Difference between revisions of "Git/C3/Working-with-Remote-Repositories/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 440: | Line 440: | ||
|- | |- | ||
| 12:47 | | 12:47 | ||
− | |'''User3''' | + | |'''User3''' ಗಾಗಿ ಡಾಟಾವನ್ನು 'ಕ್ಲೋನ್' ಮಾಡಿ. |
|- | |- | ||
| 12:50 | | 12:50 | ||
Line 467: | Line 467: | ||
|- | |- | ||
| 13:27 | | 13:27 | ||
− | | ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು. | + | | ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನ ಪಟ್ಟಣ. ಧನ್ಯವಾದಗಳು. |
|} | |} |
Latest revision as of 09:06, 13 September 2017
|
|
00:01 | Working with Remote Repositories ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು 'ರಿಮೋಟ್ ರಿಪಾಸಿಟರಿ' (Remote repository) ಎಂದರೇನು ಮತ್ತು |
00:12 | 'ರಿಮೋಟ್ ರಿಪಾಸಿಟರಿ' ಗೆ ಹೇಗೆ ಡಾಟಾವನ್ನು ಸಿಂಕ್ರೊನೈಝ್ ಮಾಡುವುದು ಎಂದು ಕಲಿಯುತ್ತೇವೆ. |
00:16 | ಈ ಟ್ಯುಟೋರಿಯಲ್ ಗಾಗಿ ನಾನು, Ubuntu Linux 14.04 |
00:22 | Git 2.3.2 |
00:25 | gedit Text Editor ಮತ್ತು |
00:28 | Firefox ವೆಬ್-ಬ್ರೌಸರ್ ಗಳನ್ನು ಬಳಸುತ್ತಿದ್ದೇನೆ. |
00:30 | ನೀವು ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಮತ್ತು ಎಡಿಟರ್ ಗಳನ್ನು ಬಳಸಬಹುದು. |
00:36 | ಈ ಟ್ಯುಟೋರಿಯಲ್ ಗಾಗಿ, ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು. |
00:41 | ಮತ್ತು ನೀವು ಮುಖ್ಯವಾದ Git ಕಮಾಂಡ್ ಗಳನ್ನು ತಿಳಿದಿರಬೇಕು. |
00:46 | ಇಲ್ಲವಾದಲ್ಲಿ, ಸಂಬಂಧಿತ Git ಟ್ಯುಟೋರಿಯಲ್ ಗಳಿಗಾಗಿ, ಕೆಳಗೆ ತೋರಿಸಿರುವ ಲಿಂಕ್ ಅನ್ನು ಭೇಟಿಮಾಡಿ. |
00:52 | ಮೊದಲು ನಾವು 'ರಿಮೋಟ್ ರಿಪಾಸಿಟರಿ' ಎಂದರೇನು ಎಂದು ಅರಿತುಕೊಳ್ಳೋಣ. |
00:56 | ಇಂಟರ್ನೆಟ್ ಅಥವಾ ಬೇರೆ ಯಾವುದೇ ನೆಟ್ವರ್ಕ್ ನಲ್ಲಿ ಇರಿಸಲಾದ ' ರಿಪಾಸಿಟರಿ' ಯನ್ನು 'ರಿಮೋಟ್ ರಿಪಾಸಿಟರಿ' ಎಂದು ಕರೆಯುತ್ತಾರೆ. |
01:04 | ಈ ಕೇಂದ್ರೀಕೃತ 'ರಿಪಾಸಿಟರಿ' ಯನ್ನು ಉಪಯೋಗಿಸಿ, ಜನರು ಪ್ರಪಂಚದಲ್ಲಿ ಎಲ್ಲಿಂದಾದರೂ, ಯಾವಾಗಲಾದರೂ ಒಂದು ಪ್ರಾಜೆಕ್ಟ್ ನಲ್ಲಿ ಪಾಲ್ಗೊಳ್ಳಬಹುದು. |
01:13 | ಉದಾಹರಣೆಗೆ, 3 ಬಳಕೆದಾರರು ಒಂದೇ 'ರಿಪಾಸಿಟರಿ' ಯಲ್ಲಿ ಒಟ್ಟಿಗೇ ಕೆಲಸ ಮಾಡಲು ಬಯಸುತ್ತಾರೆ ಎಂದುಕೊಳ್ಳೋಣ. |
01:21 | Git ಅವರಿಗೆ 'ರಿಮೋಟ್ ರಿಪಾಸಿಟರಿ' ಯ ಕಾಪಿಯನ್ನು ಅವರ ಲೋಕಲ್ ಸಿಸ್ಟಮ್ ನಲ್ಲಿ ತೆಗೆದುಕೊಳ್ಳಲು ಬಿಡುತ್ತದೆ. |
01:28 | ಇದನ್ನು clone (ಕ್ಲೋನ್) ಕಮಾಂಡ್ ಅನ್ನು ಉಪಯೋಗಿಸಿ ಮಾಡಲಾಗುವುದು. |
01:31 | ನಂತರ ಅವರು 'ಲೋಕಲ್ ರಿಪಾಸಿಟರಿ' ಯೊಂದಿಗೆ ಆಫ್ಲೈನ್ ನಲ್ಲೂ ಕೆಲಸ ಮಾಡಬಹುದು. |
01:36 | ಕೆಲಸ ಮುಗಿದ ಮೇಲೆ ಅವರು ಅದನ್ನು 'ಮೇನ್ ರಿಪಾಸಿಟರಿ' ಯೊಂದಿಗೆ ಪುನಃ ಸಿಂಕ್ರೋನೈಜ್ ಮಾಡಬೇಕು. |
01:43 | ಇದನ್ನು Push ಮತ್ತು pull ಕಮಾಂಡ್ ಗಳನ್ನು ಉಪಯೋಗಿಸಿ ಮಾಡಬಹುದು. |
01:48 | ಈ ಟ್ಯುಟೋರಿಯಲ್ ನ ಕೊನೆಯಲ್ಲಿ, ಈ ಕ್ರಿಯೆಯು ನಿಮಗೆ ಸಂಪೂರ್ಣವಾಗಿ ಅರ್ಥವಾಗುವುದು. |
01:53 | ಈಮೊದಲೇ ರಚಿಸಿದ GitHub repository ಯನ್ನು ನಾವು ಈಗ ಓಪನ್ ಮಾಡುವೆವು. |
01:59 | ಬಲಭಾಗದಲ್ಲಿ ಈ 'ರಿಪಾಸಿಟರಿ' ಯ URL ಅನ್ನು ನೋಡಬಹುದು. |
02:05 | ಈ URL ಅನ್ನು ಕಾಪಿ ಮಾಡೋಣ. |
02:08 | ಒಂದು ಲೋಕಲ್ 'ರಿಪಾಸಿಟರಿ' ಯನ್ನು ರಚಿಸಲು, URL ಅನ್ನು ಉಪಯೋಗಿಸಿ ಈ 'ರಿಪಾಸಿಟರಿ' ಯ ಕಾಪಿಯನ್ನು ನಾವು ಮಾಡುತ್ತೇವೆ. |
02:16 | ಈಗ ಟರ್ಮಿನಲ್ ಅನ್ನು ಓಪನ್ ಮಾಡೋಣ. |
02:18 | ಈಗ ಎರಡು ಬಳಕೆದಾರರು ಒಂದೇ 'ರಿಮೋಟ್ ರಿಪಾಸಿಟರಿ' ಯಲ್ಲಿ ಹೇಗೆ ಕೆಲಸ ಮಾಡಬಹುದು ಎಂದು ನೋಡೋಣ. |
02:24 | ಇದಕ್ಕಾಗಿ, ನಾನು ನನ್ನ ಡೆಸ್ಕ್ಟಾಪ್ ನಲ್ಲಿ User1 ಮತ್ತು User2 ಎಂಬ ಎರಡು ಡೈರಕ್ಟರಿಗಳನ್ನು ರಚಿಸಿದ್ದೇನೆ. |
02:33 | ದಯವಿಟ್ಟು ನಿಮ್ಮ ಡೆಸ್ಕ್ಟಾಪ್ ನಲ್ಲಿಯೂ ಇದೇ ರೀತಿ ಮಾಡಿಕೊಳ್ಳಿ. |
02:36 | ನಾನು ಡೈರಕ್ಟರಿಗಳನ್ನು ಒಂದೇ ಟರ್ಮಿನಲ್ ನಲ್ಲಿ, ಎರಡು ಬೇರೆ ಬೇರೆ ಟ್ಯಾಬ್ ಗಳಲ್ಲಿ ಓಪನ್ ಮಾಡುತ್ತೇನೆ. |
02:43 | ಮೊದಲನೇ ಟ್ಯಾಬ್ ನಲ್ಲಿ cd space User1 ಎಂದು ಟೈಪ್ ಮಾಡಿ. |
02:49 | ಎರಡನೇ ಟ್ಯಾಬ್ ಅನ್ನು ಓಪನ್ ಮಾಡಲು, File ಮೆನ್ಯುಅನ್ನು ಕ್ಲಿಕ್ ಮಾಡಿ ಮತ್ತು Open Tab ಅನ್ನು ಆಯ್ಕೆಮಾಡಿ. |
02:55 | ಎರಡನೇ ಟ್ಯಾಬ್ ನಲ್ಲಿ cd User2 ಎಂದು ಟೈಪ್ ಮಾಡಿ. |
03:00 | ಈಗ User1 ಟ್ಯಾಬ್ ಗೆ ಹೋಗೋಣ. |
03:03 | ಈಗ 'ರಿಮೋಟ್ ರಿಪಾಸಿಟರಿ'ಯ ಒಂದು ಕಾಪಿಯನ್ನು ಮಾಡಿಕೊಳ್ಳೋಣ. |
03:08 | git space clone ಎಂದು ಟೈಪ್ ಮಾಡಿ. ನಂತರ ಕಾಪಿ ಮಾಡಿಕೊಂಡ URL ಅನ್ನು ಪೇಸ್ಟ್ ಮಾಡಿ. ಸ್ಪೇಸ್ ಕೊಟ್ಟು ಈ ಕಮಾಂಡ್ ನ ಕೊನೆಯಲ್ಲಿ ಡಾಟ್ ಅನ್ನು ಟೈಪ್ ಮಾಡಿ. |
03:17 | ನಾವು ಅದೇ ಡಿರೆಕ್ಟರೀ ಯಲ್ಲಿ, ಅಂದರೆ User1 ನಲ್ಲಿ 'ರಿಪಾಸಿಟರಿ' ಯನ್ನು ಕಾಪಿ ಮಾಡುತ್ತಿದ್ದೇವೆ ಎಂಬುದನ್ನು Dot ಸೂಚಿಸುತ್ತದೆ. |
03:25 | ಇಲ್ಲವಾದಲ್ಲಿ, ಇದು stories ಎಂಬ ಹೆಸರಿನ 'ರಿಪಾಸಿಟರಿ' ಯೊಂದಿಗೆ ಹೊಸ ಡೈರೆಕ್ಟರಿ ಯನ್ನು ರಚಿಸುತ್ತದೆ. |
03:31 | ಈಗ Enter ಅನ್ನು ಒತ್ತಿ. |
03:33 | 'ಕ್ಲೋನ್' ಕಮಾಂಡ್ ಸಂಪೂರ್ಣವಾಗಿ ಸೆಂಟ್ರಲ್ ಫೋಲ್ಡರ್ ಅನ್ನು ಕಾಪಿ ಮಾಡುತ್ತದೆ ಮತ್ತು ಅದನ್ನು ಲೋಕಲ್ 'ರಿಪಾಸಿಟರಿ' ಯನ್ನಾಗಿ ಮಾಡುತ್ತದೆ. |
03:40 | ls ಎಂದು ಟೈಪ್ ಮಾಡಿ, ನೀವು 'ರಿಮೋಟ್ ರಿಪಾಸಿಟರಿ' ಯ ಕಂಟೆಂಟ್ ಇಲ್ಲಿ ಕಾಪಿ ಆಗಿರುವುದನ್ನು ನೋಡಬಹುದು. |
03:48 | ಈಗ ನಾನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ, ಈ 'ರಿಪಾಸಿಟರಿ' ಯ user name ಮತ್ತು email id ಗಳನ್ನು ಬದಲಿಸುತ್ತೇನೆ. |
03:55 | ವಿವರಣೆಗೋಸ್ಕರ, ಈಗಾಗಲೇ ನಾನು priya-spoken1 ಮತ್ತು kaushik-spoken ಎಂಬ ಇನ್ನೂ ಎರಡು GitHub user ಗಳನ್ನು ಕ್ರಿಯೇಟ್ ಮಾಡಿದ್ದೇನೆ. |
04:04 | ನಾನು ಇಲ್ಲಿ ಅವುಗಳನ್ನು ಬಳಸುತ್ತೇನೆ. |
04:14 | ಈಗ Git log ಅನ್ನು ಪರೀಕ್ಷಿಸೋಣ. |
04:16 | ನೀವು 'ರಿಮೋಟ್ ರಿಪಾಸಿಟರಿ' ಯ ಅದೇ 'ಕಮಿಟ್' ಗಳನ್ನು ನೋಡಬಹುದು. |
04:21 | ಇದೇ ರೀತಿಯಲ್ಲಿ, ನಾನು ಎರಡನೇ ಟ್ಯಾಬ್ ನಲ್ಲಿ,directory User2 ನಲ್ಲಿ, 'ರಿಪಾಸಿಟರಿ' ಯನ್ನು 'ಕ್ಲೋನ್' ಮಾಡುತ್ತೇನೆ. |
04:28 | User1 ಗೆ ಮಾಡಿದಂತೆ ಇಲ್ಲಿಯೂ ಕೂಡ user name ಮತ್ತು email id ಯನ್ನು ಬದಲಿಸುತ್ತೇನೆ. |
04:35 | ಈಗ ಈ ಎರಡೂ ಬಳಕೆದಾರರೂ 'ರಿಮೋಟ್ ರಿಪಾಸಿಟರಿ' ಯಲ್ಲಿ ಹೇಗೆ ಕೆಲಸ ಮಾಡುವರು ಎಂದು ಅರ್ಥ ಮಾಡಿಕೊಳ್ಳೋಣ. |
04:41 | ಈಗ User1, lion-and-mouse.html ಎಂಬ ಫೈಲ್ ನಲ್ಲಿ ಕೆಲಸ ಮಾಡುತ್ತಾರೆ ಎಂದು ಕೊಳ್ಳೋಣ. |
04:48 | ಆ ಫೈಲ್ ಅನ್ನು ರಚಿಸಲು gedit lion-and-mouse.html ಎಂದು ಟೈಪ್ ಮಾಡಿ. |
04:54 | ನಾನು ಮೊದಲೇ ಸೇವ್ ಮಾಡಿದ ನನ್ನ Writer document ನಿಂದ ಸ್ವಲ್ಪ ಟೆಕ್ಸ್ಟ್ ಅನ್ನು ಕಾಪಿ ಮಾಡಿ ಈ ಫೈಲ್ ನಲ್ಲಿ ಪೇಸ್ಟ್ ಮಾಡುತ್ತೇನೆ. |
05:02 | ಇದೇ ರೀತಿಯಲ್ಲಿ, ನಿಮ್ಮ ಫೈಲ್ ನಲ್ಲಿ ವಿಷಯಗಳನ್ನು ಸೇರಿಸಬಹುದು. |
05:06 | ಈಗ ಫೈಲ್ ಅನ್ನು 'ಸ್ಟೇಜಿಂಗ್ ಏರಿಯಾಗೆ' ಗೆ ಸೇರಿಸೋಣ. |
05:11 | git add lion-and-mouse.html ಎಂದು ಟೈಪ್ ಮಾಡಿ. |
05:17 | ಈಗ ಹೊಸದಾಗಿ ಸೇರಿಸಿದ ಫೈಲ್ ಅನ್ನು ಕಮಿಟ್ ಮಾಡೋಣ. |
05:21 | git commit hyphen m ಎಂದು ಟೈಪ್ ಮಾಡಿ ಕೋಟ್ಸ್ ನಲ್ಲಿ Added lion-and-mouse.html ಎಂದು ಟೈಪ್ ಮಾಡಿ. |
05:29 | ನಂತರ ಈ ಲೋಕಲ್ 'ರಿಪಾಸಿಟರಿ' ಯನ್ನು ಮೇನ್ 'ರಿಮೋಟ್ ರಿಪಾಸಿಟರಿ' ಯೊಂದಿಗೆ ನಾವು ಸಿಂಕ್ರೋನೈಜ್ ಮಾಡಬೇಕು. |
05:35 | 'ರಿಪಾಸಿಟರಿ' ಯನ್ನು ಸಿಂಕ್ರೋನೈಜ್ ಮಾಡುವ ಮೊದಲು, ನಾವು remotes ಗಳ ಕುರಿತು ತಿಳಿದುಕೊಳ್ಳುವೆವು. |
05:40 | 'ರಿಮೋಟ್ ರಿಪಾಸಿಟರಿ' ಯ URL ಅನ್ನು Remote ಎಂದು ಕರೆಯುತ್ತಾರೆ. |
05:45 | ನಾವು URL ಗೆ ಉಪನಾಮವನ್ನು (nickname) ಕೊಡಬಹುದು. |
05:49 | ನಾವು ಅನೇಕ 'ರಿಮೋಟ್ ರಿಪಾಸಿಟರಿ' ಗಳೊಂದಿಗೆ ಕೆಲಸ ಮಾಡುವಾಗ ಇದು ಸಹಾಯಕವಾಗಿದೆ. |
05:54 | ನಾವು 'ರಿಪಾಸಿಟರಿ' ಯನ್ನು ಸಿಂಕ್ರೋನೈಸ್ ಮಾಡುವಾಗ, ಪೂರ್ಣ URL ಅನ್ನುಟೈಪ್ ಮಾಡುವ ಬದಲು ಈ ಉಪನಾಮವನ್ನು ಉಪಯೋಗಿಸಬಹುದು. |
06:01 | Remote ನ ಉಪನಾಮ ಡಿಫಾಲ್ಟ್ ಆಗಿ ಯಾವಾಗಲೂ origin ಆಗಿರುತ್ತದೆ. |
06:06 | ಈಗ Remote ಅನ್ನು ಹೇಗೆ ಸೇರಿಸುವುದು ಎಂದು ನೋಡೋಣ. |
06:10 | 'ಟರ್ಮಿನಲ್' ಗೆ ಹಿಂದಿರುಗಿ. |
06:13 | git remote ಎಂದು ಟೈಪ್ ಮಾಡಿ. Remote ನ ಡಿಫಾಲ್ಟ್ ನೇಮ್ origin ಎಂದಿರುವುದನ್ನು ಗಮನಿಸಬಹುದು. |
06:20 | ಈಗ Remote ಗೆ ಉಪನಾಮ ಕೊಡುವುದು ಹೇಗೆ ಎಂದು ಕಲಿಯೋಣ. |
06:25 | git remote add stories ಎಂದು ಟೈಪ್ ಮಾಡಿ ಮತ್ತು 'ರಿಮೋಟ್ ರಿಪಾಸಿಟರಿ' ಯ URL ಅನ್ನು ಟೈಪ್ ಮಾಡಿ. |
06:32 | ಇಲ್ಲಿ ನಾನು Remote ಅನ್ನು stories ಎಂದು ಹೆಸರಿಸುತ್ತೇನೆ ಇದು Remote 'ರಿಪಾಸಿಟರಿ' ಯ ಹೆಸರು ಕೂಡ ಆಗಿದೆ. |
06:38 | ಈಗ Enter ಕೀಲಿಯನ್ನು ಒತ್ತಿ. |
06:41 | ಈಗ ಮತ್ತೊಮ್ಮೆ Remote ಲಿಸ್ಟ್ ಅನ್ನು ಪರೀಕ್ಷಿಸಲು, git remote ಎಂದು ಟೈಪ್ ಮಾಡಿ. |
06:46 | ನೀವು ಲಿಸ್ಟ್ ಗೆ Remote ಸೇರ್ಪಡೆಯಾಗಿರುವುದನ್ನು ನೋಡಬಹುದು. |
06:50 | ಈಗ ನಾವು ಲೋಕಲ್ 'ರಿಪಾಸಿಟರಿ' ಯನ್ನು ಮೇನ್ 'ರಿಮೋಟ್ ರಿಪಾಸಿಟರಿ' ಯೊಂದಿಗೆ ಸಿಂಕ್ರೋನೈಜ್ ಮಾಡೋಣ. |
06:55 | ಅದನ್ನು ಮಾಡಲು git push stories master ಎಂದು ಟೈಪ್ ಮಾಡಿ. |
07:00 | ಇಲ್ಲಿ stories ಇದು Remote ನ ಹೆಸರು ಮತ್ತು master ಇದು ನಾವು ಬದಲಾವಣೆಗಳನ್ನು ಅಪ್ಡೇಟ್ ಮಾಡುವ branch ನ ಹೆಸರು ಆಗಿವೆ. |
07:07 | ಈಗ Enter ಅನ್ನು ಒತ್ತಿ. |
07:09 | ನಾನು User1 ರ username ಅನ್ನು priya-spoken1 ಎಂದು ಟೈಪ್ ಮಾಡಿ, Enter ಅನ್ನು ಒತ್ತುತ್ತೇನೆ. |
07:17 | User1 ರ ಪಾಸ್ವರ್ಡ್ ಅನ್ನು ನಮೂದಿಸುತ್ತೇನೆ. |
07:21 | ವಿವರಣೆಗೋಸ್ಕರ ನಾನು ಈ ಯೂಸರ್ ನೇಮ್ ಅನ್ನು ಮೊದಲೇ ರಚಿಸಿದ್ದನ್ನು ನೆನಪಿಸಿಕೊಳ್ಳಿ. |
07:27 | ದಯವಿಟ್ಟು ಇಲ್ಲಿ ನಿಮ್ಮ ಯೂಸರ್ನೇಮ್ ಮತ್ತು ಪಾಸ್ವರ್ಡ್ ಗಳನ್ನು ಉಪಯೋಗಿಸಿ. |
07:31 | ಇದು unable to access ಎಂಬ ಎರರ್ ಅನ್ನು ಕೊಡುತ್ತದೆ. |
07:35 | ಈ ಎರರ್ ಯಾಕೆ ಬಂತು? ಏಕೆಂದರೆ ನಾವು 'ರಿಮೋಟ್ ರಿಪಾಸಿಟರಿ' ಗೆ ಎಕ್ಸೆಸ್ಸ್ (access) ಅನ್ನು ಹೊಂದಿಲ್ಲ. |
07:42 | ಹಾಗಾಗಿ ಈಗ ಕಾಂಟ್ರಿಬ್ಯೂಟರ್ ಗಳಿಗೆ ಎಕ್ಸೆಸ್ (access) ಪರ್ಮಿಷನ್ ಅನ್ನು ಹೇಗೆ ಕೊಡುವುದು ಎಂದು ನೋಡೋಣ. |
07:48 | GitHub repository ಗೆ ಹಿಂದಿರುಗಿ. |
07:51 | ಮೇಲಿನ ಪ್ಯಾನಲ್ ನಲ್ಲಿರುವ ಕೊನೆಯ ಟ್ಯಾಬ್- Settings – ನ ಮೇಲೆ ಕ್ಲಿಕ್ ಮಾಡಿ. |
07:55 | ಎಡಭಾಗದ ಬಾಕ್ಸ್ ನಲ್ಲಿರುವ Collaborators ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
08:00 | ನಿಮ್ಮ GitHub ಅಕೌಂಟ್ ಪಾಸ್ವರ್ಡ್ ಅನ್ನು ಕನ್ಫರ್ಮೇಶನ್ ಗೋಸ್ಕರ ಟೈಪ್ ಮಾಡಿ. |
08:04 | ಇಲ್ಲಿ ಈ ಟೆಕ್ಸ್ಟ್ ಬಾಕ್ಸ್ ನಲ್ಲಿ ನೀವು ಕೊಲ್ಯಾಬೋರೇಟರ್ ಗಳ ಹೆಸರುಗಳನ್ನು ಸೇರಿಸಬಹುದು. |
08:10 | ಈ GitHub repository ಯನ್ನು ಯಾರು ಬೇಕಾದರೂ 'ಕ್ಲೋನ್' ಮಾಡಬಹುದು. |
08:15 | ಆದರೆ ನಾವು ಯಾರನ್ನು ಕೊಲ್ಯಾಬೋರೇಟರ್ ಆಗಿ ಸೇರಿಸಿರುತ್ತೇವೋ ಅವರು 'ರಿಪಾಸಿಟರಿ' ಗೆ push ಮಾಡಬಹುದು. |
08:21 | ಈಗ ನಾನು ಎರಡು ಯೂಸರ್ ಗಳನ್ನು ಅಂದರೆ priya-spoken1 ಮತ್ತು kaushik-spoken ಗಳನ್ನು ಸೇರಿಸುತ್ತೇನೆ. |
08:27 | ನಾನು ಟೆಕ್ಸ್ಟ್-ಬಾಕ್ಸ್ ನಲ್ಲಿ ಟೈಪ್ ಮಾಡಿದಾಗ ಯೂಸರ್-ನೇಮ್ ಲಿಸ್ಟ್ ನಲ್ಲಿರುವುದನ್ನು ನೋಡಬಹುದು. |
08:33 | ಯೂಸರ್ ಅನ್ನು ಕೊಲ್ಯಾಬೋರೇಟರ್ ಆಗಿ ಸೇರಿಸಲು, Add Collaborator ಬಟನ್ ನ ಮೇಲೆ ಕ್ಲಿಕ್ ಮಾಡಿ. |
08:38 | ನಾನು ಇನ್ನೊಂದು ಯೂಸರ್ kaushik-spoken ಅನ್ನು ಕೂಡ ಸೇರಿಸುತ್ತೇನೆ. |
08:43 | ನೀವು ಇಲ್ಲಿ ಸೇರಿಸಿದ ಹೆಸರುಗಳು ಲಿಸ್ಟ್ ನಲ್ಲಿ ಬಂದಿರುವುದನ್ನು ನೋಡಬಹುದು. |
08:47 | ನಾವು ಈಗ 'ರಿಮೋಟ್ ರಿಪಾಸಿಟರಿ' ಯಲ್ಲಿ ಪುಶ್ ಮಾಡಲು ಪ್ರಯತ್ನಿಸೋಣ. |
08:51 | ಟರ್ಮಿನಲ್ ಗೆ ಹಿಂದಿರುಗಿ. |
08:54 | git push stories master ಎಂದು ಟೈಪ್ ಮಾಡಿ. |
08:58 | ಈಗ 'ರಿಪಾಸಿಟರಿ' ಗೆ ಎಕ್ಸೆಸ್ ಹೊಂದಿರುವ ಯೂಸರ್ ನ username ಮತ್ತು password ಅನ್ನು ಕೊಡಿ. |
09:04 | ಈಗ ನಾವು ಇದನ್ನು ಸರಿಯಾಗಿ push ಮಾಡಿರುವುದನ್ನು ನೀವು ನೋಡಬಹುದು. |
09:08 | ಈಗ ನಾವು ಮಾಡಿದ ಬದಲಾವಣೆಗಳು ಅಪ್ಡೇಟ್ ಆಗಿವೆಯೇ ಎಂದು GitHub repository ಯನ್ನು ಪರೀಕ್ಷಿಸೋಣ. |
09:14 | GitHub repository ಗೆ ಹಿಂದಿರುಗಿ. |
09:17 | Code ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
09:20 | ಈಗ commit list ಅನ್ನು ಪರೀಕ್ಷಿಸೋಣ. |
09:23 | ಇಲ್ಲಿ ನೀವು ಕೊಲ್ಯಾಬರೇಟರ್ ನ ಕಮಿಟ್ ಅನ್ನು ಪಟ್ಟಿ ಮಾಡಿರುವುದನ್ನು ನೋಡಬಹುದು. |
09:28 | ನಂತರ User2 ಹೇಗೆ 'ರಿಮೋಟ್ ರಿಪಾಸಿಟರಿ' ಯೊಂದಿಗೆ ಕೊಲ್ಯಾಬರೇಟ್ ಮಾಡಬಹುದು ಎಂದು ಕಲಿಯೋಣ. |
09:34 | ಟರ್ಮಿನಲ್ ಗೆ ಹಿಂದಿರುಗೋಣ. |
09:37 | User2 , friends.html ಎಂಬ ಫೈಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದುಕೊಳ್ಳೋಣ. |
09:43 | ಫೈಲ್ ಅನ್ನು ರಚನೆ ಮಾಡಲು, gedit friends.html ಎಂದು ಟೈಪ್ ಮಾಡೋಣ. |
09:49 | ನಾನು ನನ್ನ Writer document ನಿಂದ ಸ್ವಲ್ಪ ಟೆಕ್ಸ್ಟ್ ಅನ್ನು ಕಾಪಿ ಮಾಡಿ ಈ ಫೈಲ್ ನಲ್ಲಿ ಪೇಸ್ಟ್ ಮಾಡುತ್ತೇನೆ. |
09:54 | ಇದೇ ರೀತಿಯಲ್ಲಿ, ನಿಮ್ಮ ಫೈಲ್ ಗೆ ಕಂಟೆಂಟ್ ಅನ್ನು ಸೇರಿಸಿ. |
09:59 | ಫೈಲ್ ಅನ್ನು 'ಸ್ಟೇಜಿಂಗ್ ಏರಿಯಾ' ಗೆ ಸೇರಿಸೋಣ. |
10:03 | ಈಗ ಹೊಸದಾಗಿ ಸೇರಿಸಿದ ಫೈಲ್ ಅನ್ನು ಕಮೀಟ್ ಮಾಡೋಣ. |
10:07 | git commit hyphen m ಎಂದು ಟೈಪ್ ಮಾಡಿ ಕೋಟ್ಸ್ ನಲ್ಲಿ Added friends.html ಎಂದು ಟೈಪ್ ಮಾಡಿ. |
10:15 | ಈಗ ನಾವು ಲೋಕಲ್ 'ರಿಪಾಸಿಟರಿ' ಯನ್ನು ಮೇಯ್ನ್ 'ರಿಮೋಟ್ ರಿಪಾಸಿಟರಿ' ಯೊಂದಿಗೆ ಸಿಂಕ್ರೋನೈಜ್ ಮಾಡೋಣ. |
10:21 | git push origin master ಎಂದು ಟೈಪ್ ಮಾಡಿ. |
10:25 | ನೆನಪಿಡಿ ನಾವು ಈ 'ಲೋಕಲ್ ರಿಪಾಸಿಟರಿ' ಗೆ Remote ಅನ್ನು ಸೇರಿಸಿಲ್ಲ. |
10:30 | ಹಾಗಾಗಿ ನಾವು ಇಲ್ಲಿ ಡಿಫಾಲ್ಟ್ Remote ಹೆಸರಾದ origin ಅನ್ನು ಉಪಯೋಗಿಸುತ್ತಿದ್ದೇವೆ. |
10:34 | ಈಗ Enter ಅನ್ನು ಒತ್ತಿ. |
10:37 | User2 ನ GitHub ಯೂಸರ್ ನೇಮ್ ಮತ್ತು ಪಾಸ್ವರ್ಡ್ ಅನ್ನು ಟೈಪ್ ಮಾಡಿ. |
10:42 | ಇದು failed to push ಎಂಬ ಎರರ್ ಅನ್ನು ಕೊಡುತ್ತದೆ. |
10:46 | ಮತ್ತು ಎರರ್ ಗೆ ಕಾರಣವನ್ನು : the remote contains work that you do not have locally ಎಂದು ಕೊಡುತ್ತದೆ. |
10:53 | ನೆನಪಿಡಿ, User1 ಕಮಿಟ್ ಅನ್ನು ಈಗಾಗಲೇ ಪುಷ್ ಮಾಡಿರುತ್ತಾರೆ. |
10:58 | ಆದರೆ, User2 ನ 'ಲೋಕಲ್ ರಿಪಾಸಿಟರಿ' ಯಲ್ಲಿ User1 ಮಾಡಿದ ಕೆಲಸ ಇರುವುದಿಲ್ಲ. |
11:04 | ಇದು ಎರರ್ ಅನ್ನು ಕಂಡುಹಿಡಿಯಲು git pull ಕಮಾಂಡ್ ಅನ್ನು ರನ್ ಮಾಡಲು ಸಲಹೆ ಕೊಡುತ್ತದೆ. |
11:10 | ಹಾಗಾಗಿ ನಾವು ಮೊದಲು User1 ಮಾಡಿದ ಕೆಲಸವನ್ನು ಪುಲ್ ಮಾಡಿ, User2 ನ 'ಲೋಕಲ್ ರಿಪಾಸಿಟರಿ' ಯಲ್ಲಿ ಅದು ಬರುವಂತೆ ಮಾಡಬೇಕು. ಈಗ ನಾವು ಅದನ್ನು ಮಾಡೋಣ. |
11:21 | git pull origin master ಎಂದು ಟೈಪ್ ಮಾಡಿ. |
11:25 | ಮೊದಲು ಇದು 'ರಿಮೋಟ್ ರಿಪಾಸಿಟರಿ' ಯಿಂದ ಡಾಟಾವನ್ನು ಪಡೆದುಕೊಂಡು ನಂತರ ಅದನ್ನು ' ಲೋಕಲ್ ರಿಪಾಸಿಟರಿ' ಯೊಂದಿಗೆ ಮರ್ಜ್ ಮಾಡುವುದು. |
11:32 | ಹಾಗಾಗಿ ಇದು merging ಗೆ ಮೆಸ್ಸೇಜ್ ಅನ್ನು ಕೊಡಲು ಎಡಿಟರ್ ಅನ್ನು ಓಪನ್ ಮಾಡುತ್ತದೆ. |
11:36 | ಈಗ ಆ ಮೆಸೇಜ್ ಅನ್ನು ಹಾಗೆ ಇಟ್ಟು ಎಡಿಟರ್ ಅನ್ನು ಕ್ಲೋಸ್ ಮಾಡಲು Ctrl + X ಅನ್ನು ಒತ್ತಿ. |
11:42 | ಈಗ ಇನ್ನೊಮ್ಮೆ ಡಾಟಾವನ್ನು ಪುಶ್ ಮಾಡಲು ಪ್ರಯತ್ನಿಸೋಣ. git push origin master ಎಂದು ಟೈಪ್ ಮಾಡಿ. |
11:50 | User2 ನ username ಮತ್ತು password ಅನ್ನು ಕೊಡಿ. |
11:54 | ಈಗ ನಾವು ಡಾಟಾವನ್ನು ಯಶಸ್ವಿಯಾಗಿ ಪುಷ್ ಮಾಡಬಹುದು. |
11:59 | ಈಗ ನಾವು ಮಾಡಿದ ಬದಲಾವಣೆಗಳು ಅಪ್ಡೇಟ್ ಆಗಿದೆಯೇ ಎಂದು GitHub repository ಯಲ್ಲಿ ಪರೀಕ್ಷಿಸೋಣ. |
12:05 | GitHub repository ಗೆ ಹಿಂದಿರುಗಿ. |
12:08 | ರೆಪೊಸಿಟರಿ ನೇಮ್ Stories ಮೇಲೆ ಕ್ಲಿಕ್ ಮಾಡಿ. |
12:12 | ಈಗ ನೀವು friends.html ಫೈಲ್ 'ರಿಪಾಸಿಟರಿ' ಗೆ ಸೇರ್ಪಡೆಯಾಗಿರುವುದನ್ನು ನೋಡಬಹುದು. |
12:18 | ಈಗ commit list ಅನ್ನು ಪರೀಕ್ಷಿಸೋಣ. |
12:21 | ಇಲ್ಲಿ User2 ನ 'ಕಮಿಟ್' ಕೂಡ ಲಿಸ್ಟ್ ಆಗಿರುವುದನ್ನು ನೋಡಬಹುದು. |
12:26 | ಇದರೊಂದಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
12:30 | ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು- |
12:35 | 'ರಿಮೋಟ್ ರಿಪಾಸಿಟರಿ' ಎಂದರೇನು ಮತ್ತು |
12:38 | 'ರಿಮೋಟ್ ರಿಪಾಸಿಟರಿ' ಗೆ ಡಾಟಾವನ್ನು ಹೇಗೆ ಸಿಂಕ್ರೋನೈಜ್ ಮಾಡುವುದು ಎಂದು ಕಲಿತಿದಿದ್ದೇವೆ. |
12:42 | ಈಗ ಒಂದು ಅಸೈನ್ಮೆಂಟ್: User3 ಎಂಬ ಇನ್ನೊಂದು ಯೂಸರ್ ಅನ್ನು ರಚನೆ ಮಾಡಿ. |
12:47 | User3 ಗಾಗಿ ಡಾಟಾವನ್ನು 'ಕ್ಲೋನ್' ಮಾಡಿ. |
12:50 | User3 ಯ 'ಲೋಕಲ್ ರಿಪಾಸಿಟರಿ' ಯಲ್ಲಿ ಕೆಲಸವನ್ನು ಪ್ರಾರಂಭಿಸಿ. |
12:54 | User3 ಯಿಂದ ಡಾಟಾವನ್ನು push ಮಾಡಲು ಪ್ರಯತ್ನಿಸಿ. |
12:58 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ. |
13:03 | ದಯವಿಟ್ಟು ಡೌನ್-ಲೋಡ್ ಮಾಡಿ ನೋಡಿ. |
13:05 | ಸ್ಪೋಕನ್ ಟ್ಯುಟೋರಿಯಲ್ ತಂಡವು : ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ ಮತ್ತು ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
13:12 | ಹೆಚ್ಚಿನ ವಿವರಗಳಿಗೆ ನಮಗೆ ಬರೆಯಿರಿ. |
13:16 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು , NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆಯುತ್ತದೆ. |
13:22 | ಇದರ ಕುರಿತು ಹೆಚ್ಚಿನ ವಿವರಗಳು ಈ ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತವೆ. |
13:27 | ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನ ಪಟ್ಟಣ. ಧನ್ಯವಾದಗಳು. |