನ್ನು ಸೂಚಿಸುತ್ತದೆ.
09:15 ನಾನು ಇದನ್ನು ಈ ಕಮಾಂಡ್ ಗಳನ್ನು ಸೈಲ್ಯಾಬ್ ಕನ್ಸೋಲ್ ಗೆ ಕಾಪಿ ಮಾಡುವ ಮೂಲಕ ಎಕ್ಸಿಕ್ಯೂಟ್ ಮಾಡುತ್ತೇನೆ.
09:24 ನೀವು ಒಂದೇ ವಿಂಡೋದಲ್ಲಿ 4 ಪ್ಲಾಟ್ ಗಳನ್ನು ನೋಡಬಹುದು.
09:28 ದೊರಕಿರುವ ಪ್ಲಾಟ್ ಅನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಇಮೇಜ್ ನಂತೆ ಸೇವ್ ಮಾಡಿಕೊಳ್ಳಬಹುದು.
09:32 'graphic window' ನ ಮೇಲೆ ಕ್ಲಿಕ್ ಮಾಡಿ, File ಗೆ ಹೋಗಿ, Export to ವನ್ನು ಆಯ್ಕೆ ಮಾಡಿಕೊಳ್ಳಿ.
09:39 ನಿಮ್ಮ ಪ್ಲಾಟ್ ಗೆ ಸರಿಹೊಂದುವ ಹೆಸರನ್ನು ಕೊಡಿ.
09:50 ನಿಮ್ಮ ಫೈಲ್ ಅನ್ನು ಸೇವ್ ಮಾಡಲು ಫೋಲ್ಡರ್ ಅನ್ನು ಆಯ್ಕೆ ಮಾಡಿಕೊಳ್ಳಿ.
09:54 ನಿಮ್ಮ ಇಮೇಜ್ ಯಾವ ಫಾರ್ಮ್ಯಾಟ್ ನಲ್ಲಿ ಸೇವ್ ಆಗಬೇಕೋ ಆ ಫೈಲ್ ಫಾರ್ಮ್ಯಾಟ್ ಅನ್ನು ಆರಿಸಿಕೊಳ್ಳಿ.
09:59 ನಾನು 'JPEG' ಫಾರ್ಮ್ಯಾಟ್ ಅನ್ನು ಆರಿಸಿಕೊಳ್ಳುತ್ತೇನೆ. ಮತ್ತು Save ಅನ್ನು ಕ್ಲಿಕ್ ಮಾಡಿ.
10:05 ಇಮೇಜ್ ಅನ್ನು ಓಪನ್ ಮಾಡಲು, ಡೈರೆಕ್ಟರಿಯನ್ನು ಬ್ರೌಸ್ ಮಾಡಿ ಮತ್ತು ಅದು ಸೇವ್ ಆಗಿದೆಯೇ ಇಲ್ಲವೆ ಎಂದು ಖಚಿತಪಡಿಸಿಕೊಳ್ಳಿ.
10:11 ಇಲ್ಲಿಗೆ Plotting in Scilab ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
10:15 ಸೈಲ್ಯಾಬ್ ನಲ್ಲಿ ಇನ್ನೂ ಅನೇಕ ಆಪರೇಶನ್ ಗಳಿವೆ ಅವುಗಳನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ನೋಡೋಣ.
10:20 ಸೈಲ್ಯಾಬ್ ಲಿಂಕ್ ಅನ್ನು ವೀಕ್ಷಿಸುತ್ತಿರಿ.
10:22 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:29 ಇದರ ಕುರಿತು ಹೆಚ್ಚಿನ ವಿವರಗಳು ಈ ಲಿಂಕ್ ನಲ್ಲಿ ದೊರೆಯುತ್ತದೆ.
10:32 ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14